ಏಕೆ ಹೀಗೆ ಅನಿಸುತ್ತದೆಯೋ!
ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋದಾಗ, ಸುತ್ತ ಮುತ್ತ ತುಂಬಿರುವ ಶಾಂತಿ, ನಿರಾಳತೆ, ಸೊಬಗನ್ನು ನೋಡಿ ನಿಮಗೆ ಏನು ಅನ್ನಿಸುತ್ತದೆ?
ಇದರ ಹಿಂದೆ ಯಾವುದೇ ಎಳೆ ಇದೆ. ಅದೇ ಇವೆಲ್ಲವನ್ನೂ ಬಂಧಿಸಿದೆ. ಒಂದಕ್ಕೆ ಇನ್ನೊಂದನ್ನು ಆಸರೆಯಾಗಿ ಮಾಡಿದೆ ಎಂದು ಅನಿಸುವುದಿಲ್ಲವಾ? ನಾನಂತೂ ಪ್ರತಿಯೊಂದು ಸೊಗಸಿನ ಹಿಂದೆ, ನೋವಿನ ಹಿಂದೆ ಇಂಥದೊಂದು ಎಳೆ ಹುಡುಕುತ್ತಲೇ ಡಿಗ್ರಿ ಮುಗಿಸಿದೆ. ಹಲವಾರು ಗೆಳತಿಯರೊಂದಿಗೆ ಈ ಬಗ್ಗೆ ಚರ್ಚಿಸಿ ಬೈಸಿಕೊಂಡೆ. ವಯಸ್ಸಿಗೆ ತಕ್ಕ ಹಾಕಿರಬೇಕು ಎಂದು ಬುದ್ಧಿ ಹೇಳಿಸಿಕೊಂಡೆ. ವಯಸ್ಸಿಗೆ ತಕ್ಕಂತೆ ಇರುವುದು ಅಂದರೆ ಏನು? ನಮ್ಮ ಯೋಚನೆಗಳನ್ನು ವಯಸ್ಸು ನಿರ್ಧರಿಸಬೇಕೆ ಅಥವಾ ನಮ್ಮ ನಮ್ಮ ವಿಚಾರಗಳೆ?
ಇಂತಹ ಪ್ರಶ್ನೆಗಳು ನಿಮ್ಮನ್ನೂ ಕಾಡಿವೆಯೆ? ಇವೆಲ್ಲ ಘಟನೆಗಳ ಹಿಂದೆ, ಪೋಣಿಸಿಟ್ಟಂತಹ ಬೆಳವಣಿಗೆಗಳ ಹಿಂದೆ ಯಾವುದೋ ಒಂದು ಶಕ್ತಿ ಇದೆ ಎಂದು ಅನಿಸುತ್ತಿಲ್ಲವೆ? ದೇವರೆನ್ನಿ, ಪ್ರಕೃತಿ ಎನ್ನಿ, ಅಥವಾ ಭೌತಶಾಸ್ತ್ರದ ನಿಯಮಗಳು ಎನ್ನಿ, ಒಂದು ವಿಶಿಷ್ಟ ಶಕ್ತಿ ಖಂಡಿತ ಇದೆ. ಅದನ್ನು ನೆನೆದರೆ ಅಚ್ಚರಿಯಾಗುತ್ತದೆ. ಅಲ್ಲವೆ?
ನನ್ನ ವಾದವನ್ನು ನೀವು ಖಂಡಿಸಬಹುದು. ಬೆಂಬಲಿಸಬಹುದು. ಒಂದು ಆರೋಗ್ಯಕರ ಚರ್ಚೆಗೆ ಕಾರಣವಾಗಬಹುದು. ಆದರೆ ನನ್ನ ಮನಸ್ಸು ಮಾತ್ರ ಆ ಎಳೆಯನ್ನೇ ಎಲ್ಲೆಡೆ ಕಾಣುತ್ತ ಹೊಸ ಅರ್ಥವನ್ನು ಕಂಡುಕೊಳ್ಳುತ್ತ ಇದೆ. ಅದೆಲ್ಲ ಹೋಗಲಿ, ಬಾಬು ಸಿಂಗ್ ಠಾಕೂರ್ ಪೇಢಾ ತಿಂದಾಗಾದರೂ ನಿಮಗೆ ಇಂತಹ ಅನುಭವ ಆಗಿರಲಿಲ್ಲವೆ? ಹೇಳಿ?
- ಪಲ್ಲವಿ ಎಸ್.

- Login or register to post comments
- 1423 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




ಉ: ಏಕೆ ಹೀಗೆ ಅನಿಸುತ್ತದೆಯೋ!
ಎಲ್ಲರೂ ವಿಚಾರಗಳನ್ನು ತಿಳಿದುಕೊಳ್ಳುವ ದಿಟ್ಟಿಕೋನ ಅತವಾ perception ಬೇರೆ ಬೇರೆ ಇರುತ್ತದೆ. ನನ್ನ ಗೆಳೆಯನೊಬ್ಬ ಇದಾನೆ, ಏನೇ ಮಾತು ತೆಗೆದರೂ mind and conscience ಗಳಿಗೆ ಬಂದು ನಿಲ್‍ತಾನೆ. ಕೊಂಚ ವಿಚಾರ ಮಾಡಿದರೆ ಎಲ್ಲಾನೂ ಮೈಂಡ್ ಗೇಮ್ ಅಸ್ಟೇ. ಮನಸ್ಸು ನಲಿವಿನಲ್ಲಿದ್ದಾಗ ಎಂತ ಸಂತೆಯಲ್ಲಿದ್ದರೂ ಮನಸ್ಸು ಸಂತಸದಿಂದ ನಲಿಯುತ್ತಿರುತ್ತದೆ. ಮನಸ್ಸಿಗೇ ಏನೋ ಬೇಸರವಿದ್ದಾಗ, ಸಂತೆ ಗದ್ದಲ ಅನಿಸುತ್ತೆ, ಶಾಂತ, ನೀರವ ವಾತಾವರಣ irritating ಅನಿಸಿ, ಮಂದಿ ಇರುವ ಕಡೆ ಓಡಿ ಹೋಗೋಣ ಅನಿಸುತ್ತೆ.
ಅದು ಇರಲಿ, ಇಲ್ಲಿ ನೀವು ಹೇಳಬಯಸುತ್ತಿರುವದು, ಏನೇ ನಡೆದರೂ ಅದರ ಹಿಂದೇ ಕಾಣದ ಕೈಗಳ ಆಟವಿದೆ ಎಂದೇ? ಅಂತಾರಲ್ಲ, ಒಂದೊಂದು ಹುಲ್ಲಿನ ಕಡ್ಡಿಯೂ ದೇವರ ಬಯಕೆಯಿಂದಲೇ ಅಲುಗುವದು. ಮೊಟ್ಟಮೊದಲು ದೇವರು ಅಂದರೆ ಏನು? universal governing power(UGP) ಅದೇನಾ ದೇವರು? ದೇವರು ಅವರವರಿಗೆ ಅವರವರಂತೆ ತೋರುತ್ತಾನೆ. ದೇವರನ್ನು ನೆನೆಯಲು ಅವರವರಿಗೆ ಅವರದೇ ಕಾರಣಗಳಿರುತ್ತವೆ. ಕೆಲವರು ನೆನೆಯದಿದ್ದರೆ ಬವಣೆ, ತೊಂದರೆಗಳನ್ನು ಕೊಟ್ಟಾನೆಂದು ಅಂಜಿಕೆಯಿಂದ ನೆನೆಯುವರು. ಕೆಲವರು ಇಂತಿಂತ ಕಸ್ಟಗಳಿಂದ ದೇವರು ಪಾರು ಮಾಡಿದ, ಮುಂದೆಯೂ ಎಂತದೇ ತೊಂದರೆ, ತೊಡಕಿದ್ದಾಗ ಅಂವ ಪಾರು ಹಾಸುತ್ತಾನೆ ಅಂತ ಒಂದು ಉಪಕಾರ ನೆನೆಯುವ ತುಡಿತ(gratitude)ದಿಂದ ನೆನೆಯುತ್ತಾರೆ. ಆದರೆ ಆ ತೊಂದರೆ, ತೊಡಕು ಬಂದದ್ದಾದರೂ ಯಾರಿಂದ? ಅದಕ್ಕೂ ಹಲವು ಉತ್ತರಗಳನ್ನು ಮಂದಿ ಕಂಡುಕೊಂಡಿದ್ದಾರೆ, ಗ್ರಹಗತಿಗಳಿಂದ ಅಂತ ಕೆಲವರೆಂದರೆ, ಪಾಪ ಕರ್ಮದಿಂದ ಅಂತ ಕೆಲವರು, ಹುಟ್ಟಿನಿಂದ ಅವರು ಅವರಿಗಾದ ತೊಂದರೆಗೆ ಸರಿದೂಗಬಲ್ಲ ತಪ್ಪನ್ನೇ ಮಾಡಿಲ್ಲದವರಾಗಿದ್ದರೆ, ಹಿಂದಿನ ಹುಟ್ಟಿನಲ್ಲಿ ಮಾಡಿದ ಪಾಪ ಅಂತ ಮತ್ತೊಂದು ಉತ್ತರ. ಹಿಂದಿನ ಜನುಮ ಕಂಡವರಾರು?
ಅದು ಸರಿ, ದೇವರ ಬಯಕೆ ಇಲ್ಲದೇ ಹುಲ್ಲು ಕಡ್ಡಿಯೂ ಅಲುಗದೆಂದ ಮೇಲೆ, ನಮಗೊದಗುವ ಬವಣೆಗಳೂ ದೇವರ ಬಯಕೆಯಿಂದಲೇ ಅಂತ ಆಯ್ತಲ್ಲ. ಕೆಟ್ಟದ್ದನ್ನು ಬಯಸುವ ದೇವರು ಅದೆಂತ ದೇವರು? ಅನಿಸಬಹುದಲ್ಲ? ನಮ್ಮ ಬದುಕಿನಲ್ಲಿ ಹೀಗೀಗೇ ನಡೆಯಬೇಕೆಂಬುದನ್ನು ದೇವರು ಆಗಲೇ ತೀರ್ಮಾನಗೈದು, ಕಡತಗಳಲ್ಲಿ maintain ಮಾಡಿ ಇಟ್ಟಿರುವದಾದಲ್ಲಿ, ಏನನ್ನೇ ಆಗಲಿ, ತಲುಪಲು ನಾವು ಹೆಣಗುವದೇಕೆ? ಎಲ್ಲಾನೂ ನಮ್ಮ ಸೊಂತ ಜತನ(ಪ್ರಯತ್ನ)ದಿಂದ ಅಸ್ಟೇ ಸಿಗುವದೇ? ದೇವರ(ಅತವಾ ಬೇರೇ ಎನೇ ಅನ್ನಿ..) ಕೈವಾಡವೇನೂ ಇರುವದಿಲ್ಲವೇ? ಎಸ್ಟೋ ಸಲ, ನಮ್ಮ ಬಯಕೆಯ ಮೇಲ್ ಒಂದನ್ನು ದೇವರಿಗೆ ಕಳಿಸಿ ಸುಮ್ಮನಿರುತ್ತೇವೆ, ಅದೆಂಗೋ ನಮ್ಮ ಆ ಬಯಕೆ ಈಡೆರಿರುತ್ತದೆ, ಅದರ ಬಗ್ಗೆ ದಿಟವಾಗಿ ಬೆರಗು ಮೂಡುತ್ತದೆ. ನನ್ನ ಆಸೆ ಇಸ್ಟು ಲಗುನೇ(ಬೇಗನೆ) ಈಡೆರುತ್ತದೆ ಅಂತ ಅನಿಸೇ ಇರಲಿಲ್ಲ ಅಂತೀವಲ್ಲ, ಆಗ ಇದೆಲ್ಲ ದೇವರ ದಯೆ ಅನ್ನುವ ಮಾತು ತನ್ನಿಂತಾನೆ ಹೊರಬರುತ್ತದಲ್ಲವೇ?
ಒಂದೊಂದು ನಡೆ(incident) ಹಿಂದೆ ಅದಕ್ಕೆ ಕಾರಣವಾದ ನಡೆಗಳ ಸರಪಳಿಯೇ ಇರುತ್ತದೆ. ಆದರೆ ಇವೆಲ್ಲ ಏಕೆ ನಡಿಯಿತೆಂದು ಕೇಳಿದಾಗ ಅದರ ಹಿಂದೆ ಯಾವುದೋ ಶಕುತಿಯ ಕೈವಾಡ ಇರಬೇಕು ಅನಿಸುತ್ತದೆ. ಅದನ್ನು ನೆನೆದಾಗ ದಿಟವಾಗಿ ಅಚ್ಚರಿಯಾಗುತ್ತದೆ. ಆ ಬೆರಗು ಎಸ್ಟು ಮೊಗೆದರೂ ಹೋಗದು.
ಉ: ಏಕೆ ಹೀಗೆ ಅನಿಸುತ್ತದೆಯೋ!
ಸಂಗನಗೌಡರೇ,
ನಾನು ದೇವರ ಬಗ್ಗೆ ಚರ್ಚಿಸುತ್ತಿಲ್ಲ. ಅದು ತುಂಬ ದೊಡ್ಡ ವಿಷಯ. ನಾನು ಆಸ್ತಿಕಳಾದರೂ, ದೇವರ ಬಗ್ಗೆ ಚರ್ಚಿಸುವಷ್ಟು ಜ್ಞಾನವಿಲ್ಲ.
ಆದರೂ ಕೆಲವೊಮ್ಮೆ ಮನಸ್ಸು ಆನಂದದಿಂದ ತುಂಬಲು ದೇವರು ಎಂಬ ನೆಪವೇ ಬೇಕಾಗಿಲ್ಲ, ಅಲ್ಲವೆ? ಕಾರಣವಿಲ್ಲದೇ ಖುಷಿಯಾಗುವುದು ಬಹುಶಃ ಎಲ್ಲರ ಅನುಭವದಲ್ಲೂ ಇದ್ದೀತು. ಅಂಥದೇ ಅನುಭವ ನನಗೂ ಆಗಿದ್ದೀತು. ಏಕೆ ಹಾಗಾಗುತ್ತದೆ ಎಂಬುದು ಶುದ್ಧ ಕುತೂಹಲದ ಪ್ರಶ್ನೆಯೇ ಹೊರತು ಖಂಡಿತ ಜ್ಞಾನ ಆಧಾರಿತ ವಿಷಯವಲ್ಲ.
ನನಗೆ ಅನಿಸಿದಂತೆ ಎಲ್ಲರಿಗೂ ಅನಿಸುತ್ತಿರಬಹುದು. ಹಾಗೆ ಅನಿಸದಿದ್ದರೆ ತಪ್ಪು ನನ್ನಲ್ಲೇ ಇರಬಹುದು. ಅಥವಾ ನಾನು ಹಾಗಂದುಕೊಂಡಿರಬಹುದು. ಇರಲಿ ಬಿಡಿ. ಸುಂದರ ದೃಶ್ಯಗಳನ್ನು ನೋಡಿ ಮೆಚ್ಚುವುದಕ್ಕೆ ತರ್ಕದ ಬುನಾದಿ ಏಕೆ ಬೇಕು? ಶಾಲ್ಮಲಾ ಕಣಿವೆಯ ತಣ್ಣನೆ ಗಾಳಿ ಮುಖಕ್ಕೆ ತಾಕಿದರೆ ಕಲ್ಲು ಮನಸ್ಸಿನ ವ್ಯಕ್ತಿಯೂ ಬೇಂದ್ರೆಯಂತೆ ಹಾಡಿಯಾನು. ಕಣವಿಯವರಂತೆ ಮೆದುವಾದಾನು. ಫೇಡೆಯಂತೆ ಮನಸ್ಸನ್ನು ರುಚಿ ಮಾಡಿಕೊಂಡಾನು. ಹಾಗಂತ ನನಗೆ ಅನಿಸುತ್ತದೆ. ಅಥವಾ ಇದು ಧಾರವಾಡದೆಡೆಗಿನ ನನ್ನ ಮೋಹವೆ?
ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ನಿಜ, ಇಂತ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಅನುಭವಿಸುವ ಮನಸ್ಸೊಂದಿದ್ದರೆ ಎಲ್ಲವನ್ನೂ ಕೂಡ ಅಚ್ಚರಿಯಿಂದ ನೋಡಿ ಸುಖಿಸಬಹುದು ಎನ್ನಿಸುತ್ತದೆ. ಅದು ಬರೀ ಬಾಬು ಸಿಂಗ್ ಠಾಕೂರ್ ಪೇಢಾ ತಿನ್ನುವಾಗಲಷ್ಟೇ ಅಲ್ಲ, ಅದನ್ನು ತಗೋಳಲು ಕ್ಯೂ ನಿಂತಾಗಲೂ ಕೂಡ ಅಷ್ಟೆ
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಏಕೆ ಹೀಗೆ ಅನಿಸುತ್ತದೆಯೋ!
ವಿಕಾಸ ಹೆಗಡೆಯವರೇ,
ನಿಮಗೂ ಇಂತಹ ಪ್ರಶ್ನೆಗಳು ಕಾಡುತ್ತಿರುವುದು ಓದಿ ಖುಷಿಯಾಯಿತು. ಜೊತೆಗೆ, ಗೆಳತಿಯರು ಹೇಳುವಂತೆ, ಜಗತ್ತಿನಲ್ಲಿರುವುದು ನಾನೊಬ್ಬಳೇ ಹುಚ್ಚಿಯಲ್ಲ ಎಂಬುದೂ ಖಚಿತವಾಯಿತು. ಪೇಢೆ ತಿನ್ನುವಾಗಲೂ ಅಲ್ಲ, ತಗೊಳ್ಳಲು ಸರದಿಯಲ್ಲಿ ನಿಂತಾಗಲೂ ಸುಖವಾಗುತ್ತದೆ ಎಂಬ ಸಾಲುಗಳು ಇಷ್ಟವಾದವು. ಬಹುಶಃ ಕ್ಯೂನಲ್ಲಿ ನಿಮ್ಮ ಮುಂದೆ ಹುಡುಗಿಯರು ನಿಂತಿದ್ದರೇನೋ.
ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಆತರಹ ಪ್ರಶ್ನೆಗಳು ಕಾಡುವವರು ಯಾರೂ ಹುಚ್ಚರಲ್ಲ ಬಿಡಿ. ನೀವು , ನಾನೂ... ಯಾರೂ ಅಲ್ಲ... ಗೆಳತಿಯರಿಗೆ ಹೇಳಿಬಿಡಿ...
ಜಗತ್ತಿನ ಕಣ್ಣಿಗೆ ಹೇಗಾದರೂ ಕಾಣಲಿ... ನಮ್ಮನುಭವ ನಮಗಿರಲಿ..
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಏಕೆ ಹೀಗೆ ಅನಿಸುತ್ತದೆಯೋ!
ಯದ್ಭಾವಂ ತದ್ಭವತಿ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಸಂಗನಗೌಡರು ಹೇಳುವಂತೆ ಇದು ನಮ್ಮ ಗ್ರಹಿಕೆಯ ಮೂಡನ್ನು ಅವಲಂಬಿಸಿರುತ್ತದೆ. ಹೀಗೆ ಜಗತ್ತಿನಲ್ಲಿ ಇರುವುದೆಲ್ಲದರ ಹಿಂದೆ ಒಂದು ಅನೂಹ್ಯವಾದ ಶಕ್ತಿ ಇದೆ ಎಂದು ಭಾವಿಸುವುದು ಮಕ್ಕಳು ಕಷ್ಟ ಬಂದಾಗ ಕಾಪಾಡೋಕೆ ಶಕ್ತಿ ಮಾನ್ ಬರುತ್ತಾನೆ ಎಂದು ನಂಬಿಕೊಂಡು ಆ ಬಗ್ಗೆ ಅಚ್ಚರಿಯನ್ನು ತಾಳುವಂತೆಯೇ ಇದೆ. ಈ ಒಂದು ಅನೂಹ್ಯವಾದ ಸಾಧ್ಯತೆ ಇರುವ ಕಲ್ಪನೆಯೇ ನಮಗೆ ರೋಮಾಂಚನವನ್ನು ಕೊಡುತ್ತದೆ. ಅದರ ಮುಂದೆ ವಿಜ್ಞಾನದ ಸಿದ್ಧ ಸೂತ್ರಗಳು, ತತ್ವಜ್ಞಾನಿಯ ಸಿದ್ಧಾಂತಗಳೂ ಬೇಡವೆನಿಸುತ್ತವೆ. ಅದಕ್ಕಾಗಿಯೇ ಎಷ್ಟೆಲ್ಲಾ ಓದಿದ ವಿಜ್ಞಾನಿಗಳೂ ಎಲ್ಲವನ್ನೂ ಮೀರಿದ ಸಂಗತಿ ಇದೆ ಎಂದು ನಂಬುತ್ತಾರೆ. ಅವರ ನಂಬಿಕೆಯಲ್ಲಿ ಹೆಚ್ಚಿನಂಶ ಅಂಥದ್ದೊಂದು ಶಕ್ತಿ ಇರಲಿ ಎಂಬ ಆಶಯವಿರುತ್ತದೆ. ಸಿನೆಮಾ ಮುಗಿಯುತ್ತಾ ಬಂದಾಗಲೂ ಹಿರೋಯಿನ್ ಹೀರೋಗೆ ದಕ್ಕದ ಸಂದರ್ಭದಲ್ಲಿ ಏನಾದರೊಂದು ಪವಾಡವಾಗಿ ಆಕೆ ಸಿಕ್ಕುಬಿಡಲಿ ಎಂದು ಆಶಿಸುತ್ತಿರುತ್ತೇವಲ್ಲಾ, ಹಾಗೆ. ಎದುರಿಗೆ ಸತ್ತು ಮಲಗಿರುವ ಹೆಣ ಒಂದು ಕ್ಷಣ ಎದ್ದು ಬಿಡಬಹುದು ಎಂದು ಭಾವಿಸಿಕೊಂಡು ರೋಮಾಂಚನಗೊಳ್ಳುತ್ತೇವಲ್ಲಾ, ಹಾಗೆ.
ನಿಮ್ಮ ಮನಸ್ಥಿತಿ ಅಥವಾ ಪ್ರಜ್ಞೆಯಲ್ಲಿ ಎಲ್ಲದರ ಹಿಂದೆ ಒಂದು ಹಿತವಾದ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಭಾವ ಸುಳಿದಾಡುತ್ತಿರುವಾಗ ಮಾತ್ರ ನಿಮಗೆ ಜಗತ್ತಿನ ಎಲ್ಲಾ ಸಂಗತಿಗಳು, ಘಟನೆಗಳು ಒಂದಕ್ಕೊಂದು ಪೋಣಿಸಿದ ಹಾಗೆ ಕಾಣುತ್ತವೆ. ಆದರೆ ನಿತ್ಯ ಜಂಜಾಟದಲ್ಲಿ ಸಮಯಕ್ಕೆ ಸರಿಯಾಗಿ ಬರಬೇಕಾದ ಪೇಪರು, ಬಸ್ಸು, ಕ್ಯಾಬು, ಸಮಯವಿಲ್ಲದೆ ಬಂದ ಖಾಯಿಲೆ, ಪೀಡಿಸುವ ಮನುಷ್ಯ ಎದುರಾದಾಗ ನಿಮಗೆ ಇವೆಲ್ಲಾ ಪೋಣಿಸಿಟ್ಟಂತಹ ಸಂಗತಿಗಳು ಎನ್ನಿಸುವುದಿಲ್ಲ. ಅಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಏಕೆ ಹೀಗೆ ಅನಿಸುತ್ತದೆಯೋ!
ನಿಮ್ಮ ಹೆಸರಷ್ಟೇ ಅಲ್ಲ, ಪ್ರತಿಕ್ರಿಯೆಯೂ unique ಆಗೇ ಇದೆ.
ಅನೂಹ್ಯವಾದ ಸಾಧ್ಯತೆಯ ಕಲ್ಪನೆಯೇ ರೋಮಾಂಚಕ ಎಂಬ ಸಾಲು ಅರ್ಥಪೂರ್ಣ. ನಿಜ, ಅಂಥ ನಂಬಿಕೆಗಳಿಂದಲೇ ನಾವು ಸಮಸ್ಯೆಗಳನ್ನು ಎದುರಿಸಲು ಶಕ್ತವಾಗುವುದು. ವಿಜ್ಞಾನ ಎಲ್ಲ ಸಮಯದಲ್ಲಿ ಹಿತವಾಗುವುದಿಲ್ಲ. ಕಲ್ಪನೆ ಕೊಡುವಷ್ಟು ಸುಖ ಶುದ್ಧ ತರ್ಕದಲ್ಲಿ ಇರುವುದಿಲ್ಲ. ಶುದ್ಧ ತರ್ಕ, ಶುದ್ಧ ವಿಜ್ಞಾನಗಳು ಒಂದು ಹಂತದಲ್ಲಿ ಶುಷ್ಕ ಅನಿಸತೊಡಗುತ್ತವೆ. ಹೀಗಾಗಿ ಅಲ್ಲವೇ ನಾವು ಕಾಣದ್ದರ ಬಗ್ಗೆ ಕುತೂಹಲ, ನಂಬಿಕೆ ಬೆಳೆಸಿಕೊಳ್ಳುವುದು.
ಏಕೋ ಚರ್ಚೆ ಗಂಭೀರವಾಗುತ್ತಿದೆ ಎಂದು ಅನಿಸುತ್ತಿದೆ. ಬೇರೊಂದು ವಿಷಯದ ಬಗ್ಗೆ ಬರೆಯಬೇಕು ನಾನು.
ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ನನ್ನ ಕಣ್ಣಿಗೆ ಚಂದವೆನಿಸುವುದು, ನನ್ನ ಕಣ್ಣಲ್ಲಿರುವ ಲೆನ್ಸಿನಿಂದ ಬಂದ ಕದಿರು/ಕಿರಣ ನನ್ನ ಮೆದುಳಿಗೆ ತೋರುವ ಒಂದು ಪಾಪೆ/ಬಿಂದ/ಇಮೇಜಿನಲ್ಲಿ ಇರುವ ಬಣ್ಣವೆಂಬ ಅಂಶ, ಮತ್ತು ಗೆರೆಗಳೆಂಬ ಅಂಶ; ಇವೆರಡರಿಂದ ನನ್ನ ಮೆದುಳಿಲ್ಲಿರುವ ಸೆಲ್-ಗಳಲ್ಲಿ ಆಗುವ ionಗಳ ಹರಿವಿಂದ ನನಗೆ ಅನ್ನಿಸುವ ಅನ್ನಿಸು.
ಒಬ್ಬ ಚನ್ನಾಗಿ ಗಿಟಾರ್ ನುಡಿಸಿದಾಗ, ನನಗೆ ಅವನಿಗಿಂತ ಆ ಗಿಟಾರ್‍ನ ತಂತುಗಳು ಅಲುಗಿ ಬರುವ ಸದ್ದಿನಲೆಗಳು ಎನ್ನ ಕಿವಿಗಪ್ಪಳಿಸಿ ಆದ ಅಲುಗಿಕೆ/ನಡುಕದ ಅನುಬವ ಹಿಡಿಸುವುದು. ಆ ಗಿಟಾರ್ ನುಡಿಸುವವನು ಲೆಕ್ಕ ಇರದೇ, ಅದೇ ಸದ್ದನ್ನು ಒಂದು ನಾಯಿ ಬೊಗಳಿ ಬರಿಸಿದರೂ ಆ ಸದ್ದು ಹಿತವೆನ್ನಿಸುವುದು.
ನಮಗೆ ಚನ್ನೆನಿಸುವುದದ ಮೂಲಕ್ಕಿಂತ ನಮಗೆ ಹಿಡಿಸುವ ಸಂಗತಿಯಲ್ಲಿರುವ ಅಂಶಗಳನ್ನ ವಿಶ್ಲೇಸಿಸಿದರೆ ಒಳಿತು.
ಹರಿವ ನದಿಯ ಮೂಲ ಶುದ್ಧವಾದರೇನು, ಕುಡಿಯುವ ಬೊಕ್ಕಸೆಯು ಇಂಪಾರ್ಟೆಂಟು. ಮೂಲದಲ್ಲಿ ಸಪ್ಪೆಯಾಗಿದ್ದ ನೀರು, ಸಿಹಿಗಲ್ಲಿನ ಮೇಲಿ ಹರಿದು ಸವಿಯಾಗಿರಬೋದು. ನನಗೆ ಮುಖ್ಯವಾದುದು, ಮೂಲದ ಸಪ್ಪೆಯೂ ಅಲ್ಲ, ಹರಿದ ಸಿಹಿಗಲ್ಲೂ ಅಲ್ಲ; ಮುಖ್ಯವಾದುದು, ಬೇಕಾದುದು, ಹಿಡಿಸುವುದು, ತಲೆಗಡೆಸಿಕೊಳ್ಳಬೇಕಾದುದು, ನನ್ನ ಗಂಟಲಲ್ಲಿ ಇಳಿದು, ನಾಲಗೆ ಸೋಕಿ ಸಿಹಿಸಿಹಿ ಎನ್ನಿಸುತ್ತಿರುವ ಸಿಹಿಯನ್ನ.
ನನಗೆ ಇವಲ್ಲಿ ಯಾವ ಅಚ್ಚರಿಯಿಲ್ಲ. ಅಚ್ಚರಿ ಎಂದರೇನು? ನಮಗೆ ತಿಳಿಯದೇ ಇರುವುದು ತಿಳಿದು, ಅದು ಇರುವಿಕೆ ಆಗುವಿಕೆ ನಮಗೆ ಸಾಧ್ಯವೆಂಬ ನಂಬಿಕೆ ಇರದಿರುವುದು ಅಶ್ಟೆ. ಅದಕ್ಕೆ ಕಾರಣ ಹಲವೊಮ್ಮೆ ನಮ್ಮ ಪೆದ್ದು ಕೂಡ.
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಅದ್ಭುತ ವಿಶ್ಲೇಷಣೆ ಮಹೇಶ್.
ನಿಮ್ಮ ಹೇಳಿಕೆಯನ್ನು ಒಂದೇ ಮಾತಲ್ಲಿ ಹೇಳುವುದಾದರೆ, ಹಸಿವು ತಾನೆ ನಮ್ಮ ಭಾವನೆಯ ತೀವ್ರತೆ ನಿರ್ಧರಿಸುವುದು. ತುಂಬ ನೀರಡಿಕೆಯಾದಾಗ ಸಾಧಾರಣ ನೀರೂ ರುಚಿ ಅನಿಸುತ್ತದೆ. ಜೀವಬಿಂದು ಅನಿಸುತ್ತದೆ. ಆದರೆ, ನೀರಡಿಕೆ ಇಲ್ಲದಿದ್ದಾಗ ಅದೇ ನೀರು ಸಪ್ಪೆ.
ಯಾರನ್ನೋ ನೋಡಬೇಕೆಂದು ತುಂಬ ಹಂಬಲಿಸುತ್ತೇವೆ. ಅವರು ಸಿಕ್ಕಾಗ ಕೆಲ ಕಾಲ ಖುಷಿ. ನಂತರ, ಪ್ರವಾಹ ಇಳಿಯತೊಡಗುತ್ತದೆ. ಹೀಗೇಕಾಗುತ್ತದೆ ಎಂದು ನಾನು ಯೋಚಿಸುತ್ತಿಲ್ಲ. ಆದರೆ, ಅದು ಆಗುವುದೇ ಹಾಗೆ. ಹಸಿವಿನ ಜೊತೆಗೆ ಅದನ್ನು ತಣಿಸುವ ಸಂಗತಿಯೂ ಜೊತೆಯಾದಾಗ ಮಾತ್ರ ಬದುಕು ಚೆಂದ, ಅಲ್ಲವೆ?
ಅದಕ್ಕೆಂದೇ ಬೆಳಗಿನ ಶಾಲ್ಮಲಾ ಕಣಿವೆ ಇಷ್ಟವಾದಷ್ಟು ಮಧ್ಯಾಹ್ನದ ಶಾಲ್ಮಲೆ ಇಷ್ಟವಾಗುವುದಿಲ್ಲ. ಇದು ವ್ಯಕ್ತಿ, ವಿಚಾರ, ಅನ್ನ, ಚಟ- ಹೀಗೆ ಎಲ್ಲವಕ್ಕೂ ಅನ್ವಯವಾಗುತ್ತದೆ.
ನಿಮ್ಮ ವಿವರಣೆ ಚೆನ್ನಾಗಿದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ನಿಮ್ಮ ಮರುಮಾತು ನನ್ನ ತಲೆಯಲ್ಲಿ ಕೂತಿದೆ... ಕುಣಿಯುತ್ತಿದೆ...
ಇದಕ್ಕೆ ಮರುಹೇಳಬೇಕಿಂದನ್ನಿಸಿದೆ...
ನಾಳೆ ಹೇಳ್ತೀನಿ..
ನಿಮ್ಮ ಮಾತುಗಳು ನನಗೆ ನಲಿವು ತಂತು..
ನಿಮ್ಮ ಮಾತುಗಳು ಹಿಡಿಸಿತೋ ಇಲ್ಲವೋ, ಆದರೆ ಅದು ತಂದ ನಲಿವು ಹಿಡಿಸಿತು ಎಂದು ಹೇಳಬಲ್ಲೆ... ಅದು ಹಿಡಿಸಲು ನನ್ನಲ್ಲೇ ಮುನ್ನವಾಗಿ ಏನು ಇತ್ತು ಎಂದು ನನ್ನ ಯೋಚನೆ!
ನನ್ನಿ!
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ನಾಳೆ ಇದೆ ಎಂಬ ಕಾರಣಕ್ಕೇ ’ಇಂದು’ ಸಹನೀಯ. ಒಂದು ಆರೋಗ್ಯಕರ ಚರ್ಚೆಗೆ ತಾನೆ ನಾವೆಲ್ಲ ಇಲ್ಲಿ ಸೇರಿರುವುದು. ನಾವು ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಒಪ್ಪಬೇಕೆಂದೇನೂ ಇಲ್ಲ. ಆದರೆ, ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯ ಹೇಳುವ ಹಕ್ಕು ಇದೆ. ನನ್ನ ಅಭಿಪ್ರಾಯ ನೀವು ಒಪ್ಪದಿದ್ದರೂ, ಅದು ನಲಿವು ತಂದಿತು ಎಂಬುದನ್ನು ಒಪ್ಪಿಕೊಂಡಿದ್ದು ಓದಿ ನನಗೂ ಖುಷಿ ಆಗಿದೆ.
ನಿಮ್ಮ ’ನಾಳೆ’ಗಾಗಿ ಇಂದು ಕಾಯ್ತೀನಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಅಯ್ಯೋ ಪಲ್ಲವಿ ಎಸ್...
ಅನಿಸಿಕೆಯನ್ನ ಒಪ್ಪುವ ಒಪ್ಪದಿರುವ ಸಂಗತಿ ಬೇಡವೇ ಬೇಡ.... ಅದನ್ನ ನೀವು ಮೀರಿದ್ದೀರಿ ಎಂದು ಗೊತ್ತು... ನೀವು ಯಾರನ್ನೂ ಒಪ್ಪಿಸಲು ತಿಣಿಕಿಲ್ಲ ಎಂದು ನನ್ನ ಎಣಿಕೆ.
ನಿಮಗೆ ಕುಶಿಯಾದುದಕ್ಕೆ ಕಾರಣ ನಾನಲ್ಲ.. ’ನಿಮಗೆ’ ನಾನು ಬರೆದ ಸಾಲುಗಳ ಹಿಡಿಸುವಿಕೆ. ಹಾಗಾಗಿ ನಿಮ್ಮ ಕುಶಿಗೆ ನೀವೂ ಕಾರಣರು.
ಬಲು ಗೊಂದಲವಾಗಿದರೆ.. ಮನ್ನಿಸಿ,
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಸಾಲು ಬರೆದ ಪಾಲು ನಿಮ್ಮದು ತಾನೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಹವುದು ಅಂತ ನಾನು ಹೇಳಲ್ಲ
ಹಾಗೆ ತಿಳಿದುಕೊಂಡರೆ.. ನಿಮ್ಮದು ಸರಿಯೋ ತಪ್ಪೋ ಅದನ್ನೂ ಎಣಿಸಲ್ಲ..
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಹಾಗಿದ್ದರೆ ಸರಿ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ನಿಂಮ ಮಾತಿನಂತೆ ಹಸಿವು ರುಚಿಯನ್ನ, ಸವಿಯನ್ನ ತೀರ್ಮಾನಿಸುವುದು.
ಒಪ್ಪ ತಕ್ಕ ಮಾತು.. ನಮ್ಮಳಗೆ ಸವಿಯುವ ಬಯಕೆ ಹಂಬಲ ಇರಬೇಕು!
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಅದಕ್ಕೇ ಅಲ್ಲವೇ ’ದೃಷ್ಟಿಯಂತೆ ಸೃಷ್ಟಿ’ ಎಂಬ ನಾಣ್ಣುಡಿ ಇರೋದು. ಆದರೆ, ದೃಷ್ಟಿಯನ್ನು ಸೃಷ್ಟಿಸುವುದು ಹಸಿವು ಎಂಬುದು ನನ್ನ ನಂಬಿಕೆ. ಉಳಿದ ವಿಷಯಗಳೂ ಇದಕ್ಕೆ ಜೋಡಣೆಯಾಗುತ್ತವೆ ನಿಜ. ಆದರೆ, ಹಸಿವಿನ ತೀವ್ರತೆ ಅವಕ್ಕಿಲ್ಲ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ನೀವು ದಿಟವಾಗಲೂ ಹುಡುಗಿಯ ಎಂಬ ಅನುಮಾನ ಯಾಕೋ ಕಾರಣ ಇಲ್ಲದೇ ಬರ್ತಾ ಇರಬೋದು.. ಮನ್ನಿಸಿರಿ.
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಮಾಯ್ಸ ಅವರೇ
ನನಗೂ ಹಾಗೆ ಅನುಮಾನ ಬರ್ತಿದೆ
(ಅವಳು(ರು) )ಕಲ್ಪನೆಯಯೋ ಅಥವ ನಿಜವೇ?
http://thereda-mana.blogspot.com/
ರೂಪ
ಉ: ಏಕೆ ಹೀಗೆ ಅನಿಸುತ್ತದೆಯೋ!
ನನ್ನ ಪ್ರತಿಕ್ರಿಯೆಗಳಿಂದ ನಿಮಗೆ ಸ್ಪಂದನೆಗಿಂತ ಅನುಮಾನಗಳೇ ಹೆಚ್ಚಿಗೆ ಬರುವುದಾದರೆ, ಇನ್ಮುಂದೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸುತ್ತೇನೆ. ಕ್ರಿಯೆ ಇದ್ದರೆ ತಾನೆ ಪ್ರತಿಕ್ರಿಯೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ನೀವು ಪ್ರತಿಕ್ರಿಯೆ ನೀಡಲಿ ಅಂತಾನೆ ನಾವು ಕಮೆಂಟಿಸ್ಟಿರೋದು ಪಲ್ಲವಿ ಮೇಡಮ್.
ಓದೋಕೆ ನವಿರಾಗಿದೆ ನಿಮ್ಮ ಉತ್ತರ ಅದಕ್ಕೆ ಸಂಪದಿಗರ ಮಾರುತ್ತರ ++
ಖುಶಿಯಾಗ್ತಿದೆ ಸಂಪದದಲ್ಲಿ ನೀವು ಹುಟ್ಟಿಸ್ತಿರೋ ಸಂಚಲನೆ ನೋಡಿ
ನೀವು ನಿಜವಾಗಿಯೂ ಹುಡುಗಿಯೇ ಆಗಿದ್ದರೆ ನಿಮ್ಮ ಧ್ಯೆರ್ಯಕ್ಕೆ ನಿಮ್ಮ ನುಡಿಗಳಿಗೆ ಹ್ಯಾಟ್ಸಾಫ್.
http://thereda-mana.blogspot.com/
ರೂಪ
ಉ: ಏಕೆ ಹೀಗೆ ಅನಿಸುತ್ತದೆಯೋ!
ಕ್ರಿಯೆ ಇದ್ದರೆ ತಾನೆ ಪ್ರತಿಕ್ರಿಯೆ. ಕ್ರಿಯೆ ಖುಷಿ ಕೊಡುವಂತಿರಲಿ. ಆಗ ಕಡೇ ಪಕ್ಷ ಖುಷಿ ಕೊಡುವ ಪ್ರತಿಕ್ರಿಯೆಗಳಾದರೂ ದಕ್ಕಿಯಾವು. ನೀವು ನನ್ನನ್ನು ಪ್ರಚೋದಿಸುತ್ತಿದ್ದೀರಿ ಅಂತಾನೂ ಗೊತ್ತು. ಆದರೆ, ಇದೇನು ರೂಪಾ? ನನ್ನ ಬೆಂಬಲಕ್ಕೆ ನಿಲ್ಲದೇ ಹುಡುಗ್ರ ಜೊತೆ ಸೇರ್ಕೊಂಡಿದ್ದೀರಿ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಮನ್ನಿಸಿದ್ದೇನೆ. ನಿಮ್ಮ ಅನುಮಾನ ಪರಿಹಾರಕ್ಕೆ ನನ್ನ ಸಹಕಾರ ಖಂಡಿತ ಇದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಯಾವಾಗ ಸಿಕ್ತೀರ? ಬೆಂಗಳೂರಿಗೆ ಬನ್ನಿ...
ನನಗೆ ಶಾಲ್ಮಲೀ-ಗೀಲ್ಮಲೀ ಹಿಡಿಸಲ್ಲ.. !!
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಬರೋದಾದ್ರೆ ಐದು ವರ್ಷಗಳ ಹಿಂದೆನೇ ಬರ್ತಿದ್ದೆ. ಏಕೋ ಧಾರವಾಡ ಬಿಟ್ಟು ಬರೋ ಮನಸ್ಸಿಲ್ಲ. ಎಷ್ಟು ಸಾಧ್ಯವೋ ಅಷ್ಟು ದಿನಗಳವರೆಗೆ ಇಲ್ಲೇ ಇರೋಣ ಅಂತ.
ಶಾಲ್ಮಲಾ ಎಲ್ಲರಿಗೂ ಹಿಡಿಸಬೇಕೆಂದೇನೂ ಇಲ್ಲ. ಚಿಕ್ಕವಳಿದ್ದಾಗಿಂದ ನೋಡುತ್ತ ಬೆಳೆದ ಪ್ರದೇಶ ಅದು. ನನ್ನ ಜೀವ ಬೇರು ಅದರಲ್ಲಿದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
"ಶಾಲ್ಮಲಾ ಎಲ್ಲರಿಗೂ ಹಿಡಿಸಬೇಕೆಂದೇನೂ ಇಲ್ಲ. ಚಿಕ್ಕವಳಿದ್ದಾಗಿಂದ ನೋಡುತ್ತ ಬೆಳೆದ ಪ್ರದೇಶ ಅದು. ನನ್ನ ಜೀವ ಬೇರು ಅದರಲ್ಲಿದೆ."
ಶಾಲ್ಮಲಿ ಅನ್ನು ಕನ್ನಡದಲ್ಲಿ ’ಬೋರುಗದ ಮರ’ ಅನ್ನುವರು
ಹಿತೋಪದೇಶದ ಕತೆಯದ ಮುದಲಲ್ಲಿ ಬರುವ ಲಘುಪತನಕ ಕಾಗೆ ಒಂದು ಶಾಲ್ಮಲೀ/ಬೋರುಗದ ಮರದಲ್ಲಿ ಕುಳಿತಿರುತ್ತದೆ...
ನಾನೂ ಬೆಂಗಳೂರಲ್ಲೇ ಬೇರೂರಿಕೊಂಡಿದ್ದೀನಿ ಅನ್ನಿಸ್ತದೆ.. ಈ ಊರು ಹಿಡಿಸೋಶ್ಟು ನನಗೆ ಯಾವ ಊರು ಹಿಡಿಸಲ್ಲ. ನಾನು ಚಿಕ್ಕಂದಿನಲ್ಲಿದ್ದ ಜಾಗದ ತುಂಬ ಬತ್ತ-ಕಬ್ಬು ಗದ್ದೆಗಳು, ಅರಳೀ ಆಲದ ಬೇವಿನ ಮರಗಳು, ಮಾವಿನ ಸೀಬೆಯ ತೋಪುಗಳು, ಕಾವೇರಿ ಹೊಳೆಯ ಕಾಲುವೆಗಳು, ಕೆರೆ-ತೊರೆಗಳೂ ಇವೆ... ಆದರೆ ನನಗೆ ಅದು ಯಾವುದೂ ಈಗ ಹಿಡಿಸಲ್ಲ...
ನನಗೆ ಹಿಡಿಸೋ ಜಾಗ ಹೆಚ್ಚೆಚ್ಚು ಒತ್ತೊತ್ತಾಗಿದ್ದೂ, ದೂರ ದೂರವಾಗಿ, ತಮ್ಮ ಪಾಡಿಗೆ ತಾವು ಇರುವ ಊರುಗಳು.. ಇಂತಹ ಊರುಗಳಲ್ಲಿದ್ದಾಗಲೇ ನಮಗೆ ಬದುಕು ಅಂದರೇನು ಎಂದು ತಿಳಿಯೋದು...
ಇನ್ನೂ ಮೂಲ ವಿಶಯಕ್ಕೆ... ಬೆಳಂಬೆಳಗೆ ಅದೇ ಮರಗಳ ಸಾಲಲ್ಲಿ ಓಡಾಡುವದನ್ನು ಬಿಟ್ಟು ಒಮ್ಮೆ ಆರು-ಆರುವರೆಯ ಹೊತ್ತಿನಲ್ಲಿ ಬೆಂಗಳೂರಿನ ಯಾವುದಾದರೂ ದೊಡ್ಡ ಬೀದಿಗೆ ಹೋಗಿ.. ಸುದ್ದಿಪೇಪರ್ ತಲುಪಿಸುವವರು, ಹಾಲಿನ ಪ್ಯಾಕೆಟ್ ಒಯ್ಯುವವರು, ದೂರದ ಬಟ್ಟೆ ಕಾರಕಾನೆಗೆ ಹೋಗಲು ಬಸ್ಸು ನಿಲುಗಡೆಯಲ್ಲಿ ನಿಂತ ಹೆಂಗಸು, ಕಟ್ಟಡದ ಕೆಲಸಗಾರು, ಬಸ್ಸಲ್ಲಿ ಬೆಳಿಗಿನ ಸೊಬಗು, ನೇಸರ ಚಂಗದಿರು/ಹೊಂಗಿರಣ ಮುಂತಾದ ಗೊಡವೆಯೇ ಇಲ್ಲ ಟಿಕೀಟು ಹರಿಯುವವರು, ಬಸ್ಸು ಓಡಿಸುವವರು... ಹೀಗೆ ದೊಡ್ಡ ಪಟ್ಟಿ...
ಇವರಿಗೆಲ್ಲ "ಬೆಳ್ಳಂಬೆಳಿಗ್ಗೆ ಹೋದಾಗ ಸುತ್ತ ಮುತ್ತ ತುಂಬಿರುವ ಶಾಂತಿ, ನಿರಾಳತೆ, ಸೊಬಗನ್ನು ನೋಡಿ ನಿಮಗೆ ಏನು ಅನ್ನಿಸುತ್ತದೆ?" ಎಂಬ ಪ್ರೆಶ್ನೆ ಬರುವುದೇ ಇಲ್ಲ ಅಲ್ವ!!?
ಅದೇ ಈ ಮಂದಿಯ ಪಕ್ಕದಲ್ಲೇ ಇರುವ ದೊಡ್ಡ ದೊಡ್ಡ ಪಾರಕುಗಳಲ್ಲಿ ಡೊಳ್ಳುಹೊಟ್ಟೆಯ ಸಿರಿವಂತರು ತಮ್ಮ ನಾಯಿಗಳನ್ನು ಹಿಡಿದು ಆನೆನಡುಗೆ ಮಾಡುವರು... ಅದೂ ಸೊಬಗು
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಮಾಧವನಿಗೆ ಬರೆದ ಪ್ರತಿಕ್ರಿಯೆ ನಿಮ್ಮ ಪತ್ರಕ್ಕೂ ಸೂಕ್ತವಾಗಬಹುದು, ಓದಿ ಮಹೇಶ್.
ಯಾರ ಭಾವನೆಯನ್ನೂ ನಾನು ಹೀಗಳೆದಿಲ್ಲ. ಹೀಗಳೆಯುವುದಿಲ್ಲ. ಅವರವರ ಮಾತು, ವಿಚಾರ ಅವರವರಿಗೆ ಸೊಗಸು. ಶಾಲ್ಮಲಾ ಕಣಿವೆಯ ಸೊಗಸಿನ ಮುಂದೆ ಬೇರೆ ಯಾವ ಸೊಗಸೂ ಇಲ್ಲ ಎಂದು ನಾನು ಅಂದುಕೊಂಡಿಲ್ಲ. ಅದು ನನಗೆ ಇಷ್ಟ. ಹಾಗಂತ ಎಲ್ಲರಿಗೂ ಇಷ್ಟವಾಗಬೇಕೆಂದೇನೂ ಇಲ್ಲ. ಗೆಳತಿಯರೊಂದಿಗೆ ಪ್ರವಾಸಕ್ಕೆ ಹೋಗುವಾಗ, ನಾನು ನೋಡಿದ ಬಹುತೇಕ ಸ್ಥಳಗಳನ್ನು ತುಂಬ ಇಷ್ಟಪಟ್ಟಿದ್ದೇನೆ.
ಇಂಥ ಭಾವನೆಗಳನ್ನು ಹಂಚಿಕೊಂಡರೆ, ಎಷ್ಟೊಂದು ಸುಖೀ ಘಳಿಗೆಗಳು ಬ್ಲಾಗ್ ಬಂಧುಗಳಿಗೆ ದಕ್ಕುತ್ತದಲ್ವಾ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಅಯ್ಯಯ್ಯಯ್ಯಯ್ಯಯ್ಯೋ...
ಅದೆಲ್ಲ ಹಾಳಾಗಿ ಹೋಗಲಿ... ನನ್ ತಲೆ..!!
ನಿಮ್ಮ ಶಾಲ್ಮಲಾ ಕಣಿವೆಯ ಸೊಬಗನ್ನು ಬಣ್ಣಿಸಿರಿ ಬರೆಯಿರಿ.. ನನಗೆ ಶಾಲ್ಮಲಾ ಒಂದು ಹೊಳೆ ಎಂದೇ ತಿಳಿದಿರಲಿಲ್ಲ...
"
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು
ಒಳಗೊಳಗೆ ಹರಿಯುವವಳು
ಜೀವ ಹಿಂಡಿ ಹಿಪ್ಪೇ ಮಾಡಿ
ಒಳಗೊಳಗೆ ಕೊರೆಯುವವಳು
ಸದಾ
ಗುಪ್ತಗಾಮಿನಿ ನನ್ನ ಶಾಲ್ಮಲಾ" ಸಕ್ಕತ್ ಸ್ವೀಟ್ ಹಾಡು...
ಮಿಶ್ರಕೋಟಿಗಳೇ ನನ್ನಿ ಈ ಹಾಡಿಗೆ...
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಇಲ್ಲಿ ಎಲ್ರೂ ಭಾವ ಜೀವಿಗಳೇ...ಎಲ್ರ ಅನಿಸಿಕೆಗಳೂ ಬೊಂಬಾಟ್ ...
ನನ್ನ ಬಲಗಡೆ ಬ್ರೈನ್ ..ಕೆಲ್ಸ ಮಾಡ್ತಾ ಇಲ್ಲ ಅಂತ ನನ್ನ ಅನುಭವಕ್ಕೆ ಬರುತ್ತಾ ಇದೆ! .....ಅತ್ವ ಕಳೆದು ಹೋಗಿದೆ ಅಂತ ಕಾಣುತ್ತೆ.
ಸವಿತೃ
ಉ: ಏಕೆ ಹೀಗೆ ಅನಿಸುತ್ತದೆಯೋ!
ನನಗೆ ಗೊತ್ತಿರುವಂತೆ ಎಡಗಡೆ ಮೆದುಳು ವಿಚಾರ ಮಾಡುತ್ತದೆ. ಬಲಗಡೆ ಮೆದುಳು ಭಾವನೆಗಳನ್ನು ಹಂಚಿಕೊಳ್ಳುತ್ತದೆ. ನಿಮ್ಮ ಬಲ ಮೆದುಳು ಕೆಲಸ ಮಾಡಿರುವುದನ್ನು ನಿಲ್ಲಿಸಿರುವುದು ನಿಮ್ಮ ಎಡ ಮೆದುಳಿಗೆ ತಿಳಿದಿದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಇಲ್ಲ ಬಿಡಿ... ಮೊನ್ನೆ ಮನೆಗೆ ಬಿಟ್ಟು ಬಂದಿದ್ದೆ!

ಕೆಲ್ಸ ಮಾಡಲ್ಲ ಅಂತ ಆಗಾಗ್ಗೆ ತುಂಬ ಹಟ ಹಿಡಿಯುತ್ತೆ
ಆದರೂ...... ನಾನು ಬಲ ಮೆದುಳಿಗಿಂತ ಎಡ ಮೆದುಳು ಬಲವಾಗಿರುವ ಅಸಾಮಿನೆ !
ಸವಿತೃ
ಉ: ಏಕೆ ಹೀಗೆ ಅನಿಸುತ್ತದೆಯೋ!
ಅಂದರೆ, ನಿಮ್ಮ ಎಡವೇ ’ಬಲ’ ಅಂದ ಹಾಗಾಯ್ತು !!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಪಲ್ಲವೀ...
ಸವಿತೃ ಮೆದುಳು ಮಾತ್ರ ಕೆಲಸ ಮಾಡೋದು ಹೃದಯ ಬರೀ ನೆತ್ತರು ಹರಿಸುವ ಪಂಪು.. ಇವರಿಗೆ...
ಅದಕ್ಕೆ ಬಂದು ’ನನ್ನ ಶಾಲ್ಮಲೆ’ಯ ಮೇಲೆ ಏನೇನೋ ಬರೇತಾರೆ.
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಸ್ವಲ್ಪ ಮಹೇಶ ಗಾಳಿ ಬೀಸಿತ್ತು
. ಈಗ ಸರಿಯಾತು. ಮತ್ತೆ ಶಾಲ್ಮಲೆ ಗಾಳಿ ಬೀಸಕ್ಕೆ ಶುರು ಮಾಡಿದೆ.
ಸವಿತೃ
ಉ: ಏಕೆ ಹೀಗೆ ಅನಿಸುತ್ತದೆಯೋ!
ಹ ಹ
ಮರೆತು ಬಿಡಿ...
ಗುಪ್ತ ಸುಪ್ತಶಾಲ್ಮಲೆಯ ತಪ್ತಉಸಿರಿನ ಬಿಸಿ ಸವಿಯಿರಿ..
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಓಹೋ, ನಿಮಗೆ ಆಗಾಗ ಗಾಳಿ ಬಡಿದುಕೊಳ್ಳುತ್ತದಾ? ನಾನಂತೂ ಅದನ್ನು ಸವಿ ಗಾಳಿ ಅಂದುಕೊಂಡಿದ್ದೇನೆ. ಅದಕ್ಕೇ ನಿಮ್ಮ ಮೆದುಳು ಆಗಾಗ ಎಡ-ಬಲ ಎಂದು ಕವಾಯತು ಮಾಡುತ್ತಿದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಸವಿತೃ ಹುಶಾರು.. ಪಲ್ಲವಿ ಅನುಪಲ್ಲವಿಯಿಂದ ಚರಣಕ್ಕೆ ಹೋದರೆ ಕಶ್ಟ...
ಸಕ್ಕತ್ ಮಾತು ಪಲ್ಲವೀ!
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಪಲ್ವಿ .. ಮಾತಿನ ಮಲ್ಲಿ!
ಸವಿತೃ
ಉ: ಏಕೆ ಹೀಗೆ ಅನಿಸುತ್ತದೆಯೋ!
ಎಡ ಬಲ ಕವಾಯತು ನಡೆಯುವುದು ಭಾವನೆಗಳು ಬಲ ವಾಗಿರುವ ವ್ಯಕ್ತಿಗೇನೆ!
ಅದು ಸಾಮಾನ್ಯ. ಪಲ್ಲವಿ ಯಷ್ಟು ಸ್ತಿತ ಪ್ರಜ್ಞ ಸ್ಥಿತಿಗೆನಾನು ಹೋಗಿಲ್ಲ. ಹೋಗಕ್ಕೆ ಇಷ್ಟವೂ ಇಲ್ಲ.
ಯಾಕೆ ನಿಮಗೆ ಯಾವತ್ತೂ ಯಾರ ಗಾಳಿಯೂ ಬೀಸಿಲ್ವ?...
ಒಮ್ಮೆ ಒಂದು ಅರ್ಧ ಗಂಟೆ ನನ್ನ ಜೊತೆ ವಾಕಿಂಗ್ ಮಾಡಿ ... ನನ್ನ ಗಾಳಿ ಬೀಸಲಿಲ್ಲ ಅಂದ್ರೆ ಕೇಳಿ!
(ಸೂಚನೆ.. ಗಾಳಿ ಅಂದ್ರೆ ವಾಸನೆ ಅಲ್ರಪ್ಪೋ... ನಾನು ದಿನ ಸ್ನಾನ ಮಾಡ್ತೀನಿ, ಸ್ಹೆಂಟ್ ಹಾಕಲ್ಲ ಅಂತ ಬಿಡಿಸಿ ಹೇಳಬೇಕಿಲ್ಲ ಅಂತ ಅಂದ್ಕೋತೀನಿ.
)
ಸವಿತೃ
ಉ: ಏಕೆ ಹೀಗೆ ಅನಿಸುತ್ತದೆಯೋ!
ರೀ
ದಿನಾ ಸ್ನಾನ ಯಾಕೆ ಮಾಡ್ತೀರ?
ಒಂದು ಗಂಟೆ ಆಯ್ತು ಅಂತ ತಿನ್ನೋದಲ್ಲ, ಹಸಿವಾದಾಗ ತಿಂನಬೇಕು.. ಹಂಗೆ ಮಿಯ್ಯಬೇಕು ಎಂದು ಅನ್ನಿಸಿದಾಗ ಮಿಂದುಬಿಡಬೇಕು..
ಒಮ್ಮೆ ಒನ್ನಾಳಿಗೆ ಎರಡು ಸರತಿ, ಕೆಲವೊಮ್ಮೆ ಮೂರ್ನಾಳಿಗೊಮ್ಮೆ
..
ದಿನಾ ಚಾಚೂ ತಪ್ಪದೇ ಮಾಡಿದ್ದೇ ಮಾಡೋರು ಸ್ತಿತ ಪ್ರಜ್ನರು.. !! ನೀವು ಹಾಗಲ್ಲ ಅಂತ ಬೇರೇ ಹೇಳಿಕೊಂಡಿರಿ..
ಇನ್ನು ಸೆಂಟು.. ಹಾಕ್ಕೋಬೇಕು ಅನ್ನಿಸಲ್ಲ ಅಂದರೆ ನಿಮಗೆ ಟ್ರಯ್ ಮಾಡಕ್ಕೆ ಹೆದರಿಕೆ.!!
ಒಂದು ವಾರ ಹಾಕ್ಕೊಳ್ಳಿ ಆಮೇಲೆ.. ದಿನಕ್ಕೆ ಎರಡು ಸರತಿ ಹಾಕ್ಕೊತೀರ.. 
ದಿಟವಾಗಲೂ... ಗೊಂದಲದಲ್ಲಿದ್ದೀರಿ...
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಛೆ ಛೆ... ವಿಷಯ ಎಲ್ಲೋಗೋ ಹೊಯ್ತಲ್ಲಪ್ಪ .....
ಸ್ನಾನದ ವಿಷಯ ಯಾಕೆ ಬಂತು ಅಂದ್ರೆ ... ಗಾಳಿಗೂ ವಾಸ್ನೇಗೂ ಸಂಬಂದ ಬೇಡ ಅಂತ.......ಹೋಗ್ಲಿ ಬಿಡಿ ಸುಮ್ನೆ ಬಂತು
..
!
ನಾನು ಅಶಿಸ್ತನ್ನೂ ಶಿಸ್ತಿನ ರೀತಿ ಕಪಾಡಿಕೊನ್ದಿರೋ ವ್ಯಕ್ತಿ! ಇಂತವನಿಗೆ ಇಂತ ಕಾಮೆಂಟಾ!! ...
>ಒಂದು ವಾರ ಹಾಕ್ಕೊಳ್ಳಿ
ಬೇಡ .. ನಾನು ನಾನೇ ... ಸಾಧ್ಯವಾದಷ್ಟೂ natural ಆಗೇ ಇರ್ತೀನಿ !
ಈ ವಿಸ್ಯ ಎಲೀಬ್ಯಾಡಿ ಮಹೇಶ್ ದ್ಯಾವ್ರು!
ಸವಿತೃ
ಉ: ಏಕೆ ಹೀಗೆ ಅನಿಸುತ್ತದೆಯೋ!
ಓಹೋ ’ನಾನು ನಾನೇ’ ಹಾಗಾದರೇ ನೀವು ’ಏನು’ ಅಂತ ಕೇಳಬೋದು. ಕೇಳಲ್ಲ..
ಒಳ್ಳೇ ’ನಾನು’ ಅನ್ನೋದನ್ನ ಅರೆದು ಕುಡಿದು, ತನ್ನ ಬಗ್ಗೆ ತನಗೆ ಸಂಪೂಣರ ಜ್ನಾನ ಇದೆ ಅನ್ನೋ ಮಾಯೋಗಿ..!
ನೇಜುರಲ್ಲಾಗಿ ಇರೋದು ಅಂತ ಬಟ್ಟೆ ಹಾಕ್ಕೊಳಲ್ವ? ಪ್ಲೇಟಲ್ಲಿ ಉಣ್ಣಲ್ವ? ಇಲ್ಲ ಕಂಪಯೂಟರ್ ಬೞಸಲ್ವ!!
ಸೆಂಟೂ ನೇಜುರಲ್ಲೇ, ನೇಜರ್ ಕೊಡ್ಡಿದ್ದೆ.
ನಮ್ಮಿಂದ ಏನೇನು ಹುಟ್ಟುಸಲು ಆಗದು... ಏನಿದ್ರೂ ಇರೋದನ್ನ ಹಂಗೆ ಹಿಂಗೆ ಮಾರ್ಪಾಡು ಮಾಡಿಕೋತೀವಿ..
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಮಹೇಶ್ ಯೋಗಿಗಳೇ...
ನಾನು ನಾನೇ... ಅಂದ್ರೆ ವೇದಾಂತ ಕ್ಕೆ ಯಾಕೆ ಹೋಗ್ತೀರಿ ಅಂತ ಅರ್ಥ ಆಗ್ಲಿಲ್ಲ. ವೇದಾನ್ತದಲ್ಲಿ ನಾನು ಅನ್ನೋ ಬಳಕೆಯ ರೀತಿ ನಾನು ಬಳಸಿದೆ ಅಂತ ಯಾಕೆ ಅನ್ಕೊಬೇಕು!. ನಿಮ್ಮ ಮನಸ್ಸು ಇನ್ನೂ ವೇದಾಂತದ ಮೋಹದಿಂದ ಹೊರಬಂದಿಲ್ಲ ಅಂತ ಅನ್ಕೊಬಹುದ?
ನಾನು ನಾನೇ ಅಂದ್ರೆ..... ಬೇರೆ.
"individuality" ಅನ್ನೋ ಕಾನ್ಸೆಪ್ಟ್ ಇಂಗ್ಲೀಷಿನಲ್ಲಿದೆ. ಅದರ ಬಗ್ಗೆ ನಾನು ಹೇಳಿದ್ದು.
ಸವಿತೃ
ಉ: ಏಕೆ ಹೀಗೆ ಅನಿಸುತ್ತದೆಯೋ!
ಮೊದಲೆ ಇಂಗಳೀಸಿನ ’ನಾನು ನಾನೇ’ ಅಂತ ಹೇಳಬೇಕಿತ್ತು..
ನನಗೆ ವೇದಾಂತ ಮೋದ ಇರಬೋದು.. ಅದರಿಂದ ಹೊರಗೆ ಇದ್ದೀನ ಒಳಗೆ ಇದ್ದೀನ ಅಂತ ನಾನೇ ತಲೆಗೆಡಿಸಿಕೊಂಡಿಲ್ಲ.. ಕೊಳ್ಳಲ್ಲ..
ನಿಮಗೆ ಅಶ್ಚು ನಿಶ್ಚಿತವೇ ಹೊರಬಂದಿಲ್ಲ ಅಂತ..!! 
ಅವೆಲ್ಲ ಗೊತ್ತಿಲ್ಲ ಸ್ತಿತಪ್ರಜ್ನದ ಬಗ್ಗೆ ಇಲ್ಲಿ ದೊಡ್ಡ ವಾದವಾಗಿ ನೀವು ನನ್ನನ್ನು ಬಯ್ದಾಡೋ ತನಕ ಬಿಡಲ್ಲ !!
ಹ ಹ ( ಪಟ್ಟು ಅಂದರೆ ಪಟ್ಟು ನಕ್ಶತ್ರಿಕಂದೇ ಪಟ್ಟು - ಸತ್ಯಹರಿಶ್ಚಂದ್ರ ಸಿನಿಮ ಡಯಿಲಾಗು
)
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಮಹೇಸ್,.. ಕೇರಳಕ್ಕೆ ಹೋಗ್ ಬಂದ್ರೇನಪ್ಪ.. ನೇಜುರಲ್, ನೇಜರ್, ಕೊಡ್ಡಿದ್ದೆ... ಮಲಯಾಳಿ ಕನ್ನಡ ಮಾತಾಡದಂಗಿದೆ..
ಉ: ಏಕೆ ಹೀಗೆ ಅನಿಸುತ್ತದೆಯೋ!
ಸ್ನಾನ ಮಾಡ್ಲಿ ಬಿಡಲಿ .. ವಾಸನೆ ಬರಲಿ , ಬಿಡಲಿ....ತಲೆ ಕೆಡಿಸಿಕೊಳ್ಳದೆ ಇರೋದೇ ಸಿತಪ್ರಜ್ನತೆ.
ಅವನಿಗೆ ಸ್ನಾನ / ವಾಸನೆ / ಶಂಟು ವಿಷಯವೇ ಅಲ್ಲ.
ಯಾರದ್ರೂ ಟ್ರೈ ಮಾಡಕ್ಕೆ ಕೊಟ್ರೆ "ಒಮ್ಮೆ" ಟ್ರೈ ಮಾಡಬಹುದು. ಅದನ್ನು ಬಿಟ್ಟು ಬ್ರಾಂಡ್ ಆಸೆಗೆ ಬಿದ್ದು , ಅದೆಷ್ಟೋ ದುಡ್ಡು ಕೊಟ್ಟು , ಹುಡಕಿ ಹುಡಕಿ ತಗೊಂಡು ಹಾಕಿಕೊಲ್ಲೋದಿದೆಯಲ್ವ... ಛೇ.. ನನ್ನಂತವ್ರಿಗಲ್ಲ.
ಸವಿತೃ
ಉ: ಏಕೆ ಹೀಗೆ ಅನಿಸುತ್ತದೆಯೋ!
ಸ್ತಿತ ಪ್ರಜ್ನೆ ಅಂದರೇ ಅದಲ್ಲ...
ಮಾಡಿದ್ದನ್ನೇ ಮಾಡಿಕೊಂಡು ಸ್ತಿತ.. ಪ್ರಜ್ನೆ ಸ್ತಿತವಾಗಿ ಇರೋದರಲ್ಲೇ ಬಿದ್ದುಕೊಂಡಿರತ್ತದೆ.. ಅವರಿಗೆ ಈಗಿನ ಪ್ರಜ್ನೆಯಿಂದ ಆಚೆ ಒಂದು ಪ್ರಜ್ನಾಸ್ತರ ಇದೆ ಅಂತ ಗೊತ್ತಿರಲ್ಲ.. ಗೊತ್ತಾಗಲ್ಲ, ಗೊತ್ತಾಗೋದು ಬೇಡವೂ ಬೇಡ...
ನೀವು ಹೇಳ್ತಾ ಇರೋದು ವಸ್ತು ಸ್ತಿರತೆ/ಸ್ತಿತ, ಆದರೆ ಸ್ತಿತಿಚಕ್ರದ ಸ್ತಿರತೆ/ಸ್ತಿತ ಇರಬೋದಲ್ಲ...
ನೀವೀಗ ಸ್ತಿತ, ಪ್ರಜ್ನ ಎರಡರ ಡೆಪೆನಿಶನ್ ಹೇಳಬೇಕಾಗಿದೆ... ಕಾರಣ ’ಸ್ತಿತಪ್ರಜ್ನೆ’ ಎಂದು ಬೞಸಿದೋರು ನೀವು.
.
.
.
ನನ್ ಶಾಲ್ಮಲೆಯ ಮೂಡು ಹಾಳು ಮಾಡಿದಕ್ಕೆ ರಿವೆಂಜು!
=====================================
ಮಾಯ್ಸ!
ಉ: ಏಕೆ ಹೀಗೆ ಅನಿಸುತ್ತದೆಯೋ!
ಭಾವಾವೇಶಕ್ಕೆ ಒಳಗಾಗದಿರೋದೆ ಸ್ತಿತಪ್ರಜ್ನತೆ.
ಸ್ತಿತ ಪ್ರಜ್ಞೆ ಅಂದ್ರೆ ಪ್ರಜ್ಞೆ ಸ್ತಿತವಾಗಿರುವುದು. ಕ್ರಿಯೆಯಲ್ಲ.
ಪ್ರಜ್ಞೆಯ ಸ್ತಿರತೆ ಬೇರೆ. ಕ್ರಿಯೆಯ ಅತ್ವ ವಸ್ತು ಸ್ತಿರತೆ ಬೇರೆ.
prajna (p. 185) [ prâgñá ] a. (relating to intellect, pra gñâ), intellectual; intelligent, wise, clever; m. wise or sensible man; intelligence asso ciated with individuality (phil.): -tva, n. wisdom, intelligence, cleverness, -mânin or -m-mânin, a. considering oneself wise.
ಸವಿತೃ