'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಈ ಬಾರಿಯ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳಲ್ಲಿ ದಟ್ಸ್ ಕನ್ನಡ ವರದಿಯಂತೆ ಕನ್ನಡದ 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ ಲಭಿಸಿದೆ.
ನಿರ್ದೇಶನ: ಲಿಂಗದೇವರು. ನಿರ್ಮಾಣ: ವೀರೇಶ್ (ಚಿತ್ರಲೋಕ ಡಾಟ್ ಕಾಮ್) ಮಧು ಬಂಗಾರಪ್ಪ.
ಪ್ರಶಸ್ತಿ ಪಡೆದ ಉಳಿದ ಚಿತ್ರಗಳು:
ಕಲ್ಲರಳಿ ಹೂವಾಗಿ (ನಿರ್ದೇಶನ: ನಾಗಾಭರಣ)
ಕೇರ್ ಆಫ್ ಪುಟ್ ಪಾತ್ (ಕಿಶನ್)

- Login or register to post comments
- 750 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಸದಾ ತನ್ನ ಮಗನಿಗಾಗಿ ಪರಿತಪಿಸುವ ಮುಪ್ಪಾದ ಹೆಂಡತಿಯಿಂದ, ಬೆಳೆದ ಮಗ ನಗರದಲ್ಲಿ ಸತ್ತ ವಿಷಯವನ್ನು ಅವಳಿಂದ ಮುಚ್ಚಿಟ್ಟು, ಒಳಗೊಳಗೆ ದುಖ: ನುಂಗುವ ಪಾತ್ರದಲ್ಲಿ ಲೋಕನಾಥ್ ಅಭಿನಯ ನಿಜಕ್ಕೂ ನೈಜ........
ಎಂದೂ ಕೈಗೆ ಸಿಗದ ಪುಂಡ ಮಗ, ಹೆಂಡತಿಯನ್ನು ಮನೆ ಹೊರಗಟ್ಟಿ, ಸೊಸೆ ಹಳ್ಳಿಗೆ ಅಳುತ್ತಾ ಬಂದಾಗ ಅವಳನ್ನು ಸಂತೈಸಿ, ಏನೂ ತೋಚದ ಮಾವನಾಗಿ ಅಭಿನಯಿಸಿದ ದತ್ತಣ್ಣನಿಗೆ ಹ್ಯಾಟ್ಸ್-ಆಫ್.........
ಗಂಡನ ಭಾವನೆಗಳನ್ನು ಅರ್ಥ್ಜೈಸಿಕೊಳ್ಳದ, ambitious women ಆಗಿ ಅನನ್ಯಾ ಅವರು ಚೆನ್ನಾಗಿ ನಟಿಸಿದ್ದಾರೆ.
ಒಳ್ಳೆಯ ಚಿತ್ತ್ರಕ್ಕೆ, ಒಳ್ಳೆಯ ಪ್ರಶ್ಸಸ್ತಿ.....
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಈ ಸಿನಿಮವನ್ನ ಎಲ್ಲೋ ತೋಱಿಸ್ತೀವಿ ಅಂದಿದ್ದರು..
ಹರಿ ಏನಾಯ್ತೋ ಅದು!
=====================================
ಮಾಯ್ಸ!
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಚಿತ್ರಲೋಕದ ವೀರೇಶ್ ಅವರೊಂದಿಗೆ ಮಾತನಾಡಿದ್ದೆ ಕಣೋ. ಸ್ಕ್ರೀನ್ ಮಾಡೋಣಂತೆ - ಫೋನ್ ಮಾಡ್ತೀನಿ, ತಿಳಿಸ್ತೀನಿ ಅಂದ್ರು. ನಂತರ ಫೋನ್ ಮಾಡಲಿಲ್ಲ. ನಾನು ಒಂದೆರಡು ಸಾರಿ ಟ್ರೈ ಮಾಡಿದೆ, ಮತ್ತೆ ಫೋನಿನಲ್ಲಿ ಅವರು ಸಿಗಲಿಲ್ಲ (ದೇಶದಿಂದ ಹೊರಗಿದ್ದರು ಅನ್ಸತ್ತೆ). ಅಲ್ಲಿಗೇ ನಿಂತು ಹೋಯ್ತು.
ನಿಮಗ್ಯಾರಿಗಾದರೂ ಅವರೊಂದಿಗೆ ಮಾತನಾಡಲು ಆದ್ರೆ ನೋಡಿ. ಒಂದು ಸ್ಕ್ರೀನಿಂಗ್ ಮಾಡೋಣವಂತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಇದರ ಸೀಡಿ-ಗೀಡಿ ಸಿಗ್ತದ?
=====================================
ಮಾಯ್ಸ!
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಸೀಡಿ ಸಿಗ್ಬೋದೇನೋ? ಗೀಡಿ ಮಾತ್ರ ಸಿಗಲ್ಲಾ!
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಗೊತ್ತಿಲ್ಲ. ಅದೂ ವಿಚಾರಿಸಿ ನೋಡಬೇಕು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಇತ್ತೀಚೆಗೆ ಸುವರ್ಣ ವಾಹಿನಿಯಲ್ಲಿ ಬಂದಿತ್ತಲ್ಲ...
ಮತ್ತೆ ಮತ್ತೆ ಬರ್ತಾನೆ ಇರುತ್ತೆ ಬಿಡಿ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಯಾವಾಗ ಬಂದಿತ್ತು? ಸುವರ್ಣ ವಾಹಿನಿಯಲ್ಲಿ ?
http://thereda-mana.blogspot.com/
ರೂಪ
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಏಪ್ರಿಲ್ ತಿಂಗಳಲ್ಲಿ ನೋಡಿದ ನೆನಪು. ಯಾವುದೋ ಭಾನುವಾರ ಸಂಜೆ ಬಂದಿತ್ತು. ಸುವರ್ಣನೋ ಇಲ್ಲ ಝೀ ಕನ್ನಡನೋ ಸರಿಯಾಗಿ ನೆನಪಿಲ್ಲ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಇಂತಹ ಪ್ರಶಸ್ತಿಗಳು ಕನ್ನಡ ಚಿತ್ರಗಳಿಗೆ ಪ್ರತಿ ವರ್ಷ ಹೆಚ್ಚು ಹೆಚ್ಚು ಬರ್ತಾ ಇರ್ಲಿ ಅಂತ ದೇವರಲ್ಲಿ ನನ್ನ ಪ್ರಾರ್ತನೆ..!!
ಅಂತೆಯೆ ಒಳ್ಳೆ ಚಿತ್ರಗಳು ಕನ್ನಡದಲ್ಲಿ ತಾಯಾರಾಗಲೆಂಬುದು ನನ್ನ ಕನಸು..!
-ಯುವಪ್ರೇಮಿ