ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

June 19, 2008 - 1:30pm — roopablrao

ಯಾವುದಾದರೂ ಬರಹವನ್ನು ನೋಡಿದಾಗ ಅದರ ಬರಹಗಾರ ಹೀಗೆ ಇರಬಹುದು ಎಂದು ತಿಳಿಯುವುದಕ್ಕೆ ಸಾಧ್ಯ ಇದೆಯೇ.
ನವಿರು ಲೇಖನಗಳನ್ನು ನೋಡಿದಾಗ ಲೇಖಕ/ಲೇಖಕಿ ಹೀಗೆಯೆ ನವಿರಾಗಿರುತ್ತಾರೆ ಎಂದು ಹೇಳಲು ಸಾಧ್ಯವಿದೆಯೇ?
ಒರಟು ಲೇಖನಗಳನ್ನು ಬರೆಯುವವರು ಸ್ವಭಾವತ: ಒರಟಾಗಿರುತ್ತಾರೆಯೇ?
ನಿಮ್ಮ ಗಳ ಅಭಿಪ್ರಾಯವೇನು?

‹ ನಮಗೆ ರಿಮೇಕ್ ಪತ್ರಿಕೆ ಬೇಕೇ? ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು ›
  • ಸುದ್ದಿ, ಸಮಾಚಾರ
~.~
  • Login or register to post comments
  • 709 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 19, 2008 - 5:21pm — gururajkodkani

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

gururajkodkani's picture

ಗುಱುಱಾಜ
www.kannadaguru.blogspot.com

ನಿಮಗೆ ಹಾಗನಿಸಿದೆಯೇ ರೂಪಾ.ಹಾಗಾದರೆ ಸ೦ಪದಿಗರು ಯಾರ್ಯಾರು ಹೇಗಿರಬಹುದು ಹೇಳಿ ನೊಡೊಣ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 19, 2008 - 10:10pm — kalpana

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

kalpana's picture

ಗುರುರಾಜರೇ,
ಪ್ರತಿ ಪ್ರಶ್ನೆ ಚೆನ್ನಾಗಿದೆ, ನನಗೂ ಉತ್ತರ ಬೇಕು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 11:42am — roopablrao

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

roopablrao's picture

ಕಲ್ಪನಾ
ನಿಮ್ಮ ಬರವಣಿಗೆಯಿಂದ ತಿಳಿಯುವ ಅಂಶವೇನೆಂದರೆ
ನೀವು ಮಾತಿನ ಮಲ್ಲಿ ಹಾಗು ಹೆದರಿಕೆ ಇಲ್ಲದವರು
ಮನದಲ್ಲೊಂದು ಮಾತು ಎದುರಲ್ಲೊಂದು ಮಾತು ನಿಮ್ಮಲ್ಲಿ ಇಲ್ಲ
ಸ್ವಲ್ಪ ತರಲೆತನ ಜಾಸ್ತಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 4:42pm — savithru

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

savithru's picture

ನನ್ನ ಬಗ್ಗೆ ಜನ ಏನು ಅಂದ್ಕೋತಾರೆ ಅಂತ ಕುತೂಹಲ ನಂಗೂ ಇದೆ.
ರೂಪ ಅವ್ರೆ ಒಂದೆರಡು ಮಾತು ಬರೆದ ಬಿಡಿ ಮತ್ತೆ!

ನಾನೂ ಬರೀಲ?

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 9:18pm — roopablrao

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

roopablrao's picture

ಖಂಡಿತಾ ಬರೆಯಿರಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 9:18pm — roopablrao

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

roopablrao's picture

ಖಂಡಿತಾ ಬರೆಯಿರಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 10:24pm — kalpana

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

kalpana's picture

ರೂಪ,
ರೀ, ನೀವು ನಿಮ್ಮ ಬಗ್ಗೆ ಬರೆದಿರುವ ಹಾಗಿದೆ(ಬಹುಶಃ ತರಲೆತನ ಒಂದು ಬಿಟ್ಟು) Smiling

ನನಗೆ ಶ್ರೀನಿಧಿಯವರು ಕೆಳಗೆ ಬರೆದ ವಿಷಯ ನಿಜವೆನ್ನಿಸಿತು. ನಾವು ನಿಜಜೀವನದಲ್ಲಿ ಹಲವಾರು ಕಾರಣಗಳಿಂದ ಹೀಗೆ ಮುಕ್ತವಾಗಿ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಬರಹದಲ್ಲಿನ ಮಾತಿನ ಮಲ್ಲಿಯರು ಎದುರಿಗೆ ಸಿಕ್ಕಾಗ ಮೌನಗೌರಿಗಳಾಗಿರಬಹುದು! ಇನ್ನೊಂದು ಗೊತ್ತ, ಆನ್ಲೈನ್ ಪ್ರಪಂಚದಲ್ಲಿ ತುಂಬ ಹೊತ್ತು ಕಳೆಯುವವರಿಗೆ, basic social skills ಇಲ್ಲದೇನೆ ಇರಬಹುದು Smiling ಈಗ ನನ್ನ ನಿಜ ವ್ಯಕ್ತಿತ್ವಕ್ಕೆ ಸುಳಿವು ಸಿಕ್ತಾ? Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2008 - 9:40am — ಶ್ರೀನಿಧಿ

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

ಶ್ರೀನಿಧಿ's picture

ಇದೆಲ್ಲೋ ನನಗೂ ಮುಸುಕಿನ ಗುದ್ದು ಕೊಟ್ಟಂತಿದೆ !!?? Laughing out loud

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 11:40am — roopablrao

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

roopablrao's picture

ನಾನು ಹೇಳಿದರೆ ಕೇಳುವಷ್ಟು ಸಂಯಮವಿದೆಯಾ
ಸರಿ ಕೇಳಿ ನಿಮ್ಮ ಬಗ್ಗೆ
ನಿಮ್ಮ ಬರವಣಿಗೆ ನಿಮ್ಮನ್ನು ಸಂಕೋಚದ ಸ್ವಭಾವದವರೆಂದು ತೋರಿಸುತ್ತದೆ
ಇನ್ನೊಬ್ಬರ ಮನಸನ್ನು ನೋಯಿಸುವುದು ನಿಮಗೆ ಆಗದ ಕೆಲಸ
ಮೃದು ಸ್ವಭಾವದವರೂ ಮೆದು ಮಾತಿನವರಾಗಿರುತ್ತೀರ
ಸ್ವಲ್ಪ ಬೇಗ ದೋಸೆ ತಿರುವುತ್ತೀರ ಅಂದರೆ ಮಾತನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸುತ್ತೀರ

ಸರೀನಾ Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 11:42am — roopablrao

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

roopablrao's picture

ಮೇಲಿನ ಪ್ರತಿಕ್ರಿಯೆ ಗುರುವಿಗೆ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 12:20pm — gururajkodkani

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

gururajkodkani's picture

ಗುಱುಱಾಜ
www.kannadaguru.blogspot.com

ಧನ್ಯವಾದಗಳು Smiling Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 12:32pm — roopablrao

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

roopablrao's picture

ನಾನು ಹೇಳಿದ್ದು ಸರೀಯಾ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 12:46pm — gururajkodkani

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

gururajkodkani's picture

ಗುಱುಱಾಜ
www.kannadaguru.blogspot.com

ಸರಿಯಾಗಿರಬಹುದು,ತಪ್ಪು ಕೂಡಾ ಅಗಿರಬಹುದು. ಸಸ್ಪೆನ್ಚ್.....Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 12:11am — Rajeshwari

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

Rajeshwari's picture

ಬರವಣಿಗೆಯಿಂದ ಬರಹಗಾರರ ಮನಸ್ಸನ್ನು ಸ್ವಲ್ಪ ಮಟ್ಟಿಗಾದರೂ ಅರಿಯಬಹುದು. ನಾವು ಮಾತನಾಡಿದಾಗ , ಹಸ್ತಾಕ್ಷರವನ್ನು ಗಮನಿಸಿದಾಗ ಕೂಡ ಮನುಷ್ಯರ ಮನಸ್ಸನ್ನು ಅರಿಯಬಹುದು.

ನನಗಾದ ಒಂದು ಅನುಭವವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ.

ಹೀಗೆ ಮಾತನಾಡುತ್ತಿದ್ದಾಗ ಒಂದು ವಿಷಯ ಬಂತು , " ಅಣ್ಣ ,ತಮ್ಮ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ , ಆದ್ರು ಅವ್ರು ಒಟ್ಟೀಗೆ ಊಟ ಮಾಡೋಲ್ಲ, ಮಾತು ಕೂಡ ಅಷ್ಟಕಷ್ಟೆ " , ಈ ವಿಷಯವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿಕೊಂಡರು.
೧) ಅವ್ರು ಬೇರೆ ಬೇರೆ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡ್ತಿರಬಹುದು , ಅದಕ್ಕೆ ಅವರವರ ಕೆಲೆಸಗಳಲ್ಲಿ ಬ್ಯುಸಿ ಆಗಿರಬಹುದು
೨) ಅವ್ರ ಮಧ್ಯ ಸಂಬಂಧ ಚೆನ್ನಾಗಿಲ್ವೇನೋ
೩)ಒಬ್ರ ಏಳಿಗೆ ಮತ್ತೊಬ್ಬರಿಗೆ ಸಹಿಸಲಾಗುತ್ತಿಲ್ಲವೇನೋ
೪) ಮತ್ತೊಬ್ಬಳು ಹೇಳಿದಳು(ಇದರಲ್ಲಿ ನಾನು ಒಂದು ಅಕ್ಷರವನ್ನು ಉದ್ಗಾರ ಮಾಡಿಲ್ಲ) "ಅವರಿಬ್ಬರು ಮನೆಯಲ್ಲಿ ಮಾತನಾಡಿಕೊಂಡಿದ್ದಾರೆ , ನಾವು ಹೊರಗಡೆ ಒಬ್ಬರಿಗೊಬ್ಬರು ಗೊತ್ತಿಲ್ಲದಂತಿರಬೇಕು, ಆಗ ಬೇರೆ ಟೀಂ ಮೆಂಬರ್ಸ್ನ ಮೆಂಟಾಲಿಟಿ ಗೊತ್ತಾಗುತ್ತೆ, ಅದ್ರ ಜೊತೆಗೆ ಯಾರ್ಯಾರು ನಮ್ಮ ಬಗ್ಗೆ ಏನಂತ ತಿಳ್ಕೊಂಡಿದ್ದಾರೆ ಅಂತನೂ ಕಂಡುಹಿಡಿಯಬಹುದು ಮತ್ತೆ ರಾತ್ರಿ ಅವರಿಬ್ಬರು ಮನೆಯಲ್ಲಿ ಇದರ ಬಗ್ಗೆ ಚರ್ಚ ಇಟ್ಟ್ಕೊಂಡಿರುತ್ತಾರೆ" (ಈ ಪ್ರತಿಕ್ರಿಯೆಯನ್ನು ಕೇಳಿ ನನಗೆ ಒಮ್ಮೆಲೆ ಗಾಬರಿ, ನಗು ಬರತೊಡಗಿತು).

ಒಂದೇ ವಿಷಯವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರಿತುಕೊಂಡು ಅವರವರ ಮನಸ್ಸಿಗೆ ತೋಚಿದ ಹಾಗೆ ಮಾತನಾಡುತ್ತಾರೆ ,ಹೀಗೆಯೇ ಲೇಖನಗಳು ಕೂಡ ನಮ್ಮ ಭಾವನೆಗಳನ್ನು, ಮನಸ್ಸುಗಳನ್ನು ಬರವಣಿಗೆಯ ಮೂಲಕ ತೋರಿಸುತ್ತವೆ ಅಂತ ನನ್ನ ಅಭಿಪ್ರಾಯ. ಕವಿಗಳು ತಮ್ಮ ನಿತ್ಯ ಜೀವನದ ಕಷ್ಟ,ನೋವು ಇವುಗಳನ್ನು ಬಿಟ್ಟು ಕಲ್ಪನಾಜೀವನವನ್ನು ಕವಿತೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ. ಅದೂ ಕೂಡ ಅವರ ಮನಸ್ಸನ್ನು ತಿಳಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 8:17am — ಶ್ರೀನಿಧಿ

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

ಶ್ರೀನಿಧಿ's picture

ಬರೆಯುವಾಗ ನಮ್ಮ ಮನಸ್ಸಿನ ಯೊಚನೆಗಳನ್ನು ಬಲವಾಗಿ ಹೊರಹಾಕುವುದು ಅನುಕೂಲ. ಅದರಲ್ಲೂ ಆನ್ಲೈನ್ ಮಾತುಕಥೆಗಳಲ್ಲಿ ಮುಖಕ್ಕೆ ಮುಖ ಕೊಟ್ಟು ಮಾತಾಡುವುದು, ಲಿಂಗ, ವಯಸ್ಸು ಮುಂತಾದ ಭೇದ ಭಾವ ಇರುವುದು (ಇದ್ದರೂ ಗಮನಿಸುವುದು) ತುಂಬಾ ಕಡಿಮೆ. ಇದರಿಂದ ಇಲ್ಲಿ ಬರೆಯುವಾಗ ಒರಟಾಗಿ (ನಮ್ಮಲ್ಲೆ ಕತ್ತೆ ಒದ್ದಂತೆ ಅನ್ನುತ್ತಾರೆ) ಬರೆವುದು ಸಹಜ. ತಪ್ಪು ಮಾಡಿದರೆ, ಅಲೋಚನೆ ಯಲ್ಲಿ ಬೇರೆ ಅಭಿಪ್ರಾಯಗಳು ಇದ್ದರೆ , "ನನಗನ್ನಿಸಿದ್ದು ಹೀಗೆ" ಅಂತ ನೇರವಾಗಿ ಹೇಳಲು ಬಹಳ ಅನುಕೂಲ.
ಅದೇ ಜನರನ್ನು ನೀವು ನೇರವಾಗಿ ಹೋಗಿ ಮಾತಾಡಿಸಿದರೆ ಅವರು ಬಹಳ ಮೆದುವಾಗಿ ಮಾತಾಡುತ್ತಾರೆ.
ಆನ್ಲೈನ್ ಪ್ರಪಂಚ ಒಂದು ರೀತಿಯಲ್ಲಿ ಡೆಮಾಕ್ರಸಿಗೆ ಹತ್ತಿರವಾದ ಲೋಕ Smiling

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 12:45pm — gururajkodkani

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

gururajkodkani's picture

ಗುಱುಱಾಜ
www.kannadaguru.blogspot.com

ಸರಿಯಾಗಿರಬಹುದು,ತಪ್ಪು ಕೂಡಾ ಅಗಿರಬಹುದು. ಸಸ್ಪೆನ್ಚ್.....;-೦

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 9:25pm — uniquesupri

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

uniquesupri's picture

ಕಲೆ ಕಲಾವಿದನ ವ್ಯಕ್ತಿತ್ವವನ್ನು ತಿಳಿಸುತ್ತದೆಯೇ ಎಂಬ ಪ್ರಶ್ನೆ ತುಂಬಾ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಭೈರಪ್ಪನವರ ‘ಮಂದ್ರ’ ಕಾದಂಬರಿಯಲ್ಲಿ ಸಂಗೀತಗಾರನ ಪ್ರತಿಭೆ ಹಾಗೂ ಆತನ ವೈಯಕ್ತಿಕ ಬದುಕುಗಳ ನಡುವಿನ ಅಂತರವನ್ನು ನಾವು ಯಾವುದೇ ಕಲಾವಿದನಿಗೆ ಅನ್ವಯಿಸಿ ಹೇಳಬಹುದು ಎನ್ನಿಸುತ್ತದೆ.

ನೀವು ಈ ಮೇಲೆ ಹೇಳಿರುವ ಅನಲಿಸಿಸ್‌ಗಳು ಮನೋವಿಜ್ಞಾನದ ಒಂದು ಪುಟ್ಟ ಟ್ರಿಕ್‌ನ ಫಲ . ವಿವರಗಳಿಗೆ ಇಲ್ಲಿ ಗಮನಿಸಿ... http://en.wikipedia.org/wiki/Forer_effect
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2008 - 11:29pm — Sunil Jayaprakash

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

Sunil Jayaprakash's picture

ರೂಪ, ನಿಮ್ಮ ಈ ಪ್ರಶ್ನೆಗೆ ಉತ್ತರವನ್ನು ಹುಡುಕಲಾಗಿ, ಈ ಕೆಳಗಿನವು ಕಾರಣವಾಗಬಹುದು ಎನಿಸಿತು (...ಬಹುದು, ಅಷ್ಟೇ. ಏಕೆಂದರೆ ಎಷ್ಟೋ ಬರಹಗಾರರು ಸಾಧಾರಣವಾಗಿ ಇವುಗಳನ್ನು ಮೀರಿ ನಿಂತಿರುತ್ತಾರೆ.)

೧. ಕಥಾವಸ್ತು.
೨. ಒಬ್ಬ ಬರಹಗಾರ ಮಾಡುವ ಪದಪ್ರಯೋಗಗಳು.
೩. ಬರಹಗಾರ ಆಯ್ದುಕೊಳ್ಳುವ ಪಾತ್ರಗಳು, ಅವುಗಳ ಹೆಸರುಗಳು.

ಆದರೆ ಹೀಗೆ ಎಷ್ಟೇ ಸಿದ್ದಸೂತ್ರಗಳನ್ನು ಇಟ್ಟುಕೊಂಡರೂ, ಒಬ್ಬ ಬರಹಗಾರ ಹೀಗೇ ಅಂತ ಹೇಳೋದು ಕಷ್ಟ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 22, 2008 - 11:52am — narendra

ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ

narendra's picture

ಸಾಧಾರಣವಾಗಿ ನಮ್ಮ ಮಾತು, ಉಡಿಗೆ ತೊಡಿಗೆ, ತಿದ್ದಿದ ರೂಪ ಮತ್ತು ಬರವಣಿಗೆ ಕೂಡಾ ಮಾತಿನ ಒಂದಾನೊಂದು ರೂಪಾಂತರವಾಗಿರುತ್ತ ಎಲ್ಲವೂ ಹೊರಜಗತ್ತಿಗೆ ನಮ್ಮನ್ನು ನಾವು present (ಪ್ರದರ್ಶನ) ಮಾಡಿಕೊಳ್ಳುವ ವಿಧಾನಗಳಷ್ಟೇ. ಅವುಗಳೇ original ನಾವು ಆಗಿರುವುದಿಲ್ಲ. ಹತ್ತನೆಯ ತರಗತಿಯಿಂದ ದಿನವೂ ಡಾಯರಿ ಬರೆಯುತ್ತಿದ್ದ ನಾನು ನನ್ನದೇ ಭಾಷೆಯ ಮೋಹದಿಂದ ನನಗೆ ಅನಿಸಿದ್ದನ್ನು, ನಾನು ಓದಿದ ಇನ್ಯಾರಿಗೋ ಅನಿಸಿದ್ದನ್ನು, ನನಗೆ ಅನಿಸಿದ್ದರೆ ಚೆನ್ನಾಗಿರುತ್ತದೆ ಎಂದು ನನಗನಿಸಿದ್ದನ್ನು ಎಲ್ಲ ಸೇರಿಸಿ ಅದೆಲ್ಲ ನಾನೇ ಎನ್ನುವ ಹಾಗೆ ಬರೆದಿದ್ದನ್ನು ಕಂಡು ಮುಂದೆ ಎಷ್ಟೋ ಕಾಲದ ನಂತರ ಬೆಚ್ಚಿ ಬಿದ್ದಿದ್ದೂ ಇದೆ! ತೀರ ವೈಯಕ್ತಿಕವಾದ ಡಾಯರಿಯಲ್ಲಿ ಕೂಡ ಇಂಥ ಆತ್ಮವಂಚನೆ ಸಾಧ್ಯ ಎನ್ನುವಾಗ ಇನ್ನೇನಿದೆ ಹೇಳಿ! ಎಷ್ಟೋ ಬಾರಿ ನಮ್ಮ ಒಳ್ಳೆಯತನ ಬಿಂಬಿಸುವ ನಮ್ಮ ಮಾತುಗಳು ನಮ್ಮ ಒಳ್ಳೆಯವರಾಗಿರುವ ಆಸೆಯನ್ನಷ್ಟೇ ತೋರಿಸುತ್ತವೆಯೇ ಹೊರತು ನಾವು ಈಗಾಗಲೇ ಏನು ಆಗಿದ್ದೇವೋ ಅದನ್ನಲ್ಲ. ಹಾಗಿದ್ದರೆ original ನಾನು ಎಲ್ಲಿ ಸಿಗಬಹುದು ಎನ್ನುವುದು ಒಂದು ಒಳ್ಳೆಯ ಪ್ರಶ್ನೆ. ಆದರೆ ಇದಕ್ಕೆ ಉತ್ತರವಿಲ್ಲ. ತೀರ ಆಳದಲ್ಲಾದರೂ ನಮಗೆ ನಾವು ಯಾರು ಏನು ಎನ್ನುವುದು ಗೊತ್ತಿರುತ್ತದೆಯೇ ಎನ್ನುವುದು ಅನುಮಾನವೇ! ಒಂದು ಕ್ಷಣದ ಹೊಳಹು ಅದು, ತೀರ ಮೌನದಲ್ಲಿ, ತೀರ ಆಳದಲ್ಲಿ, ಹೌದೋ ಅಲ್ಲವೋ ಎಂಬಂತೆ ಹೊಳೆಯಬಹುದಾದ ಸತ್ಯ, ಅದು ನನಗೆ ಮಾತ್ರ ಅಲ್ಲ, ಎಲ್ಲ ಮನುಷ್ಯರಿಗೂ apply ಆಗುವಂತಿರುತ್ತದೆ. ಏನೋ absurd ಮಾತನಾಡುತ್ತಿದ್ದೇನೆ ಅನಿಸ್ತಿದೆಯಾ? ಸರಳವಾಗಿ ನಾವು ಮನುಷ್ಯರು. ಮನುಷ್ಯ ಎನ್ನುವುದು ಅಪಾರ ಸಾಧ್ಯತೆಗಳಿರುವ, ಪರಮ ನೀಚನೂ ಪುರುಷೋತ್ತಮನೂ (ಮಹಿಳೆಗೂ ಸೇರಿಸಿ) ಆಗಬಲ್ಲ ಒಂದು possibility ಅಷ್ಟೇ ಎಂದುಕೊಳ್ಳುವುದು ಒಳ್ಳೆಯದು. ಯಾಕೆಂದರೆ, ಎಷ್ಟೋ ಬಾರಿ ನಾಳೆ ನಾವು ಸಂಕೀರ್ಣ ಪರಿಸ್ಥಿತಿಯೊಂದರಲ್ಲಿ ಹೇಗೆ ವರ್ತಿಸಬಹುದು ಎಂಬ ಬಗ್ಗೆ ಯಾರಾದರೂ ಇವತ್ತೇ ಕೊಡುವ ಗ್ಯಾರೆಂಟಿಗೆ ಏನಾದರೂ ಗ್ಯಾರೆಂಟಿ ಇದೆಯ?!

ಇನ್ನೊಂದು ಕುತೂಹಲದ ಸಂಗತಿ ಗಮನಿಸಿದೆ. ನಿಮ್ಮ ಲೇಖನ, ಬರಹ ಓದಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಬಲ್ಲೆ ಎಂದು ಯಾರಾದರೂ ರೈಲು ಹತ್ತಿಸಲು ತಯಾರಾದರೆ ಹೇಳಿ ಹೇಳಿ ನಮ್ಮ ಬಗ್ಗೆ ಹೇಳಿ ಎಂದು ಕುತೂಹಲಗೊಳ್ಳುವ ಮಂದಿ ನೋಡಿ! ಹಿಂದೊಮ್ಮೆ ನಾನು ಕೈಬರಹ ನೋಡಿ ಇದನ್ನು ಮಾಡಬಲ್ಲೆ ಎಂದಿದ್ದೇ ನನ್ನ ಸಹೋದ್ಯೋಗಿಗಳೆಲ್ಲ ನನ್ನ ಸುತ್ತ ಸೇರಿಕೊಂಡು ತಗುಲಿಕೊಂಡಿದ್ದು, ಮನೆಯಿಂದ ಗಂಡನ, ಮಕ್ಕಳ ಕೈಬರಹ ಎಲ್ಲ ಹಿಡಿದುಕೊಂಡು ಬರತೊಡಗಿದ್ದು, ನಾನು ಇವರಿಗೆಲ್ಲ ಹೌದು ಹೌದು ಅನಿಸುವ ಹಾಗೆ `ಮಂಗ' ಮಾಡಿದ್ದು (ನಿಜಕ್ಕೂ ಮಂಗ ಮಾಡಿದೆನಾ ಇಲ್ಲವಾ ಎಂದು ತಿಳಿದುಕೊಳ್ಳುವ ಕುತೂಹಲ ಕೂಡಾ!) ನೆನಪಾಗಿ ನನ್ನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೇಳುವ ಮನುಷ್ಯ ಸಹಜ ಆಸೆಯ ಬಗ್ಗೆಯೇ ಯೋಚಿಸುತ್ತ ಕೂತೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ವಿಕಿಪೀಡಿಯಾ
  • ನಮಗೆ ರಿಮೇಕ್ ಪತ್ರಿಕೆ ಬೇಕೇ?
  • ಲೇಖನಗಳ ಆಹ್ವಾನ
  • ರಾಜ್ಯೋತ್ಸವಕ್ಕೆ 'ಸಂಪದ'ದ ಇ-ಪುಸ್ತಕ
  • ನಾರಾಯಣ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
  • ಶಬ್ದಗಳನ್ನು ಸೇರಿಸುವುದು ಹೇಗೆ
  • ಬಿಡ್ತಾರ್‍
  • ಪೆಱೆ/ಹೆಱೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • must, can, may - ಕನ್ನಡದಲ್ಲಿ ಸಮಗಳೇನು?
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator