ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡ ತಮಿೞಿಗಿಂತ ಹೞೆಯದೇ?

June 24, 2008 - 10:28am — kannadakanda

ಕನ್ನಡ ತಮಿೞಿಗಿಂತ ಹೞೆಯದಿರಬಹುದೆನ್ನುವುದಕ್ಕೆ ಎರಡು ಉದಾಹರಣೆಗಳನ್ನು ಕೊಡುತ್ತೇನೆ.
೧) ದಿಕ್ಕು
೨) ತಾಲವ್ಯೀಕರಣ

೧) ದಿಕ್ಕು:
ಮೂಡಣ ಮತ್ತು ಪಡುವಣ ದಿಕ್ಕುಗಳಿಗೆ ತಮಿೞರು ಮತ್ತು ಮಲಯಾಳಂನವರು ಕಿೞಕ್ಕು(ಕೆೞಗೆ)=ಮೂಡಣ, ಮೇಱ್ಕು (ಮೇಲೆ)=ಪಡುವಣ ಎಂದರು. ಗಮನಿಸಿ ಕೇರಳಕ್ಕೆ ಕರಾವಳಿ (ತಗ್ಗು ಪ್ರದೇಶ ಅಥವಾ ಕೆೞಗಿನ ಪ್ರದೇಶ) ಪಡುವಣವಾಗಿದ್ದರೂ ಅವರು ಮೇಱ್ಕು ಎನ್ನುವುದು ಅವರ ಭಾಷೆ ಮೊದಲು ತಮಿೞೇ ಆಗಿರಬಹುದೆಂಬುದಕ್ಕೆ ಪುರಾವೆಯಾಗಿದೆ. ಆದ್ದಱಿಂದ ಮೇಲಿದ್ದರೂ ಮೂಡಣ ಕೇರಳಿಗರಿಗೆ ಕಿೞಕ್ಕು=ಕೆೞಗೆ. ಯಾಕೆಂದರೆ ಅವರಿಗೆ ಇದು ತಮಿೞರ ಪ್ರಭಾವ. ಆದರೆ ನಾವು ಇದಕ್ಕಿಂತ ಬೇಱೆಯಾದ "ಮೂಡಣ" (ಸೂರ್ಯ ಮೂಡುವ ದಿಕ್ಕು) "ಪಡುವಣ" (ಸೂರ್ಯ ಪಡುವ (ಮಲಗುವ) ದಿಕ್ಕು) ಎಂದು ಬೞಸುತ್ತೇವೆ.

೨) ತಾಲವ್ಯೀಕರಣ:
ಕನ್ನಡದ ಕವರ್ಗದಿಂದ ಪ್ರಾರಂಭವಾಗುವ ಶಬ್ದಗಳು ತಮಿೞಿನಲ್ಲಿ ಮುಂದಿನ ಅಕ್ಷರಗಳಲ್ಲಿ ಮೂರ್ಧನ್ಯ(ಪ್ರತಿವೇಷ್ಟಿತ)ವಿರದಿದ್ದರೆ ಅಂದರೆ ಮುಂದಿನ ಅಕ್ಷರಗಳು ಟವರ್ಗ ಮತ್ತು ಳ ಆಗದಿದ್ದರೆ ಕವರ್ಗಕ್ಕೆ ಬದಲು ಚವರ್ಗ (ತಾಲವ್ಯಗಳು) ಬೞಸುವುದನ್ನು ಕಾಣುತ್ತೇವೆ. ತೆಲುಗಿನಲ್ಲಿ ಯಾವಾಗಲೂ ತಾಲವ್ಯಗಳೇ ಬೞಕೆಯಾಗುವುದನ್ನು ಕಾಣುತ್ತೇವೆ.

ನೋಡಿ:
ಕನ್ನಡದ ಕಿವಿ(ಮಿ), ತಮಿೞ್ ಮತ್ತು ತೆಲುಗುಗಳಲ್ಲಿ ಚೆವಿ ತಮಿೞರು ’ಚ’ಕ್ಕೆ ’ಸ’ ಮಾತಾಡುವಾಗ ವಾಡಿಕೆಯಲ್ಲಿ ಬೞಸುತ್ತಾರೆ. ಕಿವಿಗೆ ಕಾದು ಎಂಬ ಪದ ಸಾಮಾನ್ಯವಾಗಿದ್ದರೂ ಚೆನ್ನಾಗಿ ತಮಿೞ್‍ ಬಲ್ಲವರು ಸೆ(ಚೆ)ವಿ ಎಂಬ ಇನ್ನೊಂದು ಪದ ಗುಱುತಿಸುತ್ತಾರೆ.
ಕೆಲ(ಕೆಲವು)=ಚಿ(ಸಿ)ಲ (ತಮಿೞಿನಲ್ಲಿ)
ಕಿಱು(ಸಣ್ಣ) =ಚಿ(ಸಿ)ಱು(ತಮಿೞಿನಲ್ಲಿ)
ಕೇರಿ=ಚೇರಿ (ಗಮನಿಸಿ ತಮಿೞರ ಪುದುಚೇರಿ ಅಥವಾ ಪಾಂಡಿಚೇರಿ)
ಕಿವುಡು=ಚೆವಿಡು(ಸೆವಿಡು)(ತಮಿೞ್)=ಚೆವಿಟಿ(ತೆಲುಗು)
ಪರದಲ್ಲಿ ಟವರ್ಗ ಮತ್ತು ಳ ಇದ್ದಾಗ ಈ ರೂಪಾಂತರ ತಮಿೞಿನಲ್ಲಿ ಅನ್ವಯಿಸುವುದಿಲ್ಲ.
ಗಿಳಿ=ಕಿಳಿ(ತಮಿೞ್‍) ತಮಿೞಿನಲ್ಲಿ ಯಾವಾಗಲೂ ಪದಾರಂಭದಲ್ಲಿ ಅಘೋಷಗಳೇ.
ಕೆಡು=ಕೆಡು (ತಮಿೞ್‍)
ಆದರೆ ತೆಲುಗಿನಲ್ಲಿ ಯಾವಾಗಲೂ ತಾಲವ್ಯವೇ ಇರುತ್ತದೆ.
ಉದಾಹರಣೆಗೆ
ಕೆಯ್(ಗೆಯ್)(ಕನ್ನಡದಲ್ಲಿ ಮಾಡು)= ಚೆಯ್‍(ತಮಿೞ್‍ ಮತ್ತು ತೆಲುಗುಗಳಲ್ಲಿ)
ಕೆರ್ಪು(ಕೆಪ್ಪು=ಚಪ್ಪಲಿ)=ಚೆರುಪ್ಪು(ತಮಿೞ್)=ಚೆಪ್ಪು(ತೆಲುಗು) (ತೆಲುಗಿನಲ್ಲಿ ಚೆಪ್ಪಲಿಗಳು ಜೊತೆಯಾಗಿಯೇ ಇರುವುದಱಿಂದ ಚೆಪ್ಪುಲು ಎಂದು ಬಹುವಚನವನ್ನೇ ಬೞಸುವುದಱಿಂದ ನಮಗೆ ಚಪ್ಪಲ್‍ (ಹಿಂದಿ) ಎಂದೇ ಹೇೞುತ್ತಾರೇನೋ ಎಂದು ಭಾಸವಾಗುತ್ತದೆ. ಆದರೆ ಅದು "ಚೆಪ್ಪು" ಶಬ್ದಕ್ಕೆ "ಲು" ಸೇರಿಸಿದ ಬಹುವಚನ.
ಗಿಳಿ=ಕಿಳಿ(ತಮಿೞ್)=ಚಿಲುಕ (ತೆಲುಗು)
ಕೆಡು=ಕೆಡು(ತಮಿೞ್)=ಚೆಡು(ತೆಲುಗು)

ಈ ತಾಲವ್ಯೀಕರಣ ಭಾಷೆಯ ಬೆಳವಣಿಗೆಯಲ್ಲಿ ಇತ್ತೀಚಿನದಾಗಿದ್ದು ಕನ್ನಡ ತಮಿೞಿಗಿಂತ ಹೞೆಯದೇನೋ ಎಂಬ ವಿಚಾರಕ್ಕೆಡೆಮಾಡಿಕೊಡುತ್ತದೆ. ಹಾಗಲ್ಲದಿದ್ದರೂ ಕನ್ನಡ ಮೂಲತೆನ್ನುಡಿಯಿಂದ ಸ್ವತಂತ್ರವಾಗಿ ಕವಲೊಡೆದ ನುಡಿ ಎನ್ನಲು ಯಾವ ಸಂದೇಹವೇ ಇಲ್ಲ.

‹ ಒಂದು ಅಪರೂಪದ ಚಿತ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗದ್ದಲ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 395 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 24, 2008 - 12:19pm — mahesha

ಉ: ಕನ್ನಡ ತಮಿೞಿಗಿಂತ ಹೞೆಯದೇ?

mahesha's picture

ಚಂನಾಗಿದೆ...

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
  • ಕನ್ನಡ, ತಮಿೞ್, ಮಲಯಾಳಂ, ತೆಲುಗು
  • ಕನ್ನಡ, ತಮಿೞ್, ಮಲಯಾಳಂ, ತೆಲುಗು
  • ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
  • ಪದಗಳು ......ಮರೆಯಾಗುವ ಮುನ್ನ!
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
ಇನ್ನಷ್ಟು


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator