ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಇತಿಹಾಸ

ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

May 26, 2008 - 3:49pm — roopablrao

ಈ ದೇವರು ಅಂತ ನಾವೆಲ್ಲಾ ಹೇಳ್ತೀವಿ
ಹಿಂದುಗಳ (ನಾವು ) ದೇವರುಗಳು ಕ್ರಿಷ್ಣ ರಾಮ ರಾಘವೇಂದ್ರ , ಆಂಜನೇಯ ಮತ್ತಿತರರು ಯಾಕೆ ನಮ್ಮ ದೇಶದಲ್ಲೇ ಹುಟ್ಟಿದರು. ಯಾಕೆ ಅಮೇರಿಕಾನಲ್ಲೋ ಅಥವ ಆಸ್ಟೇಲಿಯಾನಲ್ಲೋ ಹುಟ್ಟಲಿಲ್ಲ
ಹಾಗೆ ಕ್ರೈಸ್ತರ ಹಾಗೂ ಇನ್ನಿತರ ಧರ್ಮದವರ ದೇವರುಗಳು ಇಲ್ಲಿ ಯಾಕೆ ಹುಟ್ಟಲಿಲ್ಲ.

ನಾವು ದೇವರು ಒಬ್ಬನೇ ಅಂತೀವಿ. ಬೇರೆಯವರೂ ದೇವರು ಒಬ್ಬನೇ ಅಂತಾರೆ ಆದರೆ ? ಆ ದೇವರು ಯಾರು? ನಾವು ಗುಡಿಯಲ್ಲಿ ಹುಡುಕುತ್ತೀವಿ. ಆದರೆ ಅವರು ಮಸಿದಿ ಚರ್ಚನ್ನಲ್ಲಿ ಹುಡುಕುತ್ತಾರೆ.

ಅವರಿಗೂ ಪವಾಡಗಳಾಗುತ್ತವೆ ನಮಗೂ ಪವಾಡಗಳಾಗುತ್ತವೆ.

ಹಾಗಿದ್ದರೆ ಈ ದೇವರ ಮೂಲ ಕಲ್ಪನೆ ಏನು. ಅವನು ಯಾರು ಎಲ್ಲರಿಗೂ ಒಂದೇನೆ ಅಥವ ಬೇರೆ ಬೇರೆ ಜನರಿಗೆ ಬೇರೆ ಬೇರೆಯೇ?

‹ ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? ›
  • ಇತಿಹಾಸ
~.~
  • Login or register to post comments
  • 631 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 26, 2008 - 4:05pm — pallavi.dharwad

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

pallavi.dharwad's picture

ರೂಪಾ,

ಮನುಷ್ಯರೆಲ್ಲ ಒಂದೇ, ಆದರೆ ಹೆಸರು ಬೇರೆ ಬೇರೆ ಇಲ್ಲವೆ? ಇದೂ ಒಂಥರಾ ಹಾಗೇ. ಎಲ್ಲರೂ ಒಂದೇ ಎಂದರೂ, ನಮ್ಮ ನಮ್ಮ ಮನೆಗಳಲ್ಲಿ ನಾವಿರುತ್ತೇವೆ. ಅದನ್ನು ನಮ್ಮ ಇಷ್ಟಕ್ಕೆ ತಕ್ಕಂತೆ ರೂಪಿಸಿಕೊಂಡಿರುತ್ತೇವೆ. ಮನುಷ್ಯರೆಲ್ಲ ಒಂದೇ ಅಂದರೂ, ನಮ್ಮ ಹೊಟ್ಟೆಯಲ್ಲಿ ಹುಟ್ಟಿದರೆ ತಾನೆ ಅವು ನಮ್ಮ ಮಕ್ಕಳು. ಹಾಗಂತ ನೆರೆಹೊರೆಯವರ ಮಕ್ಕಳನ್ನು ನಮ್ಮ ಮಕ್ಕಳೆಂದುಕೊಳ್ಳುತ್ತೇವೆಯೆ? ಇದೂ ಹಾಗೇ.

ನಮ್ಮ ಪರಿಸರ ನಮ್ಮ ನಂಬಿಕೆಗಳನ್ನು, ಆಚರಣೆಗಳನ್ನು, ಸಂಪ್ರದಾಯಗಳನ್ನು, ಭಾಷೆಯನ್ನು ನಿರ್ಧರಿಸುತ್ತದೆ. ದೇಹದ ಬಣ್ಣ ಕೂಡ ನಿರ್ಧಾರವಾಗಿದ್ದು ಹೀಗೇ. ಎಲ್ಲದರ ಹಿಂದೆ ಇರುವುದು ಒಂದೇ. ಅದನ್ನು ಯಾವ ಹೆಸರಿಂದಾದರೂ ಕರೆಯಿರಿ ಅಥವಾ ಕರೆಯದೇ ಸುಮ್ಮನಿರಿ. ಚಲನಚಿತ್ರದ ಪರದೆಯಂತೆ ಎಲ್ಲ ಚಿತ್ರಗಳ ಹಿಂದೆ ನಿರ್ವಿಕಾರವಾದ ಒಂದಿರುತ್ತದೆ. ಅದಕ್ಯಾಕೆ ಇಷ್ಟೊಂದು ಯೋಚನೆ ಮಾಡುತ್ತಿದ್ದೀರಿ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 4:23pm — roopablrao

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

roopablrao's picture

ಹಾಗಿದ್ದರೆ ನಿಮ್ಮ ಪ್ರಕಾರ
ದೇವರ ಕಲ್ಪನೆ ನಮ್ಮದು ನಾವೆ ರೂಪಿಸಿಕೊಂಡಿದ್ದಾ? ದೇವರ ಅಸ್ತಿತ್ವವನ್ನು ನಮ್ಮ ಸೃಷ್ಟಿ ಅಂದುಕೊಳ್ಳೋದಾ?
ಯೊಚನೆ ಅಂತ ಏನು ಮಾಡ್ತಿಲ್ಲ ಆದರೆ ಕೆಲವೊಮ್ಮೆ ಏ ಥರದ ಪ್ರಶ್ನೆಗಳು ಕಾಡಿದಾಗ ಉತ್ತರಕ್ಕಾಗಿ ಹುಡುಕಾಡುತ್ತೇನಷ್ಟೆ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 5:14pm — Shivakumar.Revadi

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

Shivakumar.Revadi's picture

ನಿಮ್ಮ ಈ ಪ್ರಶ್ನೆಗೆ ಉತ್ತರ, ಶಿವರಾಮ್ ಕಾರಂತರ " ನಮ್ಮ ಕಲ್ಪನೆಯನ್ನು ಮೀರಲಾರದ ದೇವರು" ಎಂಬ ಲೇಖನದಲ್ಲಿ ನೋಡಿರಿ, ೮೬-೮೭ರಲ್ಲಿ ಪಿ.ಯು.ಸಿ. ಗೆ ಕನ್ನಡ ಪಠ್ಯಕ್ಕಿತ್ತು.
ಆದರಲ್ಲಿ ಕಾರಂತ ಹೇಳುತ್ತಾರೆ ನೀವು ರಾಮನ ಅಥವಾ ಕ್ರಿಷ್ಣನ ಯಾವೊಂದೂ ಫೊಟೊವನ್ನಾಗಲಿ, ವಿಗ್ರಹವನ್ನಾಗಲಿ ನೊಡಿರದಿದ್ದರೆ ನಿಮಗೆ ರಾಮಕ್ರಿಷ್ಣರ ಕಲ್ಪನೆ ಬರಲು ಸಾದ್ಯವೇ ಇಲ್ಲ. ನಾವೀಗ ಕಲ್ಪಿಸುತ್ತಿರುವ ಸುಮಾರು ದೇವರುಗಳು ಕಲಾವಿದ ರವಿವರ್ಮನ ಕಲ್ಪನೆಯ ಕೂಸುಗಳು, ಇವೆಲ್ಲಾ ಹರಡಲು ಶಿವಕಾಶಿಯ ಬಣ್ಣದ ಮುದ್ರಣಗಳೂ ಕಾರಣ.

ಸಿಕ್ಕರೆ ಓದಿ ಮತ್ತು ಬೇರೆಯವರೊಂದಿಗೆ ಹಂಚಿಕೊಳ್ಳಿ.
---ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 5:25pm — savithru

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

savithru's picture

>>>ನಮ್ಮ ಕಲ್ಪನೆಯನ್ನು ಮೀರಲಾರದ ದೇವರು"

ಈ ದೇವರ ಬಗ್ಗೆ ನನ್ನ observation ಗಳು ....
>ಉತ್ತರದ ಶಿವನಿಗೆ ಮೀಸೆ ಇಲ್ಲ.
ದಕ್ಷಿಣ ಭಾರತದ ಶಿವನಿಗೆ ಮೀಸೆ ಉಂಟು . (ಕೆಲವೊಮ್ಮೆ ಗಡ್ಡವೂ).

>ಶರಣರ ಪ್ರಕಾರ ಶಂಕರ ಇಷ್ಟಲಿಂಗಧಾರಿ. ವೈದಿಕರ ಶಿವ ಜನಿವಾರ ಧರಿಸಿರುತ್ತಾನೆ. ಆದ್ರೆ ಜನಿವಾರ ಧರಿಸಿರುವ ಶಿವನನ್ನೇ ನಾವು ಹೆಚ್ಚು ಕಾಣುವುದು!

>ಶರಣರ ಪ್ರಕಾರ ಶಿವ ಅಜ್ನಾಚಕ್ರದ ಸ್ತಳದಲ್ಲಿ ವಿಭೂತಿಯನ್ನು ಇಟ್ಟಿರುತ್ತಾನೆ. ವೈದಿಕರ ಶಿವ ಕುಂಕುಮ ಇಟ್ಟಿರುತ್ತಾನೆ.

>ಶರಣರ ಪಾರ್ವತಿ ಕುಂಕುಮ - ವಿಭೂತಿಧಾರಿ. ಆದ್ರೆ ಬೇರೆ ಪಾರ್ವತಿಗೆ ವಿಭೂತಿಯಿಲ್ಲ.

ಇನ್ನೂ ತುಂಬ ವಿಷಯ ಬರೀಬಹುದು!.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 9:49am — kannadakanda

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

kannadakanda's picture

ಈ ಪ್ರಶ್ನೆಗೆ ನೀವೇ ಉತ್ತರ ಹುಡುಕಿಕೊಳ್ಳಬಾರದೇಕೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 11:29am — roopablrao

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

roopablrao's picture

ಈ ಪ್ರತಿಕ್ರಿಯೆ ನನಗಾದರೆ
ಉತ್ತರ ಸಿಗುವಂತಿದ್ದರೆ "ಉತ್ತರ ಸಿಗದ ಪ್ರಶ್ನೆಗಳು " ಅಂತ ಟೈಟಲ್ ಕೊಡುತ್ತಿರಲಿಲ್ಲ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 6:01pm — yuvapremi

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

yuvapremi's picture

ಈ ಪ್ರಶ್ನೆಗೆ ನನ್ನ ಅನುಭವದ ಉತ್ತರ ಸರಿಹೋಗುತ್ತದೊ ಇಲ್ಲವೊ ಗೊತ್ತಿಲ್ಲ. ಆದರೆ ರೊಪ ಮ್ಯಾಡಮ್ ಮುಂದೆ ಇರಿಸುತ್ತೇನೆ. ದೇವರಂತೆ (ಹಾಗೆ ಸುಮ್ಮನೆ) ಒಪ್ಪಿಸಿಕೊಳ್ಳಿ. Smiling

"ದೇವನೊಬ್ಬ, ನಾಮ ಹಲವು" ಎಂಬುದು ಎಲ್ಲರಿಗು ಗೊತ್ತಿರುವ ವಾಡಿಕೆ ಹಾಗು ಮಾತು..!!

ನನ್ನ ಪ್ರಕಾರ ದೇವರಿಗೆ ಬಣ್ನವಿಲ್ಲ, ವಯಸು ಗೊತ್ತಿಲ್ಲ ಮತ್ತು ಆಕಾರವಿಲ್ಲವೇ ಇಲ್ಲ. ಅದು ಒಂದು ಮುಟ್ಟಲಾಗದ ಶಕ್ತಿ. ಒಂದು ರೀತಿಯ ಮ್ಯಾಗ್ನಟಿಕಲ್ ಫ಼ೋರ್ಸ್ ನಮ್ಮನ್ನು (ಪ್ರತಿ ಜೀವಿಯನ್ನು) ಕುಣಿದಾಡಿಸುತ್ತದೆ.

ಈ ದೇವರು ಯಾರು/ಏನು ಎಂದು ಚರ್ಚಿಸುವುದು ಕಂಡಿತ ಸಮಯ ವ್ಯೇಯ ಮಾಡಿದಂತಾಗುವುದಿಲ್ಲ. ಏಕೆಂದರೆ ದೇವರನ್ನು ಕಾಣಲು ನಾವು ಮಾಡುವ ಪ್ರತಿ ಪ್ರಯತ್ನದಿಂದ ನಮ್ಮನ್ನು ನಾವು ಹೆಚ್ಚು ಹೆಚ್ಚು ತಿಳಿದುಕೊಳ್ಳುವಂತಹ ಅನುಭವ/ಅವಕಾಶ ಆಗುತ್ತದೆ/ಸಿಗುತ್ತದೆ.

ನನಗೆ ತಿಳಿದ ಪ್ರಕಾರ ಏಸು ಕ್ರಿಸ್ತನನ್ನು ಮೊದಲ ದಿನದಿಂದಲೆ ದೇವರೆಂದು ಜನರು ನಂಬಲಿಲ್ಲ. ಅವನು ಇದ್ದಂತಹ (on earth in the form of human) ಕಾಲದಲ್ಲಿ ಸುಮಾರು ಮುನ್ನೊರು ಜನರು ಏಸುವಿನಂತೆ ವರ್ತಿಸುತಿದ್ದರಂತೆ. ಏಸುವನ್ನು ದೇವರೆಂದು ಗುರುತಿಸಲು ಏಸುವನ್ನು ಚುನಾವಣೆಗೊ ದೊಕಿದ್ದರಂತೆ. Shocked

ಆವರವರ (ಮನುಷ್ಯನ) ಭಾವಕ್ಕೆ ಪ್ರತಿ ವಸ್ತು ಬೇರೆ ಬೇರೆ. ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ (ಇದೊಂದು ಕವನದ ತುಣುಕು).

ದೇವರು ಎಲ್ಲಿದ್ದಾನೆ,ಹೇಗಿದ್ದಾನೆ ಎಂಬುದನ್ನು ನಾವು ಬದಿಗಿಟ್ಟು, ಯಾವುದದು ಹೊಸ ಶಕ್ತಿ, ಅದು ಹೇಗೆ ನಮ್ಮನ್ನು ಆಡಿಸುತ್ತಿದೆ ಎಂಬುದನ್ನು ನಾವು ಕಂಡುಕೊಳ್ಳಬೇಕು. ಆಗ ಮಾತ್ರ ದೇವರು ಇರುವಿಕೆ ನಮಕೆ ತಿಳಿಯುತ್ತದೆ.

ನೀವು ಮಾಡುವ ಪ್ರತಿ ಕಾರ್ಯದಲ್ಲು ಆ ಶಕ್ತಿಯ ಅನುಭವವನ್ನು ಕಂಡುಕೊಳ್ಳಬಹುದು. ಉದಾಹರಣೆ : ನೀವು ನಿಮ್ಮ ಮನೆಯಲ್ಲಿ ಏನೊ ಒಂದು ವಸ್ತುವನ್ನು ಎಲ್ಲೊ ಇಟ್ಟು ಮರೆತಿರಬಹುದು. ನೀವು ಎಲ್ಲ ಕಡೆಗಳಲ್ಲು ಎಷ್ಟು ಹುಡುಕಿದರು ಅದು ಸಿಗದಿರಬಹುದು (ಆ ವಸ್ತು ಅಲ್ಲೇ ಇದ್ದರು). ಆಗ ಒಂದು ಕ್ಷಣ ಮನಸನ್ನು ಶಾಂತಸ್ವರೊಪಕ್ಕೆ ತಂದು ಎಲ್ಲ ಚಿಂತೆಯಿಂದ ದೊರ ತೆಗೆದುಕೊಂಡು ಹೋಗಿ. ಆಗ ನಿಮ್ಮ ಮನಸು ಬಹಳ ಹಗುರವಾದಂತಾಗುತ್ತದೆ. ಈ ಸಮಯದಲ್ಲಿ ನೀವು ಆಗಲೇ ಹುಡುಕಿದ್ದಲ್ಲೆ ಮತ್ತೆ ಹುಡುಕಿ, ನಿಮಗೆ ಆ ವಸ್ತು ಸಿಗುತ್ತದೆ.

ಈ ಶಕ್ತಿಯನ್ನೆ ದೇವರು ಎಂದು ಕರೆಯುತ್ತಾರೆ.

ಒಂದು ಅನುಭವ : ಕೆಲವು ವರ್ಷದ ಹಿಂದೆ ನಮ್ಮ ತಾಯಿ ಮನೆಯಲ್ಲಿ ಒಂದು ಹೊಸ ಪೊಜೆ ಮಾಡುತ್ತಿದ್ದರು. ಆ ಪೊಜೆಗೆ ನಮ್ಮ ಮನೆಯಲ್ಲಿ ಆ ದೇವರ ಫ಼ೋಟೊ ಇರಲಿಲ್ಲ.ಅದಕ್ಕೆ ನಮ್ಮ ತಾಯಿ ಮನೆಯಾಚೆ ಹೋಗಿ ನಾಲ್ಕು ಸಣ್ಣ ಬಿಲ್ಲೆ (ಲಗೋರಿ ಆಡುವ ಕಲ್ಲು) ಆಕಾರದ ಕಲ್ಲನ್ನು ತಂದು ಎಲೆಯ ಮೇಲೆ ಇಟ್ಟು, ಜೊತೆಗೆ ಕುಂಕುಮವಿಟ್ಟು ಪೊಜೆ ಮುಗಿಸಿದರು. ಇದರಿಂದ ತಿಳಿಯುವುದೇನೆಂದರೆ ದೇವರಿಗೆ ಇಂತಹುದೇ ಆಕಾರವಿಲ್ಲ. ದೇವರೆನ್ನುವ ಶಕ್ತಿ ನಮ್ಮ ಮನಸನ್ನು ನಾಟಲು ಯಾವ ಆಕಾರವನ್ನಾದರು ಪಡೆಯಬಹುದು ಎಂಬುದು.

ದೇವರೆಂಬುದು ಒಂದು ಅದ್ಭುತ ಶಕ್ತಿ ಹೌದು, ಅದನ್ನು ನಿಮ್ಮ ಪ್ರಯೋಗಕ್ಕೆ ಹುಡುಕಿದರೆ ಕಂಡಿತ ಸಿಗುವುದಿಲ್ಲ......!! Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 5:47pm — gururajkodkani

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

gururajkodkani's picture

ಗುಱುಱಾಜ
www.kannadaguru.blogspot.com

ದೇವರು,ಧರ್ಮ ಪ್ರತಿಯೊ೦ದು ಒ೦ದೇ ರೀತಿಯ ವಿಚಾರಧಾರೆಗಳನ್ನು ಹೊ೦ದಿದ ಒ೦ದು ಸಮುದಾಯದ ಕಲ್ಪನೆ ಎನಿಸುತ್ತದೆ.ಉದಾಹರಣೆಗೆ ಹಿ೦ದೂಧರ್ಮದವರಿಗೆ ಗೋವು ದೇವರಿಗೆ ಸಮಾನ .ಹಾಗಾಗಿ ಅವರ್ಯಾರೂ ಗೋಮಾ೦ಸ ಭಕ್ಷಣೆಯ ಕಲ್ಪನೆಯೆ ಹಿ೦ದೂ ಧರ್ಮದಲ್ಲೆ ಮಹಾಪಾಪ.ಆದರೆ ಅದೇ ಗೋವಿಗೆ ಕ್ರೈಸ್ತ ಧರ್ಮ್ದಲ್ಲಾಗಲಿ ಇಸ್ಲಾ೦ ಧರ್ಮದಲ್ಲಾಗಲಿ ಯಾವ ಪ್ರಾಶಸ್ತ್ಯವೂ ಇಲ್ಲ.ಹಾಗಾಗಿ ಅವರಿಗೆ ಗೋಮಾ೦ಸ ಭಕ್ಷಣೆ ವಿಶೇಷ ಎನಿಸದು. ದೇವರು ಕೂಡ ಅಷ್ಟೇ

ಬ್ರಾಹ್ಮಣರಿಗೆ ಮಾ೦ಸಾಹಾರ ವರ್ಜಿತ ,ಹಾಗಾಗಿ ಅವರು ದೇವರಿಗೆ ಮಾ೦ಸದ ಪ್ರಸಾದದ ಕಲ್ಪನೆ ಕೂಡಾ ಮಾಡಲಾರರು.ಆದರೆ ಕೆಲವು ಬುಡಕಟ್ಟಿನ ಜನ ಮಾ೦ಸಹಾರವನ್ನು ದೇವರಿಗೆ ಪ್ರಸಾದವನ್ನಾಗಿ ಅರ್ಪಿಸುತ್ತಾರೆ.ಕಾರಣವೇನೆ೦ದರೆ ಆ ಜನ ಮಾ೦ಸಹಾರಿಗಳು! ಜನರಿದ್ದ೦ತೆ ಅವರ ದೇವರು ಅಷ್ಟೆ.

ಯಾಕೆ ಕ್ರೈಸ್ತ ದೇವರು ಇಲ್ಲಿ ಹುಟ್ಟಲಿಲ್ಲ,ಯಾಕೆ ಹಿ೦ದೂ ದೇವರು ಅಲ್ಲಿ ಹುಟ್ಟಲಿಲ್ಲ ಎ೦ಬುದಕ್ಕೆ ನನ್ನದೊ೦ದು ಊಹೆಇದೆ.ಬಹುಶ: ಆಯಾ ಪ್ರದೇಶಗಳಲ್ಲಿ ಹುಟ್ಟಿದ ಅತ್ಯ೦ತ ಒಳ್ಳೆಯ ಮನಸ್ಸಿನ ,ಉದಾರಿ,ಜನರ ಸಹಾಯಕ್ಕೆ ಸದಾ ಕಾಲ ಧಾವಿಸುವ ಪ್ರಭಾವಿ ವ್ಯಕ್ತಿಯನ್ನು ಆಗಿನ ಕಾಲದ ಜನ ದೇವರೆ೦ದುಕೊ೦ಡರೇನೋ .ಏಸು ರೋಮನಲ್ಲಿ ಜನಿಸಿದ ಆ ತರಹದ ವ್ಯಕ್ತಿಗಳಲ್ಲೊಬ್ಬನಾಗಿರಬಹುದು,ಹಾಗೆ ರಾಮ ಕೂಡಾ ಒಬ್ಬನಾಗಿರಬಹುದು.ಉಳಿದ೦ತೆ ಪವಾಡಗಳೆಲ್ಲವೂ ಕಪೋಲಕಲ್ಪಿತ ಎನ್ನುವುದು ನನ್ನ ಭಾವನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 6:27pm — savithru

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

savithru's picture

>ನಾವು ದೇವರು ಒಬ್ಬನೇ ಅಂತೀವಿ
ಇಲ್ಲಿ ನಾವು ಅಂದ್ರೆ ಯಾರು?

ದ್ವೈತ ಮತ್ತು ವಿಶಿಷ್ಟಾದ್ವೈತ ದವರಂತೂ ಹಲವು ದೇವರನ್ನು ಒಪ್ಪುತ್ತಾರೆ. ಶ್ರಿಮನ್ನಾರಾಯಣನನ್ನು ಸುಪ್ರೀಂ ಗಾಡ್ ಅಂತ ಪ್ರೂವ್ ಮಾಡಕ್ಕೆ ಏನೆಲ್ಲ ವಾದಾಟ ಮಾಡಿದ್ದಾರೋ , ಪುಸ್ತಕ ಬರೆದಿದ್ದಾರೋ ಆ ನಾರಾಯಣನಿಗೆ ಗೊತ್ತು!.
ಅದ್ವೈತ ಒಂದು ದೇವರು ಅಂತ ಅಂದ್ರೂ ಹಲ ದೇವರಿಗೆ ( ಒಂದೇ ದೇವರ ಹಲ ರೂಪಗಳು?!) ಒಲವು ತೋರುತ್ತೆ.

ಹಾಗೆ ನಮ್ಮ ಮುಂದೆ ಇರುವ ಹಲ ಮತಗಳಲ್ಲಿ ಏಕ ದೇವತೊಪಾಸನೆ ಇರೋದು ಕೇವಲ ಶರನರಲ್ಲಿ ಮಾತ್ರ. ವೆದಾನ್ತಕ್ಕೆ ತುಂಬಾ ಹತ್ತಿರ ಇರೋದು ಅದೇ .. ನನ್ನ ಪ್ರಕಾರ !.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 7:57am — mahesha

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

mahesha's picture

ಈ ಸಂಗತಿ ಮೇಲೆ ಮಾತಾಡೋದು ಟಯಿಮ್ ವೇಸುಟು.

ದೇವರು ಅನ್ನೋ ಎಂಟಿಟಿಯ ಇರುವಿಕೆಯೇ ಇಲ್ಲ.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 12:20pm — roopablrao

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

roopablrao's picture

ಮಾಯ್ಸ ಅವರೇ

ಸೊ ನಿಮಗೆ ದೇವರ ಬಗ್ಗೆ ನಂಬಿಕೇನೆ ಇಲ್ಲ ಅಂದಂಗಾಯ್ತು

ಹಂಗಾದ್ರೆ ಪರಪಂಚ ಯಾಕೆ ಇದೆ ನಾವೆಲ್ಲ (ಅಂದ್ರೆ ನಮ್ಮ ಮೊದಲ್ ಮಾನವರು) ಹ್ಯಾಗೆ ಹುಟ್ಟಿದರು . ಅಥವ ಉದ್ಭವ ಆದರು? ಇದಕ್ಕೆ ನಿಮ್ಮ ಉತ್ತರ ಏನು
ಆ ದೇವ್ರು ನಮಗೆ ಇಷ್ಟೆಲ್ಲಾ ಕೊಟ್ಟಾಗ ಅವನ ಮೂಲದ ಬಗ್ಗೆ ಮಾತಾಡೋದು ಟೈಮ್ ವೇಸ್ಟ್ ಹ್ಯಾಗೆ ಆಗುತ್ತೆ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 1:59pm — mahesha

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

mahesha's picture

’ದೇವರು’ ಇದಕ್ಕೆ ನಾನು ಉತ್ತರ ಹೇಳಲ್ಲ... ಅದಕ್ಕೆ ಉತ್ತರ ಯೋಚಿಸೋದು ಇಲ್ಲ...ಟಯಿಮ್ ವೇಸ್ಟು..!! Smiling

ಇನ್ನು ನಾವು ಹೇಗೆ ಹುಟ್ಟಿದ್ದು ಇದಕ್ಕೆ ಬಯಾಲಜಿಯಲ್ಲಿ ವಿವರಣೆ ಇದೆ. ಪರಪಂಚ ಹೆಂಗೆ ಬಂತು ಅನ್ನೋದಕ್ಕೆ ಉತ್ತರ ಇವೊತ್ತು ಸರಿಯಾಗಿ ಗೊತ್ತಿಲ್ಲ(ಹಿಂದೆ ನಮಗೆ ಬೆಂಕಿಯನ್ನ ಹೇಗೆ ಮಾಡೋದು, ಟೀವಿ ಹೇಗೆ ಮಾಡೋದು ಇವೆಲ್ಲ ಗೊತ್ತಿರಲಿಲ್ಲ); ಮುಂದೆ ಒಂದು ದಿನ ಗೊತ್ತಾಗಬೋದು.
ಗೊತ್ತಾಗದಿದ್ದರೂ ಒಂಚೂರು ಅಡ್ಡಿಯಿಲ್ಲ..!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 2:21pm — madhava_hs

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

madhava_hs's picture

ನೋಡ್ರೀ, ಎಷ್ಟೇ ವೈದ್ಯಕೀಯ ವಿಜ್ಞಾನ ಮುಂದುವರೆದರೂ ಇವತ್ತಿಗೂ ರಕ್ತ ತಯಾರಿಸುವುದು ಹೇಗೆ ಎಂದು ಗೊತ್ತಿಲ್ಲ. ಒಬ್ಬನಿಗೆ ರಕ್ತ ಬೇಕಾದರೆ ಇನ್ನೊಬ್ಬ ಮನುಷ್ಯನ ದೇಹದಿಂದಲೇ ಬರೆಬೇಕು. ಒಂದು ಬೈಪಾಸ್ ಸರ್ಜರಿಗೆ ದೇಹದ ಇನ್ನೊಂದು ರಕ್ತನಾಡಿ ಜೋಡಿಸಬೇಕೇ ವಿನಹ ಅದನ್ನೂ ತಯಾರಿಸಲಾಗಿಲ್ಲ. ಒಂದು ಸಾಮಾನ್ಯ ನೀರನ್ನು ಹೇಗೆ ಉತ್ಪತ್ತಿ ಮಾಡಬೇಕು ಎಂದು ಎಂತಹ ವಿಜ್ಞಾನಕ್ಕೂ ಗೊತ್ತಿಲ್ಲ. ಪೆಟ್ರೋಲು, ಡೀಸೆಲ್ಲು ಎಲ್ಲವೂ ನಿಸರ್ಗ ಉತ್ಪತ್ತಿ ಮಾಡಬೇಕು ನಾವು ಬಳಸಬೇಕು. ಇನ್ನು ತಿನ್ನುವ ಅಕ್ಕಿ, ಗೋಧಿ..ಉಹುಂ..ಏನು ತಯಾರಿಸುವುದೂ ಗೊತ್ತಿಲ್ಲ. ಹೀಗೆ ನಮ್ಮ ಎಲ್ಲ ಅಗತ್ಯಗಳಿಗೂ ಒಂದು ಅವ್ಯಕ್ತ ಶಕ್ತಿಯನ್ನವಲಂಬಿಸಿದ್ದೇವೆ. ಅದೇ ದೇವರೆಂದು ನಂಬಿದ್ದೇವೆ.

ಅದು ಬಿಡಿ, ತಿನ್ನುವುದಷ್ಟೇ ನಮಗೆ ಗೊತ್ತು. ಅದನ್ನು ಜೀರ್ಣಮಾಡಿಸುವುದು ನಮ್ಮ ಕೈಯಲ್ಲಿಲ್ಲ ಎಂದರೆ ಆಶ್ಚರ್ಯವಲ್ಲ ಅಲ್ಲವೇ? ಅದು ಹೋಗಲಿ ಉಸಿರಾಟವನ್ನಾದರೂ ನಾವು ಐಚ್ಚಿಕವಾಗಿ ಮಾಡುತ್ತಿದ್ದೇವೆಯೇ? ನಾವು ನಿದ್ದೆ ಮಾಡುವಾಗ ಯಾರು ಉಸಿರಾಟ ಮಾಡಿಸುವವರು, ಜೀರ್ಣ ಮಾಡಿಸುವವರು? ಮನೆಯ ಎದುರಿಗೆ ಹೋಗುವಾಗ ತಲೆಮೇಲೆ ನೀರು ಬಿದ್ದರೆ ಮಾಳಿಗೆ ಮನೆಯವರು ಸುರಿದಿರಬೇಕು ಎಂದು ಕತ್ತೆತ್ತಿ ನೋಡುವ ನಾವು, ಮಳೆ ಹುಯ್ದಾಗ ಮಾತ್ರ ಏಕೆ ’ಅದಾಗೆ ಹುಯ್ಯುತ್ತಿದೆ’ ಎಂದು ಹುಯಿಲೆಬ್ಬಿಸುತ್ತೇವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 2:26pm — Sunil Jayaprakash

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

Sunil Jayaprakash's picture

ಮನ್ನಿಸಿ ಈ ಎಳೆಯನ್ನು ನೋಡಿರಲಿಲ್ಲ. ನಿಮ್ಮ ಪ್ರಶ್ನೆಗಳಿಗೆ ಧಾರ್ಮಿಕವಾಗಿ ಉತ್ತರ ಹೇಳುವ ಶಕ್ತಿ ನನ್ನಲ್ಲಿಲ್ಲ. ಆದರೆ ಸಾಂಸ್ಕೃತಿಕವಾಗಿ ನನ್ನ ಅನಿಸಿಕೆ ಇಷ್ಟು. ಪ್ರಶ್ನೆಗಳಿಗೆ ಸೀದಾ ಉತ್ತರ ನೀಡುವ ನಿಟ್ಟಿನಲ್ಲಿ ಒಂದು ಪ್ರಯತ್ನ.

೧. ಹಿಂದುಗಳ (ನಾವು ) ದೇವರುಗಳು ಕ್ರಿಷ್ಣ ರಾಮ ರಾಘವೇಂದ್ರ , ಆಂಜನೇಯ ಮತ್ತಿತರರು ಯಾಕೆ ನಮ್ಮ ದೇಶದಲ್ಲೇ ಹುಟ್ಟಿದರು.

ಉ: ಎಲ್ಲಿಯೂ ಯಾವ ಮನುಷ್ಯನೂ ದೇವರಾಗಿ ಹುಟ್ಟಲಿಲ್ಲ. ಆದರೆ, ಭಾರತದಲ್ಲಿ ಏನಪ್ಪಾ ಅಂದರೆ. ಯಾರಾದರು ಸ್ವಲ್ಪ "ಒಳ್ಳೆಯ"(Subjective) ಕೆಲಸ ಮಾಡಿದರೆ ಜನರು ಅವರನ್ನು ದೇವರು ಅಂತ ಜನ ಅಂದುಕೊಳ್ಳುವುದು ವಾಡಿಕೆ. ಈಗ ನೋಡಿ. ರಾಘವೇಂದ್ರ ಸ್ವಾಮಿಗಳು ದೇವರಲ್ಲ, ಅವರು ಸಂಸಾರ ಬಿಟ್ಟು ಸನ್ಯಾಸಿಯಾದವರು. ಆದರೆ ಅವರ ತತ್ವಗಳಿಗೆ ಮಾರುಹೋದ ಜನರು ಅವರನ್ನು ದೇವರಾಗಿಸಿಕೊಂಡರು. ಈಗೀಗ ಗಾಂಧಿಯೂ ಅಲ್ಲಲ್ಲಿ ದೇವರಾಗಿದ್ದಾರೆ. ಇದಕ್ಕೆ ಪೂರಕವಾಗಿ ಗುರುರಾಜರ ಕಾಮೆಂಟ್ ನೋಡಿ.

೨. ಯಾಕೆ ಅಮೇರಿಕಾನಲ್ಲೋ ಅಥವ ಆಸ್ಟೇಲಿಯಾನಲ್ಲೋ ಹುಟ್ಟಲಿಲ್ಲ

ಅಲ್ಲೆಲ್ಲ "ಒಳ್ಳೆಯ"(Subjective) ಕೆಲಸ ಮಾಡಿದವರಿಗೆ ದೇವರ ಪಟ್ಟವನ್ನು ಕಟ್ಟಲ್ಲ. ಅಂದರೆ ಮನುಷ್ಯರಿಗೆ God Status ಸಿಕ್ಕಲ್ಲ. ಮನುಷ್ಯನನ್ನು ಮನುಷ್ಯನಾಗಿಯೇ ಕಾಣುತ್ತಾರೆ.

೩. ಹಾಗೆ ಕ್ರೈಸ್ತರ ಹಾಗೂ ಇನ್ನಿತರ ಧರ್ಮದವರ ದೇವರುಗಳು ಇಲ್ಲಿ ಯಾಕೆ ಹುಟ್ಟಲಿಲ್ಲ.

೧. ಮದರ್ ತೆರೆಸಾರಿಗೆ ದೇವರ ಪಟ್ಟ ಸಿಕ್ಕಿದೆ. ಹಾಗೆಯೇ ಸಂತ ಮೇರಿಯಮ್ಮನ ಚರ್ಚು ಗಮನಿಸಿಲ್ಲವೇ.
೨. ಬೆಂಗಳೂರಿನಲ್ಲಿ ಹನುಮಗಿರಿ ಅಂತ ಇದೆ. ಅಲ್ಲಿಯ ಕತೆ ಹೀಗೆ. ಟಿಪ್ಪು ಸುಲ್ತಾನನ ಸೈನಿಕರು ಒಬ್ಬಳನ್ನು ಅಟ್ಟಿಸಿಕೊಂಡು ಬಂದಾಗ, ಅವಳು ಬೆಟ್ಟದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಳಂತೆ. ಆ ಏರಿಯಾದಲ್ಲಿ ಅವಳು ದೇವತೆಯಾಗಿದ್ದಾಳೆ. ಅವಳಿಗೆ ಒಂದು ದೇವಸ್ಥಾನವಿದೆ (ಚರ್ಚು).

ಮೇಲಿನ ಮೂರು ಪ್ರಶ್ನೆಗಳು ಭಾರತೀಯ ನಾಗರೀಕತೆಗೆ ಸಂಬಂಧಿಸಿದ್ದು. ಇವಕ್ಕೂ ನಾಸ್ತಿಕ, ಆಸ್ತಿಕ ವಾದಕ್ಕೂ (ಅಥವಾ ಧಾರ್ಮಿಕ ಹಿನ್ನೆಲೆಯ ದೇವರಿಗೂ) ಸಂಬಂಧವಿಲ್ಲ. ಇನ್ನು ಮುಂದಿನ ವಾಕ್ಯಗಳನ್ನು ಬೇರೊಂದು ಕಾಮೆಂಟಿನಲ್ಲಿ ನೋಡೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2008 - 5:45pm — rasheedgm

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

rasheedgm's picture

ಸರಿಯಾದ ಪ್ರತಿಕರಿಯೆ ನೀಡಿದ್ದೀರ.

ನನ್ನ ನೆನಪು ಸರಿಯಾಗಿದ್ದರೆ, ಕೆಲವು ಮುಸ್ಲಿಂ ಪಂಡಿತರ ಪ್ರಕಾರ, ವಿಶ್ವದ ಪ್ರಥಮ ಮಾನವ ಎನ್ನಲಾಗುವ ಪೈಗಂಬರ್ ಆದಂ ರ ಪತ್ನಿ ಸ್ವರ್ಗದಿಂದ ಭೂಮಿಗಿಳಿದದ್ದು. ಅಂದಿನ ಭಾರತದ ಭೂಭಾಗ ವಾಗಿದ್ದ ಸಿಲೋನ್ ನಲ್ಲಿಯಂತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2008 - 5:32pm — rasheedgm

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

rasheedgm's picture

ನಾನು ನಂಬುವ ದೇವನಿಗೆ ರೂಪವಿಲ್ಲ, ಆದರೆ ಅವನ ಉಪಸ್ತಿತಿ ಇದೆ. ಸಾಮಾನ್ಯ ನಾವು ಒಬ್ಬ ವ್ಯಕ್ತಿಯನ್ನು ನೆನಪಿಸುವಾಗ, ಕಲ್ಪನೆ ಮಾಡುವಾಗ ನಮ್ಮ ಮನಸ್ಸಲ್ಲಿ ಒಂದು ರೂಪ ಬರುವುದಿದೆ. ಆದರೆ ನಾನು ದೇವರನ್ನು ನೆನಪಿಸುವಾಗ ಯಾವುದೇ ರೂಪ ನನ್ನ ಮುಂದಿರುವುದಿಲ್ಲ..... ಯಾಕಂದರೆ ನಾನು ಅವನನ್ನು ಒಬ್ಬ ವ್ಯಕ್ತಿ ಯಾಗಿ ನಂಬದೆ ಒಂದು ಶಕ್ತಿಯಾಗಿ ನಂಬುತ್ತೇನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡವೇ ಜಾತಿ-ಧರ್ಮ-ದೇವರು ?
  • ದೇವರು
  • 'ದೇವರು' ದೇವರಲ್ಲ !!
  • ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?
  • ಮೂರನೇ ಕಣ್ಣು
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator