ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
ಒಂದು ಕನ್ನಡ ಸಂಸ್ಥೆಗೆ ವೆಬ್ ಸೈಟ್ ಮಾಡಬೇಕಾಗಿದೆ. ಈ ವಿಷಯದಲ್ಲಿ ನನಗೆ ಕೆಳಕಂಡ ಸಹಾಯ / ಮಾಹಿತಿ ಬೇಕಾಗಿದೆ.
೧. ಸ್ಪೆಸಿಫಿಕೇಷನ್ ಮಾಡುವುದು ಹೇಗೆ?
೨. ಖರ್ಚು ಅಂದಾಜು ಎಷ್ಟು ಬರಬಹುದು?
೩. ಈ ಸರ್ವೀಸ್ ಕೊಡಬಲ್ಲ ಕಂಪನಿಗಳ ಮಾಹಿತಿ ( ಈಮೈಲ್ / ಟೆಲಿಫೋನ್ ). ಕನ್ನಡ ಗೊತ್ತಿರಬೇಕು. ಮುಂಬಯಿಯ ಸಂಸ್ಥೆಯಾದರೆ ಒಳ್ಳೆಯದು. ಮುಂಬಯಿಯಲ್ಲಿ ಶಾಖೆ ಇರುವ ಬೆಂಗಳೂರಿನ ಸಂಸ್ಥೆಯಾದರೂ ನಡೆಯುತ್ತದೆ.
೪. ಇನ್ನೂ ಏನಾದರೂ ವಿಶೇಷ ಮಾಹಿತಿ ಇದ್ದರೆ ಅದನ್ನೂ ತಿಳಿಸಿ.

- Login or register to post comments
- 331 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
ನೀವೇ ಮಾಡಬೇಕೆಂದಿರುವಿರಾ?
ಇಲ್ವೇ
ಮಾಡಿಸಿಕೊಳ್ಳಲು ಬಯಸುವಿರಾ?
ಹರಿ, ಇತ್ತ ನೋಡೋ..!!
=====================================
ಮಾಯ್ಸ!
ಉ: ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
ಬೇರೆಯವರಿಂದ ಮಾಡಿಸಬೇಕು. ಅದಕ್ಕೆ ಏನೇನು ಸ್ಪೆಸಿಫೈ ಮಾಡಬೇಕು ಅಂತ ವಿವರಗಳು ಬೇಕಾಗಿತ್ತು.
ಉ: ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
ಹರಿ ಬಲು ಬಿಜಿ ಅನ್ನಿಸ್ತದೆ..
ಅವನಿಗೆ ಒಂದು ಮಿನ್ನೋಲೆ ಕಳಿಸಿ,
=====================================
ಮಾಯ್ಸ!
ಉ: ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
ನಿಮಗೆ ಕಳಿಸಿದ ಖಾಸಗಿ ಸಂದೇಶದಲ್ಲಿ hpn ರ ಮೈಲ್ ಐ.ಡಿ ಇದೆ. ಅವರನ್ನ ಸಂಪರ್ಕಿಸಿ. ಉತ್ತರಿಸುತ್ತಾರೆ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
ಮಹೇಶ ಮತ್ತು ಓಂಶಿವಪ್ರಕಾಶ
ನಿಮ್ಮಿಬ್ಬರಿಗೂ ಧನ್ಯವಾದಗಳು
ನಾರಾಯಣ
ಉ: ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
ನಿಮಗೆ ವೆಬ್ಸೈಟಿನಲ್ಲಿ ಏನೇನು ಬೇಕು ಅನ್ನೋದನ್ನ ಪಟ್ಟಿ ಮಾಡಿ ಅವರಿಗೆ ಕಳುಹಿಸಿ. ಏನು ವೆಬ್ಸೈಟ್ ಮಾಡ ಹೊರಟಿದ್ದೀರಿ?
ಸಹಯ ಬೇಕಿದ್ದರೆ ನಾನು ಮಾಡಬಲ್ಲೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
ನಾನು ಮೇಲೆ ಬರೆದ ಹಾಗೆ ಮುಂಬಯಿಯ ಕನ್ನಡ ಸಂಸ್ಥೆಯೊಂದರ ವೆಬ್ ಸೈಟ್ ಮಾಡಬೇಕು.
ಅದರಲ್ಲಿ ಕೆಳ ಕಂಡ ಅಂಶಗಳಿರಬೇಕು (ಮಿನಿಮಮ್)
* ಸಂಸ್ಥೆಯ ಇತಿಹಾಸ, ಚಾರಿತ್ರಿಕ ಘಟನೆಗಳು , ಹಳೆಯ ಫೋಟೋಗಳು ಇತ್ಯಾದಿ
*ವ್ಯವಸ್ಥಾಪಕ ವರ್ಗದ ಮಾಹಿತಿ
* ಆಗುಹೋಗುಗಳು, ಕಾರ್ಯಕ್ರಮಗಳು ( ಹಿಂದೆ ಆದ, ಮುಂದೆ ಆಗುವ)
* ಇಲ್ಲಿರುವ ಸೌಲಭ್ಯಗಳ ಬಗ್ಯೆ ಮಾಹಿತಿ (ಆಡಿಟೋರಿಯಮ್, ರೀಡಿಂಗ್ ರೂಮ್ ಇತ್ಯಾದಿ)
* ಹೌಸ್ ಮ್ಯಾಗಝೀನಿನ ವೆಬ್ ಆವೃತ್ತಿ
* ಹಳೆಯ ಕಾಪಿಗಳನ್ನು ಸ್ಕ್ಯಾನ್ ಮಾಡಿ ಹಾಕಬೇಕು
* ಕನ್ನಡ ಕರ್ನಾಟಕಕ್ಕೆ ಸಂಬಂಧಪಟ್ಟ ಮಹತ್ವದ ಸುದ್ದಿಗಳು
*ಮುಂಬಯಿ ಕನ್ನಡಿಗರಿಗೆ ಸಂಬಂಧಪಟ್ಟ ಸುದ್ದಿಗಳು
*ಸಂಸ್ಥೆಯನ್ನು ಸಂಪರ್ಕಿಸಲು ಕೊಂಡಿ
*ವಿಸಿಟರ್ ಕೌಂಟರ್
*ಜಾಹಿರಾತುಗಳು
*ಇಲ್ಲಿರುವ ಮಾಹಿತಿಯನ್ನು update ಮಾಡುವುದು ಸಂಸ್ಥೆಯವರಿಗೇ ಸಾಧ್ಯವಿರಬೇಕು.
ಇದಷ್ಟು basic requirements. ಹೋಗುತ್ತಾ ಹೋಗುತ್ತಾ ಇನ್ನೂ featuresಗಳನ್ನು ಸೇರಿಸುವ ವಿಚಾರವಿದೆ.
ವಿನ್ಯಾಸ
ಮಾಹಿತಿ ತುಂಬುವುದು
ಡೊಮೈನ್ ಹೆಸರು ನೋಂದಣಿ
ವೆಬ್ ಹೋಸ್ಟಿಂಗ್
ದೈನಂದಿನ ನಿರ್ವಹಣೆ
ಆಗಾಗ ಅಪ್ ಗ್ರೇಡುಗಳು
ಇವೆಲ್ಲವುಗಳೂ scopeನಲ್ಲಿ ಸೇರಿವೆ.
(ಇನ್ನೂ ಏನಾದರೂ ಹೊಸ ಐಟಮ್ ಇದ್ದರೆ , ದಯವಿಟ್ಟು ಸೂಚಿಸಿ)
ಇದನ್ನು ಮಾಡುವಂಥ, ಕನ್ನಡ ಬರುವಂತಹ, ಮುಂಬಯಿಯಲ್ಲಿ ಇರುವಂತಹ ವಿಶ್ವಾಸಾರ್ಹ ಪಾರ್ಟಿ ಬೇಕಾಗಿದೆ.
ದಯವಿಟ್ಟು ವಿವರಗಳನ್ನು ಕೊಡಿ