Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

May 6, 2008 - 7:55pm — kannadakanda

ಒತ್ತಕ್ಷರಗಳು ಬೇಱೆ. ಸಂಯುಕ್ತಾಕ್ಷರಗಳು ಬೇಱೆ. ಒತ್ತಕ್ಷರಗಳೆಂದರೆ ಒಂದೇ ವ್ಯಂಜನ ಒತ್ತಲ್ಪಟ್ಟು ಉಚ್ಚರಿಸಲ್ಪಡುವುದು. ಉದಾ: ಕ್ಕ, ಚ್ಚ, ಟ್ಟ, ತ್ತ, ನ್ನ ಇತ್ಯಾದಿ. ಆದರೆ ಸಂಯುಕ್ತಾಕ್ಷರಗಳೆಂದರೆ ಕ್ಷ, ಕ್ಲ ಇತ್ಯಾದಿ ವಿಜಾತೀಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳು. ಕನ್ನಡವನ್ನು ಚೆನ್ನಾಗಿ ಗಮನಿಸಿದರೆ ಸಂಯುಕ್ತಾಕ್ಷರಗಳು ಸಂಸ್ಕೃತಕ್ಕಿಂತ ಕಡಿಮೆ. ಪೂರ್ವದ ವ್ಯಂಜನ ನ್‍, ಣ್‍, ಯ್‍, ರ್‍, ಲ್‍, ಳ್‍, ೞ್‍ ಹಾಗೂ ಕೆಲವು ವೇಳೆ ಱ್‍ ಇದ್ದಾಗ ಮಾತ್ರ ಸಂಯುಕ್ತಾಕ್ಷರಗಳನ್ನು ಮಾಡಬಹುದು. ಇನ್ನೊಂದು ವಿಶೇಷವೆಂದರೆ ’ಱ್’ ನ ಉಚ್ಚಾರ ದಂತಮೂಲೀಯ ಕಂಪಿತವಾಗಿರುವುದರಿಂದ ಹೆಚ್ಚಾಗಿ ಹೞಗನ್ನಡ ಹಾಗೂ ಹೊಸಗನ್ನಡದಲ್ಲಿ ’ಱ್ಱ್’ ನಿಜವಾಗಿ ’ತ್ತ್’ ಆಗುತ್ತದೆ. ಗಮನಿಸಿ ತಮಿೞಿನ ಮಱ್ಱುಂ ಕನ್ನಡದಲ್ಲಿ ಮತ್ತು, ’ನೆಱ್ಱಿ ’ ಕನ್ನಡದಲ್ಲಿ ’ನೆತ್ತಿ’ ಇತ್ಯಾದಿ. ಉದಾಹರಣೆಗೆ, ’ಜಾಣ್ಮೆ’, ’ಮೇಲ್ಮೆ’ ಇತ್ಯಾದಿ ಕನ್ನಡದ ನಿಯಮಿತ ಸಂಯುಕ್ತಾಕ್ಷರಗಳು ದೊರೆಯುತ್ತವೆ. ಸಂಸ್ಕೃತ ಬಿಟ್ಟರೆ ಇನ್ನಾವ ಭಾರತೀಯ ಭಾಷೆಗಳಲ್ಲಿ ವಿಸ್ತಾರವಾದ ಸಂಯುಕ್ತಾಕ್ಷರಗಳ ಸಂಯೋಜನೆ (Combination) ಕಾಣುವುದಿಲ್ಲ.

‹ ಪಡುವಣ ಪಂಡಿತರನ್ನು ಏಕೆ ನಂಬಬಾರದು? ಕನ್ನಡದಲ್ಲಿನ ಒತ್ತಕ್ಷರಗಳು ›
  • ವ್ಯಾಕರಣ
Ornamental seperator
  • Login or register to post comments
  • 521 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 7, 2008 - 1:02pm — mahesha

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

mahesha's picture

ಕುನ್ಱು = > ಕುಂದು
ನನ್ಱಿ => ನನ್ನಿ?

"ಪೂರ್ವದ ವ್ಯಂಜನ ನ್‍, ಣ್‍, ಯ್‍, ರ್‍, ಲ್‍, ಳ್‍, ೞ್‍ ಹಾಗೂ ಕೆಲವು ವೇಳೆ ಱ್‍ ಇದ್ದಾಗ ಮಾತ್ರ ಸಂಯುಕ್ತಾಕ್ಷರಗಳನ್ನು ಮಾಡಬಹುದು" ಇದು ಬಱೀ ಹೞಗನ್ನಡದಲ್ಲಿ.. ಹೊಸಗನ್ನಡದಲ್ಲಿ ಅದನ್ನೂ ಮಾಡದೇ ಇರಬೋದು..

ತಾಳ್ಮೆ => ತಾಳುಮೆ
ಬಾೞ್ವೆ/ಬಾೞ್ಮೆ => ಬಾೞು, ಬಾೞುಮೆ

ಅಣ್ಮು ಇಲ್ಲ ಅಣ್/ಅಳ್ ಬೇರು..! ಅಲ್ವ!

"ಕನ್ನಡ ನುಡಿ ನಡೆದು ಬಂದ ದಾರಿ" ಓದಿ!
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 7, 2008 - 1:48pm — kannadakanda

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

kannadakanda's picture

ಯಾವ ಮಂಕ್‍ನನ್‍ಮಗ್‍ನೂ ಬಾೞುಮೆ, ಬಾೞುವೆ ಅನ್ನಲ್ಲ. ಇದನ್ನ್ ತಿಳಿಲೋ ಮಾಯ್ಸ. (ಬಱಿ ಹಾಸ್ಯ ಮಾಡ್ದೆ ಅಷ್ಟೆ). ಇದು ನಿಜಕ್ಕೂ ಕೂಡ.

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 7:28am — mahesha

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

mahesha's picture

ಕಂದಾ...

ಯಾವ ಮಂಕ ನನ್ ಮಗನೂ ಕಡಮೆ, ಹೊಸತು, ಹತ್ತಿರ ಅಂತ ಅನ್ನಲ್ಲಯ್ಯ...

ಆಡುಮಾತಲ್ಲಿ ಅವೆಲ್ಲ ಕಮ್ಮಿ/ಕಡ್ಮಿ/ಕಡ್ಮೆ, ಹೊಸ್ತು, ಹತ್ರ, ಅಂತ ಅಲ್ಲವೇ!...

ನಾವ್ ಆಡುಮಾತಂಗೇ ಬರೆದ್ರೆ ನಿಮ್ ’ಱ’ ಮತ್ತು ’ೞ’ಗಳ ಕತೆ ಗೊಯಿಂದೋ ಗೋಯಿಂದೋ! Smiling
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 12:52pm — ವೈಭವ

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ವೈಭವ's picture

"ಒಲುಮೆಯ ಸಿರಿಯ ಕಂಡೆ..." ಅಂತ ಸಿನಿಮಾ ಹಾಡೇ ಇದಿಯಲ್ಲ ಕನ್ನಡ ಕಂದರೆ,

ಕುಲ್ಮೆ, ಕುಲುಮೆ ಎರಡೂ ಆಡುಮಾತಿನಲ್ಲಿದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
May 12, 2008 - 2:47am — kannadakanda

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

kannadakanda's picture

ತಮಿೞಿನ ’ಕುನ್ಱು’ ಕನ್ನಡದಲ್ಲಿ ’ಕುಂದ’ ಅಂದರೆ ಬೆಟ್ಟ. ತಮಿೞಿನ ’ನನ್ಱಿ’ ಕನ್ನಡದ ’ನನ್ನಿ’. ತಮಿೞಿನ ’ನ್ಱ್’ ಕನ್ನಡದಲ್ಲಿ ’ನ್ದ್’ ರೂಪ ಪಡೆಯುತ್ತದೆ. ಈ ವಿಷಯದಲ್ಲಿ ಕನ್ನಡಿಗರು ನಿಜವಾಗಿ ಸರಿಯಾಗಿ ಉಚ್ಚರಿಸುತ್ತಾರೆ. ಕಂಪಿತವನ್ನು ಒತ್ತಿ ಹೇೞಿದಾಗ ನಾಲಿಗೆಯನ್ನು ಕಂಪಿಸುವುದಾದರೂ ಹೇಗೆ? ದಂತಮೂಲೀಯ ಕಂಪಿತವಾದ ’ಱ್’ ವನ್ನು ’ಱ್ಱ್’ ಎಂದು ಒತ್ತಿಹೇಳುವಾಗ ನಾಲಿಗೆಯನ್ನು ಕಂಪಿಸಲಾಗದು ಆದ್ದಱಿಂದ ’ಱ್ಱ್’ ಮತ್ತು ’ನ್ಱ್’ ಕನ್ನಡದಲ್ಲಿ ಕ್ರಮವಾಗಿ ’ತ್ತ್’ ಮತ್ತು ’ನ್ದ್’. ಆದ್ದರಿಂದ ತಮಿೞಿನ ’ನೆಱ್ಱಿ’ ಮತ್ತು ’ಒನ್ಱು’ ಇವುಗಳಿಗೆ ಕನ್ನಡದಲ್ಲಿ ಕ್ರಮವಾಗಿ ’ನೆತ್ತಿ’ ಮತ್ತು ’ಒಂದು’ ಜ್ಞಾತಿ ಶಬ್ದಗಳು.

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 12:13pm — Sunil Jayaprakash

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

Sunil Jayaprakash's picture

ಕೊಲ್ದು, ಮೆಲ್ದು -> ಕೊನ್ದು, ಮೆದ್ದು ಆಗಿವೆ - ಇದಕ್ಕೆ ವಿವರಣೆ ಹೇಗೆ ವಿವರಣೆ ನೀಡುತ್ತೀರಿ. ಇದಕ್ಕೆ ಶಾಸ್ತ್ರೀಯವಾದ ಯೂವುದಾದರೂ ಸೂತ್ರವಿದೆಯೇ ?
ಕಾಡು + ಕಿಚ್ಚು -> ಇದನ್ನು ನಾವು ಯಾರೂ ಕೂಡ "ಕಾಡುಗಿಚ್ಚು" ಎಂದು ಹೇಳುವುದಿಲ್ಲ, ಕಾಡ್ಗಿಚ್ಚು ಇಲ್ಲವೇ ಕಾಳ್ಗಿಚ್ಚು ಎಂಬುದಾಗಿಯೇ ಹೇಳುತ್ತೇವೆ.

ಇದನ್ನು ಗಮನಿಸಿದರೆ, ಕೆಲವೊಂದು ಸಂಯುಕ್ತಾಕ್ಷರಗಳು, ಕನ್ನಡಿಗರ ಬಾಯಲ್ಲಿ ಸಹಜವಾಗಿಯೇ ಇರುವುದು ಗಮನಕ್ಕೆ ಬರುತ್ತದೆಯಲ್ಲವೇ ? ಆದರೆ ಈ ರೀತಿಯ ವಿಜಾತೀಯ ಸಂಯುಕ್ತಾಕ್ಷರಗಳನ್ನು ಹೆಚ್ಚು ರಿಫೈನ್ಡ್ ಮಾಡಿಕೊಂಡು, ಅವುಗಳನ್ನು ಒತ್ತಕ್ಷರಗಳನ್ನಾಗಿ ಮಾಡಿಕೊಂಡಿರುವುದೇ ಹೆಚ್ಚು.

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 12:43pm — mahesha

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

mahesha's picture

"ಪೂರ್ವದ ವ್ಯಂಜನ ನ್‍, ಣ್‍, ಯ್‍, ರ್‍, ಲ್‍, ಳ್‍, ೞ್‍ ಹಾಗೂ ಕೆಲವು ವೇಳೆ ಱ್‍ ಇದ್ದಾಗ ಮಾತ್ರ ಸಂಯುಕ್ತಾಕ್ಷರಗಳನ್ನು ಮಾಡಬಹುದು"

ಗಮನಿಸು
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 4:18pm — kannadakanda

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

kannadakanda's picture

ನಿಮಗೆ ಗೊತ್ತಿರಬಹುದು. ಹೞಗನ್ನಡದಲ್ಲಿ ಎರಡು+ಮಾತು ಎಂಬುದನ್ನು ಮೊದಲ ಪದದ ಕೊನೆಯ ’ಡ’ ಕ್ಕೆ ’ೞ್’ ಆದೇಶವಾಗಿ ಎರೞ್‍ ಆಗಿ ಅದಕ್ಕೆ ಮಾತು ಸೇರಿದಾಗ ಎರೞ್ಮಾತು ಅಥವಾ ಎರೞ್ವಾತು ಎಂಬುದಾಗಿ ನಿಯಮ. ಪದದ ಅಕ್ಷರ ಣ್‍, ನ್‍, ಯ್‍, ರ್‍, ಲ್‍, ಳ್‍, ೞ್‍ ಹಾಗೂ ಕೆಲವು ವೇಳೆ ಱ್‍ ಹೊಱತು ಬೇರೆ ಅಕ್ಷರವಿದ್ದಾಗ ’ಉ’ ಸೇರಿಸಿಕೊಂಡೇ ಉಚ್ಚರಿಸಬೇಕು. ಹಾಗಾಗಿ ಈ ’ಎರಡು’ ಶಬ್ದ ವಾಸ್ತವವಾಗಿ ’ಎರಡ್‍’ ಹಾಗೆಯೇ ’ಕಾಡು’ ->’ಕಾಡ್’ (ಆದರೆ ಹಾಗನ್ನುವಂತಿಲ್ಲ. ಕಾಡು ಎಂದೇ ಹೇೞಬೇಕು. ಆದರೆ ಸಮಾಸಪದ ಮಾಡುವಾಗ ’ೞ್’ ಆದೇಶ (ಆಧಾರ: ಕೇಶಿರಾಜನ ಶಬ್ದಮಣಿದರ್ಪಣ ಸಮಾಸಪ್ರಕರಣ ಪದ್ಯ ಸಂಖ್ಯೆ ೧೯೪.
ಪದದ ಕಡೆಯಣ ಡಕಾರ-
ಕ್ಕುದಯಿಪುದು ೞಕಾರಮಾ ಱಕಾರಕ್ಕೊದವಿ-
ರ್ಪುದು ರೇಫಂ ವ್ಯಂಜನಪದ-
ಮಿದಿರೊಳ್‍ ಸಂದಿಸೆ ಸಮಾಸದೊಳ್‍ ಬಹುಳತೆಯಿಂ||

ಹಾಗಾಗಿ ಕಾೞ್ಗಿಚ್ಚು.

ಮೆಲ್ದನ್‍, ಗೆಲ್ದನ್‍ ಈ ರೂಪಗಳೇ ಶುದ್ಧರೂಪಗಳಾಗಿದ್ದು ಮೆದ್ದನು, ಗೆದ್ದನು ಇವು ಜನಸಾಮಾನ್ಯರು ಬೞಸುತ್ತಿದ್ದು ಕ್ರಮೇಣ ಇವನ್ನು ಶಿಷ್ಟ ಎಂದು ಪರಿಗಣಿಸಲಾಗಿದೆ. ಈಗಲೂ ಸಾಮಾನ್ಯ ಜನ ಬರುತ್ತಾರೆ, ತರುತ್ತಾರೆ ಎನ್ನುವುದನ್ನು ಬರ್ತಾರೆ, ತರ್ತಾರೆ (ಸಾಮಾನ್ಯವಾಗಿ) ಎಂದರೆ ಹಳ್ಳಿಗರು ಅದನ್ನೇ ಬತ್ತಾರೆ, ತತ್ತಾರೆ ಎನ್ನುತ್ತಾರೆ. ಇದನ್ನೇ ಕ್ರಮೇಣ ನಾವೆಲ್ಲ ಮುಂದೊಮ್ಮೆ ಒಪ್ಪಬಹುದೇನೋ?

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 4:35pm — kannadakanda

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

kannadakanda's picture

ನಾನಿನ್ನು ಮುಂದುವರೆದು ಕೊಂದು, ಕೊಂಡು, ಮಿಂದು, ಬೆಂದು ಬಂದು, ತಂದು, ಸಂದು ಇವನ್ನು ವಿವರಿಸುತ್ತೇನೆ. ಕನ್ನಡದಲ್ಲಿ ವಾಸ್ತವವಾಗಿ ಯ್‍, ರ್‍, ಲ್‍, ಳ್ ಇವುಗಳು ಸಾನುನಾಸಿಕ, ನಿರನುನಾಸಿಕ ಎಂದೆರಡು ಬಗೆ. ಇವನ್ನು ಬರೆಹದಲ್ಲಿ ಸೂಚಿಸುವ ಬಗೆ ಗೊತ್ತಿಲ್ಲ. ಬೞಕೆಯಲ್ಲಷ್ಟೇ ತಿಳಿಯಬೇಕು. ಸಾನುನಾಸಿಕವಾದ ಯ್,ರ್,ಲ್,ಳ್‍ ಇದ್ದಾಗ ಬೇಯ್, ಮೀಯ್, ಬರ್, ತರ್, ಸಲ್ ಹಾಗೂ ಕೊಳ್‍ ಇದ್ದಾಗ ದು ಸೇರಿದರೆ ಕ್ರಮವಾಗಿ ಬೆಂದು, ಮಿಂದು, ಬಂದು, ತಂದು, ಸಂದು, ಕೊಂಡು ರೂಪಗಳಾಗುತ್ತವೆ. ಹಾಗಿಲ್ಲದಿರುವ ಆಯ್, ಇರ್,ಬೆಮರ್, ಗೆಲ್, ಕೇಳ್‍ ಇದ್ದಾಗ ದು ಆದೇಶವಾದರೆ ಆಯ್ದು, ಇರ್ದು, ಬೆಮರ್ತು, ಗೆಲ್ದು ಹಾಗೂ ಕೇಳ್ದು ಆಗುತ್ತವೆ.(ಹೊಸಗನ್ನಡದಲ್ಲಿ ಇದ್ದು, ಬೆವತು, ಗೆದ್ದು, ಕೇಳಿ ಈ ರೀತಿ ರೂಪಗಳಿವೆ). ಇದು ನಿಮ್ಮ ಅನುಮಾನ ಪರಿಹಾರ ಮಾಡಿದೆಯೆಂದು ನನ್ನಭಿಪ್ರಾಯ. kannadamaga@gmail.com ನಲ್ಲಿ ನನ್ನನ್ನು ಸಂಧಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 5:18pm — Sunil Jayaprakash

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

Sunil Jayaprakash's picture

ಕನ್ನಡ ಕಂದ, ನನ್ನ ಅನುಮಾನ ಸ್ವಲ್ಪಮಟ್ಟಿಗೆ ಪರಿಹಾರವಾಯಿತು.

ಹಾಗಿಲ್ಲದಿರುವ ಆಯ್, ಇರ್,ಬೆಮರ್, ಗೆಲ್, ಕೇಳ್‍ ಇದ್ದಾಗ ದು ಆದೇಶವಾದರೆ ಆಯ್ದು, ಇರ್ದು, ಬೆಮರ್ತು, ಗೆಲ್ದು ಹಾಗೂ ಕೇಳ್ದು ಆಗುತ್ತವೆ.

ಇದರರ್ಥ ಕನ್ನಡದಲ್ಲಿಯೂ ಸಂಯುಕ್ತಾಕ್ಷರಗಳು ಇವೆ ಎಂದಾಯಿತಲ್ಲವೇ ?

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 6:18pm — ಸಂಗನಗೌಡ

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಸಂಗನಗೌಡ's picture

ಸುನೀಲ್ ಎರಡು ದೋಣಿಗಳ ಮೇಲೆ ಕಾಲಿಡುವ ಉಂಕು ಬೇಡ. Smiling ಒಂದೋ ಬರಹದ ನೇಮಗಳಂತೆ ಹೋಗಿ, ಇಲ್ಲ ಮಾತಿನ ನೇಮಗಳಂತೆ ಹೋಗಿ.

ಯಾವುದೇ ನುಡಿಗೆ ಮಾತು ಮೊದಲು ಆಗಿರೋದರಿಂದ ಮಾತಿನಂತೆ ಹೋಗೋಣ. ಆಯ್‍ದು ವನ್ನು "ಆಯ್ದು" ಅಂತ ಬರೆದರೂ "ಆಯ್‍ದು" ಅಂತ ಬರೆದರೂ ಎರಡನ್ನೂ ಹಂಗೇ ಓದಬೇಕು.ಹೌದಾ?

ಈಗ ನಾನು ಹಲವು ಸತಿ ಹೇಳಿದಂತೆ "ಆಯ್ದು" ಅಂತ ಬರೆಯುವಕಿಂತ "ಆಯ್‍ದು" ಅಂತ ಬರೆಯೋದರಲ್ಲಿ ಒಂದು ದೊಡ್ಡ ಗಳಿಕೆ ಇದೆ, ಏನೆಂದರ "ಆಯ್" ಎಂಬ ತಳದಒರೆ ಕಳೆದು ಹೋಗೋ ಕುತ್ತು(ಅಪಾಯ) ಇರಲ್ಲ.

ಅಲ್ಲದೇ ಬರೀ ಬೆರೆತುಲಿಗಳೇ(ಬೆರೆತ ಉಲಿ - mixed sound, combination fo two different letters) ತುಂಬಿರುವ ಸಕ್ಕದವಾಗಲಿ, ಇಂಗಲೀಸಿನ ಒರಗಳಾಗಲಿ ಕನ್ನಡದಲ್ಲಿ ಹಗುರವಾಗಿ ಬೆರೆಯಲಾರವು.

ಕನ್ನಡವೂ, ಸಕ್ಕದ, ಇಂಗಲೀಸ್‍ಗಳಂತೆ ಆಗಿ ಬಿಟ್ಟರೆ ಕನ್ನಡ ಕನ್ನಡವಾಗಿ ಉಳಿಯುವದು ಹೇಗೆ? ಸಕ್ಕದವನ್ನು ತುಂಬ ಮೈಮೇಲೆ ಎಳೆದುಕೊಂಡು ತುಂಬ ಕನ್ನಡ ಒರೆಗಳು ಮರೆತು ಹೋಗಿವೆ. Sad

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 7:04pm — Sunil Jayaprakash

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

Sunil Jayaprakash's picture

ಈಗ ನಾನು ಹಲವು ಸತಿ ಹೇಳಿದಂತೆ "ಆಯ್ದು" ಅಂತ ಬರೆಯುವಕಿಂತ "ಆಯ್‍ದು" ಅಂತ ಬರೆಯೋದರಲ್ಲಿ ಒಂದು ದೊಡ್ಡ ಗಳಿಕೆ ಇದೆ, ಏನೆಂದರ "ಆಯ್" ಎಂಬ ತಳದಒರೆ ಕಳೆದು ಹೋಗೋ ಕುತ್ತು(ಅಪಾಯ) ಇರಲ್ಲ.

ಸಂಗನ, ಇದನ್ನು ಅಪಾಯ ಅಂದುಕೊಂಡು ಸುಮ್ಮನಾಗಿಬಿಟ್ಟರೆ, ನುಡಿಯಲ್ಲಿ ಹೊಸ ಹೊಸ ಪ್ರಯತ್ನಮಾಡಕ್ಕೆ ಆಗಲ್ಲ. ಶಂ.ಬಾ.ಜೋಶಿಯವರು "ಕಂನುಡಿಯ ಹುಟ್ಟು" ಪುಸ್ತಕದಲ್ಲಿ "ಎಣ್ಣೆ" ಪದದ ವಿವರಣೆಯನ್ನು ಹೀಗೆ ನೀಡಿದ್ದಾರೆ.

ಎಳ್ + ನೊಯ್(ತುಪ್ಪಕ್ಕೆ ಹಳೆಗನ್ನಡ ಹೆಸರು, ತೆಲಗಿನಲ್ಲಿ ಈಗಲೂ ತುಪ್ಪಕ್ಕೆ ನೊಯ್ ಎನ್ನುತ್ತಾರಂತೆ) - > ಎಳ್ನೊಯ್ -> ಎಳ್ನೆಯ್ -> ಎಣ್ಣೆಯ್->ಎಣ್ಣೆ.

ಅಂದರೆ "ಎಣ್ಣೆ" ಪದ ಮೂಲತಃ "ಎಳ್ಳು + ತುಪ್ಪ (ಎರಡು ಧಾತು)"ಗಳನ್ನು ಬಳಸುತ್ತದೆಯಾದರೂ, ನಾವು ಈಗ "ಎಣ್ಣೆ" ಎಂಬುದೇ ಕೂಡಿಕೊಂಡ ಒಂದು ಧಾತುವಾಗಿ ಪರಿಗಣಿಸಿದ್ದೇವೆ. ಅದೂ ಅಲ್ಲದೆ, ಕೊಬ್ಬರಿಎಣ್ಣೆ, ಕಡಲೆಕಾಯಿಎಣ್ಣೆ ಮುಂತಾಗಿ ಕೂಡ ಬಳಸುತ್ತೇವೆ.

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 10:33pm — hamsanandi

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

hamsanandi's picture

ಸುನಿಲರೆ,

ನನಗೆ ತಿಳಿದಂತೆ, ಅದು ಎಳ್ ನೆಯ್ ಆಗಬೇಕು, ಎಳ್ ನೊಯ್ ಅಲ್ಲ.

ಎಳ್ ನೆಯ್ -> ಎಣ್ಣೆ

ನೆಯ್ ಎನ್ನುವ ಪದ ಈಗಲೂ ತಮಿಳಿನಲ್ಲಿದೆ. ಹಾಗೇ, ಅಲ್ಲಿಯೂ ಮೂಲವನ್ನು ಮರೆಸುವ ಎಣ್ಣೈ ಪದವೇ ಬಳಕೆಯಲ್ಲಿದೆ.
ಈಗ ಅಲ್ಲಿ ಎಳ್ಳಿನ ಎಣ್ಣೆಗೆ ನಲ್ಲೆಣ್ಣೈ ಅನ್ನುತ್ತಾರೆ Smiling

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • Email this ಪ್ರತಿಕ್ರಿಯೆ
May 11, 2008 - 7:39am — kannadakanda

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

kannadakanda's picture

ಆದರೆ ಸಂಸ್ಕೃತದಲ್ಲಿರುವ ಹಾಗೆ ವಿಸ್ತಾರವಾದ ಸಂಯುಕ್ತಾಕ್ಷರ ಸಂಯೋಜನೆಗಳಿಲ್ಲ (Extensive combination). ಉದಾಹರಣೆಗೆ, ಕಸ್ತೂರಿ, ಪ್ರಜ್ವಲ ಇವು ಕ್ರಮವಾಗಿ ಕತ್ತುರಿ ಹಾಗೂ ಪಜ್ಜಳ ಎಂಬ ರೂಪಗಳನ್ನು ಪಡೆಯುತ್ತವೆ. ಇಲ್ಲವಾದರೆ ಸಂಯುಕ್ತಾಕ್ಷರಗಳ ವ್ಯಂಜನಗಳ ನಡುವೆ ಸ್ವರ ಸೇರಿ ಬಿಡಿಗೊಳ್ಳುತ್ತವೆ ಉದಾಹರಣೆಗೆ, ಭಕ್ತಿ->ಭಕುತಿ, ಮುಕ್ತಿ->ಮುಕುತಿ, ಲಕ್ಷ್ಮಿ->ಲಕುಮಿ ಇತಾದಿ.

  • Login or register to post comments
  • link
  • Email this ಪ್ರತಿಕ್ರಿಯೆ
May 11, 2008 - 8:45pm — ವೈಭವ

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ವೈಭವ's picture

"...ಆದರೆ ಸಂಸ್ಕೃತದಲ್ಲಿರುವ ಹಾಗೆ ವಿಸ್ತಾರವಾದ ಸಂಯುಕ್ತಾಕ್ಷರ ಸಂಯೋಜನೆಗಳಿಲ್ಲ (Extensive combination). .."
ಹೌದು. ಎಲ್ಲ ತರದ ಸಮುಕ್ಕರಗಳು ಇದ್ದಿದ್ದರೆ ಕನ್ನಡ ಸಕ್ಕದದಶ್ಟು ಕಬ್ಬಿಣದ ಕಡಲೆಯಾಗುತ್ತಿತ್ತು. Smiling ಇಲ್ಲದಿರುವದಿಂದಲೆ ಕನ್ನಡ ಸುಲಿದ ಬಾಳೆಹಣ್ಣಿನ ತೆರ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨)
  • ಕನ್ನಡ - ಇಂಗ್ಲಿಷ್ ಭಾಷಾ ಕಲಿಕೆಯ ವಿಸ್ಮಯ-ವಿಚಾರ
  • ವ್ಯಾಕರಣದೋಷ
  • ಕ್ಷ , ತ್ರ ಮತ್ತು ಜ್ಞ
  • ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ಡ್ರೈವರ್‌ ಎಂಬ ಆಪತ್ಬಾಂಧವ
  • ಯಥೇಚ್ಛವೋ ಯಥೇಷ್ಟವೋ?
  • ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.
  • ನಮ್ಮಲ್ಲಿಲ್ಲದ ’ನಮ್ಮದು’
  • ಸರಿಯಾಗಿ ಯಾಕೆ ಬರುತ್ತಿಲ್ಲಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು

ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator