ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ?
ಭಾಜಪ ಇಲ್ಲಿ ಗದ್ದುಗೆ ಏರಾಗಿದೆ. ಮುಂಬರೋ ಲೋಕಸಭೆ ಚುನಾವಣೇಲಿ ಮತ್ತೆ ಕಾಂಗ್ರೆಸ್ಸೇ ಗೆದ್ದರೆ? ಮತ್ತೆ ನಮ್ಮ ನಾಡು ನುಡಿಯ ಕೆಲಸಗಳಿಗೆ ಕೇಂದ್ರದ ಒತ್ತಾಸೆ ಸಿಗಲಾರದು.ಮತ್ತೆ "ಮಲತಾಯಿ" ಆರೈಕೆ ಶುರುವಾಗತ್ತೆ ಅನ್ನೋ ಭಯ. ಇದು ಸುಮಾರು ೩೦ ವರ್ಷದಿಂದ ಇರೋ ತೊಂದರೆ.
ತಮಿಳುನಾಡಿನ ತರ ಪ್ರಾದೇಶಿಕ ಪಕ್ಷ ಇರಬೇಕು ( ಒಂದಲ್ಲ ಎರಡು) ..ಪ್ರಾದೇಶಿಕ ಪಕ್ಷವಾದರೆ ಯಾವ ಕಡೆಯಿಂದಾದರೂ ಬೇಳೆ ಬೇಯಿಸಬಹುದು. ಕಡೇ ಪಕ್ಷ ಇಲ್ಲಿರೋ ರಾಷ್ಟ್ರೀಯ ಪಕ್ಷಗಳಲ್ಲಿ ಸೆಡ್ಡು ಹೊಡೆದು ನಿಲ್ಲುವಂತ ಗಟ್ಟಿಯಾದ ಮುಂದಾಳುಗಳು ಬೇಕು.
ದೇವೇಗೌಡರ ತರದಲ್ಲದ ಜನ ಬೇಕು. ವಾಟಾಳ್, ಬಂಗಾರಪ್ಪ ಇವರೆಲ್ಲ ಯಾಕೆ ಮುಂದೆ ಬರಲಿಲ್ಲ ಅಥವಾ ಬೆಳೀಲಿಲ್ಲ? ಈಗ ಕರವೇ ಕೂಡ ಅದೇ "ವೇ"ನಲ್ಲಿ ಹೋಗ್ತಾ ಇದೆ. ಕನ್ನಡಿಗರ ಹಣೆಬರಹ ಇಷ್ಟೇನಾ?

- Login or register to post comments
- 173 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ?
ಮೊದಲು ಯಾವುದಾದರೂ ಒಂದು ಬರಲಿ, ನೋಡಣ..
ಈಗ ಮುಂದಿರುವ ಕನ್ನಡ ಕೂಟ ಅಂದರೆ ಕರವೇ ಅನ್ನಿಸ್ತದೆ.. ಒಮ್ಮೆ ಅದಕ್ಕೆ ಬೆಂಬಲ ಕೊಟ್ಟು ನೋಡಬೋದಲ್ಲ.. ಬಾಜಪಕ್ಕೆ ಕೊಟ್ಟ ಹಾಗೆ!
ಅವರಿಗೆ ಒಮ್ಮೆಯೂ ಬೆಂಬಲ ನೀಡದೇ ಪ್ರಾದೇಶಿಕ ಪಕುಶಬೇಕು ಅಂದರೆ, ಒಬ್ಬೊಬ್ಬ ಕನ್ನಡಿಗ ಒಂದೊಂದು ಪಕುಶ ಕಟ್ಟಿಕೋಬೇಕು..
ಯಾರೋ ಕನ್ನಡ ಅಂತ ಮುಂದೆ ಬಂದಿದ್ದಾರೆ, ತುಸು ಅವರ ಹಿಂದೆ ಒಮ್ಮೆಯಾದರೂ ನಿಂತು ನೋಡಬೇಕು ಅನ್ನೋ ಅಸಟು ತಾಳುಮೆ ಇಲ್ಲ.!
=====================================
ಮಾಯ್ಸ!
ಉ: ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ?
ಈ ಸಲ ಕರವೇದು ಚುನಾವಣೇಲಿ ಸದ್ದೇ ಇಲ್ಲ. ಬರೇ ಗಲಾಟೆ ಮಾಡ್ತಾರೆ ,ವಾಟಾಳ್ ತರ್. ಪಕ್ಷ ಹೇಗೆ ಕಟ್ತಾರೋ?
ಉ: ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ?
ಕರವೇ ಚುನಾವಣೆಯಲ್ಲಿ ಪೋಟಿಯಲ್ಲೇ ಇರಲಿಲ್ಲ....
ಅವರು ಬೆಳಗಾವಿ ಮೇಯರ್ ಆಯ್ಕೆಯಲ್ಲಿ ಕನ್ನಡದ ಪೋಟಿಗಾರರ ಕುರಿತು ದುಡಿಮೆ ಹಾಕಿದ್ದಾರೆ ಅಂತ ಬಲ್ಲೆನು...
=====================================
ಮಾಯ್ಸ!
ಉ: ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ?
ಸಧ್ಯಕ್ಕೆ ಭಾಜಪ ವೇ ಪ್ರಾದೇಶಿಕ ಪಕ್ಷದಂತೆ ಕಾರ್ಯನಿರ್ವಹಿಸಲಿ ಎಂದು ಆಶಿಸೋಣ.
ಉ: ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ?
ಅಯ್ಯೋ..
ಬಾಜಪ ಅಂದರೇ ’ಬಾರತೀಯ ಜನತಾ ಪಾರ್ಟಿ’ ಅವರು ಮೊದಲು ಕರ್ನಾಟಕ ಜನತಾ ಪಾರ್ಟಿ ಅಂತ ಹೆಸರ ಬದಲಾವಣೆ ಮಾಡಿಕೊಳ್ಳಲಿ.. ಅಲ್ಲಿಂದ ಪ್ರಾದೇಶಿಕತನ ಸುರುವಾಗೋದು!!
=====================================
ಮಾಯ್ಸ!