ಒಂದು ಸಾಕೋ, ಎರಡು ಬೇಕೋ?
ನಾನು ತಾಯಿಯಾಗಿ ಹತ್ತಿರ ಎರಡು ವರ್ಷವಾಗುತ್ತ ಬಂದಿತು. ಇದೀಗ ಎಲ್ಲರಿಂದ ಸಣ್ಣಗೆ ಕೊರೆತ ಶುರುವಾಗಿದೆ. ಮಗನಿಗೆ ತಂಗಿ/ತಮ್ಮ ಬೇಡವಾ ಎಂದು ಕೇಳುವುದು. ಈ ಪ್ರಶ್ನೆಗೆ ಉತ್ತರಿಸಲು ಮಾನಸಿಕವಾಗಿ ನಾನಿನ್ನೂ ಸಿದ್ಧಗೊಂಡಿಲ್ಲ. ಮಗ ಇದೀಗ ತಾನೆ ದೊಡ್ಡವನಾಗುತ್ತಿದ್ದು, ನನಗೆ ಸ್ವಲ್ಪ ರಿಲ್ಯಕ್ಸ್ ಎನಿಸುತ್ತಿದೆ.
ಕೆಲಸಕ್ಕೂ ಹೋಗಿ ಮನೆಯನ್ನೂ ನೋಡಿಕೊಳ್ಳುವ ಒಬ್ಬ ತಾಯಿಗೆ, ಎರಡನೆ ಮಗುವನ್ನು ಹೆರುವುದು, ಅದರ ಪಾಲನೆ ಪೋಷಣೆ, ಕಷ್ಟವೆನಿಸುತ್ತದೆ. ನೋಡಿಕೊಳ್ಳಲು ಹಿರಿಯರೊಬ್ಬರು ಇದ್ದರೆ ಆ ಮಾತು ಬೇರೆ. ಎಲ್ಲದಕ್ಕೂ ಕೆಲಸದವರನ್ನು ಅವಲಂಬಿಸಿದ್ದರೆ ಬಹಳ ಕಷ್ಟ. ಅಲ್ಲದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇರುವ ಒಂದು ಮಗುವಿಗೆ ಸೂಕ್ತ ಶಿಕ್ಷಣ ಕೊಡಿಸಿ ಅವರನ್ನು ಒಂದು ದಡ ಮುಟ್ಟಿಸುವುದು ಕಷ್ಟವಾಗಿರುವಾಗ, ಇನ್ನೊಂದು ಮಗು ಇದ್ದರೆ, ನಾವು ಎರಡೂ ಮಕ್ಕಳಿಗೂ ಸರಿಯಾದ ಸಾಮಾಜಿಕ ನ್ಯಾಯ ಒದಗಿಸಬಲ್ಲೆವೆ?
ಕೆಲವರು ಹೇಳುತ್ತಾರೆ, ಒಂದೇ ಮಗುವಿದ್ದರೆ ಅವರು ಸ್ವಾರ್ಥಿಗಳಾಗುತ್ತಾರೆ, ಹಂಚಿಕೊಳ್ಳ್ದುವ ಗುಣ, ಸಹಬಾಳ್ವೆ ಅವರಲ್ಲಿರುವುದಿಲ್ಲ, ದೊಡ್ಡವರಾಗುತ್ತಾ ಅವರಿಗೆ ತಾವು ಒಂಟಿ ಎನಿಸತೊಡಗುತ್ತದೆ, ಮುದ್ದು ಜಾಸ್ತಿಯಾಗಿ ಹಟ ಮಾರಿಯಾಗುತ್ತಾರೆ, ವಿಶೇಷವಾಗಿ ತಾಯಿಯೂ ದುಡಿಯುತ್ತಿರುವಾಗ, ಎಂದು. ಆದರೆ ಮಕ್ಕಳು ನಾವು ಬೆಳೆಸಿದಂತೆ ಇರುತ್ತಾರಲ್ಲವೆ.
ಯಾವುದು ಸರಿ? ಯಾವ ರೀತಿ ನಿರ್ಧಾರ ಕೈಗೊಳುವುದು ? ಮನಸ್ಸು ಗೊಂದಲದ ಗೂಡಾಗಿದೆ.
ನೀವೇನಂತೀರಿ? ನೀವು ಕೂಡ ನಿಮ್ಮ ಪೋಷಕರಿಗೆ ಒಬ್ಬರೆ ಮಗುವಾಗಿದ್ದರೆ ನಿಮ್ಮ ಅನುಭವವೇನು ?
ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.

- Login or register to post comments
- 447 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ







RSS:
ಉ: ಒಂದು ಸಾಕೋ, ಎರಡು ಬೇಕೋ?
ವೀಣಾ ಅವರೆ,
ಒಳ್ಳೆಯ ವಿಷಯ ಚರ್ಚೆಗಿಟ್ಟಿದ್ದೀರಿ. ನಾನು ತಂದೆ-ತಾಯಿಯ ಒಬ್ಬನೇ ಮಗನಂತೂ ಅಲ್ಲ. ಆದರೆ ನನ್ನ ಸಂಬಂಧಿಕರ ಕೆಲವು ಒಬ್ಬಂಟಿ ಮಕ್ಕಳನ್ನು ಗಮನಿಸಿದಾಗ, ಅವು ನೀವಂದಂತೆ ಹೆಚ್ಚು ಹಟಮಾರಿಗಳಾಗಿರುವುದನ್ನು ಗಮನಿಸಿದ್ದೇನೆ. ಸಿಟ್ಟು, ಸಿಕ್ಕಿದ್ದನ್ನು ಎಸೆಯುವುದು, ಕೇಳಿದ ವಸ್ತು ಕೂಡಲೇ ದೊರಕದಿದ್ದರೆ ಅಳು, ರಂಪ..ಇತ್ಯಾದಿ. ಆದರೆ, ತಪ್ಪು ಮಗುವಿನದಲ್ಲ. ಒಂದೇ ಮಗುವೆಂದು ಶಿಕ್ಷಿಸದೆ, ಹೆತ್ತವರು ಅತಿ ಮುದ್ದು ಮಾಡಿದ ಪರಿಣಾಮವಿದು ಎಂದು ನನ್ನ ಭಾವನೆ.
ಕನ್ನಡವೇ ಸತ್ಯ! ಕನ್ನಡವೇ ನಿತ್ಯ!!
ಉ: ಒಂದು ಸಾಕೋ, ಎರಡು ಬೇಕೋ?
ವೀಣಾ ಅವರೇ ನಿಮ್ಮ ಥರದ ಗೊಂದಲ ನನಗೂ ಉಂಟಾಗಿದೆ. ನಮ್ಮ ತಾಯಿಯೂ ಆ ಕೆಲವರು ಹೇಳಿದಂತೆ ಹೇಳುತ್ತಾರೆ. ಆದರೆ ನಮಗೆ ಒಂದೇ ಸಾಕು ಮತ್ತೊಂದೇತಕೆ ಬೇಕು ಎನ್ನುವ ಮನಸೂಂದು ಕಡೆ ಆದರೆ ಮಗು ಹಟಮಾರಿಯಾದರೇನು ಮಾಡುವುದು ಅನ್ನುವ ಭಯ ಇನ್ನೊಂದು ಕಡೆ
ನಮ್ಮ ತಾಯಿ " ನಾವೆಲ್ಲಾ ಆ ಕಾಲಕ್ಕೆ ಎರೆಡು ಮಕ್ಕಳನ್ನ ಹೆತ್ತಿಲ್ಲವೇ? ಸಾಕಿ ದೊಡ್ಡವರನ್ನಾಗಿ ಮಾಡಿಲ್ಲವೇ? " ಎನ್ನುವ ಪ್ರಶ್ನೆ ಮುಂದಿಡುತ್ತಾರೆ. " ಒಂದು ಕಣ್ಣು ಕಣ್ಣಲ್ಲ " ಅಂತಲೂ ಹೇಳುತ್ತಾರೆ.
ಆದರೆ ನೀವು ಹೇಳಿದ ಹಾಗೆ ಕೆಲಸ + ಮಗು ಮೊದಲೇ ಕಷ್ಟ ಇನ್ನು ಕೆಲಸ+ಮನೆ+ಮಗು+ಮಗು ತುಂಬಾ ಕಷ್ಟಾ ಅನ್ನುವ ಭಾವನೆ ನಮಗೆಲ್ಲಾ ಅಂದರೆ ಈಗಿನ ವೃತ್ತಿನಿರತ ತಾಯಂದಿರಿಗೆ ಅನ್ನಿಸುವುದು ಸಹಜ.
ನಾನು ಇತರರನ್ನು ಕೇಳಿದರೆ ಇನ್ನೊಂದು ಮಗು ಇದ್ದರೆ ಒಳ್ಳೆಯದು ಎನ್ನುವ ಮಂದಿಯೇ ಹೆಚ್ಚು
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಒಂದು ಸಾಕೋ, ಎರಡು ಬೇಕೋ?
veena.
ಒಂದು ಜೋಕ್ ಕೇಳಿಲ್ಲವಾ, ನಿಮಗೆ ಒಂದು ಮಗುವಿದ್ದರೆ ನೀವು ತಂದೆ/ತಾಯಿ ಎನಿಸಿಕೊಳ್ಳುತ್ತೀರಿ, ಎರಡಿದ್ದರೆ ಅಂಪೈರ್ ಎಂದು ಕರೆಸಿಕೊಳ್ಳುತ್ತೀರಿ ಎಂದು. ಹಾಗಾಗಬಾರದಲ್ವ. ಹಿಂದೆ ೭-೮ ಮಕ್ಕಳಿರುತ್ತಿದ್ದರು, ಅದೇ ರೀತಿ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಕೊನೆಯ ಮಗುವನ್ನು ಮೊದಲ ಮಗುವೇ ನೋಡಿಕೊಳ್ಳುತ್ತಿತ್ತು. ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ. ಮಕ್ಕಳು ಶಾಲೆಯಿಂದ ಬಂದರೂ ಅಮ್ಮ ಮನೆಗೆ ಬಂದಿರುವುದಿಲ್ಲ, ಮನೆಯಲ್ಲಿ ಒಂಟಿಯಾಗಿ ಇರಲಾಗದೇ, ಅವು ಬೀದಿಯಲ್ಲೇ ಬೆಳೆಯುತ್ತವೆ. ಇದು ಮತ್ತೊಂದು ದುರಂತಕ್ಕೆ ದಾರಿಯಾಗಬಾರದಲ್ವೆ. ಮಗುವಿನ ಮಾನಸಿಕ,ಬೌಧ್ದಿಕ ಸಾಮಾಜಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ದೊಡ್ಡದು. ಅದು ನಮ್ಮ ಜವಾಬ್ದಾರಿ ಕೂಡ.
ಉ: ಒಂದು ಸಾಕೋ, ಎರಡು ಬೇಕೋ?
ಗುಱುಱಾಜ
www.kannadaguru.blogspot.com
ನನ್ನ ಅಭಿಪ್ರಾಯದಲ್ಲಿ ಎರಡು ಮಕ್ಕಳಿರುವುದು ಒಳ್ಳೆಯದು.ನಮ್ಮ ಮನೆಯಲ್ಲಿ ಕೂಡಾ ನಾನು ಮತ್ತು ನಮ್ಮ ತಮ್ಮ ಇಬ್ಬರಿರುವುದು.ತ೦ದೆ ತಾಯಿ ಇಬ್ಬರಿಗೂ ಕೆಲಸ.ಇಬ್ಬರೂ ಕೆಲಸಕ್ಕೆ ಹೋದರೂ ನಮಗೆ ಒ೦ಟಿತನದ ಅರಿವಾಗಲೇ ಇಲ್ಲ.ಕಾರಣ ನಾವಿಬ್ಬರೇ ಮನೆಯಲ್ಲಿ ಏನೇನೋ ಆಟವಾಡುತ್ತಾ ,ಕಿತ್ತಾಡುತ್ತಾ ,ಜಗಳವಾಡುತ್ತಾ ಬಾಲ್ಯ ಕಳೆದೆವು.ಮನೆಯಲ್ಲೇ ತ೦ದೆಯೋ,ತಾಯಿಯೋ ಇರುವ ಹಾಗಿದ್ದರೆ ಒ೦ದೇ ಮಗು ಸಾಕೇನೋ,ಆದರೆ ಇಬ್ಬರೂ ಹೊರಗಡೆ ಕೆಲಸ ಮಾಡುವಾಗ ಒ೦ಟಿ ಮಗು ಅನೇಕ ರೀತಿಯ ಮಾನಸಿಕ ಸಮಸ್ಯೆಗಳನ್ನೆದುರಿಸಬಹುದು.ಒ೦ಟಿ ಮಗು ತೀರಾ ಒರಟು ಎನಿಸಿಕೊಳ್ಳುವುದು,ಹಟಮಾರಿಯಾಗುವುದಕ್ಕೆ ಕಾರನ ಅದರ ಒ೦ಟಿತನವೇ ಎ೦ದು ಎಲ್ಲೋ ಓದಿದ ನೆನಪು
ಉ: ಒಂದು ಸಾಕೋ, ಎರಡು ಬೇಕೋ?
ಇದು ವೈಯಕ್ತಿಕ ತೀರ್ಮಾನಗಳಿಗೆ ಬಿಟ್ಟ ಸಂಗತಿ. ಅವರಿವರ ಸಲಹೆಗಳು ಯಾವ ಕೆಲಸಕ್ಕೂ ಬರುವುದಿಲ್ಲ. ನನ್ನ ಅನಿಸಿಕೆಯ ಪ್ರಕಾರ ನಾವು ಹೀಗೆ ಯೋಚಿಸುವುದು ತೀರಾ ವ್ಯವಹಾರಿಕವಾಗುತ್ತದೆಯೇನೋ. ಒಂದೇ ಒಂದು ಹಣ್ಣು ತೆಗೆದುಕೊಂಡು ಹೋದಾಗ ಅದು ಕೊಳೆತುಬಿಟ್ಟಿದ್ದರೆ? ಎರಡು ತೆಗೆದುಕೊಂಡರೆ ಒಳ್ಳೆಯದು ಎಂದು ಆಲೋಚಿಸುವ ಹಾಗೆ. ಮಕ್ಕಳನ್ನೂ ಒಂದು ವಸ್ತುವಾಗಿ ನೋಡುವ ನಮ್ಮ ದೃಷ್ಟಿಕೋನ ಇಲ್ಲಿ ದೋಷವಾಗುತ್ತದೆ ಎನ್ನಿಸುತ್ತದೆ.
ನಮ್ಮ ಆರ್ಥಿಕ ಸ್ಥಿತಿಗತಿ ಹಾಗೂ ಭಾರತದ ಜನಸಂಖ್ಯಾ ಸ್ಫೋಟವನ್ನು ಗಮನದಲ್ಲಿರಿಸಿಕೊಂಡು ನಮ್ಮ ಯೋಚನೆಯನ್ನು ಮುಂದುವರೆಸುವುದಾದರೆ ಮನೆಗೊಂದು ಮಗು ಸಾಕು. ಆದರೆ ಅದು ಇಂಥದ್ದೇ ಲಿಂಗದ್ದಾಗಿರಬೇಕು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ಮಕ್ಕಳು ಹೆತ್ತವರ ಇನ್ ವೆಸ್ಟ್‌ಮೆಂಟ್ ಆಗಬಾರದು.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಒಂದು ಸಾಕೋ, ಎರಡು ಬೇಕೋ?
ಇಲ್ಲಿ ಬೇರೆಯವರು ಹೇಳಿದಂತೆ ಇದೊಂದು ವೈಯಕ್ತಿಕ ನ್ರಿರ್ಧಾರ. ಅವರಿವರ ಮಾತು ಕೇಳಬೇಡಿ. ಹಾಸಿಗೆಯಿದ್ದಷ್ಟು ಕಾಲುಚಾಚು ಎನ್ನುವಂತೆ, ನಿಮಗೆ ಮತ್ತು ನಿಮ್ಮ ಯಜಮಾನರಿಗೆ ಇಬ್ಬರು ಮಕ್ಕಳನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿ ಸರಿ ಅನ್ನಿಸಿದರೆ ಮುಂದುವರೆಯಿರಿ. ಮತ್ತು ಒಂಟಿ ಮಗು ಸ್ವಾರ್ಥಿಯಾಗುತ್ತದೆ ಅನ್ನುವುದು ಸುಳ್ಳು. ಹಾಗೆ ನೋಡಿದರೆ ಪ್ರತಿಯೊಬ್ಬರೂ ಹುಟ್ಟಾ ಸ್ವಾರ್ಥಿಗಳೆ. ಆಮೇಲೆ ಬುದ್ಧಿ ಬೆಳೆಯುತ್ತಾ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುತ್ತಾ, ರೂಢಿಸಿಕೊಳ್ಳುತ್ತಾ ಹೋಗುತ್ತೇವೆ. ಒಂದೋ, ಎರಡೋ, ಐವತ್ತೋ, ಆದರೆ ಪ್ರತಿಯೊಬ್ಬರಿಗೂ ಒಳ್ಳೆಯ ಮೌಲ್ಯಗಳ ಅಡಿಪಾಯ ಹಾಕಿಕೊಟ್ಟು, ಅವರು ಸಮಾಜದ ಉತ್ತಮ ಪ್ರಜೆಯಾದರೆ ಸಾಕು, ನೀವು ಧನ್ಯ, ನಿಮ್ಮ ಕರ್ತವ್ಯ ಮುಗಿದಂತೆ!
ಉ: ಒಂದು ಸಾಕೋ, ಎರಡು ಬೇಕೋ?
ಒಂದೋ, ಎರಡೋ, ಐವತ್ತೋ - ಆಂ!!!!! :ಬಾಯಿ ತಂತಾನೆ ತೆರೆದು ಆಶ್ಚರ್ಯ ಸೂಚಿಸಿತು:
ಉ: ಒಂದು ಸಾಕೋ, ಎರಡು ಬೇಕೋ?
"ಬಾಯಿ" ಮಾತಿಗೇನೆ ನಾನೂ ಹೇಳಿದ್ದು
ಉ: ಒಂದು ಸಾಕೋ, ಎರಡು ಬೇಕೋ?
ನನಗೆ ಒಬ್ಬನೇ ಮಗ. ಹಟಮಾರಿಯಾಗಿಲ್ಲ. ಒಬ್ಬನೇ ಇದ್ದು ಒಂಥರಾ ಸ್ವತಂತ್ರ ಮನೋಭಾವ ಬೆಳೆದಂತೆ ಕಾಣುತ್ತದೆ. ಮನೆಯಲ್ಲಿ ಶಾಲೆಯ ಹೋಮ್ ವರ್ಕ್ ಮಾಡುವಾಗ ನಮ್ಮ ಸಹಾಯ ಕೇಳುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಮ್ಮಿ. ಇದರರ್ಥ ಕುಂದುಕೊರತೆ ಇಲ್ಲ ಎಂದಲ್ಲ . ಬಾಕಿ ಮಕ್ಕಳಲ್ಲಿ ವಯೋಸಹಜವಾಗಿ ಕಂಡುಬರುವ ಗುಣಗಳು ಅವನಲ್ಲಿಯೂ ಇವೆ.
ಇನ್ನು ನನ್ನ ತಮ್ಮನಿಗೆ ಒಬ್ಬಳೇ ಮಗಳು ಅವಳೂ ಅಷ್ಟೆ. ಭಾರೀ ಹಟಮಾರಿತನವೇನೂ ಇಲ್ಲ.
ನನ್ನ ತಂಗಿಗೂ ಒಬ್ಬನೇ ಮಗ. ಬಹಳ ಒಳ್ಳೆಯ ಹುಡುಗನಾಗಿ ಬೆಳೆದಿದ್ದಾನೆ.
ಒಟ್ಟಿನಲ್ಲಿ ಹಟಮಾರಿತನ ಬರುವ ಸಾಧ್ಯತೆ ಅತಿ ಮುದ್ದು ಮಾಡಿದರೆ ಬರಬಹುದು. ಇಲ್ಲದಿದ್ದರೆ ಮಗು ಎಲ್ಲ ಮಕ್ಕಳಂತೆ ಬೆಳೆಯುತ್ತದೆ.
ಸ್ವಾರ್ಥ ಹೆಚ್ಚಾಗಲಿಕ್ಕೆ ಒಂಟಿ ಮಗುವೇ ಆಗಬೇಕೆಂದಿಲ್ಲ. ಅಣ್ಣ /ತಮ್ಮ ಇರುವ ಮಕ್ಕಳು ಸಹಾ ಇತರರ ಮೇಲೆ ದಾದಾಗಿರಿ ಮಾಡುವುದನ್ನು ನೋಡಿದ್ದೇನೆ.
ಇನ್ನು ಹಂಚಿಕೊಳ್ಳುವ ಪ್ರವೃತ್ತಿ ಒಂಟಿ ಮಕ್ಕಳಲ್ಲಿ ಸ್ವಲ್ಪ ಕಡಿಮೆ ಇರುವ ಸಾಧ್ಯತೆ ಇದೆ. ಆದರೆ ಅದನ್ನೂ ಲಕ್ಷ್ಯ ಕೊಟ್ಟು ಸುಧಾರಿಸಲಿಕ್ಕೆ ಸಾಧ್ಯ.