ಕದಡುತ್ತಿರುವ ಮಲೆನಾಡಿನ ನೆಮ್ಮದಿ..!
ಪ್ರಶಾಂತವಾಗಿದ್ದ ಮಲೆನಾಡನಲ್ಲಿ ಬಂದೂಕಿನ ನಳಿಕೆಯಡಿ ಸಮಾನತೆಯನ್ನು ಸಾಧಿಸಲು ಹೊರಟಿರುವ ನಕ್ಸಲರ ಪ್ರಯತ್ನ ಎಷ್ಟರ ಮಟ್ಟಿಗೆ ಪ್ರಸ್ತುತ ಹಾಗು ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತಿದೆ ಎನ್ನುವುದು ಒಂದು ದೊಡ್ಡ ಪ್ರಶ್ನೆಯೆ ಸರಿ. ನಿಜ ಹೇಳಬೇಕೆಂದರೆ ಈ ಚಳುವಳಿಯಿಂದ ಎಷ್ಟುಜನ ಬಡವರಿಗೆ ಉಪಕಾರಿಯಾಗಿದೆಯೋ ಗೊತ್ತಿಲ್ಲ, ಆದರೆ ನಕ್ಸಲರ ಹಾಗು ಪೋಲೀಸರ ನಡುವೆ ಸಿಕ್ಕಿ ಹಲವು ಕುಟುಂಬಗಳು ನಾಶಗೊಂಡಿದ್ದಂತೂ ಸತ್ಯ! ಈ ಕಾಡಿನ ಆಜುಬಾಜಿನ ಹಳ್ಳಿಗಳಲ್ಲಿ, ನಕ್ಸಲರಿಗೆ ಆಶ್ರಯ ನೀಡುವವನೆಂದು ಪೋಲಿಸರ ದೌರ್ಜನ್ಯದಿಂದ ಹಾಗು ಪೋಲಿಸರ ಇನ್‍ಫಾರ್ಮರ್ಎಂದು ನಕ್ಸಲರ ಉಪಟಳದಿಂದ ಹಲವಾರು ಸಂಸಾರಗಳು ನಾಶವಾಗಿ ಹೋಗಿವೆ. ಇದೆಲ್ಲಾ ಯಾಕೆ ಬರೆದೆನೆಂದರೆ, ನಿನ್ನೆ TV9 ಚಾನೆಲ್‍ನಲ್ಲಿ ತೋರಿಸಲಾದ ಭೂ ಮಾಫಿಯಾದ ಆಮಿಷ(ದೌರ್ಜನ್ಯ?) ಬಲಿಯಾಗಿ ಜಮೀನನ್ನು ಮೂರುಕಾಸಿಗೆ ಮಾರಿಕೊಂಡು, ಈಗ ತಮ್ಮದೆ ಜಮೀನಿನಲ್ಲಿ ಮನೆಕಟ್ಟಿಕೊಂಡವರ ಮನೆಯಲ್ಲಿ ಮನೆಗೆಲಸದವರಾಗಿ ದುಡಿಯುತ್ತಾ ಜೀವನ ಸವೆಸುತ್ತಾ ಇರುವ ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಯ ಬಡರೈತರ ಸ್ಥಿತಿಯನ್ನು ನೋಡಿ ಹಾಗು ಇದಕ್ಕೆ ಪೂರಕವಾದ ನಕ್ಸಲರನ್ನು ಬೆಂಗಳೂರಿಗೆ ಆಹ್ವಾನಿಸಿದ ವಿಕಾಸ್ ಹೆಗಡೆಯವರ ಈ ಲೇಖನವನ್ನು ಓದಿ ಒಂದಿಷ್ಟು ಚಿಂತನೆಗೆ ಹಚ್ಚಿತು..

- Login or register to post comments
- 203 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕದಡುತ್ತಿರುವ ಮಲೆನಾಡಿನ ನೆಮ್ಮದಿ..!
ಲೇಖನ... ನನ್ನ ಬ್ಲಾಗಲ್ಲಿ
[ನಕ್ಸಲೀಯರೇ ಬೆಂಗಳೂರಿಗೆ ಬನ್ನಿ|http://vikasavada.blogspot.com/2008/06/blog-post.html]
ಉ: ಕದಡುತ್ತಿರುವ ಮಲೆನಾಡಿನ ನೆಮ್ಮದಿ..!
ನಿಜವಾಗಿಯೂ ಬೇಸರ ಆಗುತ್ತದೆ. ನಕ್ಸಲೀಯರಿಗೆ ರೈತರ ಉದ್ಧಾರ ಏಕೆ ಬೇಕು? ಅವರಿಗೆ ಅವರದೇ ಆದ "totalitarian" ರಾಜ್ಯ ಕಟ್ಟೋ ಆಸೆ ಇದೆ. ಅವರ ದುರಾಸೆಗೆ ಬಲಿಯಾಗುವುದು ಬಡ ರೈತರು ಹಾಗೂ ಅಷ್ಟೇ ಬಡ ಪೋಲೀಸ್ ಪೇದೆಗಳು. ಯಾರು ಸತ್ತರೇನು?
ನಕ್ಸಲಿಸಂನ ಹುಟ್ಟೂರು ನಕ್ಸಲ್ಬಾರಿ ಹಳ್ಳಿಯಲ್ಲಿ ಇಂದಿಗೂ ಯಾವ ಅಭಿವೃದ್ಧಿಯೂ ಆಗಿಲ್ಲ! ಮಾವೋವಾದದ ತವರಾದ ಚೀನಾದಲ್ಲಿ ಇಂದಿಗೂ ಸಾಮಾನ್ಯ ಜನರಿಗೆ ಮಾತಿನ ಹಕ್ಕಿಲ್ಲ. "Party" ಹೇಳಿದ್ದನ್ನು ಕೇಳಬೇಕು ಅಷ್ಟೇ. "Party" ಹೇಳಬೇಡಿ ಎಂದಿದ್ದನ್ನು ಹೇಳಬಾರದು. ಇದನ್ನೆಲ್ಲಾ ಚೀನಾಕ್ಕೆ ಹೋಗಿ ಬಂದು ಚೀನಾ ದೇಶದ ಹೊಗಳು ಭಟ್ಟರಾದ ನಮ್ಮ ಕೆಲವು ಸಾಹಿತಿಗಳು ಬಾಯಿ ಬಿಡುವುದಿಲ್ಲ. ಬಿಟ್ಟರೆ ತಮಗೆ ತಲುಪುವ ಯಾವುದೋ ವಿಶ್ವವಿದ್ಯಾಲಯದ ಸಿಂಡಿಕೇಟ್ ಸ್ಥಾನ, ಡಾಲರ್ಸ್ ಕಾಲೋನಿ ಅಥವಾ ಜೆ.ಪಿ. ನಗರದಲ್ಲಿ ಒಂದು ಮನೆ ಸಿಗದೇನೋ ಎನ್ನುವ ಯೋಚನೆ.
ಯಾಕೋ Orwell ಬರೆದ Animal Farm (http://en.wikipedia.org/wiki/Animal_Farm) ಪದೇ ಪದೇ ನೆನಪಿಗೆ ಬರುತ್ತದೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ