ಸಮಾಸ ವಿಚಾರ
ಹಣೆಗಣ್ಣ - ಹಣೆಯಲ್ಲಿ ಕಣ್ಣುಳ್ಳವನು ಹಣೆಗಣ್ಣ.
ನಾನು ಕಂಡಂತೆ ಇದು ಬಹುವ್ರೀಹಿ. ಹಣೆ ಮತ್ತು ಕಣ್ಣ ಈ ಎರಡು ಪದಗಳ ಸಹಾಯದಿಂದ ಅರ್ಥ ಗೊತ್ತಾಗುವುದಿಲ್ಲ.
ಗಮನಿಸಿ, ಇಲ್ಲಿ ಮೇಲ್ನೋಟಕ್ಕೆ ಕಾಣಿಸದಿದ್ದರೂ 'ಉ' ಪ್ರತ್ಯಯವಿದೆ. 'ಉಳ್ಳವನು' ಎಂಬುದು ಸಮಾಸ ಪದದಲ್ಲಿ ಬರುವುದಿಲ್ಲ, ಹಾಗಾಗಿ ಇದು ಬಹುವ್ರೀಹಿ.
ಇದನ್ನು ತತ್ಪುರುಷ ಎನ್ನುವವರು ಯಾರು?

- Login or register to post comments
- 396 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಸಮಾಸ ವಿಚಾರ
ಕನ್ನಡದಲ್ಲಿ ಸಮಾಸವೇ ಇಲ್ಲ. ಇರೋದೆಲ್ಲ ಜೋಡಿಪದ.
ಇದು ಯಾವ ಸಮಾಸ ಅಂತ ತಲೆಕೆಡಿಸಿಕೊಳ್ಳಬೇಕಾಗಿಲ್ಲ.
ಇತ್ತೀಚೆಗೆ ಡಾ|| ಡಿ.ಎನ್. ಶಂಕರಬಟ್ಟರು ಜೋಡಿಪದಗಳಲ್ಲಿರುವ ಬಿಡಿಪದಗಳು ಕ್ರಿಯಾಪದವೊ, ನಾಮಪದವೊ ಎಂಬುದರ ಮೇಲೆ ಈ ಕೂಡಿಕೆಗಳನ್ನು ವಿಂಗಡಿಸಿದ್ದಾರೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸಮಾಸ ವಿಚಾರ
ಶಂಕರ ಭಟ್ಟರು ಹೇಳಿದ್ದೊಂದೇ ನಿಜವಲ್ಲ. ಅವರ ಪುಸ್ತಕದಿಂದ ಎತ್ತಿಕೊಂಡಂಥದ್ದೇ ಈ ಉದಾಹರಣೆ. ನೀವು ಬೇಕಾದರೆ 'ಕೂಡುವಿಕೆ' ಎನ್ನಿ, ಆದರೆ ಸಮಾಸ ನಿಯಮಗಳ ಪ್ರಕಾರ ಅದು ಬಹುವ್ರೀಹಿಯೇ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಸಮಾಸ ವಿಚಾರ
ಅದನ್ನೇ ಅವರು ಹೇಳಿದ್ದು...
ಕನ್ನಡದಲ್ಲಿ ಸಮಾಸ ಇಲ್ಲ.. ಕೂಡುಪದಗಳಿವೆ ಎಂದು...
ಹಣೆಗಣ್ಣ ಬಹುವ್ರೀಹಿ ಆದರೆ..
Tinhead, Shithead, GodFather ಕೂಡ ಬಹುವ್ರೀಹಿಗೆ ಒಂದು ಮಾದರಿ. ಹಾಗಾದರೆ ಇಂಗ್ಲೀಶಲ್ಲು ಬಹುವ್ರೀಹಿ ಇದೆ.
=====================================
ಮಾಯ್ಸ!
ಉ: ಸಮಾಸ ವಿಚಾರ
ಶಂಕರಬಟ್ಟರ ಒಬ್ಬರೆ ಅಲ್ಲ. ಡಾ| ಕೆ.ವಿ.ನಾರಾಯಣರವರು ಹೆಚ್ಚು-ಕಡಿಮೆ ಇದನ್ನೆ ಹೇಳಿದ್ದಾರೆ
http://www.prajavani.net/Content/Jun222008/weekly2008062184914.asp
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸಮಾಸ ವಿಚಾರ
ಮಾರಾಯರೇ...
ಹಣೆಗಣ್ಣ ಎಂದು ಹಣೆಯಲ್ಲಿ ಕಣ್ಣು ಉಳ್ಳವರು ಎಂದೇ ಆಗಬೇಕಿಲ್ಲ....
ತತ್ಪುರಷವನ್ನು ಒಡೆದು ಹಲವು ಸಮಾಸಗಳು ಬಂದಿವೆ ಅದರಲ್ಲಿ ಬಹುವ್ರೀಹಿ ಕೂಡ ಒಂದು
ವಾಯುಪುತ್ರ = ವಾಯುವಿನ ಪುತ್ರ ಎಂದು ಬಿಡಿಸಿದರೆ ಶಶ್ಟಿ ತತ್ಪುರುಷ
ವಾಯುಪುತ್ರ ಎಂದರೆ ಬೀಮ, ಹನುಮ ಎಂದಾಗ ಬಹುವ್ರೀಹಿ.
ಹಣೆಯೇ ಕಣ್ಣಾದವನು
ಕಣ್ಣೇ ಹಣೆಯಾದವರು
ಹೀಗೆ ಸಾಕಶ್ಟು ಬಗೆಯಲ್ಲಿ ಬಿಡಿಸಬೋದು.. ಒಟ್ಟಿನಲ್ಲಿ ಹೇಳಿದರೆ ಹಣೆ ಮತ್ತು ಕಣ್ಣಿ ನಂಟಿರುವ ಗಂಡಸು. ಎಂದಶ್ಟೇ. ಹಣೆಗಣ್ಣ ಅಂದರೆ ಶಿವ ಎಂದಾದಾಗ ಅದು ಬಹುವ್ರೀಹಿ.
ಕನ್ನಡದಲ್ಲಿ ಸಮಾಸವಿಲ್ಲ. ಕನ್ನಡಕ್ಕೆ ಸಮಾಸ ಎಂಬ ವ್ಯಾಕರಣಾಂಶವನ್ನು ತೋರಿಸಲು ಪಟ್ಟ ತೊಡಕುಗಳನ್ನು ಶಂಕರಬಟ್ಟರು ಚನ್ನಾಗಿ ವಿವರಿಸಿದ್ದಾರೆ.
ಹಣ್ಣನ್ನು ಕುಯ್ಯಿ = ಹಣ್ಣುಕುಯ್ಯಿ ಕ್ರಿಯಾಸಮಾಸವೂ ಹವುದು, ತತ್ಪುರುಶವೂ ಹವುದು.
ಕ್ರಿಯಾಸಮಾಸ ಸಕ್ಕದದಲ್ಲಿ ಇಲ್ಲ...
ಆ ಮನೆ = ಅದು ಮನೆ ಎಂದು ಬಿಡಿಸಿ ಗಮಕ ಸಮಾಸ ಎನ್ನುವರು.. ಆದರೆ ಸಮಾಸ ಕ್ರಿಯೆಯಿಂದ ’ಆ ಮನೆ’ ಎಂದು ಎರಡು ಒರೆಗಳು ಬಂದಿವೆಯಲ್ಲ.. ಸಮಾಸದಿ ಒಂದೇ ಒರೆಯಲ್ಲವೇ ಬರೋದು.!
ಕನ್ನಡ ಜೋಡಿಪದಕ್ಕೂ, ಸಮಾಸಕ್ಕೆ ಬಾನ್ನೆಲದ ದೂರವಿದೆ. !!
=====================================
ಮಾಯ್ಸ!
ಉ: ಸಮಾಸ ವಿಚಾರ
ಮಾರಾಯ ಮಾಯ್ಸ,
ಹಣೆಗಣ್ಣ - ಹಣೆಯಲ್ಲಿ ಕಣ್ಣುಳ್ಳವನು ಹಣೆಗಣ್ಣ. ಇದೇ ಸರಿಯಾಗಿ ಬಿಡಿಸುವ ರೀತಿ. ಹಣೆಯೇ ಕಣ್ಣಾದವನು, ಕಣ್ಣೇ ಹಣೆಯಾದವರು ಮುಂತಾಗಿ ಬಿಡಿಸಿದರೆ ಅದರ ನಿಜವಾದ ಅರ್ಥ ಸಿಗುವುದಿಲ್ಲ. (ಹಣೆಗಣ್ಣ = ಶಿವ)
ಶಂಕರ ಭಟ್ಟರು ಕನ್ನಡದಲ್ಲಿ ಸಮಾಸವಿಲ್ಲವೆಂದು ಬರೆದದ್ದು ನಿಜವಿರಬಹುದು, ಆದರೆ ಇಂತಹ ವಿರಚನೆಗಳಿಂದಾಗಬಹುದಾದ ನ್ಯೂನತೆಗಳನ್ನು ಪರಿಹರಿಸಿಕೊಳ್ಳುವವರೆಗೂ ಕನ್ನಡದಲ್ಲಿ ಸಮಾಸವಿದೆಯೆಂದು ಒಪ್ಪಲೇಬೇಕಾಗುತ್ತದೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಸಮಾಸ ವಿಚಾರ
ರೀ ಅದನ್ನು ತಿಳಿಯುವ ಮುನ್ನ...
ವಾಯುಪುತ್ರ ಬಿಡಿಸಿಕೆ ಬಗ್ಗೆ ಹೇಳಿ..
ತತ್ಪುರಷವನ್ನು ಒಡೆದು ಹಲವು ಸಮಾಸಗಳು ಬಂದಿವೆ ಅದರಲ್ಲಿ ಬಹುವ್ರೀಹಿ ಕೂಡ ಒಂದು
ವಾಯುಪುತ್ರ = ವಾಯುವಿನ ಪುತ್ರ ಎಂದು ಬಿಡಿಸಿದರೆ ಶಶ್ಟಿ ತತ್ಪುರುಷ
ವಾಯುಪುತ್ರ ಎಂದರೆ ಬೀಮ, ಹನುಮ ಎಂದಾಗ ಬಹುವ್ರೀ
ಇದು ಸರಿಯಿಲ್ಲವೇ...
ಜಡೆಹುಟ್ಟ => ಜಡೆಯಿಂದ ಹುಟ್ಟಿದವನು (ತತ್ಪುರುಷ_ => ವೀರಭದ್ರ(ಬಹುವ್ರೀಹಿ)
ಎಣ್ಮಯ್ಯ => ಎಂಟು ಮಯ್ಯ( ದ್ವಿಗು ಸಮಾಸ ) => ಶಿವ ( ಬಹುವ್ರೀಹಿ )
ಬಹುವ್ರೀಹಿ ಆಗುವ ಮೊದಲು ಅದು ಮತ್ತೊಂದು ಸಮಾಸ ಆಗಿರ್ತದೆ...
ಸುಮ್ನೆ ಪೋನ್ ಬೇರೆ ಮಾಡ್ತೀರ.!!
=====================================
ಮಾಯ್ಸ!
ಉ: ಸಮಾಸ ವಿಚಾರ
ವಾಯುಪುತ್ರ ಬಹುವ್ರೀಹಿಯಲ್ಲ. ಇಲ್ಲಿ ಎರಡು ಪದಗಳನ್ನು ಬಿಡಿಸಿದರೆ ವಾಯುವಿನ ಪುತ್ರ ಎಂದಾಗುತ್ತದೆ.
ಪೀತಾಂಬರ[ನು]-ಬಹುವ್ರೀಹಿ. ಪೀತ ವರ್ಣದ ಅಂಬರವುಟ್ಟವನು. ಪೀತ ಮತ್ತು ಅಂಬರ ಎಂದರೆ ಅರಶಿನ ಬಣ್ಣದ ಬಟ್ಟೆ ಎಂದಷ್ಟೇ ಅರ್ಥ.
ಹಣೆಗಣ್ಣ ತೆಗೆದುಕೊಂಡಾಗ ಹಣೆಗಣ್ಣ - ಹಣೆಯಲ್ಲಿ ಕಣ್ಣುಳ್ಳವನು ಹಣೆಗಣ್ಣ(ಶಿವ) .
ಹಣೆಯ ಕಣ್ಣ
ಹಣೆಯಲ್ಲಿ ಕಣ್ಣ ಎಂಬಂತಹ ಪ್ರಯೋಗಗಳಿಲ್ಲ.
Tinhead, Shithead, GodFather ಕೂಡ ಬಹುವ್ರೀಹಿಗೆ ಒಂದು ಮಾದರಿ. ಹಾಗಾದರೆ ಇಂಗ್ಲೀಶಲ್ಲು ಬಹುವ್ರೀಹಿ ಇದೆ
ಎರಡನ್ನೂ ನೀವೇ ಹೇಳಿದಿರಿ, ಥ್ಯಾಂಕ್ಸ್.
ಫೋನ್ ಮಾಡಿದ್ದು ನಿಮಗೆ ವಿಶಸ್ ತಿಳಿಸುವ ಉದ್ದೇಶದಿಂದ ಮಾತ್ರ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು