ಕವಿತೆ ಬರೆಯೋಣ್ವಾ?
ಇದು ಒಂದು ಪುಟ್ಟ ಸವಾಲು.
ಒಂದಿಷ್ಟು ಹಯಕು ಅಥವಾ ಚುಟುಕು ಮಾದರಿಯ ಬರಹಗಳನ್ನು ಬರೆಯೋಣ್ವೆ? ಒಂದೇ ನಿಬಂಧನೆ ಎಂದರೆ, ಸೂಕ್ತವಲ್ಲದಿದ್ದರೂ ಹಿಂದೆ ಬರೆದ ಚುಟುಕುಗಳನ್ನು ಸುಮ್ಮನೇ ಪೋಸ್ಟ್ ಮಾಡಬಾರದು. ಕವಿತೆಯಲ್ಲಿ ’ಪಂಚ್’ ಇರಲಿ. ಧಾರವಾಡದ ಭಾಷೆಯಲ್ಲಿ ಹೇಳುವುದಾದರೆ, ’ಧಾಡಸಿ’ ಇರಲಿ.
ಒಂದು ಚುಟುಕದ ಮೂಲಕ ನಾನು ಪ್ರಾರಂಭಿಸುತ್ತೇನೆ.
ಎಲ್ಲಾ ಎಲ್ಲೋ ಇದ್ದೀರಿ
ಹೇಗಿದ್ದೀರಿ?
’ಸಂಪದ’ ತೆರೆದರೆ
ನಿಮ್ದೇ ಸುದ್ದೀರೀ
ಶುರು ಮಾಡೋಣ್ವಾ?
- ಪಲ್ಲವಿ ಎಸ್.
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...

- Login or register to post comments
- 1825 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


ಉ: ಕವಿತೆ ಬರೆಯೋಣ್ವಾ?
ಇರಲಿಲ್ಲವೆಂದು ಗೋಳಿಡುತ್ತಿದ್ದರು ಹುಡುಗರು
ಇಷ್ಟು ದಿನ ಹೆಣ್ಣುಗಳ someಪದ
ಶುರು ಮಾಡಿಕೊಂಡರು ಹುಡುಗಿಯರು ಗದ್ಯ/ಪದ್ಯ
ಲೋಡು ಜಾಸ್ತಿಯಾಯಿತೆಂದು ಗೋಳಿಟ್ಟರು ನಿರ್ವಾಹಕರು
ಉ: ಕವಿತೆ ಬರೆಯೋಣ್ವಾ?
ಸೂಪರ್!!
ಉ: ಕವಿತೆ ಬರೆಯೋಣ್ವಾ?
ಸೂಪರ್ ಅಂದ್ರೆ ಏನು?
ಅದು ಚುಟುಕೂ ಅಲ್ಲ ಹೈಕೂ ಅಲ್ಲ
ಇಷ್ಟಕ್ಕೇ ಸುಮ್ಮನಾದರೆ ನೀವು
ಕವಿತೆ ಬರೆಯೋಕೆ ಆಗಲ್ಲ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಹೈಕು ಚುಟುಕು ಎಲ್ಲಾ ಗೊತ್ತಾಗಲ್ಲ
ಸೂಪರ್ ಅಂದ್ರೆ ಸೂಪರ್ ಅಷ್ಟೆ
ಅದೆಲ್ಲ ನಂಗೆ ಬರಿಯೊಕೆ ಬರಲ್ಲ
ಉ: ಕವಿತೆ ಬರೆಯೋಣ್ವಾ?
ಮೊದಲು ’ಪಲ್ಲವಿ’ಯಿಂದ್ಲೇ ಶುರು
ಆಮೇಲೆ ಅನುಪಲ್ಲವಿ
ಆಮೇಲೆ ಸಾಲು
ಸಾಲುಸಾಲು .
ಸಾಲು ಸಾಲು ಕವಿತೆ
ಆಗಾಗ ಸಾಲುಸಾಲೂ ಕವಿತೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕವಿತೆ ಬರೆಯೋಣ್ವಾ?
ನೀವು ಹುಡುಕ್ತಿರೋದು ಸಾಲುಗಳಲ್ಲಿ ಹೈಕು/ಚುಟುಕ/ಪಂಚ್. ಹೈಕು/ಚುಟುಕ ಬರಿಯೋಕ್ಕಂತು ಬರಲ್ವೆ! ಸರಿ ಒಂಚೂರು "ಧಾಡಿಸೋಣ' ಅಂತ.
ಉ: ಕವಿತೆ ಬರೆಯೋಣ್ವಾ?
’ಧಾಡಿಸೋಣ’-
ಹಾಗಂದ್ರೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ನೀವೇ ಹೇಳಿದ್ರಲ್ಲ:
"ಧಾರವಾಡದ ಭಾಷೆಯಲ್ಲಿ ಹೇಳುವುದಾದರೆ, ’ಧಾಡಸಿ’ ಇರಲಿ.' ಅಂತ
ಉ: ಕವಿತೆ ಬರೆಯೋಣ್ವಾ?
ಧಾಡಸಿ ಪ್ರತ್ಯೇಕ ಶಬ್ದ. ಅದನ್ನು ಕ್ರಿಯಾಪದದಂತೆ ಬಳಸಲು ಆಗದು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಹಾಗೇನೂ ಇಲ್ಲ ಕರಿಹೈದ
ಸಂಪದದಲ್ಲಿ ಇದ್ದರಲ್ಲ ಹೆಣ್ಗಳು
ಆದರೆ ನೀವದನ್ನು ಗಮನಿಸಲಿಲ್ಲ
ಎಲ್ಲೋ ಇದ್ದವು ನಿಮ್ಮ ಕಣ್ಗಳು
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಕಾವ್ಯವು ಎಲ್ಲರಿಗಲ್ಲ ಪಲ್ಲವಿ
ಬಲ್ಲವರೂ ಚೆಲು ಮೌನವಾಂತಿಹರು
"Those unheard are sweet" ಅಲ್ಲವೆ?
ಕೇಳದ ಕಾವ್ಯದ ಸೊಲ್ಲ ಸವಿವರು
"ಏರಿದವನು ಚಿಕ್ಕವನಿರಬೇಕು"
ಉ: ಕವಿತೆ ಬರೆಯೋಣ್ವಾ?
"ವಿನಂತಿ"
ರಾಶಿಬಿದ್ದಿರುವ ಕೆಲಸವ ಬಿಟ್ಟು
ಕಾವ್ಯವ ಕೊರೆದರೆ ಬಡಿಗೆಯ ಪೆಟ್ಟು
ಎಂಬರು ನಮ್ಮವರಾದರೂ ಕದ್ದು
ಬರೆದಿಹೆ ನಗದಿರಿ ಎದ್ದೂ ಬಿದ್ದು
"ಏರಿದವನು ಚಿಕ್ಕವನಿರಬೇಕು"
ಉ: ಕವಿತೆ ಬರೆಯೋಣ್ವಾ?
ಕದ್ದ ಹೋಳಿಗೆಗೆ ರುಚಿ ಹೆಚ್ಚು
ಇಂಥ ಚುಟುಕವೇ ಅಚ್ಚುಮೆಚ್ಚು
ಕದ್ದಾದರೂ ಬರೆಯಿರಿ, ಬರೆಸಿರಿ
ಹಾಗಾದಾಗ ಯಾರೂ ನಗದಿರಿ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಮನಸ್ಸಲ್ಲಿ ಮಂಡಿಗೆ ತಿಂದರೆ
ರುಚಿ ದಕ್ಕೀತೆ ರಮೇಶ
ಭಾವ ಇದ್ದರೆ ಕಾವ್ಯ
ಇದುವೇ ಅಕ್ಷರ ವಿಶೇಷ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
"ಭಾವ ಇದ್ದರೆ ಕಾವ್ಯ"
ಸಾಲಂಕೃತಕನ್ಯೆ ಬಯಸಿದಂತೆ ಶೆಟ್ಟರ ಹುಡುಗ
ಭಾವಕಾವ್ಯ ಬಯಸಿದರು ಪಲ್ಲವಿ
ಸಿಕ್ಕಳು ನಿರಾಭರಣ ಸುಂದರಿ
ಹುಡುಗನಿಗೆ ದಕ್ಕಿದಂತೆ ವರದಕ್ಷಿಣೆ (ವಂದರಿ)
*ವಂದರಿ = ಜರಡಿ
"ಏರಿದವನು ಚಿಕ್ಕವನಿರಬೇಕು"
ಉ: ಕವಿತೆ ಬರೆಯೋಣ್ವಾ?
ಹ ಹ
ವಂದರಿ ವರದಕ್ಷಣೆಕೊಂಡ
ಹುಡುಗ ತನ್ನ ನಲ್ಲೆಯನ್ನ
ಪ್ರೀತಿಯಿಂದ "ಸುಂದರಿ,
ಛತ್ರಿ ನಿಮ್ಮಪ್ಪ ಅಂದನಂತೆ"!
=====================================
ಮಾಯ್ಸ!
ಉ: ಕವಿತೆ ಬರೆಯೋಣ್ವಾ?
ಅದಕ್ಕೆ ಹುಡುಗಿ ಹೇಳಿದ್ಲಂತೆ-
ಹೌದು, ನಮ್ಮಪ್ಪ ಛತ್ರಿ, ಮಳೆಬಿಸಿಲಿಂದ ಕಾಪಾಡ್ತಾನೆ
ಆದ್ರೆ ನಿಮ್ಮಪ್ಪ ಕಂತ್ರಿ ಕಂಡವ್ರ ದುಡ್ಡಿಗೆ ಕಣ್ಹಾಕ್ತಾನೆ.
"ಏರಿದವನು ಚಿಕ್ಕವನಿರಬೇಕು"
ಉ: ಕವಿತೆ ಬರೆಯೋಣ್ವಾ?
ಅಂತು ಬಂತು ಬಿಜೆಪಿ ಸರಕಾರ
ಪಕ್ಷಾಂತರಿಗಳದೇ ಕಾರುಬಾರ
ಗಣಿದೊರೆಗಳ ರಾಯಭಾರ
ಕೈಬಿಟ್ಟರು ಜಗದೀಶ ಶೆಟ್ಟರ
*ಅಶೋಕ್
ಉ: ಕವಿತೆ ಬರೆಯೋಣ್ವಾ?
ಅಂತೂ ಇಂತು
ಸರ್ಕಾರ ಬಂತು
ಒಂದು ಸವಿಯಾದ ಫೇಡೆಯಂತೆ
ಗಣಿ ದೊರೆಯೋ
ಪಕ್ಷಾಂತರಿಯೋ
ಸರ್ಕಾರ ಸ್ಥಿರವಾದಂತೆ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಮಂತ್ರಿಗಿರಿ ಬೆಕಂತವರೆ
ಸಾಮಿ, ಗೌಡ, ಶೆಟ್ಟರ
ಬಸ್ಸಿಗೆಲ್ಲ ಕಲ್ಲು ಹೊಡಿತಾರೆ
ಬೆಂಬಲಿಗರು ಅನ್ನಿಸಿಕೊಂಡವರ
ಅರ್ಜೆಂಟಾಗಿ ಬೇಕಾಗಿದೆ
ಬಿಜೆಪಿಗೇ ಪರಿಹಾರ
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕವಿತೆ ಬರೆಯೋಣ್ವಾ?
ಚುನಾವಣೇಲಿ ಎಲ್ಲರಿಗೂ ಟಿಕೆಟ್ ಬೇಕು
ಅದಕ್ಕಾಗಿ ಪಕ್ಷಕ್ಕೆ ಫಂಡ್ ಕಟ್ಟಬೇಕು
ಕೋಟ್ಯಂತರ ಖರ್ಚು ಮಾಡಿದರೆ ಜಯ
ಇಲ್ಲದಿರೆ ಠೇವಣಿಯೇ ಮಾಯ
ಇಷ್ಟೆಲ್ಲ ಕಷ್ಟಪಟ್ಟ ನಂತರ
ಮಂತ್ರಿ ಮಾಡದಿರೆ ಸಹಿಸ್ತಾರ?
ಅದಕ್ಕೇ ಹೊಡೆಸಿದ್ದಾರೆ ಬಸ್ಸಿಗೆ ಕಲ್ಲು
ಏಕೆಂದರೆ ಜನ ಮುರಿಯುವುದಿಲ್ಲ ಇವರ ಹಲ್ಲು
ಇಲ್ಲು ಕೂಡಾ ಬಿಜೆಪಿಯೇ ಪರಿಹಾರ
ಕೆಎಸ್ಸಾರ್ಟಿಸಿಗೆ ಅವರೇ ಕೊಡಬೇಕು ಪರಿಹಾರ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಯಾವ ಚರಣ ಏನು ಪಲ್ಲವಿ
ಧಾರ್ವಾಡ, ಪೇಡ, ಶೀಖಂಡ?
ಕೋಟಿ ಕೋಟಿ ಮಿಶ್ರ ಅನೂಹ್ಯದಲ್ಲು
ಪರಿಚಯದೆಳೆ ಹೊಳೆಹೊಳೆವ ಸಾಲು, ಸೊಲ್ಲು!
ಉ: ಕವಿತೆ ಬರೆಯೋಣ್ವಾ?
ತುಂಬ ಚೆನ್ನಾಗಿದೆ!
'ಸಂಪದ'ದಲ್ಲಿ ಬೆಸ್ಟ್ ಪ್ರತಿಕ್ರಿಯೆಗಳ ಪಟ್ಟಿ ಮಾಡಿದರೆ ಅದರಲ್ಲಿ ಇದೂ ಒಂದು!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕವಿತೆ ಬರೆಯೋಣ್ವಾ?
ಎಲ್ಲ ’ಹರಿ’ ಕೃಪೆ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ವಾಹ್ ಅನಿವಾಸಿಯವರೇ
ಏನು ನಿಮ್ಮ ಕವಿತೆಯ ಧಾರೆ !
ಫೇಡೆ, ಶ್ರೀಖಂಡ ಒಂದೇ ಸಾಲಲ್ಲಿ
ನೀರೂರಿತು ಬಾಯಲ್ಲಿ
ಚರಣ-ಪಲ್ಲವಿ ಬೇಕು ಗೀತೆಗೆ
ಇದೆಲ್ಲ ಮೀಸಲು ಸಹೃದಯನಿಗೆ
ಪರಿಚಯದ ಹೊಳೆಗೆ ಸಾಲುಗಳೇ ಅಲೆ
ಸೊಲ್ಲು ಸೊಲ್ಲಿಗೆ ಮೆಚ್ಚುಗೆಯ ಓಲೆ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಪಲ್ಲವಿಯ ಈ ಸವಿಕವನ
ಶಾಲ್ಮಲೆಯ ಆ ಗುಪ್ತಗಮನ
ಅಯ್ಯೋ
ಇದರೆ ಮೇಲೇ ನಮ್ಮ ಗಮನ
ಇದೆಲ್ಲ ನೀರ ಮೇಲೆ ಹವನ
=====================================
ಮಾಯ್ಸ!
ಉ: ಕವಿತೆ ಬರೆಯೋಣ್ವಾ?
ಕವನ ಸವಿಯಾ, ಭಾವನೆ ಸವಿಯಾ
ಮಹೇಶ ಎತ್ತ ನಿಮ್ಮ ಚಿತ್ತ?
ಶಾಲ್ಮಲೆಯತ್ತ ಅಥವಾ
ಪಲ್ಲವಿಯತ್ತ?
ಗಮನ ಇದ್ದಲ್ಲಿ
ಹವನದ ಮಾತೆಲ್ಲಿ
ಎಲ್ಲವೂ ಇಲ್ಲಿ ಕವನ
ಮನಸ್ಸೊಂದಿರಲಿ ಜಾಣ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಪಲ್ಲವಿಯ ಅನುಪಲ್ಲವಿಯಲ್ಲಿ
ಶಾಲ್ಮಲೆಯ ಸವಿಚರಣದಲ್ಲಿ
ಉಸಿರು ಬರದ ಮಾತುಗಳಲ್ಲಿ
ಒಸರು ತಿರುವ ಭಾವಗಳಲ್ಲಿ
ನನ್ನ ಚಿತ್ತ
ಗಮನವಿಲ್ಲದ ನಡೆಗಳಲ್ಲಿ
ಕವನಬಗೆಯ ನುಡಿಗಳಲ್ಲಿ
ಹವನದಂತಹ ತಾಪದಲ್ಲಿ
ನಯನಮುಚ್ಚಿ ನೋಡುವಲ್ಲಿ
ನನ್ನ ಚಿತ್ತ
=====================================
ಮಾಯ್ಸ!
ಉ: ಕವಿತೆ ಬರೆಯೋಣ್ವಾ?
ನಿಮ್ಮ ಚಿತ್ತ ಇತ್ತಿತ್ತ
ಹೋಗೈತಿ ಎತ್ತೆತ್ತ?
ಗಮನವಿಲ್ಲದ ನಡೆ
ಅಪಘಾತಕ್ಕೆ ಎಡೆ
ಹವನದ ತಾಪ
ಅಯ್ಯೋ ಪಾಪ
ನಯನ ಮುಚ್ಚಿ ನೋಡಿದಲ್ಲಿ
ನೇಸರ ಕಾಣುವೆನೆಲ್ಲಿ?
ಪಲ್ಲವಿ ಅವಳ ಪಾಡಿಗೆ ಇರಲಿ
ಅನುಪಲ್ಲವಿಗೆ ಅವಕಾಶವಿರಲಿ
ಶಾಲ್ಮಲೆಯ ಸವಿಚರಣದಲಿ
ಭಾವನೆ ಬೆಳೆಯುತ್ತಿರಲಿ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಜೋರಾಗೈತೆ ಪಲ್ಲ್ವಕ್ಕ
ನಿಮ್ಮ ಶಾಲ್ಮಲೆಯಾಗೆ ಸುಳಿ,
ಸಿಕ್ಕಾಕ್ಕಂಡವನೆ ಮಾಯ್ಸಣ್ಣ !?
ವಸಿ ಮ್ಯಾಲಕ್ಕೆ ಎಳಿ
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕವಿತೆ ಬರೆಯೋಣ್ವಾ?
ಅಯ್ಯೋ ವಿನಯ
ಸೆಳೆದಿಹ ಶಾಲ್ಮಲೆಯ
ತಪ್ತ ಕಾಮವಲಯ
ಏನು ಮಾಡಲ್ಲಯ್ಯ?
=====================================
ಮಾಯ್ಸ!
ಉ: ಕವಿತೆ ಬರೆಯೋಣ್ವಾ?
ಅದು ಶಾಲ್ಮಲೆಯ ಸುಳಿಯಲ್ಲ
ಕವಿತೆಯ ಬಲೆಯಲ್ಲ
ಮಾಯ್ಸ ಬಂದವ್ನೆ ವಯಸ್ಸಿಗೆ
ಅದ್ಕೇ ಇಂಥ ಬರವಣಿಗೆ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ನಾನು ವಯಸ್ಸಿಗೆ ಬಂದಿಲ್ಲ
ವಯಸ್ಸೇ ಬಂದಿದೆ ಎನಗೆ
ಇದು ಎನ್ನ ತಪ್ಪಲ್ಲ
ಕಾಲದ ಕೈಹಿಡಿ
ನನ್ನಲ್ಲುಂಟೇ
ಪಲ್ಲವಿಗೆ ವಯಸ್ಸೆಶ್ಟೋ
ಚೋಪಾನ ಚೋಕೆ
ಸೆಕ್ಸಿ ಪೋಟೋ ಹಾಕಿ
ಮನಸೆಳೆದಿಹಳು ಈಕೆ
=====================================
ಮಾಯ್ಸ!
ಉ: ಕವಿತೆ ಬರೆಯೋಣ್ವಾ?
ಹೆಣ್ಣಿನ ವಯಸು
ಕೇಳುವ ಮನಸು
ಸರಿಯಲ್ಲ ಮಹೇಶು
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಹೆಣ್ಣಿನ ವಯಸ್ಸು
ಕೇಳವ ಹುಮ್ಮಸ್ಸು
ಚೂರು
ಇಲ್ಲ ಅದರ ಗೊಡವೆ
ಗೆಳೆತನಕ್ಕೆ ಬೇಡ
ವಯಸ್ಸಿನ ಗೋಡೆ
ಇರಲಿ
ನಲುಮೆ ನಡುವೆ
=====================================
ಮಾಯ್ಸ!
ಉ: ಕವಿತೆ ಬರೆಯೋಣ್ವಾ?
ಸಂಪದದಲ್ಲಿ ಗೋಡೆಗಳಿಲ್ಲ
ಬ್ಲಾಗಿಗರಿಗೆ ಗಡಿಗಳಿಲ್ಲ
ನಾವಿರುವ ತಾಣದಿಂದಲೇ
ಹಾರುತಿವೆ ಮಿಂಚೋಲೆ
ಎಲ್ಲರ ಬಂಧಿಸಲಿ ಒಲುಮೆ
ಇನ್ಯಾಕೆ ಉಳಿದ ಗೊಡವೆ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಚಿಮ್ಮುತಿರಲಿ ಚಿಲುಮೆಗಳು, ಒಸರುತಿರಲಿ ಒರತೆಗಳು..
ಒಸೆಯುತಿರಲಿ ಹೊಸ ಎಳೆಗಳು .. ಒಂದಾಗಿಸುವ ಬಂಧಗಳು ..
ಸವಿತೃ
ಉ: ಕವಿತೆ ಬರೆಯೋಣ್ವಾ?
ಒಸೆಯುತಿರಲಿ ಹೊಸೆಯುತಿರಲಿ ಅಂತ ಇರಬೇಕೇನೋ..
ಒಸೆ ಅಂದರೇನು?
=====================================
ಮಾಯ್ಸ!
ಉ: ಕವಿತೆ ಬರೆಯೋಣ್ವಾ?
ನಾವು ಚಿಕ್ಕವರಾಗಿದ್ದಾಗ ಹಗ್ಗ ಹೊಸೆಯೋದು / ಒಸೆಯೋದು ಅಂತ ಇದ್ವು...
ಅದೇ ರೀತಿ ಇಲ್ಲಿ ಬಳಸಿದ್ದು.
ಬಹುಶ ... ಹೊಸೆ ಪದವೇ ಸರಿ...ಆದರೂ ಡಿಕ್ಷನರಿ ನೋಡ್ಬೇಕು!
ಸವಿತೃ
ಉ: ಕವಿತೆ ಬರೆಯೋಣ್ವಾ?
ಒಸೆಯಲಿ ಅಥವಾ ಹೊಸೆಯಲಿ
ಲೇಖನಿ ಉತ್ಸಾಹ ಹರಿಯಲಿ
ವ್ಯಾಕರಣ ಪಕ್ಕಕ್ಕೆ ಸರಿಸಿ
ಓದುವುದನ್ನು ಆಸ್ವಾದಿಸಿ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಹರಿತದ ಪೆನ್ನಿನ
ಹರಿವಿನ ಬರಹ
ತಿಳಿಯಲು ಆರದ
ತಿಳಿಹೆಣ್ಣಿನ ತರಹ...
=====================================
ಮಾಯ್ಸ!
ಉ: ಕವಿತೆ ಬರೆಯೋಣ್ವಾ?
ಪೆನ್ನು ಹರಿತ- ಒಪ್ಪಿದೆ!
’ಹರಿವಿನ ಬರಹ’- ಚೆನ್ನಾಗಿದೆ
ಇದೇನು ’ತಿಳಿಹೆಣ್ಣಿನ’ ತರಹ
ವಿವರಿಸುವೆಯಾ ಹುಡುಗ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ತಿಳಿಹೆಣ್ಣಿನ ತಿಳಿಬಣ್ಣದ
ಹೊಳಪು
ತಿಳಿನೀರಿನ ಒಳಗೊಳಗೆ
ಕನ್ನಡಿಸುವ
ನೇಸರನ ಮಿನುಗು
ಅದು ಕನ್ನಡಿಸುವ ಬೆಳಗು
ಹೊರತು
ದಿಟದ ಚನ್ನೇಸರನ ಕದಿರೇ
ಏಲೇ ತಿಳಿಹುಡುಗಿ!
ಕನ್ನಡಿಸು = reflect
=====================================
ಮಾಯ್ಸ!
ಉ: ಕವಿತೆ ಬರೆಯೋಣ್ವಾ?
ಏನು ವರ್ಣನೆ, ಏನು ಉಪಮೆ
ಹೆಣ್ಣಿನ ಬಣ್ಣನೆಗೆ ಅದೆಂಥಾ ಒಲುಮೆ
ದಿಟದ ನೇಸರನ ನೇರ
ನೋಡಲಾದೀತೇ ಪೋರ
ಅದಕ್ಕೆಂದೇ ಹೆಣ್ಣಿನ ಮೊಗ
ಸೃಷ್ಟಿಯಾಗಿದೆಯೋ ಧೀರ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ತಪ್ಪು ನಿಂದಲ್ಲ ಕಣ್‍ಮಣಿ
)
ಮಾಡಿದೆ ಮೋಡಿ ನಿನ್ನ ಕಣ್ ಮಣಿ
ಜಗದ ಚೆಲುವ ಬಸಿದು ಸುರಿದು
ನೇಸರ ತುಂಬಿದ ಇವಳಿಗೆ ಉಸಿರು
(shreya ಬಗ್ಗೆ ಅಂದಿದ್ದು ಬಿಡಿ
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕವಿತೆ ಬರೆಯೋಣ್ವಾ?
ಎಡದ ಯಾಕರಣ ..ಬಲದ ಭಾವನ
..( ಸೀಕರಣೆ)
ಜೋತೆಗಿದ್ರೆನೆ ಸೀಕರಣ
ಸವಿತೃ
ಉ: ಕವಿತೆ ಬರೆಯೋಣ್ವಾ?
ಎಡವೋ ಬಲವೋ
ಎಡರೋ ತೊಡರೋ
ಎಡ-ಬಲ ಕೂಡಿದರೆ
ಚತುರಂಗ ಬಲವೋ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಚಿಲುಮೆಯಾಗಲಿ ಒಲವು
ಕೊರತೆಯಾಗದಿರಲಿ ಒರತೆ
ಹೊಸ ಎಳೆಗಳಿಂದ ಹೊಸ ಉಡುಪು
ಬಂಧ ಬೆಳೆಸಲು ಸಂಪದ ಮುಡಿಪು
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಕವಿತೆ ಬರೆಯೋಣ್ವಾ?
ಒಮ್ಮೆ ಮುನಿಸು ಒಮ್ಮೆ ಸರಸ
ಒಮ್ಮೆ ದುಗುಡ ಒಮ್ಮೆ ಹಾಸ್ಯ
ಒಮ್ಮೆ ಕದನ ಒಮ್ಮೆ ಲಾಸ್ಯ
ಇದು ನಮ್ಮೊಲವಿನ ಸ್ವಾರಸ್ಯ
ಏನೂ ಗೊತ್ತಿಲ್ಲಪ್ಪ ಲಾಸ್ಟ್ ಲೈನ್ ಸರಿ ಇಲ್ಲ
http://thereda-mana.blogspot.com/
ರೂಪ
ಉ: ಕವಿತೆ ಬರೆಯೋಣ್ವಾ?
ಒಮ್ಮೆ ಚುಟುಕು, ಒಮ್ಮೆ ಕುಟುಕು
ಒಮ್ಮೆ ಸರಸ, ಒಮ್ಮೆ ವಿರಸ
ಒಮ್ಮೆ ನಲಿವು, ಒಮ್ಮೆ ನೋವು
ಚುಟಕು ಎಂದರೆ ನಗುವ ಹೂವು
ಅಂದ್ಹಾಗೆ, ಚೆನ್ನಾಗಿಯೇ ಬರೆದಿದ್ದೀರಿ ರೂಪಾ. ನಿಮ್ಮ ಕೊನೇ ಸಾಲನ್ನು ’ಇದುವೇ ಒಲವಿನ ಸ್ವಾರಸ್ಯ’ ಎಂದು ಬದಲಾಯಿಸಿದರೆ ಹೇಗೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...