ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
’ಱ’ ಕನ್ನಡ, ತಮಿೞ್, ತೆಲುಗು, ಮಲಯಾಳಂಗಳಲ್ಲಿ ಉಪಯೋಗದಲ್ಲಿದೆ. ಹೆಚ್ಚಾಗಿ ತಮ್ಮ ಅಜ್ಞಾನದ ಕಾರಣ ಕನ್ನಡ ಮತ್ತು ತೆಲುಗರು ’ಱ’ ಬದಲು ’ರ’ ಬೞಸುವುದನ್ನು ನೋಡುತ್ತೇವೆ. ತುಳುವಿನಲ್ಲಿ ’ಱ’ ಬದಲು ’ದ/ಜ’ ಬೞಕೆಯಾಗುತ್ತಿದೆ.
’ೞ’ ಕನ್ನಡ, ತಮಿೞ್, ಮಲಯಾಳಂಗಳಲ್ಲಿ ಉಪಯೋಗವಾಗುತ್ತಿದೆ. ತೆಲುಗಿನಲ್ಲಿ ಮುಂಚೆ ಇದಱ ಉಪಯೋಗವಿದ್ದು, ಈಗ ಜನರ ಅಜ್ಞಾನದಿಂದ ’ಡ’ ವನ್ನು ಬೞಸುತ್ತಿದ್ದಾರೆ. ಕನ್ನಡಿಗರು ಅಜ್ಞಾನದಿಂದ ’ಳ’ ವನ್ನು ಬೞಸುತ್ತಿದ್ದಾರೆ.
ಈ ಕೆೞಗಿನ ಉದಾಹರಣೆಗಳನ್ನು ನೋಡಿ
ಸಂಖ್ಯೆ ೭ ಕನ್ನಡ, ತಮಿೞ್, ಮಲಯಾಳಂಗಳಲ್ಲಿ ಏೞು (ಕನ್ನಡದಲ್ಲಿ ಏೞ್ ಕೂಡ) ತೆಲುಗಿನಲ್ಲಿ ಏಡು
ಕನ್ನಡ, ತಮಿೞ್, ಮಲಯಾಳಂನಲ್ಲಿ ಕೋೞಿ ಕ್ರಮವಾಗಿ
ತೆಲುಗಿನಲ್ಲಿ ಕೋಡಿ,
ತುಳುವಿನಲ್ಲಿ ಕೋರಿ
ಕನ್ನಡ, ತಮಿೞ್, ಮಲಯಾಳಂನ ಕಿೞಂಗು ತುಳುವಿನಲ್ಲಿ ಕೆರಂಗು
ಕನ್ನಡ, ತಮಿೞ್, ಮಲಯಾಳಂನ ನೂಱು, ಆಱು, ತೊಱೆ ಕ್ರಮವಾಗಿ ತುಳುವಿನಲ್ಲಿ ನೂದು, ತುದೆ, ಆಜಿ
ಕನ್ನಡದ ಹೊಱಗೆ (ಪೊಱಗೆ) ತುಳುವಿನಲ್ಲಿ ಪಿದಾಯ್
ಹೀಗೂ ಇನ್ನು ಉದಾಹರಣೆಗಳನ್ನು ಕಾಣಬಹುದು.

- Login or register to post comments
- 387 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಮೇಲಿನ ಉದಾಹರಣೆಗಳಲ್ಲಿ ಸ್ವರಗಳ ಪಲ್ಲಟವನ್ನು ಅಷ್ಟಾಗಿ ಗಮನಿಸಿಲ್ಲ. ಉದಾಹರೆಣೆಗೆ ತಮಿೞ್ ಮತ್ತು ಮಲಯಾಳಂನ ಪುಱ ಕನ್ನಡದಲ್ಲಿ ಹೊಱ(ಪೊಱ) ತುಳುವಿನಲ್ಲಿ ಪಿದಾಯ್. ಕನ್ನಡ, ತಮಿೞ್, ಮಲಯಾಳಂನ ಆಱು ತುಳುವಿನಲ್ಲಿ ಆಜಿ. ಕನ್ನಡದ ಬಾೞೆಹಣ್ಣು ತುಳುವಿನಲ್ಲಿ ಬಾರೆದ ಪರಂದು ತಮಿೞಿನಲ್ಲಿ ವಾೞೈಪ್ಪೞಂ ಅಥವಾ ಮಲಯಾಳಂನಲ್ಲಿ ವಾೞಪ್ಪೞಂ
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
’ಱ’ ಕನ್ನಡ, ತಮಿೞ್, ತೆಲುಗು, ಮಲಯಾಳಂಗಳಲ್ಲಿ ಉಪಯೋಗದಲ್ಲಿದೆ. ಹೆಚ್ಚಾಗಿ ತಮ್ಮ ಅಜ್ಞಾನದ ಕಾರಣ ಕನ್ನಡ ಮತ್ತು ತೆಲುಗರು ’ಱ’ ಬದಲು ’ರ’ ಬೞಸುವುದನ್ನು ನೋಡುತ್ತೇವೆ. ತುಳುವಿನಲ್ಲಿ ’ಱ’ ಬದಲು ’ದ/ಜ’ ಬೞಕೆಯಾಗುತ್ತಿದೆ.
ನನ್ನ ಮಟ್ಟಿಗೆ ಇದು ಖಂಡಿತ ಅಜ್ಞಾನವಲ್ಲ - ಮಾತು, ಹಾಗೇ ಅರ್ಥಗಳೂ, ಕಾಲದಿಂದ ಕಾಲಕ್ಕೆ ಬದಲಾಗುವುದು ಸಹಜವೇ ತಾನೇ ?
ಉದಾಹರಣೆಗೆ : ಖಂಡಿತ ಅನ್ನುವ ಪದವನ್ನೇ ತೆಗೆದುಕೊಳ್ಳೋಣ. (ಸಂಸ್ಕೃತ ) ಮೂಲದ ’ಮುರಿದ, ಪುಡಿಯಾದ’ ಅನ್ನುವ ಅರ್ಥವನ್ನು ಬಿಟ್ಟು ನಾವೀಗ ನಿಶ್ಚಿತ, ನಿಶ್ಚಯವಾದ ಅನ್ನುವ ಅರ್ಥದಲ್ಲೇ ಕನ್ನಡದಲ್ಲಿ ಬಳಸುವುದಿಲ್ಲವೇ? ಇದಕ್ಕೆ ಅಜ್ಞಾನವೆನ್ನಬಹುದೇ? ಇದು ಭಾಷೆ ಮಾರ್ಪಾಡಾಗುವ ಒಂದು ಬಗೆ ಅಷ್ಟೇ ಅಲ್ಲವೇ?
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಖಂಡಿತ ಶಬ್ದಕ್ಕೆ ’ತುಂಡಾದದ್ದು, ಮುಱಿದದ್ದು’ ಎಂಬರ್ಥವು ಸರಿ. ಒಟ್ಟು ವಿಚಾರದಲ್ಲಿ ಯಾವುದೋ ಸ್ಪಷ್ಟ ಸಂಗತಿ ಹೇೞುವಾಗ ಇಂಗ್ಲಿಷಿನ clear cut=ಖಂಡಿತ. ಹಾಗಾಗಿ ಖಂಡಿತ ಸರಿ. ಆದರೆ ’ೞ’ ಮತ್ತು ’ಳ’ಗಳ ನಡುವಿನ ಉಚ್ಚಾರವ್ಯತ್ಯಾಸ ಕ್ರಮೇಣ ಜನಸಾಮಾನ್ಯ ಗುಱುತಿಸದಿರುವುದೇ ಆಗಿದೆ. ಅದು ಅವನ ಅಜ್ಞಾನ. ಕನ್ನಡ ಬೆಳೆಸಬೇಕಾದ ಪಂಡಿತರು ಇದಱ ಬಗ್ಗೆ ಆಸಕ್ತಿ ತೋಱದಿದ್ದುದೇ ಇದು ನಶಿಸಲು ಕಾರಣವಾಯ್ತು. ಆದರೆ ಈಗಲೂ ಸೋಲಿಗ ಹಾಗೂ ಬಡಗ ಭಾಷೆಗಳಲ್ಲಿ ಇನ್ನು ಇದು ಉೞಿದಿದೆ.
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಮಾರಾಯರೇ ಱ, ೞ ಬಗ್ಗೆ ಹೇಳಿ...
ನಿಮ್ಮ ಖ/ಕಂಡಿತ ಬೇರೆ ಚರಚೆ ತೆರೀರಿ.
ಕಂನಡ ಕಂದ ಚಂನಾಗಿದೆ ನಿಂಮೀ ಬರಹ!
=====================================
ಮಾಯ್ಸ!
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಖಂಡಿತ ತಪ್ಪು ಬಳಕೆ, ಅದು ಕಂಡಿತವೆಂದಾಗಬೇಕು. ಮಂ. ಗೋವಿಂದ ಪೈಗಳೂ ಸೇರಿದಂತೆ ಹಿರಿಯರು ಇದನ್ನು ತೋರಿಸಿಕೊಟ್ಟೀದ್ದಾರೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಖಂಡಿತವೇ ಇರಲಿ. ಅದು ಸಂಸ್ಕೃತದ "ಖಂಡ್=ತುಂಡಾಗು" ದಿಂದ ಉತ್ಪತ್ತಿಯಾದದ್ದು. ಈಗಾಗಲೇ ನಾವೆಲ್ಲಾ ಸುಶಿಕ್ಷಿತರಾಗಿದ್ದೇವೆ. ನಮಗೆಲ್ಲರಿಗೂ ಮಹಾಪ್ರಾಣ, ಶ, ಷ, ಸ, ಹ ಉಚ್ಚರಿಸಲು ಬರುತ್ತದೆ. ಹೀಗೆ ಅಕ್ಷರಗಳನ್ನು ಕಡಿಮೆಮಾಡಿಕೊಂಡು ನಮಗೆ "ನೆರವು" ಮತ್ತು "ನೆಱವು" , "ಬಾಳ್" ಮತ್ತು "ಬಾೞ್" ನಡುವೆ ವ್ಯತ್ಯಾಸ ಗೊತ್ತಾಗದಂತೆ ಇರುವುದು ಬೇಡ. ಇರುವ ಎಲ್ಲಾ ಉಚ್ಚಾರಗಳನ್ನು ಬೞಸೋಣ. ಕನ್ನಡ ಚೆನ್ನಾಗಿ ಕಲಿಯೋಣ. ನಮ್ಮಿಂದಾಗಿ ಭಾಷೆಗೆ ಪೆಟ್ಟು ಬೀೞುವುದು ಬೇಡ. ಭಾಷೆಯ ಅವನತಿ ನಮ್ಮಿಂದ ಬೇಡ.
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಅನಂತ,
ಮಹಾಪ್ರಾಣಗಳು ಇರಬೇಕೆನ್ನುವವನೇ ನಾನು. ಆದರೆ 'ಖಂಡಿತ ತಪ್ಪು ಬಳಕೆ, ಅದು ಕಂಡಿತವಾಗಬೇಕು' ಎಂಬ ಗೋವಿಂದ ಪೈಗಳ ಮಾತಿನ ಬಗ್ಗೆ ಏನೆನ್ನುತ್ತೀರಿ? ಹೀಗೇ 'ಒಂಭತ್ತು', 'ತೊಂಭತ್ತು' ತಪ್ಪು ಬಳಕೆಗಳಾಗಿರಬೇಕು. 'ಖಾನಾವಳಿ' ಎಂಬಲ್ಲಿ 'ಕಾನಾವಳಿ' ಎನ್ನಬೇಕೆನ್ನುತ್ತಿಲ್ಲ.
ಮಹಾಪ್ರಾಣಗಳ ಜೊತೆಗೆ ಱ,ೞಗಳೂ ಕನ್ನಡಕ್ಕೆ ಬೇಕು, ಇದರಲ್ಲಿ ಯಾವುದೇ ಅನುಮಾನವಿಲ್ಲ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಆ "ಖಂಡಿತ" ಕ್ಕೆ ಮೂಲವೇನೋ? ತಿಳಿದಿದ್ದರೆ ನೀವೇ ಹೇೞಿ. ಇಲ್ಲವಾದರೆ ಈ ಸಂಸ್ಕೃತದ "ಖಂಡಿತ" ವನ್ನೇ ನಂಬಿರುತ್ತೇನೆ.
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಸಾರ್..
ಇಲ್ಲಿ ನೀವು ಮಾತಾಡ್ತಾ ಇರೋದು " ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ " ನಿಕ್ಕುವ ’ಖಂಡಿತ/ಕಂಡಿತ’ ಬಗ್ಗೆಯಲ್ಲ!
=====================================
ಮಾಯ್ಸ!
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಮಹೇಶ್
ಹಂಸಾನಂದಿ 'ಖಂಡಿತ' ಬಗ್ಗೆ ತಿಳಿಸಿದ್ದರಿಂದ ಅದರ ಬಗ್ಗೆ ಬರೆದೆನು. ನಿಕ್ಕುವ, 'ತೆನ್ನುಡಿಗಳಲ್ಲಿ 'ಱ' ಮತ್ತು 'ೞ' ವಿಧವಿಧವಾಗಿ ಬಳಕೆಯಾಗುತ್ತವೆ' ಎಂಬುದರ ಕುರಿತು ಅನುಮಾನವಿಲ್ಲ. ಮಾತಿನ ದಿಕ್ಕು ತಪ್ಪಿಸಲಿಕ್ಕೆ ಹೇಳಿದ್ದಲ್ಲ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ನಾನು ಹಂಸಾನಂದಿಯವರ ಮಾತಿಗೆ ಕೊರಲುಸೇರಿಸುವೆನು..
ಕನ್ನಡ ಮತ್ತು ತೆಲುಗರಿಗೆ ಱ/ರ ಮತ್ತು ಳ/ೞಗಳ ನಡುವಿನ ಉಲಿಕೆಯಲ್ಲಿರುವ ಬೇರೆತನ ತಿಳಿಯುವುದಿಲ್ಲ. ಏಕೆಂದರೆ ಅವರು ಅವನ್ನು ಬೇರೆ ಬೇರೆಯಾಗಿ ಉಲಿಯುತ್ತಿಲ್ಲ. ಅದಕ್ಕೆ ಎರಡೂ ಅಕ್ಕರಗಳಿಗೆ ರ ಮತ್ತು ಳ ಅಕ್ಕರಗಳನ್ನೇ ಬಳಸುತ್ತಾರೆ..
ಆದರೂ ಹಳೆಗನ್ನಡ/ತಲುಗು ಓದುವಾಗ ಬಂಡಿ ರ ಎಂದು ಇವನ್ನು ಹೇಳಿಕೊಡುವುದುಂಟು. ಅಂದರೆ ನಮ್ಮ ಹಳೆಗನ್ನಡದಲ್ಲಿ ಇದು ಇತ್ತು ತರುವಾಯ ಅವು ಬಳಕೆ ತಪ್ಪಿದವು ಎಂದೇ ನಾವು ಕಲಿತಿರುವುದು. ಅದು ದಿಟವಾದದು.. ನನಗಂತೂ ಹಂಸಾನಂದಿಯವರಂತೆ ಎಲ್ಲಿ ರ ಎಲ್ಲಿ ಱ ಎಂದು ತಿಳಿಯಲ್ಲ.
ಇಂಗ್ಲೀಸಲ್ಲೂ thou, ಮುಂತಾದ ಪದಗಳು, thಸೇರಿದ ಕ್ರಿಯಾಪದಗಳು ಮರೆಯಾಗಿವೆ. ಹಳೆ ಇಂಗ್ಲೀಸಿಗೂ, ಹೊಸ ಇಂಗ್ಲೀಸಿಗೆ ಉಲಿಕೆಯಲ್ಲಿ ಬೇರೆತನವಿದೆ....
ಬದುಕಿರುವ ಬದುಕುತ್ತಿರುವ ನುಡಿಗಳಿ ಇದು ಸಾಮಾನ್ಯ.. ಎಲ್ಲವೂ ಸಕ್ಕದದಂತೆ ಮಾರ್ಪಡು ಹೊಂದದೇ ಇರೋ ನುಡಿಗಳು ಆಡುಮಾತಲ್ಲಿ ಇರೊಲ್ಲ.!!
ಬೊಳುಂಬು, ಹಂಸಾನಂದಿಯವ ಮಾದರಿ ಸರಿಯಾಗಿ ಅವರು ಖಂಡಿತ ಎಂಬ ಒರೆ ಅರ್ಥ ಹೇಗೆ ಸಕ್ಕದಕ್ಕಿಂತ ಕನ್ನಡದಲ್ಲಿ ಬೇರೆಯಾಗಿದೆ ಎಂದು ತಿಳಿಸಿದ್ದರೆ.. ಅದು ಒಂದು ಮಾದರಿ/ಉದಾಹರಣೆ. ಖಂಡಿತ ಅನ್ನೋ ಬಳಕೆ ಕನ್ನಡದಲ್ಲಿ ಇರೋದು ದಿಟ!
=====================================
ಮಾಯ್ಸ!
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಮಾಯ್ಸ,
ಹಲವರು ಕೊರಳು ಎನ್ನುತ್ತಾರಲ್ಲದೆ ಕೊರಲು ಎನ್ನುವವರು ಕಡಿಮೆ. ಮಂದಿಯ ನುಡಿಗೆ ಹತ್ತಿರವಿದ್ದೀರೆಂದುಕೊಳ್ಳುವಿರಾದರೆ 'ಕೊರಳು' ಎನ್ನಬೇಕಾಗಿತ್ತು.
ಹಂಸಾನಂದಿಯವರು ಹೇಳಿದ್ದು ಬಳಕೆಯ ಅರ್ಥ ಬದಲಾಗಿದೆ ಅಂತ.
ಖಂಡಿತ ಅನ್ನೋ ಬಳಕೆ ಕನ್ನಡದಲ್ಲಿ ಇರೋದು ದಿಟವೆಂದು ಒಪ್ಪಿದರೆ ಕನ್ನಡದಲ್ಲಿ ಮಹಾಪ್ರಾಣವಿರುವುದೂ ದಿಟ.
ಅನಂತ,
'ಕಂಡಿತ' - ಇದರ ಹಿನ್ನೆಲೆಯ ಬಗ್ಗೆ ವಿವರಗಳನ್ನು ಹುಡುಕಿ ತಿಳಿಸುತ್ತೇನೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಹಂಸಾನಂದರ ಆಡುಮಾತು ತಮಿೞ್ ಮತ್ತು ಕನ್ನಡ ಮಿಶ್ರಣದ ಭಾಷೆ. ಅವರಿಗೆ ’ಱ’ ಮತ್ತು ’ೞ’ ನಡುವೆ ವ್ಯತ್ಯಾಸ ಗೊತ್ತಿಲ್ಲವೆಂದರೆ ನಾನೊಪ್ಪಲಾಱೆ. ಅವರಿಗೆ ತಮಿೞಿನ "ಉಲಗಂ ನಿಱೈಂದ ಪೆರುಮಾಳ್" ಎಂದರೆ ಗೊತ್ತಾಗದೆಂದು ನಾ ಭಾವಿಸಲಾಱೆ.

ನಾನು ಆಱೆ
=====================================
ಮಾಯ್ಸ!
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಈ ಆರ್ಪು ಶಬ್ದಕ್ಕೆ "ಶಕ್ತಿ" ಎಂಬರ್ಥ ನೀವು ಕೊಟ್ಟಿದ್ದು. ಅದು ಸರಿಯಾಗಲಾಱದೆಂದು ನಾನು ಪ್ರತಿಕ್ರಿಯಿಸಿದ್ದು ಈ ಆರ್ಪು="ಆಱ್+ಪು=ಸಮರ್ಥತೆ, ಕಾರ್ಯಕ್ಷಮತೆ ಎಂಬುದು ಪ್ರಮುಖ ಅರ್ಥವಾಗಿದ್ದು ಶಕ್ತಿ ಎಂಬುದು ಸೂಚ್ಯಾರ್ಥವೆಂದು ಬದಲಿಗೆ ಉರಿ=ಶಕ್ತಿ ಪರ್ಯಾಯವಾಗಿ ಬೞಸಬಹುದೆಂಬ ನನ್ನ ವಿಚಾರಕ್ಕೆ ನೀವು ಪ್ರತಿಕ್ರಿಯಿಸದಿದ್ದುದು ಹೞೆಯ ವಿಚಾರ. ಈಗ ನೀವೇನು ಮಾಡಲಾಱಿರಿ ಹೇೞಿ.
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಆರ್ಪು ಮತ್ತು ಬಲ್ಮೆಗೂ ಏನು ಬೇರೆತನ?
ಅದಿರಲಿ ಬಿಡಿ... ಱ ಮತ್ತು ೞ ಬಗ್ಗೆ ಹೇಳಿ
ನೀವು ತುಂಬ ’ನಾನು ಆಱೆ, ನಾನು ಬಲ್ಲೆ" ಎಂದು ಬರೆಯೋದು ಜಾಸ್ತಿ.. ಅದನ್ನು ನಾನು ಕೋಟ್ ಮಾಡಿದೆನಶ್ಟೆ!
=====================================
ಮಾಯ್ಸ!
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಆರ್ಪು- capability
ಬಲ್ಮೆ - expertise
??
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
capable = ಶಕ್ತ, ಸಮರ್ಥ, ಆರ್ಪ( ಬಳಕೆ ನೋಡಿ )
ಬಲ್ಲ = ತಿಳಿದು, ಅರಿತು, ಮಾಡತಕ್ಕವನು...
=====================================
ಮಾಯ್ಸ!
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಬಲ್ಲವಂಗೆ(ಬಲ್ಮೆಯುಳ್ಳವಂಗೆ) ಆರ್ಪುಂಟು. ಆರ್ಪುಳ್ಳವಂ ಬಲ್ಮೆಗಾರನಾಗಬೇಕಿಲ್ಲ. ಬಲ್ಮೆಗೆ ಸಹಜವಾಗೆ ಆರ್ಪುಂಟು. ಶಕ್ತತೆ ಇದೆ. ಆರ್ಪುಳ್ಳವ (ಸಾಮರ್ಥ್ಯ ತೋಱಿಸಬಹುದು) ಬಲ್ಮೆಯುಳ್ಳವನಾಗಬೇಕಿಲ್ಲ. ಉರಿಯುವುದಕ್ಕೆ ಶಕ್ತಿಕೊಡುವ ಆರ್ಪುಂಟು. ಆರ್ಪಿಗೆ(ಸಾಮರ್ಥ್ಯಕ್ಕೆ) ಶಕ್ತಿಗೆ ಕಾರಣವಾದ ಉರಿ ಇರಬೇಕೆಂದಿಲ್ಲ.
ಉ: ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
ಆರ್ಪಿಗೆ ಮೂಲ ಬಲ್ಮೆ(ಬಲ). ಬಲ್ಮೆಯಿದ್ದರೆ ಆರ್ಪು (ಶಕ್ಯತೆ). ಉರಿಯಿದ್ದರೆ ಶಕ್ತಿ ಸಾಧ್ಯತೆ. ಶಕ್ತಿಯ ಸಾಧ್ಯತೆಯೇ ಈ ಆರ್ಪು. ಇವುಗಳ ಕಾರ್ಯಕಾರಣ ಈ ರೀತಿ ಹೇೞಬಹುದು. ಉರಿ->ಶಕ್ತಿ->ಆರ್ಪು(ಸಮರ್ಥತೆ)