ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಎಲ್ಲಾ ಓಕೆ , ಸೆನ್ಸಾರ್ ಯಾಕೆ?

May 19, 2008 - 9:36am — ಶ್ರೀನಿಧಿ

censor ಎಂದೊಡನೆ ತಕ್ಷಣ ಮನಸ್ಸು ಸೆನ್ಸಾರ್ ಬೋರ್ಡ್ ಕಡೆಗೆ ಯೋಚನೆ ಮಾಡುವುದು ಯಾಕೆ?! corporate censorship, political censorship ಬಗ್ಗೆ ಯೊಚನೆ ಮಾಡುವುದು ಬಿಟ್ಟು.
ಸೆನ್ಸಾರ್ ಬಗೆಗೆ ನನ್ನ ಅನಿಸಿಕೆಗಳು

೧. ಫಿಲ್ಮಿನ ಸೆನ್ಸಾರ್ :
ಸೆನ್ಸಾರ್ ಬೋರ್ಡ್ ಅವರ ಪ್ರಯತ್ನಗಳಿಂದ ಪೋರ್ನ್/offesive ಸಿನಿಮಾಗಳು ತೆರೆ ಕಾಣುವುದು ನಿಂತಿದೆಯಾ? ಅವರು ರೇಟಿಂಗ್ ಕೊಟ್ಟ ಮಾತ್ರಕ್ಕೆ ಜನ ನೋಡುವುದು ನಿಲ್ಲಿಸಿದ್ದಾರ? ಅಥವಾ ನಮ್ಮ ದೇಶದಲ್ಲಿ "refusal for public display" ಅಂತ ಕೊಟ್ಟರೂ ಇಂಟರ್ನೆಟ್ಟಿನಲ್ಲಿ ಸಿಗಲಾರದೇ? ಮೊರಾಲಿಟಿ (morality) ಪ್ರಪಂಚದ ಎಲ್ಲಾ ಜನರಿಗೂ ಒಂದೇ ಆಗಿರುತ್ತದಾ? ಅಥವಾ ನಾವು "ಅಂತ" ಸಿನಿಮಾಗಳನ್ನು ನೋಡದಿದ್ದರಿಂಲೇ, ನಮ್ಮ ಜನಸಂಖ್ಯೆ, ನಮ್ಮ ಸಮಾಜದಲ್ಲಿ ನಡೆಯುವ ಅಪರಾಧಗಳು ಬಹಳ ಕಮ್ಮಿಯಾಗಿದೆಯಾ?

೨. ಪತ್ರಿಕೆಗಳ ಸೆನ್ಸಾರ್
ಪೇಪರ್ ಗಳೆಲ್ಲಾ ಪ್ರತಿಯೊಂದು ಶಬ್ದವನ್ನೂ ಸೆನ್ಸಾರ್ ಮಾಡಿದರೆ ಪೇಪರ್ರಿನ ಗತಿ ಅಧೋಗತಿ ಆಗುತ್ತದೆ. ಸೆನ್ಸಾರ್ ಮಾಡದಿದ್ದರೆ ಅಲ್ಲ. (ಇದು ಪೋರ್ನ್ ಅಥವಾ ಕೆಟ್ಟ ಶಬ್ದಗಳ ಸೆನ್ಸಾರ್ ಬಗ್ಗೆ ಅಲ್ಲ). ಅಲ್-ಜಸಿರಾ ಪತ್ರಿಕೆ ಇರಬಾರದೇ? (ಅಥವಾ ಬರೀ fox/CNN ಇರಬೇಕೇ?). Jyllands-Posten ( http://en.wikipedia.org/wiki/Jyllands-Posten_Muhammad_cartoons_controver... ) ಬಗ್ಗೆ, ಏನೆಂತೀರ? ಕಲ್ಕತ್ತ ಕುರಾನ್ ಪಿಟಿಷನ್ ಬಗ್ಗೆ ಕೇಳಿದ್ದೀರಾ? ಸೆನ್ಸಾರ್ ಬಗ್ಗೆ ಬರೆದ ಬರಹ ಸೆನ್ಸಾರ್ ಆಗಬೇಕೆ ಬೇಡವೇ?

೩.ಯಾವುದೇ ಯೋಚನೆ ಅಥವಾ ಬರಹ censor ಮಾಡಿದರೆ ಎಲ್ಲರಿಗೂ ಅದನ್ನು ಓದುವ/ಅದರ ತಪ್ಪುಗಳನ್ನು ತೋರಿಸಿ ಆ ಯೊಚನೆ ಸರಿಯಲ್ಲ ಎಂದು ಬೇರೆಯವರಿಗೆ ತಿಳಿಸುವ ಹಕ್ಕು ಕೂಡ ಇರುವುದಿಲ್ಲ. ಆ ಬರಹವೇ ಇಲ್ಲದಿದ್ದರೆ ಯಾವುದನ್ನು ಖಂಡಿಸೀರಿ? ಆಗ ಬರೆದವನು , ಅವನ ಹಿಂಬಾಲಕರಿಗೆ ಅವರು ಬರೆದಿದ್ದು ಸರಿಯಾಗಿ ಹೋಗುತ್ತದೆ. ಬೇರೆ ಜನರಿಗೆ ಅದರ ಕೀಳ್ಮೆ ಬಗ್ಗೆ ತಿಳಿಯುವುದೇ ಇಲ್ಲ!

೪. ಬರಹ ಬಿಟ್ಟು ಮನಸ್ಸಿನ ಆಲೋಚನೆ ತಡೆಯಲು ಸಾಧ್ಯವಾ? ( thought police ಬಗ್ಗೆ ಗೂಗ್ಲಿಸಿ/ಓದಿ).

೫. ಇಂದು ತಮಗೆ ಇಷ್ಟ ಇಲ್ಲದ್ದ ಬರಹ ಸೆನ್ಸಾರ್ ಮಾಡಿದರೆ, ನಾಳೆ ಯಾವುದೋ ಒಂದು ರಾಜಕೀಯ ಪಕ್ಷದ ವಿರುದ್ಧ ಆಡಿದ ಮಾತು/ಬರಹ ಸೆನ್ಸಾರ್ ಮಾಡುವುದಿಲ್ಲ ಎಂದೇನು? ಇದು ನಮ್ಮ ದೇಶದಲ್ಲೇ ಇಂದಿರಾ ಗಾಂಧಿ ಅವರ ದುರಾಡಳಿತದ ಕಾಲದಲ್ಲಿ ಆಗಿಲ್ಲವೇ? ಇಂದಿಗೂ ಚೀನಾ/ಉತ್ತರ ಕೊರಿಯಾ/ಥಾಯ್ಲ್ಯಾಂಡಿನಲ್ಲಿ ಆಗುತ್ತಿಲ್ಲವೇ? (ಕೆಲವರ ಕಣ್ಣು "ಕೆಂಪಾ"ಗುವುದಕ್ಕೆ ಮೊದಲು ಇದು ಅಮೇರಿಕಾದಲ್ಲೂ, ಒಂದು ರೀತಿಯಲ್ಲಿ ನಡೆಯುತ್ತಿದೆ ಅಂತ ಹೇಳಿಬಿಡುತ್ತೇನೆ !) ಯಾವುದು cut-off?
ಧರ್ಮದ ಬಗ್ಗೆ ಸೆನ್ಸಾರ್ ಇರಬೇಕಾದರೆ, ದೇವರನ್ನು ನಂಬದವರು-ಧರ್ಮವನ್ನು ನಂಬದವರು ಇರಬಾರದೇ? ಅಥವಾ ಒಂದು ಧರ್ಮದ (ಇದನ್ನು religon ಅಂದುಕೊಳ್ಳಿ) ವಿಮರ್ಶೆ ಹೇಳಬಾರದೇ? historical research ಮಾಡಬಾರದೇ? ಅಥವಾ ಒಬ್ಬ ಪ್ರವಾದಿ, ಒಬ್ಬ ಸನ್ಯಾಸಿ ಮಾಡಿರುವ ಕೆಲಸಗಳ ಓದು, ಅವರ ಬಗೆಗೆ ನೇರವಾದ ಬರಹ ಇರಬಾರದೇ? ಹೀಗೆ ಸೆನ್ಸಾರ್ ಮಾಡಿದರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಸಾವಿರ ಸಾವಿರ ಪುಸ್ತಕಗಳನ್ನು, ನೂರಾರು PhDಗಳನ್ನು ತೆಗೆದು ಒಗೆಯಬೇಕಾದೀತು ಅಲ್ಲವೇ?

ಗೂಗ್ಲಿಸಲು ಕೆಲವು ಶಬ್ದಗಳು (ನನ್ನ ಲಿಸ್ಟಿಗೇ ನಿಮ್ಮನ್ನು ಕಟ್ಟಿ ಹಾಕಿಕೊಂಡು ಬಿಡಬೇಡಿ. ಹುಡುಕಿದರೆ ಬೇರೆ ಸಿಕ್ಕಾವು)
self-cesorship, thought police, newspeak, chilling effect, book burning, internet censorship, wikileaks (ಇದು ಬಹಳ ಆಸಕ್ತಿಕರವಾಗಿದೆ!) ಮತ್ತು ಕೊನೆಯದಾಗಿ http://www.eff.org/

ವಿ.ಸೂ : cross-posting ಬಗ್ಗೆ ಕ್ಷಮೆ ಇರಲಿ.

‹ ಸಂಬಂಧಗಳು ಹಾಸನ ಜಿಲ್ಲೆಯ ಕುಂತಿಗುಡ್ಡದ ಬಗ್ಗೆ ನಾನು ಬರೆದ ಲೇಖನದ ವಿಷಯವಾಗಿ ›
  • ಸಮುದಾಯ
~.~
  • Login or register to post comments
  • 153 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದನದಿಂದ ಜನರೇಟರಿಗೆ ಸ್ಪೂರ್ತಿ (ಇ-ಲೋಕ-21)(5/5/2007)
  • ಅಗ್ಗದ ದರದಲ್ಲಿ ಸಿ ಎಫ್ ಲ್ಯಾಂಪ್
  • ಧರ್ಮಿಷ್ಟರ ದಂಧೆ
  • ಕಾಯಿಲೆಗಳ ಬಗ್ಗೆ ಒ೦ದಿಷ್ಟು...
  • ಸರ್ವಮಾನ್ಯ ಕವಿ ಕೆ ಎಸ್ ನಿಸಾರ್ ಅಹಮದ್
Syndicate content

ಲೇಖಕರು

ಶ್ರೀನಿಧಿ's picture

ಪೂರ್ಣ ಹೆಸರು
ಶ್ರೀನಿಧಿ ನರಸಿಂಹಾಚಾರ್

ಪರಿಚಯ

ಹುಟ್ಟಿದ್ದು ಬೆಂಗಳೂರು. ಬಾಲ್ಯದ 13 ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಮತ್ತೆ ಬೆಂಗಳೂರು, ನಂತರ ಅಲ್ಲೇ ಕೆಲಸ. ಎಂ. ಎಸ್ ಕ್ಲೆಂಸನ್, ಯು.ಎಸ್.ಏ ಯಲ್ಲಿ ಮುಗಿಸಿ ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ.

ಹವ್ಯಾಸ- ಓದು, ಕರ್ನಾಟಕ ಶಾಸ್ತ್ರೀಯ ಸಂಗೀತ, ತತ್ವಶಾಸ್ತ್ರ, ಕ್ರಿಕೆಟ್, ಟಿ.ಟಿ,ಕನ್ನಡ ಚಲನಚಿತ್ರ(ತುಂಬಾ ವೀಕು).
ನೆಚ್ಚಿನ ಲೇಖಕರು/ಕವಿಗಳು - ತಾರಾಸು, ಭೈರಪ್ಪ, ಸತ್ಯಕಾಮ, ಮಾಸ್ತಿ, ಬೇಂದ್ರೆ, ಗೊರೂರು, ರಾಶಿ, ಅ.ರಾ. ಮಿತ್ರ, ನಯಸೇನ, ಇನ್ನೊ ಅನೇಕ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸ್ತ್ರೀಸೌಂದರ್ಯ
    July 25, 2008 - 6:25am
  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
ಇನ್ನಷ್ಟು


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator