ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ
ಮುಜರಾಯಿ ಇಲಾಖೆಯಿಂದ ಹೊರಡಿಸಿದ ಆದೇಶ ವಿವಾದವೆದ್ದು ಈಗ ಆದೇಶವನ್ನೇ ಹಿಂಪಡೆಯಲಾಗಿದೆ.
ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ. ಆದರೂ ಏಕೆ ವಿವಾದವೆಬ್ಬಿಸಿದರು?
ಹಿಂದೆ ರಾಜ ಮಹಾರಾಜರುಗಳ ಕಾಲದಲ್ಲಿ ಹೀಗೆಯೇ ನಡೆಸಲಾಗುತ್ತಿತ್ತು. ಈಗ ಏಕೆ ಇದಕ್ಕೆ ಗೊಣಗಾಟ?
ಮುಜರಾಯಿ ಇಲಾಖೆ ಇರುವುದೇ ದೇವಾಲಯಗಳ, ಅರ್ಚಕರ ಉಸ್ತುವಾರಿಗೆ. ಅವರವರ ನಂಬಿಕೆಯಂತೆ ಒಂದು ಸಣ್ಣ ಆದೇಶ ಹೊರಡಿಸಿದ್ದು ತಪ್ಪೇ?
- Login or register to post comments
- 622 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ
ಬೇಕಾದರೆ ಸ್ವಂತ ಖರ್ಚಿನಲ್ಲಿ ಮಾಡಿಸಿಕೊಳ್ಳಲಿ.. ಯಾರು ಬೇಡವೆನ್ನುತ್ತಾರೆ :-)
ರಾಜ ಮಹಾರಾಜರ ಕಾಲ ಬೇರೆ ಬಿಡಿ. ಆದರೆ ಪ್ರಜಾಪ್ರಭುತ್ವದಲ್ಲಿ ಹೀಗೆಲ್ಲಾ ಆದೇಶ ಹೊರಡಿಸುವುದು ನಾಚಿಕೆಗೇಡು ಬಿಡಿ !
ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ
ಎಲ್ಲಾ ಸರಿ ಯಡಿಯೂರಪ್ಪನವರ ಹೆಸರಿನಲ್ಲಿ ಪೂಜೆ ಏಕೆ
ಹಿಂದೆ ಒಬ್ಬ ರಾಜ ಎಂದರೆ ಅವನು ಮತ್ತೊಬ್ಬರಿಗೆ ಉತ್ತರಾಧಿಕಾರತ್ವವನ್ನು ಕೊಡುವ ತನಕ ರಾಜನಾಗಿಯೇ ಇರುತ್ತಿದ್ದ . ಆದ್ದರಿಂದ ಅವನು ಸರಿಯಾಗಿದ್ದರೆ ರಾಜ್ಯ ಸರಿಯಾಗಿರುತ್ತದೆ ಎಂಬ ಆಶಯವಿತ್ತು
ಆದರೆ ಈಗ ಯಾರು ಯಾವಾಗ ಮಂತ್ರಿಯಾಗಿರುತ್ತಾರೆ ಎಂಬುದೇ ಸಂಶಯ
ಮೊದಲೇ ಪ್ರತಿ ಪಕ್ಶದವರ ಕಣ್ಣು ಹದ್ದಿನಂತೆ ಸರ್ಕಾರ ತಪ್ಪು ಮಾಡುವುದೇ ಕಾಯುತ್ತಿರುತ್ತದೆ . ಇಲ್ಲದಿದ್ದರೂ ಮಾಡುವಂತೆ ಮಾಡುತ್ತದೆ
ಇನ್ನು ಈ ರೀತಿಯ ಪ್ರಸಂಗ ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗುವುದಂತೂ ಖಂಡಿತಾ
http://thereda-mana....
ರೂಪ
ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ
"ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ"
ಪ್ರಶ್ನೆ ಲಕ್ಷಾಂತರ ರೂಪಾಯಿದೊ ಅಥವಾ ೧೦೦ ರುಪಾಯಿದೊ ಅಲ್ಲ, ಜನ ಕಟ್ಟೊ ತೆರಿಗೆನ ಪೂಜೆ ಮೇಲೆ ಖರ್ಚು ಮಾಡೊಕೆ ಅವ್ರಿಗೆ ಯಾರು ಒಪ್ಪಿಗೆ ಕೊಟ್ಟಿದ್ದು, ಅದು ಮುಖ್ಯಮಂತ್ರಿ ಹೆಸರಲ್ಲಿ. ಜನರ ನಂಬಿಕೆಗೆ ಬೆಲೆ ಕೊಡೋದು ಸರ್ಕಾರದ ಕರ್ತವ್ಯ (ಅದು ಯಾವುದೆ ರೀತೀಯ ಧಾರ್ಮಿಕ ಆಚರಣೆಗೆ ಅನುದಾನ ಕೊಡೋದೋ ಅಥವ ಪ್ರಾರ್ಥನಾ ಸ್ಥಳಗಳಿಗೆ ವ್ಯವಸ್ಥೆ ಮಾಡೋದು ಆಗಿರಬಹುದು) ಆದರೆ ಯಾವಾಗ ಸರ್ಕಾರ ಎಲ್ಲಾ ದೇವಸ್ಥಾನಗಳಲ್ಲಿ ಒಬ್ಬನ ಹೆಸ್ರಲ್ಲಿ ಪೂಜೆ ಮಾಡಿ ಅಂತೆಲ್ಲಾ ಹೇಳುತ್ತೊ ಆವಾಗ ಅದು ಅತಿ ಆಯ್ತು ಅನ್ಸುತ್ತೆ.
ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ
ರಾಜಮಹಾರಾಜರಿಗೂ ಪ್ರಜಾಪ್ರತಿನಿಧಿಗಳಿಗೂ ವ್ಯತ್ಯಾಸ ಬೇಡ್ವಾ ಸಾರ್?? ಜನ ತೆರಿಗೆ ಕಟ್ಟೋದು ಇವತ್ತು ಬಂದು ನಾಳೆ ಹೋಗೋ ಮಂತ್ರಿಗಳ ಭವ್ಯಭವಿಷ್ಯಕ್ಕಾ?! ಸಾರ್ವಜನಿಕ ಹಣವನ್ನ ವ್ಯಕ್ತಿಯೊಬ್ಬನ ಹೆಸರಲ್ಲಿ ಪೂಜೆ ಮಾಡಿಸೋಕೆ ಹೇಗೆ ಖರ್ಚು ಮಾಡ್ತರೆ? ಇದು ಹಣದ ಮೊತ್ತದ ಪ್ರಶ್ನೆಯೇ ಅಲ್ಲ. ಲಕ್ಷನೋ ನೂರೋ ಹತ್ತೋ... ಆ ಧೋರಣೆ ಸರಿಯಿಲ್ಲ.
ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ
ತಪ್ಪೇ!
>> ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ.
ಒನ್ದು ತೆಂಗಿನಕಾಯಿ, ಬಾಳೆಹಣ್ಣು ಎಲ್ಲ ಸೇರಿ 10 ರೂಪಾಯಿ ಅಂತ ಇಟ್ಟುಕೊಂಡರೂ...ಸರಿ ಸುಮಾರು 200 ದೇಗುಲಗಳು ಇವೆ ಮುಜರಾಯಿ ಇಲಾಖೇಲಿ ನನಗೆ ತಿಳಿದ ಪ್ರಕಾರ, 365 ದಿನ ಪೂಜೆ ಮಾಡಿದರೆ ಎಷ್ಟಾಯ್ತು ಸಾರ್?
10*200*365 = ಸುಮಾರು ಏಳೂವರೆ ಲಕ್ಷ!!!
ಅಂದ ಹಾಗೆ, ರಾಜ್ಯದ ಜನರ ಹೆಸರಲ್ಲಿ ಈಗಾಗಲೆ ನಿತ್ಯ ಪೂಜೆ ನಡೆಯುತ್ತಿದೆಯಂತೆ...ತಿಳಿದೇ ಇರಲಿಲ್ಲ!
--ಶ್ರೀ