ನರಸಿಂಹ ಯಾರು ?
ನೆನ್ನೆ ನರಸಿಂಹ ಜಯಂತಿ. ಒಂದು ೫-೬ ಮನೆಗಳಲ್ಲಿ ಪಾನಕ, ಕೋಸಂಬರಿ, ನೀರುಮಜ್ಜಿಗೆ, ಗೊಜ್ಜವಲಕ್ಕಿ, ಸಜ್ಜಿಗೆ ಎಲ್ಲ ಮೆದ್ದೆ. ಆದರೆ ನನಗೆ ಕೆಲವು ಪ್ರಶ್ನೆಗಳು ತುಂಬಾ ಕೊರೆಯತ್ತೆ. ಅದರಲ್ಲಿ ಮುಖ್ಯವಾದದ್ದು "ಈ ನರಸಿಂಹ ಯಾರು" ಎಂಬುದು ? "ಏನ್ ಚಿಲ್ಲರೆ ಪ್ರಶ್ನೆ ಇದು", ಅಂತ ಅಸಡ್ಡೆ ಮಾಡಬೇಡಿ, ಮುಂದೆ ಓದಿ.
ಕರ್ನಾಟಕದಲ್ಲಿ ನಾನು ನೋಡಿದ ಹಾಗೆ ಎರಡು ರೀತಿಯ ನರಸಿಂಹಗಳು ಇದ್ದಾರೆ. ಆಶ್ಚರ್ಯ ಪಡಬೇಡಿ. ಮೊದಲೇ ಕಿತ್ತಾಡಿಕೊಂಡಿರುವ ಜನಕ್ಕೆ ಕಿತ್ತಾಡೋಕ್ಕೆ ಮತ್ತೊಂದು ವಿಷಯ.
೧. ಮೈಸೂರು ಸೀಮೆಯ (ಅಂದರೆ ದಕ್ಷಿಣ ಕರ್ನಾಟಕದ) ಕಡೆ ಕಾಣಸಿಗುವ ಶ್ರೀಲಕ್ಷ್ಮೀನೃಸಿಂಹ.
೨. ಮಂಗಳೂರು, ಕುಂದಾಪುರ ಕಡೆ ಕಾಣಸಿಗುವ "ಗುರುನರಸಿಂಹ". ಅಲ್ಲಿಯ ಪ್ರಕಟಣೆಗಳಲ್ಲಿ "ಇಲ್ಲಿರುವುದು ಲಕ್ಷ್ಮೀನೃಸಿಂಹ ಅಲ್ಲ, ಗುರುನರಸಿಂಹ ಅಂತ" ಎಕ್ಸಪ್ಲಿಸಿಟ್ಟಾಗಿ ಬರೆಸಿಕೊಂಡಿರುವುದನ್ನು ಅಲ್ಲಿಗೆ ಹೋದಾಗ ಗಮನಿಸಿ ಬೇಕಿದ್ದರೆ.
ಈಗ ನೋಡಿ, ನನ್ನಲ್ಲಿ ಇರುವ ಕೆಲವು ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತೇನೆ. ಯಾರಿಗಾದರೂ ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಕೊಡಿ.
೧. ಈ ಗುರುನರಸಿಂಹ ಮತ್ತು ಲಕ್ಷ್ಮೀನೃಸಿಂಹ ಇಬ್ಬರಿಗೂ ಏನು ವ್ಯತ್ಯಾಸ ? ಗುರುನರಸಿಂಹ ಸುಪ್ರಭಾತವನ್ನು ಕೇಳಬೇಕಿದ್ದರೆ ಯೂಟ್ಯೂಬಿನ ಈ ಲಿಂಕನ್ನು ನೋಡಿ.
೨. ಈ ನೃಸಿಂಹನ ಪ್ರಸ್ತಾಪ ನಮಗೆ ಮೊದಲು ದೊರೆಯತ್ತೆ. ವಿಷ್ಣುಪುರಾಣದಲ್ಲಿಯೇ ?
೩. ಇನ್ನೊಂದು ತುಂಬಾ ಮುಖ್ಯವಾದದ್ದು, 'ನರಸಿಂಹ' ಎಂಬ ಅವತಾರದ ಕಲ್ಪನೆಗೆ ನಿಲುಕುವಂತಾಗಬೇಕಿದ್ದರೆ, ಸಿಂಹಗಳ ಕಲ್ಪನೆ ಜನರಲ್ಲಿದ್ದಿರಬೇಕು. ಆದರೆ ದಕ್ಷಿಣಭಾರತದಲ್ಲಿ ಸಿಂಹಗಳು ಇರಲಿಲ್ಲ. ಹೀಗಿದ್ದರೂ ಈ 'ನರಸಿಂಹ' ಎಂಬುವನು ದಕ್ಷಿಣ ಭಾರತಕ್ಕೆ ಹೇಗೆ ಬಂದ ?

- Login or register to post comments
- 884 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ನರಸಿಂಹ ಯಾರು ?
ನಂಗೆ ಗುರುನರಸಿಂಹದ ಬಗ್ಗೆ ಗೊತ್ತಿಲ್ಲ..
ಆದರೆ ನೃಸಿಂಹ ಎಂದು ಬರೆಯೋದು ಮಾಧ್ವರು ಎಂದು ಕೇಳಿದ್ದೆ.. ಸ್ಮಾರ್ತರು ಎಂದು ನರಸಿಂಹ ಎಂದೇ ಬರೆಯೋದು...
ನರಸಿಂಹ ಸ್ವಾಮಿ ಗುಡಿಗಳು ಹೆಚ್ಚಿರೋದು ಹಾಸನದಲ್ಲಿ, ಮಯಿಸೂರು, ಮಂಡ್ಯದಲ್ಲಿ ಅಂತ ನನ್ನ ಎಣಿಕೆ. ಅವು ಹೆಚ್ಚು ಲಕ್ಷ್ಮೀನರಸಿಂಹ ಇಲ್ಲ ಯೋಗಾನರಸಿಂಹ ಗುಡಿಗಳು.
ಮೇಲುಕೋಟಿಯಲ್ಲಿ ಯೋಗನರಸಿಂಹ
ಹೊಳೆನರಸೀಪುರದಲ್ಲಿ ಲಕ್ಷ್ಮೀನರಸಿಂಹ
ಮದ್ದೂರು ಲಕ್ಷ್ಮೀನರಸಿಂಹ
ಟಿ. ನರಸೀಪುರದಲ್ಲೂ ಲಕ್ಷ್ಮೀನರಸಿಂಹ, ಅಲ್ವ?
=====================================
ಮಾಯ್ಸ!
ಉ: ನರಸಿಂಹ ಯಾರು ?
ಮೇಲುಕೋಟೆ, ದೇವರಾಯನ ದುರ್ಗ(ತುಮಕೂರು)ಗಳಲ್ಲಿ ಯೋಗನರಸಿಂಹ ಮತ್ತು ಭೋಗನರಸಿಂಹ ಅಂತ ಎರಡು ದೇವಾಲಯಗಳಿವೆ.
ಗುರುನರಸಿಂಹನ ತೊಡೆಯ ಮೇಲೆ ಲಕ್ಷ್ಮಿ ವಿಗ್ರಹ ಇಲ್ಲ ಅನ್ಸುತ್ತೆ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ನರಸಿಂಹ ಯಾರು ?
ಯಾಕೆ, ಹಂಪೆಯ ಉಗ್ರನರಸಿಮ್ಮ(http://en.wikipedia.org/wiki/Image:Ugranarasimha_statue_at_Hampi.JPG), ಮಯ್ಸೂರಿನಲ್ಲಿ ಯೋಗನರಸಿಮ್ಮ ಇವರುಗಳು ಇದ್ದಾರೆ.
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನರಸಿಂಹ ಯಾರು ?
ಹಂಪೆಯಲ್ಲಿ ಇದ್ದದ್ದು ಲಕ್ಷ್ಮೀನರಸಿಂಹ.. ಅದು ಹಾಳಾಗಿ ಉಗ್ರವಾಗಿದೆ.!
=====================================
ಮಾಯ್ಸ!
ಉ: ನರಸಿಂಹ ಯಾರು ?
ಈ ಉಗ್ರನರಸಿಂಹನ ವಿಚಾರ ಬಂದಾಗ ನೆನಪಾಗೋದು. ಬೇಲೂರು ಹಳೇಬೀಡುಗಳ ಹೊರಕೆತ್ತನೆಗಳಲ್ಲಿ ಕಾಣುವ ಕಱುಳು ಬಗೆಯುತ್ತಿರುವ ನರಸಿಂಹ.

ಪ್ರಸ್ತುತ ಪಾಪೆಯನ್ನು http://www.indiamike.com/photopost/showphoto.php/photo/14872/ppuser/2075... ಲಿಂಕಿನಿಂದ ಸಿಕ್ಕಿಸಿದ್ದೇನೆ.
ಉ: ನರಸಿಂಹ ಯಾರು ?
ಮಹೇಶ, ನೃಸಿಂಹ ಮತ್ತು ನರಸಿಂಹ ಇಬ್ಬರನ್ನೂ ತಳಕುಮೆಲಕು ಮಾಡಬಹುದು. ಮಾಧ್ವರದ್ದು "ನೃಸಿಂಹ", ಸ್ಮಾರ್ತರದ್ದು "ನರಸಿಂಹ" ಎಂದು ಬೇರೆಯಿಲ್ಲ. ಏಕೆಂದರೆ ಶಂಕರಾಚಾರ್ಯರ ಒಂದು ಕರಾವಲಂಬ ಸ್ತೋತ್ರದಲ್ಲಿ "ಶ್ರೀಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಮ್" ಎಂಬ ಸಾಲುಗಳು ಬರುತ್ತವೆ. ಹಾಡನ್ನು ಕೇಳಬೇಕಿದ್ದರೆ ಇಲ್ಲಿ ಚಿಟುಕಿ.
ವೈಭವ, ವಿನಯ,
ನೀವು ಯಾವುದಾದರೂ ನೃಸಿಂಹ ದೇವಳಕ್ಕೆ ಹೋದರೆ ನಿಮಗೆ ಯೋಗ, ಭೋಗ, ಉಗ್ರ ಅಂತಲೋ ನರಸಿಂಹ ಮೂರ್ತಿಗಳು ಕಾಣಸಿಗುತ್ತವೆ. ಆದರೆ ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿರುವ "ಶಾಂತ ನರಸಿಂಹ ಮೂರ್ತಿ" ಒಂದು ರೀತಿ ವಿಶಿಷ್ಟವಾದದ್ದಾಗಿದೆ. ಸಾಧಾರಣವಾಗಿ, ಯಾವುದಾದರೂ ಮೂರ್ತಿಯ ಕಣ್ಣುಗಳಿಗೆ ಅಲಂಕಾರ ಮಾಡಿರದಿದ್ದರೆ, ಕಣ್ಣು ಅಷ್ಟಾಗಿ ನಮ್ಮನ್ನು ಸೆಳೆಯುವುದಿಲ್ಲ. ಕಣ್ಣಿನ ಆಕಾರ ಮೂಡಿಸಿರುವ ಗೆರೆಗಳು ಮಾತ್ರವೇ ಕಾಣುತ್ತದೆ. ಆದರೆ ಕಣ್ಣುಗುಡ್ಡೆಗಳು ಕಾಣಿಸುವುದಿಲ್ಲ, ಕಾಣಿಸಿದರೂ ಹೊಳಪಿರುವುದಿಲ್ಲ. ಆದರೆ ಬನವಾಸಿಯ ಮಧುಕೇಶ್ವರ ದೇವಳದಲ್ಲಿರುವ ಶಾಂತ ನರಸಿಂಹ ಮೂರ್ತಿಯ ಕಣ್ಣುಗಳು, ಯಾವುದೇ ಅಲಂಕಾರ ಮಾಡದಿದ್ದರೂ, ತನ್ನ ರಿಫ್ಲೆಕ್ಟೀವ್ ಗುಣದಿಂದಾಗಿ, ಕಣ್ಣುಗುಡ್ಡೆಗಳು ಹೊಳೆಯುತ್ತಿವೆಯೇನೋ ಅಂತನಿಸುತ್ತದೆ. ಮುಂದಿನ ಬಾರಿ ಬನವಾಸಿಗೆ ಹೋದರೆ, ಮಧುಕೇಶ್ವರನ ಜೊತೆಗೆ ಈ ಪುಟ್ಟ ಶಾಂತ ನರಸಿಂಹನ ರಿಫ್ಲೆಕ್ಟೀವ್ ಗುಣವನ್ನೂ ನೋಡಿಬನ್ನಿ.
ಉ: ನರಸಿಂಹ ಯಾರು ?
ನಾನ್ ಕಂಡಂತೆ ಪಟ್ಟೆಗಳು ಮತ್ತು ಅಯ್ಯಂಗಾರರು ನೃಸಿಂಹ ಎಂದು ಬೞಸಲ್ಲವಂತೆ!
ಈ ಅರೆಸಿಂಹನ ಕತೆ.. ಶ್ರುಂಗೇರಿಯಲ್ಲಿ ನರಸಿಂಹ-ವನ ಇದೆ.
ನೃ = ನರ
ನೃಪ = ನರಪ
=====================================
ಮಾಯ್ಸ!
ಉ: ನರಸಿಂಹ ಯಾರು ?
ಮಹೇಶ ಹಾಗೇನಿಲ್ಲ ಕಣೋ. ಮಾತಾಡುವಾಗ ನರಸಿಂಹ(ನರ್-ಸಿಮ್ಮ) ಅಂತಾರೆ. ಬರೀವಾಗ, ಅಥವಾ ಅಧಿಕೃತವಾಗಿ ಬರೆಯುವಾಗ ಲಕ್ಷ್ಮೀನೃಸಿಂಹ ಪ್ರಸನ್ನ ಅಥವಾ ನೃಸಿಂಹ ಪ್ರಸೀದತು ಅಂತಲೇ ಮಾಧ್ವರೂ, ಸ್ಮಾರ್ತರೂ ಇಬ್ಬರೂ ಬರೆಯೋದು. ಮದುವೆ ಕರೆಯೋಲೆಗಳನ್ನು ಗಮನಿಸು ತಿಳಿಯತ್ತೆ. ಆ ತರಹ ನೃಸಿಂಹ, ನರಸಿಂಹ ಅಂತ ಬೇಧ ಇಲ್ಲ.
ಉ: ನರಸಿಂಹ ಯಾರು ?
ಗುರುನರಸಿಂಹ ದೇವರ ಬಗೆಗೆ ಕೂಟಸ್ಥ ಸೈಟ್ ಅಲ್ಲಿ ಕೆಲ ವಿಷಯಗಳಿವೆ.
http://kootastha.org/index.htm
ಇದಲ್ಲದೆ ಶೃಂಗೇರಿಯ ಬಳಿ ನರಸಿಂಹ ಪರ್ವತ ಎಂಬ ಬೆಟ್ಟವಿದೆ. ಅಲ್ಲಿ ಸಿಂಹ ಮುಖವಿರುವ ಉದ್ಭವ ಕಲ್ಲೊಂದಿದೆ. ಅದರಿಂದಲೇ ಅದಕ್ಕೆ
ನರಸಿಂಹ ಪರ್ವತ ಅನ್ನೋ ಹೆಸರು.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ನರಸಿಂಹ ಯಾರು ?
ಸಿಂಹಗಳು ಇವತ್ತು ದಕ್ಷಿಣಭಾರತದಲ್ಲಿ ಇಲ್ಲ - ಆದರೆ ಹಿಂದೆ ಇರಲಿಲ್ಲ ಎಂದು ಹೇಳಲಾಗುವುದಿಲ್ಲ. ಅಲ್ಲವೇ?
-ಹಂಸಾನಂದಿ
ಉ: ನರಸಿಂಹ ಯಾರು ?
ಹಂಸಾನಂದಿಯವರೇ, ಯೋಚಿಸತಕ್ಕ ವಿಚಾರ. ಆದರೆ ಇದನ್ನು ಒಪ್ಪಿಕೊಳ್ಳಬೇಕೆಂದರೆ ಅನೇಕ ಸಂದೇಹಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.
ಈ ಸಿಂಹಕ್ಕೆ ಕನ್ನಡದಲ್ಲಿ ಏನು ಹೇಳುತ್ತಾರೆ ? ಹಿರಿದಾಗಿ ನೋಡಿದರೆ, ಸಿಂಹಕ್ಕೆ ದ್ರಾವಿಡ ನುಡಿಗಳಲ್ಲಿ ಏನು ಹೇಳುತ್ತಾರೆ ? ನಾನು ಇದಕ್ಕೆ ಉತ್ತರ ಹುಡುಕಿ ಸಿಗದೆ ಪೇಚಾಡಿದ್ದೇನೆ. ಮೊಟ್ಟಮೊದಲನೆಯದಾಗಿ 'ಹ' ಅಕ್ಷರವೇ ನಮ್ಮಲ್ಲಿರಲಿಲ್ಲವಲ್ಲ. ಪಂಪಭಾರತದಲ್ಲಿಯೂ ಸಿಂಗದಮುಪ್ಪುಂ ನೆಗಳ್ದೀ ಅಂತಲೇ ಅಲ್ಲವೇ ಇರುವುದು. ದ್ರಾವಿಡ ನುಡಿಕೋಶದಲ್ಲಿ ತಮಿಳು, ಮಲಯಾಳಂಗಳಲ್ಲಿ "ಯಾಳಿ", ಆಳಿ ಎಂಬ ಪೌರಾಣಿಕ ಪ್ರಾಣಿ ಇತ್ತೆಂಬ ವಿವರ ನೀಡಿದ್ದಾರೆ.
ಉ: ನರಸಿಂಹ ಯಾರು ?
...ಆದರೆ ಎಲ್ಲವೂ ಗೋಜಲು
ಉ: ನರಸಿಂಹ ಯಾರು ?
"ಈ ಸಿಂಹಕ್ಕೆ ಕನ್ನಡದಲ್ಲಿ ಏನು ಹೇಳುತ್ತಾರೆ ? ಹಿರಿದಾಗಿ ನೋಡಿದರೆ, ಸಿಂಹಕ್ಕೆ ದ್ರಾವಿಡ ನುಡಿಗಳಲ್ಲಿ ಏನು ಹೇಳುತ್ತಾರೆ "
ಸಿಂಗ ಆಂತ ಕೇಳಿದ ನೆನೆಪು
http://thereda-mana.blogspot.com/
ರೂಪ
ಉ: ನರಸಿಂಹ ಯಾರು ?
ಸಿಂಗ ತದ್ಬವ..
ಯಾಳಿ, ಯಾೞಿ ಅಂತೆ
=====================================
ಮಾಯ್ಸ!
ಉ: ನರಸಿಂಹ ಯಾರು ?
ಇಲ್ವೇ ಸಿಂಗವೇ ಸಕ್ಕದಕ್ಕೆ ಹೋಗಿ ಸಿಂಹ ಆಗಿರಬೋದು...
ಅೞಗ => ಅೞಹ ಎಂದು ಹೇೞ್ತಾರೆ ಅಲ್ವಾ?
=====================================
ಮಾಯ್ಸ!
ಉ: ನರಸಿಂಹ ಯಾರು ?
ಮಹೇಶರೆ,
ನಿಮ್ಮ ಲೆಕ್ಕ ತಪ್ಪಿದೆ. ಅೞಗ = ಅೞಹ ಆಗಿರೋದು ತಮಿಳಿನಲ್ಲಿ ಹೊರತು ಅದು ಸಂಸ್ಕೃತಕ್ಕೆ ಹೋಗಿಲ್ಲ!
ತಮಿಳಿನಲ್ಲಿ ಗ ಬದಲು ಹ ಅನ್ನುವುದೂ, ಹ ಬದಲು ಗ ಅನ್ನುವುದೂ ಮಾಮೂಲೇ.
ಉದಾ: ಮಗೇಸ <-> ಮಹೇಸ ; ಆದರೆ, ಮಗೇಸ ನಿಂದ ಮಹೇಶ ಬಂದಿಲ್ಲ ಅಲ್ಲವೆ?
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ನರಸಿಂಹ ಯಾರು ?
ಹು ಸಾರ್..
ನಾನೂ ಇವೆಲ್ಲ ಇರಬೋದು ಅಂತಲೇ ಹೇಳಿರೋದು..
ಸಿಂಹ ಒರೆಯ ಉತ್ಪತ್ತಿ ಹೇಗೆ?
ಮಹೇಶ ಬಿಡಿ ಮಹ್, ಈಶ್ ಬೇರುಗಳು ಮಹ್ (ದೊಡ್ಡ), ಈಶ್(ಒಡೆತನ ಮಾಡು)
ಒಂದು ತಿಯರಿ ಅಂತೆ, ಸಕ್ಕದಕ್ಕೆ ತೆಣ್ಣುಡಿ/ದ್ರಾವಿಡನುಡಿಗಳಿಂದ ಒರೆಗಳು ಹೋದಾಗ ಇಂತ ಮಾರ್ಪಡುಗಳು ಆಗಿವೆಯಂತೆ.
ಒಂದು ಮಾದರಿ...
ಸಿರಿ => ಸ್ ಇ ರ್ ಇ => ಶ್ ಇ ರ್ ಇ => ಶ್ ರ್ ಇ ಇ => ಶ್ರೀ ಅಂತಲೂ ಹೇಳಬೋದು.
ಸ್ವರದ ಅದಲು-ಬದಲು ಹಲವು ಕಡೆ ಇದೆ..
ಲೇದು
ಇಲ್ಲದು => ಇಲಾದು => ಲಾಇದು => ಲೇದು ಇದರ ಮೂಲ ಇಲ್(ಕನ್ನಡ-ತಮಿಳನದೇ)
ಅವರು => ವಾರು
ಗಮನ ಸೊಲ್ಲಾಪುರ => ಸೋಲಾಪುರ
ಹಾಗೆ
ಎಱಂಕೆ => ರೆಂಕೆ => ರೆಕ್ಕೆ.
ಹೀಗೆ ಹಲವು ಗ => ಹ ಆಗಿದೆ
ಮಾದರಿ ಗಮ(ಗಮ) ನೋಡಿ ಗಾಳಿ, ಕಂಪಿಗೆ ನಂಟಾದುದು...
ಗ => ಹ
ಮ => ವ
ಹವ
ಹೀಗೆಲ್ಲ ತಿಯರಿಗಳಿವೆ.
=====================================
ಮಾಯ್ಸ!
ಉ: ನರಸಿಂಹ ಯಾರು ?
ಲೋ, ಮಹೇಶ. ಒಂದು ಮಾತು. ಸಿಂಗದಿಂದ ಸಿಂಹ ಬಂತು ಎನ್ನುವುದನ್ನು ಒಪ್ಪಕ್ಕಾಗಲ್ಲ, ಏಕೆಂದರೆ ಕರ್ನಾಟಕದಲ್ಲಿ ಸಿಂಹಗಳು ಇರಲಿಲ್ಲ. ಸಿಂಗವು ಸಿಂಹವಾಗಬೇಕಿದ್ದರೆ ಕಡೇಪಕ್ಷ ಸಿಂಗಗಳು ಇದ್ದಿರಬೇಕಲ್ವಾ ? ಆದರೆ ಸಿಂಗಗಳ ಕುರುಹು ದಕ್ಷಿಣಭಾರತದಲ್ಲಿ ಇಲ್ಲವಲ್ಲಪ್ಪಾ!!!! ಭಾಷಾಶಾಸ್ತ್ರವನ್ನು ಪಕ್ಕಕ್ಕಿಟ್ಟು ಸ್ವಲ್ಪ ಜಿಯಾಗ್ರಫಿ ಕೂಡ ಗಣೆನೆಗೆ ತೊಗೊಳಪ್ಪಾ.
ಉ: ನರಸಿಂಹ ಯಾರು ?
ಲೋ ಗೊತ್ತು..
ಹಾಗೆ ಸಕ್ಕದ ಹುಟ್ಟಿದ ಆಪಗಾನಿಸ್ತಾನದಲ್ಲಿ ಮಲ್ಲಿಗೆ ಸಂಪಿಗೆ ಇದ್ಯೆ? ಅದು ಹಾಳಾಗಲಿ ಇಡ್ಡಲಿ, ದೋಸೆ ಇವೆಲ್ಲ ಸಕ್ಕದದಿಂದ ಅಂತಾರಲ್ಲ.. ಇವು ಅಲ್ಲಿ ಮಾಡ್ತಾರ?
ಅವರು ಕೂಡ ಮಲ್ಲಿಗೆ => ಮಲ್ಲಿಕ ಎಂದು ಹೊಂದಿಸಿಕೊಂಡಿದ್ದಾರೆ ಸಕ್ಕದಕ್ಕೆ..
ನೀನು ಒಪ್ಪದಿದ್ದರೆ ಬೇಡ.. ಆದರೆ ಹೀಗೂ ಇರಬೋದು ಅನ್ನಬೋದಲ್ಲ.
=====================================
ಮಾಯ್ಸ!
ಉ: ನರಸಿಂಹ ಯಾರು ?
ವಿನಯ ಉಡುಪ, ಕೂಟಸ್ಥ ಕೊಂಡಿ ಕೆಲಸಗೈಯುತ್ತಿಲ್ಲ.
ಉ: ನರಸಿಂಹ ಯಾರು ?
ಹೌದು. ನಾನೂ ಪ್ರಯತ್ನಿಸಿದೆ.
ಆದ್ರೆ ಆದರಲ್ಲಿದ್ದ ಕೆಲ ಸಾಲುಗಳು ಹೀಗಿವೆ(cached ಪುಟದಿಂದ)
"Saligrama is a temple town on the Mangaluru-Mumbai National Highway, 22KMs from Udupi in Karnataka. Guru Narasimha is the presiding deity of Saligrama Temple and also the family deity (Kuladevaru) of many families residing in nearby villages and those who are originally from these places.
The idol (vigraha) is of around three feet in height and is carved out of single saligrama (shalagrama) stone and hence the name Saligrama for this place.
It is believed that idol was installed by Lokaditya King of Mourya dynasty around 4 th century AD under the leadership of Rajaguru Bhattacharya.
Residents of these places were originally from Ahichhatra (near Godavari river) and migrated to this place practicing Karma Marga (performance of Yajna, Yaga, Homa.), long before Jagadguru Adi Shankaracharya toured this place around 8 th Century AD for the revival of Hindu Dharma by preaching Jnana Marga. Probably this explains the reason why they were not influenced by Sri Shankara’s Jnana Marga and did not become disciples/followers of Jagadgurus of any Matha(Mutt) established by Adi Shankaracharya. However they follow Shankaracharya's Advaita Philosophy.
Rather than accepting a human being as their Guru, the people accepted Lord Narasimha as their Guru and hence the temple came to be known as Sri Guru Narasimha Devasthana (Temple).
Though the presiding deity is Narasimha, the rituals conducted at the temple are not like in Vaishnavaite temples but like in Shivaite Temples. Moreover, Lord Ganapathi occupies a prominent place in all the rituals."
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ನರಸಿಂಹ ಯಾರು ?
ಈ ನರಸಿಂಹ ವೇದಗಳಲ್ಲಿ ಬರುತ್ತಾನೆಯೇ? ಅತ್ವ ಈತ ಒಬ್ಬ ಪೌರಾಣಿಕ ದೇವರೇ?
ನನ್ನ ನಂಬಿಕೆ ಪ್ರಕಾರ ನರಸಿಂಹ ವಿಷ್ಣುವಿನ 'ಅವತಾರ'.
ನನಗೆ ಮುಂಚಿನಿದಲೂ ಒಂದು ಸಂಶಯ ಇದೆ. ಲಕ್ಷ್ಮಿ ಹೇಗೆ ನರಸಿಂಹನ ಜೋಡಿಯಾದಳು? ಅಂತ.
ನಾವು ಕೃಷ್ಣನ ಜೊತೆ ಲಕ್ಷ್ಮಿಯನ್ನು ಅತ್ವ ಸೀತೆಯನ್ನು ಕೂರಿಸುವುದಿಲ್ಲ. ರಾಮನ ಜೊತೆ ಕೃಷ್ಣನ ಯಾವ ಹೆಂಡತಿಯರನ್ನೂ , ಲಕ್ಷ್ಮಿಯನ್ನೂ ಕೂರಿಸುವುದಿಲ್ಲ. ಈ ಲಕ್ಷ್ಮಿ ಬೇರೆ ಯಾವ ವಿಷ್ಣುವಿನ ಅವತಾರದ ಜೊತೆಗೂ ಇರೋಲ್ಲ. ಆದ್ರೆ ನರಸಿಂಹನ ಜೊತೆ? .. ಹೇಗೆ ?
ಸವಿತೃ
ಉ: ನರಸಿಂಹ ಯಾರು ?
ನರಸಿಂಹ ಹಿರಣ್ಯಕಶ್ಯಪನನ್ನು ಕೊಂದು ಸಿಟ್ಟಿನಲ್ಲಿದ್ದಾಗ ಲಕ್ಷ್ಮಿಯೇ ಬಂದು ಅವನನ್ನು ಸಮಾಧಾನ ಮಾಡಬೇಕಾಯಿತು ಎಂದು ವಿಷ್ಣು ಪುರಾಣ ಹೇಳುತ್ತದೆ. ಹೀಗಾಗಿ ಲಕ್ಷ್ಮಿಯ ಜೊತೆ ನರಸಿಂಹ ಅವತಾರಕ್ಕೆ.
ಕೊಸರು : ಕೆಲವರಿಗೆ ಹೆಂಡತಿ ಎದುರಿಗೆ ಬಂದರೆ ಸಿಟ್ಟು ಹೆಚ್ಚಾಗುತ್ತದೆ. ಆದರೆ ನರಸಿಂಹನಿಗೆ ಅಲ್ಲ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನರಸಿಂಹ ಯಾರು ?
ಇನ್ನೂ ಒಂದು ಕತೆ, ಇದೆ. ನರಸಿಂಹ ಅವತಾರ ಆದಮೇಲೆ, ನರ ಮತ್ತು ಸಿಂಹ ಬೇರೆಬೇರೆ ಆಗಿ ನಾರಾಯಣ ಋಷಿ ಮತ್ತು ನರಋಷಿ ಆಗ್ತಾರಂತೆ. ಇವರಿಬ್ಬರೂ ಸಹಸ್ರಕವಚ ಎಂಬ ರಾಕ್ಷಸನ ಜೊತೆ ಯುದ್ಧ ಮಾಡ್ತಾ ಇರ್ತಾರಂತೆ. ನರ ಯುದ್ಧ ಮಾಡುವಾಗ ನಾರಾಯಣ ತಪಸ್ಸು ಮಾಡ್ತಾನೆ. ಮತ್ತೆ ವೈಸಿ ವರ್ಸಾ. ಈ ಗಂಡಂದಿರಿಬ್ಬರನ್ನು(ಅಸಲಿಗೆ ಒಬ್ಬನೇ ಗಂಡ) ಬಿಟ್ಟಿರಲಾಗದ ಲಕ್ಷ್ಮೀ ಬೋರೆ ಮರ ಆಗಿ ಹುಟ್ಟಿ ಇಬ್ಬರಿಗೂ ಬೋರೆಹಣ್ಣು ತಿನ್ನಿಸಿದ್ದಳಂತೆ
ಉ: ನರಸಿಂಹ ಯಾರು ?
ಜಾನಪದ ಕಥೆನಾ? ಮೊದಲನೇ ಬಾರಿಗೆ ಕೇಳುತ್ತಿರೋದು!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನರಸಿಂಹ ಯಾರು ?
ನಮ್ಮಲ್ಲಿ ಕತೆಗಳಿಗೆ ಕೊರತೆಯೇ. ಅವವೇ ಕತೆಗಳು ಏನೇನೇನೇನೋ ರೂಪದಲ್ಲಿ ಬರ್ತಾ ಇರತ್ತೆ. ಇರಲಿ, ಬೋರೆ ಮರ ಅಂದರೆ ಬದರಿ ಮರ. ಬದರಿಕಾಶ್ರಮದ ಪುರಾಣವನ್ನು ಇಲ್ಲಿ ಓದಿ. ನರ-ನಾರಾಯಣರ ಬಗ್ಗೆ ಇಲ್ಲಿ ನೋಡಿ.
ಉ: ನರಸಿಂಹ ಯಾರು ?
ಕೃಷ್ಣ-ಅರ್ಜುನರನ್ನ ನರ-ನಾರಾಯಣ ಅಂತ ಕರೀತಾರೆ ಅಂತ ಕೇಳಿದ ನೆನಪು.
ಅದು ನಿಜ ಆದ್ರೆ ಅರ್ಜುನನೂ ವಿಷ್ಣುವಿನ ಅವತಾರ ಆಗೋಲ್ವ?
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ನರಸಿಂಹ ಯಾರು ?
ಆಹಾ! ಎಂತಹ ಚಳ್ಳೆಹಣ್ಣು
ಉ: ನರಸಿಂಹ ಯಾರು ?
ನರ - ನಾರಾಯಣರು ಇಬ್ಬರು ಋಷಿಗಳು ಅಂತ ಕಥೆ ಕೇಳಿದ್ದೆ. ಈ ಕಥೆ ಗೊತ್ತಿರಲಿಲ್ಲ.
ನನ್ನೀ
ವಿನಯ್
ಅರ್ಜುನ - ಕೃಷ್ಣರು , 'ನೇರವಾಗಿ' ನರ-ನರಾಯಣರಲ್ಲ ಅಂತ ನನ್ನ ಅನಿಸಿಕೆ. ಆದ್ರೆ ಹಾಗೆ "ಆರೋಪಣೆ" ಮಾಡಿರಲು ಸಾಧ್ಯ.
ಸವಿತೃ
ಉ: ನರಸಿಂಹ ಯಾರು ?
ನನಗೆ ಗೊತ್ತಿರುವ ಹಾಗೆ, ನರ ನಾರಾಯಣರು ಅರ್ಜುನ ಮತ್ತು ಕೃಷ್ಣ. ಸಹಸ್ರಕವಚನ ೯೯೯ ಕವಚಗಳನ್ನು ಹರಿದ ಮೇಲೆ ಅವನನ್ನು ಕೊಲ್ಲುತ್ತಾರೆ. ಅವನು ಕರ್ಣನಾಗಿ ಹುಟ್ಟುತ್ತಾನೆ. ಅದಕ್ಕೇ ಅವನಿಗೆ ಹುಟ್ಟಿದಾಗಲೇ ಕವಚ ಇತ್ತು. ಮುಂದೆ ಇದನ್ನು ಇಂದ್ರ ದಾನವಾಗಿ ಪಡೆದಾಗ ಅರ್ಜುನನಿಗೆ ಕರ್ಣನನ್ನು ಕೊಲ್ಲಲು ಸಾಧ್ಯವಾಗುತ್ತದೆ.
ಅಲ್ದ ಊರ್ವಶಿನೂ ನಾರಾಯಣನ ತೊಡೆಯಿಂದ ಬಂದಾಕಿ!