ಮದುವೆ ಕರೆಯೋಲೆ - ಮಾದರಿ ೧
ಶ್ರಿಮತಿ ಮುನಿಯಮ್ಮ ಮತ್ತು ಶ್ರೀ ಮಾನ್ ಬಸವಯ್ಯ ಮಾಡುವ ವಿಜ್ಞಾಪನೆಗಳು,
ಶುಭ ಸರ್ವಧಾರಿ ಸಂವತ್ಸರದ ಆಫಾಡ ಶುದ್ಧ ಪೂರ್ಣಿಮೆ ಅಂದರೆ ೨೩-೭-೨೦೦೮ ಸೋಮವಾರ ಮಧ್ಯಾಹ್ನ ೧೨.೦೦ ರಿಂದ ೧೨.೩೦ರ ವರೆಗೆ ಸಲ್ಲುವ ಶುಭ ಅಭಿಜಿತ್ ಲಗ್ನದಲ್ಲಿ ನನ್ನ ಪ್ರಥಮ ಪುತ್ರರತ್ನನಾದ
ಚಿ|ರಾ| ಸೋಮಯ್ಯನ
ಶುಭವಿವಾಹವನ್ನು
ಚಿ|ಸೌ| ಹ|ಕುಂ]ಶೋ ಈರಮ್ಮ
( ಬೇಗೂರಿನ ಭೈರಮ್ಮ ಮತ್ತು ಸೀನಪ್ಪರ ಮೂರನೇ ಮಗಳು )
ಇವರ ಜೊತೆ, ವೀರಭದ್ರ ಕಲ್ಯಾಣ ಮಹಲ್, ಬೇಗೂರು, ಇಲ್ಲಿ ನೆರೆವೇರಿಸಲು ಗುರುಹಿರಿಯರು ನಿಶ್ಚಯಿಸಿದ್ದೀವೆ. ತಾವು ಸಕುಟುಂಬಬಾಂಧವರಾಗಿ ಬಂದು ವಧುವರರನ್ನು ಉಡುಗೊರೆ ನೀಡಿ ಹರಸಿ ನಮ್ಮ ಮನೋ ಹರ್ಷಕ್ಕೆ ಪಾತ್ರಗಾಗಬೇಕಾಗಿ ಸವಿನಯ ವಿನಂತಿ,
ಶ್ರೀ ಮತಿ ಮುನಿಮ್ಮ ಮತ್ತು ಶ್ರೀ ಮಾನ್ ಬಸವಯ್ಯ, ಲಗ್ಗರೆ
ಮತ್ತು ಕುಟುಂಬದವರು

- Login or register to post comments
- 487 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಮದುವೆ ಕರೆಯೋಲೆ - ಮಾದರಿ ೧
ಈ ವರರಿಗೆ ಚಿ|ರಾ| ಎಂದು ಬಳಸುವರು. ವಧು ಹೆಸರಿಗೆ ಚಿ|ಸೌ| ಹ|ಕುಂ]ಶೋ ಇಂದು ಬಳಸುವರು. ತಿಳಿದವರು ಈ ಸಂಕ್ಷಿಪ್ತ ರೂಪಗಳನ್ನು ವಿಸ್ತರಿಸುವಿರಾ?
ಉ: ಮದುವೆ ಕರೆಯೋಲೆ - ಮಾದರಿ ೧
ಚಿರಂಜೀವಿ ರಾಜೀವ
ಚಿರಂಜೀವಿ ಸೌಭಾಗ್ಯವತಿ ಹರಿದ್ರ ಕುಂಕುಮ ಶೋಭಿತೆ
=====================================
ಮಾಯ್ಸ!
ಉ: ಮದುವೆ ಕರೆಯೋಲೆ - ಮಾದರಿ ೧
ಚಿ| ರಾ| = ಚಿರಂಜೀವಿ ರಾಜೀವ ಲೋಚನ...
ರಾಜೀವ ಅಂದ್ರೆ ಕಮಲ ಅಲ್ವ? ಬರಿ 'ಕಮಲ' ಅಂಥ ಯಾಕೆ ಅಂತಾರೆ...'ಕಮಲದಂತ ಕಣ್ಣುಳ್ಳವನು' ಅನ್ನುತ್ತಾರೆ ಎಂದು ಕೊಂಡಿದ್ದೇನೆ...
--ಶ್ರೀ
ಉ: ಮದುವೆ ಕರೆಯೋಲೆ - ಮಾದರಿ ೧
ರಾಜೀವ ಅನ್ನೋದು ಪುಲ್ಲಿಂಗ... ಸಕ್ಕದದಲ್ಲಿ
ಕಮಲ ನಪುಂಸಲಿಂಗ
ರಾ ಅನ್ನು ರಾಜಕುಮಾರ, ರಾಜೇಂದ್ರ, ರಾವಣ ಏನು ಬೇಕಾದರು ಅಂದುಕೊಳ್ಳಬೋದು.
=====================================
ಮಾಯ್ಸ!
ಉ: ಮದುವೆ ಕರೆಯೋಲೆ - ಮಾದರಿ ೧
ಚಿರಂಜೀವಿ ಎಂಬ ಪದ ಕನ್ನಡದಲ್ಲಿ ಇದೆಯ?
--ಶ್ರೀ
ಉ: ಮದುವೆ ಕರೆಯೋಲೆ - ಮಾದರಿ ೧
ನಂಗೆ ಗೊತ್ತಿಲ್ಲಪ್ಪ.. ಏನೋ ನಮ್ಮನೆಗೆ ಬರೋ ಕರೆಯೋಲೆಗಳಲ್ಲಿ ಇರ್ತದೆ.
=====================================
ಮಾಯ್ಸ!
ಉ: ಮದುವೆ ಕರೆಯೋಲೆ - ಮಾದರಿ ೧
ಚಿರಂಜೀವಿ ಅನ್ನೋ ಪದ ಕನ್ನಡದಲ್ಲಿ ಇಲ್ದೆ ಇದ್ರೆ, ರಾಜೀವ ಅನ್ನೋ ಪದ ಕೂಡ ಸಂಸ್ಕೃತದಲ್ಲಿ ಉಪಯೋಗಿಸಿರಬಹುದು..ಅದಕ್ಕೆ ಕೇಳಿದೆ...
ಆದ್ರೆ ಈ 'ಮಿಶ್ರ' ರೀತಿ ಬಳಕೆಗಳು ಬಹಳಷ್ಟು ಇವೆ...
--ಶ್ರೀ
ಉ: ಮದುವೆ ಕರೆಯೋಲೆ - ಮಾದರಿ ೧
ಚಿ.ರಾ. ಅಂದರೆ, ಚಿರಂಜೀವಿ ರಾಜಶ್ರೀ ಅಂತ ನಾನು ಕೇಳಿದ್ದೆ ...
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಮದುವೆ ಕರೆಯೋಲೆ - ಮಾದರಿ ೧
ನಾವೆಲ್ಲ ಚಿರಂಜೀವಿ ರಾಜಶೇಖರ ಅಂತಾನೆ ಓದಿಕೊಳ್ಳೋದು!
ರಾಜ ಶೇಖರ ಅನ್ನೋದು ನನಗೆ ಯುವರಾಜ ಅನ್ನೋ ರೀತಿ ಭಾಸ ವಾಗುತ್ತೆ !
ರಾಜ ಶೇಖರ ಅನ್ನೋದು ಯಾರದ್ರೂ ದೇವರ ( ಶಿವನ?!) ಹೆಸರ?
ಸವಿತೃ
ಉ: ಮದುವೆ ಕರೆಯೋಲೆ - ಮಾದರಿ ೧
ಮುಹೂರ್ತ ಎಂದರೆ ೨ ಘಳಿಗೆಗಳು, ಅಂದ್ರೆ ೪೫ ನಿಮಿಷಗಳು ಅಲ್ವಾ?
"ಆಫಾಡ ಶುದ್ಧ ಪೂರ್ಣಿಮೆ" ಸಕತ್ತಾಗಿದೆ
ಉ: ಮದುವೆ ಕರೆಯೋಲೆ - ಮಾದರಿ ೧
=====================================
ಮಾಯ್ಸ!
ಉ: ಮದುವೆ ಕರೆಯೋಲೆ - ಮಾದರಿ ೧
muhurta (p. 230) [ muhûr-tá ] m. n. [den. pp. fr. muhur, past in a trice], moment, instant; hour of forty-eight minutes (one-thirtieth of a day): °ree;--, in a moment; for a moment; in. in a moment, presently; ab. after a moment, in stantly: -ka, m. or n. (?) moment; hour; -kovida, m. (skilled in auspicious moments), astrologer; -râga, a. red or attached for a moment.
ಸವಿತೃ
ಉ: ಮದುವೆ ಕರೆಯೋಲೆ - ಮಾದರಿ ೧
ಸೋಮವಾರದ ಬದ್ಲು "ಮಂಗಳವಾರ " ಅಥವ "ಶನಿವಾರ" ,
ಅಭಿಜಿತ್ ಲಗ್ನದ ಬದ್ಲು "ಲಾಲು ಲಗ್ನ" (ಕನ್ನಡ ಪ್ರಭ ಪೇಪರ್ನಲ್ಲಿ ಓದಿದ ನೆನಪು)
ಅಂತ ಬರೆದಿದ್ರೆ ಅದ್ರ ಮೆರಗು ಇನ್ನು ಹೆಚ್ಚುತ್ತಿತ್ತೇನೊ ಅಂತ ನನ್ನ ಅನಿಸಿಕೆ.