ಒಂದು ಡೇಟಾಬೇಸ್ ಡೌಟು - ಮೈಸೀಕ್ವೆಲ್ಲಿಗೆ ನಂಟಾದದ್ದು
ಗೆಳೆಯರೇ, ನನ್ನಲ್ಲಿ ಮೈಸೀಕ್ವೆಲ್ಲಿಗೆ ನಂಟಾದ ಒಂದು ಡೌಟಿದೆ. ತುಂಬಾ ಸರಳವಾದ ಯೂಸ್ ಕೇಸ್.
೧. ಈಗ ನೋಡಿ, ನನ್ನ ಬಳಿ ಒಂದು ಟೇಬಲ್ಲಿದೆ. ಅದರಲ್ಲಿ ಒಂದು ಡೇಟ್ ಕಾಲಮ್ಮಿದೆ (col1).
mysql> CREATE TABLE play_with_table (col1 DATE);
Query OK, 0 rows affected (0.11 sec)
೨. ಅದರಲ್ಲಿ ಒಂದು ಎಂಟ್ರಿ ಇದೆ.
mysql> INSERT INTO play_with_table values (DATE('2000-03-09'));
Query OK, 1 row affected (0.04 sec)
೩. ಈಗ ಅದಕ್ಕೆ ಮತ್ತೊಂದು ಡೇಟ್ ಕಾಲಮನ್ನು ಸೇರಿಸುತ್ತೇನೆ. (col2)
mysql> ALTER table play_with_table add column col2 DATE;
Query OK, 1 row affected (0.22 sec)
Records: 1 Duplicates: 0 Warnings: 0
೪. ಈಗ ಯೂಸೇ ಕೇಸ್ ಏನಪ್ಪಾ, ಅಂದ್ರೆ, "ಎರಡನೆಯ ಕಾಲಮ್ = ಮೊದಲನೆಯ ಕಾಲಮ್ - ೯ ತಿಂಗಳು" ಆಗಬೇಕು. ಅಂದರೆ ಮೊದಲನೆಯ ಕಾಲಮ್ಮಿನಿಂದ ೯ ತಿಂಗಳು ಕಳೆದರೆ, ಎರಡನೆಯ ಕಾಲಮ್ ಸಿಗಬೇಕು. ಇದನ್ನು MySQLನಲ್ಲಿ INTERVAL ಕನ್ಸಟ್ರಕ್ಟ್ ಬಳಸಿ ಮಾಡಬಹುದು.
mysql> update play_with_table set col2 = col1 - INTERVAL 9 MONTH;
Query OK, 1 row affected (0.02 sec)
Rows matched: 1 Changed: 1 Warnings: 0
mysql> select * from play_with_table;
+---------------+-----------------+
| col1 | col2 |
+---------------+-----------------+
| 2000-03-09 | 1999-06-09 |
+---------------+-----------------+
1 row in set (0.00 sec)
೫. ಈಗ ನನ್ನ ಡೌಟು ಏನಪ್ಪಾ ಏನಂದ್ರೆ, ಈ ೩ ಮತ್ತು ೪ನೆ ಸ್ಟೆಪ್ಪುಗಳನ್ನು ಒಂದೇ MySQL ಕಮಾಂಡಿನಲ್ಲಿ ಮಾಡಲು ಸಾಧ್ಯವೇ ? ಅಂದರೆ
ALTER table play_with_table add column col2 ಮಾಡುವಾಗಲೇ (೩ನೇ ಸ್ಟೆಪ್ಪು), col2 = col1 - INTERVAL 9 MONTH (೪ನೆಯ ಸ್ಟೆಪ್ಪು) ಎಂಬುದನ್ನೂ ಸೂಚಿಸಲು ಸಾಧ್ಯವೇ ?

- Login or register to post comments
- 340 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಒಂದು ಡೇಟಾಬೇಸ್ ಡೌಟು - ಮೈಸೀಕ್ವೆಲ್ಲಿಗೆ ನಂಟಾದದ್ದು
ನಾನು ಕೆಲವು ಪ್ರಯೋಗ ಮಾಡಿ ನೋಡಿದೆ, ಸಾದ್ಯ ಆಗಲಿಲ್ಲ. ಆದರೆ ಒಂದು ವಿಚಿತ್ರ ಇಡಿಯಾ ಬಂತು
ಟೇಬಲ್ ಆಲ್ಟರ್ ಮಾಡುವ ಬದಲು ಒಂದು view ಕ್ರಿಯೇಟ್ ಮಾಡಿದರೆ ಹೇಗೆ ಅಂತ.
ಮನೆಗೆ ಹೋಗಿ ಕೆಲವು options ನೋಡ್ತೇನೆ.
ನಿಮ್ಮವನೇ,
ಅರವಿಂದ
ಉ: ಒಂದು ಡೇಟಾಬೇಸ್ ಡೌಟು - ಮೈಸೀಕ್ವೆಲ್ಲಿಗೆ ನಂಟಾದದ್ದು
ಸುನೀಲ, ಇದನ್ನ ಹಾಗೇ ಸುಮ್ಮನೆ ಒಂದ್ಸಾರಿ ಓದಿಕೊಳ್ಳೋದಕ್ಕೇ ಸಮಯ ಹಿಡೀತು ಮಾರಾಯ!
ಅರವಿಂದ ಹೇಳಿದಂತೆ view ಪ್ರಯತ್ನಿಸಿ ನೋಡಬಹುದು.
btw, ಕ್ರಾಶ್ ಆಗಿದ್ದ ಸಿಸ್ಟಮ್ ಸರಿ ಹೋಯ್ತ? ಕೆಲಸದ ಭರದಲ್ಲಿ ಸುಮ್ಮನೆ ಉತ್ತರ ಮಾತ್ರ ಎಸ್ ಎಮ್ ಎಸ್ ಮಾಡಿದ್ದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಒಂದು ಡೇಟಾಬೇಸ್ ಡೌಟು - ಮೈಸೀಕ್ವೆಲ್ಲಿಗೆ ನಂಟಾದದ್ದು
ನಾನು ಮೈಸಿಕ್ವೆಲ್ ಬಳಸಿಲ್ಲ... ಆದರೆ SQL Server 2000 ಬಳಸೊದು. ಹೀಗೆ ಬಳಸಿ ನೋಡಿ.
ALTER TABLE play_with_table ADD col2 as [col1 - INTERVAL 9 MONTH]