ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!
ಇಲ್ಲಿ ಕೆಲವರು ’ಇದಂನು’ ’ಹೀಗೆ’ ಉಲಿಯಬೋದು, ಹಾಗೆ ಉಲಿಯಬೇಕು, ಅಂತೆಲ್ಲ ಹೇಳ್ತಾ ಇದ್ದಾರೆ.. ಇಲ್ಲಿ ’ಬಹುದು/ಬೇಕು’ವಿನ ಗೊಡವೆ ಏಳೋದೇ ಇಲ್ಲ.
ಆದರೆ ನಾವು ಬರೆದಂತೇ ಉಲಿಯಬೇಕು ಅಂನೋ ಮಾತು ಸರಿಯಲ್ಲ, ಜೊತೆಗೆ ಬರೆದುದನಂನೆಲ್ಲ ೧೦೦% ತಿಳಿಯಾಗಿ ಸ್ಪಶ್ಟವಾಗಿ ಉಲಿಯಲು ೯೯.೯೯೯೯೯೯೯% ಮಂದಿಗೆ ಆಗುವುದೂ ಇಲ್ಲ ( ಶಂಕರಬಟ್ಟರ ಮಾತಲ್ಲಿ ಹೇಳೋದಾದರೆ, ಕೆಲವರು ತಾವು ಸಕ್ಕತ್ತಾಗಿ ಉಲೀತೀವಿ ಎಂದು ಅಂದುಕೊಂಡರೂ ಅವರ ನಾಲಗೆ ಉಲಿಯಲಾರದು.. ಎಂತ ದೊಡ್ಡ ಬಾಶಾಪಂಡಿತನೂ ’ಬಂದಳು’ ಅನ್ನು ಒಂದು ಸರತಿಯಾದು ’ಬಂದ್ಲು’ ಎಂದೇ ಎಂದಿರ್ತಾನೆ, ಸ್ವಲ್ಪವನ್ನು ಸೊಲ್ವ ಎಂದು ಹೇಳೇ ಹೇಳಿರ್ತಾನೆ )
ಸಂಗತಿ ಹೀಗಿರುವಾಗ...
ಬರವಣಿಗೆ ಸಂಗತಿಯ ಹುರುಳು, ತಿರುಳು ಹೇಳಿದರೆ ಸಾಕು ಹೊರತು, ಅದು ನಂಮ ಉಲಿಕೆ/pronunciation ಅಂನೂ ಹೇಳಬೇಕಾಗಿಲ್ಲ, ಅದು ನಂಮ ಉಲಿಕೆಯಂನು ಒಂದು ಕಟ್ಟುಪಾಡಿಗೆ ಸಿಕ್ಕಿಸಬೇಕಾಗಿಲ್ಲ.
ಮಾದರಿ:
"ವಿಶೇಷವಾಗಿ ಒಂದು ಪ್ರಶ್ನೆಗೆ ಹಲವಾರು ಉತ್ತರಗಳಿರಬಹುದು"
"ವಿಶೇಶವಾಗಿ ಒಂದ್ ಪ್ರೆಶ್ಣೆಗೆ ಹಲವಾರ್ ಉತ್ರಗಳಿರ್ಬೋದು"
"ವಿಸೇಸವಾಗಿ ಒಂದ್ ಪಸ್ನೆಗೆ ಹಲವಾರ್ ಉತ್ರಗೊಳಿಬೋದು"
ಕಂನಡದಲ್ಲಿ ದಿನದಿನ ಜಂಬಾರ ನಡೆಸುವವರಿಗೆ, ಮೇಲಿನ ಮೂರು ಸಾಲುಗಳು ಸಂಗತಿ ಏನೆಂದು ಹೇಳೇ ಹೇಳಿವೆ.. ಈ ಮೂರು ಸಾಲಲ್ಲಿ ಯಾವುದೇ ಒಂದನ್ನು ಬಂದು ಒಬ್ಬರು ನಂಮ ಬಳಿ ಉಲಿದರೂ, ಸಂಗತಿ ಏನೆಂದು ತಿಳಿಯುವುದು....
ಆದರೆ...
ನಂಮ ಉಲಿಕೆಯನ್ನು ನಿರ್ದರಿಸುವಂತದ್ದು/ತೀರ್ಮಾನಿಸುವಂತದ್ದು/ಇಂತೇ ಎಂದು ಹೇಳುವಂತದ್ದು ನಮ್ಮ ಬುಡಕಟ್ಟಿನ ಉಲಿಕೆಯ ಬಗೆ/Ethical phonology. ಕಂನಡಕ್ಕೆ ಕಂನಡ ಬುಡಕಟ್ಟಿನ/ಜನಾಂಗದ ಉಲಿಕೆಬಗೆ, ತಮಿಳಿಗೆ ಅವರದ್ದು..
ತಂಮ ಉಲಿಕೆಬಗೆಯಲ್ಲಿ ಇಲ್ಲದ ಸದ್ದುಗಳಂನು ಆ ಬುಡಕಟ್ಟಿನ ಮಂದಿ ಉಲಿಯದಿದ್ದರೆ ಅದು ಯಾವ ತಪ್ಪು ಕೂಡ ಅಲ್ಲ... ಆದರೆ ಒಂದು ಬುಡಕಟ್ಟಿನ ಉಲಿಕೆಬಗೆಯಲ್ಲಿ ಇಲ್ಲದ ಸದ್ದುಗಳಂನು ಉಲಿಸುವುದು/ಪಾಠ ಹೇಳಿ ಉಲಿಸುವದು, ಸಹಜವಲ್ಲದ, ಹೇರಿಕೆಯ, ಮತ್ತು ಗೋಜಲಿನ ಸಂಗತಿ. ಮತ್ತು ಅದು ಪೂರ್ತಿ ಮಾಡಲಾರದ್ದು ಕೂಡ.
ಇಂದು ನಂಮ ಕಲಿಕೆಯ ಪದ್ದತಿಯಲ್ಲಿ ಇದೇ ತಪ್ಪು ಇರುವುದು.
ಒಬ್ಬ ಹುಟ್ಟುಗಂನಡಿಗ, ತಾಯ್ನುಡಿಕಂನಡಿಗ, ಕಂನಡ ಬಿಟ್ಟು ಬೇಱೆ ನುಡಿಯ ಗಾಳಿಯೂ ಸೊಂಕದಾತ ಎಂದೂ ೧೦೦% ಸರಿಯಾದ ಕಂನಡವಂನೇ ಮಾತಾಡುವುದು.. ಆದರೆ ನಂಮ ಕಲಿಕೆ ಅಂತಹ ಕಂನಡವಂನು ಅಶಿಶ್ಟ ಮತ್ತು ತಪ್ಪು ಎಂದು ಕರೆಯುವುದು.. ಇದು ಸರಿಯಲ್ಲ.!!
ನಂನಿ!

- Login or register to post comments
- 247 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!
ಮತ್ತದೇ ರಾಗ, ಮತ್ತದೇ ಹಾಡು...
ಉ: ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!
ಕನ್ನಡಿಗರ ಉಲಿಕೆ ಬಗ್ಗೆ ತಿಳಿಯಲು ಶಂಕರ ಬಟ್ಟರ ’ಕನ್ನಡ ನುಡಿ ನಡೆದು ಬಂದ ದಾರಿ’ ಓದಿರಿ.
=====================================
ಮಾಯ್ಸ!
ಉ: ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!
ಸರಿ.. ನೆರವಾಯಿತು.. ಅರಿವಾಯಿತು ನಿಮ್ಮಿಂದ.
ನಂನಿ.