ಕನ್ನಡದೊಂದು ಆಟ ಆಡೋಣ ಬನ್ನಿ
ಇವತ್ತು ಮಳೆ ಬರ್ತಾ ಇದ್ದಾಗ ಬೇಡ ಬೇಡ ಅಂದ್ರೂ ನನ್ನ ಬಾಲ್ಯದ ಆಟ ನೆನೆಪಾಗುತ್ತಿದೆ. ಮಳೆ ಬಂತೆಂದರೆ ಸ್ಸಕು ನಮ್ಮ ಅಮ್ಮನ ಮಾಡಿಕೊಡ್ತಿದ್ದ ಬಿಸಿ ಬಿಒಸಿ ಬಜ್ಜಿ ತಿನ್ಕೊಂಡು ಕಾಫಿ ಸವೆದುಕೊಂಡು ಒಂದಾಟ ಆಡ್ತಿದ್ದ್ವಿ.
ಪದ ಗುರುತಿಸೋ ಆಟ ಅದು
ಅಂತಹ ಒಂದು ಆಟ ನಿಮಗೆ ಪದ ಗುರುತಿಸಿ
ಒಂದು ಎರೆಡು ಅಕ್ಕರ ಸೇರಿದರೆ ಕಳುವು ಅಂತ ಅರ್ಥ ಬರುತ್ತೆ
ಒಂದು ಮೂರು ಸೇರಿದರೆ ಸಾಲ ತೆಗೆದುಕೊಳ್ಳುವುದು ಅಂತ ಆಗುತ್ತೆ
ಒಂದು ನಾಲ್ಕು ಸೇರಿದರೆ ನಾವು ಬೇಡವೆಂದು ಎಸೆಯೋದು
ನಾಲ್ಕು ಐದು ಸೇರಿದರೆ ಏಳು ಆಗುತ್ತೆ
ಆರು ನಾಲ್ಕು ಸೇರಿದರೆ ಒಂದೆಡೆ ಬದುಕುವುದು
ಒಂದು ಏಳು ಸೇರಿದರೆ ಭವಿಷ್ಯ ಆಗುತ್ತದೆ
ಇದು ಒಂದು ಪತ್ರಿಕೆ ಆಗಿತ್ತು
ಹೇಳಿ ನೋಡೋಣ
ಉತ್ತರಿಸಿದೋರಿಗೆ ಮತ್ತೊಂದು ಪ್ರಶ್ನೆ ಫ್ರೀ
ರೂಪ

- Login or register to post comments
- 602 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಕನ್ನಡ ಸಪ್ತವಾಣಿ???
ಎರಡನೆ ಪದ ಸರಿಯಾಗಿದೆ ಅನ್ನಿಸ್ತಾ ಇಲ್ಲ. ಆದರು ಮನೆಗೆ ಹೊಗೋದ್ರೊಳಗೆ ಒಂದು ಕಲ್ಲು.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಸರಿಯಾಗಿದೆ
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
>>"ಉತ್ತರಿಸಿದೋರಿಗೆ ಮತ್ತೊಂದು ಪ್ರಶ್ನೆ ಫ್ರೀ"
ಚೆನ್ನಾಗಿದೆ. ಇದು ಸರಣಿಯಾಗಿ ಮುಂದುವರೆಯಲಿ. ಫ್ರೀ ಪ್ರಶ್ನೆಗೆ ಕಾಯ್ತಾ ಇರ್ತೀನಿ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಫ್ರೀ ಪ್ರಶ್ನೆ
ಒಂದು ಮತ್ತು ಆರನೆ ಅಕ್ಶರ ಸೇರಿದರೆ ಈಶನಾಗುತ್ತಾನೆ
ಐದು ಮತ್ತು ಎರೆಡನೆಯದು ಬಹು ಅಮೂಲ್ಯ ಮುತ್ತಾಗುತ್ತದೆ
ಐದು ಮತ್ತು ನಾಲ್ಕನೆಯದು ವಿಷ್ಣುವಾಗುತ್ತದೆ
ಮೂರು ಮತ್ತು ನಾಲ್ಕು ಸೇರಿದರೆ ಬೆಟ್ಟಾವಾಗುತ್ತದೆ
ಆರು ಧೀರ್ಘವಾಗಿ ಮತ್ತು ಏಳು ಸೇರಿದರೆ ತಮಾಷೆಯಾಗುತ್ತದೆ
ಇದು ಒಂದು ಚಲನಚಿತ್ರ ಹಳೆಯದು
ಯಾವುದು ಅದು?
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ರೂಪ, ಭಾರಿ ಚೆನ್ನಾಗಿದೆ ಈ ಆಟ. ಹೀಗೇ ಮುಂದುವರಿಸಿ.
ಈ ಪ್ರಶ್ನೆಗೆ ಉತ್ತರ "ರತ್ನಗಿರಿ ರಹಸ್ಯ".
(ಒಂದು ತಿದ್ದುಪಡಿ: ವಿಷ್ಣು ೫,೪ ಅಲ್ಲ ... ಆರು - ನಾಲ್ಕು )
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ತುಂಬಾ ಥ್ಯಾಂಕ್ಸ್ ನಿಮ್ಮ ತಿದ್ದುಪಡಿಗೆ
ಈಗ ನಂತರದ ಪ್ರಶ್ನೆ
ಮೊದಲನೆಯ ಹಾಗು ಐದನೆಯ ಅಕ್ಶರ ಸೇರಿದರೆ ಮನಸ್ಸಾಗುತ್ತದೆ
ಒತ್ತಿಲ್ಲದ ಎರೆಡನೆಯ ಹಾಗು ಮೂರು ಸೇರಿದರೆ ಹೆಣ್ಣಾಗುತ್ತದೆ
ನಾಲ್ಕನೆಯ ಹಾಗು ಧೀರ್ಘವಲ್ಲದ ಮೂರು ಸೇರಿದರೆ ಮುಂಚೆಯಾಗುತ್ತದೆ
ಯಾವುದದು?
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
"ಚಿನ್ನಾರಿ ಮುತ್ತ "
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಉತ್ತರ: "ಚಿನ್ನಾರಿ ಮುತ್ತ" ?
ತಿದ್ದುಪಡಿ:ನಾಲ್ಕನೆಯ ಹಾಗು ಧೀರ್ಘವಲ್ಲದ ಮೂರು ಸೇರಿದರೆ ಮುಂಚೆಯಾಗುತ್ತದೆ.. ಅಲ್ಲ
ನಾಲ್ಕನೆಯ ಹಾಗು ಧೀರ್ಘವಲ್ಲದ ಎರಡು ಸೇರಿದರೆ ಮುಂಚೆಯಾಗುತ್ತದೆ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಒಂದು ಮತ್ತು ಎರಡು ಸೇರಿ ಬಹು ಅಮೂಲ್ಯ ಮುತ್ತಲ್ಲ, "ಹರಳು" ಆಗಬೇಕಿತ್ತಲ್ಲವ?
"ಏರಿದವನು ಚಿಕ್ಕವನಿರಬೇಕು"
ಉ: ಕನ್ನಡದೊಂದು ಆಟ ಆಡೋಣ ಬನ್ನಿ
>ನಾಲ್ಕು ಐದು ಸೇರಿದರೆ ಏಳು ಆಗುತ್ತೆ
ಈ ಲೆಕ್ಕ ಅಂತೂ ಬೊಂಬಾಟ್!
ಸವಿತೃ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
1 2 3 4 5 6 7
ಕ ನ್ನ ಡ ಸ ಪ್ತ ವಾ ಣಿ
ಸರಿ ಇದೆ ತಾನೆ?
"ಏರಿದವನು ಚಿಕ್ಕವನಿರಬೇಕು"
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಸರಿಯಾಗಿದೆ
ಮುಂದಿನ ಪ್ರಶ್ನೆ
ಚಂದವಲ್ಲಿಯ ತೋಟ
ಮಲೆಗಳಲ್ಲಿ ಮದುಮಗಳು
ಒಂದು ಎರೆಡು ಸೇರಿದರೆ ಬೆಟ್ಟವಾಗುತ್ತದೆ
ಮೊದಲನೆಯ ಹಾಗು ಮೂರನೆಯದು ಸೇರಿದರೆ ಪುತ್ರ
ಮೊದಲನೆಯ ಹಾಗು ಐದನೆಯದು ಸೇರಿದರು ಸುವಾಸಿತ ಮೈಸೂರು ಸುಮದ ಅರ್ಧವಾಗುತ್ತದೆ
ಆರನೆಯ ಹಾಗು ಏಳನೆಯದು ವಿವಾಹದ ಅರ್ಧವನ್ನು ಕೊಡುತ್ತದೆ
ಎಂಟು ಒಂಬತ್ತು ಹತ್ತು ಪುತ್ರಿಯ ಅರ್ಥ ಕೊಡುತ್ತದೆ
ಏನದು?
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಉತ್ತರ ಮೇಲೆ ಇದೆ
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಇದೇನಿದು? ಮೊದಲು ಉತ್ತರ ಆಮೇಲೆ ಪ್ರಶ್ತೆ?
"ಏರಿದವನು ಚಿಕ್ಕವನಿರಬೇಕು"
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಈಗ ನಿಮಗೊಂದು ಸವಾಲು
4-5-6 ಸೇರಿದರೆ ಪ್ರಾಯದಲ್ಲಿ ಬಹುವಾಗಿ ಬೀಳುವಂಥದ್ದು ಎಂಬ ಅರ್ಥ ಕೊಡುತ್ತದೆ,
4-2 ಸೇರಿದರೆ ತೆರಿಗೆ ಎಂದಾಗುತ್ತದೆ,
6-3 ಸೇರಿದರೆ ಬೆಂಕಿಹಾಕು ಎಂದರ್ಥ ಬರುತ್ತದೆ,
5-3 ಸೇರಿದರೆ ಮಧ್ಯಭಾಗ ಎಂದಾಗುತ್ತದೆ,
6-2 ಸೇರಿದರೆ ದೇವರು ಎಂದಾಗುತ್ತದೆ,
4-2-3 ಸೇರಿದರೆ ಇನ್ನೂ ತಿದ್ದುಪಡಿಯಾಗುತ್ತಿರುವ ಬರಹ ಆಗುತ್ತದೆ,
5-6 ಸೇರಿದರೆ ಸ್ವಲ್ಪ ಎಂದಾಗುತ್ತದೆ,
4-3 ಸೇರಿದರೆ ತೀಕ್ಷ್ಣ ಎಂದಾಗುತ್ತದೆ
ಎಲ್ಲ ಸೇರಿದರೆ ಒಂದು ಚಲಚ್ಚಿತ್ರದ ಹೆಸರು.
ಏನು ಹೇಳ್ತೀರಾ?
"ಏರಿದವನು ಚಿಕ್ಕವನಿರಬೇಕು"
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಎರಡು ಕನಸು
ಸವಿತೃ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಇದಕ್ಕೆ ಉತ್ತರ-"ಎರಡು ಕನಸು" ಚಲನಚಿತ್ರ ಅಲ್ವಾ?
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ನೂರಕ್ಕೆ ನೂರು ಸರಿ ಇದೆ.
ಈಗ ನೀವೊಂದು ಸಮಸ್ಯೆ ಕೊಡಿ ನೋಡೋಣ
"ಏರಿದವನು ಚಿಕ್ಕವನಿರಬೇಕು"
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಸೂಪರ್
ಒಂದು ಐದು ಸೇರಿದರೆ ಮಾರನೆಯದಿನ
ಎರೆಡು ಮೂರು ಸೇರಿದರೆ ದೆವ್ವ ಭೂತ
ನಾಲಕ್ಕು ಮೂರು ಸೇರಿದರೆ ಆಚೆಯಾಗುತ್ತದೆ
ಇದು ಒಂದು ಪ್ರವಾಸಿ ಕ್ಶೇತ್ರ
ಯಾವದದು?
http://thereda-mana.blogspot.com/
ರೂಪ
ಉ: ಕನ್ನಡದೊಂದು ಆಟ ಆಡೋಣ ಬನ್ನಿ
"ನಾಗರಹೊಳೆ"
ಇನ್ನೊಂದು,
ಒಂದು ಎರಡು ಸೇರಿದರೆ ಅದೊಂದು ಕಚ್ಚುವ ಕೀಟ
ಒಂದು ನಾಕು ಸೇರಿದರೆ ದನಿ ಅಂತ ಅರಿತ ಬರುತ್ತೆ
ಮೂರು,ಎರಡು ಮತ್ತು ಐದು ಸೇರಿದರೆ ಪುಕ್ಕಲುತನ ಅಂತ ಅರಿತ ಬರುತ್ತೆ.
ಯಾವುದದು?
ಉ: ಕನ್ನಡದೊಂದು ಆಟ ಆಡೋಣ ಬನ್ನಿ
ಏನೋ ಸರಿಯಾಗಿ ಗೊತ್ತಾಗ್ತಿಲ್ವಲ್ಲಾ ...
"ಸೊಳ್ಳೆಪರದೆ" ಒಳಗೆ ಕುಳಿತು ಬರೆದ್ರಾ ಹೇಗೆ ?
ಉ: ಕನ್ನಡದೊಂದು ಆಟ ಆಡೋಣ ಬನ್ನಿ
"ಸೊಳ್ಳೆ ಪರದೆ" ಸರಿ. ನಾನು ಸೊಳ್ಳೆಪರದೆ ಹಾಕಲ್ಲರೀ,. ಬೀಸಣಿಗೆ ಹಾಕೋದು,. ಅದು ಕರೆಂಟ್ ಮೇಲೆ ನಡೆಯುತ್ತಸ್‍ಟೇ/,..
ಉ: ಕನ್ನಡದೊಂದು ಆಟ ಆಡೋಣ ಬನ್ನಿ
kannada sapthavaani