ಎಣ್ಮಯ ಎಂದರೆ ಯಾರು

ನೆನ್ನೆ ಚಂದನದಲ್ಲಿ ಥಟ್ಟಂತ ಹೇಳಿ ಕಾರ್ಯಕ್ರಮ ಬರುತ್ತಿತು
ಅಲ್ಲಿ ಒಂದು
ಎಣ್ಮಯ ಎಂಬ ಮಾತಿತ್ತು
ನಂತರ ನಿರೂಪಕರು
ಎಣ್ಮಯ ಎಂದರೆ
ಶಿವನ ಹೆಸರು
ಎಂಟು ಮೈಯ್ಯುಳ್ಳವನು ಎಂದು ವಿವರಿಸಿದರು
ಶಿವನಿಗೆ ಎಂಟು ಮೈ ಎಂಬ ಕಲ್ಪನೆಯೇ ನನ್ಗೆ ಹೊಸದು

ತಿಳಿದವರು ಹಿನ್ನೆಲೆ ವಿವರಿಸುವಿರಾ

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಎಣ್ಮಯ ಎಂದರೆ ಯಾರು

mahesha's picture

ಎಣ್ + ಮಯ್ಯ( ಮಯ್‌ಯವನು )= ಎಣ್ಮಯ್ಯ.

ಎಣ್ ಇದು ಎಂಟು ಎಂದು ಹೇಳಲಿರುವ ಮುನ್ನೊಟ್ಟು/prefix

ಎಣ್ + ಪರು = ಎಣ್ಬರು ( ಎಂಟು ಜನ)
ಎಣ್ + ದಿಸೆ => ಎಣ್ದಿಸೆ ( ಎಂಟು ದಿಕ್ಕುಗಳು )

ಎಣ್ಮಯ್ಯ = ಎಂಟು ಮಯ್ಯಿಗಳನ್ನು ಹೊಂದಿರುವವನು = ಶಿವ

ಇನ್ನು ಶಿವ ಎಂಟು ಮಯ್ಯಿಗಳ ಬಗ್ಗೆ ತಿಳಿಯಲು ನಾವು ’ಅಬಿಜ್ನಾನ ಶಾಕುಂತಲ’ ಎಂಬ ಕಾಳಿದಾಸ ಸಂಸ್ಕ್ರುತ ನಾಟಕದ ನಾಂದಿ( ಸುರುವಿನ ಹಾಡು)ಅನ್ನು ಆರಯಬೇಕು.
ಅಲ್ಲಿ ಈ ಎಂಟು ಮಯ್ಯಿಗಳ ಸಂಗತಿ ಬರುವುದು.

ನನ್ನ ಒಂದು ಸಿಕ್ಕಾಪಟ್ಟೆ ಹಳೆಯ ಬ್ಲಾಗಲ್ಲಿ ನೋಡಿ.
http://mahesh-bogadi...

ಅಭಿಜ್ಞಾನ ಶಾಕುಂತಲ ನಾಟಕದ ನಾಂದಿ

ಯಾ ಸೃಷ್ಟಿಃ ಸ್ರಷ್ಟುರಾದ್ಯಾ ವಹತಿ ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ
ಯೇ ದ್ವೇ ಕಾಲಂ ವಿಧತ್ತಃ ಶ್ರುತಿವಿಷಯಗುಣಾ ಯಾ ಸ್ಧಿತಾ ವ್ಯಾಪ್ಯ ವಿಶ್ವಂ|
ಯಾಂ ಆಹುಃ ಸರ್ವಬೀಜಪ್ರಕೃತಿರಿತಿ ಯಯಾ ಪ್ರಾಣಿನಃ ಪ್ರಾಣವಂತಃ
ಪ್ರತ್ಯಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ||

೧)
ಯಾ = ಯಾವ
ಸೃಷ್ಟಿಃ = ಸೃಷ್ಡಿಯು
ಸ್ರಷ್ಟುಃ = ಸೃಷ್ಟಿಕರ್ತನಿಂದ
ಆದ್ಯಾ = ಮೊದಲನೆಯದು, ಆದಿಯದು

ಮೊದಲ ಸೃಷ್ಟಿಯು ನೀರೆಂದು ನಂಬಿಕೆ.

೨)
ವಹತಿ = ಒಯ್ಯುವುದು
ವಿಧಿಹುತಂ = ಯಜ್ಞಯಾಗಾದಿಗಳಲ್ಲಿ ಆಹುತಿಮಾಡಿದ್ದನ್ನು
ಯಾ = ಯಾವುದು
ಹವಿಃ = ಹವಿಸ್ಸು
ಚ = ಮತ್ತು
ಆಹುತಿಯನ್ನು ಒಯ್ಯುವುದು ಅಗ್ನಿ(ಬೆಂಕಿ)

೩)
ಹೋತ್ರಿ = ಯಜ್ಞವನ್ನು ಮಾಡಿಸುವವನು.

೪)೫)
ಯೇ = ಯಾವೆರಡು,
ದ್ವೇ = ಎರಡು
ಕಾಲಂ = ಕಾಲವನ್ನು
ವಿಧತ್ತಃ = ವಿಭಾಗಿಸಿತು.

ಕಾಲವನ್ನು ಎರಡುಭಾಗವಾಗಿ(ಹಗಲು, ಇರುಳು) ವಿಭಾಗಿಸುವುವು ಸೂರ್ಯ, ಚಂದ್ರ.

೬)
ಶ್ರುತಿವಿಷಯಗುಣಾ = ಶಬ್ದಕ್ಕೆ ಕಾರಣವಾದ ಗುಣ
ಯಾ = ಯಾವುದು
ಸ್ಧಿತಾ = ನೆಲೆಸಿರುವುದು
ವ್ಯಾಪ್ಯ = ಆವರಿಸಿ
ವಿಶ್ವಂ = ಜಗತ್ತನ್ನು, ಎಲ್ಲ ದಿಕ್ಕುಗಳಿಂದ

ಶಬ್ದಕ್ಕೆ ಕಾರಣವಾದದ್ದು ಆಕಾಶ.

೭)
ಯಾಂ = ಯಾರನ್ನು, ಯಾವಳನ್ನು
ಆಹುಃ = ಹೇಳುವರು
ಸರ್ವಬೀಜಪ್ರಕೃತಿಃ = ಎಲ್ಲ ಬೀಜಗಳಿಗೆ ಪ್ರಕೃತಿ, ಎಲ್ಲಿ ಜೀವಿಗಳ ಬೀಜಗಳು ಸಂಭವಿಸುವುವು
ಇತಿ = ಎಂದು

ಎಲ್ಲ ಬೀಜಗಳ ಮೊಳಕೆಗೆ ಕಾಣವಾದದ್ದು ಭೂಮಿ(ನೆಲ).

೮)
ಯಯಾ = ಯಾರಿಂದ, ಯಾವಳಿಂದ
ಪ್ರಾಣಿನಃ = ಪ್ರಾಣಿಗಳು, ಉಸಿರಾಡುವೆಲ್ಲ ಜೀವಿಗಳು, ಗಾಳಿಯಿಂದ ಬದುಕುವ ಜೀವಿಗಳು
ಪ್ರಾಣವಂತಃ = ಪ್ರಾಣವುಳ್ಳವಾಗಿವೆ, ಉಸಿರಾಡುತ್ತಿವೆ

ಉಸಿರಾಟಕ್ಕೆ ಕಾರಣ ಗಾಳಿ.

ಪ್ರತ್ಯಕ್ಷಾಭಿಃ = ಪ್ರತ್ಯಕ್ಷವಾದ, ಇಂದ್ರಿಯಗಳಿಂದ ಗ್ರಾಹ್ಯವಾದ
ಪ್ರಪನ್ನಃ = ಹೊಂದಿರುವವನು
ತನುಭಿಃ = ದೇಹಗಳಿಂದ, ಮೈಗಳಿಂದ,
ಅವತು = ರಕ್ಷಿಸಲಿ, ಕಾಪಾಡಲಿ
ವಃ = ಅವನು, ಆತ
ತಾಭಿಃ = ಅವುಗಳಿಂದ
ಅಷ್ಟಾಭಿಃ = ಎಂಟುಗಳಿಂದ
ಈಶಃ = ಶಿವನು, ಈಶ್ವರನು, ಒಡೆಯನು

ಸಮಗ್ರಾರ್ಥ:

(ಶಿವ)ಈಶ್ವರನಿಗೆ ಒಟ್ಟು ಎಂಟು ಮೈಗಳಿವೆ. ಅವು
೧)ಜಗತ್ತಿನಲ್ಲಿ ಮೊದಲಿಗೆ ಸೃಷ್ಟಿಯಾದ ನೀರು,
೨)ಹವಿಸ್ಸನ್ನು ಒಯ್ಯುವ ಅಗ್ನಿ
೩)ಯಜ್ಞವನ್ನು ಮಾಡಿಸುವವನು,(ಹೋತ್ರಿ)
೪)ಕಾಲವನ್ನು ಹಗಲು, ಇರುಳೆಂದು ಬೇರೆ ಮಾಡುವ ನೇಸರ,
೫)ಮತ್ತು ತಿಂಗಳು(ಚಂದ್ರ).
೬)ಶಬ್ದಕ್ಕೆ ಕಾರಣವಾದ ಆಕಾಶ(ಆಗಸ)
೭)ಎಲ್ಲ ಜೀವಿಗಳು ಹುಟ್ಟಿ, ಬೆಳೆಯಲು ಮೂಲಕಾರಣವಾದ ಭೂಮಿ(ನೆಲ).
೮)ಎಲ್ಲ ಪ್ರಾಣಿಗಳು ಉಸಿರಾಡಲು ಬೇಕಾದ ಗಾಳಿ.

ಈ ಎಂಟು ಮೈಗಳಿಂದ, ಶಿವನು ನಮ್ಮನ್ನು ಕಾಪಾಡಲಿ.
=====================================
ಮಾಯ್ಸ!

ಉ: ಎಣ್ಮಯ ಎಂದರೆ ಯಾರು

ವೈಭವ's picture

ಸಕ್ಕತ್,
ಹಿಂದೊಮ್ಮೆ 'ಮಹಾಕಾಯ' ಎನ್ನುವುದನ್ನ ನಾನು ದೊಡ್ಡಮಯ್ಯ ಅಂತ ಕನ್ನಡಯ್ಸಿದ್ದೆ.

ಎಣ್ಮಯ(ಯ್ಯ)ನ ಮಗ ದೊಡ್ಡಮಯ್ಯ :)
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಉ: ಎಣ್ಮಯ ಎಂದರೆ ಯಾರು

Sunil Jayaprakash's picture

ಮಹೇಶನ ವಿವರಣೆ ತುಂಬಾ ಚೆನ್ನಾಗಿದೆ. ಅದಕ್ಕಾಗಿ ನನ್ನಿಗಳು.

ಹಾಗೆಯೇ, ನಂನ ಮತ್ತೊಬ್ಬ ಪಿರೆಂಡಿನ ಊರಲ್ಲಿ, 'ಹ'-'ಅ'ಗೂ 'ಹೆ'-'ಎ'-'ಯೆ'ಗೂ ಯತ್ವಾಸ ಇಲ್ವಂತೆ. ಗುಟ್ಟಾಗಿ ಹೇಳಿದ, ಎಣ್ಮಯ - ಹೆಣ್ಮಯ - ಪ್ರಕೃತಿ.