ಜಾತಿ ಮತ್ತು ನಾವು ; ( ಕಮೆಂಟು ಹಾಕಿ.. ಆದರೆ ನಮ್ಮೊಳಗೆ ಒಮ್ಮೆ ಇಣುಕಿಕೊಳ್ಳಣ )
ಕೆಂಪೇಗೌಡರ ಹೆಸರು ಅವರು ಒಕ್ಕಲಿಗರು ಎಂಬ ದೊಡ್ಡ ಕಾರಣದಿಂದ ಬೆಂಗಳೂರು ಹೊಸ ಏರ್‍ಪೋರ್ಟಿಗೆ ಇಡಬೇಕು ಎಂದು ಬರೆದುದಕ್ಕೆ ಲಬಲಬ ಅಂದ ಕೆಲವರು, ನಯವಾಗಿ ಕಮೆಂಟಿದ ಹಲವರು, ಒಮ್ಮೆ ನಾವ್ ನಮ್ಮೊಳಗೆ ಇಣುಕಿಕೊಳ್ಳಣ.
೧) ಸಂಪದದಲ್ಲಿ ’ವಚನ ಸಾಹಿತ್ಯ’ ಎಂದು ಏನೇ ಚರ್ಚೆ, ಬರಹ, ಬ್ಲಾಗು ಬಂದರೂ ಅದಕ್ಕೆ ಹೆಚ್ಚು ಹುರುಪಿನಿಂದ ಕಮೆಂಟು ಹಾಕೋರು, ಓದೋರು, ಅದಕ್ಕೆ ಇದಿರು ಬರೆದವರಿಗೆ ’ನೀವ್ ತಪ್ರೀ’ ಎನ್ನೋರು, ಎಂದಿರೋರು ’ತಾನು’ ಲಿಂಗಾಯತನೋ, ಅಲ್ವೋ?
೨) ಸಂಪದದಲ್ಲಿ ’ದಾಸ ಸಾಹಿತ್ಯ’ ಎಂದು ಏನೇ ಚರ್ಚೇ, ಬರಹ, ಬ್ಲಾಗು ಬಂದರೂ ಅದಕ್ಕೆ ಹೆಚ್ಚು ಹುರುಪಿನಿಂದ ಕಮೆಂಟು ಹಾಕೋರು, ಓದೋರು, ಅದಕ್ಕೆ ಇದಿರು ಬರೆದವರಿಗೆ ’ನೀವ್ ತಪ್ರೀ’ ಎನ್ನೋರು, ಎಂದಿರೋರು ’ತಾನು’ ಬ್ರಾಹ್ಮಣನೋ ಅಲ್ವೋ?
೩) ಹಾಗೆ.. ವಿಶ್ವೇಶ್ವರಯ್ಯರ ಹೆಸರಿಗೆ ಸಪೋರ್ಟು ನೀಡಿದ ’ತಾನು’ ಅವರ ಜಾತಿಯೋ ಅಲ್ವೋ?
.
.
.
..
ಹೀಗೆ ನಾವು ಯಾವುದಕ್ಕೆ ದಡದಡ ಅಂತ ಕಮೆಂಟು ಹಾಕ್ತೀವೋ, ಅದರಲ್ಲಿ ಬಂದಿರ ಜನ, ನನ್ನ ಜಾತಿಯವನೋ ಅಲ್ವೋ?
ಇದನ್ನ ಗಮನಿಸಿಕೊಳ್ಳಣ.
ನಾನ್ ಕೆಂಪೇಗೌಡರ ಹೆಸರುಬೇಕು ಎಂದು ಹೇಳಿದ್ದು ದಿಟ ಆದ್ರೆ ನಾನು ಒಕ್ಕಲಿಗನಲ್ಲ..!! ![]()

- Login or register to post comments
- 285 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಜಾತಿ ಮತ್ತು ನಾವು ; ( ಕಮೆಂಟು ಹಾಕಿ.. ಆದರೆ ನಮ್ಮೊಳಗೆ ಒಮ್ಮೆ ಇಣುಕಿಕೊಳ್ಳಣ )
ನಿಮ್ಮ ವಾದವನ್ನು ಒಪ್ಪುವುದಿಲ್ಲ...
ವಿಶ್ವೇಶ್ವರಯ್ಯ ಬ್ರಾಹ್ಮಣರೆಂದು ನಿಮ್ಮ ಚರ್ಚೆಯಲ್ಲೇ ತಿಳಿದಿದ್ದು...
ಇದುವರೆಗೂ ವಿಶ್ವೇಶ್ವರಯ್ಯನವರ ಜಾತಿಯ ಬಗ್ಗೆ ತಲೆ ಕೆಡಿಸಿಕೊಂಡಿದ್ದೇ ಇಲ್ಲ...
ವಿಶ್ವೇಶ್ವರಯ್ಯನವರ ಹೆಸರು ಬಿಡಿ, ಕುವೆಂಪು ಹೆಸರು ಪಟ್ಟಿಗೆ ಸೇರಿಸಿ ನೋಡಿ, ಯಾವ ಯಾವ ಜಾತಿಯವರು ಯಾರ ಪರ ವಹಿಸುವರು ಎಂದು ತಿಳೀತದೆ...
--ಶ್ರೀ
ಉ: ಜಾತಿ ಮತ್ತು ನಾವು ; ( ಕಮೆಂಟು ಹಾಕಿ.. ಆದರೆ ನಮ್ಮೊಳಗೆ ಒಮ್ಮೆ ಇಣುಕಿಕೊಳ್ಳಣ )
ಅದನ್ನೇ ಮಾಡ್ತಾ ಇರೋದು.
ನೀವ್ ವಿಶ್ವೇಶ್ವರಯ್ಯನ ಕಡೆ ಅಂತ ಟಿಕ್ ಹಾಕೋಬೋದಾ?
=====================================
ಮಾಯ್ಸ!
ಉ: ಜಾತಿ ಮತ್ತು ನಾವು ; ( ಕಮೆಂಟು ಹಾಕಿ.. ಆದರೆ ನಮ್ಮೊಳಗೆ ಒಮ್ಮೆ ಇಣುಕಿಕೊಳ್ಳಣ )
ಹಾಗೇನಿಲ್ಲ...ಇರುವ ಹೆಸರು ಸಾಕು "ಬೆಂಗಳೂರು"
ಆದ್ರೆ ಬೆಂಗಳೂರನ್ನ ಬೆಂಗಳುರು ಅಂತ ಮಾಡಕ್ಕೆ ಹೊರಟಿದ್ದರೆ ಅಂತ ಯೋಚ್ನೆ ಜಾಸ್ತಿ ಇದೆ...
ಉ: ಜಾತಿ ಮತ್ತು ನಾವು ; ( ಕಮೆಂಟು ಹಾಕಿ.. ಆದರೆ ನಮ್ಮೊಳಗೆ ಒಮ್ಮೆ ಇಣುಕಿಕೊಳ್ಳಣ )
ಸಂಪದದಲ್ಲಿ ’ದಾಸ ಸಾಹಿತ್ಯ’ ಎಂದು ಏನೇ ಚರ್ಚೇ, ಬರಹ, ಬ್ಲಾಗು ಬಂದರೂ ಅದಕ್ಕೆ ಹೆಚ್ಚು ಹುರುಪಿನಿಂದ ಕಮೆಂಟು ಹಾಕೋರು, ಓದೋರು, ಅದಕ್ಕೆ ಇದಿರು ಬರೆದವರಿಗೆ ’ನೀವ್ ತಪ್ರೀ’ ಎನ್ನೋರು, ಎಂದಿರೋರು ’ತಾನು’ ಬ್ರಾಹ್ಮಣನೋ ಅಲ್ವೋ?
ಸಾಮಿ ಅಯ್ಯನೋರೇ, ನೀವಿಂಗೆ ಅನ್‍ಕೊಳ್ಳೋದು ತಪ್ಪು. ವಚನಗಳಿಗೆಲ್ಲ ಹುರುಪಿನಿಂದ ರಿಪ್ಲೈ ಮಾಡಿದವರು ಲಿಂಗಾಯತ, ದಾಸ ಸಾಹಿತ್ಯಕ್ಕೆ ರಿಪ್ಲೈ ಮಾಡೋರೆಲ್ಲ ಬ್ರಾಹ್ಮಣರು ಅನ್‍ಕೊಳ್ಳೋದು ದೊಡ್ಡ ತಪ್ಪು.. ಅದು ಅವರವರ ಇಂಟರೆಸ್ಟ್ ಮೇಲೆ. ನನಗೆ ದಾಸಸಾಹಿತ್ಯ, ವಚನ ಸಾಹಿತ್ಯ, ಎಸ್ಪೆಸಿಯಲಿ ಸರ್ವದ್ನ್ಯನ ವಚನಗಳು, ಎಲ್ಲಾ ತುಂಬಾ ಇಸ್ಟ.. ನೀವು ಎಲ್ಲ ಬರಹಗಳಿಗೂ ರಿಪ್‍ಲೈ ಮಾಡಿದವರಲ್ಲಿ, ಬ್ರಾಮಣರೆಸ್ಟು, ಲಿಂಗಾಯತರೆಸ್ಟು, ಇತರೆಸ್ಟು ಅಂತೆಲ್ಲ.. ಎಣಿಸ್ತಾ ಕೂಡ್‍ತೀರೇನು?..
ಉ: ಜಾತಿ ಮತ್ತು ನಾವು ; ( ಕಮೆಂಟು ಹಾಕಿ.. ಆದರೆ ನಮ್ಮೊಳಗೆ ಒಮ್ಮೆ ಇಣುಕಿಕೊಳ್ಳಣ )
ಕಾಮೆಂಟ್-ಇದವರಿಗೆ ನನ್ನಿ.
ಒಪ್ಪತಕ್ಕ ಮಾತುಗಳು
=====================================
ಮಾಯ್ಸ!