ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ
ಈ ಬಾರಿಯ ಪಂಪ ಪ್ರಶಸ್ತಿಗೆ ಎಸ್ ಎಲ್ ಭೈರಪ್ಪನವರು ಆಯ್ಕೆಯಾಗಿದ್ದಾರೆ. ಪ್ರಜಾವಾಣಿಯಲ್ಲಿ ಇದರ ಬಗ್ಗೆ ಬಂದ ಸುದ್ದಿ ನೋಡಿ.

- Login or register to post comments
- 1365 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಈ ಬಾರಿಯ ಪಂಪ ಪ್ರಶಸ್ತಿಗೆ ಎಸ್ ಎಲ್ ಭೈರಪ್ಪನವರು ಆಯ್ಕೆಯಾಗಿದ್ದಾರೆ. ಪ್ರಜಾವಾಣಿಯಲ್ಲಿ ಇದರ ಬಗ್ಗೆ ಬಂದ ಸುದ್ದಿ ನೋಡಿ.




Re: ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ
ಸುದ್ದಿ ಕೇಳಿ ತುಂಬಾ ಸಂತೋಷವಾಯ್ತು. ಕನ್ನಡ ಸಾಹಿತ್ಯಕ್ಕೆ ಭೈರಪ್ಪನವರ ಕೊಡುಗೆ ವಿಶಿಷ್ಟ ಹಾಗು ಅಪಾರ.
this is too late
shiv_think
I think this is too late that PAMPA for SL Bhairappa! Dharma shree, Door Saridaru, Mandra, Thabbaliyu Neenade...etc are not only novels, these are completely sends readers to a feelingful world. If I have some deap thiniking and understanding the credit must goes to novels of SL B. All of his writings are like a philosophy and logic of life! Thanks for SL and Sampada
ಶಿವಾ ಕನ್ನಡದಲ್ಲಿ Think ಮಾಡಬಹುದಲ್ಲಾ
ಅಪ್ಪಾ ಶಿವಾ ಕನ್ನಡದಲ್ಲಿ Think ಮಾಡಬಹುದಲ್ಲಾ ?? ಎಷ್ಟೋ ಜನ Think ಮಾಡೋ ಭಾಷೆ ಕೂಡ ಇ೦ಗ್ಲೀಸ್ ಆಗೋಗಿದೆ. ಅದಕ್ಕೆ ಜನ ಬರೀ (Think)(ಚಿ೦ತೆ)worry ಮಾಡ್ತಾಯಿರ್ತಾರೆ.
ಅಕಸ್ಮಾತ್ ಇವರು ಹಾಡು ಹೇಳಬೇಕಾದರೆ ಯಾವ ಭಾಷೆಯಲ್ಲಿ ಹಾಡ್ತಾರೋ ??
ನೀನು ಇನ್ನೊ೦ದು ವಾರದೊಳಗೆ ಭೈರಪ್ಪನವರ ಯಾವುದಾದರು ಪುಸ್ತಕದ ವಿಮರ್ಷೆಯನ್ನು ಮಾಡಿ ಸ೦ಪದಕ್ಕೆ ಕನ್ನಡದಲ್ಲಿ ಬರಿ. ಅದು ನಿನಗೆ ಪುನಿಷ್ಮೆ೦ಟ್. ಬೇಜಾರ್ ಮಾಡ್ಕೋಬೇಡ. ಇದು ಒಳ್ಳೆ ಪುನಿಷ್ಮೆ೦ಟ್.
ಒಳ್ಳೆ ಫುನ್ ಇರತ್ತೆ.
nothing
Really!! I think anyone will be reply like this! I want also write in kannada, But problems in computer system. Dont think i am going to show my english knowlede here! Thats all.
Good luck!! bye bye
ಭೈರಪ್ಪನವರಿಗೆ ಅಭಿನಂದನೆಗಳು
ಲೈಂಗಿಕತೆ ಜೀವನದಲ್ಲೇ ಸೇರಿದ್ದಲ್ಲವೇ...??? ಅದಕ್ಯಾಕೆ ಬೇಸರ ಅಥವಾ ಅಸಹ್ಯ ಪಡಬೇಕು...
ಕೆಲ್ವೊಮ್ಮೆ ಅವರ ಕಾದಂಬರಿ ಗಳಲ್ಲಿ ಅದರ ಬಗ್ಗೆ ಜಾಸ್ತಿ ಚಿತ್ರಣಗಳು ಮೂಡಿಬರುವುದು ಸರಿಯೇ...
ಆದರೂ ಸಾರ್ಥದಲ್ಲಿ ಚಂದ್ರಿಕೆ, ಅವಳ ಗಂಡನ(ಕುರುಡ)..ಸಂಭಂದಿಯೊಡನೆ ಸಂಧಿಸುವಾಗಿರುವ ವಿವರಣೆ , ಓದಿ ೬ ವರ್ಷ ಕಳೆದರೂ ಇನ್ನೂಕಣ್ಣಮುಂದೇ ಇದೆ... ಅವರ ಚಿತ್ರಣಗಳಿಗೆ ಸರಿಸಾಟಿ ಬೇರಿಲ್ಲ....
ಅವರಿಗೆ ಜ್ನಾನಪೀಠ ಬರಬೇಕಿತ್ತು...
ವಂಶವ್ರುಕ್ಶ
ಧರ್ಮಶ್ರೀ
ದಾಟು
ಪರ್ವ
ಯಾವುದಕ್ಕೆ ಬೇಕಾದರೂ ಕೊಡಬಹುದಿತ್ತು...
ಆದರೆ ಈಗ ಕೊಟ್ಟರೆ... ಇವರು ಇತ್ತೀಚೆಗೆ ಜ್ನಾನಪೀಠ ಬಂದವರ ಸಾಲಿಗೆ ಸೇರಿಬಿಡುತ್ತಾರೆ...ಹಾಗಾಗಿ ಬರದಿದ್ದದ್ದೇ ಒಳ್ಳೆಯದೇನೋ????
ಅವರ ನೈಜತೆ ಮತ್ತು ಯಥಾವತ್ ಚಿತ್ರಣ ಅದ್ಭುತ....
ಕಾದಂಬರಿಯೆಂದರೆ...ಅದು ಭೈರಪ್ಪ...ಎಂದೇ ನನ್ನ ಅನಿಸಿಕೆ....
--ಮೇಲೆ ಹೇಳಿದ ಮಾತುಗಳು ವೈಯುಕ್ಥಿಕವಾದದ್ದು...ಬೇರೆಯವರ ಅಭಿಪ್ರಾಯ ಬೇರೆಯಿರಬಹುದು.....
ಕನ್ನಡದಲ್ಲೇ ಬರೆದರೆ ಚೆನ್ನಾಗಿರುತ್ತಲ್ವೆ?
ಕನ್ನಡದಲ್ಲೇ ಬರೆದರೆ ಚೆನ್ನಾಗಿರುತ್ತಲ್ವೆ?
http://sampada.net/fonthelp ನೋಡಿ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ:ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ
ಬಹಳ ಸಂತೋಷವಾಯ್ತು. ಅವರ ಸಾರ್ಥ ಕಾದಂಬರಿ ಓದಿದ ಮೇಲೆ ಒಂದು ತಿಂಗಳು ಬೇಕಾಯ್ತು ಸುಧಾರಿಸಿಕೊಳ್ಳುವುದಕ್ಕೆ.

ಸುಧಾರಿಸುವಿಕೆ
ಅವರ ಗೃಹಭಂಗ ಕಾದಂಬರಿ ಓದಿದ ಮೇಲೆ ನಿಮ್ಮ ಮನಸ್ಸಿನ 'ಕೆಟ್ಟ ಮಾತು ಡಿಕ್ಷನರಿ' ಸಿಕ್ಕಾಪಟ್ಟೆ ಸುಧಾರಿಸುವುದು. ಓದಿ ನೋಡಿ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ:ಸುಧಾರಿಸುವಿಕೆ
ಯಪ್ಪಾ ಸಾರ್ಥದ್ದೊಂದು ಕಥೆಯಾದರೆ, ಗೃಹಭಂಗದ್ದು ಮತ್ತೊಂದು ಕಥೆ.
ಗೃಹಭಂಗದ ಮುಂದಿನ ಭಾಗವಾಗಿ ಮತ್ತೊಂದು ಕಾದಂಬರಿಯಿದೆಯಂತೆ. ಯಾವುದು ಅಂತ ಗೊತ್ತಿಲ್ಲ. ಆದಷ್ಟು ಬೇಗ ಅದನ್ನೋದಬೇಕು.
ಸುಧಾರಿಸುವಿಕೆ..
ಮುಂದಿನ ಭಾಗ ಯಾವುದು ಅಂತ ಗೊತ್ತಾದ್ರೆ ನಮಗೂ ಒಂದ್ ಮಾತು ತಿಳಿಸಿ.
.
ಗೃಹಭಂಗ -2
"ಅನ್ವೇಷಣೆ"
ಭೈರಪ್ಪ ಅವರ 'ಮಂದ್ರ'
ಬಹಳ ವರ್ಷಗಳ ನಂತರ ಭೈರಪ್ಪ ಅವರ ಒಂದು ಕಾದಂಬರಿ ಓದೋಣ ಅಂತ ಇತ್ತೀಚೆಗೆ 'ಮಂದ್ರ' ಓದಿದೆ. ಸಂಗೀತದ ಬಗ್ಗೆ , ಅದಕ್ಕೂ ಹೆಚ್ಚು ವ್ಯಭಿಚಾರದ ವಿವರಗಳಿವೆ . ನಾಯಕ - ದೊಡ್ಡ ಸಂಗೀತಕಾರನ ಲೈಂಗಿಕ ಸಂಗಾತಿಗಳ ಸಂಖ್ಯೆ ಲೆಕ್ಕ ಇಡಬೇಕಾದಷ್ಟು ಇದೆ. ಓದಿ ಮುಗಿಸುವಷ್ಟರಲ್ಲಿ ಸುಸ್ತೂ , ಒಂಥರಾ ಬೇಸರವೂ ಆಯಿತು.
Re: ಭೈರಪ್ಪ ಅವರ 'ಮಂದ್ರ'
ಬಹುಶಃ ನೀವು ಭೈರಪ್ಪನವರ "ಸಾಕ್ಷಿ" ಓದಿಲ್ಲ ಎಂದುಕೊಂಡಿದ್ದೇನೆ. ನಾನು ಅದನ್ನು ಓದಿ ಆದ ಮೇಲೆ ನನ್ನ ಸ್ನೇಹಿತರೊಬ್ಬರಿಗೆ ಓದಲು ಕೊಟ್ಟಿದ್ದೆ. ವಾಪಾಸು ತೆಗೆದುಕೊಳ್ಳುವಾಗ ಅವರ ಆಬಿಪ್ರಾಯ ಕೇಳಿದೆ. ಅವರು ಹೇಳಿದ್ದು -"ಫಿಲಾಸಫಿ ಆಫ್ ಹಾದರ". ಭೈರಪ್ಪನವರ ಬಹುಪಾಲು ಕಾದಂಬರಿಗಳಲ್ಲಿ ಲೈಂಗಿಕ ವಿಷಯಗಳು ಇದ್ದೇ ಇವೆ. ಕೆಲವಲ್ಲಿ ಸ್ವಲ್ಪ ಜಾಸ್ತಿ ಅಷ್ಟೆ.
ಮಂದ್ರದಲ್ಲಿ ಸಂಗೀತಗಾರನ ಖಾಸಗಿ ಬದುಕನ್ನು ತೆರೆದು ಇಟ್ಟಿದ್ದಾರೆ. ನಾನು ಹಲವು ಸಾಹಿತಿ, ಕಲಾವಿದರುಗಳನ್ನು ಹತ್ತಿರದಿಂದ ಬಲ್ಲೆ. ಇವರಲ್ಲಿ ಹೆಚ್ಚಿನವರು "ಕಚ್ಚೆಹರುಕರು". ಇದು ನಾನು ಹೇಳಿದ ಮಾತಲ್ಲ. ಒಮ್ಮೆ ಮಾ. ಹಿರಣ್ಣಯ್ಯನವರ ಸಂದರ್ಶನ ಆಕಾಶವಾಣಿಯಲ್ಲಿ ಬರುತ್ತಿತ್ತು. ಅದರಲ್ಲಿ ಅವರೇ ಹೇಳಿದ ಮಾತು -"ನಮಗೆ ವೇದಿಕೆಯ ಮೇಲೆ ಜನ ಗೌರವಿಸುತ್ತಾರೆ. ಆದರೆ ಮನೆಗಳಿಗೆ ಪ್ರವೇಶ ಇಲ್ಲ. ನಮ್ಮನ್ನು ಸಾಮಾಜಿಕವಾಗಿ ದೂರವೇ ಇಟ್ಟಿದ್ದಾರೆ. ಕೌಟುಂಬಿಕ ಕಾರ್ಯಕ್ರಮಗಳಿಗೆ ನಮ್ಮನ್ನು ಸೇರಿಸುವುದಿಲ್ಲ. ಯಾಕೆಂದರೆ ನಾವೆಲ್ಲ ಕಚ್ಚೆಹರುಕರು". ಮಂದ್ರದಲ್ಲೂ ಇದೇ ಮಾತುಗಳ ಪುನರಾವರ್ತನೆಯಾಗುತ್ತದೆ. ಒಬ್ಬ ಸಂಗೀತ ಪ್ರೇಮಿ ಹೇಳುತ್ತಾನೆ -"ನಾವು ಕಲಾವಿದರನ್ನು ವೇದಿಕೆಯ ಮೇಲೆ ಗೌರವಿಸುತ್ತೇವೆ. ಅವರನ್ನು ಸನ್ಮಾನಿಸುತ್ತೇವೆ. ಆದರೆ ಮನೆಗಳಿಗೆ ಸೇರಿಸುವುದಿಲ್ಲ."
ಅಂದ ಹಾಗೆ ನೀವು ಕಂಬಾರರ ನಾಟಕಗಳನ್ನು ನೋಡಿದ್ದೀರಾ? ಉದಾ: ಜೋಕುಮಾರಸ್ವಾಮಿ. ಅದರಲ್ಲಿ ಪ್ರಾರಂಭದಲ್ಲೇ ಹಾದರ ಎಂದು ಪ್ರಾರಂಭಿಸುತ್ತಾರೆ.
ಸಿಗೋಣ,
ಪವನಜ
ಅವರ "ದಾಟು"
ಅವರ "ದಾಟು" ಮತ್ತು "ಪರ್ವ" ಓದಿದ್ದೇನೆ.
ಕೆಟ್ಟ ಮಾತುಗಳ ವಿಷಯದಲ್ಲಿ ಪರ್ವಕ್ಕಿಂತ ದಾಟು ಪರವಾಗಿಲ್ಲ
ಉ: ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ
ಭೈರಪ್ಪನವರ ಕಾದಂಬರಿಗಳಲ್ಲಿ ಬರುವ ಲೈಂಗಿಕತೆ ಅತಿ ಎಂದು ಬಹಳಷ್ಟು ಪ್ರತಿಕ್ರಿಯೆಗಳನ್ನು ಈಗ ಓದಿದ ಮೇಲೆ, ಶಿವರಾಮ ಕಾರಂತರ ಯಾವುದೋ ಕಾದಂಬರಿಯ ಮಾತುಗಳು ನೆನಪಾದವು.
ಹೊರುವುದು ಅಸಹ್ಯವಲ್ಲ, ಹೆರುವುದು ಅಸಹ್ಯವಲ್ಲ
ಮಾಡುವುದು ಅಸಹ್ಯವಲ್ಲ, ಆಡುವುದು ಅಸಹ್ಯವೇ?
(ಮನ್ನಿಸಿ, ಮೂಲದ ಪದಗಳು ನೆನಪಿಲ್ಲ, ತಿರುಳಷ್ಟೇ ಬರೆದಿದ್ದೇನೆ.)