IPL ಎಂಬ ಅತಿ ಕ್ರಿಕೇಟು
ಗಮನಿಸಿರಿ.. ಈ ಚರಚೆಯನ್ನ ರಾಜಕೀಯ ಎಂದು ಟ್ಯಾಗಿದ್ದೀನಿ.
ನಂಗೆ ಕ್ರಿಕೇಟು ನೋಡಕ್ಕೂ ಆಡಕ್ಕೂ ಇಶ್ಟ ಇಲ್ಲ. ನನಗೆ ಹೆಚ್ಚು ಟೆನ್ನಿಸ್, ಬ್ಯಾಡಮೆಂಟನ್, ಈಚು ಇಂತವು ಇಶ್ಟ. ಈ ನಮ್ ದೇಸದಲ್ಲಿ ನಂಗೆ ಕ್ರಿಕೇಟು ಇಶ್ಟ ಇಲ್ಲ ಅಂದರೆ ಹಾಳಾದೋರು ’ಇವನ್ ಯಾವೋನೋ ವಿಚಿತ್ರ ಪ್ರಾಣಿ’ ಅಂತ ನೋಡೋ ಮಂದಿಯೂ ಇದ್ದಾರೆ.
ಹಗಲಂತಿಲ್ಲ, ಇರುಳಂತಿಲ್ಲ ಆರಾರ್ ಗಂಟೆ ಟೀವಿ ಮುಂದೆ ವಕ್ಕರಿಸಿಕೊಂಡು ಕ್ರಿಕೇಟ್ ನೋಡೋದು ಇದ್ದೇ ಇದೆ. ಈಗ ಈ IPL ನಂದು ಸಂಜೆ ಮನೆಗೆ ಬಂದು ಆರಾಮಾಗಿ ಒಂದು ಸಿನಿಮಾನೋ, ಒಂದಿಶ್ಟು ಹಾಡನ್ನೋ ಕೇಳೋ ಹಾಗೆ ಇಲ್ಲ.
ಮನೇಲಿ ನಂಗೆ ನನ್ನ ರೂಮಿಗಂಗೇ ಯಾರ ಅಂಕೆಯಲ್ಲಿ ರಿಮೋಟ್ ಅನ್ನೋದಕ್ಕೆ ಜಗಳ. ’ಹಾಳಾದೋನೇ, ಅಟ್-ಲೀಸ್ಟು ನ್ಯೂಸ್ ಹೆಡ್‌ಲಯ್ನಿಸಾದ್ರೂ ತೋರಿಸೋ, ನಿನ್ ಹಾಳ್ ಕ್ರಿಕೇಟ್ ಮಳೆ ಚಂಡಮಾರುತ ಬಂದು ಕೊಚ್ ಹೋಗ’ ಎಂದು ಗಟ್ಟಿ ಉಗಿದರೇ ೨೦ ಸೆಕೆಂಡು ಮುಕ್ಯಾಂಶ ನೋಡಬೋದು.
ನಾನಂತೂ ಹಲವು ಸೀರಿಯಲ್ಲುಗಳನ್ನ ನೋಡಿ, ತಿಂಗಳುಗಳಾಯ್ತು.!!

- Login or register to post comments
- 275 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: IPL ಎಂಬ ಅತಿ ಕ್ರಿಕೇಟು
ಸರಿಯಾಗಿ ಹೇಳಿದ್ರಿ ಮಹೇಶ್.
ಆದರೆ, ನಾನು ಕ್ರಿಕೆಟ್ಟನ್ನು ಸರಿಯಾಗಿ ಉಪಯೋಗಿಸಿಕೊಳ್ತೀನಿ. ರಾತ್ರಿ ನಿದ್ದೆ ಬರದಿದ್ದರೆ, ಕ್ರಿಕೆಟ್ ನೋಡ್ತೀನಿ. ಒಂದು ಓವರ್ ಮುಗಿಯುವದರೊಳಗೆ ನಿದ್ದೆ ಗ್ಯಾರಂಟಿ.
-ವರುಣ ಭಟ್
ಉ: IPL ಎಂಬ ಅತಿ ಕ್ರಿಕೇಟು
ಜಾಣ!
=====================================
ಮಾಯ್ಸ!