ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ಈಚೆಗೆ 'ಸುದಾ'ವಾರದೋಲೆಯಲ್ಲಿ 'ಹೆಣ್ಹೆತ್ತ'(ಣ್ ಕ್ಕೆ ಹ ಒತ್ತು) ಪದ ನೋಡ್ದೆ. ಇದು ತಪ್ಪು ಬರಹ.
ನಾವು ಉಲಿಯುವಾಗ 'ಹೆಣ್ಣೆತ್ತ'(ಣ ಗೆ ಣ ಒತ್ತು) ಅಂತನೇ ಉಲಿಯಿವುದು.
ಹಾಗೆಯೆ,
ಬೊಮ್ಮನಳ್ಳಿ, ಹೆಸರಿಟ್ಟು, ಬಂದ್ವೋಗು(ಬಂದೋಗು), ಸಿಮ್ಮ ಅಂತನೇ ಉಲಿಯುವುದು. ಇವೇ ಸರಿಯಾದ ಬರಹ ರೂಪಗಳು
ಕಟ್ಟಳೆ:
ಹೊಸಗನ್ನಡದಲ್ಲಿ ಯಾವಾಗಲೂ ಎರಡೂ ಪದಗಳ 'ಕೂಡಿಕೆ' ಆದಾಗ, ಎರಡನೆ ಪದದ ಮೊದಲಕ್ಕರ 'ಹ' ಇದ್ದರೆ ಅದು ಕೂಡಿಕೆ ಆದ ಮೇಲೆ ಇರುವುದಿಲ್ಲ.
ಒಮ್ಮೆ ಹ->ವ ಆದರೆ ಹಲವು ಕಡೆ 'ಹ' ಬಿದ್ದು ಹೋಗುತ್ತದೆ(ಲೋಪವಾಗುತ್ತದೆ).
ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹೇಳಿ

- Login or register to post comments
- 708 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ವೈಭವರೆ,
ನಾನು ಮಾತಾಡುವಾಗ, ಹೆಣ್ಹೆತ್ತವರು, ಬಂದ್‍ಹೋದವರು (ಅಥವಾ ಬಂಧೋದವರು), ಬೊಮ್ಮನಹಳ್ಳಿ, ಸಿಂಹ ಅಂತಲೇ ಹೇಳ್ತೀನಿ. ಹಾಗಾಗಿ, ಈ ಬರವಣಿಗೆಯಲ್ಲಿ ನನಗೆ ತಪ್ಪು ಕಾಣಲಿಲ್ಲ. ಅದು ನಮ್ಮ ರೂಢಿಯ ಮೇಲೆ ಹೋಗುತ್ತೆ - ಅಲ್ಲವೇ?
ಇವುಗಳಲ್ಲಿ ಬೊಮ್ಮನಹಳ್ಳಿ ಅನ್ನೋದು ಕೂಡಿಕೆ ಪದವೂ ಅಲ್ಲ (ಹೆಣ್ಣು+ಹೆತ್ತವರು ಇಲ್ಲಿ ಆಗುವಂತೆ ಉಕಾರ ಲೋಪವಾಗಿಲ್ಲ , ಗಮನಿಸಿ). ಬೊಮ್ಮನಳ್ಳಿ ಅಂತ ಹೇಳಿದ್ರೇನೂ ತಪ್ಪಿಲ್ಲ, ಹಾಗೇ ಬೊಮ್ಮನಹಳ್ಳಿ ಅಂತ ಹೇಳಿದ್ರೆ, ಬರೆದರೆ ಕೂಡಾ ತಪ್ಪಿಲ್ಲ ಅನ್ನೋದು ನನ್ನ ಭಾವನೆ.
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ನೀವು ಹೇಳೋದು ಸರಿ...
ಬಿಟ್ಟೋಯ್ತು, ಬಿಸ್ಸಾಕು, ಬಿಟ್ಟಾಕು, ಎತ್ತಾಕು, ಹೊಟ್ಟೋಗು(ಹೊರಟು ಹೋಗು)..
ನಡುವೆ ಬರುವ ’ಹ’ ಅಂತೂ ಹಲಮಂದಿ ಬಿಟ್ಟಾಕ್ತಾರೆ
ಬಂದು ಹೋಗು => ಬಂದೋಗು. ಬಂದ್ವೋಗು ಎಂದು ಕೇಳಿಲ್ಲ.
=====================================
ಮಾಯ್ಸ!
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ಈ ’ಹ’ ಬಿದ್ದು ಹೋಗುವುದು ಕೇವಲ ತೆಂಕನ್ನುಡಿಗರಲ್ಲಿ ಮಾತ್ರ ಕಾಣುವ ವಿಶೇಷ. ಅದಱಲ್ಲೂ ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ಕೊಡಗು, ಬೆಂಗಳೂರು, ತುಮಕೂರು ಈ ಜಿಲ್ಲೆಗಳ ಕಲಿಯದ ಹಳ್ಳಿಗರ ಮಾತುಗಳಲ್ಲಿ ಕಾಣಬರುತ್ತದೆ. ಇದನ್ನು ಸಾರ್ವತ್ರೀಕರಿಸಲಾಗದು. ನೋಡಿ ರನ್ನ ಹೇೞಿದ ಮುದುವೊೞಳ್ ಮುದು+ಪೊೞಲ್->ಮುದು+ಹೊೞಲ್-> ಮುದು+ಹೊಳಲ್ ಆಗಿ ಮುಧೋಳವಾಗಿಬಿಟ್ಟಿದೆ.
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ಈ ’ಹ’ ಬಿದ್ದುಹೋಗುವುದು ಬಱಿ ತೆಂಕನ್ನುಡಿಗರಲ್ಲಿ ಮಾತ್ರ ಅದಱಲ್ಲೂ ಚಿಕ್ಕಮಗಳೂರು, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು, ರಾಮನಗರಂ, ಬೆಂಗಳೂರು, ಮೈಸೂರು, ತುಮಕೂರು ಮತ್ತು ಕೊಡಗು ಈ ಜಿಲ್ಲೆಗಳ ಕಲಿಯದ ಹಳ್ಳಿಗರ ಬಾಯಲ್ಲಿ ಮಾತ್ರ. ಆದರೆ ರನ್ನನ ಊರಾದ ಮುದುವೊೞಲು ಬಡಗನ್ನುಡಿಗರಲ್ಲಿ ಮುಧೋಳ. ಯಾಕೆಂದರೆ ಅವರಲ್ಲಿ ’ಹ’ ಇದೆ. ಈ ಮುದುವೊೞಲು-> ಮುದು+ಪೊೞಲು-> ಮುದು+ಹೊೞಲು -> ಮುದು+ಹೊಳಲು-> ಮುಧೋಳ.ಆದ್ದಱಿಂದ ’ಹ’ ಬಿದ್ದುಹೋಗುವುದನ್ನು ಸಾರ್ವತ್ರೀಕರಿಸಲಾಗುವುದಿಲ್ಲ. ಹೆಚ್ಚಿನ ಜನರಲ್ಲಿ ’ಹ’ ಇದೆ. ಬಡಗನ್ನುಡಿಗರಲ್ಲಿ ಮತ್ತು ನಡುಗನ್ನುಡಿಗರ ಒಟ್ಟು ಸಂಖ್ಯೆ ತೆಂಕನ್ನುಡಿಗರ ಸಂಖ್ಯೆಗಿಂತ ಹೆಚ್ಚು. ಮತ್ತು ಎಲ್ಲಾ ವಿದ್ಯಾವಂತ ಕನ್ನುಡಿಗರಿಗೆ ’ಹ’ ಗೊತ್ತು.
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ಕನ್ನಡಕಂದರೆ,
ನಿಮ್ಮ ಎಣಿಕೆ ತಪ್ಪಾಗಿದೆ ಅಂತ ನನ್ನ ಎಣಿಕೆ.
ನಾವು, ಅಂದರೆ ಕಲಿತ ತೆಂಕುಗನ್ನಡಿಗರಿಗೆ 'ಹ' ಗೊತ್ತು. ಆದರೆ ಇಂದಿಗೂ ನಮ್ಮ ಆಡುಮಾತಿನಲ್ಲಿ 'ಹ' ಬಿಟ್ಟೋಗಿರುತ್ತದೆ(ಬಿಟ್ ಹೋಗಿರುತ್ತದೆ ಅಲ್ಲ).
ಹಾಗೆಯೆ, ಬಡಗುಗನ್ನಡ ನಾಡಿನಲ್ಲಿ ಕೂಡ ಹಳ್ಳಿಗಳ ಕಡೆ 'ಹ' ಬಿದ್ದು ಹೋಗಿದೆ. ಯಾಕಂದರೆ ಅವರು ಕೂಡ 'ಬರಾಕತ್ಯಾನ' ಅಂತಾರೆ ವೊರತು 'ಬರ್ಹಾಕ ಹತ್ಯಾನ' ಅನ್ನಲ್ಲ. ನೀವು ಹೇಳಿದ ಹಾಗೆ 'ಮುಧೋಳ'ದಲ್ಲಿ 'ಹ' ಇದ್ದರೆ 'ಬೆಟ್ಟಿ' ಯಲ್ಲೂ ಕೂಡ ಹ ಇರಬೇಕಿತ್ತಲ್ಲವ. ಬಡಗುಗನ್ನಡಿಗರು ಕೂಡ 'ಬೆಟ್ಟಿ' ಅನ್ತಾರೆ ವೊರತು 'ಭೇಟಿ' ಅಂತ ಹೆಚ್ಚು ಮಂದಿ ಹೇಳಲ್ಲ. ಅಲ್ವ?
ಸಂಗನ, ಈ ಕಡೆ ವಸಿ ನೋಡಪ್ಪ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ನೀವು ಹೇೞುವುದು ಸರಿ. ಆದರೆ ಶಿವಮೊಗ್ಗ, ಧಾರವಾಡ, ಹಾಗೆ ಬಡಗಿಗೆ ಹೋದಂತೆ ಬಡನುಡಿಗಳ ಪ್ರಭಾವದಿಂದ ಬಡಗನ್ನುಡಿಗರಿಗೆ ತೆಂಕನ್ನುಡಿಗರಿಗೆ ಕಷ್ಟ್ವವಾಗುವಷ್ಟು ’ಹ್’ ಕಷ್ಟ್ವವಲ್ಲ. ಚಿಕ್ಕಮಗಳೂರು, ಹಾಸನದ ಕನ್ನಡಿಗರು ’ಹಾಸನ’ ’ಹಕ್ಕಿ’ ಎನ್ನಲು, ’ಆಸನ’, ’ಅಕ್ಕಿ’ ಎನ್ನುತ್ತಾರೆ. ಅದಕ್ಕೆ ಇದನ್ನು ಹೇೞಿದ್ದು. ಆದರೆ ತೀರಾ ಹಳ್ಳಿಗರಾದ ಬಡಗನ್ನುಡಿಗರಿಗೆ ’ಹ’ ಅಪರಿಚಿತವಲ್ಲ. ಅವರದನ್ನು ಸರಾಗವಾಗೇ ಉಚ್ಚರಿಸುತ್ತಾರೆ. ನೀವು ಹೇೞುವ ಭೆಟ್ಟಿಯದು ’ಹ’ ಕ್ಕಿಂತ ಭಿನ್ನವಾದ ಮಹಾಪ್ರಾಣ. ’ಹ’ ಕಂಠದಿಂದಲ್ಲೆ ಹೊಱಡಬೇಕಾದ ಮಹಾಪ್ರಾಣ. ಉೞಿದ ಮಹಾಪ್ರಾಣಗಳಲ್ಲಿ ಕೊನೆಯಲ್ಲಿ ಸ್ವಲ್ಪ ಉಸಿರನ್ನು ಬಿಡಬೇಕಾಗುತ್ತದೆ. ಇದು ಎಲ್ಲಾ ಕನ್ನಡಿಗರಿಗೂ ಗೊತ್ತಿರದ ಮಹಾಪ್ರಾಣ. ಮಾನ್ಯ ಮಹೇಶ್‍ರವರು ಇದಕ್ಕೇನನ್ನುತ್ತಾರೋ ಕೇಳೋಣ.
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ನಾನು ತಿಳಿದಂತೆ ಬರುತ್ತಿದ್ದಾನೆ ಎಂಬುದಕ್ಕೆ ಅವರು ಹೇೞೋದು ಬರಾಕ ಹತ್ಯಾನೆ. ಮಾತನಾಡುವ ವೇಗದಲ್ಲಿ ’ಹ್’ ಗೊತ್ತಾಗದಿರಬಹುದು.
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ನೀವು ಹೇೞುವುದು ಸರಿ. ಆದರೆ ಶಿವಮೊಗ್ಗ, ಧಾರವಾಡ, ಹಾಗೆ ಬಡಗಿಗೆ ಹೋದಂತೆ ಬಡನುಡಿಗಳ ಪ್ರಭಾವದಿಂದ ಬಡಗನ್ನುಡಿಗರಿಗೆ ತೆಂಕನ್ನುಡಿಗರಿಗೆ ಕಷ್ಟ್ವವಾಗುವಷ್ಟು ’ಹ್’ ಕಷ್ಟ್ವವಲ್ಲ. ಚಿಕ್ಕಮಗಳೂರು, ಹಾಸನದ ಕನ್ನಡಿಗರು ’ಹಾಸನ’ ’ಹಕ್ಕಿ’ ಎನ್ನಲು, ’ಆಸನ’, ’ಅಕ್ಕಿ’ ಎನ್ನುತ್ತಾರೆ. ಅದಕ್ಕೆ ಇದನ್ನು ಹೇೞಿದ್ದು. ಆದರೆ ತೀರಾ ಹಳ್ಳಿಗರಾದ ಬಡಗನ್ನುಡಿಗರಿಗೆ ’ಹ’ ಅಪರಿಚಿತವಲ್ಲ. ಅವರದನ್ನು ಸರಾಗವಾಗೇ ಉಚ್ಚರಿಸುತ್ತಾರೆ. ನೀವು ಹೇೞುವ ಭೆಟ್ಟಿಯದು ’ಹ’ ಕ್ಕಿಂತ ಭಿನ್ನವಾದ ಮಹಾಪ್ರಾಣ. ’ಹ’ ಕಂಠದಿಂದಲ್ಲೆ ಹೊಱಡಬೇಕಾದ ಮಹಾಪ್ರಾಣ. ಉೞಿದ ಮಹಾಪ್ರಾಣಗಳಲ್ಲಿ ಕೊನೆಯಲ್ಲಿ ಸ್ವಲ್ಪ ಉಸಿರನ್ನು ಬಿಡಬೇಕಾಗುತ್ತದೆ. ಇದು ಎಲ್ಲಾ ಕನ್ನಡಿಗರಿಗೂ ಗೊತ್ತಿರದ ಮಹಾಪ್ರಾಣ. ಮಾನ್ಯ ಮಹೇಶ್‍ರವರು ಇದಕ್ಕೇನನ್ನುತ್ತಾರೋ ಕೇಳೋಣ.
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ಹೆಸಱುಹಿಟ್ಟು=ಹೆಸರ್ವಿಟ್ಟು=ಹೆಸರ್ಬಿಟ್ಟು
ಬೊಮ್ಮನಹಳ್ಳಿ=ಬೊಮ್ಮನವಳ್ಳಿ(ಹೊನ್ನ+(ಪ)ಹಳ್ಳಿ=ಹೊನ್ನವಳ್ಳಿ ಇದ್ದ ಹಾಗೆ ಕಿಸು+(ಪೊ)ಹೊೞಲು=ಕಿಸುವೊೞಲು ಅಥವಾ ಕುಲ+(ಪೆ)ಹೆಣ್ಣು=ಕುಲವೆಣ್ಣು ಇದ್ದ ಹಾಗೆ)
ಹೆಣ್+(ಪೆ)ಹೆತ್ತ=ಹೆಣ್ಬೆತ್ತ=ಹೆಂಬೆತ್ತ(ಕಣ್+ಪ(ಹ)ನಿ=ಕಂಬನಿ) ಹಾಗೆ
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ಸಿಂಹ=ಸಿಮ್ಮ(ಸರಿ) ಆದರೆ ನೀವು ಹೇೞಿದಂತೆ ಸಿಮ್ಹ ತಪ್ಪು.
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ನೀವು ಹೇಳುತ್ತಿರುವುದು ಸರಿ. ಆದರೆ ಆಡುಮಾತಿನಲ್ಲಿ ಅದು ಬೊಮ್ನಳ್ಳಿ ಮೇಣ್ ಬೊಮ್ಮನಳ್ಳಿಯೇ ಹೊರತು ಬೊಮ್ಮನವಳ್ಳಿಯಲ್ಲ. ಯಾಕೆ ಅಂತ ಗೊತ್ತಿಲ್ಲ.
ನೀವು ಹೇಳಿದ ಹಾಗೆ ಮಳ+ಪಳ್ಳಿ = ಮಳವಳ್ಳಿ
ಹೆಂಬೆತ್ತ ಸರಿ ಆದರೆ ಆಡುಮಾತಿನಲ್ಲಿರುವುದು ಹೆಣ್ಣೆತ್ತವರು ಅಂತಾನೆ. ನೀವು ಹಳ್ಳಿಯವರ ಮಾತನ್ನ(ಮೇಣ್ ಬೇರೆ ನುಡಿಗಳ ಸೋಂಕಿಲ್ಲದವರ) ಮಾತುಗಳನ್ನ ಗಮನಿಸಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
ನಮ್ಮ ಮಂಡ್ಯ, ಮಯ್ಸೂರು, ಚಾ.ನಗರ ಕಡೆಗಳಲ್ಲಿ ಹಿಟ್ಟು => ಇಟ್ಟು. (ಹ ಕಾರ ಬಿದ್ದು ಹೋಗಿದೆ)
ಹಾಗಾಗಿ, ಹೆಸರ+ಇಟ್ಟು = ಹೆಸರಿಟ್ಟು. ಇದೇ ಸರಿ ಮತ್ತು ಆಡುಮಾತಿನಲ್ಲಿ ಕೂಡ ಇದೆ.
ನೀವು ಹೇಳುತ್ತಿರುವುದು ಹಳೆಗನ್ನಡದ ವ್ಯಾಕರಣದ ಮಟ್ಟಿಗೆ ಸರಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು