ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ?
ಸಂವಿಧಾನಕ್ಕೆ ನಿಷ್ಠರಾಗಿರಬೇಕಾದ ಶಾಸಕರು ಹಾಗೂ ಮಂತ್ರಿ ಮಹೋದಯರು ತಮ್ಮ ನಿಷ್ಠೆಯು ಸಂವಿಧಾನದ ಕಡೆಗೆ ಇಲ್ಲ ಎಂದು ರಾಜಾರೋಷವಾಗಿ ಘೋಷಣೆ ಮಾಡುತ್ತಿರುವುದನ್ನು ಕಳೆದ ಕೆಲ್ಲವು ಕಾಲದಿಂದ ನೋಡುತ್ತಿದ್ದೇವೆ.
ಈ ರೀತಿ ಪ್ರಮಾಣ ವಚನ ಸ್ವೀಕರಿಸುವುದು ಸಂವಿಧಾನಾತ್ಮಕವಾಗಿ ಸಿಂಧು ಎನಿಸಿಕೊಳ್ಳುತ್ತದೆಯೇ?
ಈ ಸಾರೆ ಪ್ರಜಾಣವಚನ ಕಾರ್ಯಕೃಮವನ್ನು ದೂರದರ್ಶನದಲ್ಲಿ ನೋಡುವಾಗ ರಾಜ್ಯಪಾಲರು ಒಬ್ಬರಿಗೂ ಪ್ರಮಾಣವಚನವನ್ನು ಬೋಧಿಸಿದ್ದು ಕಂಡು ಬರಲಿಲ್ಲ. ಉಕ್ತ ಲೇಖನವು (dictation ) ಸರಿ ಇದೆಯೇ ಎಂದು ತಾಳೆ ನೋಡುವ ನಿರ್ಲಿಪ್ತ ಶಾಲೆ ಮೇಸ್ಟ್ರ ತರಹ ರಾಜ್ಯಪಾಲರು,ಮಂತ್ರಿಗಳಾಗುತ್ತಿರುವವರು ಓದುವುದನ್ನು ಕೇಳಿಸಿಕೊಳ್ಳುತ್ತಿದ್ದರು. ನನಗೆ ತಿಳಿದ ಮಟ್ಟಿಗೆ ರಾಜ್ಯಪಾಲರು ಪ್ರಮಾಣವಚನವನ್ನು ಬೋಧಿಸಬೇಕು! ಓದಿಸುವುದಲ್ಲ.!! ಪ್ರಾಜ್ಞರು ಏನು ಹೇಳುತ್ತಾರೆ?

- Login or register to post comments
- 582 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ?
ಪ್ರಮಾಣವಚನ ಹಚ್ಚಿಸುವುದು!!!!!!!!! ಫೋನ್ ಹಚ್ಚು, ದೀಪ ಹಚ್ಚು ರೀತಿಯಲ್ಲಿ.
ಉ: ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ?
ಅಂದ್ರೆ? ಸುಟ್ ಹಾಕಿಬಿಡೋದು ಅಂತನಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ?
>>>"ರಾಜ್ಯಪಾಲರು" ಪ್ರಮಾಣ ವಚನವನ್ನು ಬೋಧಿಸಬೇಕು!!!
ಎಲ್ಲಾ ಮಂತ್ರಿಗಳ ಪ್ರಮಾಣ ವಚನ ಮುಗಿಯುವಾಗ ಅಂದಾಜು ೫-೬ ದಿನವಾಗಬಹುದು.
ಅಷ್ಟರೊಳಗೆ ಸರಕಾರ ಬಿದ್ದು ಹೋದರೆ?
ಪ್ರಮಾಣವಚನ ಓದಿಸುವುದೇ ಒಳಿತು.
-ಗಣೇಶ.