ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

June 22, 2008 - 12:14pm — pallavi.dharwad

ನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ.

ಏಕೆಂದರೆ, ಮಾಧ್ಯಮಗಳು ಇಬ್ಬದಿ ನೀತಿ ಪ್ರದರ್ಶಿಸುತ್ತಿವೆ. ಖಾಸಗಿ ಬದುಕನ್ನು ರಸವತ್ತಾಗಿ ಬಣ್ಣಿಸುವ ಹಿಂದೆ ವಿಕೃತ ಮನಸ್ಸು ಮಾತ್ರ ಇರಲು ಸಾಧ್ಯ. ಏರಿದವನು ಕೆಳಗೆ ಬಿದ್ದರೆ ಮಾಧ್ಯಮಕ್ಕೆ ಎಂಥದೋ ವಿಕೃತ ಆನಂದ. ತಕ್ಕ ಶಾಸ್ತಿಯಾಯಿತು ಎಂಬ ಭಾವನೆ. ಸಲ್ಮಾನ್‌ಖಾನ್‌ ಹಾಗೈ ವಿವೇಕ್‌ ಒಬೆರಾಯ್‌ ಜೊತೆ ಐಶ್ವರ್ಯಾ ರೈ ಸಂಬಂಧ ಮುರಿದಾಗ ಮಾಧ್ಯಮ ಆನಂದಪಟ್ಟಂತೆ ವರ್ತಿಸಿತು. ಮಾನ್ಯತಾ-ಸಂಜಯ್‌ ದತ್ತ ವಿವಾಹ ವಿವಾದ ಹುಟ್ಟಿದ್ದೂ ಇಂಥದೇ ಮನಃಸ್ಥಿತಿಯಿಂದ.

ನನಗೆ ಗೊತ್ತಿರುವಂತೆ, ಮಾಧ್ಯಮದಲ್ಲಿ ಕೆಲಸ ಮಾಡುವ ಬಹುತೇಕ ಜನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು. ಆದರೆ, ಅವರ ಒಡನಾಟ ಮೇಲ್ವರ್ಗದ (ಆರ್ಥಿಕವಾಗಿ) ಜನರ ಜೊತೆ. ನಿತ್ಯ ಅವರ ಜೀವನಶೈಲಿ, ಖ್ಯಾತಿ, ರೂಪ, ಅವಕಾಶ ಕಂಡು ಮಾಧ್ಯಮದವರಲ್ಲಿ ಮತ್ಸರ ಉಂಟಾಗುತ್ತದೆ ಎಂದು ಕಾಣಿಸುತ್ತದೆ. ಅದಕ್ಕೆಂದೇ ಅದನ್ನು ವಿಕೃತವಾಗಿ ಚಿತ್ರಿಸುವ ಮೂಲಕ, ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸುವ ಮೂಲಕ ಇವರು ವಿಕೃತ ಆನಂದ ಅನುಭವಿಸುತ್ತಾರೆ.

ಮಾಧ್ಯಮದಲ್ಲಿ ನನ್ನ ಗೆಳತಿಯರು ಹಾಗೂ ಗೆಳೆಯರು ತುಂಬ ಜನ ಇದ್ದಾರೆ. ಅವರೊಂದಿಗೆ ಅನೇಕ ಸಾರಿ ಈ ಬಗ್ಗೆ ಚರ್ಚಿಸಿದ್ದೇನೆ. ವಾದಿಸಿದ್ದೇನೆ. ಮುನಿಸಿಕೊಂಡಿದ್ದೇನೆ. ಆದರೂ, ನನ್ನ ಅಭಿಪ್ರಾಯ ಬದಲಾಗಿಲ್ಲ. ಇಷ್ಟು ದಿನದ ಬೆಳವಣಿಗೆಗಳನ್ನು ನೋಡಿದ ನಂತರ ಅವು ಬದಲಾಗುವ ಸಾಧ್ಯತೆಗಳೂ ಕಾಣುತ್ತಿಲ್ಲ.

ಖಾಸಗಿ ಬದುಕೆಂಬುದು ಪ್ರತಿಯೊಬ್ಬನ ವೈಯಕ್ತಿಕ ಸ್ವತ್ತು. ಅದರಲ್ಲಿ ಕೈ ಹಾಕಲು ಸರ್ಕಾರಕ್ಕೇ ಅಧಿಕಾರವಿಲ್ಲ. ಇನ್ನು ಮಾಧ್ಯಮಕ್ಕಂತೂ ಅವಕಾಶವೇ ಇಲ್ಲ. ಆದರೂ ಕೈ ಹಾಕುತ್ತಾರೆ. ನಾವು ನೋಡಿಕೊಂಡು ಸುಮ್ಮನೇ ಕೂಡುತ್ತೇವೆ. ಕ್ರೈಂ ವರದಿಗಳು, ಕಾರ್ಯಕ್ರಮಗಳು ಬರತೊಡಗಿದನಂತರ, ಖಾಸಗಿ ಬದುಕೆಂಬುದು ಜನಸಾಮಾನ್ಯರ ಪಾಲಿಗೂ ಇಲ್ಲವಾಗಿದೆ.

ಇದಕ್ಕೆ ಸ್ವಯಂ ನೀತಿ ಸಂಹಿತೆ ಬೇಕು. ಏಕೆಂದರೆ, ಕಾನೂನು ಮಾಡಿದರೆ, ಅದರಡಿ ತೂರಿಕೊಳ್ಳುವ ಪ್ರಯತ್ನ ಪ್ರಾರಂಭವಾಗುತ್ತದೆ. ಇದರಿಂದ ಇನ್ನಷ್ಟು ವಿಕೃತಿ ಸೃಷ್ಟಿಯಾಗುವ ಅಪಾಯವಿದೆ. ಮಾಧ್ಯಮದಲ್ಲಿರುವವರೂ ನಮ್ಮಂತೆ ಸಾಮಾನ್ಯ ಮನುಷ್ಯರೇ. ನಮ್ಮ ರಾಗದ್ವೇಷಗಳು ಅವರಲ್ಲೂ ಇವೆ. ಆದರೆ, ಅವರ ರಾಗದ್ವೇಷ ಖಾಸಗಿಯಾಗಿ ಉಳಿಯದೇ ನಾಡಿನಾದ್ಯಂತ ಹರಡುವುದರಿಂದ, ಅವರ ಭಾವನೆಗಳು ಅವರ ನಿಯಂತ್ರಣದಲ್ಲಿ ಇದ್ದರೆ ಉತ್ತಮ.

ಆದ್ದರಿಂದ, ಮಾಧ್ಯಮಮಿತ್ರರು ಈ ಬಗ್ಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಲಿ. ಆಯಾ ಪತ್ರಿಕೆಗಳು ಹಾಗೂ ಚಾನೆಲ್‌ಗಳ ಸಂಪಾದಕರೂ ಇತ್ತ ಯೋಚಿಸಬೇಕು.

- ಪಲ್ಲವಿ. ಎಸ್‌.

‹ ಸತ್ಯಹರಿಶ್ಚಂದ್ರನ ಕಾಣಿರಯ್ ಅಭಿ ಐಶ್ ಐಶಾರಾಮದ ಮದುವೆ ›
  • ಸುದ್ದಿ, ಸಮಾಚಾರ
~.~
  • Login or register to post comments
  • 231 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 24, 2008 - 12:06pm — girish.rajanal

ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

girish.rajanal's picture

ಪಲ್ಲವಿಯವರೆ,
ನಿಮ್ಮ ಮಾತು ನಿಜ. ಮಾಧ್ಯಮದವರು ಅತಿಯಾಗಿಯೇ ಖಾಸಗಿ ಜೀವನದಲ್ಲಿ ಮೂಗು ತೂರಿಸುತ್ತಿದ್ದಾರೆ.
ಸಾಮಾನ್ಯ ಜನರ ಬೇಡಿಕೆಗಳು, ಸಮಸ್ಯೆಗಳು ಪ್ರಕಟವಾಗದಿದ್ದರೂ, ವಿಕಟ ವಿರಾಟರೂಪವಾಗಿ ಒಬ್ಬರ ಬದುಕನ್ನು ಬಯಲು ಮಾಡುತ್ತಾರೆ. ಇದೆಂತಹ ವಿಕೃತ ಮಾಧ್ಯಮ ಪ್ರಚಾರ!!!!

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 4:33am — pallavi.dharwad

ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

pallavi.dharwad's picture

ನಿಜ ಗಿರೀಶ್‌, ಕ್ರಿಯೆ-ಪ್ರತಿಕ್ರಿಯೆ ಜೊತೆಜೊತೆಗೇ ಹೋಗುತ್ತವೆ. ಮಾಧ್ಯಮದ ವಿಷಯದಲ್ಲಿಯೂ ಇದು ಸ್ಪಷ್ಟ. ನಾವು ಓದಲು ಆಸಕ್ತಿ ತೋರಿಸಿದರೆ, ಅವರು ಅಂಥವೇ ವಿಷಯಗಳನ್ನು ಕೊಡುತ್ತಾ ಹೋಗುತ್ತಾರೆ. ನಮ್ಮ ಆಸಕ್ತಿ ಬದಲಾದಂತೆ ಅವರೂ ಬದಲಾಗುತ್ತಾರೆ. ಬದಲಾಗಲೇಬೇಕು.

ಆದರೆ ಸಮೂಹ ಬದಲಾಗುವುದು ನಿಧಾನ ಮತ್ತು ಕಷ್ಟಕರ. ಹೀಗಾಗಿ, ಕೆಲವೇ ಸಂಖ್ಯೆಯಲ್ಲಿರುವ ಮಾಧ್ಯಮವನ್ನೇ ಬದಲಾಯಿಸಲು ಯತ್ನಿಸುವುದು ಉತ್ತಮ. ಸೃಜನಶೀಲತೆ ಮತ್ತು ಉತ್ಪಾದಕ ಸಾಮರ್ಥ್ಯ ಇಲ್ಲದಿರುವ ಬರವಣಿಗೆ, ಕಾರ್ಯಕ್ರಮ, ಯೋಜನೆ ಕಾಲಾಂತರದಲ್ಲಿ ವ್ಯರ್ಥವಾಗುತ್ತವೆ. ಇವತ್ತಿನ ಟೊಳ್ಳು ಕಾರ್ಯಕ್ರಮಗಳು, ಬರವಣಿಗೆ, ಬಡಬಡಿಕೆಗಳು ಕೆಲವೇ ದಿನಗಳಲ್ಲಿ ಮಾಸಿದಂತೆ, ಹಳಸಿದಂತೆ ಕಾಣುತ್ತವೆ. ಇವತ್ತು ಬಂದು ನಾಳೆ ಇಲ್ಲವಾಗುವ ಸಿನಿಮಾ ತಾರೆಯರಂತೆ, ಇವೆಲ್ಲ ಬಲುಬೇಗ ಇಲ್ಲವಾಗುತ್ತವೆ.

ನಮ್ಮ ಅಭಿರುಚಿಗಳನ್ನು ಹದಗೊಳಿಸಿಕೊಳ್ಳುವ, ಸುಧಾರಿಸಿಕೊಳ್ಳುವುದೊಂದೇ ಸಮಸ್ಯೆ ಎದುರಿಸುವ ಉತ್ತಮ ಮಾರ್ಗ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 11:39pm — uniquesupri

ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

uniquesupri's picture

ಸ್ವಯಂ ನಿಯಂತ್ರಣ ಅನುಸರಿಸಬೇಕಾದ್ದು ಅವರ ಅನಿವಾರ್ಯತೆ ಇಲ್ಲವಾದಲ್ಲಿ ಅವರ ಮೇಲೊಬ್ಬ ಆಮ್‌ಬುಡ್ಸ್‌ಮನ್ ಬಂದು ಕುಳಿತುಕೊಳ್ಳುತ್ತಾನೆ!

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 29, 2008 - 10:31am — pallavi.dharwad

ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

pallavi.dharwad's picture

ಖಂಡಿತ ಸುಪ್ರೀತ್‌. ಸ್ವತಃ ಒಡೆಯರಾಗದಿದ್ದರೆ ಬೇರೊಬ್ಬರು ಒಡೆಯರಾಗುವುದು ಅನಿವಾರ್ಯ, ಅಲ್ಲವೆ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
  • ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
  • ಮಧ್ಯಮದಲ್ಲೇ ಉಳಿದ ಮಾಧ್ಯಮ
  • ಮಧ್ಯಮದಲ್ಲೇ ಉಳಿದ ಮಾಧ್ಯಮ
Syndicate content

ಲೇಖಕರು

pallavi.dharwad's picture

ಪೂರ್ಣ ಹೆಸರು
ಪಲ್ಲವಿ ಎಸ್‌.

ಪರಿಚಯ

ಡಿಗ್ರಿ ಮುಗಿದಿದೆ. ಕೆಲಸದ ಗಾಣಕ್ಕೆ ಬೀಳಲು ಇಷ್ಟ ಇಲ್ಲ. ಆದ್ರೆ ಹಕ್ಕಿ ಹಾಡು, ಬೆಳ್ಳಂಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕಣಿವೆಯಲ್ಲಿ ಸುತ್ತು ಹಾಕೋದು ಇಷ್ಟ. ಲೈನ್‌ ಬಜಾರ್‌ನಲ್ಲಿ ಅಡ್ಡಾಡುತ್ತ ಜನರನ್ನು ನೋಡ್ತಾ ಇರೋದು ಇಷ್ಟ. ಒಂಟಿ ಅನ್ನಿಸಿದಾಗ ಇಂಟರ್‌ನೆಟ್‌, ಕಂಪನಿ ಇದ್ದಾಗ ಸೋಮೇಶ್ವರ ದೇವಸ್ಥಾನ, ಕೆಲಗೇರಿ ಕೆರೆ. ಓದೋಕೆ ಇಷ್ಟ. ಇತ್ತೀಚಿಗೆ, ಬರೆಯೋದೂ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
  • ಮುರಿ, ಮುಱಿ
  • 'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಎಲ್ಲಿ ಸಿಗಬಹುದು?
  • ಬಾಳ್, ಬಾೞ್
  • ಅಱಬು
  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
  • girish.rajanal
    ಉ: ನೀನು ನಾನು ಜೋಡಿ
    September 8, 2008 - 2:21pm
  • malenadiga
    ಉ: 'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಎಲ್ಲಿ ಸಿಗಬಹುದು?
    September 8, 2008 - 2:15pm
  • ಸಂಗನಗೌಡ
    ಉ: IT - ಸಿಂಪ್ಟಮ್ಸ
    September 8, 2008 - 2:11pm
  • srinivasps
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 2:02pm
  • prashantvc
    ಉ: IT - ಸಿಂಪ್ಟಮ್ಸ
    September 8, 2008 - 1:47pm
  • uniquesupri
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 1:46pm
  • kadakolla05
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 1:39pm
ಇನ್ನಷ್ಟು


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator