ಪಲ್ಲವಿ ವಿಷಯವಾಗಿ...
ಬ್ಲಾಗ್ ಮಿತ್ರರೇ...
ಪಲ್ಲವಿ ಸಂಪದಕ್ಕೆ ಬಂದಾಗ್ಲಿಂದಾನೂ ಅವಳನ್ನ ನೋಡ್ತಾನೇ ಇದ್ದೀನಿ. ನಿಮ್ಮ ಹಾಗೇ ನಾನೂ ಯಾರಪ್ಪಾ ಇದು? ಎಂದು ಹುಬ್ಬೇರಿಸಿದ್ದುಂಟು. ಆದ್ರೆ ಪ್ರತಿಕ್ರಿಯಿಸಿಲ್ಲ. ನಿಮ್ಮ ಹಾಗೂ ಅವಳ ನಡುವೆ ಏರ್ಪಟ್ಟ ಸವಾಲ್ ಜವಾಬ್ ನ್ನ ತಪ್ಪದೇ ಗಮನಿಸ್ತಾ ಹೋದೆ. ಅವಳ ಬರಹ, ವಿಚಾರಧಾರೆ, ಪ್ರತಿಕ್ರಿಯಿಸುವ ಚಾಕಚಕ್ಯತೆ ಎಲ್ಲವೂ ವಿಶೇಷ ಗಮನ ಸೆಳೆಯಿತು. ಈ ಬೆಳವಣಿಗೆ ಕಂಡಾಗ ಅಕ್ಷರಗಳನ್ನೇ ಉಸಿರಾಡುತ್ತ ಅಕ್ಷರಗಳನ್ನೇ ಧ್ಯಾನಿಸುವವಳು ಪಲ್ಲವಿ ಎಂಬುದು ದಟ್ಟವಾಗುತ್ತಾ ಹೋಯಿತು. ವಯಸ್ಸಿಗೆ ಮೀರಿದ ಅನುಭಾವ, ಗಟ್ಟಿ ಭಾವವಲಯ ಅವಳದು. ಅವಳಿಗದು ಅರಿವಿದೆಯೋ ಇಲ್ಲವೋ.... ಸಂಪದದ ಮೂಲಕ ತನ್ನೊಂದಿಗೆ ಇತರರನ್ನೂ ಬೆಳೆಸುತ್ತ ಸಾಗಿರುವ (ಅಕ್ಷರ ಕಾಯಕ) ವೈಶಾಲ್ಯ ನಿಜಕ್ಕೂ ಖುಷಿ ವಿಷಯ.
ಎನಿ ವೇ ಗುಡ್ ಲಕ್ ಪಲ್ಲವಿ..... ಜಿಡ್ಡು ಹಿಡಿದ, ಸವೆಕಲಾದ, ವಿಚಾರಧಾರೆಯಿಂದ ಆಚೆ ಬರಲು ಹವಣಿಸುವ ಪ್ರಯತ್ನಕ್ಕೆ ಮನದಲ್ಲೇ ನನ್ನದೊಂದು ಪುಟ್ಟ ಧನ್ಯವಾದ.
ಇದನ್ನು ಬರೆಯಲು ಪ್ರೇರೇಪಿಸಿದ ಸುನಿಲ್ ಜಯಪ್ರಕಾಶ್ ಅವರಿಗೆ ‘ವಿಶೇಷ’ ಧನ್ಯವಾದಗಳು....

- Login or register to post comments
- 481 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಪಲ್ಲವಿ ವಿಷಯವಾಗಿ...
ಶ್ರೀದೇವಿ ಅವರೇ,
ವ್ಯಕ್ತಿಗಿಂತ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಬೇಕು. ಅಕ್ಷರ ಕಾಯಕ ನಾನೊಬ್ಬಳೇನಾ ಮಾಡ್ತಿರೋದು? ಸಂಪದದ ಬ್ಲಾಗ್ ಬಂಧುಗಳು ಮಾಡುತ್ತಿರುವುದೂ ಅದನ್ನೇ. ಆದರೆ, ಈ ಕಾಯಕದಲ್ಲಿ ಸುನೀಲ್ ಬರೆದಂಥ ಕೆಟ್ಟ ಭಾವನೆ ಯಾರಿಂದಲೂ ಬರುವುದು ಬೇಡ. ಇದು ನನ್ನ ನಮ್ರ ಪ್ರಾರ್ಥನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಪಲ್ಲವಿ ವಿಷಯವಾಗಿ...
ಹೇಳುವುದು ಒಂದು, ಮಾಡುವುದು ಇನ್ನೊಂದು. ನಂಬುವುದು ಹೇಗೋ ಕಾಣೆ.
ಪಲ್ಲವಿ, ಇದು ತುಂಬಾ ಮೋಸ, ನನ್ನ ಬ್ಲಾಗಿನಲ್ಲಿ ವಿಷಯವನ್ನು ಬಿಟ್ಟುಬಿಟ್ಟು, "ಸಂಯಮ, ವ್ಯಕ್ತಿತ್ವ, ಅಭಿಪ್ರಾಯ" ಅಂತೆಲ್ಲ ಹೇಳಿಬಿಟ್ಟು, ಈಗ ಇಲ್ಲಿ ನೋಡಿದ್ರೆ, ವ್ಯಕ್ತಿಗಿಂತ ವಿಷಯ ಅಂತೀರಲ್ಲ. ಅದು ಹೋಗ್ಲಿ, "ವ್ಯಕ್ತಿಗಿಂತ ವಿಷಯ" ಅಂತ ಹೇಳ್ತಾನೇ, ನನ್ನನ್ನು ಬಲವಂತವಾಗಿ ಈ ಎಳೆಗೆ ಎಳೆದುತರೋದು ಏಕೆ ಬೇಕಿತ್ತು ? ಬ್ಲಾಗ್ ಬಗ್ಗೆ ಹೇಳ್ತಾ ಇದ್ದೀರಾ. ಆದರೆ ಅದನ್ನು ವ್ಯಕ್ತಿಯ ಮಟ್ಟದಲ್ಲಿ ಏಕೆ ಕಾಮೆಂಟಿದಿರಿ ? ಯಾಕೀ ದ್ವಂದ್ವ ? ಅಥವಾ ನಿಮ್ಮ ಈ ದ್ವಂದ್ವ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ?
ಉ: ಪಲ್ಲವಿ ವಿಷಯವಾಗಿ...
ಸುನಿಲ್ ಅವರೆ,
ನೀವು ನಿಜವಾಗಲೂ ಗೊಂದಲದಲ್ಲಿದ್ದೀರಿ ಅನ್ನಿಸುತ್ತೆ. ಪಲ್ಲವಿಗೆ ಪ್ರತಿಕ್ರಿಯಿಸಬೇಕಾಗಿರುವುದನ್ನ ನನಗೇಕೆ ಕಳುಹಿಸಿದ್ದೀರಿ? ಸಮಾಧಾನ.... ಸುಧಾರಿಸಿಕೊಳ್ಳಿ.
ಉ: ಪಲ್ಲವಿ ವಿಷಯವಾಗಿ...
ನಾನು ನಿಮ್ಮ ಬ್ಲಾಗಿನಲ್ಲಿ ಕಮೆಂಟಿದಾಗ, ನಿಮೊಗಂದು ಮೇಯ್ಲ್ ಬರುವಂತೆ ಮಾಡಬಹುದು. ಹಾಗಾಗಿ, ಇದಕ್ಕೂ ಗೊಂದಲಕ್ಕೂ ನಂಟು ಬೆಸೆಯಬೇಡಿ, ಶ್ರೀದೇವಿ. ದಮ್ಮಯ್ಯ. ಆದರೂ ನೀವು ಸರಿ. ನನ್ನಿಂದ ತಪ್ಪಾಯ್ತು. ಮನ್ನಿಸಿ.
ಉ: ಪಲ್ಲವಿ ವಿಷಯವಾಗಿ...
ಪರವಾಗಿಲ್ಲ ಬಿಡಿ....
ಉ: ಪಲ್ಲವಿ ವಿಷಯವಾಗಿ...
ಕ್ಷಮ್ಸಿದ್ದೀರಾ ತಾನೇ ?
ಉ: ಪಲ್ಲವಿ ವಿಷಯವಾಗಿ...
ಆಲಾಪ..
ಹೀಗೆ ಒಬ್ಬ ಸದಸ್ಯರ ಮೇಲೆ ಚರ್ಚೆ ನಡೆಯುತ್ತಿರುವುದು ಮೊದಲ ಸರತಿ ಇರಬೇಕು...
ಇದು ಪಲ್ಲವಿಗೆ embarrassment ಆಗದಿರಲಿ..
=====================================
ಮಾಯ್ಸ!
ಉ: ಪಲ್ಲವಿ ವಿಷಯವಾಗಿ...
ಮಹೇಶ್ ಅವರೆ, ‘ಪಲ್ಲವಿ’ ಇಲ್ಲಿ ನೆಪ ಮಾತ್ರ. ಅಂತೂ ಜನರಿಗೆ ವಿಚಾರಕ್ಕಿಂತ ವ್ಯಕ್ತಿ ಮೇಲೆಯೇ ಹೆಚ್ಚು ಗಮನ ಅಂದಹಾಗಾಯ್ತು. ಈ ವಿಷಯ ‘ಪಲ್ಲವಿ‘ ಮೂಲಕ prove ಆದಹಾಗಾಯ್ತು.
ಉ: ಪಲ್ಲವಿ ವಿಷಯವಾಗಿ...
ಪಲ್ಲವಿ ಒಬ್ಬರು ಹೆಂಗಸು ಅನ್ನೋದೇ ಎಲ್ಲರ ಗುಮಾನಿ ಕಾರಣವಾಗಿ ಹೋಗಿರೋ ಹಾಗಿದೆ.
=====================================
ಮಾಯ್ಸ!
ಉ: ಪಲ್ಲವಿ ವಿಷಯವಾಗಿ...
ಮಹೇಶ್ ಅವರೆ...
experimentaaa?
ಲಿಂಗಕ್ಕಿಂತ ವಿಚಾರಕ್ಕೆ ಪ್ರಾಧಾನ್ಯ ಇರಲಿ
ಉ: ಪಲ್ಲವಿ ವಿಷಯವಾಗಿ...
ನನಗೆ ನಿಜಕ್ಕೂ ಬೇಸರವಾಗ್ತಾ ಇದ್ಯಪ್ಪಾ. ನೋಡಿ ಶ್ರೀದೇವಿ, ನೀವೂ ಇದನ್ನೇ ಹೇಳ್ತೀರಾ. ಆದರೆ ನನಗೆ ಮಾತ್ರ
ಅಂತೀರಪ್ಪಾ. ಇದು ವ್ಯಕ್ತಿಗತವಾಗಲಿಲ್ಲವೇ. ಅದಿರಲಿ, ನಾನು ನಿಮಗೆ ಏನೂ ಪ್ರತಿಕ್ರಿಯೆ ನೀಡದೇ ಇದ್ದರೂ,
ಅಂತ ಬೇರೆ ಹೇಳ್ತೀರಪ್ಪಾ. ನಾನು ನಿಮಗೆ ಏನು ಪ್ರತಿಕ್ರಿಯ ಕಳುಹಿದೆ ?. ಇದು ನಿಮ್ಮ ಬ್ಲಾಗಾದ್ದರಿಂದ ಯಾರು ಏನೇ ಕಾಮೆಂಟಿದರೂ ನಿಮಗೆ ಬರುವುದು.
ಅದಕ್ಕೆ, ಹಿರಿಯರು ಹೇಳಿದ್ದು. "ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು".
ಉ: ಪಲ್ಲವಿ ವಿಷಯವಾಗಿ...
ಸುನಿಲ್ ಅವರೆ,
ಆದರೆ ನಿಧಾನ.... ನೀವಂದುಕೊಂಡಿದ್ದೆಲ್ಲ ನಿಜ ಅಂತೇನಲ್ಲ.... ಯೋಚಿಸಿ. ಅಷ್ಟಕ್ಕೂ ಕ್ಷಮಿಸಲಿಕ್ಕೆ ನಾನಾರು? ಪರವಾಗಿಲ್ಲ. ಅನಗತ್ಯ ಚರ್ಚೆ ಬೇಡ ಎನಿಸುತ್ತೆ.