ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ

ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ
ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ

ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ
ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ

ಇಲ್ಲಿ ಎರಡು ಒರೆಗಳು ಸೇರಿ ಬೇರೆ ಜೋಡಿಪದವಾಗಿ ಇನ್ನೊಂದು ಅರಿತವನ್ನು ಕೊಡುತ್ತೆ. ಏನದು ಹೊಸ ಅರ್ತ?

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ

Sunil Jayaprakash's picture

ತೊಟ್ಲುಗಾಯ್ - ಮಗು ??
ಬಟ್ಲುಗಾಯ್ - ಮಗುವಿಗೆ ಕುಡಿಸಬೇಕೆಂದಿರುವ ಹಾಲು ??

ಉ: ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ

hamsanandi's picture

ಬಟ್ಲುಗಾಯ್ ವಿಷಯ ನನಗೆ ಗೊತ್ತಿಲ್ಲ.

ಆದರೆ, ತೆಂಗಿನ ಕಾಯಿ ಒಡೆದಾಗ ಮಾಮೂಲಿನಂತೆ ಅಡ್ಡಕ್ಕೆ ಸೀಳದೆ, ಉದ್ದುದ್ದವಾಗಿ ಎರಡು ಪಾಲಾದರೆ (ಅಂದರೆ ಜುಟ್ಟಿನ ಭಾಗದಿಂದ, ಅದರ ಎದುರು ತುದಿಯ ಕಡೆಗೆ) ಅದಕ್ಕೆ ತೊಟ್ಟಿಲುಕಾಯಿ ಅಂತಾರೆ.

ಕಾಯಿ ಹೀಗೆ ಒಡೆದುಕೊಂಡರೆ, ಮನೆಯಲ್ಲಿ ತೊಟ್ಟಿಲುಕಟ್ಟತ್ತೆ (ಅರ್ಥಾತ್ ಮಗುವೊಂದು ಹುಟ್ಟಲಿದೆ) ಅನ್ನೋದು ಅಜ್ಜಿಕಾಲದ ಭವಿಷ್ಯ ವಾಣಿ :)

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wor...

ಉ: ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ

ವೈಭವ's picture

ಹಂಸಾನಂದಿ,
ನೀವು ಹೇಳಿರುವ ವಾಡಿಕೆ ನಮ್ಮ ಕಡೆನೂ ಇದೆ. ತೊಟ್ಲುಗಾಯ್ ಒಡೆದರೆ ಆ ಮನೇಲಿ ತೊಟ್ಲು ಕಟ್ಟುವುದು ನಿಕ್ಕುವ ಅಂತೆ. ಎರಡು ತೊಟ್ಲುಗಾಯ್ ಏನಾದರೂ ಒಡೆದರೆ ಎರಡು ತೊಟ್ಲು ಕಟ್ ಬೇಕಾಗುತ್ತಂತೆ. :)

ಬಟ್ಲುಗಾಯ್ - ಮಾಮೂಲಿನಂತೆ ತೆಂಗಿನ ಕಾಯಿ ಒಡೆದರೆ ಅದು ಬಟ್ಟಲು ಆಕಾರದಲ್ಲಿರುವುದರಿಂದ ಅದನ್ನ ಬಟ್ಲುಗಾಯ್ ಅಂತಾರಂತೆ. ಪೂಜೆಗೆ ತೆಂಗಿನಕಾಯಿ ಒಡೆಯುವಾಗ ಹೀಗೆ ಬಟ್ಲುಗಾಯಿಯಾಗಿದ್ದರೆ ಚೆಂದ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಉ: ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ

ಶ್ರೀನಿಧಿ's picture

ಹಂಗಾದ್ರೆ ತೆಂಗಿನ ಕಾಯಿ ಒಡೆಯುವಾಗಲೂ ಹುಶಾರಾಗಿರಬೇಕು :P

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಉ: ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ

ಸಂಗನಗೌಡ's picture

:D
ಬರೀ ತೆಂಗಿನಾಕಾಯಿ ಅಲ್ಲರೀ,.. ಯಾವುದರ ಮೀಸಲು ಮುರಿಯುವಾಗಲೂ ಹುಶಾರಾಗೇ ಇರಬೇಕು.... :P

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.