ಸೊರಗುತ್ತಿರುವ ಸಂಪದ
ಸಂಪದ ಯಾಕೋ ತನ್ನ ಮೊದಲಿನ ಆಕರ್ಶಣೆ ಕಳೆದು ಕೊಳ್ಳುತ್ತಿದೆ ಅನಿಸುತ್ತಾ ಇದೆ. ಮೊದಲು ನಡೆಯುತಾ ಇದ್ದ ಗಂಭೀರ ಚರ್ಚಗಳು , ಕನ್ನಡದ ಬಗೆ ನಡೆಯುತಿದ್ದ brain storming sessionsನ ಜಾಗವನ್ನು ಗಾದೆ ಮಾತುಗಳು, ಸಿನೆಮಾ ಹಾಡುಗಳು ಆಕ್ರಮಿಸಿ ಕೊಂಡಿದ್ದಾವೆ ಅನಿಸುತಾ ಇದೆ ಅನಿಸುತ್ತೆ. ಅರ್ಕುಟ್ ನಲ್ಲಿ ಇಂಥ ಹತ್ತು ಹಲವು ಆಟಗಳನ್ನು ಕಾಣಬಹುದು. ಇದು ಯಾರಿಗೂ ನೋವನ್ನುಂಟು ಮಾಡುವ ಉದ್ದೇಶದಿಂದ ಬರೆದದಲ್ಲ , ಆದರೆ ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿ ಆಗಬಾರದಲ್ಲ ?

- Login or register to post comments
- 473 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಸೊರಗುತ್ತಿರುವ ಸಂಪದ
ಗಂಭೀರ ಚರ್ಚೆಗಳು ಕಡಿಮೆ ಆಗಿರೋದು ನಿಜ. ಆದ್ರೆ ಸುಮಾರು ೪ ಸಾವಿರ ಸದಸ್ಯರುಗಳುಳ್ಳ "ಸಂಪದ"ದಲ್ಲಿ, active ಆಗಿರೋರು ಬೆರೆಳೆಣಿಕೆಯಷ್ಟು ಮಂದಿ. ಚರ್ಚೆಗಳು ಎಲ್ಲ ತರಹದಿದ್ದರೆ, ವಿವಿಧತೆ ಇರುತ್ತೆ, fun ಇರುತ್ತೆ. ಗಂಭೀರ ವಿಷಯಗಳು ಹುಟ್ಟು-ಹಾಕಿದಲ್ಲಿ(ಈ ಬಗ್ಗೆ ಬಹಳಷ್ಟು in-active ಸದಸ್ಯರು ಗಮನ ಹರಿಸಿ "ಕ್ರಾಂತಿ" ಉಂಟು ಮಾಡಲಿ
), ಚರ್ಚೆ-ಸ್ವಾಗತ ಎಲ್ಲವೂ ಸಿಗುತ್ತೆ ಅಂತ ನನ್ನ ಅನಿಸಿಕೆ.
ಉ: ಸೊರಗುತ್ತಿರುವ ಸಂಪದ
ತೀರ ಕೊರಗುವಷ್ಟೆನೂ ಸೊರಗಿಲ್ಲ ಅನಿಸುತ್ತಿದೆ.. ನಾನು ಕಂಡಂತೆ ಇತ್ತೀಚೆಗೆ ಸುಮಾರು ಹೊಸ ಹೊಸ ಸದಸ್ಯರು ಸೇರಿದ್ದಾರೆ ಮತ್ತು ಚಟುವಟಿಕೆಯಿಂದಿದ್ದಾರೆ.
ಮೊದಲು ನೆಡೆಯುತ್ತಿದ್ದ ’ಗಂಭೀರ’ ಚರ್ಚೆಗಳೂ ಬಹಳ ದಿನ ನೆಡೆದಾಗ ಮೆರುಗು ಕಳೆದುಕೊಂಡು ಬೇಸರ ಬರಿಸುವುದು ಸಹಜ. ಒಂದಷ್ಟು ದಿನ ಸಂಪದದಲ್ಲಿ ಯಾವುದೇ ವಿಷಯದ ಬಗ್ಗೆ ಹಾಕಿದರೂ ಕೆಲವರಿಂದ ಅದರಲ್ಲಿನ ಅಕ್ಷರ, ಭಾಷೆಯ ಬಗ್ಗೆ, ವ್ಯಾಕರಣದ ಬಗ್ಗೆ ಚರ್ಚೆ ತಿರುಗಿಬಿಡುತ್ತಿದ್ದುದು ವಿಪರ್ಯಾಸವಾಗಿತ್ತು. ಆದರೆ ಈಗ ಅಂತಹವರ ’ಹಾವಳಿ’ ಕಡಿಮೆಯಾಗಿ ವಿಷಯದ ಮೇಲೆ ಚರ್ಚೆ ನೆಡೆಯುತ್ತಿದೆ. ಅದೇ ಖುಷಿ. ಸುಮಾರು ಹಳೆಯ ಸದಸ್ಯರು ಇಲ್ಲಿ ಮಾತನಾಡುವುದನ್ನು ಕಡಿಮೆ ಮಾಡಿರುವುದು/ನಿಲ್ಲಿಸಿರುವುದಂತೂ ಹೌದು. ನಾವು ಆದಷ್ಟು ಜನಕ್ಕೆ ಸಂಪದವನ್ನು ಪರಿಚಯಿಸಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಈ ಮೊದಲು ಹೇಳಿದಂತೆ ಸಂಪದಕ್ಕೆ ’ಕನ್ನಡ’ವೊಂದೇ ಮಿತಿಯಾಗಿದ್ದರೆ ಸಾಕು.
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************
ಉ: ಸೊರಗುತ್ತಿರುವ ಸಂಪದ
ನಾನು ಸಂಪದದ ಹಾದಿ ತಪ್ಪಿಸಿದ್ದೇನೆ ಎಂದಾದರೆ
ದಯವಿಟ್ಟು ಕ್ಷಮಿಸಿ ಅಹಂಕಾರಿ
ಕನ್ನಡ ಎಂದರೆ ಕನ್ನಡ ಸಿನಿಮಾ, ಗಾದೆ, ಹಾಡು ಎಲ್ಲವೂ ಒಳಗೊಂಡಿದೆ ಎಂದುಕೊಂಡಿದ್ದೆ ನಾನು
ಆದರೆ ಬರೇ ವ್ಯಾಕರಣ ಕನ್ನಡ ಬೆಳೆಸುವ ಹಾದಿ ಆಗಿದೆ ಎಂದು ತಿಳಿದಿರಲಿಲ್ಲ
http://thereda-mana.blogspot.com/
ರೂಪ
ಉ: ಸೊರಗುತ್ತಿರುವ ಸಂಪದ
ರೂಪ, ಇದೊಂದು ಮುಕ್ತ ಸಮುದಾಯ. ಯಾರೂ ಯಾವುದಕ್ಕೂ ಬ್ರೇಕ್ ಹಾಕಿಕೊಳ್ಳಬೇಡಿ. ಸಮುದಾಯದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿರುವವರು ೨೦ - ೩೦ ಜನರಾದರೂ ಓದುಗರ ಸಂಖ್ಯೆ ಬಹಳ ಹಾಗೂ ವಿಸ್ತೃತ. ಸಿನಿಮಾ ಬಗ್ಗೆ ಓದುವವರೂ ಇದ್ದಾರೆ, "ಸೀರಿಯಸ್ ಓದು" ಬೇಕು ಅನ್ನುವವರೂ ಇದ್ದಾರೆ, ಭಾಷೆಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ಆಸಕ್ತಿ ಇರುವವರೂ ಇದ್ದಾರೆ, ಕತೆ - ಕವನ ಬರೆಯುವವರೂ ಇದ್ದಾರೆ, ಟೆಕ್ನಾಲಜಿ ಬಗ್ಗೆ ಬರೆಯುವವರೂ ಇದ್ದಾರೆ.
ಒಂದಷ್ಟೆ, 'ಸಂಪದ'ದ ಈ reach ಇದೆಯಲ್ಲ, ಅದು ತಪ್ಪು ಬಳಕೆಯಾಗದಿದ್ದರಾಯಿತು.
ನಿತ್ಯ ಓದುಗರ ಸಂಖ್ಯೆ ಹೆಚ್ಚುತ್ತಿರುವ ಸಂಪದ ಸೊರಗುತ್ತಿದೆ ಎಂದು ನನಗನ್ನಿಸುವುದಿಲ್ಲ. ಪ್ರಾರಂಭಿಸಿದಾಗಿನಿಂದ (ಜುಲೈಗೆ ಸುಮಾರು ಮೂರು ವರ್ಷವಾಗುತ್ತದೆ) ಈಗಿನವರೆಗೂ ಇರುವ ಚಟುವಟಿಕೆ ಲೆಕ್ಕದಲ್ಲಿ ಚಟುವಟಿಕೆ ಹೆಚ್ಚಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸೊರಗುತ್ತಿರುವ ಸಂಪದ
ಅಯ್ಯೋ ಕ್ಸಮೆ ಕೋರುವಂತದೇನಿಲ್ಲ ಇದರಲ್ಲಿ , ನಾನು ಕಳೆದ ೨ ವರ್ಷಗಳಿಂದ ಸಂಪದವೆನ್ನು ಒದುತ್ತಾ ಇದ್ದೇನೆ, ಇಲ್ಲಿ ಬರೆಯುವವರ knowledge ಬಗ್ಗೆ ಆಶ್ಚರ್ಯ ಪಟ್ಟಿದ್ದೇನೆ, ಹಲವರೊಂದಿಗೆ ನನ್ನ ಅಭಿಪ್ರಾಯ ಹಂಚಿ ಕೊಂಡಿದ್ದೇನೆ, ಕನ್ನಡ ಸರಿಯಾಗಿ ಓದಲು ಬರದ ನನ್ನ ಬಳ್ಳಾರಿ ಗೆಳೆಯ ಹಾಗೆ ಸಂಪದ ಇಂದು ಬ್ಯೆರಪ್ಪನವರ ದಾಟು ಓದುತ್ತಾ ಇದ್ಡಾನೆ ಅಂದರೆ ಇದಕ್ಕೆ ಮುಖ್ಹ್ಯ ಕಾರಣ ಸಂಪದ ...
ಈ ಚರ್ಚೆ ಸೇರಿಸಿದ ಮೇಲೆ , ನಾನು ಇದನ್ನು delete ಮಾಡುವ ಬಗೆ ಯೋಚಿಸುತ್ತಾ ಇದ್ದೆ, ಯಾಕೆಂದರೆ ನಾನು ಬರೆಯಲಾರೆ , ಆದರೆ ಒಬ್ಬ ಓದುಗನಾಗಿ ನನ್ನ ಅಭ್ಹಿಪ್ರಾಯ ವ್ಯಕ್ತ ಪಡಿಸಿದ್ದೇನೆ....ತಪ್ಪಿದ್ದರೆ ಕ್ಸ್ಮಮಿಸಿ
..
ಆದರೆ ಸಂಪದ ಬರಹಗಾರರಿಗೆ ನನ್ನ ನನ್ನಿ , ಅಬಿಪ್ರಾಯ ವ್ಯಕ್ತ ಪಡಿಸುವುದೇ ಕಶ್ಟವಾಗಿರುವ ಈ ಕಾಲದಲ್ಲಿ , ಇಲ್ಲಿ ಬಂದಿರುವಂಥಹ ಸಂಯಮದ ಪ್ರತಿಕ್ರಿಯೆಗಳನ್ನು ನೋಡಿ ತುಂಬಾ ಸಂತೋಷವಾಯ್ತು ..............ಸತ್ಯ ಹೇಳಬೇಕೇಂದರೆ ನಾನು "ಹೋಗಲೋ ನಮಿಗೆ ಬೇಕಾದನ್ನು ನಾವು ಬರೀತೀವಿ , ಬೇಕಾದ್ರೆ ಓದ್ಕೋ " ಅನ್ನೋ ಪ್ರತಿಕ್ರಿಯೆ expect ಮಾಡ್ತಾ ಇದ್ದೆ
.
ಉ: ಸೊರಗುತ್ತಿರುವ ಸಂಪದ
ಹಾಡು ಸಿನೆಮಾ ಇತ್ಯಾದಿ ಊಟಕ್ಕಿರೋ ಉಪ್ಪಿನಕಾಯಿ ತರಹ ತೀರಾ ಮಿತಿಯಲ್ಲಿರಬೇಕು. ಎಲ್ಲಾ ಜನರು ಬೞಸುವ ಹಾಗಷ್ಟೆ ಭಾಷೆಯನ್ನು ಬೞಸಿದರೆ ಕನ್ನಡ ಉೞಿಯುತ್ತದಷ್ಟೇ. ಬೆಳೆಯಲಾಱದು. ನಿಮಗಿದು ಗೊತ್ತೇ? ಸಸ್ಯಗಳ ಬೆೞವಣಿಗೆ ಹೇೞಬೇಕಾದರೆ ಮಾತ್ರ ಬೆಳೆಸಬೇಕು. ಎನ್ನಬೇಕಾಗುತ್ತದೆ. ಕನ್ನಡವನ್ನು ಬೞಸಬೇಕು. ಬಳೆಸಬೇಕೂ ಕೂಡ. ನಿಮ್ಮ ಮಗ ಬಳೆಯಬೇಕು. ಬೆಳೆಯಬೇಕಲ್ಲ. ಇದು ಕೇಶಿರಾಜನ ಕನ್ನಡ. ನೀವು ಕನ್ನಡವನ್ನು ಬಳೆಸಬೇಕೆಂದರೆ ಬಱಿ ಸಿನಿಮಾ ಹಱಟೆಯಿಂದ ಸಾಧ್ಯವಿಲ್ಲ. ಕನ್ನಡದ ಕುಱಿತಾಗಿ ಗಂಭೀರ ಪ್ರೀತಿ ಬೆಳೆಸಿಕೊಳ್ಳಬೇಕು(ಬಳೆಸಿಕೊಳ್ಳಬೇಕು).
ಉ: ಸೊರಗುತ್ತಿರುವ ಸಂಪದ
ಕನ್ನಡ ಹಾಡು ಸಿನಿಮಾ ಗಾದೆ ಕತೆ ಕವನ ಇವೆಲ್ಲಾ ಇಲ್ಲದ ಕನ್ನಡವನ್ನು ಊಹಿಸಲು ಸಾಧ್ಯವಿಲ್ಲ
ಸಿನಿಮಾ ಇಲ್ಲದ ಕಾಲದಲ್ಲಿ ನಾಟಕ ,ಯಕ್ಶಗಾನವೂ ಮನರಂಜನೆಗಷ್ಟೆ ಅಲ್ಲದೆ ಭಾಷಾ ಪ್ರಚಾರಕ್ಕೆ ಬಳಕೆಯಲ್ಲಿತಲ್ಲವೇ
ಸಿನಿಮಾ ಹಾಡು ಗಾದೆ ಕತೆ ಕವನ್ ಇವೆಲ್ಲಾ ಉಪ್ಪಿನಕಾಯಿಯಾದರೆ ನಿಮ್ಮ ದೃಷ್ಟಿಯಲ್ಲಿ ಊಟ ಯಾವುದು
ನಿಮಗೆ ಗೊತ್ತೇ ?
ಕನ್ನಡ ಪರಭಾಷೆಯವರ ಕಿವಿ ತಲುಪಿರುವುದು ಅದರ ಮಧುರ ಹಾಡುಗಳಿಂದಲೇ
ಕನ್ನಡ ಬೆಳೆಯಬೇಕೆಂದರೆ ಅದರ ಬಳಕೆ ಹೆಚ್ಚಾಗಬೇಕು. ಬಳಕೆ ಹೆಚ್ಚಾಗಬೇಕ್ಜೆಂದರ್ ಕನ್ನಡ ಒಲ್ಲದ ಕನ್ನಡಿಗರೂ ಸೇರಿದಂತೆ ಪರಭಾಷೆಯವರ ಕಿವಿಗೆ ಇದು ಮುಟ್ಟಬೇಕು
ಮುಟ್ಟಲು ಹಾಡುಗಳು (ಮಧುರ ಹಾಡುಗಳು ) ಬೇಕು
ಸಿನಿಮಾ ಹಾಡುಗಳ ಚರ್ಚೆ ಶುರು ಮಾಡಿದವರಿಗೆ ಕನ್ನಡದ ಬಗ್ಗೆ ಗಂಭೀರ ಪ್ರೀತಿ ಇಲ್ಲ ಅಂತ ನಿಮಗೆ ಹೇಗೆ ಅನ್ನಿಸುತ್ತೋ ಗೊತ್ತಿಲ್ಲ
ನಾನಂತೂ ಎಲ್ಲರೂ ಕನ್ನಡಹೇಗೆ ಬಳಸುತ್ತಾರೊ ಹಾಗೆ ಬಳಸಿದ್ದೇನೆ
ಸರಿಯಾಗಿ ಓದಲಾಗದ ಗಂದಲವಾಗುವ ಕನ್ನಡವನ್ನಂತೂ ಬಳಸಿಲ್ಲ
ನನಗೆ ಕನ್ನಡ ಕೇಶೀರಾಜನದೋ ಮತ್ತೊಬ್ಬರದೋ ಗೊತ್ತಿಲ್ಲ
ನನಗೆ ಗೊತ್ತಿರುವುದೊಂದೆ
ನಾನು ಆಡುತ್ತಿರುವುದು ನನ್ನ ಕನ್ನಡ
ನಮ್ಮ ತಾಯಿಯಿಂದ ಬಳುವಳಿಯಾಗಿ ಬಂದ ಕನ್ನಡ
ಸಾಹಿತ್ಯ ಅಥವ ಬಳಕೆ ಬಗ್ಗೆ
http://thereda-mana.blogspot.com/
ರೂಪ
ಉ: ಸೊರಗುತ್ತಿರುವ ಸಂಪದ
"ಕನ್ನಡದ ಬಗ್ಗೆ ನಡೆಯುವ ಚರ್ಚೆಗಳನ್ನು ಆಸಕ್ತಿಯಿಂದ ಕೇಳುವವರಿದ್ದಾರೆ ಓದುವವರಿದ್ದಾರೆ", ಎಂಬ ಅಂಶವನ್ನು ತಿಳಿದು ತುಂಬಾ ಸಂತೋಷವಾಯಿತು. ಅಂದಹಾಗೆ, ಅಹಂಕಾರಿ, ಕನ್ನಡವನ್ನು ಕುರಿತಾದ ಚರ್ಚೆಗಳೇನು ನಿಂತಿಲ್ಲ. ಉಲ್ಲಿ, ಊಗಳ ಚರ್ಚೆ ಗಮನಿಸಿಯೇ ಇರುತ್ತೀರಿ
ಆಕ್ಚುಲಿ ಹೇಳಬೇಕೆಂದರೆ, "ಸಂಸಾರದಲ್ಲಿ ಮಕ್ಕಳೆಷ್ಟಿರಬೇಕು" ಎಂಬುವಷ್ಚರ ಮಟ್ಟಿಗೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಂತೆ ನನಗೆ ಕಾಣುತ್ತಿದೆ. ಇದು ಮೆಚ್ಚಬೇಕಾದ ಅಂಶ. ವ್ಯಾಕರಣಗಳ, ಹಳಗನ್ನಡ ಇವುಗಳ ಮೇಲಿನ ಚರ್ಚೆ ಇದ್ದೇ ಇರುತ್ತೆ ಬಿಡಿ. ಆದರೆ ಆದರ್ಶವಾದದ ಜೊತೆಗೆ ವಾಸ್ತವಜ್ಞಾನವೂ ಇರಬೇಕಲ್ಲ ಹಾಗೆ, ಇವುಗಳ ಜೊತೆ ಪ್ರಚಲಿತ ವಿದ್ಯಮಾನಗಳನ್ನೂ ಚರ್ಚೆಸಿ ಬಹಳಷ್ಟು ಅಂಶಗಳನ್ನು ತಿಳಿದುಕೊಳ್ಳೋಣ.
ಉ: ಸೊರಗುತ್ತಿರುವ ಸಂಪದ
ನನಗೆ ಹಾಗೆ ಅನ್ಸೋದಿಲ್ಲ. ಮೇಲೆ ಹರಿ ಹೇಳಿದಂತೆ ಸಂಪದ ಒಂದು ಮುಕ್ತ ಸಮುದಾಯ. ಒಂದು ಆನ್‍ಲೈನ್ ಸಮುದಾಯ ಸಮಯ ಕಳೆದ ಹಾಗೆ ಬದಲಾಗುತ್ತ ಹೋಗುತ್ತೆ, ಆ ಬದಲಾಬಣೆಯ ಮೂಲ ಕಾರಣ ಸಮುದಾಯದಲ್ಲಿರೋ ಜನ. ಜನಕ್ಕೆ ಏನು ಬೇಕೋ ಅದರ ಹಾಗೆ ಬದಲಾವಣೆ ಸಾಗುತ್ತೆ. ಅದನ್ನ ಕೆಲವರು ಬದಲಾಯಿಸಬೇಕು ಅಂದುಕೊಂಡರೆ ಅದೂ ಅವರ ಕೈಯಲ್ಲೆ ಇದೆ.
ಯಾರಿಗಾದ್ರು ಏನಾದ್ರು ಇಷ್ಟ ಆಗೋದಿಲ್ಲ ಅಂತಂದ್ರೆ ಅದನ್ನ ಪ್ರತಿಕ್ರಿಯೆಗಳಲ್ಲಿ ಹಾಕಬಹುದು. ಹೊಸ ಚರ್ಚೆ ಶುರು ಮಾಡಬಹುದು. ಹಲವು ರೀತಿಯಲ್ಲಿ ನಿಮ್ಮ ಅನಿಸಿಕೆಗಳನ್ನ ಹೇಳಬಹುದು, ಉಳಿದಿದ್ದು ಸಮುದಾಯಕ್ಕೆ ಬಿಟ್ಟಿದ್ದು
ಉ: ಸೊರಗುತ್ತಿರುವ ಸಂಪದ
ಗುಱುಱಾಜ
www.kannadaguru.blogspot.com
ಹಾಗೆನಿಲ್ಲ ಅನ್ಸುತ್ತೆ ಅಹ೦ಕಾರಿಯವರೇ, ಸ೦ಪದ ಎನ್ನುವುದು ಒ೦ದು ವಿಭಿನ್ನ ಅಭಿರುಚಿಗಳಿರುವ ಜನರ ದೊಡ್ಡ ಕುಟು೦ಬದ೦ತೆ.ಕೆಲವರಿಗೆ ಗ೦ಭೀರ ಚರ್ಚೆಗಳು ಇಷ್ಟವಾಗುತ್ತವೆ. ಇನ್ನು ಕೆಲವರಿಗೆ ಈ ರೀತಿಯ ಹಾಡು ಜುಗಲಬ೦ದಿಗಳ ಚರ್ಚೆಗಳು.ಎರಡೂ ತಪ್ಪಲ್ಲ. ಅಲ್ಲದೇ ಒಟ್ಟೊಟ್ಟಿಗೆ ಎಲ್ಲಾ ರೀತಿಯ ಚರ್ಚೆಗಳು ಸ೦ಪದದಲ್ಲಿ ನಡೆಯುತ್ತವೆ ಮಾತು ಸ೦ಪದಿಗರು ಎರಡೂ ರೀತಿಯ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಾರೆ(ಸ೦ಪದದಲ್ಲಿ ಕವಿತೆ,ಜುಗಲ್ ಬ೦ದಿಗಳ ಚರ್ಚೆ ನಡೆಯುತ್ತಿದ್ದಾಗಲೇ ,ಪ್ರತಾಪ ಸಿ೦ಹರ ಲೇಖನದ ಬಗ್ಗೆ ಮತ್ತು ಹಾವೇರಿಯ ರೈತನ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ) .