ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
ಖವಾಸಿಯವರು ಒಂದು ಸಾರಿ ಮನೆಗೆ ಬಂದಿದ್ದಾಗ ಈ ಹಾಡು ಕೇಳಿದ್ದೀರಾ ಎಂದಿದ್ದರು. ಯೂಟ್ಯೂಬಿನಲ್ಲಿ ಹುಡುಕಿ ಪ್ಲೇ ಮಾಡಿದ್ದೆ. ಈಗ ನಿತ್ಯ ಈ ಹಾಡು ಕೇಳುತ್ತಿರುತ್ತೇನೆ (ಕರಿಹೈದರ ಕೃಪೆಯಿಂದ) - ಪಿ ಬಿ ಎಸ್ ಅವರ ಧ್ವನಿಯಲ್ಲಿದೆ.
ದೀನ ನಾ ಬಂದಿರುವೆ
ಬಾಗಿಲಲಿ ನಿಂದಿರುವೆ
ಜ್ಞಾನಭಿಕ್ಷೆಯ ನೀಡಿ
ದಯೆತೋರಿ ಗುರುವೆ ||
ಕೃಷ್ಣನಾಲಯದಾಚೆ
ನಿಂತ ಕನಕನ ರೀತಿ
ಕಾದಿರುವೆ ಕಾತುರದೆ
[...] ಕೇಳಿಸದೆ ಗುರುವೆ
ಎನ್ನ ಮೊರೆ ಕೇಳಿಸದೆ. . . . . . . . ಗುರುವೆ (ವಂದನೆ: ರಮೇಶ್)
ದ್ರೋಣರಾ ಬಳಿ ಬಂದ
ಏಕಲವ್ಯನ ತೆರೆದೆ
ಗುರು ನಿಮ್ಮ ಕೃಪೆ ಬಯಸಿ
ನಾ ಬಂದೆ ತಂದೆ
ನಿಮ್ಮ ಪಾದದ ಬಳಿಯೆ
ಎನಗೆ ಆಶ್ರಯ ನೀಡಿ
ಸಂಗೀತ ಸುಧೆ ಹರಿಸಿ
ಸಲಹಿರೆನ್ನನು ಗುರುವೆ
(ಮೇಲೆ ಬರೆದಿದ್ದರಲ್ಲಿ ಸ್ವಲ್ಪ ತಪ್ಪುಗಳಿರಬಹುದು)

- Login or register to post comments
- 404 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
ಹರಿಯವರೇ ಇದು ಯಾವ ಸಿನೆಮಾದ ಹಾಡು ಎಂಬುದು ಗೊತ್ತೇ? ತಿಳಿಸಿದ್ದರೆ ಚೆನ್ನಿತ್ತು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
ಇದು ಸಂಧ್ಯಾರಾಗ ಚಿತ್ರದ್ದು ( ೧೯೬೦/೬೧ರದ್ದಿರಬಹುದು)
ಕನ್ನಡದಲ್ಲಿ ಬಂದ ಕೆಲವೇ ಸಂಗೀತ ಪ್ರಧಾನ ಚಿತ್ರಗಳಲ್ಲಿ ಇದು ಒಂದು.
ಅನಕೃ ಅವರ ಕಾದಂಬರಿ ಆಧಾರಿತವಾದ ಈ ಚಿತ್ರದಲ್ಲಿ ಭೀಮಸೇನ ಜೋಶಿ ಮತ್ತೆ ಬಾಲಮುರಳಿಕೃಷ್ಣ ಇಬ್ಬರೂ ಹಾಡಿರುವುದು (ಒಂದು ಹಾಡನ್ನು ಇಬ್ಬರೂ ಒಟ್ಟಿಗೆ ಹಾಡಿರುವುದು) ಒಂದು ವಿಶೇಷ.
ಈ ಚಿತ್ರದ ಇನ್ನು ಕೆಲವು ಹಾಡುಗಳನ್ನು ಇಲ್ಲಿ ನೋಡಿ/ಕೇಳಬಹುದು.
http://www.youtube.com/results?search_query=Sandhyaraga&search_type=
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
ಕೃಷ್ಣನಾಲಯದಾಚೆ
ನಿಂತ ಕನಕನ ರೀತಿ
ಕಾದಿರುವೆ ಕಾತುರದೆ
ಎನ್ನ ಮೊರೆ ಕೇಳಿಸದೆ. . . . . . . . ಗುರುವೆ
"ಏರಿದವನು ಚಿಕ್ಕವನಿರಬೇಕು"
ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
ಜರ್ಮನಿಯಲ್ಲಿರೋವಾಗ ಈ ಹಾಡನ್ನು ಕೇಳದೆ ಇದ್ದ ದಿನವಿರಲಿಲ್ಲ..
ಪೂರ್ತಿಯಾಗಿ ನನ್ನ ಮನ್ನಸ್ಸನ್ನ ಆವರಿಸಿಬಿಡುತ್ತೆ ...
"ಏಕಲವ್ಯನ ತೆರೆದೆ"
"ಏಕಲವ್ಯನ ತೆರದಿ" ಅಂತ ಆಗಬೇಕಿತ್ತು.
ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
ಈ ಹಾಡಿನ ರಾಗವೇ ಹಾಗಿದೆ ಅನ್ಸುತ್ತೆ. ಇದರ ರಾಗ ಮತ್ತು ಅನಿಸು ಚೆನ್ನಾಗಿ ತೊಡರ್ಚಿ ಕೇಳುವವರತ್ತ ಸೆಳೆಯುತ್ತದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
ಗುರುವಿನ ಬಳಿ ಸಂಗೀತ ಪಾಠಕ್ಕಾಗಿ ಬೇಡಿಕೊಳ್ಳುವ ದೃಶ್ಯ ಅದು ಬಹ
ಈಗಿನ ಕಾಲಕ್ಕೆ
ಹುಡುಗಾ ನಾ ಬಂದಿರುವೆ
ಫೀಸನ್ನ ಕಟ್ಟಿರುವೆ
ಕ್ಲಾಸ್ ತಗಂಡು ಮನೆಗೆ ಕಳ್ಸೊ ಸಾರ್
ಅಂತ ಕಿರುಚೋ ಕಾಲ
ಅಂದಿನ ಆ ಭಯ ಭಕ್ತಿ ಈಗಿನ ಹುಡುಗ ಹುಡುಗಿಯರಿಗೆ (ನಮಗೂ ಇರಲಿಲ್ಲ ಬಿಡಿ
) ಎಲ್ಲಿದೆ?
ಗುರುವಿನಾ ಪಾದ ದೊರಕುವ ತನಕ ದೊರೆಯದೆನಗೆ ಮುಕುತಿ ಎನ್ನುವ ಕಾಲ ಅದು
ಗುರುವಿನ ಜೀವ ಹಿಂಡುವ ತನಕ ದೊರೆಯದೆನಗೆ ಸದ್ಗತಿ ಎನ್ನುವ ಕಾಲ ಇದು
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
ಮೇಡಂ,
ಇಂದಿನ ಹುಡುಗರ ಬಗ್ಗೆ ಹೀಗೆ ಲಘುವಾಗಿ ಮಾತನಾಡಬೇಡಿ... ಅಂಥಾ ಗುರುಗಳು ಈಗ ಇದ್ದಾರಾ ಎನ್ನುವುದನ್ನೂ ಗಮನಿಸಿ. ಯಾವ ಕಾಲದಲ್ಲೂ ಗುರುವಿನ ಗುಲಾಮರಾಗುವಂತ ವಿದ್ಯಾರ್ಥಿಗಳಿರಲಿಲ್ಲ. ಕೆಲವರು ಇದ್ದರೂ ಎಲ್ಲರೂ ಹಾಗಿರುತ್ತಿರಲಿಲ್ಲ. ಹಾಗಾಗಿಯೇ ಅನುಭಾವಿಗಳು ಅದನ್ನು ಒಂದು ಆದರ್ಶವನ್ನಾಗಿ ಇಟ್ಟದ್ದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದದ್ದು. ಎಂದಿಗೂ ಉಸರಾಟವಾಗಲೀ, ಊಟ, ತಿಂಡಿ ತಿನ್ನುವುದಾಗಲೀ ಆದರ್ಶವಾಗದು ಯಾಕೆಂದರೆ ಅದು ಸಹಜವಾದದ್ದು.
ಇಂದಿಗೂ ನಮ್ಮ ಕ್ಲಾಸುಗಳಲ್ಲಿ ಬಂದು ನೋಡಿ, ಪರಮ ದರಿದ್ರ ಟೀಚರುಗಳನ್ನೂ ದೇವರುಗಳು ಅಂತ ಕಾಣುವ ಒಂದಿಬ್ಬರು ಹುಡುಗರಾದರೂ ಸಿಕ್ಕುತ್ತಾರೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
ಸುಪ್ರೀತ್
ಇದು ನಾನು ಸ್ವತಹ ನನ್ನ ಕಾಲೇಜಿನಲ್ಲಿ ನಡೆಸಿದ ಗಲಾಟೆ ಇದು
ನಮ್ಮ ಕಾಲೇಜಿನ ಮೇಡಮ್ ಒಬ್ಬರು ಸರಿಯಾಗಿ ಪಾಠ ಮಾಡಲಿಲ್ಲವಾದಾಗ " ಇನ್ನು ಮೇಲೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳದಿದ್ದರೆ ನಾವೆಲ್ಲ ಕ್ಲಾಸಲ್ಲಿ ಇರೋದಿಲ್ಲ. ಯೋಚನೆ ಮಾಡಿ ಪಾಠ ಮಾಡಿ " ಅಂತ ಧಮಕಿ ಹಾಕಿದ್ದೆ
ನಮ್ಮ ಹುಡುಗರು ಆ ಮೇಡಮ್ ಮೇಲೆ ಪೇಪರ್ ರಾಕೆಟ್ ಮಾಡಿ ಎಸೆಯುತ್ತಿದ್ದರು. ಅವರಿಗೆ ಕಣ್ಣು ಹೊಡೆಯುತಿದ್ದರು.
ಹೇಳಿ ಇಂತಹ ಹುಡುಗ ಹುಡುಗಿಯರೇ ಈಗ ಎಲ್ಲೆಡೆ ಕಾಣುತ್ತಾರೆ ಅಲ್ಲವಾ
exceptions cannot be examples ಅಲ್ಲವಾ?
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ...
Examples cannot make generalizations...
ರಾಕೆಟ್ ಎಸೆಯುವ ಹುಡುಗರೇ ಕೆಲವು ಲೆಕ್ಚರರ್‌ಗಳಿಗಾಗಿ ಏನೇನೆಲ್ಲಾ ರಿಸ್ಕು ತೆಗೆದುಕೊಳ್ಳುವುದು ನಮ್ಮ ಕಣ್ಣಿಗೆ ಕಾಣದು. ಕೇವಲ ವಿನಯ ಧೂರ್ತರ ಲಕ್ಷಣ. ಲೆಕ್ಚರರ್‌ಗಳನ್ನು ಪ್ರೀತಿಸುವವರು ಎಷ್ಟೋ ಮಂದಿ ನನ್ನ ಫ್ರೆಂಡ್ ಸರ್ಕಲ್ಲಿನಲ್ಲಿದ್ದಾರೆ. ಆದರೆ ಅಂಥ ಲೆಕ್ಚರರ್‌ಗಳ ಕೊರತೆ ಇದೆ ಅಷ್ಟೇ.
ಅಷ್ಟಕ್ಕೂ ‘ಗುರು’ ಹಾಗೂ ಉಪಾಧ್ಯಾಯರ ನಡುವೆ ತುಂಬಾ ವ್ಯತ್ಯಾಸ ಇದೆ ಬಿಡಿ... ಹಾಗೆಯೇ ವಿದ್ಯೆಗೂ ಶಿಕ್ಷಣಕ್ಕೂ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com