ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಈಶ ಯಾರು?

May 29, 2008 - 12:04pm — roopablrao

ಈಶ ಈಶ್ವರಾನೆ?
ಅಥವ
ಈಶ ವಿಷ್ಣುವೆ?
ಈ ಹಾಡಿನಲ್ಲಿ " ಈಶ ನಿನ್ನ ಚರಣಾ ಭಜನೆ ಆಸೆಯಿಂಡ ಮಾಡುವೆ "
ಕೃಷ್ಣನ್ನನ್ನು ಉದ್ದೇಶಿಸಿ ಹೇಳಿದ್ದಾರೆ

‹ ಕಣ್ಣಿಗೆವೆಯಂದದಲಿ ಕೈ ಮೈ | ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 783 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 29, 2008 - 12:14pm — savithru

ಉ: ಈಶ ಯಾರು?

savithru's picture

ಯಾರು ಐಶ್ವರ್ಯದಾತನೋ ಅವನೇ ಈಶ್ವರ! ...
ಈಶ್ವರ ಅಂದ್ರೆ ಶಿವ ಅಂತ ಜನಪ್ರಿಯ ನಂಬಿಕೆ.

ಅಲ್ಲದೆ ಈಶ ಅಂದ್ರೆ ಒಡೆಯ / ನಾತ ಅನ್ನೋ ಅರ್ಥ ಬರುತ್ತೆ. ನನ್ನ ಪರಿಸರದಲ್ಲಿ ಈಶ ಅಂದ್ರೆ ಶಿವ.
ಅದು ಸಂಸ್ಕೃತಿ ಮೇಲೆ ದೆಪೆಂದ್ ಆಗಿರುತ್ತೆ.

ಕೃಷ್ಣ ಅಂದ್ರೂ ಸರೀನೆ....

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 12:15pm — savithru

ಉ: ಈಶ ಯಾರು?

savithru's picture

ನಾತ ಅಲ್ಲ.. ನಾಥ ಅಂತ ಸರಿಪಡಿಸಿಕೊಳ್ಳಿ!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 9:58pm — Prabhu Murthy

ಉ: ಈಶ ಯಾರು?

Prabhu Murthy's picture

ಕ್ಷಮಿಸಿ, ಸವಿತೃ. ನಿಮ್ಮ ಪ್ರತಿಕ್ರಿಯೆ ನೋಡದೆ ನನ್ನದನ್ನು ಸೇರಿಸಿದೆ. ನಿಮ್ಮ ಮಾತನ್ನು ಒಪ್ಪುತ್ತೇನೆ.

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 2:16pm — Sunil Jayaprakash

ಉ: ಈಶ ಯಾರು?

Sunil Jayaprakash's picture

ರೂಪಾ ಅವರೆ, ಈ ಎಳೆಯನ್ನು ಗಮನಿಸಿ, ಈಶ ಮತ್ತು ಈಷ ಇವೆರಡರ ವ್ಯತ್ಯಾಸವೇನು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 9:36pm — Prabhu Murthy

ಉ: ಈಶ ಯಾರು?

Prabhu Murthy's picture

ಸಾಮಾನ್ಯವಾಗಿ ಮಾಡುವ (ಕೇಶವ, ನಾರಾಯಣ, ಮಾಧವ, ಗೋವಿಂದ,...,ಹರಿ, ಕೃಷ್ಣ ಎಂಬ) ೨೪ ನಾಮಗಳ ಸ್ಮರಣೆಗಾಗಿ ಕನಕದಾಸರು ಮಾಡಿರುವ ೨೪ ಚರಣಗಳ ಪದ ಇದು. ಇಲ್ಲಿ ಯಾರಿಗೆ ಈ ೨೪ ಹೆಸರುಗಳು ಅನ್ವಯಿಸುತ್ತವೆಯೊ, ಅವನೇ ಈಶ ನಾಮವಾಚ್ಯನೂ ಆಗಿದ್ದಾನೆ Smiling

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 10:08pm — hamsanandi

ಉ: ಈಶ ಯಾರು?

hamsanandi's picture

ಪ್ರಭು ಅವರೆ,

ಹೌದೇ? ಇದರಲ್ಲಿ ಇಪ್ಪತ್ತನಾಕು ಚರಣಗಳಿವೆಯೇ? ಸಾಹಿತ್ಯ ಇದ್ದರೆ ಹಾಕುತ್ತೀರಾ?

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 11:06pm — poornimas

ಉ: ಈಶ ಯಾರು?

poornimas's picture

ಹಿಂದೆ ವಿಚಿತ್ರಾನ್ನದಲ್ಲಿ ಈ ಹಾಡಿನ ಬಗ್ಗೆ ಬರೆದಿದ್ದರು. ಸಾಹಿತ್ಯವೂ ಇತ್ತು.
ಲಿಂಕ್ ಯಾಕೋ ಕೆಲಸ ಮಾಡ್ತಿಲ್ಲ http://thatskannada.oneindia.in/column/vichitranna/280904sankhyashastra....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 2:05am — srivathsajoshi

ಉ: ಈಶ ಯಾರು?

srivathsajoshi's picture

೨೪ ಸಂಖ್ಯೆಯ ಬಗ್ಗೆ ವಿಚಿತ್ರಾನ್ನ ಸಂಚಿಕೆ:

http://thatskannada.oneindia.in/column/vichitranna/2004/280904sankhyasha...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 12:20am — Prabhu Murthy

ಉ: ಈಶ ಯಾರು?

Prabhu Murthy's picture

ನಿಜವಾಗಲೂ ಇದರಲ್ಲಿ ೨೬ ನುಡಿಗಳು ಇವೆ. ಕೊನೆಯ ಎರಡನ್ನು ಫಲಶ್ರುತಿ ಎಂದುಕೊಳ್ಳಬಹುದು.
ಗೂಗಲ್ ಮಾಡಿದೆ. ಇದು ಸಿಕ್ತು.
http://www.geocities.com/harshala_rajesh/keshavanamameaning.htm

ಪ್ರಭು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 2:04am — srivathsajoshi

ಉ: ಈಶ ಯಾರು?

srivathsajoshi's picture

ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।। 1 ।।
ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।। 2 ।।
ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ । ಬಿಡಿಸು ಮಾಧವಾ ।। 3 ।।
ಹಿಂದನೇಕ ಯೋನಿಗಳಲಿ । ಬಂದು ಬಂದು ನೊಂದೆನಯ್ಯ । ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ ।। 4 ।।
ಭ್ರಷ್ಟನೆನಿಸಬೇಡ ಕೃಷ್ಣ । ಇಷ್ಟು ಮಾತ್ರ ಬೇಡಿಕೊಂಬೆ । ಶಿಷ್ಟರೊಡನೆ ಇಟ್ಟು ಕಷ್ಟ । ಬಿಡಿಸು ವಿಷ್ಣುವೆ ।। 5 ।।
ಮದನನಯ್ಯ ನಿನ್ನ ಮಹಿಮೆ । ವದನದಲ್ಲಿ ನುಡಿಯುವಂತೆ । ಹೃದಯದೊಳಗೆ ಹುದುಗಿಸಯ್ಯ ಮಧುಸೂದನ ।। 6 ।।
ಕವಿದುಕೊಂಡು ಇರುವ ಪಾಪ । ಸವೆದು ಪೋಗುವಂತೆ ಮಾಡಿ । ಜವನ ಬಾಧೆಯನ್ನು ಬಿಡಿಸೋ । ಶ್ರೀ ತ್ರಿವಿಕ್ರಮ ।। 7 ।।
ಕಾಮಜನಕ ನಿನ್ನ ನಾಮ । ಪ್ರೇಮದಿಂದ ಪಾಡುವಂಥ । ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ।। 8 ।।
ಮೊದಲು ನಿನ್ನ ಪಾದಪೂಜೆ । ಒದಗುವಂತೆ ಮಾಡೊ ಎನ್ನ । ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ।। 9 ।।
ಹುಸಿಯನಾಡಿ ಹೊಟ್ಟೆ ಹೊರೆವ । ವಿಷಯದಲ್ಲಿ ರಸಿಕನೆಂದು । ಹುಸಿಗೆ ಹಾಕದಿರೊ ಎನ್ನ ಹೃಷಿಕೇಶನೆ ।। 10 ।।
ಬಿದ್ದು ಭವದನೇಕ ಜನುಮ । ಬದ್ಧನಾಗಿ ಕಲುಷದಿಂದ । ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ ।। 11 ।।
ಕಾಮಕ್ರೋಧ ಬಿಡಿಸಿ ನಿನ್ನ । ನಾಮ ಜಿಹ್ವೆಯಾಳಗೆ ನುಡಿಸೊ । ಶ್ರೀಮಹಾನುಭಾವನಾದ ದಾಮೋದರ ।। 12 ।।
ಪಂಕಜಾಕ್ಷ ನೀನು ಎನ್ನ । ಮಂಕುಬುದ್ಧಿಯನ್ನು ಬಿಡಿಸಿ । ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ।। 13 ।।
ಏಸು ಜನ್ಮ ಬಂದರೇನು । ದಾಸನಲ್ಲವೇನು ನಾನು । ಘಾಸಿ ಮಾಡದಿರು ಇನ್ನು ವಾಸುದೇವನೆ ।। 14 ।।
ಬುದ್ಧಿಶೂನ್ಯನಾಗಿ ಎನ್ನ । ಬದ್ಧಕಾಯ ಕುಹಕಮನವ । ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮ್ನನೆ ।। 15।।
ಜನನಿ ಜನಕ ನೀನೆ ಎಂದು । ನೆನೆವೆನಯ್ಯ ದೀನಬಂಧು । ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ।। 16 ।।
ಹರುಷದಿಂದ ನಿನ್ನ ನಾಮ । ಸ್ಮರಿಸುವಂತೆ ಮಾಡು ನೇಮ । ಇರಿಸು ಚರಣದಲಿ ಪ್ರೇಮ ಪುರುಷೋತ್ತಮ ।। 17 ।।
ಸಾಧುಸಂಗ ಕೊಟ್ಟು ನಿನ್ನ । ಪಾದಭಜನೆ ಇತ್ತು ಎನ್ನ । ಭೇದ ಮಾಡಿ ನೋಡದಿರು ಹೇ ಅಧೋಕ್ಷಜ ।। 18 ।।
ಚಾರು ಚರಣ ತೋರಿ ಎನಗೆ । ಪಾರುಗಾಣಿಸಯ್ಯ ಕೊನೆಗೆ । ಭಾರ ಹಾಕಿರುವೆ ನಿನಗೆ ನರಸಿಂಹನೆ ।। 19 ।।
ಸಂಚಿತಾದಿ ಪಾಪಗಳು । ಕಿಂಚಿತಾದಿ ಪೀಡೆಗಳು । ಮುಂಚಿತಾಗೆ ಕಳೆಯಬೇಕೊ ಸ್ವಾಮಿ ಅಚ್ಯುತ ।। 20 ।।
ಜ್ಞಾನ ಭಕುತಿ ಕೊಟ್ಟು ನಿನ್ನ । ಧ್ಯಾನದಲ್ಲಿ ಇಟ್ಟು ಸದಾ । ಹೀನಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ದನ ।। 21 ।।
ಜಪತಪಾನುಷ್ಠಾನವಿಲ್ಲ । ಕುಪಥಗಾಮಿಯಾದ ಎನ್ನ । ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೆ ।। 22 ।।
ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ । ಇರಿಸೋ ಭಕ್ತರೊಳು ಪರಮ ಪುರುಷ ಶ್ರೀಹರೇ ।। 23 ।।
ಪುಟ್ಟಿಸಲೇ ಬೇಡ ಇನ್ನು । ಪುಟ್ಟಿಸಿದಕೆ ಪಾಲಿಸಿನ್ನು । ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೇ ।। 24 ।।

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹC- ಬಿC ರಗಳೆ - ೧
  • ಏಕೆ?
  • ಮುಗಿಲು
  • ಅಕ್ಕ ತಮ್ಮರ ಅನುಬಂದದ ಗೀತೆ
  • ಪ್ರೀತಿಯಂತು ಮಾಡಲಾರೆ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 6:37am
  • Chamaraj
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 6:31am
  • Chamaraj
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 6:25am
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
  • manjunath s reddy
    ಉ: ಜೀವ ಕಾಯುವುದೇತಕೆ?
    September 8, 2008 - 1:41am
  • manjunath s reddy
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 1:31am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 8, 2008 - 1:29am
ಇನ್ನಷ್ಟು


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator