ಅಳುವ ಗಂಡಸ ನಂಬಬೇಡ?
(ಲೇಖನ ಮೊದಲು ಪ್ರಕಟವಾದದ್ದು ಇಲ್ಲಿ)
..................
‘ಅಳುವ ಗಂಡಸನ್ನು ನಂಬ ಬೇಡ’ ಹಾಗಂತ ಒಂದು ಮಾತಿದೆ.
ಅದನ್ನು ಯಾರು ಯಾರನ್ನು ಉದ್ದೇಶಿಸಿ ಯಾವ ಸಂದರ್ಭದಲ್ಲಿ ಹೇಳಿದ್ದರೋ ಗೊತ್ತಿಲ್ಲ. ಆದರೆ
ಅದೊಂದು ನಿತ್ಯ ಸತ್ಯದ ಹಾಗೆ ನಮ್ಮ ಪ್ರಜ್ಞೆಯಲ್ಲಿ ಬೇರೂರಿಬಿಟ್ಟಿದೆ.
ಅಳುವುದು ಗಂಡಸರ ಸ್ವಭಾವವಲ್ಲ. ಹೋರಾಡುವುದು, ಗಟ್ಟಿಯಾಗಿ ನಿಂತು ಎದುರಿಸುವುದು
ಆತನ ಸಹಜ ಧರ್ಮ. ಅಳುವುದೇನಿದ್ದರೂ ಹೆಣ್ಣಿನ ಸ್ವತ್ತು. ಗಂಡಸು ಅಳುವುದಿಲ್ಲ. ಒಂದು
ವೇಳೆ ಆತ ಏನಾದರೂ ಅಳುತ್ತಿದ್ದಾನೆ ಎಂದರೆ ಆತ ನಟಿಸುತ್ತಿದ್ದಾನೆ ಎಂದೇ ಅರ್ಥ. ಆತನ
ಅಳು ತೋರಿಕೆಯದು ಎನ್ನುವ ವಿವರಣೆ ‘ಅಳುವ ಗಂಡನ್ನು ನಂಬಬೇಡ’ ಎಂಬ ವಿವೇಕದ ಮಾತಿನಲ್ಲಿ
ಸಿಕ್ಕುತ್ತದೆ.
ಮನಃಪೂರ್ತಿಯಾಗಿ ಅಳಲಾಗದವನು ಮನಃಪೂರ್ತಿಯಾಗಿ ನಗಲೂ ಸಾಧ್ಯವಾಗುವುದಿಲ್ಲ. ನಗು ಅಳು
ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾಣ್ಯದ ಒಂದು ಮುಖದ ಅನುಪಸ್ಥಿತಿ ನಾಣ್ಯದ
ಅಸ್ತಿತ್ವವನ್ನೇ ಕಳೆದುಬಿಡುತ್ತದೆ. ನಗುವುದು ಹೇಗೆ ನಮ್ಮ ಸಹಜ ಧರ್ಮವೋ, ಅದಕ್ಕೆ ಹೇಗೆ
ಗಂಡು -ಹೆಣ್ಣೆಂಬ ಬೇಧವಿಲ್ಲವೋ ಹಾಗೆಯೇ ಅಳುವಿಗೂ ಬೇಧವಿಲ್ಲ. ಅಳುವೂ ನಮ್ಮ ಸಹಜ ಧರ್ಮ
ಎನ್ನುವ ವಿವರಣೆ ಒಂದು ಕಡೆ ಇದೆ.
ನಿಮ್ಮ ಅಭಿಪ್ರಾಯ ಏನು? ಗಂಡಸು ಅಳಬಾರದೇ? ಅಳುವ ಗಂಡಸು ಅಪ್ರಮಾಣಿಕನೇ? ಅಳುವ
ಗಂಡಸನ್ನು ನಂಬಬಾರದು ಎಂಬುದು ಕೇವಲ ಸಾಂದರ್ಭಿಕವಾದ ಮಾತೇ ಅಥವಾ ಸಾರ್ವತ್ರಿಕ ಸತ್ಯವೇ?
ಏನನ್ನುವಿರಿ?
......................

- Login or register to post comments
- 439 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಅಳುವ ಗಂಡಸ ನಂಬಬೇಡ?
ಗುಱುಱಾಜ
www.kannadaguru.blogspot.com
’ಅಳುವ ಗ೦ಡಸನ್ನು ನ೦ಬಬೇಡ ,ನಗುವ ಹೆ೦ಗಸನ್ನು ನ೦ಬಬೇಡ’ ಎನ್ನುವ ಮಾತೊ೦ದಿದೆ.ನನಗನ್ನಿಸಿದ್ದೇನೆ೦ದರೇ ಬಹುಶ: ಅತೀಯಾಗಿ ಅಳುವ,ಅತೀ ಭಾವುಕ ಗ೦ಡಸು ಮೋಸಗಾರನಾಗಿರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಈ ಮಾತು ಬ೦ದಿರಬಹುದು.ನಗುವ ಹೆ೦ಗಸಿಗೂ ಈ ಮಾತು ಅನ್ವಯಿಸುತ್ತದೆ.ಆದರೆ ಹೆ೦ಗಸು ನಗಲೇಬಾರದು ,ಗ೦ಡಸು ಅಳಲೇಬಾರದು ಎನ್ನುವುದೆಲ್ಲಾ ಅರ್ಥಹೀನ. ಅಳು ಕೇವಲ ದೌರ್ಬಲ್ಯತೆಯ ಗುರುತಲ್ಲ,ನಮ್ಮಲ್ಲಿನ ದು:ಖವನ್ನು ಹೊರಹಾಕುವ,ಭಾವನೆಗಳನ್ನು ಹೊರ ಸೂಸುವ ಬಗೆ.ನಗು ಕೂಡಾ ಅಷ್ಟೆ, ನಗು ಬ೦ದಾಗ ನಗಬೇಕು,ಅಳು ಬ೦ದಾಗ ಅಳಬೇಕು.ಹಾಗ೦ತ ಅವುಗಳು ಅತೀಯಾದರೆ ಅವೇ ನಮ್ಮ ದೌರ್ಬಲ್ಯಗಳಾಗುವ ಸಾಧ್ಯತೆಗಳಿವೆ.
ಉ: ಅಳುವ ಗಂಡಸ ನಂಬಬೇಡ?
ನಗು ಬ೦ದಾಗ ನಗಬೇಕು,ಅಳು ಬ೦ದಾಗ ಅಳಬೇಕು.ಹಾಗ೦ತ ಅವುಗಳು ಅತೀಯಾದರೆ ಅವೇ ನಮ್ಮ ದೌರ್ಬಲ್ಯಗಳಾಗುವ ಸಾಧ್ಯತೆಗಳಿವೆ.
ನಿಮ್ಮ ಮಾತು ನೂರಕ್ಕೆ ನೂರು ನಿಜ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಅಳುವ ಗಂಡಸ ನಂಬಬೇಡ?
ಮನುಷ್ಯ ಅಳು ಬಂದಾಗ ಅಳಬೇಕು. ನಗು ಬಂದಾಗ ನಗಬೇಕು.ಗಂಡಸಾದರು ಅಷ್ಟೇ. ಹೆಂಗಸಾದರು ಅಷ್ಟೇ. ಗಂಡಸರು ಯಾರಿಗು ಕಾಣದ ಹಾಗೆ ಅತ್ತು ಬರ್ತೀವಿ. ಹೆಂಗಸರು ರಾಜಾರೋಷಾಗಿ ಅಳಬಹುದು.
ಆದರೆ ಜವಾಬುದಾರಿ ಹೊತ್ತವರೆ ಅಳುತ್ತ ಕೂತರೆ ಮುಂದೆ ಹೋಗೋದು ಹೇಗೆ? ಅದಕ್ಕೆ ಗಂಡಸರು ಅಳಬಾರದು ಅಂತ ಸುರುವಾಗಿರಬಹುದು. ಮೇಲಿಂದ ಮೇಲೆ ಅಳೋರು ಯಾರೇ ಆಗಿರಲಿ , ಅವರನ್ನ ನಂಬೋದು ಕಷ್ಟ.