ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಈ ಹೆಸರಿನ ಗೊಂದಲ ಯಾಕೋ ಅತಿ ಆಯ್ತು.....
ಇಂಟರ್‍ನೆಟ್ಟು ಬೞಸೋರು ಹೆಚ್ಚು ಬ್ರಾಹ್ಮಣರಿದ್ದ ಹಾಗೆ ಇದೆ ಅಂತ ನನ್ನ ಗೆಳೆಯ "ವಿಶ್ವೇಶ್ವರಯ್ಯ"ನ ಹೆಸರಿಡಿ ಅಂತ ಬ್ಲಾಗು ಮೇಲೆ ಬ್ಲಾಗು, ಕಮೆಂಟು ಮೇಲೆ ಕಮೆಂಟು ಬರೆಯೋದನ್ನ ನೋಡಿ ಕಿಸಿದ.
ಇನ್ನೂ ನಂದೆಲ್ಲಿ ಇಡ್ಲಿ ಅಂತ ’ಟಿಪ್ಪು’ ಹೆಸರು ಬೇರೆ ಬಂತು. ಟಿಪ್ಪು ಹೆಸರನ್ನ ಒಂದು ರಸ್ತೆಗೆ ಇಟ್ಟಿರೋದನ್ನೇ ನೋಡೋದು ಕಶ್ಟ. ಇನ್ನು ಏರ್‍ಪೋರ್ಟಿಗೆ ಇಡಕ್ಕೆ ... ಕಶ್ಟ ಕಶ್ಟ!!
ಇವೆಲ್ಲ ಬಿಟ್ಟಾಕಿ, ನೋಡಿದರೆ.. ’ಕೆಂಪೇಗೌಡನ’ ಹೆಸರೇ ಹೆಚ್ಚು ನೆಚ್ಚೋದು ಎಂದು ನನ್ನ ಅನಿಸಿಕೆ.
ಯಾಕೆ
೧) ಬೆಂಗಳೂರು ಒಂದು ಪಟ್ಟಣ ಎಂದು, ಬೆಂಗಳೂರನ್ನ ಕಟ್ಟಿದ್ದು ಕೆಂಪೇಗೌಡ ಎಂದು ನಮಗೆ ಗೊತ್ತು. ಅದೂ ಅಲ್ಲದೇ ಬೆಂಗಳೂರನ್ನ ಆಳಿದವರೆಲ್ಲ ಕೆಂಪೇಗೌಡನ ವಂಶದವರೇ ಹೆಚ್ಚು.
೨) ಇಂದು ಬೆಂಗಳೂರಿಗೆ ಎಲ್ಲೆಲ್ಲೆಂದಲೂ ಮಂದಿ ವಲಸೆ ಬಂದಿರಬೋದು, ಇನ್‌ಕ್ಲೂಡಿಂಗ್ ಹೀಗೆ ಬಂದ ಜಯನಗರ, ಎನ್ ಆರ್ ಕಾಲೋನಿ ಮುಂತಾದ ಬಡಾವಣೆಯಲ್ಲಿ ತುಂಬಿಕೊಂಡಿರುವ ಬ್ರಾಹ್ಮಣರು, ಕೋರಮಂಗಲದಂತಹ ನಾರ್ತಿಗಳು, ಬಿಟಿಎಂ ನ ರೆಡ್ಡಿಗಳು etc etc.. ಆದರೆ ಬೆಂಗಳೂರಿನ ಮೂಲದವರು ಎಂದು ಹೇಳಿಕೊಳ್ಳೋರು ಇಂದಿಗೂ ಗಂಗಮತ something ಗೌಡ ಒಕ್ಕಲಿಗರು ಮತ್ತು ತಿಗಳರು. ತಿಗಳರು ತಮಿಳು ಮೂಲದವರಾದುದರಿಂದ ಅವರನ್ನ ಬಿಟ್ಟಾಕಿ
, ಕನ್ನಡಿಗರಾದ ಗಂಗಾಮತ ಒಕ್ಕಲಿಗರೇ ನಮಗೆ ಲೆಕ್ಕ. ಕೆಂಪೇಗೌಡ ಈ ಜಾತಿಯವನು.
೩)ಕೆಂಪೇಗೌಡ ಅನ್ನೋದು ಅಪ್ಟಟ ಕನ್ನಡ ಒರೆ. ವಿಶ್ವೇಶ್ವರ ಅನ್ನೋ ಸಂಸ್ಕೃತವಾದರೆ, ಟಿಪ್ಪು ಉರ್ದು
( ಇದು ನನಗೆ ಬಲು ಇಂಪಾರ್ಟೆಂಟು)
೪) ತೆಂಕು-ಕರ್ನಾಟಕದಲ್ಲಿ ಒಕ್ಕಲಿಗರೇ ಹೆಚ್ಚು, ಅವರ ಜಾತಿಯವರ ಹೆಸರು ಇಡೋದು ಒಂದು ದೊಡ್ಡ ಜಾತಿಗೆ ಕೊಡುವ ಒತ್ತು.
ಕೆಂಪೇಗೌಡನ ಹೆಸರಿಗಾಗಿ ಚಳುವಳಿ ಮಾಡೋರಿಗೆ ಗೆಲುವಾಗಲಿ..!!

- Login or register to post comments
- 1250 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ವ್ಯಕ್ತಿಗೂ ಅವನ ಸ್ಠಳಕ್ಕೂ ಥಳಕು ಹಾಕಿ ಎಲ್ಲರಿಂದಲೂ ಉಗಿಸಿಕೊಂಡದ್ದಾಯಿತು.
ಈಗ ಜಾತಿಗೂ ಭಾಷೆಗೂ ನಂಟು ತರುವ ನಿಮ್ಮ ಗಮಾಡು ಬುದ್ಧಿಗೆ ಧಿಕ್ಕಾರವಿರಲಿ.
ವಿಶ್ವೇಶ್ವರಯ್ಯನವರು ಸಂಸ್ಕೃತದವರು ಹೇಗಾದರು? ಜಾತಿಯಿಂದ ಅವರನ್ನು ’ಸಂಸ್ಕೃತದೋರು’ ಎನ್ನುವುದಾದರೆ ಕನ್ನಡಕ್ಕಾಗಿ ಹೋರಾಡಿದ ’ಅ.ನ.ಕೃ’ ಮೊದಲಾದವರು ಯಾರು?
ರೆಡ್ಡಿಗಳು, ನಾಯ್ಡುಗಳು ಎಂದು ಹೆಸರಿದ್ದ ಮಾತ್ರಕ್ಕೆ ಅವರು ಕನ್ನಡಿಗರಲ್ಲವೇ? ಹೆಸರಾಂತ ನಟ ದಿ.ಲೋಕೇಶ್ ರವರೂ ನಾಯ್ಡು ಪಂಗಡಕ್ಕೆ ಸೇರಿದವರು. ಹಾಗೆಂದು ಅವರನ್ನು ಕನ್ನಡಿಗರಲ್ಲ ಎನ್ನಲು ಬರುತ್ತದೆಯೇ?
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಕನ್ನಡಿಗರಾದ ಗಂಗಾಮತ ಒಕ್ಕಲಿಗರೇ ನಮಗೆ ಲೆಕ್ಕ. ಕೆಂಪೇಗೌಡ ಈ ಜಾತಿಯವನು.
ನನಗೆ ತಿಳಿದಿರುವಂತೆ ಕೆಂಪೇಗೌಡರು ಮೂಲತಃ ತೆಲುಗು ನುಡಿಯ ಮೊರಸುನಾಡು ಒಳಪಂಗಡದವರು. ಇಲ್ಲಿ ಓದಿ.
http://www.vpaeast.org/history2.html
ಮೇಲಿನ ಲೇಖನದಲ್ಲಿ ಇದರ ಬಗ್ಗೆ ಇರುವ ಅಂಶಗಳು ನಿಜ ಎಂದು ನನ್ನ ನಂಬಿಕೆ. ಇದರ ಬಗ್ಗೆ ಬೇರೆ ನಿಜಾಂಶಗಳಿದ್ದರೆ ತಿಳಿಯಬಯಸುತ್ತೇನೆ. ಅಭಿಪ್ರಾಯಗಳು ಏನೇ ಇರಲಿ, ಅವುಗಳು ಮೂಲದಲ್ಲಿರುವ ಗ್ರಹಿಕೆ ಸಾಧ್ಯವಾದಷ್ಟೂ ಸತ್ಯವಾಗಿದ್ದರೆ ಒಳ್ಳೆಯದು.
ಈ ಲೇಖನದಲ್ಲಿ ಅವರ ಮನೆತನದವರು ಬೆಂಗಳೂರಿನಲ್ಲಿ ಕಟ್ಟಿಸಿದ ಗುಡಿಗಳ ಕೆರೆಗಳ ಯಾದಿಯೇ ಇದೆ. ಎಷ್ಟೋ ಕೆರೆಗಳ ಬಗ್ಗೆ ಇವತ್ತು "geography has become history" ಎನ್ನಬಹುದು ಅಷ್ಟೇ
ಅಂದಹಾಗೆ, ಯಲಹಂಕ ನಾಡಪ್ರಭುಗಳು ಬರೆಸಿದೆ ಶಾಸನಗಳಲ್ಲಿ ತೆಲುಗು ಶಾಸನಗಳೆಷ್ಟಿದ್ದವು ಮತ್ತು ಕನ್ನದ ಶಾಸನಗಳೆಷ್ಟಿದ್ದವು? ಇದರ ಬಗ್ಗೆ ಯಾರಿಗಾದರೂ ಏನಾದರೂ ಗೊತ್ತಿದ್ದರೆ ತಿಳಿಸಿ.
ಪ್ರಭು ಮೂರ್ತಿ
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಈ ವಾದವನ್ನೂ ನಾನೂ ಕೇಳಿದ್ದೀನಿ..
ತೆಲುಗರು ಹಕ್ಕಬುಕ್ಕರನ್ನೂ ತೆಲುಗು ಮೂಲದವರೆಂದು ವಾದ ಮಂಡಿಸಿಕೊಂಡಿದ್ದಾರೆ. ಅವರು ಕೃಷ್ಣದೇವರಾಯನೂ ತೆಲುಗನೆಂದು ತಿಳಿದುಕೊಂಡಿದ್ದಾರೆ. ಆದರೆ ಅದೆಲ್ಲ ದಿಟಕ್ಕೆ ದೂರವಾದ ಊಹೆಗಳೆಂದು ನಮ್ಮ ಪಂಡಿತರು ನೀಡಿರು ಪುರಾವೆಗಳು ತೋರಿವೆ.
ಒಂದು ಸಂಗತಿ, ಬೆಂಗಳೂರು ಪಕ್ಕದ ಅನಂತಪುರ ಜಿಲ್ಲೆಯನ್ನ ಆಳಿದವರು ಹೆಚ್ಚು ಕನ್ನಡದ ದೊರೆಗಳೇ!
ತೆಲುಗು ಅರಸಕುಳಗಳು ಬಱೀ ಬೆರಳೆಣಿಕೆಯಶ್ಟು! ಶತವಾಹನರನ್ನೂ ತೆಲುಗು ಮೂಲ ಎಂದರು ಅದೂ ಸಾಬೀತಾಗಿಲ್ಲ ಅಲ್ವ!!
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ವಿಶ್ವೇಶ್ವರಯ್ಯನವರಿಗೆ ಬ್ರಾಹ್ಮಣರನ್ನು ಬಿಟ್ಟು ಬೇರೆ ಜಾತಿಯವರ ಒಲವಿಲ್ಲವೇ?
ಇದು ನಿಜವಾದರೆ ಕಾರಣ ಹೇಳಿ...ನಾವು ತಿಳಿದುಕೊಳ್ಳೊಣ...
--ಶ್ರೀ
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಗುಱುಱಾಜ
www.kannadaguru.blogspot.com
ಕೇವಲ ಹೆಸರು ಸ೦ಸ್ಕೃತದ್ದು ಎ೦ದ ಮಾತ್ರಕ್ಕೆ ’ವಿಶ್ವೇಶ್ವರಯ್ಯ’ನವರ ಹೆಸರಿಡಬಾರದು ಎನ್ನುವುದು ತಪ್ಪು ಎನ್ನುವುದು ನನ್ನ ಅನಿಸಿಕೆ.ವಿಶ್ವೇಶ್ವರಯ್ಯನವರೂ ರಾಜ್ಯಕ್ಕೆ ಕೆ೦ಪೆಗೌಡರಷ್ಟೇ ದುಡಿದಿದ್ದಾರೆ.ಅವರಷ್ಟೇ ಪ್ರಸಿದ್ಧಿ(ಅವರಿಗಿ೦ತ ಸ್ವಲ್ಪ ಜಾಸ್ತಿ ಎನ್ನಬಹುದು).ಇನ್ನು ಕೆ೦ಪೆಗೌಡರನ್ನು ’ಗೌಡರು’ ಅಥವಾ ವಿಶ್ವೇಶ್ವರಯ್ಯನವರನ್ನು ’ಬ್ರಾಹ್ಮಣ’ರು ಎ೦ದೆನು ಯಾರೂ ಗುರುತಿಸುವುದಿಲ್ಲ.ಅವರವರ ಸಾಧನೆಯಿ೦ದ ಈ ಮೇಧಾವಿಗಳ ಗುರುತಷ್ಟೇ.ಯಾರ ಹೆಸರಿಟ್ಟರೂ ತಪ್ಪಿಲ್ಲ.(ಕನ್ನಡಿಗರದು ಮಾತ್ರ)
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಓ, ಈ ಯಪ್ಪನ ವರಸೆ ನೋಡಿ.... ಇಸ್ಟು ದಿನ ವಿಶ್ವೇಶ್ವರಯ್ಯ ನೋರನ್ನ ಮೈಸೂರಿಗೆ ಮಾತ್ರ ಅಂತಿದ್ದ. ಈಗ ಬ್ರಾಮಣರಿಗೆ ಮಾತ್ರ ಅಂತೌನೆ. ನಾಚ್ಕೆ ಇಲ್ಲ. ಏನು ಅಯ್ನೋರು ಕಟ್ಟಿದ ಕನ್ನಂಬಾಡೀಲಿ ಬರೀ ಬ್ರಾಮಣ್ರಿಗೆ ನೀರು ಅಂದಿದ್ರಾ? ಭದ್ರಾವತಿ ಕಾರ್ಖಾನೆಲ್ಲಿ ಬ್ರಾಮಣ್ರಿಗೆ ಮಾತ್ರ ಕೆಲ್ಸ ಅಂದಿದ್ರಾ? ವಿಶ್ವೇಶ್ವರ ಅಂತ ಸಂಸ್ಕೃತ ಹೆಸ್ರು ಇಟ್ಟಿದ್ದಕ್ಕೆ ಅವರು ಕನ್ನಡಿಗರಲ್ವಾ? ಈ ವಯ್ಯನ ಮಹೇಸ ಅನ್ನೋ ಹೆಸ್ರು ಅದ್ಯಾವ ಬಾಸೆದೋ? ಇವನು ಮಾತ್ರ ಅಪ್ಪಟ ಕನ್ನಡಿಗನಂತೆ!
ಎಲ್ಲಾ ವಿಸ್ಯದಲ್ಲೂ ಜಾತಿ ತರೋ ಇಂತವ್ರಿಂದ, ಅತಿ ಅತಿಯಾಗಿ ಆಡೋ ಇಂತ ಭಾಷಾ ದುರಭಿಮಾನಿಗಳಿಂದಲೇ ಇವತ್ತು ನಿಜವಾದ ಕನ್ನಡ ಪರ ಹೋರಾಟಗಳಿಗೂ ಬೆಲೆ ಇಲ್ದಂಗೆ ಆಗಿರೋದು.
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ನಿಂಗೆ ಹೇಳಕ್ಕೆ ಆಗಲ್ಲ. ಹೋಗಲೋ
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಯಾವಾಗ ಒಬ್ಬ ಮನುಷ್ಯ, ತನ್ನ ಜಾತಿ, ಧರ್ಮ ದೊಡ್ಡದು ದೊಡ್ಡದು ಅ೦ತ ಬಾಯಿ ಬಿಡ್ತಾ ಇರ್ತಾನೋ, ಅವನಿಗೆ ತಲೆ ಕೆಟ್ಟಿದೆ ಅ೦ತ ಅರ್ಥ. ಹಾಗ೦ತ ಬೆಂಗಳೂರು ಏರ್‍ಪೋರ್ಟಿಗೆ ಕೆ೦ಪೇಗೌಡರ ಹೆಸರು ಇಡ್ಬಾರ್ದು ಅ೦ತ ಲೆಕ್ಕ ಅಲ್ಲ ನನ್ನದು. ಯಾವ ಕನ್ನಡದ ಮೆಧಾವಿಗಳ ಹೆಸರಿಟ್ರೂ ಸೂಕ್ತ. ತಪ್ಪೇನಿದೆ ಬ್ರಾಹ್ಮಣರು Internet ನೋಡೋದ್ರಲ್ಲಿ? ಬೇರೇ ಯಾರು ನೊಡಲ್ವ ಮಹೇಶ್ ರವರೆ?
Request to webmaster: Hope moderators of sampada.net need to see that this blog does not belong any kinda spreading of hatred among kannada speaking communities. Please make sure that this kind of article originating does not repeat again.
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಹರಿ ಇವರ ಅರೆ ಕಮೆಂಟು ಕಿತ್ತಾಕು...
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಸರಿಯಾದ ಮಾತು ಮಹೇಶರವರಿಂದ.
ಶ್ರೀರಂಗಪಟ್ಟಣದಲ್ಲಿ ಜೀವಾನೇ ಕೊಟ್ಟ ಟಿಪ್ಪು ಸುಲ್ತಾನ್ ಮುಸಲ್ಮಾನ ಬೇಡ ಅನ್ನುವಂಗೇನೆ, ತಲೆತಲಾಂತರದಿಂದ ಬೆಂಗಳೂರಲ್ಲೇ ಇರೋ ತಿಗಳರು ತಮಿಳರು ಬೇಡ ಅನ್ನುವಂಗೇನೆ, ಮೋಕ್ಷಗುಂಡಂ ವಿಶ್ವೇಶ್ವರ ಅನ್ನೋರು ತೆಲುಗರು ಅದಕ್ಕೆ ಬೇಡ ಅಂತಲೂ ಅನ್ನಬೋದು. ಕೆಂಪೇಗೌಡಾ ಕೀ ಜೈ. ಗೌಡರಿಗಾದರೂ ಖುಷಿಯಾಗ್ತದೆ.
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ನೆನಪಿಗಿಗೆ ಬಂತು ನೋಡಿನಿನ್ನೆ ಕನಸ್ನಲ್ಲಿ ಅದೇ ನಮ್ಗೌಡ್ರು ಬಂದ್ಬಿಡೋದೆ. [ಕೆಂಪೇ ಗೌಡ್ರು] ಅವ್ರ್ಹೇಳಿದ್ದು ಒಳ್ಳೆ ಘಂಟೆಹೊಡ್ದಂಗಿದೆ. ಅವ್ರು ಹೇಳಿದ್ದು ಈಷ್ಟು. "ನೋಡಪ್ಪ. ನಾನು ಜಾಗ ನೋಡ್ದೆ. ನೀರು-ನಿಡಿಯೆಲ್ಲಾ ಚೆನ್ನಾಗಿತ್ತು. ಹವ ತಂಪಾಗಿತ್ತು. ವಾಸಕ್ಕೆ ಸರ್ಯಾಗಿದೆ ಅನ್ನೋದೆ ಆದಿನ ನನ್ನ ಗುರಿೆ ಆಮೇಲೆ ನನ್ನ ಹೆಸರು, ನಗರಸಭೆಗಗೆ ಇಟ್ರು. ಆದ್ರು ಒಂದ್ ವ್ಯಥೆ ಅಂದ್ರೆ ಯಾರೂ ಬಾಯ್ತುಂಬಾ ಬೆಂಗಳೂರು ಅಂತಾ ಕರ್ಯೋರೆ ಇಲ್ಲಲ್ಲಪ್ಪ. ಅದ್ರ ಬಗ್ಗೆ ಯಾರ್ಗೂ ಚಿಂತೇನೆ ಇಲ್ವಲ್ಲ. ವಿಮಾನ್ ನಿಲ್ದಾಣಕ್ಕೆ ನನ್ನಹೆಸ್ರೇ ಇಡೀ ಅಂತ ನಾನೇನ್ಹೇಳಿಲ್ಲಪ್ಪ. ಅದನ್ಕಟ್ಕಂಡ್ ನಾನ್ ಅತ್ತೇನೊ ಮಾರಾಯ ! ಮೊದ್ಲು ಎಚ್. ಎ. ಎಲ್. ಸ್ಥಾಪ್ನೆ ಮಾದ್ದ್ರಲ್ಲ ಆ ಮಹಾನ್ಭಾವ ಅವ್ರ್ ಹೆಸರ್ನ್ಯಾಕ್ ಇಡ್ಬಾರ್ದು ? ಅವರ್ನ ಮಂಡ್ಯದ್ ಜನ ಮುದ್ದೆ-ಸಾರು ತಿನ್ನೋವಾಗೆಲ್ಲಾ ಮೊದ್ಲು ನೆನಸ್ತಿದ್ರಪ್ಪ. ಈಗೆಂಗೋ ತಿಳೀದು " ಅಂತ ಹೇಳಿ ಅಂಗೇ ಗಾಳಿಲಿ ಕರ್ಗೋದ್ರಪ್ಪ !
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಹೇಳಾಕೆ ಮರೆತೆ - ನೀವು ಇಲ್ಲಿ ಯಾರನ್ನ ಬೇಕಾರೂ ಬಾಯ್ತುಂಬ ಬೈಬೋದು... ಬಿರಾಮ್ರ ತಂಟೆಗೆ ಬಂದರೆ ಮಾತ್ರ ಗೊಣಗಾಟ, ರೊಚ್ಚಾಟ ಸೂರು ಮುಟ್ತದೆ...
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಏರ್ಪೋಟ್ಗೆ ತಿಳಿಗೋಳ-ಮಹೇಶ ಅಂತ, ಸಂಪದ ಕಂಡ ದೊಡ್ಡ ಜಾತಿವಾದಿಗಳ ಹೆಸರೇ ಇಡೋಣ..
-ವರುಣ ಭಟ್
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಸಾರ್..
ಇದು ನನ್ನ ಅನಿಸಿಕೆ ಆಗಿದ್ರೆ ಇದನ್ನ ಬರಹ/ಲೇಖನ ಎಂದು ಹಾಕ್ತಾ ಇದ್ದೆ... ಚರ್ಚೆಗೆ ಹಾಕಿದ್ದು ಅನಿಸಿಕೆ-ಅಭಿಪ್ರಾಯಗಳ ಕೂಡಣೆಗೆ ತಾನೆ.
ನಾನು ಬರೆದಿರೋದರ ತೆಱ ಯೋಚಿಸೋ ಮಂದಿ ಇಲ್ವೇ ಇಲ್ವ!?
ಸಂಗತಿಯ ಬಗ್ಗೆ ನಿಮ್ಮ ಅನಿಸಿಕೆ ಹೇಳಿ. ನಾನು ಒಂದು ಸಂಗತಿಯನ್ನ ಚರ್ಚೆಗೆ ತಂದರೆ, ಅದೇ ನನ್ನ ಒಳನಿಲುವು ಎಂದು ಅಂದುಕೊಳ್ಳೋದು ಸಯ್ತವೇ?
ತಿಳಿಗೊಳ ಮತ್ತು ನಂನಂನು ಜಾತಿವಾದೀ ಎಂದು ಕರೆದುದರಿಂದ ನೀವು ಜಾತ್ಯಾತೀತವಾದಿಗಳಾಗುವುದಿಲ್ಲ..!!
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ನಾನು ಇಲ್ಲಿ ವರೆಗೆ ಕೆಂಪೇಗೌಡ ಅಥವ ವಿಶ್ವೇಶ್ವರಯ್ಯ ಯಾವ ಜಾತಿ ಅಂತ ಯೋಚಿಸಿಲ್ಲ.. ತಿಳಿದುಕೊಳ್ಳೋ ಪ್ರಯತ್ನಾನೂ ಮಾಡಿಲ್ಲ..
ನೀವು ಚರ್ಚೆಗೆ ಹಾಕಿದ್ದ ವಿಷಯ ಹೇಗಿತ್ತು ಅಂದ್ರೆ, ಕೆಂಪೇಗೌಡ ಈ ವರ್ಗಕ್ಕೆ ಸೇರಿದವರು ಅದಕ್ಕೆ ಅವರ ಹೆಸರಿಡಬೇಕು, ನಿಮಗೂ ಬೇರೆ ಯಾವುದಾದರೂ ಜಾತಿಯವರು ಗೊತ್ತಿದ್ರೆ ಹೇಳಿ ಅನ್ನೋ ಹಾಗೆ..
-ವರುಣ ಭಟ್
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಹವುದು ರೀ ನಾನು ಹಾಗೇ ಹಾಕಿದ್ದು... ಅದನ್ನೇ ಚರ್ಚೆ ಮಾಡಣ ಅಂತ..
ಕೆಂಪೇಗೌಡರು ಒಕ್ಕಲಿಗರು ಅನ್ನೋದು ಒಂದು ದೊಡ್ಡ ಕಾರಣ ಕೂಡ, ಅವರ ಹೆಸರು ಇಡುವ ಒತ್ತಾಯಕ್ಕೆ!!
ಇದು ಬಱೀ ನನ್ನ ಅನಿಸಿಕೆಯಲ್ಲ.. ಮೊನ್ನೆ ಯಲಹಂಕ ರೋಡಲ್ಲಿ ರ್‍ಯಾಲಿ ನಡೀತಲ್ಲ.. !!
=========================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಕನ್ನಡವೇ ಜಾತಿ, ಕನ್ನಡವೇ ಧರ್ಮ ಅನ್ನೋರಿಂದ ಇಂತ ಚರ್ಚೆ ನೆಡೆಯೋದಕ್ಕೆ ಸಾಧ್ಯ ಇಲ್ಲ ಕಣ್ರೀ.
ಅದೇನಿದ್ರೂ ಅವರ ಜೊತೆ ಇದೀವಿ ಅಂಅ ಹೇಳಿಕೊಂಡು ಗಬ್ಬೆಬ್ಬಿಸುವ ’ಕೆಸರಿನಕೊಳ’ದ ಮನಸ್ಸುಗಳಿಂದ ಮಾತ್ರ.
ಉದಾಹರಣೆಯೇ ಈ ನಿಮ್ಮ ಬರಹ.
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಮಳ್ಳ....
ನೇರವಾಗಿ ಹೇೞೋ...
ಯಾರು ಯಾರ ಜೊತೆ ಏನು.. ಕೆಸರುಕೊಳ ಮಣ್ಣಮಸಿ..
ಹೆದರ್ಕೆನಾ?
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಈ ಇಬ್ಬರಲ್ಲಿ ಯಾರ ಹೆಸರು ಇಟ್ರೂ ಕನ್ನಡಿಗರಿಗೆ ಖುಷೀನೇ.. ಇದರಿಂದ ಜಾತಿಯನ್ನು ಹೊರಗಿಡೋಣ..
ನಾವು ಎಷ್ಟೇ ಹಾರಾಡಿದ್ರೂ, ಕೊನೆಗೆ ರಾಜಕೀಯ ಪಕ್ಷದವರು ಅವರಿಗೆ ಲಾಭ ಆಗೋ ಥರ ಹೆಸರು ಇಡ್ತಾರೆ. ಅದು ಈ ಇಬ್ಬರ ಹೆಸರು ಅಲ್ಲದೇನೂ ಇರಬಹುದು..
-ವರುಣ ಭಟ್
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
"ಇದರಿಂದ ಜಾತಿಯನ್ನು ಹೊರಗಿಡೋಣ.." ಅಲ್ಲ ಬಟ್ರೇ
ನೀವ್ ಇಡಣ ಅಂತೀರ. ಆದ್ರೆ ಆಯ್ತದ?
"ಕೊನೆಗೆ ರಾಜಕೀಯ ಪಕ್ಷದವರು ಅವರಿಗೆ ಲಾಭ "
ಇನ್ನೂ ರಾಜಕೀಯ ಎಂದು ಜಾತಿ ಬಿಟ್ಟು ಇದ್ದಾತು. ಜಾತಿ ಹೆಸರು ಹೇಳದ ಒಂದು ಪಾರ್ಟಿ ಅಯ್ತ? ರೋಶನ್
ಮಾಡಣ, ಇಡಣ, ನೋಡಣ.. ಣ ಣ ಣ ಗಳಿರಲಿ.. ಹಂಗೆ ಅಯ್ತಾ, ಆಗ್ತಯ್ತಾ,, ಆಗಿತ್ತಾ?
ನೀವ್ ಎಗಡೆ ಹಂಗಲ್ಲ, ಶಾಣ್ಯರಿದ್ದೀರಿ ಅಂತ ಹೇೞ್ತೀನಿ.. ’ಹಾಗೆ ಇರಬೇಕು, ಹೀಗೆ ಮಾಡಣ,’ ಇವೆಲ್ಲ ಮರಳು, ಭ್ರಮೆ..
’ಹೀಗೆ ಅಯ್ತೆ, ಹೀಗೆ ಇರ್ತಯ್ತೆ’ ಇದನ್ನ ತಿಳಿಕೋಬೇಕಲ್ರ!
ಇಲ್ಲಿ ನೋಡಿ ರೋಶನ್ ನೇತ್ಲ ಅವರ ರೀತಿ ರಿವಾಜು!
http://sampada.net/forum/5456
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಬಹುತೇಕ ಸಂಪದಿಗರಿಗೆ ಜಾತಿ ಬಗ್ಗೆ ಅಂಥಾ interest ಇಲ್ಲ ಅಂದುಕೊಳ್ತೀನಿ.. ಹಾಗಾಗಿ, ನಿಮ್ಮ ಚರ್ಚೆಯ ವಿಷ್ಯಕ್ಕೆ ಒಳ್ಳೆ ಉತ್ತರ ಸಿಗೋದು ಕಷ್ಟ...
ನೀವು, ಕೆಂಪೇಗೌಡ ಒಕ್ಕಲಿಗರು ಮತ್ತು ವಿಶ್ವೇಶ್ವರಯ್ಯ ಬ್ರಾಹ್ಮಣರು ಎಂದು ಸಂಶೋಧನೆ ಮಾಡಿದ ಹಾಗೆ, ಎಲ್ಲ ಜಾತಿಯ ಪ್ರಮುಖ ವ್ಯಕ್ತಿಗಳ ಹೆಸರನ್ನು short list ಮಾಡಿ.. ಇದರಲ್ಲಿ ಯಾರ ಹೆಸರು ಇಡೋದು ಅಂತ ಚರ್ಚೆ ಮಾಡಿದ್ರಾಯ್ತು.. ಯಾಕೆ ಅಂದ್ರೆ ನಮ್ಮ ಚರ್ಚೆ ಮೇಲೇನೆ ಏರ್ಪೋರ್ಟ್ ಹೆಸರು ಡಿಸೈಡ್ ಆಗೋದು..
-ವರುಣ ಭಟ್
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
"ಯಾಕೆ ಅಂದ್ರೆ ನಮ್ಮ ಚರ್ಚೆ ಮೇಲೇನೆ ಏರ್ಪೋರ್ಟ್ ಹೆಸರು ಡಿಸೈಡ್ ಆಗೋದು.. "
ಸದ್ಯ ಈಗಲಾದ್ರೂ ಗೊತ್ತಾಯ್ತಲ್ಲ.!
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಎಚ್ ಡಿ ದ್ಯಾವೇಗೋಡ್ರ ಎಸ್ರು ಇಟ್ರೆ ಎಂಗೆ?
"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಜಾತಿ, ಜಾತಿ, ಜಾತಿ, ಸಾಕಾಗೋಗಿದೆ.
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಈ ಜಾತಿ , ಜಾತಿ ಅಂತ ಹೇಳೋದನ್ನು ನಿಲ್ಲಿಸಿ ಮಾರಾಯ್ರೆ...ಅವರಿವರ ಜಾತಿ ನೋಡ್ಕೊಂಡು ಹೊಗಳುವುದನ್ನು ನಿಲ್ಲಿಸಿ. ಕಾರ್ಯ ನೋಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿ.
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ವ್ಯಕ್ತಿಗಳ ಹೆಸರನ್ನು ತೆಗೆದುಕೊಂಡು ಕಚ್ಚಾಡುವುದನ್ನು ನಾವು ಮೊದಲು ಬಿಡಬೇಕು. ಈಗ ಹೆಸರಿಸುತ್ತಿರುವ ಕೆಂಪೇಗೌಡರಾಗಲೀ, ವಿಶ್ವೇಶ್ವರಯ್ಯನವರಾಗಲೀ ಹೆಸರು ಗಳಿಸಿಕೊಳ್ಳಲು ಅಥವಾ ಉಳಿಸಿಕೊಳ್ಳಲು ಜನ/ದೇಶ ಸೇವೆ ಮಾಡಿದವರಲ್ಲ. ಅವರದು ನಿಸ್ವಾರ್ಥ ಸೇವೆ. ಆದರೆ ಭೌತಿಕವಾಗಿ ಅವೆಲ್ಲವೂ ಕೇವಲ ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗಿದೆ. ಆದರೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಎಲ್ಲಾ ಜನತೆಗೆ ಸೇರಿದೆ. ಅಲ್ಲಿ ಹೂಡಿರುವ ಬಂಡವಾಳ ಕರ್ನಾಟಕದ ಜನತೆಯದು. ಅಲ್ಲಿ ಬರುವ/ಹೋಗುವ ಜನರು ಬೆಂಗಳೂರಿಗೆ ಮಾತ್ರ ಸೀಮಿತರಲ್ಲ. ಹಾಗಿರುವಾಗ ಆ ವಿಮಾನ ನಿಲ್ದಾಣಕ್ಕೆ "ಅಂತರ ರಾಷ್ಟ್ರೀಯ ಕರ್ನಾಟಕ ವಿಮಾನ ನಿಲ್ದಾಣ" ಎಂದೇಕೆ ಹೆಸರಿಸಬಾರದು? ಬೆಂಗಳೂರು ಕರ್ನಾಟಕದ ಒಂದು ಭಾಗ ಮಾತ್ರ. ಆದರೆ ಹೊರದೇಶಗಳಲ್ಲಿ ಬೆಂಗಳೂರಿಗಿರುವ ಹೆಸರು ಕರ್ನಾಟಕಕ್ಕಿಲ್ಲ. ಈ ಅನ್ಯಾಯ ನೀಗಿ, ಈ ರೀತಿಯಿಂದಲಾದರೂ ಕರ್ನಾಟಕದ ಹೆಸರು ವಿಶ್ವದಲ್ಲೆಡೆ ಬೆಳಗಲಿ. ಜಾತಿ, ಹೆಸರು, ಮತಗಳ ಹೆಸರಿನಲ್ಲಿ ಹೊಡೆದಾಡುವುದು ನಿಲ್ಲಲಿ ಎಂದೇ ನನ್ನ ಅನಿಸಿಕೆ.
ಎ.ವಿ. ನಾಗರಾಜು
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ತಾನು ತಿಳ್ಕೊಂಡಿರೋಸ್ಟು ಬೇರೆ ಯಾರು ತಿಳ್ಕೊಂಡಿಲ್ಲ ಅಂತ ಅಂದುಕೊಂಡು ಬರೆದರೆ ಹೀಗೆಲ್ಲ ಆಗುತ್ತೆ!!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಸಾರ್..
ನಾನೇ ತಿಳಿಕೊಂಡಿರೋದು ಎಂದುಕೊಂಡಿದ್ರೆ, ಇದನ್ನ ಬರಹ/ಲೇಖನ ಎಂದು ಹಾಕ್ತಾ ಇದ್ದೆ... ಚರ್ಚೆಗೆ ಹಾಕಿದ್ದು ಅನಿಸಿಕೆ-ಅಭಿಪ್ರಾಯಗಳ ಕೂಡಣೆಗೆ ತಾನೆ.
ನಾನು ಬರೆದಿರೋದರ ತೆಱ ಯೋಚಿಸೋ ಮಂದಿ ಇಲ್ವೇ ಇಲ್ವ!
ಸಂಗತಿಯ ಬಗ್ಗೆ ನಿಮ್ಮ ಅನಿಸಿಕೆ ಹೇಳಿ. ನಾನು ಒಂದು ಸಂಗತಿಯನ್ನ ಚರ್ಚೆಗೆ ತಂದರೆ, ಅದೇ ನನ್ನ ಒಳನಿಲುವು ಎಂದು ಅಂದುಕೊಳ್ಳೋದು ಸಯ್ತವೇ?
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಮತ್ಯಾಕ್ರಿ.. ತಮಿಳ..ಬಿಟ್ ಹಾಕಿ. ಊರ್ದು, ಬ್ರಾಮಣ,ಗೌಡ.. ನಂಗೆ ಮುಖ್ಯ ಅಂತೆಲ್ಲ ಬರೆದಾಕಿದ್ರಿ? ಚರ್ಚೆ ಮಾಡೊ ರೀತಿನ ಇದು?
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಆಯ್ತು ಅಯ್ನೋರೆ..
’ಚರ್ಚೇ ಮಾಡೋ ರೀತಿ’ ಬಗ್ಗೆ ಒಂದು ಚರ್ಚೆ ಸುರು ಹಚ್ಚಿ.
ಏನಪ್ಪ ಇದು.. ನಿಮಗೆ ಯಾವ ಹೆಸ್ರು ಬೇಕು ಹೇೞ್ರಲ!!
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಯಾವನೇ ವ್ಯಕ್ತಿ ಹೆಸರು ಇಟ್ಟುಕೊಂಡು ಕಿತ್ತಾಡೊಕಿಂತ "ಶ್ರೀಗಂಧ" "ಚಿಗುರು" "ಕಸ್ತೂರಿ" ಅಂತ ಹೆಸ್ರಿಡೊದು ಒಳ್ಳೆದು ಅನ್ಸುತ್ತೆ.
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಶ್ರೀಗಂಧ ಅನ್ಬೇಡ್ರಿ...ಸಂಸ್ಕೃತ ಅಂತಾರೆ ಇವ್ರು...
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಅಯ್ಯೋ, ಅದ್ಕೂ ಶುರು ಮಾಡ್ಕತವೆ ಆಮೇಲೆ. ಶ್ರೀಗಂಧ...ಬ್ರಾಮಣ್ರು ಹಚ್ಕಳದು... ಕಸ್ತೂರಿ ಇನ್ಯಾವ್ದೋ ಜಾತಿಯವ್ರದ್ದು.... ಅಂತ.
****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ರೀ ಅದನ್ನೇ ಪ್ರೆಶ್ನೆಗೆ ತಕ್ಕ ಉತ್ರ ಅಂತ
" ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?"
ಉತ್ರ : ಬೆಂಗಳೂರು ಏರ್‍ಪೋರ್ಟಿಗೆ ಕೆಂಪೇಗೌಡರ ಹೆಸರಿಡಬಾರದು. ಏಕೆಂದರೆ ಅದು ಒಬ್ಬ ವೆಕ್ತಿಯ ಹೆಸರು. ಒಬ್ಬ ವೆಕ್ತಿಯ ಹೆಸರು ಇಟ್ಟರೆ ಮಂದಿ ಕಿತ್ತಾಡ್ತಾರೆ.
ರೀತಿ ಇಂಪಾರ್ಟೆಂಟು ನೋಡಿ..

=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
""ಸಂಪದ"" ಆಗುತ್ತಲ್ರೀ...........!
"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಮಹೇಶ್,
ಎಲ್ರುನ್ನೂ ಸುಮ್-ಸುಮ್ನೆ provoke ಮಾಡಿ - ಉರಿಸಿ, ಮಜ ತಗಳ್ಳದು ಹೆಂಗೆ ಅಂತ ನಿಮ್ಮಿಂದ ಕಲಿಬೇಕಾಗಿದೆ, ಪ್ರತಿಕ್ರಿಯೆಗಳ್ನ ಓದಿ ತುಂಬಾ ಮಜಾ ಬಂತು.
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ನಿಮಗೆ ಮಜಾ ಬಂತಲ್ಲ ಅದಕ್ಕೆ ನಂಗೆ ನನ್ನಿ/thanks ಹೇಳರಿ.
ನೋಡಿ ನಾನು ಯಾರನ್ನಾದ್ರು ಬೆರಳು ಮಾಡಿ ಉರಿಸಿದ್ನ? ಹೀಗೆ ಜೆನರಲ್ಲಾಗೇ ಬರೆದಿರೋದಲ್ವ..!!
ಕಲಿತಿರಾ?
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಓಹೊ!! ಇದು ಎಲ್ಲರನ್ನು ಹಳ್ಳಕ್ಕ್ ಬೀಳ್ಸೊ ಸಮಾಚಾರನೇನು? ಸರಿ ಸರಿ!!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಎಲ್ಲೋ ಓದಿದ್ದು . ಯಾರೋ ಸಲಹೆ ಮಾಡಿದ್ರು ಹೊಸ ವಿ. ನಿ. ಗೆ ಗಂದದ ಗುಡಿ ಹೆಸರು.ಚೆನ್ನಾಗಿದೆಯಲ್ಲವ. ನಾನು ಹೆಸರಿನ ಬಗೆ ತಲೆ ಕೆಡಿಸಿಕೊಂಡವನಲ್ಲ ಆದರೆ ಈ ಹೆಸರು ಕೇಳಿದಾಗ ಎಶ್ಟು ಚೆನ್ನಾಗಿದೆಯಲ್ಲ ಎಂದು ಅನಿಸಿತು
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಹೆಸರು ಯಾರದ್ದಾದರೂ ಆಗಲಿ . ಅಂದುಕೊಂಡ ಕಾರ್ಯ ಸರಿಯಾಗಿ ಆದರೆ ಸಾಕು
ಸರ್ ಎಂ ವಿ ಅವರ ಹೆಸರೇ ಸೂಕ್ತ ಯಾಕೆಂದರೆ ಕೆಂಪೇಗೌಡರ ಹೆಸರು ಈಗಾಗಲೇ ಎಲ್ಲೆಡೆ ರಾರಾಜಿಸುತ್ತಿದೆ.
ಅದು ಸರಿ ಬ್ರಾಹ್ಮಣರನ್ನ ಯಾಕೆ ಎಳೆದು ತರ್ತೀರಾ ಮಹೇಶ್?
http://thereda-mana.blogspot.com/
ರೂಪ
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ನಾನ್ ಬ್ರಾಹ್ಮಣರನ್ನ ಎಳೆದು ತಂದಿಲ್ಲ.. ಅವರೇ ಬಂದವರೆ!
=====================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ನಾನು ಜಾತಿ ವಿಚಾರ ಮಾತಾಡಂಗಿಲ್ಲಾ, ಆದ್ರ ನನಗನಸ್ತದ ಬೆಂಗಳೂರು ಈಗ ಪೂರಾ ಕರ್ನಾಟಕದ್ದ ರಾಜಧಾನಿ ಅದ,ಅಂದ್ರ ಪೂರಾ ಕರ್ನಾಟಕದ್ದು ಮಂದಿನಾಗ ಒಬ್ಬರ ಹೆಸರಿಡಬೇಕ.ನೀವು ಯಾವಾಗರೆ ನಮ್ಮ ಹೈದರಾಬಾದ್ ಕರ್ನಾಟಕದ ಬಗ್ಗೆ ವಿಚಾರ ಮಾಡಿರೇನು?
ನಿಮ್ಮ ಮಾತ್ ಕೇಳಿದ್ರ ಕರ್ನಾಟಕ ಅಂದ್ರ ಬೆಂಗಳೂರ, ಮೈಸೂರ ಭಾಳ ಆದ್ರ ಬೆಳಗಾವ್, ಧಾರವಾಡ್ ಅಷ್ಟೆ ಅನಸ್ತದ.
ಇರುವದೆಲ್ಲವ ಬಿಟ್ಟು.....
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಹಯಿದರಾಬಾದ್ ಕರ್ನಾಟಕವಂತೆ..
!! ಜೋಕು. ಅಂತ ಇಲ್ಲೊಬ್ರು ನಗ್ತಾವರೆ. 
=======================================================
ಮಾಯ್ಸ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಹೆಸರಲ್ಲೇನಿದೆ, ಎಲ್ಲವೂ ಹೆಸರಲ್ಲೇ ಇದೆ!
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಅದೆಲ್ಲ ಬೇಡ...
ವೀರ ರಾಣಿ ಚೆನ್ನಮ್ಮ , ಒನಕೆ ಓಬವ್ವ , ಬೆಳವಾಡಿ ಮಲ್ಲಮ್ಮ , ಅಕ್ಕ ಮಹಾದೇವಿ , ಸಾಲು ಮರದ ತಿಮ್ಮಕ್ಕರಂತಹ ಮಾತೆಯರು ಈ ನಾಡಿನಲ್ಲಿ ಹುಟ್ಟಿರುವಾಗ ಬರೇ ಗಂಡಸರ ಹೆಸರೇ ಎಲ್ಲ ಕಡೆ ಮೆರೆಯೋದು ಚೆನ್ನಾಗಿರುವುದೇ.?
ಇವರಲ್ಲೇ ಯಾರಾದರೊಬ್ಬರ ಹೆಸರನ್ನು ಇಡಬೇಕು.
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಪಂಢರೀಭಾಯಿ ಅಂತರ ರಾಷ್ಟ್ರೀಯ ವಿಮಾನ ನಿಲ್ಡಾಣ ?
ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
ಸರ್, ಇದರಲ್ಲೂ ವ್ಯಂಗ್ಯನ... ಇಲ್ಲ ಇದು ಸೀರಿಯಸ್ಸ