ಶಬ್ದಗಳ ಹೆಣಿಕೆ
ಕೆಲವು ಆಂಗ್ಲ ಪದಗಳಿಗೆ ಕನ್ನಡದ ಪದಗಳನ್ನು ಈ ರೀತಿ ಹೆಣೆದಿದ್ದೇನೆ. ನಿಮ್ಮ ಸಲಹೆ/ಆಕ್ಷೇಪಕ್ಕೆ ಆಹ್ವಾನ.
ant eater=ಇಱುತಿನಿ (ಈಗಾಗಲೇ ಉಪಯೋಗದಲ್ಲಿದೆ.)
rodent=ಕುಱುಕ (ಇಲಿ, ಮೊಲ, ಅಳಿಲು ಮುಂತಾದ ಯಾವಾಗಲೂ ಕೊಱೆಯುವ ಪ್ರಾಣಿಗಳು)
Electricity=ಮಿಂಚುರಿ
Falsely used "Dravidian"=ತೆನ್ನುಡಿ (ಈಗಾಗಲೆ ಚರ್ಚಿತವಾಗಿದೆ).

- Login or register to post comments
- 204 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಶಬ್ದಗಳ ಹೆಣಿಕೆ
ಮಿಂಚುರಿ ವಸಿ ಬಿಡಿಸಿ ಹೇಳಿ ಸಾರ್,
ನಾವು 'ಮಿನ್ಕೆ' ಬಳಸ್ತಾ ಇದ್ದೀವಿ. (ಮಾದರಿ: ಕಾಣ್ಕೆ, ಮಾೞ್ಕೆ)
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಶಬ್ದಗಳ ಹೆಣಿಕೆ
ಮಿಂಚು=ವಿದ್ಯುತ್ ಉರಿ=ಶಕ್ತಿ. ಸಾಮಾನ್ಯವಾಗಿ ಏನನ್ನಾದರೂ ಉರಿಸಿಯೇ ಹಿಂದೆ ಶಕ್ತಿ ಪಡೆಯುತ್ತಿದ್ದರು. ಸಂಸ್ಕೃತದ ಇಂಧನ ಸಮಿಧೆ(ಸೌದೆ)ಗಳ ಮೂಲ ಧಾತುರೂಪದ ಅರ್ಥ ಉರಿಸು ಎಂದೇ (ಇಂಧ್=ಉರಿಸು). ಆದ್ದರಿಂದ ಮಿಂಚುರಿ=ವಿದ್ದುಚ್ಛಕ್ತಿ.
ಉ: ಶಬ್ದಗಳ ಹೆಣಿಕೆ
ಕನ್ನಡದಲ್ಲಿ ಶಕುತಿಗೆ ಆರ್ಪು ಅನ್ನೋ ಒರೆ ಅಯಿತೆ.
ಮಿಂಚಾರ್ಪು, ಮಿನ್ನಾರ್ಪು ಇವೆರಡು ಕೂಡು ಸರಿ.
ಮಿನ್ನೊಲೆ = Electric stove
ಉರುವಲು = ಇಂದನ.. ಆದರೆ ಅದು ಶಕುತಿ ಅಂತ ಬರಲ್ಲ
ಬಲ ಅನ್ನೋದು ಕನ್ನಡದ್ದೇ..
ಮಿಂಬಲ ಕೂಡ ಬೞಸತಕ್ಕದ್ದು!
=====================================
ಮಾಯ್ಸ!
ಉ: ಶಬ್ದಗಳ ಹೆಣಿಕೆ
ಉರಿ=ಶಕ್ತಿ ಆಗಬಹುದಲ್ಲ. ಉರುವಲು=ಶಕ್ತಿಮೂಲ (ಶಕ್ತಿ ಅಥವಾ ಉರಿ ಪಡೆಯುವ ವಸ್ತು) ಹಾಗಾಗಿ ಉರಿ=ಶಕ್ತಿಗೆ ಪರ್ಯಾಯವಾಗಿ ಬೞಸಿದ್ದೇನೆ.
ಉ: ಶಬ್ದಗಳ ಹೆಣಿಕೆ
ಉರಿ=ಶಕ್ತಿ ಆಗಬಹುದಲ್ಲ. ಉರುವಲು=ಶಕ್ತಿಮೂಲ (ಶಕ್ತಿ ಅಥವಾ ಉರಿ ಪಡೆಯುವ ವಸ್ತು) ಹಾಗಾಗಿ ಉರಿ=ಶಕ್ತಿಗೆ ಪರ್ಯಾಯವಾಗಿ ಬೞಸಿದ್ದೇನೆ.
ಉ: ಶಬ್ದಗಳ ಹೆಣಿಕೆ
ಉರಿ=ಶಕ್ತಿ ಆಗಬಹುದಲ್ಲ. ಉರುವಲು=ಶಕ್ತಿಮೂಲ (ಶಕ್ತಿ ಅಥವಾ ಉರಿ ಪಡೆಯುವ ವಸ್ತು) ಹಾಗಾಗಿ ಉರಿ=ಶಕ್ತಿಗೆ ಪರ್ಯಾಯವಾಗಿ ಬೞಸಿದ್ದೇನೆ.
ಉ: ಶಬ್ದಗಳ ಹೆಣಿಕೆ
ಉರಿ=ಶಕ್ತಿ ಆಗಬಹುದಲ್ಲ. ಉರುವಲು=ಶಕ್ತಿಮೂಲ (ಶಕ್ತಿ ಅಥವಾ ಉರಿ ಪಡೆಯುವ ವಸ್ತು) ಹಾಗಾಗಿ ಉರಿ=ಶಕ್ತಿಗೆ ಪರ್ಯಾಯವಾಗಿ ಬೞಸಿದ್ದೇನೆ.
ಉ: ಶಬ್ದಗಳ ಹೆಣಿಕೆ
ಉರಿ=ಶಕ್ತಿ ಆಗಬಹುದಲ್ಲ. ಉರುವಲು=ಶಕ್ತಿಮೂಲ (ಶಕ್ತಿ ಅಥವಾ ಉರಿ ಪಡೆಯುವ ವಸ್ತು) ಹಾಗಾಗಿ ಉರಿ=ಶಕ್ತಿಗೆ ಪರ್ಯಾಯವಾಗಿ ಬೞಸಿದ್ದೇನೆ.
ಉ: ಶಬ್ದಗಳ ಹೆಣಿಕೆ
ಉರುವಲು ಅಂದರೆ ಶಕುತಿಮೂಲ ಅಂತ ಅಲ್ಲ
ಉರುವಲು = ಉರಿಯುವಂತಹದ್ದು
=====================================
ಮಾಯ್ಸ!
ಉ: ಶಬ್ದಗಳ ಹೆಣಿಕೆ
ಈ ಪೆಟ್ರೋಲ್, ಸೀಮೆಯೆಣ್ಣೆ, LPG ಅನಿಲ ಇವೆಲ್ಲ ಉರಿದೇ ಶಕ್ತಿ ಕೊಡುತ್ತವೆ ಇದನ್ನೆಲ್ಲ ನಾವು ಇಂಧನ ಅಥವಾ ಶಕ್ತಿಮೂಲ ಎಂದು ಪರಿಗಣಿಸಿಲ್ಲವೆ? ಹಾಗೆಯೆ ಸೌದೆ(ಕಟ್ಟಿಗೆ) ಕೂಡ ಇಂಧನವೇ ಅಥವಾ ಶಕ್ತಿಮೂಲವೆ ಉರುವಲು=ಉರಿಗೆ ಮೂಲ -> ಉರಿ=ಶಕ್ತಿಗೆ ಪರ್ಯಾಯ ವಸ್ತು.
ಉ: ಶಬ್ದಗಳ ಹೆಣಿಕೆ
ಮಿಂಚೊಲೆ ಆಗಬಹುದೇನೋ? ಆರ್ಪು ಶಬ್ದದ ಮೂಲ ಸಂಪೂರ್ಣವಾಗಿ ಶಕ್ತಿ ಎಂದಾಗುವುದಿಲ್ಲ. ಅಱ್=ಸಮರ್ಥನಾಗು. ನಾನು ಬರೆಯಲಾಱೆನು=ನಾನು ಬರೆಯಲಿಕ್ಕೆ ಸಮರ್ಥನಿಲ್ಲ. ಸಮರ್ಥತೆ ಅಥವಾ ಸಾಮರ್ಥ್ಯ ಎಂಬರ್ಥ ಬರುತ್ತದೆ. ಶಕ್ತಿ ಅಥವಾ ಬಲ ಎಂಬರ್ಥ ಗೂಢವಾಗಿದೆ.
ಉ: ಶಬ್ದಗಳ ಹೆಣಿಕೆ
ಇಱುತಿನಿ, ಕುಱುಕ, ತೆನ್ನುಡಿ ಇವೆಲ್ಲ ಚಂದವಾಗಿವೆ...
ಬಾಡುತಿನಿ, ಗಿಡತಿನಿ, ಅನಿತಿನಿ = herbivorous, carnivorous and omnivorous
ಉಸಿರೆ = ಪ್ರಾಣಿ
ಹಾಲುಣಿ = mammal; one which feeds milk to there young ones.
=====================================
ಮಾಯ್ಸ!
ಉ: ಶಬ್ದಗಳ ಹೆಣಿಕೆ
ಕೆ, ಇಕೆ, ಗೆ, ಇಗೆ ಇತ್ಯಾದಿ ಪ್ರತ್ಯಯ ಹಚ್ಚಿ ಧಾತುವನ್ನು ಅಥವಾ ವಿಶೇಷಣವನ್ನು ಭಾವನಾಮ ಮಾಡಬಹುದು. ಆದರೆ ನಾಮಪದಕ್ಕೆ ಹಚ್ಚುವಂತಿಲ್ಲ. ಮಿನ್ಕೆ ಈ ಪದ ನನ್ನ ಪ್ರಕಾರ ತಪ್ಪು. ಏಕೆಂದರೆ ಮಿನ್ ಶಬ್ದವಿಲ್ಲ. ಮಿಂಚು ಎಂದರೆ ವಿದ್ಯುತ್ ಅಥವಾ 'lightning'. ಆದರೆ ಎರಡು ನಾಮಪದಗಳನ್ನು ಸೇರಿಸಿ ನಾಮಪದ ಮಾಡಬಹುದು. ಮಿಂಚು+ಉರಿ=ಮಿಂಚುರಿ ಮಾಡಬಹುದು. ಇದು ನನ್ನ ಅಭಿಪ್ರಾಯ.
ಉ: ಶಬ್ದಗಳ ಹೆಣಿಕೆ
ಎಲ್ಲತಿನಿ=omnivorous (ಎಲ್ಲಮ್ಮ=ಎಲ್ಲರಿಗೂ ಅಮ್ಮನಿದ್ದಂತೆ.)
ಸಸಿತಿನಿ=ಸಸ್ಯಾಹಾರಿ
ಬಾಡುತಿನಿ=ಮಾಂಸಾಹಾರಿ
ಕೊೞೆತಿನಿ=scavenger (ಕೊೞತದ್ದನ್ನು ತಿನ್ನುವ ಪ್ರಾಣಿ)
ಉ: ಶಬ್ದಗಳ ಹೆಣಿಕೆ
ತುಸು ಹಿಂಗೆ
ಮಿಂಬೆಣ್ಣೆ

ಮಿಂಗಣ್ಣೆ
ಮಿಂನೋಟ
ಮಿಂಮಿಟುಕಿ
ಮಿಂಬಳ್ಳಿ
ಮಿಂಬೇಲಿ
ಮಿಂಮಯ್
=====================================
ಮಾಯ್ಸ!