ಇಂಗಲೀಶಿಗೆ ತಂನಿ.
ನಾನು ಮನಗೆ ಹೋಗಿ, ಊಟ ಮಾಡಿ, ಒಂದು ರವುಂಡು ನಿದ್ದೆ ಹೊಡೆದು, ಆಮೇಲೆ ಸಂಜೆ ಹೊತ್ತಿಗೆ ಆಟಕ್ಕೆ ಬರ್‍ತೀನಿ. ನೀನು ಈಗ ದಾರೀಲಿ ಹೋಗುತಾ ಚಂಡುಕೊಂಡುಕೊಂಡು, ಶಿವಂಗೂ ಹೇಳಿಬಿಟ್ಟು ಮನಗೆ ಹೋಗು.

- Login or register to post comments
- 469 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನಾನು ಮನಗೆ ಹೋಗಿ, ಊಟ ಮಾಡಿ, ಒಂದು ರವುಂಡು ನಿದ್ದೆ ಹೊಡೆದು, ಆಮೇಲೆ ಸಂಜೆ ಹೊತ್ತಿಗೆ ಆಟಕ್ಕೆ ಬರ್‍ತೀನಿ. ನೀನು ಈಗ ದಾರೀಲಿ ಹೋಗುತಾ ಚಂಡುಕೊಂಡುಕೊಂಡು, ಶಿವಂಗೂ ಹೇಳಿಬಿಟ್ಟು ಮನಗೆ ಹೋಗು.




ಉ: ಇಂಗಲೀಶಿಗೆ ತಂನಿ.
I shall go home, dine, have a round of siesta and shall come in the evening to play . On your way home , buy a ball and inform Shiva also
"ಏರಿದವನು ಚಿಕ್ಕವನಿರಬೇಕು"
ಉ: ಇಂಗಲೀಶಿಗೆ ತಂನಿ.
ಸಕ್ಕತ್..
ಆದರೆ..
೧) ....
I shall go ಅನ್ನೋ ’ಆಮೇಲೆ ಹೋಗಬೇಕು/ಹೋಗ್ತೀನಿ’ ಅನ್ನೋ ತಿಳಿವು ಕೂಡ ಕೊಡಬೋದು..
ಮಾದರಿ.. ’I shall do it' ಅಂದರೆ ’ನಾನು ಅದನ್ನು ಮಾಡಬೇಕು’ ಅಂತ ಅಲ್ವ!
shall come ಕೂಡ... ಹೀಗೆ
೨) "buy a ball and inform Shiva also"
ಇಲ್ಲಿ ’ಚೆಂಡು ಕೊಂಡು’ ಮತ್ತು ’ಚೆಂಡು ಕೊಂಡುಕೊಂಡು’ ಇವುಗಳ ನಡುವೆ ಯತುವಾಸ ಏನಿರಬೇಕಿತ್ತು?
=====================================
ಮಾಯ್ಸ!
ಉ: ಇಂಗಲೀಶಿಗೆ ತಂನಿ.
dine = to have dinner ಅಲ್ವ? ಇರಳೂಟ ಮಾಡೋದು.
ಇಲ್ಲಿ ಅವನು lunch ಮಾಡಬೇಕು.. dine ಮಾಡಿದರೆ ಸಂಜೆ ಆಟಕ್ಕೆ ಬರಕ್ಕೆ ಆಗಲ್ಲ,!
=====================================
ಮಾಯ್ಸ!
ಉ: ಇಂಗಲೀಶಿಗೆ ತಂನಿ.
1)ನೀವು ಕೊಟ್ಟ ಮೂಲವಾಕ್ಯದಲ್ಲಿ "ನಾನು ಮನಗೆ ಹೋಗಿ, ಊಟ ಮಾಡಿ," ಎಂದಿದೆಯೇ ಹೊರತು, "ಈಗ" "ಆಗ" ಎಂಬಂಥ ಯಾವ ಸಮಯಸೂಚನೆಯೂ ಇಲ್ಲ ಹಾಗಾಗಿ ನಾನು Shall ಬಳಕೆ ಮಾಡಿದೆ.
"buy a ball and inform Shiva also"
ಇಲ್ಲಿ ’ಚೆಂಡು ಕೊಂಡು’ ಮತ್ತು ’ಚೆಂಡು ಕೊಂಡುಕೊಂಡು’ ಇವುಗಳ ನಡುವೆ ಯತುವಾಸ ಏನಿರಬೇಕಿತ್ತು?"
ನಿಮಗೆ ತೀರ ಪದಶ: ಅರ್ಥ ಬೇಕಿದ್ರೆ "having bought" ಅನ್ನುವ ಪ್ರಯೋಗ ಮಾಡಬಹುದಿತ್ತು. ಆದರೆ ನನ್ನ ಅಭ್ಯಾಸ ಭಾವಾನುವಾದ ಮಾಡುವುದು
೨) ಚೆಂಡು ’ಕೊಂಡು’ ಎಂದರೆ ಸಾಕಾಗಿರುವಾಗ ಮತ್ತೊಂದು ಸಾರಿ ಹೆಚ್ಚುವರಿಯಾಗಿ ಯಾಕೆ ಕೊಳ್ತೀರಿ?
ಸಾಗರದ ಕಡೆಯವರಾದ ನನ್ನ ಅನೇಕ ಸಹೋದ್ಯೋಗಿಗಳು ಮಾತಿನಲ್ಲಿ "ಅಂತ" ಅಂತ ಹೇಳೋಕ್ಕೆ "ಹೇಳ್ಕಂಡ್ಹೇಳಿ" ಅನ್ನುತ್ತಾರೆ.
ಉದಾ: ನಾಳೆ ಬರ್ತೀನಿ ಅಂತ ಹೇಳಿದಾರೆ ಅನ್ನೋಕ್ಕೆ "ನಾಳೆ ಬರ್ತೀನಿ ಹೇಳ್ಕಂಡ್ಹೇಳಿ ಹೇಳಿದಾರೆ " ಅಂತಾರೆ.
"dine = to have dinner ಅಲ್ವ? ಇರಳೂಟ ಮಾಡೋದು.
ಇಲ್ಲಿ ಅವನು lunch ಮಾಡಬೇಕು.. dine ಮಾಡಿದರೆ ಸಂಜೆ ಆಟಕ್ಕೆ ಬರಕ್ಕೆ ಆಗಲ್ಲ,! "
೩) ಬಹುಶ: ಇಂಗ್ಲೆಂಡ್‌ನಲ್ಲಿ ಅವೆಲ್ಲ ವ್ಯತ್ಯಾಸಗಳಿರಬಹುದೇನೋ (ಬ್ರೇಕ್‌ಫಾಸ್ಟ್, ಲಂಚ್. ಬ್ರಂಚ್, ಡಿನ್ನರ್, ಸಪರ್ ಇತ್ಯಾದಿ)
ಆದರೆ ನಮ್ಮ Indian Englishನಲ್ಲಿ ಈ ವ್ಯತ್ಯಾಸಗಳನ್ನೆಲ್ಲ ಮಾಡುತ್ತಾರಾ?
ಓಕೆ. ಒಪ್ಪಿದೆ Lunch ಅನ್ನುವುದೇ ಸರಿಯಾದ ಪದ.
ಆದರೆ ಇರುಳೂಟ ಅನ್ನುವುದಕ್ಕೆ supper ಎನ್ನುವ ಪದವಿದೆಯಲ್ಲ?
"ಏರಿದವನು ಚಿಕ್ಕವನಿರಬೇಕು"
ಉ: ಇಂಗಲೀಶಿಗೆ ತಂನಿ.
ಸಾರ್..
ಇಲ್ಲಿ ಬರ್ತೀನಿ ಅನ್ನೋದು present tense..
ಅದಕ್ಕೆ I go ಅನ್ನೋ ಬೞಕೆ ಸರಿ ಇರಬೋದ ಎಂದು ನನ್ನ ಗುಮಾನಿ.
ತುಸು ಹಾಗಾಗೇ ಇಂಗಲೀಸಿಗೆ ತರಲು ತಿಣುಕಿ.. ಆಗ ಕನ್ನಡದ ಇಂಗಲೀಸಿನ ಒಳವುಗಳು ತಿಳಿಯುವುವು..
=====================================
ಮಾಯ್ಸ!
ಉ: ಇಂಗಲೀಶಿಗೆ ತಂನಿ.
ಮಿತ್ರರೇ, ನಿಮ್ಮಿಬ್ಬರ ಈ ಲೇಖನ/ಪ್ರತಿಕ್ರೀಯೆಗಳನ್ನು ನೋಡಿದಾಗ ನಮ್ಮ ಹಳ್ಳಿಯಲ್ಲಿ ವಯಸ್ಸಾದವರೊಬ್ಬರು ನಮಗೆ ಹಾಕುತ್ತಿದ್ದ ಸವಾಲು ನೆನಪಾಯಿತು ಅದು ಹೀಗಿತ್ತು "ನೀನು ನಿಮ್ಮಪ್ಪನ ಎಷ್ತನೇ ಮಗ ?" ಈದನ್ನು ಇಂಗ್ಲೀಷಿಸಿ......
ನನಗಾಗಲ್ಲಿಲ್ಲ......ನೀವು ಪ್ರಯತ್ನಿಸಿ.
ನನ್ನಿ.
ಉ: ಇಂಗಲೀಶಿಗೆ ತಂನಿ.
ಅಯ್ಯೋ ಅದನ್ನ ಹಿಂದಿಯಲ್ಲೂ ಸರಿಯಾಗಿ ಕೇಳಕ್ಕೆ ಆಗಲ್ಲವಂತೆ...
"ತುಮ್ ತೇರ ಅಪ್ಪಾ ಕೊ ಕವುಂಸಾ ಬಚ್ಚ ಹಯ್" ಅಂತಾರೋನು
"ಬಿಲ್ ಕ್ಲಿಂಟನ್ ಅಮೇರಿಕದ ಎಶ್ಟನೇ ಪ್ರೆಸಿಡಿಂಟು?" ಇದನ್ನು ಇಂಗಲೀಸಿಸಲು ಆಗದು!
=====================================
ಮಾಯ್ಸ!
ಉ: ಇಂಗಲೀಶಿಗೆ ತಂನಿ.
In what order you represent among the children of your father?
In what order Bill Clinton represent among the presidents of USA?
ಉ: ಇಂಗಲೀಶಿಗೆ ತಂನಿ.
After having gone home, had lunch and then a nap, I will come back later in the evening to play. Now, after having bought a ball on the way and informed Shiva, you go home.
ಉ: ಇಂಗಲೀಶಿಗೆ ತಂನಿ.
=====================================
ಮಾಯ್ಸ!
ಉ: ಇಂಗಲೀಶಿಗೆ ತಂನಿ.
ನಾನೇನೋ ಇದನ್ನ ಈಗ ಇಂಗಲೀಸಿಗೆ ತಂದಿದ್ದೆ..
Now I go home and nap a while after the meal. Later in the evening I come to play.
you go now, buy a ball on the way, also inform Shiva before you go home.
OK ನ?
=====================================
ಮಾಯ್ಸ!