ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಮೊನ್ನೆ ಯಾವುದೋ ದೆವ್ವದ ಕನ್ನಡ ಫಿಲ್ಮ ಟಿ.ವಿ.ಲಿ ಬರ್ತಿತ್ತು
ಯಾವ ಸಿನಿಮಾ ಅಂತ ಗೊತ್ತಿಲ್ಲ ಯಾರು ಮಾಡಿದ್ರು ಹೇಗಿತ್ತು ಅನ್ನೊದನ್ನ ಹೇಳ್ದೆ ಇರೋದೆ ವಾಸಿ ಅಷ್ಟು ಕೆಟ್ಟದಿತ್ತು
ಆದ್ರೆ ನನ್ನ ಕುತೂಹಲ ಕೆರಳಿಸಿದ್ದು ಒಂದು ಅಂಶ
ಒಂದೆಡೆ ಬಿಳಿಸೀರೆ ಉಟ್ಟ ಹೆಣ್ಣು ನಾನು ಆತ್ಮ ಅಂತಾಳೆ
ಇನ್ನೊಂದೆಡೆ ಜೇನ್ಸ್ ತೊಟ್ಟ ಅದೇ ಹೆಣ್ಣು ನಾನು ಭೂತ
ಒಂದೆ ವ್ಯಕ್ತಿಯ ಆತ್ಮ್ನ ಮತ್ತು ಭೂತ ಒಂದೆಡೆ ನಿಂತಿರುತ್ತದೆ
ಭೂತ, ಆತ್ಮ ಇದೆಯಾ ಇಲ್ಲಾವಾ ಅನ್ನೊಡು ಇಲ್ಲಿ ಪ್ರಸ್ತುತವಲ್ಲ
ಅವುಗಳ ವ್ಯತ್ಯಾಸವನ್ನು ಜನ ಏನೆಂದು ಅರ್ಥೈಸಿಕೊಂಡಿದ್ದಾರೆ ಅನ್ನುವ ಉತ್ತರ ಬೇಕು

- Login or register to post comments
- 371 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಒಂದನ್ನು ಸರಿ ಅಂತ ಒಪ್ಪಿಕೊಳ್ಳುವುದೇ ಕಷ್ಟ ಆಗಿದೆ. ಮತ್ತೆ ಎರಡೆರಡಾ ??
(ಗರುಡ ಪುರಾಣದಲ್ಲಿ ಓದಿದ ನೆನಪು)
)
ಜೀವ ಹೋದ ತಕ್ಷಣ ಆತ್ಮ ಸೂಕ್ಷ್ಮ ಶರೀದಲ್ಲಿ ಇರುತ್ತದೆ. ಈ ಸೂಕ್ಶ್ಮ ಶರೀರಕ್ಕೆ ತನ್ನ ಹಳೆಯ ದೇಹದ ಆಕಾರ ಇರುತ್ತದೆ ಆದರೆ ದೇಹದ ಕಟ್ಟುಪಾಡು, ನ್ಯೂನ್ಯತೆಗಳು ಇರುವುದಿಲ್ಲ.
( ನಿಜ ಜೀವನದಲ್ಲಿ ಯಾರಾದರೂ ಕುಂಟುತ್ತಿದ್ದರೆ ಅವರ ಆತ್ಮ ಕುಂಟುವುದಿಲ್ಲ.
ಬಹಳ ಅಸೆಗಳನ್ನಿಟ್ಟುಕೊಂಡ ಪ್ರಾಣಿ ಸತ್ತಾಗ ಅದು ಬಹಳ ಕಾಲ ತನ್ನ ಸತ್ತ ದೇಹದ ಸುತ್ತಲೂ ಇರಲು ಬಯಸುತ್ತದೆ. ನಂತರ ಎಲ್ಲಾ ಆತ್ಮಗಳೂ ಕೆಲಕಾಲದ ನಿದ್ರೆಗೆ ಹೋಗಬೇಕು. ಹಾಗೆ ಬೇಗ ಹೋಗಲಾರದವು ನೀರಿರುವ ಪ್ರದೇಶ, ಆಲದ ಮರ , ಸತ್ತ ನೆಂಟರ ಸಮಾಧಿ ಬಳಿ ಸುತ್ತುತಿರುತ್ತವೆ.
ಒಟ್ಟಿನಲ್ಲಿ ಇರುವುದು ಒಂದೇ. ಆತ್ಮ ಅಥವಾ ಭೂತ. ಎರಡೆರಡು ಆಗಲು ಸಾದ್ಯವಿಲ್ಲ.
ಅಥವಾ ಯಾವುದೂ ಸರಿಯಲ್ಲ. ಎಲ್ಲ ನಮ್ಮ ಕಲ್ಪನೆ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಆದರೆ ನನ್ನ ಪ್ರಶ್ನೆಗೆ ಉತ್ತರ ಆಗಲಿಲ್ಲ
http://thereda-mana.blogspot.com/
ರೂಪ
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಅರ್ಥ ಮಾಡಿಕೊಳ್ಳುವುದು ಅವರವರ ನಿಲುವಿಗೆ ಬಿಟ್ಟದ್ದು.
ಆತ್ಮ : ಭೂತ :: ಹುಚ್ಚು : ಶಿವಲೀಲೆ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಸುಮ್ಮನೆ ಕಾಲಯಾಪನೆಗೆಂದು ಕೇಳಿದ್ದೋ? ನಿಜಕ್ಕೂ ತಿಳಿಯಲು ಯತ್ನಿಸಿದ್ದೋ?
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಓಹೋ ತಮಗೆ ನಾವು ಪ್ರಶ್ನೆ ಕೇಳಿದರೆ ಕಾಲ ಯಾಪನೆ ಅನ್ನಿಸುತ್ತದೆಯೋ?
ನಮಗೆ ಕಾಲ ಯಾಪನೆ ಮಾಡುವಷ್ಟು ಕಾಲವಿಲ್ಲ
ಕುತೂಹಲಕ್ಕೆ ಕೇಳಿದೆ
ಆಷ್ಟೇ
http://thereda-mana.blogspot.com/
ರೂಪ
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಗುಱುಱಾಜ
www.kannadaguru.blogspot.com
ಬಿಳಿ ಸೀರೆ ಉಟ್ಟು ಕೊ೦ಡು ಹೋದರೆ ಅದು ಆತ್ಮ
ಅದೇ ಕೋರೆ ಹಲ್ಲು ಗಳನ್ನು ಬಿಟ್ಟುಕೊ೦ಡು ವಿಕಾರವಾಗಿದ್ದರೆ ಅದು ಭೂತ
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಇದು ಭೌತಿಕ ವರ್ಣನೆ ಯಾಯಿತು
ನನಗೆ ಅಸ್ತಿತ್ವದ ವಿವರಣೆ ಬೇಕು
http://thereda-mana.blogspot.com/
ರೂಪ
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಗುಱುಱಾಜ
www.kannadaguru.blogspot.com
ಅಸ್ತಿತ್ವದ ವರ್ಣನೆಯೇ...? ಇದು ಸ್ವಲ್ಪ ವಿಚಿತ್ರ ಪ್ರಶ್ನೆ, ಆದರೂ ಹೇಳುತ್ತೇನೆ ಕೇಳಿ.ಆತ್ಮವೆ೦ದರೇ ಒಳ್ಳೆಯದು ಭೂತವೆ೦ದರೆ ವಿಲನ್
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಐಕ, ಒಳ್ಳೆ ಟಾಪಿಕ್...!
ಸಿಂಗಲ್ ಲೈನ್ ಉತ್ತರ ಕೊಡ್ಬೇಕು ಅಂದ್ರೆ,
ಆತ್ಮದ ಮಾತು ಮನುಷ್ಯನ ಅಂತರಂಗದಿಂದ ಹೊರ ಬಂದು ಮೊದಲು ಮನಸಿಗೆ ಮುಟ್ಟಿ ನಂತರ ಕಿವಿಗೆ ಕೇಳಿಸುತ್ತದೆ.
ಆದರೆ ರಿನ್ ಸೋಪ್ ನಲ್ಲಿ ಒಗೆದಿರೊ ಬಿಳಿ ಸೀರೆ ಉಟ್ಟ ಹೆಣ್ಣು ದೆವ್ವದ ಮಾತುಗಳು ಮೊದಲು ಕಿವಿಯನ್ನು ಮುಟ್ಟಿ, ಮುಖದಲ್ಲಿ ಬೆವರು ಇಳಿಸಿ ನಂತರ ಮನಸಿಗೆ ಗಾಬರಿ ತರುತ್ತದೆ..!
ಸರಿನ ?
-ಯುವಪ್ರೇಮಿ