ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಕನ್ನಡದಲ್ಲಿ ಎಸ್ಟು ಅಕ್ಕರಗಳಿವೆ? ಅಂದ ಕೂಡಲೇ ಮಂದಿ ೫೨ ಎನ್ನುವರು..
ಆದರೆ ಕನ್ನಡದಲ್ಲಿ ಬರೆಯಲು ಬೇಕಾಗಿರುವ ಒಟ್ಟು ಗುರುತುಗಳು/ಸಂಕೇತಗಳು ಎಸ್ಟು.. ಅಂತ ತುಸು ನೋಡಣ.
ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಂ - ೧೬ + ೧೬ ಗುಣಿತಕ್ಕರದ ಗುರುತುಗಳು ( ತಲೆಕೊಟ್ಟು, ಇಳಿ, ದೀರ್ಗ, ಕೊಂಬು....)
ಕ ...
... ಮ ೨೫ + ೨೫ ಒತ್ತು-ಗುರುತಗಳು ( ಕ್ಕ, ಅಖ್ಖ ... )
ಯ ರ ಲ ವ ಶ ಷ ಸ ಹ ಳ ಱ ೞ - ೧೧ + ೧೧ ಒತ್ತು ಗುರುತುಗಳು
+ ಅರೆ ಕ ವೊತ್ತು
ಒಟ್ಟು
೧೬ + ೧೬ + ೨೫ + ೨೫ + ೧೧ + ೧೧ + ೧= ೧೦೫ ಒಟ್ಟು ನೂರ ಅಯಿದು ಗುರುತುಗಳಂನು ಕಲಿತರೇನೇ ಕನ್ನಡವನ್ನ ಸರಿಯಾಗಿ ಓದಲು ಬರೆಯಲು ಆರುವುದು...
ಈಗ ನಮಗೆ ಇಸ್ಟೊಂದು ಬರೆವಣಿಗೆ ಗುರುತುಗಳು ಬೇಕೇ ಬೇಕಾ?

- Login or register to post comments
- 417 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಈ ಚರ್ಚೆಯಲ್ಲಿ, ಕನ್ನಡಿಗರು ಉಲಿಯುತ್ತಿರುವ ಆದರೆ ಬರವಣಿಗೆಯಲ್ಲಿ ಇನ್ನೂ ಅದಕ್ಕೆ ಗುರುತು ಸಿಗದ ಬಳಕೆಗಳಿಗೆ ಜಾಗ ಇದೆಯೇ ? ಕನ್ನಡದ ಏತ್ವಗಳು ಎಳೆಯಲ್ಲಿ, ಕೆಲವು ಗೆಳೆಯರು ಇದರ ಕುರಿತು ಓವಿ ಚರ್ಚೆಮಾಡಿದ್ದರು.
ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಮಹೇಶ,
ಒಳ್ಳೆಯ ವಿಚಾರದ ಪ್ರಸ್ತಾವನೆ.
ಈ ಬಗ್ಗೆ ಶಂಕರ ಬಟ್ ಎಂಬುವವರು ಪುಸ್ತಕವನ್ನೇ ಬರೆದಿದ್ದಾರೆ. ಮತ್ತು ಈ ವಿಷಯವಾಗಿ ಒಂದು ಸವಿವರ ಬ್ಲಾಗ್ ಬರಹ ಇಲ್ಲಿದೆ.
http://deraje.blogspot.com/2008/05/blog-post_30.html ಸುಧನ್ವಾ ದೇರಾಜೆ ಬರೆದಿರುವುದು. ಓದಿ.
ಅವರು ಈ ವಿಷಯವಾಗಿ ಅಧ್ಯಯನ ಮಾಡಿದ್ದಾರೆ ಅನಿಸಿರುವುದರಿಂದ ನಿಮ್ಮ ಕುತೂಹಲಕ್ಕೆ ಇಂಬಾಗಬಹುದು.
ಅದು ಏನೇ ಆದರೂ ನನಗೆ ನಿಮ್ಮ ಈ ಕನ್ನಡದ ಬರಹಗಳನ್ನು ಯಾವ ರೀತಿಯ ತರಾತುರಿಯಲ್ಲಿ ಇಲ್ಲದಾಗಲೇ ಓದಲಿಕ್ಕಾಗುವುದು. ಏಕೆಂದರೆ ನಿಮ್ಮ ಒಂದೊಂದು ಪದಪ್ರಯೋಗವೂ ನನ್ನನ್ನ ಹೊಸ ಹೊಸ ಯೋಚನೆಗಳಲ್ಲಿ ಮುಳುಗಿಸಿಬಿಡುತ್ತದೆ.
ಉದಾ: ಅಕ್ಕರ..
ಪ್ರೀತಿಯಿಂದ
ಸಿಂಧು
ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಹ್ಹ ಹ್ಹ. ಮಹೇಶರಿಗೇ ಶಂಕರ ಭಟ್ಟರ ಪುಸ್ತಕದ ಬಗ್ಗೆ ಹೇಳುತ್ತಿದ್ದೀರಲ್ಲ ಸಿಂಧಕ್ಕ!
ಅವರು ಅದನ್ನು ಅರೆದು ಕುಡಿದು ದಿನ ದಿನವೂ ಸಂಪದದ ಎಲ್ಲರಿಗೂ ಕುಡಿಸುತ್ತಾ ಇದ್ದಾರೆ
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************
ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಸಿಂದು
ಸುಧನ್ವಾ ದೇರಾಜೆ ಇವರು ನಿಮಗೆ ಗೊತ್ತಿದ್ದರೆ ನನಗೆ ಗೊತ್ತುಮಾಡಿಸಿರಿ.
ಹಾಗೇ ನಿಮಗೂ ಈ ಸಂಗತಿಯಲ್ಲಿ ಹೆಚ್ಚುಹುರುಪಿದ್ದರೆ ನನಗೆ ಒಂದು ಮಿನ್ನೋಲೆ/ಇ ಮೆಯಿಲು ಕಳುಹಿರಿ..
ನಂನಿ!
=====================================
ಮಾಯ್ಸ!
ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಬೇಕಾಗಿಲ್ಲ. ಓಸುಗರ ನಿಂಗೊತ್ತು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಮಹೇಶ,
ನಾನು ಕನ್ನಡದ ಬಗ್ಗೆ ಬರೆದಿರುವ ನಿಮ್ಮ ಹಿಂದಿನ ಬರಹಗಳನ್ನು ಓದಿರಲಿಲ್ಲ ಮತ್ತು ಈ ಬರಹಗಳಲ್ಲಿ ನಿಮ್ಮ ಅನಿಸಿಕೆಯ/ಅಭಿಪ್ರಾಯದ ಆಧಾರ ಅಥವಾ ಆಕರ ಗ್ರಂಥಗಳ ಬಗ್ಗೆ ಬರೆಯದ ಕಾರಣ, ಶಂಕರಬಟ್ಟರ ಬಗ್ಗೆ ಬರೆದೆ. ಅಲ್ಲದೇ ನಿಮಗೇ ತಿಳಿಸಿಕೊಡಬೇಕು ಎಂಬ ರೀತಿಯಲ್ಲಿ ಅಲ್ಲ.
ವಿಕಾಸ ಈ ವಿಷಯ ಹೇಳಿದ್ದಕ್ಕೆ ಥ್ಯಾಂಕ್ಸ್.
ಪ್ರೀತಿಯಿಂದ
ಸಿಂಧು
ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಸಿಂದು
ಅಡ್ಡಿಯಿಲ್ಲ.. ಶಂಕರಬಟ್ಟರ ಬಗ್ಗೆ ಸಾರುವವರು ನನಗೆ ಬಲು ಮೆಚ್ಚುಗೆಯಾಗುವವರು..
ಅದಕ್ಕೆ ನಿಮ್ಮ ಮಾತು ನೆಚ್ಚಿದ್ದೀನಿ ಮೆಚ್ಚುಗೆಯಾಗಿದೆ
ನನ್ನ ಒರೆಬಳಕೆಗಳು ನಿಮಗೆ ಹೊಸ ಆಲೋಚನೆ/ಉಂಕು ನೀಡುವುವು ಎಂದರೆ ಅದು ನನಗೆ ನಲಿವೇ!!
=====================================
ಮಾಯ್ಸ!