ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಚಾಗದ ಭೋಗದಕ್ಕರದ...

(’ಶ್ರೀಬಸವೇಶ್ವರರ ವಚನಗಳು’ ಈ threadನ ಮೂಲವಿಶಯ ಬದಲಾಯಿತು... )

ಕನ್ನಡಕಂದ ಅವರೆ, ’ಚಾಗ’ ಮತ್ತು ’ನೆರೆಹೊರೆ’ಗಳ ಕುರಿತು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ.

’ಚಾಗ’ವನ್ನು ನೆನೆಪಿಸುವ ಇನ್ನೊಂದು ಸಾಲು:
’ಚಾಗದ ಭೋಗದಕ್ಕರದ ಗೊಟ್ಟಿ...’
ಈ ಪದ್ಯ ’ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು...’ ಎಂದು ಮುಗಿಯುತ್ತದೆ. ಮರೆತು ಹೋಗಿದೆ. ಪಂಪನು ತನ್ನ ಬನವಾಸಿದೇಶದ ಅಭಿಮಾನವನ್ನು ಪ್ರಕಟಿಸುವ ಇದರ ಪೂರ್ಣಪಾಠ ಯಾರಿಗಾದರೂ ನೆನೆಪಿದ್ದರೆ ಉತ್ತರಿಸಿ.

ಪ್ರಭು ಮೂರ್ತಿ

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಚಾಗದ ಭೋಗದಕ್ಕರದ...

ಕರಿ ತವಳೆ's picture

ಪದ್ಯ ಸ್ವಲ್ಪ ನೆನಪಿದೆ. ಆದರೆ ಯಾವ ಸಾಲಲ್ಲಿ ಯಾವ ಪದಗಳು ಬರಬೇಕೋ ಸರಿಯಾಗಿ ನೆನಪಿಲ್ಲ.
ಇಲ್ಲಿ ಮೂರು ಸಾಲ್ಲಲ್ಲಿ ಬರೆದಿದ್ದೇನೆ, ಆದರೆ ಅದು ಇರೋದು ನಾಲ್ಕು ಸಾಲುಗಳು.

ಚಾಗದ ಭೋಗದಕ್ಕರದ ಗೊಟ್ಟಿಯಲಿಂಪಿನಿಂಪುಗಳ್ಗಾಗರಮಾದ ಮಾನಿಸರೇ ಮಾನಿಸರ್

ಅಂತವರಾಗಿ (??) ಪುಟ್ಟಲೇನಾಗಿಯುಮೇನೋ ತೀರ್ದಪುದೇ ತೀರ್ದೊಡಂ

ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್.

ಉ: ಚಾಗದ ಭೋಗದಕ್ಕರದ...

anivaasi's picture

ಚಾಗದ ಭೋಗದಕ್ಕರದ ^ಗೇಯದ^ಗೊಟ್ಟಿಯ...
ಗೇಯದ ಗೊಟ್ಟಿ - ಗಾಯನ ಗೋಷ್ಟಿ ಅಲ್ಲವೆ?
ಉಳಿದದ್ದು ನಿಮ್ಮಷ್ಟೇ ನನಗೂ ನೆನಪಿನಲ್ಲಿರುವುದು :)

ಉ: ಚಾಗದ ಭೋಗದಕ್ಕರದ...

kannadakanda's picture

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ-
ಳ್ಗಾಗರಮಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ-
ನಾಗಿಯೊಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್‍
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‍ ವನವಾಸಿ ದೇಶದೊಳ್‍||

ತೆಂಕಣಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ-
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ-
ಪಂ ಕೆಡೆಗೊಂಡಡಂ ಮಧುಮಹೋತ್ಸವಮಾದೊಡಮೇನನೆಂಬೆನಾ-
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ||

ಉ: ಚಾಗದ ಭೋಗದಕ್ಕರದ...

keshavamurali's picture

“ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನ
ಇಂಪುಗಳ್ಗೆ ಆಗರ ಆದ ಮಾನಿಸರೆ ಮಾನಸರ್;
ಅಂತವರಾಗಿ ಪುಟ್ಟಲ್ ಏನಾಗಿಯುಂ ಏನೋ ತೀರ್ದುಪುದೆ;
ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ,
ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್||"

ಅಂತ ಇರ್ಬೇಕು.

ಕೇಶವ ಮುರಳಿ

ಉ: ಚಾಗದ ಭೋಗದಕ್ಕರದ...

keshavamurali's picture

ಇದನ್ನು ನಾವು ಆರನೇ ತರಗತಿಯಲ್ಲಿ ಓದಿದ ಜ್ಞಾಪಕ. ಆವಾಗ ಒಂದಕ್ಷರಾನೂ ಅರ್ಥ ಆಗಿರಲಿಲ್ಲ !!! :-).

ಉ: ಚಾಗದ ಭೋಗದಕ್ಕರದ...

thewiseant's picture

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿ ನಿಂಪುಗ

ಳ್ಗಾರವಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ

ನಾಗಿಯುಮೇನೊ ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್‌

ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ

್‌ಎನ್. ಅಂಜನ್ ಕುಮಾರ್
thewiseant@yahoo.co.in

yahoo messenger ನಲ್ಲೂ ಲಭ್ಯ

ಉ: ಚಾಗದ ಭೋಗದಕ್ಕರದ...

cmariejoseph's picture

ಚಾಗದ (ತ್ಯಾಗದ)ಭೋಗದ (=) ಅಕ್ಕರದ(ವಿದ್ಯೆಯ) ಗೇಯದ (ಸಂಗೀತದ) ಗೊಟ್ಟಿಯ(ವಿಚಾರದ) ಅಲಂಪಿನ(ರಸಿಕತೆಯ) ಇಂಪುಗ
ಳ್ಗೆ(ಸೊಗಸುಗಳಿಗೆ) ಆಗರವಾದ (=) ಮಾನಿಸರೆ ಮಾನಿಸರ್‍ (ಸಾರ್ಥಕಜೀವಿ) ಅಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೇ (ಅಂತವರಾಗಿ ಹುಟ್ಟದೆ ಏನೋ ಆಗಿಬಿಟ್ಟರೆ ಆಯಿತೇ?) ತೀರದೊಡಂ ಮರಿದುಂಬಿಯಾಗಿ ಮೇಣ್‌
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ್ (ಬನವಾಸಿ ದೇಶವೆಂಬ ನಂದನದಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಆದರೂ ಹುಟ್ಟಬೇಕು)

ತಪ್ಪಿದ್ದರೆ ಕ್ಷಮಿಸಿ,

ಪ್ರೀತಿಯಿಂದ
ಸಿ ಮರಿಜೋಸೆಫ್

ಉ: ಚಾಗದ ಭೋಗದಕ್ಕರದ...

kannadakanda's picture

ತೀರ್ದಪುದೆ ತೀರದೊಡಂ ಅಂದರೆ ಹುಟ್ಟಲಿಕ್ಕಾಗುತ್ತದೆಯೋ ಆಗದಿದ್ದರೆ ಎಂದರ್ಥ.

ಉ: ಚಾಗದ ಭೋಗದಕ್ಕರದ...

kannadakanda's picture

ಹೞಗನ್ನಡ ಪದ್ಯ ಗದ್ಯಗಳನ್ನು ಬೞಸುವಾಗ ದಯವಿಟ್ಟು ’ಱ್’ ಮತ್ತು ’ರ್’ ಹಾಗೂ ’ೞ್’ ಮತ್ತು ’ಳ್’ ಗಳ ನಡುವಿನ ಬೇಱೆತನವನ್ನು ದಯವಿಟ್ಟು ಗಮನಿಸಿ. ಉದಾಹರಣೆಗೆ ಈ ’ಚಾಗದ ಭೋಗದಕ್ಕರದ’ ಮಱಿದುಂಬಿ ಸರಿ ಆದರೆ ಮರಿದುಂಬಿ ತಪ್ಪು.