ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ನನಗೆ ಬಿಡುವಿಲ್ಲದಿರುವುದರಿಂದ ನನಗೆ ಬಿಡಿಸಲಾಗುತ್ತಿಲ್ಲ. ದಯವಿಟ್ಟು ಮನ್ನಿಸಿ

- Login or register to post comments
- 625 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿವುಂ = ಅರಿವು
ನೆಱವುಂ =ನೆರವು
ತನ್ನೊಳ್ = ತನ್ನಲ್ಲಿ
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ನೆಱೆದ ಅಂದ ಅಱಿದ ಅದಱೊಳ್ ಎಸಪುದು ಅಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಗುಱಿನೆಱದ ಎಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಮಱುಗದೊಡೆ ಆನ್ ಎಱವುಂ ಅಱಿವುಂ ಏನ್ ಕೂಡುಗುಮೇ...
ಸರಿಯಾ?
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ನನ್ನಿ ಮಾಯ್ಸ,
ಆದರೆ ಇದರ ತಿರುಳೇನು. ಇನ್ನು ಸರಿಯಾಗಿ ಹೊಳೆಯಲಿಲ್ಲ. ಗೊಂದಲವಾಗಿದೆ
-
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಇಲ್ಲಿ ಅಱಿವು/ಜ್ನಾನ ಮತ್ತು ನೆಱವು=ಬೞಕೆ/ಸಹಾಯದ ಬಗ್ಗೆ ಮಾತಾಡ್ತಾ ಇರೋ ಹಾಗಿದೆ...
ಕನ್ನಡ ಕಂದರು ಹಾಕಿದ ಒಂದು ಸುಬಾಶಿತದ ಹಂಗೆ ಇದೆ.. ಅನ್ನಿಸ್ತಿದೆ..
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
>>ಅಱಿವುಂ ನೆಱವುಂ ತನ್ನೊಳ್
>>ನೆಱೆದಂದಱಿದದಱೊಳೆಸಪುದಲ್ಲದೆ
ಅರಿವೂ, ನೆರವೂ ತನ್ನೊಳಗೆ ತಾನೇ ನೆರೆದಿದ್ದರೆ (ಸೇರಿದ್ದರೆ), ಅದದರೊಳಗೆ ಎಸೆವುದಲ್ಲದೆ (ಮೆರೆಯುವುದಲ್ಲದೆ)...
ಅಂತಿರಬೇಕೇ?
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭ್ಹಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.

ನಿನ್ನೆ ನಾನು ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಿದ್ದೆ. ಅವರು ಈ ಪದ್ಯವನ್ನು ಚೆನ್ನಾಗಿ ಬಿಡಿಸಿದರು. ನಾವು ಬಿಟ್ಟ ಕೆಲವು ಶಬ್ದಗಳಿಗೆ ಚೆನ್ನಾದ ಅರ್ಥವನ್ನೇ ಕೊಟ್ಟಿದ್ದಾರೆ.
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದಱೊಳೆಸಪುದು=ತಿಳುವಳಿಕೆಯಲ್ಲಿ(ಅಱಿವಿನಲ್ಲಿ) ಸತ್ಯ(ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆಯೂ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ನಿನ್ನೆ ನಾನು ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಿದ್ದೆ. ಅವರು ಈ ಪದ್ಯವನ್ನು ಚೆನ್ನಾಗಿ ಬಿಡಿಸಿದರು. ನಾವು ಬಿಟ್ಟ ಕೆಲವು ಶಬ್ದಗಳಿಗೆ ಚೆನ್ನಾದ ಅರ್ಥವನ್ನೇ ಕೊಟ್ಟಿದ್ದಾರೆ.
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದಱೊಳೆಸಪುದು=ತಿಳುವಳಿಕೆಯಲ್ಲಿ(ಅಱಿವಿನಲ್ಲಿ) ಸತ್ಯ(ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?

ಸ್ನೇಹಿತರೆ,
ಹಳೆಗನ್ನಡ ನನ್ನ ಕ್ಷೇತ್ರವಲ್ಲ. ಆದರೂ ಆಸಕ್ತಿ, ನಿಘಂಟಿನ ಸಹಾಯ ಮತ್ತು ಸ್ವಲ್ಪ ಕಲ್ಪನೆಗಳೊಂದಿಗೆ ಇದನ್ನು ಅರ್ಥೈಸುವ ಪ್ರಯತ್ನ ಮಾಡಿದ್ದೇನೆ.
ತಪ್ಪಿದ್ದರೆ ತೋರಿಸಿಕೊಡಿ. ತಿದ್ದಿಕೊಳ್ಳುತ್ತೇನೆ.
ಅಱಿವುಂ = ಜ್ಞಾನವೂ (ತಿಳುವಳಿಕೆಯೂ) ನೆಱವುಂ = (ದೈವ ಅಥವಾ ಮನುಷ್ಯ) ಸಹಾಯವೂ ತನ್ನೊಳ್
ನೆಱೆದಂದು =ತನ್ನಲ್ಲಿ ಒಟ್ಟುಗೂಡಿದಾಗ, ಅರಿದು = ಅದನ್ನರಿತು, ಎಸಪುದಲ್ಲದೆ= ಪ್ರಯತ್ನಶೀಲನಾಗಬೇಕಲ್ಲದೆ
ಬರಿಯಂ= ಕೇವಲ, ಗುಱಿನೆಱದೆಡೆಯೊಳ್= ಗುರಿ ಈಡೇರುವ ವಿಷಯದಲ್ಲಿ ಮಮ್ಮಲಮಱುಗಿದೊಡೆ= ಅತಿಯಾಗಿ ಮರುಗುತ್ತಿದ್ದರೆ (ಚಿಂತಿಸುತ್ತಿದ್ದರೆ) ಆ ನೆಱವುಂ= ಒದಗಿದ ಆ ಸಹಾಯವೂ, ಅಱಿವುಂ= ಜ್ಞಾನವೂ ಕೂಡುಗುಂ ಏಂ ( ನಮಗಾಗಿ) ಒಟ್ಟುಗೂಡುತ್ತವೆಯೇ? (ಫಲಿಸುತ್ತವೆಯೇ)
ಭಾವಾರ್ಥ
ತಿಳುವಳಿಕೆ ಮತ್ತು ಸಹಾಯಹಸ್ತ ಎರಡೂ ಸಿಕ್ಕಿದಾಗ ಮನುಷ್ಯ ಕಾರ್ಯನಿರತನಾಗಬೇಕು. ಹಾಗೆ ಮಾಡದೆ ತನ್ನ ಪ್ರಯತ್ನ ಫಲಿಸುತ್ತದೋ ಇಲ್ಲವೋ ಎಂಬ ಚಿಂತೆಯಲ್ಲಿ ಮುಳುಗಿದ್ದರೆ ವಿದ್ಯೆ ಮತ್ತು ಸಹಾಯಗಳ ಕೂಟ ಫಲಕಾರಿಯಾಗುವುದಿಲ್ಲ.
ಕನ್ನಡ ಸಾಹಿತ್ಯಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು (ಪರಿಷ್ಕೃತ ಆವೃತ್ತಿಯಲ್ಲಿ)
ನೆಱೆ= ಈಡೇರು, ನೆರವೇರು ( 25 ಅರ್ಥಗಳಲ್ಲಿ 11 ನೆಯ ಅರ್ಥ)-ಪುಟ 690
ಎಡೆ= ಸಾಧ್ಯವಾಗು (13 ಅರ್ಥಗಳಲ್ಲಿ 3ನೆಯ ಅರ್ಥ) ಪುಟ173
"ಏರಿದವನು ಚಿಕ್ಕವನಿರಬೇಕು"
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ರಮೇಶ್
"ಅರಿದು = ಅದನ್ನರಿತು" ಇದು ತಪ್ಪು..
ಅಱಿದು ಅನ್ನೋದು ಸರಿಬೞಕೆಯಲ್ಲ.. ಅಱಿತು ಅನ್ನೋದ ಸರಿ..
ಅರಿದು ಅಂದರೆ ರುಬ್ಬಿ ಎಂದು ಅಱಿತ ಬರುವುದು.
ಕುಱಿತು/ಕುಱಿತ ಎಂದೂ ಕುಱಿದು/ಕುಱಿದ ಎಂದ ಆಗಲ್ಲ..
ಮಿಕ್ಕವಕ್ಕೆ ನನ್ನಿ!
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿದು= ಅರಿದು ಅಂದರೆ ಅದನ್ನ ಚೆನ್ನಾಗಿ ಒಂದುಗೂಡಿಸಿಕೊಂಡು ಅಂತ ಅರಿತ ಆಗುತ್ತೆ ಅನ್ಸುತ್ತೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಬೞಿಯಂ = ಬಳಿಯಂ , ಬರಿಯಂ ಅಲ್ಲ!!
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಒಹ್, ವಾವ್. ಸಕ್ಕತ್ತಾಗಿದೆ ಇದರ ಅರ್ತ.
ಈ ರಮೇಶ ಬಳಗಂಚಿಯವರ ಬಿಡಿಸುವಿಕೆ ನೋಡಿ ಇದರಿಂದ ಹುರುಪು ಪಡೆದ ನನ್ನ ಉನಿಯಿಟ್ಟಿದ್ದ ಕೆಲಸಗಳು ಇಂದು ಚೆನ್ನಾಗಿ ಸಾಗಿದವು.
ಪಂಪ, ನಿನಗೆ ತಡವಾಗಿಯಾದರೂ ಹೆನ್ನನ್ನಿ.
ರಮೇಶ್ ರವರೆ, ನಿಮ್ಮ ಬಿಡಿಸುವಿಕೆ/ತಿರುಳಿಗಾಗಿ ಎಲ್ಲೆಯಿಲ್ಲದ(ಅನಂತಾನಂತ) ನನ್ನಿಗಳು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ನೆಱೆ= ಈಡೇರು, ನೆರವೇರು ( 25 ಅರ್ಥಗಳಲ್ಲಿ 11 ನೆಯ ಅರ್ಥ)-ಪುಟ 690
ಎಡೆ= ಸಾಧ್ಯವಾಗು (13 ಅರ್ಥಗಳಲ್ಲಿ 3ನೆಯ ಅರ್ಥ) ಪುಟ173
ಈ ನೆಱೆಯಿಂದ ಬರುವ ನೆಱವು ಶಬ್ದಕ್ಕೆ ಸಹಾಯ ಎಂಬರ್ಥ ಬರಲು ಸಾಧ್ಯವೇ ಇಲ್ಲ. ನೆರೆ=ಸೇರು ಒಬ್ಬನ ಜೊತೆ ಇನೂಬ್ಬ ಸೇರಿದಾಗ ಸಹಾಯ. ಹಾಗಾಗಿ ನೆರವು=ಸಹಾಯ ನೆಱೆ=ತುಂಬು, ಪೂರ್ಣವಾಗು ಆದಾಗ ನೆಱವು=ಪೂರ್ಣತೆಯೇ ಹೊಱತು ಸಹಾಯವಲ್ಲ. ಆದ್ದಱಿಂದ ಪೂರ್ಣ ಅನ್ವಯ ಹಾಗೂ ಅರ್ಥಗಳು ತಪ್ಪು.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಹಾಗೆಯೇ ಬರಿಯ ಶಬ್ದ ಅಲ್ಲವದು ಬೞಿಯಂ. ಬಱಿಯಂ ಎಂಬ ಶಬ್ದವೇ ಹೞಗನ್ನಡದಲ್ಲಿ ಇಲ್ಲ. ಬಱಿಯ ಅಥವಾ ಬಱಂ=ಕ್ಷಾಮ ಇರುವ ಶಬ್ದ. ಇಲ್ಲಿರುವುದು ಬೞಿಯಂ=ಇದರ ಅರ್ಥಗಳು ಬೞಿಕ ಅಥವಾ ಬೞಿಯಂ=ದಾರಿಯನ್ನು. ಎಂಬರ್ಥ. ಆದರೆ ಬೞಿಕ (ಆಮೇಲೆ) ಎಂಬರ್ಥವೇ ಎಂದು ಪ್ರೊ. ಜಿ. ವೆಂಕಟಸುಬ್ಬಯ್ಯನವರ ಅಭಿಮತ. ನಮಗೂ ಅದು ಸರಿಯೆನಿಸಿ ಸರಿಯಾದ ಅನ್ವಯ ಹಾಗೂ ಅರ್ಥ ಕೊಟ್ಟಿದ್ದೇನೆ. ಓದಿ.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ವೈಭವ, ರಮೇಶ ಬಳಗಾಂಚಿ, ಹಂಸಾನಂದಿ ಮತ್ತು ಮಹೇಶ ಎಲ್ಲರಿಗೂ ನನ್ನ ನಲ್ನನ್ನಿ. ಪಂಪನಿಗೆ ಮಾಮಿಜೋತ
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ನೆಱವುಂ ನೆರವುಂ ಸರಿಯಾಗಿ ತಿಳಿಸಿ. ಆಗ ಅರ್ಥ ಸರಿ ಮಾಡಬಹುದು.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ನೆರವುಂ ಇರಬೇಕು. ನೆಱವುಂ ಇರಲಿಕ್ಕಿಲ್ಲ. ಸರಿಯಾದ ಪದ್ಯವನ್ನು ನೋಡಿ ಅರ್ಥ ತಿಳಿಸುತ್ತೇನೆ.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭ್ಹಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ನಂನಿ
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಕೀಲಿ ಒತ್ತುವಾಗ ಪ್ರಮಾದದಿಂದ ಲಭ್ಹಿಸಿದ ಎಂದು ಮುದ್ರಿತವಾಗಿದೆ. ದಯವಿಟ್ಟು ಲಭಿಸಿದ ಎಂದೋದಿಕೊಳ್ಳಿ.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
"ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ."
ಪರಿಪಕ್ವತೆಯನ್ನು ವೈರಾಗ್ಯದೊಡನೆ ಹೇಗೆ ಸಮೀಕರಿಸುತ್ತೀರಿ?
ಈ ಪದಕ್ಕೆ ನೀವು ಕೊಟ್ಟಿರುವ ವೈರಾಗ್ಯ ಎಂಬ ಪದ ಸಾಂದರ್ಭಿಕವೆ? ಇಲ್ಲದಿದ್ದರೆ ಪರಿಪೂರ್ಣತೆ, ಪರಿಪಕ್ವತೆ ಮತ್ತು ವೈರಾಗ್ಯಗಳಿಗೆ ಎಲ್ಲಿಂದೆಲ್ಲಿಯ ಸಂಬಂಧ?
"ಏರಿದವನು ಚಿಕ್ಕವನಿರಬೇಕು"
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಈ ವೈರಾಗ್ಯ ಎಂದರೆ ’ಹೋಗಲಿ ಭಿಡು’. ಈ ಮನೋಭಾವ ಬರಲು ಮನುಷ್ಯ ಆಧ್ಯಾತ್ಮಿಕವಾಗಿ, ಮಾನಸಿಕವಾಗಿ ತುಂಬಿರಬೇಕಾಗುತ್ತದೆ. ಇದು ನಮ್ಮ ತುಂಬು ಬೆಳವಣಿಗೆಯಿಂದ ಬರುವಂಥದ್ದು. ಇದಕ್ಕೆ ನಮಗೆ ಜ್ಞಾನದಿಂದಾದ ಪರಿಪಕ್ವತೆ. ಒಂದು ಉದಾಹರಣೆ ಕೊಡುತ್ತೇನೆ. ಇಬ್ಬರು ಮಹಿಳೆಯರು ಯಾವುದೋ ಚಿಲ್ಲಱೆ (ಕ್ಶುಲ್ಲಕ) ವಿಚಾರಕ್ಕಾಗಿ ಬಡಿದಾಡುತ್ತಿದ್ದರಂತೆ. ಇಬ್ಬರೂ ನಾನು ಸರಿ ನೀನು ತಪ್ಪು ಎಂದು ವಾದ ಮುಂದುವರೆಸುತ್ತಾ ಹೋದರಂತೆ. ಈ ವಾದ ಮುಂದುವರೆಯುತ್ತಿರುವುದನ್ನು ನೋಡಿದ ಆ ಮಹಿಳೆಯರಲ್ಲೊಬ್ಬರಿಗೆ ಒಮ್ಮೆಲೆ ಅಱಿವಾದದ್ದು ಈ ಜಗಳ ಬಿಟುಬಿಡೋಣವೆನಿಸಿತಂತೆ. ಆ ಜಾಣ ಮಹಿಳೆ ತನ್ನೊಡನೆ ಜಗಳವಾಡುತ್ತಿದ್ದ ಮಹಿಳೆಗೆ ಹೆಳಿದರಂತೆ ’ಹೋಗಲಿ ಬಿಡಿ. ನಾನೇ ತಪ್ಪಿದ್ದೆ. ನೀವೇ ಸರಿ’ ಜಗಳ ನಿಂತುಹೋಯಿತಂತೆ. ಆ ಜಾಣೆಗೆ ಅನ್ನಿಸಿರಬಹುದು ’ಹೊಗಲಿ ಬಿಡು’ ಎಂದರೆ ನನ್ನ ಗಂಟೇನು ಹೋಗುವುದು. ಈ ತೆಱನಾದ ವೈರಾಗ್ಯ ನಮಗೆ ಅಗತ್ಯವಿರಬಹುದು. ಏಕೆಂದರೆ ಅಪ್ರಸ್ತುತವಾದ ವಿಚಾರ, ಆಸೆ, ಮಮತೆಗಳಿಗೆ ನಾವು ಅಂಟಿಕೊಂಡಿರುತ್ತೇವೆ. ಇವನ್ನೆಲ್ಲಾ ’ಹೋಗಲಿ ಬಿಡು’ ಎನ್ನುವುದಕ್ಕೆ ನಮಗೆ ಸಾಕಷ್ಟು ತುಂಬು ಪ್ರಜ್ಞೆ ಇರಬೇಕಾಗುತ್ತದೆ. ಸಣ್ಣ ಮಕ್ಕಳ ಹಟಕ್ಕೆ ನಾವು ನಮ್ಮ ಹಟವನ್ನು ಬಿಟ್ಟುಬಿಡುತ್ತೇವೆ. ಇದು ಸಣ್ಣ ಮಟ್ಟದ ವೈರಾಗ್ಯ. ದೊಡ್ಡ ಕದನ ರಕ್ತಪಾತಗಳಿಗೆ ದಾರಿಯಾಗುವ ನಮ್ಮ ಅವಿವೇಕದ ಬಿಡಲಾಱದ ವಿಚಾರಗಳನ್ನು ಬಿಡಲು ನಮಗೆ ಉನ್ನತಮಟ್ಟದ ವಿವೇಚನೆ ಬೇಕಾಗುತ್ತದೆ. ಅದಕ್ಕೆ ನಮ್ಮ ಬುದ್ಧಿ ಮನಸ್ಸು ತುಂಬಿರಬೇಕಾಗುತ್ತದೆ (ಅದೇ ಈ ನೆಱವು).
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ವೈರಾಗ್ಯಕ್ಕೆ ನೀವು ಕೊಟ್ಟಿರುವ ವಿವರಣೆ ಕುತೂಹಲಕಾರಿಯಾಗಿದ್ದು ಸ್ವಲ್ಪ ಮಟ್ಟಿಗೆ ಸಮಂಜಸವೂ ಆಗಿದೆ. ಆದರೆ ಪದ್ಯದ ಅರ್ಥೈಕೆಯಲ್ಲಿ ಈ ವಿವರಣೆ ನನಗಿನ್ನೂ ಸಮಂಜಸವೆನ್ನಿಸುತ್ತಿಲ್ಲ.
"ಏರಿದವನು ಚಿಕ್ಕವನಿರಬೇಕು"
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಆದರೆ ನೆರವು=ಸಹಾಯ. ನೆಱವು=ಪೂರ್ಣತೆ. ನೀವು ಕೇಳಿರಬಹುದು. ನೆಱೆ ನಂಬಿದೆ ನಿನ್ನ ವೆಂಕಟರಮಣ. ನಿನ್ನನ್ನು ನೆಱೆ(ಸಂಪೂರ್ಣವಾಗಿ) ನಂಬಿದೆ. ಅದಱ ಭಾವನಾಮ ನೆಱವು. ನೆಱವು= ತುಂಬಿರುವಿಕೆ. ನೆಱೆವೆಱೆ= ನೆಱೆ(ಪೂರ್ಣ)+ಪೆಱೆ(ಚಂದ್ರ)=ಪೂರ್ಣಚಂದ್ರ. ತುಂಬಿದ ಕೊಡ ತುಳುಕುವುದಿಲ್ಲ. ತುಂಬಿದ ಕೊಡದಂತಿರುವವರಿಗೆ ವೈರಾಗ್ಯ ಹೆಚ್ಚು. ಸಣ್ಣ ವಿಷಯಗಳಿಗೆಲ್ಲ ಅವರು ’ಹೋಗ್ಲಿ, ಬಿಡು’ ಎನ್ನುತ್ತಾರೆ. ಅವರಿಗೆ ಜಗತ್ತಿನ ವ್ಯ್ವವಹಾರವೆಲ್ಲ ಸಣ್ಣದೇ. ಹಾಗಾಗಿ ಅವರ ಪೂರ್ಣತೆ=ವೈರಾಗ್ಯ. ಸರಿಯೆನಿಸಬಹುದೇ?
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
"ಏಱಿದವನು ಚಿಕ್ಕವನಿರಬೇಕು" ಎಂದು ಬದಲಾಯಿಸಿಕೊಳ್ಳಿ.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಏಱದವನು ದೊಡ್ಡವನಾಗಿರಬೋದೋ?
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ವ್ಯಾಕರಣ ಹೋಗಿ ಆದ್ಯಾತ್ಮ ಬಂತು ಡುಂ ಡುಂ ಡುಂ
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಇಷ್ಟೆಲ್ಲ ಆಗಿದ್ದು ಈ ನೆರೆ ಮತ್ತು ನೆಱೆ ಶಬ್ದಗಳ ಅಥವ್ಯತ್ಯಾಸ ತಿಳಿಸಲು. ಹಾಗಾಗಿ ವ್ಯಾಕರಣಂ ವೈರಾಗ್ಯಕ್ಕೆಳಸಿತೆನ್ನಂ.
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಯ್ಯ..
ಶಬ್ದಮಣಿದರ್ಪದ ಮೊದಲಲ್ಲೇ ವ್ಯಾಕರಣದಿಂದ ಮುಕುತಿ ದೊರೆಯುವುದು ಎಂದು ಅಱುಹಿದೆ.
ನಿಂಮಿಂದೇ ನನಗೂ ಈ ಱ, ೞದ ತೆವಲು ಹೆಚ್ಚಿದೆ.. ಈಗ ತಪ್ಪಿಲ್ಲದೆ ಱ, ೞಗಳ ಬೞಕೆ ಮಾಡುತ್ತಿದ್ದೀನಿ ತಾನೇ?
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಪ್ಪುದಪ್ಪುದು
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಯಾರನ್ನ ಅಪ್ಪುದು?
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಪ್ಪುದು=ಅಹುದು=ಹೌದು
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಗೊತ್ತು..
ಅಪ್ಪುವುದು => ಅಪ್ಪುದು ಎಂದು ಮಾತಲ್ಲುಂಟು.
=====================================
ಮಾಯ್ಸ!
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ನಿನ್ನೆ ನಾನು ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಿದ್ದೆ. ಅವರು ಈ ಪದ್ಯವನ್ನು ಚೆನ್ನಾಗಿ ಬಿಡಿಸಿದರು. ನಾವು ಬಿಟ್ಟ ಕೆಲವು ಶಬ್ದಗಳಿಗೆ ಚೆನ್ನಾದ ಅರ್ಥವನ್ನೇ ಕೊಟ್ಟಿದ್ದಾರೆ.
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದಱೊಳೆಸಪುದು=ತಿಳುವಳಿಕೆಯಲ್ಲಿ(ಅಱಿವಿನಲ್ಲಿ) ಸತ್ಯ(ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ನಿನ್ನೆ ನಾನು ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಿದ್ದೆ. ಅವರು ಈ ಪದ್ಯವನ್ನು ಚೆನ್ನಾಗಿ ಬಿಡಿಸಿದರು. ನಾವು ಬಿಟ್ಟ ಕೆಲವು ಶಬ್ದಗಳಿಗೆ ಚೆನ್ನಾದ ಅರ್ಥವನ್ನೇ ಕೊಟ್ಟಿದ್ದಾರೆ.
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾ ನೆಱವುಮಱಿವುಮೇಂ ಕೂಡುಗುಮೇ
ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದಱೊಳೆಸಪುದು=ತಿಳುವಳಿಕೆಯಲ್ಲಿ(ಅಱಿವಿನಲ್ಲಿ) ಸತ್ಯ(ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಟೈಪಿಸುವಾಗ ಕೆಲವು ಅಕ್ಷರಗಳನ್ನು ನುಂಗಿಬಿಟ್ಟೆ. ಅದಕ್ಕೆ ತಮ್ಮೆಲ್ಲರ ಕ್ಷಮೆಯಿರಲಿ
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾ ನೆಱವುಮಱಿವುಮೇಂ ಕೂಡುಗುಮೇ
ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದು=ತಿಳಿದು ಅದಱೊಳೆಸಪುದು=ಅದಱಲ್ಲಿ(ಆ ತಿಳುವಳಿಕೆಯಲ್ಲಿ,ಅಱಿವಿನಲ್ಲಿ ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?
ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಈ ಪ್ರಯತ್ನಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು
"ಏರಿದವನು ಚಿಕ್ಕವನಿರಬೇಕು"