ವಾರಗಳ ಹೆಸರಿನ ಮಹತ್ವವೇನು?
ಇತ್ತೀಚೆಗೆ ಮಾಸಗಳ ಹೆಸರು ಹೇಗೆ ಚೈತ್ರ, ವೈಶಾಖ ಎಂದು ನಾಮಕರಣ ಮಾಡಿರುವ ಕಾರಣವನ್ನು ಚರ್ಚಿಸುತ್ತಿದ್ದರು.
ಭಾರತ ನಾಗರೀಕತೆಯಲ್ಲಿ ನಮಗೆ ತಿಳಿದಿರುವಷ್ಟು ಹಿಂದಿನಿಂದಲೂ ವಾರಕ್ಕೆ ೭ ದಿನಗಳೆಂದೂ ಅವುಗಳನ್ನು ಒಂದೊಂದು ಗ್ರಹಗಳ ಅನ್ವಯ ಭಾನುವಾರ, ಸೋಮವಾರ, ಮಂಗಳವಾರ ಇತ್ಯಾದಿಯಾಗಿ ಕರೆದಿದ್ದಾರೆ. ಈ ದಿನಗಳಿಗೂ ಆಯಾ ಗ್ರಹಗಳಿಗೂ ಏನಾದರೂ ನಂಟಿದೆಯೇ? ಅಥವಾ ಗ್ರಹಗಳನ್ನು ಆದರಿಸಲು ಒಂದೊಂದು ದಿನ ಎಂದು ಸುಮ್ಮನೆ ನಿಗಧಿಗೊಳಿಸಲಾಗಿದೆಯೇ?
ಈ ವಾರಗಳಿಗೆ ಕನ್ನಡದಲ್ಲಿ ಬೇರೆ ಹೆಸರುಗಳಿದ್ದವೇ? ಉದಾ: ಗುರುವಾರ -> ಬೇಸ್ತಾರ.
ಹಿಂದೂ ಪಂಚಾಂಗವನ್ನು ನೋಡಿದರೆ ಗ್ರಹಗತಿಗಳನ್ನನುಸರಿಸಿ ನಿರ್ಧರಿಸುವ ತಿಥಿ, ನಕ್ಷತ್ರಗಳಿಗನುಗುಣವಾದ ದಿನಗಳು, ೧೫ ದಿನಕ್ಕೊಂದಾವರ್ತಿ ಹುಣ್ಣಿಮೆ, ಅಮಾವಾಸ್ಯೆಗಳು ಉಳಿದದಿನಗಳು ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥಿ..ಇತ್ಯಾದಿಗಳು ಅರ್ಥಪೂರ್ಣವಾಗಿವೆ. ಆದರೆ ವಾರದದಿನಗಳಿಗೂ ಈ ನಕ್ಷತ್ರಗಳಿಗೂ ಸಂಭಂಧವಿದ್ದಂತಿಲ್ಲ. ತಿಳಿದವರು ಇದರಬಗ್ಗೆ ಹೆಚ್ಚಿನದನ್ನು ಹೇಳಬೇಕಾಗಿ ಕೋರಿಕೆ.

- Login or register to post comments
- 363 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ವಾರಗಳ ಹೆಸರಿನ ಮಹತ್ವವೇನು?
’ಗುರು’ವಾರ -> ’ಬೃಹಸ್ಪತಿ’ವಾರ -> ಬೇಸ್ತಾರ
ಉ: ವಾರಗಳ ಹೆಸರಿನ ಮಹತ್ವವೇನು?
ಆಕಾಶದ ಗ್ರಹಗಳನ್ನು ಅವು ಇರುವ ರೀತಿಯೇ ಬರೆದು ಐದು-ಐದು ರನ್ತೆ ಎಣಿಸುತ್ತಾ ಬಂದರೆ ನಮ್ಮ ವಾರಗಳು ಸಿಗುತ್ತವೆ.
and
ದಿನದ ೨೪ ಘಳಿಗೆಗಳಿಗೆ ಏಳು ಗ್ರಹಗಳನ್ನು ( ಸೈಕ್ಲಿಕ್ ರೀತಿಯಲ್ಲಿ) ಅಳವಡಿಸಿದರೆ... ಹಾಗೆ ಒಂದು , ಎರಡು .. ಹೀಗೆ ಎಣಿಸುತ್ತ ಬಂದರೆ ...
ಆ ದಿನದ ೧ನೆ ಘಳಿಗೆ ಯಾ ಅಧಿಪತಿ ಮಂಗಳ ಬಂದರೆ ಅದು ಮಂಗಳವಾರ. ಅಲ್ಲಿಂದ ೨೫ನೇ ಘಳಿಗೆ ( ಮರು ದಿನದ ೧ ನೆ ಘಳಿಗೆ ) ಬುಧ ಬರುತ್ತಾನೆ. ಅದು ಬುಧವಾರ.
ಹೀಗೆ ಬೇರೆ ವಾರಗಳಿಗೂ ಲೆಕ್ಕ ಹಾಕಿಕೊಳ್ಳಿ.
ಹಂಸಾನಂದಿಯವರು ಇದನ್ನು ಬಿಡಿಸಿ ಬರೆಯಬಹುದು.
ಸವಿತೃ
ಉ: ವಾರಗಳ ಹೆಸರಿನ ಮಹತ್ವವೇನು?
ಸವಿತೃ,
ಇದರ ಬಗ್ಗೆ ಸುಮಾರು ಒಂದು ವರ್ಷಕ್ಕೆ ಮೊದಲೇ ವಿವರವಾಗಿ ಬರೆದಿದ್ದೇನೆ
ಕೆಳಗಿನ ಕೊಂಡಿಯನ್ನು ನೋಡಿ.
http://www.sampada.net/blog/hamsanandi/04/05/2007/3876
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/