~
ಪುಟ್ಟಿಯ ಜೊತೆ ಸಂಭಾಷಣೆ
ಇದು ನೈಜ ಹಾಸ್ಯ ನಾನು ಊರಿಗೆ ಹೊದಾಗ್ಗೆ ನನ್ನ ನಾಲ್ಕು ವರ್ಷದ ಮಗಳ ಜೊತೆ ನಡೆದ ಸಂಭಾಷಣೆ
ನಾನು:ಪುಟ್ಟಾ....ಸರಿಯಾಗಿ ಸ್ಕೂಲಿಗೆ ಹೊಗುತ್ತಿದ್ದಿಯಾ?
ಪುಟ್ಟಿ:-ಹೂಂ ಅಪ್ಪಾ.
ನಾನು ಪುಟ್ಟಿಯ ತಲೆ ಸವರುತ್ತಾ ಹೆಳಿದೆ,ನೊಡಮ್ಮಾ ಪುಟ್ಟಿ ನೀನು ಸರಿಯಾಗಿ ಓದಿ ಶಾಲೆಯಲ್ಲಿ ಮುಂದೆ
ಇರಬೇಕು ಗೊತ್ತಾ?
ಪುಟ್ಟಿ:-ಹೂಂ ಅಪ್ಪಾಜಿ ಶಾಲೆಯಲ್ಲಿ ನಾನೇ ಮುಂದು, ಎತ್ತಲೊ ನೋಡುತ್ತಾ ಹೇಳಿದಳು ಪುಟ್ಟಿ.
ನಾನು:-ಹೌದಾ? very good?.
ಪುಟ್ಟಿ ಮುಂದುವರೆದು ಅವಳ ಅಕ್ಕನ ಕಡೆ ಬೆರಳು ತೊರಿಸುತ್ತಾ, ಬೇಕಾದರೆ ಅಕ್ಕನನ್ನೆ ಕೇಳು ಶಾಲೆಯಲ್ಲಿ ಮುಂದಿನ ಸಾಲಿನಲ್ಲಿಯೇ ನಾನು ಕುಳಿತುಕೋಳ್ಳುವದು ಎಂದೆಹೇಳುತ್ತಾ ಹೊರಗೆ ಓಡಿದಳು.

- Login or register to post comments
- 431 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS: