~
ಹುಡುಗರ ಗಮನ ಸೆಳೆಯುವುದು ಹೇಗೆ?
May 26, 2008 - 1:28pm — pallavi.dharwad
ಹುಡುಗಿಯರ ಗಮನ ಸೆಳೆಯಲು ಅಥವಾ ಕೆಣಕಲು ಹುಡುಗರು ಸಿಳ್ಳೆ ಹಾಕುವುದು ಸಾಮಾನ್ಯ. ಆದರೆ, ಹುಡುಗರ ಗಮನ ಸೆಳೆಯಲು ಹುಡುಗಿಯರು ಏನು ಮಾಡಬೇಕು?
ಸಭ್ಯ ಸಲಹೆಗಳಿಗೆ ಮಾತ್ರ ಸ್ವಾಗತ.
- ಪಲ್ಲವಿ ಎಸ್.

- Login or register to post comments
- 2268 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಹುಡುಗರ ಗಮನ ಹುಡುಗಿಯರತ್ತ ಏನು ಮಾಡದಲೆ ಹರಿಯುವುದು ಸತ್ಯ
ಜೋರು ಮಾತಿನ , ವಿಪರೀತ ಅಲಂಕಾರದ ಹುಡುಗಿಯರು ಹುಡುಗರ ಗಮನ ಬೇಗ ಸೆಳೆಯುತ್ತಾರೆ ಅಷ್ಟೆ ಬೇಗ ಮರೆಯಾಗುತ್ತಾರೆ ಅವರ ಮನದಿಂದ
ಮೆದು ಮಾತು ಸರಳ ಅಲಂಕಾರ, ಬುದ್ದಿವಂತಿಕೆ ಇವುಗಳು ಹುಡುಗರನ್ನು ಸೆಳೆಯುವುದು ನಿಧಾನವಾದರೂ ಮನದಲ್ಲಿ ಸದಾ ಕಾಲ ನೆಲೆಸುತ್ತಾರೆ ನೆನಪಾಗಿ ಅವರ ಮನದಲ್ಲಿ
ಯಾರನ್ನು ಸೆಳೆಯುವ ಹೊಂಚು ಹಾಕಿದ್ದೀರಾ ಪಲ್ಲವಿಯವರೇ?
http://thereda-mana.blogspot.com/
ರೂಪ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಹಾಗೇನೂ ಇಲ್ಲ ರೂಪಾ. ಶಾಲ್ಮಲಾ ಕಣಿವೆಯಲ್ಲಿ ಸುತ್ತುತ್ತಿದ್ದಾಗ, ಹಕ್ಕಿಗಳ ವರ್ತನೆ ಕುತೂಹಲ ಹುಟ್ಟಿಸಿತು. ಇಲ್ಲಿ ನವಿಲುಗಳೂ ತುಂಬಾ ಇವೆ. ಗಂಡು ನವಿಲು ನರ್ತಿಸುತ್ತ ಹೆಣ್ಣನ್ನು ಸೆಳೆಯುವುದನ್ನು ನೋಡಿದೆ. ಆಗ ಈ ಪ್ರಶ್ನೆ ಉದ್ಭವಿಸಿತು. ನೋಡೋಣ, ಗಮನ ಸೆಳೆಯುವ ಉತ್ತರ ಬಂದರೆ ಆ ಬಗ್ಗೆ ವಿಚಾರಿಸೋಣ. ಅಲ್ಲವೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಈ ಪ್ರಶ್ನೆ ನನ್ನ ಗಮನ ಸೆಳೆಯಿತು! .. ಹಾಗೇನೇ ಪ್ರಶ್ನೆ ಕೇಳಿದ ಹುಡುಗಿಯೂ!
ಸವಿತೃ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಹೌದಾ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಹೂ... ನಿಜವಾಗ್ಲೂ...
ಡೌಟ?!
ನಿಮ್ ಫೋಟೋನೂ ಸೂಪರ್! .. ಅದೇನ್ ನೋಟ ನಿಮ್ದು
ನನ್ನ ಮನಸ್ಸನ್ನ ಮತ್ತೆ ಮತ್ತೆ ಎಳೀತ ಇದೆ! 
ಸವಿತೃ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಫೊಟೊ ನಂದಂತೂ ಅಲ್ಲ. ಆದರೆ, ಅದಕ್ಕೆ ಹತ್ತಿರವಾಗಿ ಇದ್ದೇನೆ ಎಂದು ಗೆಳತಿಯರು ಹೇಳೋ ಕಾರಣಕ್ಕೆ ಹಾಕಿದ್ದೀನಿ. ಅಷ್ಟೇ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಹೌದು ಪಲ್ಲವಿ ನಿಮ್ಮ ಬ್ಲಾಗ್ ಫೋಟೊ ಹಾಗಿದೆ
ಹೌದು ಆ ಫೋಟೊ ಯಾರದು?
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಊಹಿಸಿ ನೋಡೋಣ. ಒಂದಂತೂ ನಿಜ. ನೋಡಲು ನಿಮ್ಮ ಊಹೆಯ ವ್ಯಕ್ತಿಯಂತೇ ಇದ್ದೇನೆ ನಾನು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಅಯ್ಯೋ ಶಿವ್ನೇ.. ಮೋಸ ಹೋಗ ಬಿಟ್ನಲ್ಲಪ್ಪ!... ಈ ಫೋಟೋ ಈ ಪಲ್ಲವಿದೆಯಾ ಅಂತ ನಮ್ಬಿಕಂಡಿದ್ನಲ್ಲಪ್ಪ ...
ಆದರೂ ಸೂಪರ್ ಸೆಲೆಕ್ಷನ್ !...
ಅಂದ ಹಾಗೆ ಶ್ರಿಯ ಅನ್ನೋ ಸುಂದರಿ ಯಾರು? .. ಇದು ನೀವೇನಾ?
ಸವಿತೃ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಮೋಸ ಹೋದ್ರಾ? ಖಂಡಿತ ಇಲ್ಲ. ನೀವು ಮೋಸ ಹೋಗುವಷ್ಟು ಕೆಟ್ಟದಾಗೇನೂ ಇಲ್ಲ ನಾನು. ತಮ್ಮ ಅಸಲಿ ಫೋಟೊ ಹಾಕ್ದೇ ಇರೋದು ಹುಡುಗೀರು ತಗೊಳ್ಳೋ ಮುನ್ನೆಚ್ಚರಿಕೆಗಳಲ್ಲಿ ಒಂದು. ಅದು ಸಹಜವೂ ಹೌದು. ಊಹೆಗೆ ಒಂದಿಷ್ಟು ಅವಕಾಶ ಕೊಡದೇ ಇದ್ರೆ ಹೇಗೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನೀವು ಸಿಳ್ಳೇ ಹಾಕಿದರೆ ನಿಕ್ಕುವ ಹುಡುಗರ ಗಮನ ಸೆಳೀತೀರ...
ತುಸು ಅಣಿಯಾಗಿ!
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಸಿಳ್ಳೆ ಹುಡುಗರ ಸ್ವತ್ತು ಅಂದುಕೊಂಡಿದ್ದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಸಿಳ್ಳೆ ಹೊಡೆಯುವುದು ನನ್ನ ನನಸಾಗದ ಕನಸುಗಳಲ್ಲಿ ಒಂದು
http://thereda-mana.blogspot.com/
ರೂಪ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಕಲಿಯಲು ವಯಸ್ಸಿನ ಹಂಗಿದೆಯೇ ರೂಪಾ? ಮಹೇಶ ಹೇಳಿಲ್ಲವೇ, ನೀವೇ ಸಿಳ್ಳೆ ಹೊಡೀರಿ ಅಂತ. ಪ್ರಯತ್ನಿಸಿ ನೋಡಬೇಕಪ್ಪ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನಮ್ಮಕ್ಕ ಒಬ್ಬಳಿದ್ದಾಳೆ. ಸಖತ್ತಾಗಿ ಶಿಳ್ಳೆ ಹೊಡೀತಾಳೆ. ನನಗೂ ಸುಮಾರು ೮-೧೦ ವರ್ಷಗಳಿಂದ ಶಿಳ್ಳೆ ಹೊಡೆಯೋದು ಹೇಗೆ ಅಂತ ಹೇಳಿಕೊಟ್ಲು, ಆದರೆ ನನಗೆ ಬರಲೇ ಇಲ್ಲ.
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ವಿಧ ವಿಧವಾಗಿ ಸೀಟಿ / ಶಿಳ್ಳೆ ಹೊಡೆಯಲು ಕಲಿಯಲು...
ಸಂಪರ್ಕಿಸಿ...
ಸವಿತೃ
೯೮೪೫೦೯೮೪೫೦ or 9845012345
ನಾವು ಪ್ರೈಮರಿ ಸ್ಕೂಲ್ / ಹೈ ಸ್ಕೂಲ್ ನಲ್ಲಿದ್ದಾಗ ಸೂಪರ್ ಆಗಿತ್ತು. ರಜದ ದಿನ (ಅದರಲ್ಲೂ ಬೇಸಿಗೆ ರಜದಲ್ಲಿ) .. ಮಧ್ಯಾನ .. ಸುಸ್ತಾಗೊವರೆಗೂ ಯಾರುಯಾರದೋ ಭಾವಿನಲ್ಲಿ ( ಕೆಲವೊಮ್ಮೆ ಹತ್ತಿರದ ಹಳ್ಳದಲ್ಲಿ) ಸುಸ್ತಾಗೋ ವರಿಗೂ ಈಜಾಡಿ ..ಬರುತ್ತಾ ಯಾರುಯಾರದೋ ಹೊಳದಲ್ಲಿನ ಮಾವಿನ ಹಣ್ಣು, ಬೇಲದ ಹಣ್ಣು , ಹಲಸಿನ ಹಣ್ಣಿಗೆ ಕೈ-ಬಾಯಿ ಹಾಕಿ ..ಮಧ್ಯೆ ಮಧ್ಯೆ ಈ ಸೀಟಿ ಹೊಡೆಯೋದನ್ನು ಪ್ರಾಕ್ಟೀಸ್ ಮಾಡ್ತಾ ಬರ್ತ ಇದ್ವು. ಅದೊಂದು ಬೊಂಬಾಟ್ ನೆನಪು.
ಈಗಂತೂ ನಾನು ಸೀಟಿ ಮಾಸ್ಟರ್!
ಸವಿತೃ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನಂಬರ್ ನೋಟಿಕೊಂಡಿರುವೆ. ಬಿಡುವಾದಾಗ ಕರೆ ಮಾಡ್ತೀನಿ. ಹೇಯ್, ಒಂದು ನಿಮಿಷ. ಇದೇನಿದು ೯೮೪೫೦೯೮೪೫೦ - ಏನ್ ಕಿವಿ ಮೇಲ್ ಹೂವಾ ???
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಸವಿತೃ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಸಿಳ್ಳೆ ಹೊಡೆಯುವ ಕ್ಲಾಸ್ ಏಕೆ ಪ್ರಾರಂಭಿಸಬಾರದು ನೀವು? ಪ್ರತಿಯೊಂದಕ್ಕೂ ಮಾರ್ಕೆಟ್ ವ್ಯಾಲ್ಯೂ ಇರೋ ಕಾಲ ಇದು. ಉತ್ತಮ ಸಂಪಾದನೆ ಮಾಡಬಹುದು. ಆದರೆ, ನಿಮ್ಮ ತರಗತಿಗಳು ಒಳಾಂಗಣಕ್ಕೆ ಮಾತ್ರ ಸೀಮಿತವಾಗಿರಲಿ. ಹೊರಗೇನಾದರೂ ಸಿಳ್ಳೆ ಹೊಡೆದು ರೊಳ್ಳೆ ತೆಗೆದುಕೊಂಡೀರಿ ಮತ್ತೆ. ಅಂದ್ಹಾಗೆ, ಯಾರಯಾರದೋ ಹಣ್ಣುಗಳಿಗೆ ಕೈ ಹಾಕಿ ಸಿಕ್ಕಿಬಿದ್ದೀರಿ ಹುಷಾರ್. ಆಮೇಲೆ ನೋಡಿದೋರೆಲ್ಲ ನಿಮಗೆ ಸಿಳ್ಳೆ ಹೊಡೆದು ಗೇಲಿ ಮಾಡಬಹುದು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
>ಸಿಳ್ಳೆ ಹೊಡೆಯುವ ಕ್ಲಾಸ್ ಏಕೆ ಪ್ರಾರಂಭಿಸಬಾರದು ನೀವು?
ನಾನೇನೋ ಸಿದ್ದ. ನಿಮ್ಮಂತಹ ಕಲಿಕೆಯಲ್ಲಿ ಆಸಕ್ತಿ ಇರೋರಿಗೆ ಕಾಯ್ತಾ ಇದೀನಿ.
ಪಲ್ಲವಿ join ಆದರಂತೂ ಫ್ರೀ ಕೋಚಿಂಗ್!
ಸಂಪರ್ಕಿಸಿ..
ಲ್ಯಾಂಡ್ ಲೈನ್ ನಂ. ೦೮೦-೪೦೧೬೪೦೧೬.
ಮೊಬೈಲ್ -೯೮೪೫೦೧೨೩೪೫
>ಯಾರಯಾರದೋ ಹಣ್ಣುಗಳಿಗೆ ಕೈ ಹಾಕಿ ಸಿಕ್ಕಿಬಿದ್ದೀರಿ ಹುಷಾರ್
... ಈಗೆನಿದ್ರೂ ಹಂಗೆ ಮಾಡಬಾರದು ಅಂತ ಬುದ್ದಿ ಹೇಳೋ ವಯಸ್ಸು.
ಆ ವಯಸ್ಸು ಮುಗಿದೊಯ್ತು!
ಈಗ ನನ್ನ ಸೀಟಿ ಏನಿದ್ರೂ ನಿಮ್ಮನ್ತವ್ರನ್ನು ಅತ್ವ ಪ್ರತಿಭೆಗಳನ್ನು ಉತ್ತೇಜಿಸಲು ಬಳಸಲ್ಪಡುತ್ತದೆ.
ಸವಿತೃ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಹಣ್ಣು ಕದ್ದ ಅನುಭವ ಹೆಣ್ಣಿನ ಹೃದಯ ಕದಿಯಲು ಬರೋದಿಲ್ಲ ಅಂತೀರಾ? ನೀವು ಕ್ಲಾಸ್ ತಗೊಳ್ಳಲು ಸಿದ್ಧ ಎಂದು ಉತ್ಸಾಹ ತೋರಿಸಿದ್ದು ನೋಡಿದರೆ ನಿಮ್ಮ ಹೇಳಿಕೆ ನಂಬೋಕ್ಕೆ ಕಷ್ಟ ಆಗ್ತಿದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಎನೋಪಾ ನನಗಂತೂ ಗೊತ್ತಿಲ್ಲ.
.. 
ನನ್ನ ಮೇಲೆ ದೌಟ ? ಯಾಕೆ...ಬಹುಶ ನೀವು ಇಲ್ಲಿ ಜಾಸ್ತಿ ! ಯೋಚನೆ ಮಾಡಿರಬೇಕು....
ಸವಿತೃ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಯೋಚನೇನೂ ಇಲ್ಲ ಎಂಥದ್ದೂ ಇಲ್ಲ. ಹಾಗನಿಸಿತು ಅಷ್ಟೇ. ಹಂಗಂತ ಅನ್ಕೊಂಡಿದ್ದೆಲ್ಲ ಖರೇ ಆಗಬೇಕಂತ ಎಲ್ಲದ?
ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನಿಮ್ಮಕ್ಕ ತುಂಬ ಅದೃಷ್ಟವಂತೆ. ನೋಡಿ, ಸಿಳ್ಳೆ ಹೊಡೆಯೋದು ಗೊತ್ತಿಲ್ಲದೇ ನಮ್ಮಂಥ ಹುಡುಗೀರು ಅದೆಷ್ಟು ಕಷ್ಟಪಡ್ತಿದ್ದೀವಿ ಅಂತ.
ಅಂದ್ಹಾಗೆ, ನಿಮಗೆ ಸಿಳ್ಳೆ ಹೊಡೆಯೋಕ್ಕೆ ಬರೋಲ್ಲ ಎಂದು ಕೇಳಿ ವಿಷಾದವಾಯಿತು. ಅದಕ್ಕಾಗಿ ಸಂತಾಪ ಸೂಚಿಸುತ್ತೇನೆ. ಏಕೆಂದರೆ, ನಿಮಗೆ ಹುಡುಗೀರ ಗಮನ ಸೆಳೆಯೋ ಪ್ರಮುಖ ವಿದ್ಯೆಯೇ ಗೊತ್ತಿಲ್ಲ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಹಾಗಾದರೆ ಹುಡುಗೀರ ಸೊತ್ತುಗಾಳಾವುವು?
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ದ್ಯಕ್ಕೆ ಒಂದನ್ನು ಮಾತ್ರ ಹೇಳುತ್ತೇನೆ. - ೧. ಕುಡಿ ನೋಟ (ಅನುಮಾನ ಬಂದರೆ ನನ್ನ ಪ್ರಾತಿನಿಧಿಕ ಫೋಟೊ ನೋಡಿ)
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಶ್ರಿಯ ಅವ್ರೇ ....
ಒಂದು ಕಾಮೆಂಟ್ / ಕಾಂಪ್ಲಿಮೆಂಟು
ನನಗೆ 'ಕೊಲ್ಲೇ ನನ್ನನ್ನು ' ಅನ್ನೋ ಹಾಡಿನ / ಪದದ ಅರ್ಥ ನಿಮ್ಮ ಫೋಟೋ ನೋಡಿದ ಮೇಲೆ ಆಯ್ತು.
ಅಬ್ಬ ಎಂತ ಕೊಲ್ಲೋ ನೋಟ !
ಸವಿತೃ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
I hate you savithru. ನನ್ನ ಹೆಸರು ಶ್ರೀಯಾ ಅಲ್ಲ, ಪಲ್ಲವಿ. (ಕೊಲ್ಲುವುದಾದರೆ ಇಂಗ್ಲಿಷ್‌ನಲ್ಲಿ ಬೈದು ಕೊಲ್ಲು ಎಂಬುದು ನಾವು ಕನ್ನಡಪ್ರಿಯ ಗೆಳತಿಯರು ಆಗಾಗ ಆಡಿಕೊಳ್ಳೋ ಮಾತು. ಅದಕ್ಕೆ ಇಂಗ್ಲಿಷ್ ಬಳಸಿದ್ದೇನೆ)
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಸಿಟ್ಟು ಬಂತಾ ಪಲ್ಲವಿ ಅವ್ರೇ?! ಅದೂ ಕೊಲ್ಲೋ ಅಂತ ಸಿಟ್ಟು! ಸರಿ... ನಾನ್ ಸತ್ತೆ
ಕೊಂದಿದ್ದು ಕೊಂದ್ರಿ.. ಕನ್ನಡದಲ್ಲಿ ಕೊಂದಿದ್ರೆ ಕೈಲಾಸನಾದ್ರೂ ಸಿಕ್ತ ಇತ್ತಲ್ವ?! ಇಂಗ್ಲಿಷ್ ನಲ್ಲಿ ಕೊಂದು ಅದೆಲ್ಲಿಗೆ ಕಳಿಸಿದ್ರಿ ನನ್ನ?!
ಸುಂದರಿಯರು ಸಿಟ್ಟು ಮಾಡಿಕೊಂಡಾಗ ಇನ್ನೂ ಹೆಚ್ಚು ಚೆನ್ನಾಗಿ ಕಾಣ್ತಾರೆ ಅಂತ ಕೇಳಿದ್ದೀನಿ. ಇವತ್ತು ನೋಡೋ ಚಾನ್ಸ್ ಸಿಕ್ಲಿಲ್ಲ. ಛೇ ...
ಸವಿತೃ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
^^^^ ಇದಕ್ಕೆ ಒಂದು ಇಂಗಳೀಸಿನ ಒರೆ ಬಾಯಿಗೆ ಬಂತು..! ಹೇಳಲ್ಲ.!
ಕೊಲ್ಲೇ ನನ್ನನ್ನು
ಸುಡುಸಿಟ್ಟು ಕಮೆಂಟಲ್ಲೆ ಕೊಲ್ಲು
ಕಡುಬರೆದು ಹರಿವಲ್ಲೆ ಕೊಲ್ಲು
ಹಾಂಗಾದ್ರು ಕೊಲ್ಲು ಹಿಂಗಾದ್ರು ಕೊಲ್ಲು
ಕೊಲ್ಲೇ ನಂನಂನೇ!
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಸಾಯಿಸಾದ್ರು ಕೊಲ್ಲು, ಕೊಂದಾದ್ರು ಕೊಲ್ಲು,
ಕಿಲ್ ಮಾಡಾದ್ರು ಕೊಲ್ಲು, ಮರ್ಡರ್ ಮಾಡಾದ್ರು ಕೊಲ್ಲು
ಒಟ್‍ನಲ್ಲಿ ಕೊಲ್ಲು, ಕೊಲ್ಲು, ಕೊಲ್ಲು, ಕೊಲ್ಲೆ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನಿಜವಾದ ಗಮನ ಸೆಳೆಯಬೇಕು ಅಂದ್ರೆ ಹುಡುಗಿಯ "ನಗು" ಹಾಗು ಅವಳ "ಹೆಸರು" ಮಾತ್ರ ಸಾಕು.
ನಮ್ಮಂತಹ ಗಣಕಯಂತ್ರ ಕೊಲಿಗಳ ಕಣ್ಣುಗಳು Short Sight ಕಾಯಿಲೆಯಿಂದ ನರಳುತಿರುವ ಕಾರಣ ನಮಗೆ ಹುಡುಗಿಯರು ತೊಟ್ಟ ಯಾವ ಉಡುಪು, ಒಡವೆಗಳು ಕಾಣಿಸುವುದಿಲ್ಲ.
ಆದಕಾರಣ ಸಣ್ಣನೆ,ಮೆಲ್ಲನೆ,ಸ್ವಚ್ಚನೆ ನಗುವು ಹುಡುಗರ ಆಕರ್ಷಣೆಗೆ ಪೊರಕ.
ಇನ್ನು ಹೆಸರು,
ಉದಾ: ನಿಮ್ಮ ಹೆಸರಿನಲ್ಲಿ ದಾರವಾಡ ಸೇರಿರುವುದರಿಂದ, ನಮ್ಮಂತಹ ಪಡ್ಡೆ ಹುಡುಗರಿಗೆ ಡಾರವಾಡ ಪೇಡ ಬಹಳ ಇಷ್ಟ ಇರುವುದರಿಂದ ಈ ಹೆಸರಂತೆ ಸಿಹಿಯಾದ ಹೆಸರಿರುವ ಹುಡುಗಿಯು ಬಹುಬೇಗ ಆಕರ್ಷಿತಳಾಗುತ್ತಾಳೆ.
ಗೆಳೆಯರೆ, ನಾನು ಹೇಳಿದ್ದು ಸರಿನಾ..!
-ಯುವಪ್ರೇಮಿ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಹೆಸರಿನಲ್ಲೇನಿದೆ ಯುವಪ್ರೇಮಿ. ನಿಮ್ಮ ಹೆಸರು ಹುಟ್ಟಿಸುವ ಗೊಂದಲ ಏನು ಕಡಿಮೆಯೆ?
ಇನ್ನು ನಗು ಬಿಡಿ, ಸುಮ್ಮಸುಮ್ಮನೇ ನಗೋರು ಬೇಕಾದಷ್ಟು ಜನರಿದ್ದಾರೆ. ನಗುವಿನಿಂದ ಗುಣ ಅರಿಯುವುದು ಕಷ್ಟ.
ಸುಮ್ಮನಿದ್ದು ನೋಡಿದರೆ, ಎಲ್ಲವೂ ಗೊತ್ತಾದೀತು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನಗು ಅಂದ್ರೆ ನಗು ಅಷ್ಟೆ, ಅವರು ಸುಮ್ಮನೆ ನಕ್ರೊ ಬಿಟ್ರೊ ಬೇಡ. ಚನ್ನಾಗಿ ನಕ್ಕರೆ ಅಷ್ಟೆ ಸಾಕು ನೀವು ಕೇಳೊ ಆಕರ್ಷಣೆಗೆ.
ಇನ್ನು ಹುಡುಗಿ ನಗದೆ ಸುಮ್ಮನೆ ಇದ್ರೆ, ಎಲ್ಲರು ಇವಳಿಗೆ ಮಾತು ಬರಲ್ವೊ, ಇಲ್ಲ ಹಲ್ಲು ಸರಿ ಇಲ್ವೊ, ಇಲ್ಲ ಎಲ್ಲ ಸರಿ ಇದ್ದು ಮುಂಗೋಪಿಯೊ ಅಂತ ನಮಗೆ ಸಂದೇಹದ ಮೇಲೆ ಸಂದೇಹ ಹುಟ್ಟುದ್ದದೆ ಅಷ್ಟೆ.
ನನ್ನ ಹೆಸರಿನಲ್ಲಿ ಗೊಂದಲಾನೆ ?
ಅದು ಎಂತ ಗೊಂದಲನಪ್ಪ..!
ಯಾವದಾದರು ಗಣಿತದ ಪಾರ್ಮುಲ ಹಾಕಿ ಸುಲಬ ಮಾಡಬಹುದ ಯೋಚನ ಮಾಡುವೆ..!
-ಯುವಪ್ರೇಮಿ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನೀವು ’ಯುವ’ ಪ್ರೇಮಿ ಎಂಬುದು ಗೊತ್ತಾಯಿತು. ಯಾರಾಕೆ ನಿಮ್ಮ ಮನ ಸೆಳೆದವಳು?
ಆಕೆಯ ನಗು ನಿಮ್ಮನ್ನು ಮೋಹಗೊಳಿಸಿದಂತೆ, ಕವಿಯಾಗಿಸಿದಂತೆ ಕಾಣುತ್ತದೆ !
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಮನ ಸೆಳೆಯುವುದಕ್ಕೆ ಪ್ರೇಯಸಿಯೆ ಬೇಕಿಲ್ಲ, ಎಲ್ಲವನ್ನು/ಎಲ್ಲರನ್ನು ಪ್ರೀತಿಸುವ ಮನಸು ಇದ್ದರೆ ಸಾಕು..!!

ಹೌದು ಆಕೆಯ ನಗು ನನ್ನನ್ನೇನೊ ಮೋಹಗೊಳಿಸುತು, ಆದರೆ ಅದು ಯಾಕೊ ಅವಳಿಗೆ ಜಾಸ್ತಿ ಅನಿಸಿ ಈಗ ನಗೋದು ನಿಲ್ಲಿಸಿದ್ದಾಳೆ...!
ನಿದ್ರೆಗೆ ಮಾತ್ರೆಗಳು ಇದ್ದಹಾಗೆ, ನಗುವುದಕ್ಕೆ ಮಾತ್ರೆಗಳಿದ್ದರೆ ಅದು ಯಾವುದು, ಎಲ್ಲಿ ಸಿಗುತ್ತದೆ ಎಂದು ಹೇಳಿ ಪುಣ್ಯ ನಿಮ್ಮದಾಗಿಸಿಕೊಳ್ಳಿ..!!
-ಯುವಪ್ರೇಮಿ
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನನಗೆ ಸಿಳ್ಳೆ ಹಾಕಲು ಬರೋದಿಲ್ಲ ಎಂಬ ಕಾರಣಕ್ಕೇ ನಿಮ್ಮಗಳ ಸಲಹೆ ಕೇಳಿದ್ದು. ನೀವೂ ಹೇಳಿದಿರಿ ಅಂತ ಈಗ ಕಲಿಯೋಕ್ಕೆ ಪ್ರಾರಂಭಿಸಬೇಕು ನೋಡಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ರೀ
ಮೊದಲೇ ನನ್ನ ಬಗ್ಗೆ ವಯ್ಯಕ್ತಿಕ ಮಟ್ಟಗೆ ಹೋಗ್ತೀಯ, ಗ್ರಹಿಕೆ ಇಲ್ಲ ಅನ್ನೋ ಪರಮಾಪಾದನೆಗಳಿವೆ..
ನನ್ನ ಸಲಹೆಯಂತೆ ನಡೆದುದರ ಪರಿಣಾಮಕ್ಕೆ ನನ್ನ ಹೊಣೆ ಮಾಡಿ ಬೇಜಾರ್ ಮಾಡೋ ಕೆಲಸ ಬೇಡ ಪ್ಲೀಸ್!
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಪರಮಾಧಿಕಾರ, ಪರಮಾನ್ನ, ಪರಮಾತ್ಮ, ಪರಶಿವ, ಪರವಶ ಎಂಬೆಲ್ಲ ಶಬ್ದಗಳನ್ನು ಕೇಳಿದ್ದೆ. ಈ ಪರಮಾಪಾದನೆ ಎಂಬುದು ಏಕೋ ಹೊಸದೆನ್ನಿಸುತ್ತಿದೆ.
ನೀವೇ ಹೇಳಿದ್ದೀರಲ್ಲ, ಅವೆಲ್ಲ ಅಪವಾದ ಅಂತ. ಅಂದರೆ, ಸತ್ಯವಲ್ಲ ಅಂದ ಹಾಗಾಯ್ತು. ಸಲಹೆ ಕೊಡೋದಷ್ಟೇ ನಮ್ಮ ಕೆಲಸವಪ್ಪ. ಅದನ್ನು ಅನುಸರಿಸೋರು ರಿಸ್ಕ್‌ಗಳನ್ನು ವಿಚಾರಿಸಬೇಕು ತಾನೆ? ಹಾಗಿದ್ದಲ್ಲಿ, ಮತ್ಯಾಕೆ ಚಿಂತೆ ಮಹೇಶ್?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಚಿಂತೆ ಮಾಡಬೇಕಲ್ಲ...
ಏನೋ ಹೇೞಿಕೊಡಲು ಹೋಗಿ, ನೆರವಾಗಲೂ ಹೋಗಿ, ಉಲುಟಾ ಆಗೋದು.
ಅದೆಲ್ಲ ಇರಲಿ... ಹುಡುಗರ ಗಮನವೇನೋ ಸೆಳೆದಿದ್ದೀರ... ಆದರೆ ಒಂದು ಪ್ರೆಶ್ನೆ ಕೇಳಬೋದು..
..
..
..
ನೀವು ಯಾಕೆ ಅವರ ಗಮನ ಸೆಳೇಬೇಕು?ಗುರಿಯೇನು?
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಅದು ಹುಡುಗೀರ ಸಹಜ ಬಯಕೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಸಹಜ...!!
ಹುಡುಗರ ಗಮನ ಸೆಳೆಯೋದಕ್ಕಿಂತ, ಹುಡುಗರ ಗಮನ ಹೋಗೋದು ಸಹಜ! ಅದೇ ಇಲ್ಲಿ ಆಗಿರೋದು.. ಟೋಪಿ ಹಾಕಿದ್ದೀರ ನಂಗೆ!@!
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನೀವು ಟೋಪಿ ಹಾಕಿಸಿಕೊಳ್ಳುವಷ್ಟು ದಡ್ಡರೂ ಅಲ್ಲ, ಹಾಕುವಷ್ಟು ಜಾಣೆಯೂ ನಾನಲ್ಲ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನಿಮ್ಮ ಸಂಗತಿ ನನಗೆ ಗೊತ್ತಿಲ್ಲ..
ಆದರೇ ನಾನು ದಡ್ಡನಲ್ಲ ಎಂದು ಹೇಗೆ ಹೇೞ್ತೀರಿ? ನನ್ನ ಮೇಲೆ ಸಕ್ಕತ್ ಆರಯ್ಯುನ ನಡೆದಿಯೇನು?
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನಿಮ್ಮ ಹಾಗೂ ಸಂಪದದ ಬಹಳಷ್ಟು ಬ್ಲಾಗಿಗರ ಬರವಣಿಗೆ ಓದಿದ್ದೇನೆ. ಓದ್ತಾ ಓದ್ತಾ ಒಬ್ಬ ವ್ಯಕ್ತಿ ಹೇಗೆ ವಿಚಾರ ಮಾಡ್ತಾನೆ ಅನ್ನೋದು ಗೊತ್ತಾಗ್ತ ಹೋಗ್ತದೆ. ಅಲ್ವ? ಒಂದು ವೇಳೆ ಬರೆದವರು ವಂಚಿಸ್ತಿದ್ದಾರೆ ಅಂದ್ರೆ ಅದು ಕೂಡ ಬರವಣಿಗೇಲಿ ಕಾಣಿಸಿಕೊಂಡಿರ್ತದೆ. ಅದನ್ನೆಲ್ಲ ಚೆನ್ನಾಗಿ ತಿಳ್ಕೊಂಡ್ ಮೇಲೇನೇ ನಾನು ಬ್ಲಾಗ್‌ನಲ್ಲಿ ಬರೆಯೋಕೆ ಶುರು ಮಾಡಿದ್ದು.
’ಬರವಣಿಗೆ ತಾನೆ ನಮ್ಮನ್ನೆಲ್ಲ ಇಲ್ಲಿ ಬಂಧಿಸಿರೋದು?’
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಹಂಗಾರೆ ಆರಯ್ಯ ನಡೆದಿದೆ.
ಇಲ್ಲಿ ಬಂಧಿಸಿರೋದು? ಯಾವ ಬಂಧನ/ಸೆರೆ? ಈ ಸಕ್ಕದ ಬಂಧನ=ಸೆರೆ, ನಂಟು ಹಿಂಗೆ ಹಲವಾರು ಅರ್ತಗಳಿವೆ.. ಇದು ಯಾವ ಬಂಧವೋ ಬಂಧನವೋ!
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಅಕ್ಷರ ಬಂಧ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ನೋಡಿ
ಅಕ್ಷರ ಅಂದರೆ ಎಂದೂ ಹಾಳಾಗದ, ಕ್ಷರವಾಗದ ಎಂಬ ಅರ್ತವೂ ಇದೆ..
ಈ ಬಂಧ(ನ) ಅಕ್ಷರವೇ!!?
ನೀವು ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ ನಂನಂನು ಸಿಕ್ಕಿಹಾಕಿಸುತ್ತಾ, ನೀವು ಸಿಕ್ಕಿಹಾಕಿಕೊಳ್ಳತ್ತಿಲ್ಲವಶ್ಟೇ!
ಗಮನಿಸಿ ನಿಮ್ಮ ಪೋಟೋ ಬಗ್ಗೆ ನಾನು ಕಮೆಂಟು ಮಾಡಿಲ್ಲ..!!
=====================================
ಮಾಯ್ಸ!
ಉ: ಹುಡುಗರ ಗಮನ ಸೆಳೆಯುವುದು ಹೇಗೆ?
ಫೋಟೊ ನೋಡಿ ಪ್ರತಿಕ್ರಿಯೆ ಕೊಡುವವರು ಗಂಭೀರ ಬ್ಲಾಗಿಗರಲ್ಲ ಎಂದೇ ನನ್ನ ನಂಬಿಕೆ. ಬರವಣಿಗೆ ನೋಡಿ ಪ್ರತಿಕ್ರಿಯೆ ಬರಲಿ ಎಂದೇ ಬಯಸುವವಳು ನಾನು. ಎಲ್ಲರನ್ನೂ ಜೋಡಿಸಿರು ಎಳೆಯನ್ನು ಬಂಧನ ಎಂದೇಕೆ ಅಂದುಕೊಳ್ಳುತ್ತೀರಿ? ಬಂಧನದಲ್ಲಿ ಸ್ವಾತಂತ್ರ ಹರಣದ ಅರ್ಥ ಹೊರಡುತ್ತದೆ. ಬಂಧ ಹಾಗಲ್ಲ. ಅದು ಎಲ್ಲರನ್ನೂ ಸುತ್ತುವರೆದಿರುತ್ತದೆ. ಆದರೆ, ಬಂಧಿಸಿರುವುದಿಲ್ಲ. ಎಲ್ಲರನ್ನೂ ತನ್ನೊಂದಿಗೆ ಇಟ್ಟುಕೊಂಡಿರುತ್ತದೆ. ಆದರೆ, ಸರಳಿನ ಹಿಂದಲ್ಲ.
ಅರ್ಥಪೂರ್ಣ ಚರ್ಚೆಯಷ್ಟೇ ನನ್ನ ಉದ್ದೇಶ. ತಮಾಷೆ ಮುಂತಾದವೆಲ್ಲ ಅದರ ಉಪಲಬ್ಧಿಗಳು ಮಾತ್ರ.
ತಪ್ಪಿದ್ದರೆ ಕ್ಷಮಿಸಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...