ಮಂಜುಗುಣಿಪುರವಾಸ ಯಾರು?
ವಾದಿರಾಜರ ಒಂದು ದೇವರನಾಮದಲ್ಲಿ ಹೀಗೆ ಬರುತ್ತೆ:
ಮನ್ನಿಸೋ ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ
ಇಲ್ಲಿ ಶ್ರೀ ವೆಂಕಟೇಶನು ಮಂಜುಗುಣಿಪುರವಾಸನಾದ ಇನ್ನಾರೋ ದೇವರಿಂದಲೂ (ಶಿವನಿರಬಹುದು ಅನ್ನುವುದು ನನ್ನ ಊಹೆ ಸ್ತುತಿಸಲ್ಪಟ್ಟವನು ಎಂದು ವರ್ಣಿಸಲಾಗಿದೆ.
ಈ ಮಂಜುಗುಣಿಪುರ ಎಲ್ಲಿದೆ? ಅಥವಾ ಇನ್ನಾವುದೋ ಊರಿಗೆ ಇರುವ ಎರಡನೇ ಹೆಸರೇ ಇದು?
ಅರಿತವರು ದಯವಿಟ್ಟು ತಿಳಿಸಿ.
-ಹಂಸಾನಂದಿ

- Login or register to post comments
- 470 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಮಂಜುಗುಣಿಪುರವಾಸ ಯಾರು?
ಮಂಜುಗುಣಿ ಶಿರ್ಸಿಯಿಂದ ೩೦ ಕಿ ಮಿ ಇರಬಹುದು. ಅಲ್ಲೊಂದು ಪುರಾತನ ವೆಂಕಟೇಶನ ದೇವಸ್ಥಾನವಿದೆ. ವಾದಿರಾಜರ ಸೋದೆ ಅಲ್ಲಿಂದ ತುಂಬ ದೂರವೇನಿಲ್ಲ.
ಕೇಶವ
Visit my blog:
http://kannada-nudi.blogspot.com
ಉ: ಮಂಜುಗುಣಿಪುರವಾಸ ಯಾರು?
ಕೇಶವ ಅವರೆ,
ನಿಮ್ಮ ಉತ್ತರಕ್ಕೆ ಧನ್ಯವಾದಗಳು.
ಹಾಗಾದರೆ, ಮಂಜುಗುಣಿಪುರವಾಸ ಸನ್ನುತ ಅನ್ನುವುದನ್ನು ಅರ್ಥೈಸುವುದು ಸ್ವಲ್ಪ ತೊಡಕೇ ಆಗುತ್ತೆ. (ಏಕೆಂದರೆ, ವೆಂಕಟೇಶನೇ ವೆಂಕಟೇಶನಿಗೆ ನಮಿಸುವದು ಸರಿಯಿಲ್ಲವಲ್ಲ?). ನಾನು ಕೊಟ್ಟ ಸಾಲಿನಲ್ಲಿದ್ದ ಸನ್ನುತ ಅನ್ನುವ ಪದ ತಪ್ಪಿತ್ತೋ ಏನೋ...
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಮಂಜುಗುಣಿಪುರವಾಸ ಯಾರು?
ಇದನ್ನು ಬರೆದವರು ವಾದಿರಾಜರೋ ಅಥವಾ ಇನ್ನಾರೊ ಕವಿಯಿರಬಹುದು. ಅವರು ಮಂಜುಗುಣಿಯಲ್ಲಿ ವಾಸಮಾದಿಕೊಂಡಾಗ ಅಲ್ಲಿನ ವೆಂಕಟೇಶನನ್ನು ಸ್ತುತಿಸಿರಬಾರದೇಕೆ?
ಉ: ಮಂಜುಗುಣಿಪುರವಾಸ ಯಾರು?
ಹಂಸಾನಂದಿಗಳೇ,
ವಾದಿರಾಜರು ಸನ್ನುತ ಅಂದರೆ, ಶ್ಲಾಘ್ಯನಾದವನೇ ಅಂತ ಬಳಸಿರಬಹುದೇ? ಆಗ ವೇಂಕಟೇಶ ಮಂಜುಗುಣಿಪುರವಾಸನೆ, ಸನ್ನುತನೆ, ಸದ್ಗುಣಪೂರ್ಣ, ಸುಪ್ರಸನ್ನ, ಹಯವದನ ಮನ್ನಿಸೋ ಅಂತಾಗುತ್ತದಲ್ಲವೆ?
ಅನಿಲ
ಉ: ಮಂಜುಗುಣಿಪುರವಾಸ ಯಾರು?
ಮನ್ನಿಸೋ ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ
ಇಲ್ಲಿ ಶ್ರೀವೆಂಕಟೇಶ ಮಂಜುಗುಣಿಪುರವಾಸಸನ್ನುತ ಎಂದಿದ್ದರೆ ಮಂಜುಗುಣಿಪುರವಾಸಿಯಾದ ವಾದಿರಾಜರಿಂದ ಚೆನ್ನಾಗಿ ಸ್ತುತಿಸಲ್ಪಟ್ಟ ಎಂದು ಅರ್ಥೈಸಬಹುದು. ಅಥವಾ ಮಂಜುಗುಣಿಪುರವಾಸ ಸನ್ನುತ ಎಂದು ಬಿಡಿಬಿಡಿಯಾಗಿದ್ದರೆ ಅನಿಲ್ ಹೇೞುವಂತೆ ಮಂಜುಗುಣಿಪುರವಾಸಿಯಾದ ಶ್ರೀವೆಂಕಟೇಶ (ಎಲ್ಲರಿಂದ) ಚೆನ್ನಾಗಿ ಸ್ತುತ್ಯನಾದ ಸದ್ಗುಣಗಳಿಂದ ಕೂಡಿದ ಸುಪ್ರಸಾದವನ್ನು ತೋಱುವ ಹಯವದನ ಮನ್ನಿಸೋ ಎಂದು ಅರ್ಥೈಸಬಹುದು.
ಉ: ಮಂಜುಗುಣಿಪುರವಾಸ ಯಾರು?
"ಮನ್ನಿಸೋ ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ"
ಇದು ನಿಜಕ್ಕೂ ವಾದಿರಾಜರವರೆ ಮಂಜುಗುಣಿಯಲ್ಲಿ ವಾಸವಾಗಿದ್ದು ಆಗ ಬರೆದದ್ದೆಂಬುದಱಲ್ಲಿ ಸಂಶಯವೇ ಇಲ್ಲ. ಅವರ ಎಲ್ಲಾ ಕೀರ್ತನೆಗಳು ಅವರ ಇಷ್ಟ ದೇವರಾದ ಹಯಗ್ರೀವನ (ವಿಷ್ಣುವಿನ ಒಂದು ರೂಪ) "ಹಯವದನ" ಎಂಬ ಅಂಕಿತದಲ್ಲಿ ಪೂರ್ಣವಾಗುತ್ತವೆ.