ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ನಮ್ಮನೆ ಮಗುವಿಗೆ ತಿನ್ನಲು ಆಸ್ಟ್ರೇಲಿಯಾದ ಆಹಾರವೇ ಬೇಕೇ?!

June 6, 2008 - 5:32pm — arunhegde

ನಿನ್ನೆ ರೇಡಿಯೋದಲ್ಲಿ ಬಂದ ಒಂದು ಜಾಹೀರಾತು ಕೇಳಿ ಕೊಂಚ ಆಘಾತವಾಯಿತು...

ಇಬ್ಬರು ಹೆಂಗಸರು ತಮ್ಮ ಮಕ್ಕಳು ಶಾಲೆಗೆ ತೆಗೆದುಕೊಂಡು ಹೋಗೋ ಟಿಫಿನ್ ಬಗ್ಗೆ ಹೀಗೆ ಮಾತಾಡ್ಕೊತಾರೆ...

ಈಕೆ- "ನನ್ ಮಗ ಒಂದು ವಾರದಿಂದ ನಾನು ಮಾಡಿದ ಊಟ ಮಾಡ್ತಾನೇ ಇಲ್ಲ, ನಿನ್ ಮಗ ರಾಹುಲ್ ತರೋ ಊಟ ಅಂದ್ರೆ ಅವನಿಗೆ ತುಂಬಾ ಇಷ್ಟ. ಅದೇನು ಮಾಡಿ ಕೊಡ್ತೀಯ ರಾಹುಲ್‍ಗೆ ದಿನಾಲೂ"..

ಆ ಕಡೆಯಿಂದ ಅದಕ್ಕೆ ಆಕೆ- "ರಾಹುಲ್ ದಿನಾ ಆಸ್ಟ್ರೇಲಿಯನ್ ಫುಡ್ ತಿಂತಾನೆ..!"

ಈಕೆ - "ಆಸ್ಟ್ರೇಲಿಯನ್ ಫುಡ್ ಆ? ! ಅದು ಹೇಗೆ ? "

ಆಕೆ - "ಹೂಂ.. ಇದು 'ಉತ್ಸವ್ ಆಸ್ಟ್ರೇಲಿಯಾ' ಎಂಬ ಆಸ್ಟ್ರೇಲಿಯಾ ಸರ್ಕಾರದ ಹೊಸ ಕಾರ್ಯಕ್ರಮ.. ಯಾವುದೇ ಸ್ಫರ್ ಸೂಪರ್ ಮಾರ್ಕೆಟ್‍ನಲ್ಲಿ (SPAR) ಆಸ್ಟ್ರೇಲಿಯಾದ 24 ಬಗೆಯ ಆಹಾರಗಳು ಸಿಗುತ್ತವೆ... ಅದನ್ನೇ ರಾಹುಲ್ ದಿನಾ ತಿನ್ನೋದು.. ಆಸ್ಟ್ರೇಲಿಯಾ ದೇಶದ ಆಹಾರ ವಿಶ್ವದಲ್ಲೇ ಅತ್ಯಂತ ಶುಚಿ ಮತ್ತು ಉತ್ಕೃಷ್ಟ, ಆಸ್ಟ್ರೇಲಿಯಾ ದೇಶದ ಕ್ರಿಕೆಟ್ ಆಟಗಾರರನ್ನು ನೋಡಿದ್ರೆ ಗೊತ್ತಾಗೋದಿಲ್ವಾ!?"

'ಉತ್ಸವ್ ಆಸ್ಟ್ರೇಲಿಯಾ' ಹೆಸರಿನಲ್ಲಿ ಆಸ್ಟ್ರೇಲಿಯಾ ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಫಲವೇ ಇದು.. ಹಾಗಾದ್ರೆ ನಮ್ಮ ದೇಶದಲ್ಲಿ ಮಕ್ಕಳಿಗೆ ಕೊಡಲು ಯೋಗ್ಯವಾದ ಶುಚಿಯಾದ ಉತ್ತಮ ಆಹಾರವೂ ಇಲ್ಲವೇ? ದೋಸೆ, ಇಡ್ಲಿ, ಮುದ್ದೆ ತಿಂದ ಮಕ್ಕಳೆಲ್ಲ ಬದುಕೋದೇ ಇಲ್ವಾ? !

ಜಾಗತೀಕರಣ ಎಷ್ಟರ ಮಟ್ಟಿಗೆ ನಮ್ಮ ದೇಶದ ಮೇಲೆ ಕರಾಳ ಛಾಯೆಯನ್ನು ಬೀರುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ವಿದೇಶೀ ಉಡುಪುಗಳ ವಿಜೃಂಭಣೆಯ ಮುಂದೆ ದೇಶೀಯ ಉಡುಪುಗಳನ್ನು ಕೇಳುವವರೇ ಇಲ್ಲ.. ಎಳನೀರು, ಮಜ್ಜಿಗೆ ಮತ್ತಿತರ ದೇಶೀಯ ಪಾನೀಯಗಳನ್ನು ಕೋಲಾ ಆಕ್ರಮಿಸಿದೆ.. ಹೋಗಲಿ ಪ್ರಕೃತಿ ದತ್ತವಾದ ನೀರಾದರೂ ಪರಕೀಯರ ಹಂಗಿಲ್ಲದೇ ಕುಡಿಯುತ್ತಿದ್ದೇವೆಯೇ? ಊಹೂಂ... ಅದನ್ನೂ ಸಹ ವಿದೇಶೀ ಕಂಪನಿಗಳಿಂದ ಖರೀದಿಸಿ ಕುಡಿಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.. ಬಾರ್ಬೀ ಬೊಂಬೆಗಳ ಎದುರು ಚೆನ್ನ ಪಟ್ಟಣದ ಗೊಂಬೆಗಳು ಕಾಲು ಮುರಿದುಕೊಂಡು ಬಿದ್ದಿವೆ.. ಸೋಪು, ಪೇಸ್ಟ್, ಅಲಂಕಾರಿಕ ಸಾಧನಗಳೆಲ್ಲ ಪರಕೀಯರ ತೆಕ್ಕೆಗೆ ಬಿದ್ದು ಯಾವುದೋ ಕಾಲವಾಯ್ತು.. ಹೀಗಾದರೆ ನಮ್ಮ ದೇಶದ ಉತ್ಪಾದಕರು, ರೈತರು ಎಲ್ಲಿಗೆ ಹೋಗಬೇಕು? ಮಕ್ಕಳು ತಿನ್ನುವ ಆಹಾರವೂ ಆಸ್ಟ್ರೇಲಿಯಾದಿಂದ ಆಮದಾಗಬೇಕೇ? ಭವಿಷ್ಯದಲ್ಲಿ ಇವೆಲ್ಲಾ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೋ ಎಣಿಸಿಕೊಂಡರೆ ಭಯವಾಗುತ್ತದೆ..

ಏನಂತೀರಿ?

‹ ಮಾಧ್ಯಮದ ಮಿತ್ರರಿಗೊಂದು ಬಹಿರಂಗ ಪತ್ರ ಕುಸೇಲನ್ ಬಿಡುಗಡೆಗೆ ಕರವೇಯ ವಿರೋಧ. ›
  • ಸುದ್ದಿ, ಸಮಾಚಾರ
~.~
  • Login or register to post comments
  • 182 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 7, 2008 - 1:58am — shaamala

ಉ: ನಮ್ಮನೆ ಮಗುವಿಗೆ ತಿನ್ನಲು ಆಸ್ಟ್ರೇಲಿಯಾದ ಆಹಾರವೇ ಬೇಕೇ?!

shaamala's picture

ಜಾಗತೀಕರಣ ಎಲ್ಲೆಲ್ಲೂ ಇದೆ. ಹಾಗೆ ಜಾಗತಿಕರಣದಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ನಮಗೆ ಒಳ್ಳೆಯದನ್ನು ಮಾತ್ರ ಸ್ವೀಕರಿಸುವ ವಿವೇಚನೆ ಇರಬೇಕು ಅಷ್ಟೇ. ನಾವಿರುವುದು ಅಮೆರಿಕೆಯಲ್ಲಾದರೂ ಬಾರ್ಬೀಯ ನೆರಳೂ ನಮ್ಮ ಮಕ್ಕಳ ಮೇಲೆ ಬೀಳದಂತೆ ಎಚ್ಚರ ವಹಿಸಿದ್ದೇವೆ. ಯಾರಾದರೂ ಬಾರ್ಬಿಗೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರಯಿತ್ತರೆ ವಿನಯವಾಗಿ ಆದರೆ ಖಚಿತವಾಗಿ ನಿರಾಕರಿಸುತ್ತೇವೆ. ಬಾರ್ಬಿಯೇ ಏಕೆ, ಸಾಧ್ಯವಾದಷ್ಟೂ ಯಾವುದೇ branded ವಸ್ತುಗಳನ್ನು ಮಕ್ಕಳಿಗಾಗಲೀ, ನಮಗಾಗಲೀ ಕೊಳ್ಳುವುದಿಲ್ಲ. ಇನ್ನು ಊಟದ ವಿಷಯಕ್ಕೆ ಬಂದರೆ ನಮ್ಮ ಮಕ್ಕಳು ಭಾರೀಯ ಪದ್ಧತಿಯ ಊಟವನ್ನೇ ಶಾಲೆಯಲ್ಲೂ ನಿಸ್ಸಂಕೋಚದಿಂದ ತಿನ್ನುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 11:34am — gururajkodkani

ಉ: ನಮ್ಮನೆ ಮಗುವಿಗೆ ತಿನ್ನಲು ಆಸ್ಟ್ರೇಲಿಯಾದ ಆಹಾರವೇ ಬೇಕೇ?!

gururajkodkani's picture

ಗುಱುಱಾಜ
www.kannadaguru.blogspot.com

ಶಾಮಲಾ ಅವರ ಮಾತು ನಿಜ.ಆದರೆ ಅನೇಕ ಜನರಿಗೆ ಒ೦ದು ವಿಚಿತ್ರವಾದ prestige ಇರುತ್ತೆ.ಅದೇನೆ೦ದರೆ ವಿದೇಶಿ ಅಹಾರಗಳನ್ನು ತಿ೦ದರೆ,ವಿದೇಶಿ ಉಡುಗೆಗಳನ್ನು ತೊಟ್ಟರೆ ತಾವು ಇತರಿಗಿ೦ತ ಭಿನ್ನವಾಗಿರುತ್ತೇವೆ೦ಬ prestige. ಪಿಜ್ಜಾ,ಬರ್ಗರ್ ಗಳನ್ನು ಅತ್ಯ೦ತ ರುಚಿ ಎ೦ದುಕೊ೦ಡು ತಿನ್ನುವವರು ,KFC chicken ರುಚಿಯ ಮು೦ದೆ ಭಾರತೀಯ ಕೋಳಿಮಾ೦ಸದ ರುಚಿ ಏನೂ ಅಲ್ಲ ಎನ್ನುವವರು ಈ ವರ್ಗಕ್ಕೆ ಸೇರಿದವರು. ಆಸ್ಟ್ರೇಲಿಯಾದ ಆಹಾರ ಭಾರತಕ್ಕೆ ಬ೦ದರೆ ಈ ತರಹದ ಜನ ತಮ್ಮ ಮಕ್ಕಳಿಗೆ ಅದನ್ನೇ ತಿನ್ನಿಸಿ,ತಾವೂ ಅದನ್ನೇ ತಿ೦ದು ಭಾರತೀಯ ಆಹಾರವನ್ನು ಕಡೆಗಣಿಸಿಬಿಡುತ್ತಾರೆ.ನಿಜಕ್ಕೂ ಭಾರತೀಯ ಆಹಾರ ಪದ್ದತಿಯ ಮೇಲೆ ಇದು ಪರಿಣಾಮ ಬೀರಲಿದೆ ಎ೦ದು ನನ್ನ ಅನಿಸಿಕೆ.

ಅ೦ದಹಾಗೆ ಅರುಣ ತಮ್ಮದು ಯಾವ ಊರು? ನಾನೂ ಕೂಡಾ ಉತ್ತರಕನ್ನಡದ ಯಲ್ಲಾಪುರದವನು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮನೆ ಮಗುವಿಗೆ ತಿನ್ನಲು ಆಸ್ಟ್ರೇಲಿಯಾದ ಆಹಾರವೇ ಬೇಕೇ?!
  • ಚಿಂತನ
  • ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
  • ಹರವಬೇಡ ಕೂದಲು
  • MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ .....
Syndicate content

ಲೇಖಕರು

arunhegde's picture

ಪೂರ್ಣ ಹೆಸರು
ಅರುಣ್ ಹೆಗಡೆ

ಪರಿಚಯ

ನಾನು ಅರುಣ್ ಕುಮಾರ್ ಡಿ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಮೂಲತಃ ಉತ್ತರ ಕನ್ನಡ ಜಿಲ್ಲೆಗೆ ಸೇರಿದವನು. ಕನ್ನಡದ ಬಗ್ಗೆ ಗೌರವ ಅಭಿಮಾನವಿದ್ದು ಕನ್ನಡ ಅಂತರ್ಜಾಲ ತಾಣಗಳಿಗೆ ಭೇಟಿ ಕೊಡುವುದು, ಸಾಧ್ಯವಾದರೆ ನಾನೂ ಒಂದಿಷ್ಟು ಬರೆಯುವುದು ನನ್ನ ಹವ್ಯಾಸಗಳಲ್ಲೊಂದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
ಇನ್ನಷ್ಟು


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator