ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

ಪುಟ್ಟ ಪುಟ್ಟ ಕಿಟಕಿಗಳ ದೊಡ್ಡ ದೊಡ್ಡ ಕಟ್ಟಡಗಳು. ಪಕ್ಕದಲ್ಲಿ ನಾವೂ ಇದ್ದೇವೆ ಎನ್ನುತ್ತ ಅಲ್ಲಲ್ಲಿ, ಆಗೊಮ್ಮೆ ಈಗೊಮ್ಮೆ ಕೈಬೀಸುವ ಮರಗಳು... ಎಷ್ಟು ಏಣಿ ಜೋಡಿಸಿದರೂ ನಿಲುಕದ ಬಯಲಲ್ಲಿ ಇಲಿಯ ಮೇಲೆ ಆನೆ ಸವಾರಿ(?!) ಅದ ನೋಡುತ್ತಿವೆ ಎರಡು ಪುಟ್ಟ ಪುಟ್ಟ ಗುಬ್ಬಚ್ಚಿಗಳು ಅಲ್ಲಲ್ಲಾ ಕಾಗೆಗಳೇನೋ.... ಹಾರುವ ಕುದುರೆಗೆ ಅಡ್ಡಗಾಲು ಹಾಕುವ ಹುನ್ನಾರದಲ್ಲಿ ಮಾರ್ಜಾಲರಾಯ.! ಇದೆಲ್ಲ ನೋಡಿ ಹೌಹಾರಿದ ಆಕೆಯ ಕಾಲಲ್ಲಿ ಪುಟ್ಟ ಮೊಲವೊಂದು ಕಚಗುಳಿ ಇಡುತ್ತಿದೆ. ಗಂಭೀರವಾಗಿ ನೋಡುತ್ತಿದ್ದಾನೆ ಒಬ್ಬ ಅಜ್ಜ, ಮುಖ ಮಾತ್ರ ತೋರಿಸುತ್ತ. ಛೆ. ಆದರೆ ಈ ಆಟವೆಲ್ಲ, ಚೆಂದದ ನೋಟವೆಲ್ಲ ಕೆಲ ಕಾಲವಷ್ಟೇ. ಕೆಲವೇ ಕೆಲವು ನಿಮಿಷ. ಅದೆಲ್ಲಿಂದಲೋ ಅಡರುತ್ತದೆ ಕಪ್ಪು. ಬಿಕ್ಕುತ್ತದೆ ಈ ಎಲ್ಲ ಪರಿವಾರ....ಬಿಕ್ಕಳಿಕೆ ಹನಿಯಾಗಿ, ಹನಿ ಹಳ್ಳವಾಗಿ, ಹಳ್ಳ ನದಿಯಾಗಿ, ನದಿ ಸಾಗರವಾಗಿ ಮತ್ತೆ ಮೂಡುತ್ತವೆ ಅದೇ ಗುಬ್ಬಚ್ಚಿ, ಕಾಗೆ, ಇಲಿ, ಆನೆ, ಆಕೆ, ಅಜ್ಜ, ಮೊಲ ಏನೆಲ್ಲ...ಈ ಮೋಡದ ಮೋಡಿ ಸವಿಯುವ ಅವಕಾಶ ನಿಮಗೆ ಸಿಕ್ಕಿತ್ತೋ?

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

roopablrao's picture

ಹೌದು ಶ್ರೀದೇವಿಯವರೇ
ಒಳ್ಳೆ ಆಲೋಚನೆ
ನಾನು ಈ ಮೋಡಗಳ ನಡುವಲ್ಲಿ
ಕಾಂಗರೂ , ಅಳುತ್ತಿರುವ ಹೆಣ್ಣು, ಬಿಲ್ಲು ಬಾಣ ಹಿಡಿದ ರಾಮ, ಬೆಟ್ಟ ಗುಡ್ಡ ಇವುಗಳನ್ನೆಲ್ಲ ಕಂಡು ಅಚ್ಚರಿ ಪಟ್ಟಿದ್ದೇನೆ
ಒಮ್ಮೆಯಂತೂ ರಾಘವೇಂದ್ರರ್ ಆಕೃತಿ ಕಂಡು ಬಂದು ಧನ್ಯಳಾಗಿದ್ದ್ದೆ.
ಏನೆ ಆಗಲಿ ಇದು ಪ್ರಕೃತಿಯ ನಿಜ ವಿಸ್ಮಯ
ಯಾವ ಕಲಾವಿದ ಯಾವ ಕುಂಚದಿಂದ ಬರೆದ ಕಲೆಯೋ ಇದು? ಅನ್ನಿಸುತ್ತದೆ

http://thereda-mana....

ರೂಪ

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ರೂಪಾ ಅವರೆ,
ನಿಜ. ವಿಧಾತನಿಗಿಂತ ದೊಟ್ಟ ಕಲಾವಿದನಿಲ್ಲ. ಮನಸ್ಸನ್ನು ನಿರಾಳವಾಗಿಸಿಕೊಂಡು ಆಗಾಗ ಯೋಚಿಸಿದಾಗ ಸೃಷ್ಟಿಯ ವೈಚಿತ್ರ ಅರಿವಿಗೆ ಬರುವುದುಂಟು.

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

uniquesupri's picture

ನನ್ನ ಪ್ರಕಾರ ಕಲೆಯಿರುವುದು ನೋಡುವ ಕಣ್ಣುಗಳಲ್ಲಿ, ಕೇಳುವ ಕಿವಿಯಲ್ಲಿ, ಅನುಭಾವಿಯಲ್ಲೇ ಹೊರತು ಹೊರಗಲ್ಲ... ಕುರುಡನಿಗೆ, ಮತಿಹೀನನಿಗೆ ನಿಮ್ಮ ಯಾವ ದೇವನ ಸೃಷ್ಟಿಯೂ ವಿಚಿತ್ರವಾಗಿ ಕಾಣದು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

roopablrao's picture

ಸುಪ್ರೀತ್
ಅದೂ ದೇವನ ಸೃಷ್ಟಿಯ ವೈಚಿತ್ರ ಅಲ್ಲವೇ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana....

ರೂಪ

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

uniquesupri's picture

ಹಾಗೆ ಆಲೋಚಿಸುವುದೂ ಎಂಥಾ ವಿಚಿತ್ರ ಅಲ್ಲವೇ? ಆ ದೇವನೂ ಹುಟ್ಟುವುದೂ ನಮ್ಮ ಇಂಥಾ ದೃಷ್ಟಿಕೋನದಲ್ಲೇ... ವಿಚಿತ್ರ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಹೌದು ಸುಪ್ರೀತ್ ಅವರೆ, ನೂರಕ್ಕೆ ನೂರರಷ್ಟು ನಿಮ್ಮ ಮಾತು ನಿಜ

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಇಲ್ಲಿ ನಾನು ವಿಧಾತ ಎಂದರೆ ಪ್ರಕೃತಿ ಎಂದು ಅಥೈಸಿಕೊಂಡಿದ್ದೇನೆ. ವಿಧಾತ ಎಂದರೆ ಬ್ರಹ್ಮ, ಸೃಷ್ಟಿಕರ್ತ ಅಂತೆಲ್ಲ ಅರ್ಥ ಇದೆ ನಿಜ.

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

uniquesupri's picture

ಪದಗಳು ಬದಲಾದರೂ ನಮ್ಮ ದೃಷ್ಟಿಕೋನದಲ್ಲಿ ಹುಟ್ಟುವ ಆ ಒಂದು ಭಾವ ಎಲ್ಲಿ ಹೋಗಲು ಸಾಧ್ಯ? ಅದಕ್ಕೇ ಇಷ್ಟು ಕಾಲ ಕಳೆದರೂ ಮನುಷ್ಯನೊಂದಿಗೇ ದೇವರು ಬದುಕಿಕೊಂಡಿರುವುದು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಭಾವಕ್ಕೂ ಭಕ್ತಿಗೂ ಹತ್ತಿರದ ನಂಟಿದ್ದರೂ ಅಷ್ಠೇ ಸೂಕ್ಷ್ಮ ವ್ಯತ್ಯಾಸವೂ ಇದೆ ಅಲ್ವಾ?

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

uniquesupri's picture

ಮೋಡಗಳ ಕನ್ನಡಿಯಲ್ಲಿ ಪ್ರತಿಬಿಂಬವಾಗುವುದು ನಮ್ಮ ಮನಸ್ಸೇ, ನಮ್ಮ ಕಲ್ಪನೆಗಳೇ, ನಮ್ಮ ತಿಳುವಳಿಕೆಯೇ?

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

roopablrao's picture

ನಮ್ಮ ಕಲ್ಪನೆಯೆ ಅಂತನ್ನಿಸುತ್ತೆ

http://thereda-mana....

ರೂಪ

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಸುಪ್ರೀತ್ ಅವರೆ,
ನಮ್ಮ ನೋಟ.
ಆ ನೋಟಕ್ಕೆ ಎಳೆ ಜೋಡಿಸುವ ಮನಸ್ಸು,
ಆ ಮನಸ್ಸಿಗೆ ‘ಕೋನ’ ರೂಪಿಸುವ ದೃಷ್ಟಿ.
ಅಂದರೆ ನಮ್ಮ ದೃಷ್ಟಿಕೋನ.
ಈ ದೃಷ್ಟಿಕೋನವೇ ಆ ಮೋಡದ ಕನ್ನಡಿಯಲ್ಲಿ ಮೂಡುವುದಲ್ಲವೇ?

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

roopablrao's picture

ಮತ್ತೆ ಎಳೆ
ಧಾರವಾಡದವರೆಲ್ಲಾ ಎಳೆಯ ಹಿಂದೆ ಬಿದ್ದ ಹಾಗಿದೆ :)

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana....

ರೂಪ

ಉ: ನಿಮಗೂ ಇವರು ಸಿಕ್ಕರೆ ನನಗೆ ಹೇಳಿ...

shreedevikalasad's picture

ಅಲ್ಲಲ್ಲಿ ತುಂಡಾಗಿರುವ ಎಳೆಗಳನ್ನು ಜೋಡಿಸುವ ‘ಸಂಪದ’ದ ಪ್ರಯತ್ನದ ಮುಂದೆ ಧಾರವಾಡದ ಎಳೆ ಯಾವ ಲೆಕ್ಕ ಹೇಳ್ರಿ ರೂಪಕ್ಕ?