ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ದಿನಕ್ಕೊಂದು ಪ್ರಶ್ನೆ

ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

June 2, 2008 - 6:40pm — roopablrao

ನೋಡಿ ಎಷ್ಟು ವಿಚಿತ್ರ
ಮೂರುವರ್ಷದ ಹಿಂದೆ ನಾನೆ ವಧುವಾಗಿ ಈ ತಮಿಳ್ಗನ್ನಡಿಗರ ಮನೆಗೆ ಬಂದಿದ್ದೆ.
ಈಗ ನಾನೆ ನಮ್ಮ ಮೈದುನನ(ಇವರ ಚಿಕ್ಕಮ್ಮನ ಮಗ)ನಿಗೆ ಹೆಣ್ಣು ನೋಡಬೇಕಾಗಿ ಬಂದಿದೆ. ಅವರಿಗೆ ನನ್ನ ರೀತಿ ಕನ್ನಡದ ಹುಡುಗೀನೆ ಬೇಕಿದೆಯಂತೆ. Smiling
ಸರಿ ಯಾರನ್ನು ಹುಡುಕೋದು.
ತುಂಬಾ ಚೆನ್ನಾಗಿರೋರನ್ನ? ಅಥವಾ?
ತುಂಬಾ ಒಳ್ಳೆಯವರನ್ನ?
ಸೌಂದರ್ಯ ಕಣ್ಣಿಗೆ ಕಾಣುತ್ತದೆ
ಆದರೆ ಗುಣಾ?
ನಮ್ಮೆಜಮಾನರನ್ನ ಕೇಳಿದರೆ
"ನಿನ್ನ ರೂಪಕ್ಕೆ ಮರುಳಾಗಿ ನಾನು ಬಲೆಗೆ ಬಿದ್ದೆ . ಈಗ ನೋಡಿದ್ರೆ ಗುಣ ಸೊನ್ನೆ (ಅವರು ಹೇಳುವುದಕ್ಕೂ ಕಾರಣಗಳಿವೆ ನನಗೆ ಅಡಿಗೆ ಮಾಡುವುದಕ್ಕೆ ಬರುವುದಿಲ್ಲ, ಸ್ವಚ್ಛತೆಯಂತೂ ಇಲ್ಲವೆ ಇಲ್ಲ ) ರೂಪ ಇಲ್ಲವಾದರೂ ಪರವಾಗಿಲ್ಲ. ಗುಣ ನೋಡು ಅಂತಾರೆ
ನನ್ನ ಸ್ನೇಹಿತರನ್ನ್ ಕೇಳಿದರೆ "ರೂಪ ಏನೆ ಆಗಲಿ ರೂಪ ಇದ್ದರೆ ಹೆಣ್ಣಿಗೆ ಬೆಲೆ ಅಂತಾರೆ?

ನಾನು ಗೊಂದಲದಲ್ಲಿದ್ದೇನೆ ಇವರ ತಮ್ಮನ್ನನ್ನು ಕೇಳಿದರೆ. ನಿಮ್ಮ ಹಾಗೆ ಇರ್ಬೇಕು ಆದ್ರೆ ಅಡಿಗೆ ರುಚಿರುಚಿಯಾಗಿ ಮಾಡ್ಬೇಕು
ಅಂತಾನೆ
ನಿಮ್ಮೆಲ್ಲ್ಲರ ಅಭಿಪ್ರಾಯ ಏನು?

‹ ಒಗಟುವಿನ ಉತ್ತರ ಹುಡುಕಿ...
  • ದಿನಕ್ಕೊಂದು ಪ್ರಶ್ನೆ
~.~
  • Login or register to post comments
  • 949 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2008 - 7:01pm — vikashegde

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

vikashegde's picture

ಹೆಣ್ಣಿಗೆ ರೂಪ ಗುಣ ಎರಡೂ ಇರಲು ಸಾಧ್ಯವೇ ಇಲ್ಲವೇ ?! Smiling

ನನ್ನ ವಿಷ್ಯ ಕೇಳುವುದಾದರೆ, ನಾನಂತು ಗುಣಕ್ಕೇ ಜಾಸ್ತಿ ಬೆಲೆ ಕೊಡುವುದು. ರೂಪ ನಾಲ್ಕು ದಿನವಷ್ಟೆ. ನಂತರ ಎಲ್ಲಾ ಒಂದೇ.. ರೂಢಿಯಾಗಿಬಿಡುತ್ತದೆ. ಗುಣ ಸರಿಯಿಲ್ಲದಿದ್ದರೆ ರೂಢಿಯಾಗುವುದಕ್ಕಿಂತ ಒಂದಾದ ಮೇಲೊಂದು ತೊಂದರೆಗಳೇ ಜಾಸ್ತಿ. ರೂಪ ಸಾಧಾರಣವಿದ್ದರೂ ಒ.ಕೆ Smiling

ರೂಪಕ್ಕ, ನನಗೂ ಹಾಗೆ ಒಂದು ಹೆಣ್ಣು ಹುಡುಕಿಬಿಡಿ Sticking out tongue

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 7:59pm — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ಖಂಡಿತಾ ವಿಕಾಸ್‌
ಈಗಾಗಲೆ ಅರ್ಧ ತಲೆ ಕೆಟ್ಟಿದೆ ಇನ್ನೂ ಪೂರ ಕೆಡುತ್ತೆ
ಸಂಸ್ಕೃತ ಕಲಿತಿರೋ ಹೆಣ್ಣು ಬೇಕಾ ಇಲ್ಲ ಸಂಸ್ಕೃತ ಕಲೀದೀರೋ ಹೆಣ್ಣು ಬೇಕಾ ಅಂತ Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 8:40pm — raghava

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

raghava's picture

ರೂಪಕ್ಕ ! ಹಿಂಗೇ ಬಿಟ್ಟ್ರೆ ನಿಮ್ ಹತ್ರ ಒಂದ್ ಮ್ಯಾಚ್ಮೇಕಿಂಗ್ ಎಜೆನ್ಸಿ ತೆಗ್ಸ್ಬಿಡ್ತಾರೆ ನಮ್ ಹುಡುಗ್ರು :>

--_ರಾಘವ_
http://raghavan.vinay.googlepages.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 9:58am — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ಹೌದು ರಾಘವ್ ಅದೊಂದನ್ನ ಬಾಕಿ ಉಳಿಸಿಕೊಂಡಿದೀನಿ
ಅದನ್ನೂ ಸ್ಟಾರ್ಟ್ ಮಾಡೋಣ ಬಿಡಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 9:17pm — Sunil Jayaprakash

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

Sunil Jayaprakash's picture

ಸುಸಂಸ್ಕೃತ !!!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:12pm — vikashegde

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

vikashegde's picture

ಕನ್ನಡ ಬಂದ್ರೆ ಸಾಕು.. ಬರೀ ಬಂದ್ರಾಗ್ಲಿಲ್ಲ, ಮಾತಾಡ್ಲೂ ಬೇಕು ಸದಾ ಸರ್ವದಾ ( ಯಾವಾಗ್ಲೂ , ಎಲ್ಲೆಲ್ಲೂ) Smiling
ಉಳಿದಿದ್ದೆಲ್ಲಾ added advantages Smiling

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 8:01pm — cherambane

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

cherambane's picture

ರೂಪಕ್ಕ,
ನನ್ನ ಪ್ರಕಾರ ಹೆಣ್ಣಿಗೆ ರೂಪಕ್ಕಿಂತ ಮುಖ್ಯ ಗುಣ, ಗುಣವಂತ ಹೆಣ್ಣು ಎಲ್ಲಾ ರೀತಿಯಲ್ಲೂ ಗಂಡನಿಗೂ, ತನ್ನ ಅತ್ತೆ ಮನೆಗೂ ಕಳಂಕ ಬಾರದ ರೀತಿಯಲ್ಲಿ ಸಂಸಾರ ನಿಭಾಯಿಸುತ್ತಾಳೆ. ಆದರೆ ಎಲ್ಲಾ ರೂಪವಂತ ಹೆಣ್ಣು ಕಳಂಕ ತರುತ್ತಾಳೆ ಎಂದಲ್ಲ.

ಬಶೀರ್ ಕೊಡಗು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 8:08pm — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ಬಶೀರ್‍ ಹಾಗಿದ್ರೆ ನಿಮ್ಮ ಮುಂದೆ
ಒಬ್ಬ ಚೆಲುವೆ ನಿಂತಿದ್ದಾಳೆ ಹಾಗೆ ಒಬ್ಬ ಸಾಧಾರಣ್ ರೂಪಿನ್ ಗುಣವಂತೆ ನಿಂತಿದ್ದಾಳೆ ನೀವು ಯಾರನ್ನು ಬಯಸುತ್ತೀರ
ಹಾಗೂ ಆಕೆಗೆ ಗುಣ ಇದೆಯೆ ಇಲ್ಲವೇ ಎನ್ನುವುದು ಹೇಗೆ ತಿಳಿಯುತ್ತದೆ?

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 9:38pm — hamsanandi

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

hamsanandi's picture

ಒಂದು ಕಿವಿಮಾತು Eye-wink

ಸಂಸ್ಕೃತ ಬರದಿದ್ದರೂ ಪರವಾಗಿಲ್ಲ, ಆದರೆ ಒಬ್ಬರಿಗೊಬ್ಬರಿಗೆ ತಕ್ಕ ಸಂಸ್ಕೃತಿ ಇರುವವರಾಗಬೇಕು!

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 9:46pm — uniquesupri

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

uniquesupri's picture

ಸ್ವಲ್ಪ ಸಡಿಲವಾಗಿ ಆಲೋಚಿಸುವುದಾದರೆ, ಮದುವೆ ಅನ್ನೋದು ವ್ಯಾಪಾರ ಆದ ಹಾಗೆ ಆಗಿದೆ. ಅಂಗಡಿಗೆ ಹೋಗಿ ನಾವು ಬಟ್ಟೆಯನ್ನು ಕೊಂಡು ತಂದಂತೆ. ಅಲ್ಲಿ ನಾವು ನಮ್ಮ ಕಣ್ಣಿಗೆ ಚೆಂದವಾಗಿ ಕಂಡದ್ದನ್ನು ಆರಿಸಿಕೊಳ್ಳುತ್ತೇವೆ. ಆದರೆ ಹಾಗೆ ಮಾಡುವಾಗ ಅದು ನಮ್ಮ ಜೇಬಿನ ಆಳಕ್ಕೆ ಹೊಂದುತ್ತದೆಯೋ ಇಲ್ಲವೋ ಎಂಬುದನ್ನೂ ಗಮನದಲ್ಲಿ ಇರಿಸಿಕೊಂಡಿರುತ್ತೇವೆ. ಕಣ್ಣಿಗೆ ಚೆಂದ ಕಾಣುವ ಬಟ್ಟೆಯನ್ನೆಲ್ಲಾ, ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆರಿಸಿದ ನಂತರ ಅವುಗಳ ಗುಣಮಟ್ಟವನ್ನು, ಕ್ವಾಲಿಟಿಯನ್ನು ಅಂಗಡಿಯವನನ್ನು ಕೇಳಿ ಖಚಿತ ಪಡಿಸಿಕೊಳ್ಳುತ್ತೇವೆ, ನಮ್ಮ ಅಲ್ಪ ಮತಿಯನ್ನೇ ಉಪಯೋಗಿಸಿ ತಿಕ್ಕಿ ತೀಡಿ ಗುಣ ಎಂಥದ್ದು ಅಂತ ನಿರ್ಧರಿಸುತ್ತೇವೆ. ಕಡಿಮೆ ಬೆಲೆಗೆ ಒಳ್ಳೆಯ ಗುಣದ್ದು ಸಿಕ್ಕಿತಲ್ಲ ಅಂತ ಸಂಭ್ರಮಿಸಿ ಮನೆಗೆ ಬಂದು ಬಳಸಿ ನೋಡಿದರೆ ಅದು ಪಿಸುಗು ಅಂತ ಪೇಚಾಡುತ್ತೇವೆ. ಕೆಲವು ಸಲ ಒಳ್ಳೇ ಬಟ್ಟೆಯನ್ನೇ ಕೊಂಡಿರುತ್ತೇವೆ. ಈ ಎಲ್ಲಾ ಜ್ಞಾನವನ್ನು ಮುಂದಿನ ಬಾರಿ ಅಂಗಡೀಗೆ ಹೋದಾಗ ಉಪಯೋಗಿಸುತ್ತೇವೆ.

ಆದರೆ ಮದುವೆಯ ಸಂದರ್ಭದಲ್ಲಿ ಹೀಗೆ ನಮ್ಮ ಅನುಭವವನ್ನು ಬಳಸಿಕೊಳ್ಳುವ ಅವಕಾಶ ಸಿಕ್ಕುವುದಿಲ್ಲ. Smiling
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 10:50am — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ಸುಪ್ರೀತ್
ಸೋ ಮೊದಲ ಆದ್ಯತೆ ರೂಪಕ್ಕೆ ಎಂದಾಯಿತು?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:03pm — uniquesupri

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

uniquesupri's picture

ನಮ್ಮಂಥ ಮರ್ತ್ಯರಿಗೆ (mortals) ಕಾಣುವುದು ಅದೇ ಮೊದಲು ಹಾಗೂ ಅದೊಂದೇ ಮಾತ್ರ. ನಮ್ಮ ಮಣ್ಣಿನ ಕಣ್ಣಿಗೆ ಗುಣ, ಅವಗುಣಗಳು ಕಾಣುವುದಿಲ್ಲ ಅವುಗಳ ಬಗ್ಗೆ ನಿರ್ಧರಿಸೋದು ಹೇಗೆ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 6:14am — ahankari

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

ahankari's picture

ಯಾವುದೋ ಕನ್ನಡ ಮೂವಿಲಿ ಕೇಳಿದ್ದು, ಗುಣವನ್ನು ಬದಲಾಯಿಸ ಬಹುದು , ಆದರೆ ರೂಪವನ್ನು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 10:03am — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ರೂಪವನ್ನೂ ಬದಲಾಯಿಸಬಹುದಲ್ಲ ಬ್ಯೂಟಿ ಪಾರ್ಲರೀಗೆ ಹೋದರೆ ಸಾಕು Smiling

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:15pm — uniquesupri

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

uniquesupri's picture

`ಬ್ರಹ್ಮ ಗಂಟು’ ಸಿನೆಮಾ ನೋಡಿದ್ದೀರಾ?

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:17pm — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ಹೌದು ಬಹಳ ಸಲ ನೋಡಿದ್ದೇನೆ.
ಅದನ್ನೇ ಯೋಚಿಸಿ ಹೇಳಿದ್ದು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2008 - 10:38am — srinivasps

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

srinivasps's picture

"ಯಾವುದೋ ಕನ್ನಡ ಮೂವಿಲಿ ಕೇಳಿದ್ದು, ಗುಣವನ್ನು ಬದಲಾಯಿಸ ಬಹುದು , ಆದರೆ ರೂಪವನ್ನು ?"

ನೀವು ನಿಮ್ಮ ಗುಣ ಮದುವೆ ಆದ್ಮೇಲೆ ಬದ್ಲಾಯಿಸ್ಕೊಳ್ಳಕ್ಕೆ ರೆಡಿ ಇದೀರಾ ಅಂಥ ಒಮ್ಮೆ ನಿಮ್ಮನ್ನೆ ಪ್ರಶ್ನಿಸಿಕೊಳ್ಳಿ, ಆಗ ಗೊತ್ತಾಗತ್ತೆ Smiling

ಮದುವೆ ಆದವರೂ ಎಷ್ಟು ಜನ ಬದಲಾಗಿದ್ದಾರೆ ಎಂಬುದು ಯೋಚನೆ ಮಾಡತಕ್ಕಂತದ್ದು..

ರೂಪಕ್ಕ, ನೀವು ಹೇಳಿ...

ಗಾದೆ ಕೇಳಿಲ್ವ...
"ಹುಟ್ಟು ಗುಣ ಸುಟ್ಟರೂ ಹೋಗಲ್ಲ" ಅಂತ...

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2008 - 11:00am — ahankari

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

ahankari's picture

ಮದುವೆಯಾದ ನಂತರ ಬದಲಾದವರ ಎಷ್ಟೋ ಉದಾಹರಣೆಗಳಿವೆ . ಮನೆಗಳಲ್ಲಿ ವಯಸ್ಸಿಗೆ ಬಂದ ಮಗ ಕೆಟ್ಟ ಚಟಗಳಿಗೆ ಅಂಟಿಕೊಂಡಿದ್ದಾನೆ ಅಂದರೆ ಮೊದಲು ಸಿಗುವ ಸಲಹೆ , "ಮದುವೆ ಮಾಡಿ ಬಿಡಿ ಸರಿಯಾಗ್ತಾನೆ". ನನ್ನ ಪ್ರಕಾರ ಗುಣವನ್ನು ಬದಲಾಯಿಸಲು ಒಂದು ಪ್ರಯತ್ನಾಕ್ಕಾದರೂ ಅವಕಾಶವಿದೆ. ಮತ್ತೆ ನೀವು beauty parlor , plastic surgery afford ಮಾಡೋರಾದ್ರೆ .............Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2008 - 11:05am — srinivasps

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

srinivasps's picture

>> ಮದುವೆಯಾದ ನಂತರ ಬದಲಾದವರ ಎಷ್ಟೋ ಉದಾಹರಣೆಗಳಿವೆ

ಇರಬಹುದು...ಬದಲಾವಣೆ ಆಗದವರ ಸಂಖ್ಯೆ ಎಷ್ಟೋ ಪಟ್ಟು ಜಾಸ್ತಿ...

ನಿಮ್ಮನ್ನೆ ನೀವು ಕೇಳಬೇಕಾದದ್ದು...
ನೀವು ನಿಮ್ಮ ಸಂಗಾತಿಗಾಗಿ ಬದಲಾಗುವಿರಾ?
ಅಥವಾ ಅವಳನ್ನು ಬದಲಾಯಿಸಲು ಪ್ರಯತ್ನಿಸುವಿರಾ...?

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:11pm — mahesha

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

mahesha's picture

ರೂಪ ಮೇಡಂ

ನೋಡಿ, ನಮ್ಮ ಹುಡುಗಿ ಹುಡುಕೋ ಬಗೆ ಇದೆಯಲ್ಲ... ಅದರಲ್ಲೇ ದೊಡ್ಡ ಕೊರತೆ ಇದೆ..

ಗುಣವನ್ನ ಅಳೆಯಲ್ಲು ಒಂದು ಬೇಟಿ, ಎರಡು ನೋಟ ಸಾಕೆ?
ರೂಪವಾದರೆ ಒಂದೇ ನೋಟದಲ್ಲಿ, ಬಱೀ ಪೋಟೋ ನೋಡಿ ಹೇಳಬೋದು..

ನಮಗೆ ಮೊದಲು ಗೆಳೆಯರಾಗಿ, ಡೇಟಿಂಗು ಮಾಡಿ, ಒಬ್ಬರನ್ನೊಬ್ಬರು ತಿಳಿದು ಲವ್ ಮಾಡಿ ಮದುವೆ ಮಾಡಿಕೊಳ್ಳುವ ದೊಡ್ಡ ಪ್ರಕ್ರಿಯೆಗೆ ತಾಳ್ಮೆಯೂ ಇಲ್ಲ, ಅನುವೂ ಇಲ್ಲ.

ಇನ್ನೊಂದು ಸಂಗತಿ ’ಹುಡುಗಿಯನ್ನ ಹುಡುಗನ ಮನೆಯವರೆಲ್ಲ ಒಪ್ಪಬೇಕು’ ಮತ್ತು ’ಹುಡುಗನನ್ನ ಹುಡುಗಿಯ ಮನೆಯವರೆಲ್ಲ ಒಪ್ಪಬೇಕು’ ಇದು ಬೇಱೆ!

ರೂಪವೇ ಬೇಗ ತಿಳಿಯುವುದರಿಂದ, ಅದೇ (ಹೆಚ್ಚಿನ ಮಾಮೂಲಿ ಮಂದಿಗೆ, ಸಂಸ್ಕಾರ ಸಂಸ್ಕೃತಿ ಅಂತ ತಲೆಗೆಡಿಸಿಕೊಳ್ಳದೋರಿಗೆ )ಆಕರ್ಷಣೆಗೆ ಮೂಲವಾದುದರಿಂದ ಅದೇ ಮುಕ್ಯ.

ಹುಡುಗನಿಗೂ ಇದೇ ಅನ್ವಯ! ಹುಡುಗಿ ಹುಡುಗನ ರೊಕ್ಕ ಮತ್ತ ಮಯ್ಮಾಟವನ್ನೇ ನೋಡೋದು. ರೊಕ್ಕಕ್ಕೆ ಮೊದಲು ಒತ್ತು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:26pm — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ನಿಮ್ಮ ಹಾಗೆ ಎಲ್ಲಾ ಇದ್ದರೆ ರೂಪವಿರದ ಹೆಣ್ಣುಮಕ್ಕಳ ಗತಿ ಏನು ಮಹೇಶ್?

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:28pm — uniquesupri

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

uniquesupri's picture

ಕಾಸಿಲ್ಲದ, ಮೈಕಟ್ಟಿಲ್ಲದ, ಕಪ್ಪು ಹುಡುಗರ ಗತಿಯೇನು ಅಂತಾನೂ ಯೋಚಿಸ್ರೀ ಮೇಡಂ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:31pm — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ಹೆಣ್ಣು ಕೆಲವೊಮ್ಮೆ ಅಸಹಾಯಕ ಸ್ಥಿತಿಯಲ್ಲಿ ಇಂತಹವರನ್ನೂ ಮೆಚ್ಚಬಹುದು
ಮತ್ತೆ ಕೆಲವೆಡೆ ನೀವು ಹೇಳಿದ ಯಾವವೂ ಇಲ್ಲದೆ ಕೇವಲ ಗುಣಕ್ಕೆ ಮಾರು ಹೋಗಿರುವವರು ಇದ್ದಾರೆ
ರಾಣಿ ಚಂದ್ರಮತಿ ಅಷ್ಟಾವಕ್ರನನ್ನು ಇಷ್ಟಪಟ್ಟಿದ್ದು ಕೇವಲ ಅವನ ಗುಣಕ್ಕೆ (ಹಾಡುಗಾರಿಕೆಗೆ) ಮಾರು ಹೋಗಿ ಅಲ್ಲ್ಲ್ವೇ?

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:37pm — uniquesupri

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

uniquesupri's picture

ಗಂಡೂ ಸಹ ಅಸಹಾಯಕತ ಸ್ಥಿತಿಯಲ್ಲಿ ಎಂಥ ಹೆಣ್ಣನ್ನಾದರೂ ಒಪ್ಪಿಯಾನು! ಭೀಮ ಹಿಡಿಂಬೆಯನ್ನು ವರಿಸಲಿಲ್ಲವೇ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:38pm — mahesha

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

mahesha's picture

ರೂಪ ಮೇಡಂ

ಪುರಾಣದ ಕತೆಗಳ ಮಾದರಿ ಬೇಡ..

ಸರಿ.. ಬಿಡಿ,

ಹೆಣ್ಣೆಗೆ ಒಂದು ಗಂಡನ್ನು ಬಿಟ್ಟು ಹೋಗಲು ಅಸಹಾಯಕತೆ, ಅದೇ ಒಂದು ಗಂಡು ಬಿಟ್ಟು ಹೋದರೆ ದ್ರೋಹ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:44pm — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ಮತ್ತೆ ಎಳೆ Smiling ಚೇಂಜ್ ಮಾಡ್ತಿದೀರಾ ಮಹೇಶ್

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:45pm — mahesha

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

mahesha's picture

ತಪ್ಪಾಯ್ತು... ಮನ್ನಿಪು..

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 5:17pm — ಸಂಗನಗೌಡ

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

ಸಂಗನಗೌಡ's picture

Quote:
ಹೆಣ್ಣು ಕೆಲವೊಮ್ಮೆ ಅಸಹಾಯಕ ಸ್ಥಿತಿಯಲ್ಲಿ ಇಂತಹವರನ್ನೂ ಮೆಚ್ಚಬಹುದು

ರೂಪ ಅವರೇ, ಹೆಣ್ಣು ಅಸಾಹಯಕಳಾದಾಗ ಅಸ್‍ಟೇ ಅಂತವರನ್ನು ಮೆಚ್ಚಬಹುದು, ಅಂದರೆ, ಅಸಾಹಯಕಳಲ್ಲ ಹೆಣ್ಣು, ಮೈಕಟ್ಟು, ಚೆಲುವು ಮತ್ತು ಸಿರಿವಂತಿಕೆ ಉಳ್ಳವನನ್ನೇ ನೋಡುವಳಲ್ಲವೇ? ಅವರು ಕೂಡ ಗುಣ ಅಂತೆಲ್ಲ ಎಲ್ಲಿ ನೋಡ್‍ತಾರೆ? ಗಂಡೂ ಕೂಡಾ ಹಾಗೆಯೇ,.. ಚೆಲುವು ಇರಬೇಕೆಂದು ಬಯಸುತ್ತಾನೆ, ಅದರಲ್ಲಿ ತಪ್ಪೇನು?

"ಮುಖ ಮನಸ್ಸಿನ ಕನ್ನಡಿ" ಅಂತಾರೆ. ಅಂದರೆ ಸುಂದರ ಮನಸ್ಸಿಗೆ ಸುಂದರ ಮುಖವಿದ್ದೇ ಇರುತ್ತದೆ. ಎಸ್ಟೋ ಸಲ, ಹುಡುಗರಾಗಲಿ, ಹುಡುಗಿಯರಾಗಲಿ, ತಮ್ಮ ಒಂದು ಸಲದ ನಡವಳಿಕೆಯಲ್ಲೇ, ತಮ್ಮ ಗುಣಾವಗುಣಗಳನ್ನು ತೋರಿಸಿ ಬಿಡುತ್ತಾರೆ, ಅದನ್ನು ಕಾಣುವದು ಅವರವರ ಮನಸ್ಸಿನ ಯಾಪಾರಕ್ಕೆ ಬಿಟ್ಟಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 5:28pm — ಸಂಗನಗೌಡ

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

ಸಂಗನಗೌಡ's picture

ಅಸಹಾಯಕಳಲ್ಲದ**

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:34pm — mahesha

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

mahesha's picture

Smiling

ಕಾಸು, ಮಯ್ಕಟ್ಟು, ಜಾತಿ, ಮನೆತನ ಇವು ಯಾವುದರಲ್ಲೂ ಮೇಲಲ್ಲದ ಹುಡುಗ ಪಾಡು ನಾಯಿಪಾಡು.

ಮೊದಲೇ ಹುಡುಗೀರು ಕಡಮೆ ನಮ್ಮ ನಾಡಲ್ಲಿ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 12:27pm — vikashegde

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

vikashegde's picture

ನಮ್ಮ ಸಂಸ್ಕೃತಿಯಲ್ಲಿ ಮದುವೆ ಎಂದರೆ ಬರೀ ಇಬ್ಬರು ವ್ಯಕ್ತಿಗಳ ನಡುವೆ ಆಗುವಂತದ್ದಲ್ಲ, ಎರಡು ಕುಟುಂಬಗಳ ನಡುವೆ ಆಗುವಂತದ್ದು.

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 4:41pm — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ಕಾಕತಾಳೀಯವೆಂಬಂತೆ ಇವತ್ತು ಗೃಹ ಶೋಭಾದಲ್ಲಿ

ಹೆಣ್ಣಿಗೆ ಸೌಂದರ್ಯವೇ ಆತ್ಮವಿಶ್ವಾಸ.. ಅದು ಇದೂ ಅಂತ ಏನೇನೋ ಬರೆದಿದ್ದಾರೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2008 - 5:59pm — thiligola

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

thiligola's picture

ರೂಪಾವರೆ,
ರೂಪ ಗುಣ ಎಲ್ಲ ಸೆಕೆಂಡರಿ, ಎತ್ತಿಕೋತ ನಿಮ್ಮ ಮೈದುನನಿಗೆ ಬುದ್ಧಿ ಹೇಳಿ.
ಅವರು ಜೀವನ ಪೂರ್ತಿ ಜತೆಯಾಗಿ ಕಳೀಬೇಕಾಗಿರೋ ಹೆಣ್ಣನ್ನ ಬೇರೆ ಒಬ್ಬರು ಹುಡುಕಿಕೊಡೋದು ಅಂದರೆ, ಅದಕ್ಕಿಂತ ಅವಮಾನದ ವಿಷಯ ಬೇರೆ ಇದೆಯ?
ತಮ್ಮ ಸಂಗಾತಿ ತಾವು ಹುಡುಕಿಕೊಳ್ಳೋಕೆ ಅವರಿಗೇನು ತೊಂದರೆ ಬಂದಿರೋದು?
ನಮ್ಮ ದೇಶದ ಹುಡುಗರಿಗೆ ಹುಟ್ಟಿದಾಗಿಂದ ಶುರು ಆಗತ್ತೆ ನೋಡಿ ಈ ಪರಾವಲಂಬನೆ - ಮಹಾ ಮೋಸ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 11:02am — roopablrao

ಉ: ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

roopablrao's picture

ತಿಳಿಗೊಳರವರೆ
ನಮ್ಮಲಿ ಇನ್ನೂಕೆಲವರು ದೊಡ್ಡವರು ನೋಡಿದವರನ್ನೇ ಮದುವೆಯಾಗುವೆ ಇರಾದೆ ಹೊಂದಿದ್ದಾರೆ.
ಚಿಕ್ಕಂದಿನ್ನಲ್ಲಿ ಒಂದು ಸ್ಕೂಲು ಸೇರಕ್ಕೂ ದೊಡ್ಡವರ ಜೊತೆ ಬೇಕೆನ್ನುವ ಈ ಹುಡುಗರು ಜೀವನ ಪೂರ್ತಿ ಜೊತೆ ಇರಬೇಕಾದ ಸಂಗಾತಿಗಾಗಿ ದೊಡ್ಡವರ ಸಲಹೆ ಕೇಳುವುದು ತಪ್ಪಲ್ಲ
ಅಷ್ಟಕ್ಕೂ ನಾನು ಬೇರೆ ಏನಲ್ಲ . ನಾನು ಅವನ ಅತ್ತಿಗೆ. ಅತ್ತಿಗೆ ತಾಯಿ ಸಮಾನ ಅಂತ ಗೊತ್ತಿಲ್ಲ್ವಾ ನಿಮಗೆ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
  • ಚರ್ಚೆ-ಸಂಧಾನ
  • ಆಟೋ ಹಿಂದಿನ ಬರಹ
  • ಬಲೇ ಬಲೇ ಹೆಣ್ಣೇ ! ಅದೇನು ನಿನ್ನ ಕಣ್ಣೇ !
  • ಡ್ರಿಂಕ್ ಡ್ರೈವ್ !
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • pallavi.dharwad
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 6:32am
  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
ಇನ್ನಷ್ಟು


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator