ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಮೊದಲಿನಿಂದಲೂ ಅಂದರೆ ಬಹುಷ: 1975ರ ನಂತರ ಸಿನಿಮಾಗಳಲ್ಲಿ ಎಕ್ಸ್ಪ್‌ಪೋಸಿಂಗ್ ಒಂದು ಅನಿವಾರ್ಯ ದೃಶ್ಯಗಳಾಗಿವೆ
ಮಾಧ್ಯಮಗಳೂ ಯಾವುದಾದರೂ ನಟಿ ತಾನು ಎಕ್ಸ್‌ಪೋಸ್ ಮಾಡುವುದಿಲ್ಲ ಎಂದರೆ ಗೌರಮ್ಮ ಎಂದೋ ಅಥವ ಪುರಾತನ್ ನಟಿ ಎಂದೋ ಬಿಂಬಿಸುತ್ತವೆ ;(ಒಮ್ಮೆ ಉಪ್ಪಿ ದಾದ MBBS ಚಿತ್ರದ ಬಗ್ಗ್ಗೆ ರಾಜೇಂದ್ರಸಿಂಗ್‌ರವರ ಪುತ್ರಿ ತಾನು ಎಕ್ಸ್‌ಪೋಸ್ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ಈಕೆಗೆ ಅವಕಾಶ ಯಾರು ಕೊಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದರು ಸುಧಾದಲ್ಲಿ ಇರಬೇಕು)
ಈ ಬಗ್ಗೆ ನಮ್ಮ ಸಂಪದದ ಬಂಧುಗಳು ಏನು ಹೇಳುತ್ತಾರೆ
ನೀವು ಸಿನಿಮಾಗಳಲ್ಲಿ ಎಕ್ಸ್‌ಪೋಸಿಂಗ್ ಬಯಸುತ್ತೀರಾ?
ಒಂದು ಹೆಣ್ಣು ಚೂಡಿದಾರ್, ಪ್ಯಾಂಟ್, ಸೀರೆಗಳಲ್ಲಿ ನಟಿಸಿದರೆ ನೀವು ನೋಡುವುದಿಲ್ಲವೇ

- Login or register to post comments
- 502 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಯಾಕೆ ನೋಡುವುದಿಲ್ಲ? ನಾವು ಚಲನಚಿತ್ರಗಳನ್ನ ನೋಡೋದು ಮನರಂಜನೆಗಾಗಿ ಅಷ್ಟೇ ಅಲ್ಲ ಅದರಿಂದ ಏನಾದ್ರು ಕಲಿಯುತ್ತೇವೆ ಅಂತಾ. ನಾನೂ ಕೂಡ ಈ ಪ್ರಶ್ನೆಯನ್ನ ಏಷ್ಟೋ ಸಾರ್ತಿ ಅಂದ್ಕೋಂಡಿದಿನಿ. ಅರೆ ಬಟ್ಟೆ ತೊಡೋರು ಇರೋವರ್ಗೂ ತೊಡ್ಸೋರ್ಗೇನು ಅಲ್ವಾ?
ಶೈವಿ:- )
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ನೋಡೋರು ಇರೋವರೆಗೂ ತೊಡುವವರು ಇದ್ದೇ ಇರ್ತಾರೆ ಅಂತಾನೂ ಅಗಬಹುದಲ್ಲವಾ?
http://thereda-mana.blogspot.com/
ರೂಪ
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಇಲ್ಲ, ನಮ್ಮ ದೇಹ ತೋರಿಸೋದು ಬೇಡ ಅಂತ ತಿರ್ಮಾನ ಮಾಡಿ ಹೆಣ್ಣು ಪಣ ತೋಟ್ಟು ಅದನ್ನ ನಿರಾಕರಿಸಿದ್ರೆ ಬರಿ ನೋಡೋರು ಏನ್ತಾನೆ ಮಾಡ್ತಾರೆ? ಅರೆ ಬಟ್ಟೇನೆ ತೋಟ್ಕೋ ಅಂತಾ ಹೇಳೋ ಅಧಿಕಾರ ಅವರಿಗೆ ಕೋಡೋದು ಬಿಡೋದು ಹೆಣ್ಣಿನ ಹತ್ರಾನೆ ಇರೋದಲ್ವಾ?
ಶೈವಿ:- )
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಗುಱುಱಾಜ
www.kannadaguru.blogspot.com
ಖ೦ಡಿತವಾಗಿಯೂ ಎಕ್ಸಪೋಸ್ ಇಲ್ಲದೆ ನಟಿಸಬಹುದು.ಬಹುಶ: ನೀವು ಗಮನಿಸಿದ್ದೀರೋ ಇಲ್ಲವೋ ರೂಪಾ ಅವರೇ,ಎಕ್ಸಪೋಸ್ ಮಾಡುವ ನಟಿಯರಿಗಿ೦ತ ಮುಚ್ಚುಡುಗೆಯ ನಟಿಯರು ಹೆಚ್ಚು ಜನರ ನೆನಪಿನಲ್ಲುಳಿಯುತ್ತಾರೆ.ಎಕ್ಸಪೋಸ್ ಕ್ವೀನ್ ಗಳು ಒಮ್ಮೆಲೇ ಮಿ೦ಚಿ ಮಾಯವಾಗುವ ಮಿ೦ಚಿನ೦ತೆ.ಕೆಲಕಾಲ ಎಲ್ಲರನ್ನೂ ಬೆರಗುಗೊಳಿಸಿ ಆಮೇಲೆ ಹಳಸಲು ಎನಿಸಿಬಿಡುತ್ತಾರೆ.
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಅದೆಲ್ಲಾ ಆ ಕಾಲ
ಈಗ ನೋಡಿ ರಮ್ಯಾ ಅವರು ನಟನೆಗಿಂತ ಎಕ್ಸ್‌ಪೋಸಿಂಗ್ ಜಾಸ್ತಿ. ತಮಿಳಿನಲ್ಲೂ ಅವಕಾಶ ಪಡೆದರು ಈಗ್ ಹಿಂದಿಯಲ್ಲೂ ನಟಿಸುತ್ತಿದ್ದಾರೆ
ರಾಧಿಕಾದ್ದು ಅದೇ ಮಂತ್ರ
ಮುದ್ದು ಮುಖದ ಛಾಯಾ ಸಿಂಗ್ ಮಾತ್ರ ಹಾಗಿಲ್ಲ ಆದ್ದರಿಂದ ಅವರಿಗೆ ಅವಕಾಶಗಳೂ ಕಡಿಮೆ
http://thereda-mana.blogspot.com/
ರೂಪ
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಎಕ್ಸ್‌ಪೋಸಿಂಗ್ ಇಲ್ಲದೆಯೂ ಸಿನೆಮ ಮಾಡಲು ಸಾಧ್ಯವಿದೆ, ಪುಟ್ಟಣ್ಣ ಕಣಗಾಲ್ ಅಂತ ಪ್ರತಿಭಾವಂತ ನಿರ್ದೇಶಕರು ಬರಬೇಕು. ನಿರ್ದೇಶಕರಿಗೆ ಎಲ್ಲವು ಹಿಡಿತದಲ್ಲಿ ಇರಬೇಕು, ನಿರ್ಮಾಪಕರು ಹೇಳಿದ ಹಾಗೆ ಕೇಳ್ಕೊಂಡಿರಬಾರದು.
ಇಂದಿನ ನಿರ್ಮಾಪಕರು ಎಕ್ಸ್‌ಪೋಸಿಂಗ್ ಇಲ್ಲದೆ ಹೋದ್ರೆ ಅವ್ರೆ ಅಂತಹ ಒಂದು ಹಾಡನ್ನು ಸೇರಿಸುತ್ತಾರೆ. ಕಮಲ್ ಹಾಸನ್ ಒಂದು ಇಂಟರ್ವ್ಯೂನಲ್ಲಿ ಹೇಳಿದ್ರು, "ದಶಾವತಾರಮ್ ಚಿತ್ರದಲ್ಲಿ (ನಾನು ಬರೆದ ಕಥೆಯಲ್ಲಿ) (ಮಲ್ಲಿಕ ಷೆರಾವತ್) ಎಕ್ಸ್‌ಪೋಸಿಂಗ್ ಡ್ಯಾನ್ಸ್ ಇರಲ್ಲಿಲ್ಲ , ಅದ್ರೆ ನಿರ್ಮಾಪಕರ ಒತ್ತಾಯಕ್ಕೆ ಆ ಹಾಡನ್ನು ಸೇರಿಸಲಾಯಿತು"ಎಂದು.
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ನನಗೆ ಸಿನೆಮಾಗಳನ್ನು ನೋಡುವಾಗ ಅನಿಸುವುದುಂಟು. ಇಲ್ಲಿ ಯಾಕೆ ಹೆಣ್ಣಿನ ಮೈ ಪ್ರದರ್ಶನ ಮಾಡಿಸಿದ್ದಾರೆ ಅಂತ. ಸ್ವಲ್ಪವೂ ಅಗತ್ಯವೇ ಇಲ್ಲದ ದೃಶ್ಯಗಳಲ್ಲೂ ಕೂಡ
ಹೆಣ್ಣಿನ ಮೈ ಕಾಣುವ ಬಟ್ಟೆಗಳನ್ನು, ಅಥವಾ ಇನ್ನೆಂತದೋ ರೀತಿಯ ಉಡುಪುಗಳನ್ನು ಹಾಕಿಸಿರುತ್ತಾರೆ. ಕೆಲವೊಂದು ಸಿನೆಮಾಗಳಲ್ಲಿ ಸುಮ್ ಸುಮ್ನೇ ಐಟಂ ಸಾಂಗ್ ಒಂದನ್ನು ತಂದು ಹೆಣ್ಣನ್ನು ಅರೆಬರೆ ಹಾಕಿ ಕುಣಿಸಿರುತ್ತಾರೆ. ಇದೇ ವಿಷಯವಾಗಿ ನನ್ನ ಸಿನೆಮಾ ಕ್ಷೇತ್ರದಲ್ಲಿರುವ ಮಿತ್ರನೊಬ್ಬನನ್ನು ಕೇಳಿದ್ದಾಗ ಅವನು ಹೇಳಿದ್ದು ಆ ರೀತಿ ಮಾಡುವುದು ಕೂಡ ಜನರನ್ನು ಆಕರ್ಷಿಸುವ ತಂತ್ರವೆಂದು! ಗ್ಲಾಮರ್, ಎಕ್ಸ್ ಪೋಸಿಂಗ್, ಹೆಣ್ಣಿನ ಮೈಮಾಟ ಇತ್ಯಾದಿಗಳಿಂದಲೇ ಆಕರ್ಷಿತವಾಗಿ ಸಿನೆಮಾಗೆ ಬರುವ ಒಂದು ದೊಡ್ಡ ಪ್ರೇಕ್ಷಕ ವರ್ಗ ಇರುತ್ತದಂತೆ. ನಾನೂ ಇದಕ್ಕೆ ಹೌದು ಎಂದು ತಲೆ ಅಲ್ಲಾಡಿಸಬೇಕಾಯಿತು. ಏಕೆಂದರೆ ನನ್ನ ಹಲವು ಗೆಳೆಯರೇ ಇಂತಹ ದೃಶ್ಯಗಳಿಗೇ ಆಸೆ ಪಟ್ಟು ಸಿನೆಮಾಗೇ ಹೋಗುವುದನ್ನು ನೋಡಿದ್ದೇನೆ.
ಆದರಿಲ್ಲಿ ರೂಪಕ್ಕನವರ ಪ್ರಶ್ನೆ ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ ಎಂದು.
ಖಂಡಿತ ಸಾಧ್ಯ. ಆದರೆ ಅದು ಅವರವರ ತೀರ್ಮಾನ. ದುಡ್ಡು ಕೊಡುತ್ತಾರೆಂದ ಮಾತ್ರಕ್ಕೆ ಬೆತ್ತಲೆ ಕುಣಿಯಲೂ ತಯಾರಿರುವ ಹೆಣ್ಣುಗಳೂ ಇದ್ದಾರೆ. ಅದೇ ರೀತಿ ಖಡಾಖಂಡಿತವಾಗಿ ತಿರಸ್ಕರಿಸುವವರು ಇದ್ದಾರೆ. ಆದರೆ ಇಂದು ಸಿನೆಮಾದಲ್ಲಿ ಇರಬೇಕೆಂದರೆ ಎಕ್ಸ್ ಪೋಸಿಂಗ್ ಕಡ್ಡಾಯ ಎಂಬ ಸ್ಥಿತಿ ತಂದಿಟ್ಟಿರುವುದರಿಂದ (ಮಾಧ್ಯಮಗಳು, ಜನರು ಇತ್ಯಾದಿ), ಸಿನೆಮಾಕ್ಕೆ ಹೋಗುವ ಎಲ್ಲ ಹೆಣ್ಣುಗಳೂ ಎಕ್ಸಪೋಸಿಂಗ್ ಗೆ ತಯಾರಾಗೇ ಹೋಗಿರುತ್ತಾರೇನೋ ಅನ್ನಿಸುತ್ತದೆ!.
**************************
http://vikasavada.blogspot.com/
**************************
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಹೆಣ್ಣಿನ ಅಂಗ ಪ್ರದರ್ಶನ ಇರುವ ಚಿತ್ರಗಳನ್ನು ನಾವು ನೋಡುವುದಿಲ್ಲ ಎಂದು ಸಾರಿದರೆ ಹೇಗೆ ವಿಕಾಸ್? ಏನಾದರೂ ವರ್ಕ್ ಔಟ್ ಆಗಬಹುದಾ?
http://thereda-mana.blogspot.com/
ರೂಪ
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ನಾವು ಸಾರಿಕೊಂಡ್ರೆ ನಮ್ ಪಾಡಿಗೆ ನಾವು ಮನೆಲ್ಲಿ ಕೂರ್ಬೇಕಾಗತ್ತೆ ಅಷ್ಟೆ.
ಯಾಕಂದ್ರೆ ಮಾಮೂಲಿ ಕುಟುಂಬದ ಜೊತೆ ನೋಡೋಗಳಲ್ಲೂ ಕೂಡ ಎಕ್ಸ್ ಪೋಸಿಂಗ್ ಇದ್ದೇ ಇರತ್ತೆ ಈಗಿನ ಸಿನೆಮಾಗಳಲ್ಲಿ!. ಏನು ಮಾಡೋದು
**************************
http://vikasavada.blogspot.com/
**************************
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಕಂಡಿತಾ ಸಾಧ್ಯ ಆದ್ರೆ ಒಂದಿಬ್ರಿಂದ ಆಗೋ ಕೆಲ್ಸ ಅಲ್ಲ. ನಾವು ಅಂತಾ ಸಿನಿಮಾಗಳನ್ನ ನೋಡೋದನ್ನ ಬಿಡ್ಬೇಕು. ನಮಗಿಂತಲೂ ಎಲ್ಲಾ ನಟಿಯರು ಅದನ್ನ ವಿರೋಧಿಸಲು ನಮಗೆ ಜೊತೆ ನೀಡಿದರೆ ಸಾಧ್ಯ
ಶೈವಿ:- )
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ನೋಡೋರು ಇರೊವರ್ಗು ಪ್ರದರ್ಶನ ಮಾಡೋರು ಇದ್ದೇ ಇರ್ತಾರೆ ನಿಜ. ಕೆಲವು ಗುಣಗಳು ಹುಟ್ಟಿನಿಂದಲೆ ಬಂದಿರುತ್ತದೆ.
ಅಷ್ಟಾಗಿ ಹೇಳ್ತಾರ್ಯೆ "ಹುಟ್ಟ ಗುಣ ಸುಟ್ರು ಹೋಗೊಲ್ಲ ಅಂತ".
ಇಲ್ಲಿ ಗಮನಿಸಬೇಕಾದುದು ಏನು ಅಂದ್ರೆ, ಎಕ್ಸಪೋಸಿಂಗ್ ಮಾಡೋದು ಕೆಲವು ವರ್ಗಗಳ ಜನರನ್ನು ಆಕರ್ಷಿಸಲು ಮಾತ್ರ.
ಇದು ಹಲವು ಬಾರಿ ನಿರ್ಮಾಪಕನನ್ನು ನಷ್ಟದಿಂದ ಪಾರು ಮಾಡುತ್ತದೆ.
ಆದುದರಿಂದ ಮೊದಲು ಇಂತ ವರ್ಗಗಳ ಟೇಸ್ಟ್ (taste) ಬದಲಿಸಬೇಕು. ನಾವು ನೀವು ಇಲ್ಲಿ ಕೊತು ಅಭಿಪ್ರಾಯಗಳನ್ನು ಅಂಚಿಕೊಂಡಂತೆ ಸರ್ಕಾರವು ಚಿತ್ರಗಳ ಮೇಲೆ ಸ್ವಲ್ಪ ಹೆಚ್ಚಿನದೆ ರೀತಿಯ ಕಡಿತವನ್ನು (censorship) ಹೇರಬೇಕು. ಹಾಗೆ ಸಾಮಾನ್ಯ ಜನರಲ್ಲಿ ಜಾಗೃತಿಯನ್ನು ಮೊಡಿಸಬೇಕು (awareness through thoughts).
ಆಗಲೆ ಜನರು ಬದಲಾದ ವಾತಾವರಣಕ್ಕೆ ಸರಿದೊಗಿಸಿಕೊಂಡು ತೆರೆಯ ಮೇಲೆ ಕಂಡಿದ್ದೆ ಕಂಪು ಅಂತ ಬದಲಾಗ್ತಾರೆ.
ನೀವು ಏನ್ಹೇಳ್ತೀರಿ ?
-ಯುವಪ್ರೇಮಿ
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಸರ್ಕಾರಕ್ಕಿಂತಾ ನಟ-ನಟಿಯರು ಈ ತಿರ್ಮಾನ ತಗೋಂಡ್ರೆ ಬಹಳ ಪರಿಣಾಮ ಬೀರುತ್ತೆ ಅನ್ನೋದು ನನ್ನ ಅಭಿಪ್ರಾಯ. ನೀವೇನಂತಿರಿ.
ಶೈವಿ:- )
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ವಿನ್ನುಗೆ ನಮ್ದು ಫುಲ್ ಸಪೋರ್ಟು .
ಎಕ್ಸ್ ಪೋಸಿಂಗ್ ಕೂಡ ಒಂದ್ರೀತಿ ಹೆಣ್ಣಿನ ಐಡೆಂಟಿಟಿ ಕ್ರೈಸಿಸ್ ಅಂತ ಎಲ್ಲೋ ಓದಿದ್ದೆ. ನಿಜ ಅನ್ನಿಸ್ತು.
**************************
http://vikasavada.blogspot.com/
**************************
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಎಕ್ಸ್ ಪೋಸ್ ಮಾಡದೇ ಕೂಡ ಒಳ್ಳೆ ಚಿತ್ರ ಮಾಡಬಹುದು, ಆದ್ರೆ ದುರಂತ ಅಂತವು ಹೆಚ್ಚಿನ ಸಲಿ art cinema ಅಂತ ಬ್ರಾಂಡ್ ಆಗಿ ಬಿಡುತ್ತವೆ. ಅಂತವೂ ಕಮರ್ಷಿಯಲ್ ಆಗಿ ಸಕ್ಸೆಸ್ ಆಗೋದು ತುಂಬಾ ವಿರಳ. ಆದ್ರೂ ಕಥೆಯಲ್ಲಿ ತಿರುಳು ಇದ್ರೆ ಕೆಲವೊಮ್ಮೆ miracle ತರಹ ಸಕ್ಸೆಸ್ ಆದ ಉದಾಹರಣೆಗಳಿವೆ. ಉದಾ: ಆ ದಿನಗಳು ಚಿತ್ರ. ಹೆಣ್ಣಿನ ಎಕ್ಸ್ ಪೋಸಿಂಗ್ ತರಹದ ಒಂದೇ ಒಂದು ಸೀನ್ ಕೂಡ ಇಲ್ಲದೇ ಚಿತ್ರ ಕಮರ್ಷಿಯಲ್ ಆಗಿ ಸಕ್ಸೆಸ್ ಆಗಿತ್ತು.
ಮಿತಿಯಲ್ಲಿ ಇದ್ದರೆ ಎಲ್ಲವೂ ಚೆಂದವೇ,, ಮುಂಗಾರು ಮಳೆ, ಮಿಲನ, ಗಾಳಿಪಟ ದಂತ ಕಮರ್ಷಿಯಲ್ ಆಗಿ ಸಕ್ಸೆಸ್ ಆದ ಸಂಸಾರ ಸಮೇತ ನೋಡಬಹುದಾದ ಚಿತ್ರಗಳಲ್ಲೂ ಒಂದು ಚೂರಾದ್ರು ಎಕ್ಸ್ ಪೋಸ್ ಎಲಿಮೆಂಟ್ ಇತ್ತು. ಆದ್ರೆ ಮಿತಿಯಲ್ಲಿ ಇದೆ ಅನ್ನೋದೆ ಸಂತೋಷ.
ಶೋಭಾ...
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ಚಲನಚಿತ್ರಗಳಲ್ಲಿ ನಾಯಕಿ ನಿಮಿತ್ತ ಮಾತ್ರ.ಹೀರೋ ಹಿಂದೆ ಸುತ್ತೋದ್ ಬಿಟ್ಟು ಬೇರೆ ಯಾವ್ದಾದ್ರೂ ಕೆಲ್ಸ ಆಕೆಗೆ ಕೊಡ್ತಾರಾ?ಚೆನ್ನಾಗಿ ಅಲಂಕಾರ ಮಾಡಿಕೊಂಡು ವಿಚಿತ್ರ ವೇಶ ಧರಿಸಿ ನಾಯಕನನ್ನು ಓಲೈಸುವುದಸ್ಟೇ ಕೆಲ್ಸ.'ಶ್ರುತಿ','ದೋಣಿ ಸಾಗಲಿ','ಹಸೀನಾ' ಮೊದಲಾದ ಚಿತ್ರಗಳಲ್ಲಿ ನಾಯಕಿಯ ಪಾತ್ರ ಸತ್ವಭರಿತವಾಗಿತ್ತು.ಆದರೆ ಈ ತರಹದ ಚಿತ್ರಗಳು ಬೆರಳೆಣಿಕೆಯಸ್ಟು ಮಾತ್ರ.ಮಾಲಾಶ್ರೀ ಇರುವಾಗ ಒಮ್ಮೊಮ್ಮೆ ಹೊಡೆದಾಟವನ್ನದ್ರೂ ಮಾಡ್ತಿದ್ಲು;ಈಗ ಅದೂ ಇಲ್ಲ!
ಆದ್ರೆ ಈ ಎಕ್ಸ್ಪೋಸಿಂಗ್ ನೋಡಿ ನೋಡಿ ಒಂಥರಾ ಜಿಗುಪ್ಸೆ ಬಂದಿದೆ ನನಗೆ.ಟಿವಿ ಧಾರಾವಾಹಿಗಳಲ್ಲಿ ಹೆಣ್ಣು ಅಳುಮುಂಜಿ/ಮನೆ ಮುರುಕಳಾಗಿರುತ್ತಾಳೆ;ಲನಚಿತ್ರದಲ್ಲಿ ಶೋಪೀಸ್ .ಎಲ್ಲಿಗೆ ಬಂತು ಸ್ವಾತಂತ್ರ್ಯ,ಯಾರಿಗೆ ಬಂತು ಸ್ವಾತಂತ್ರ್ಯ ಎಂಬ ಕವಿವಾಣಿ ನೆನಪಾಗುತ್ತದೆ.
ಉ: ಹೆಣ್ಣು ಎಕ್ಸ್‌ಪೋಸಿಂಗ್ ಇಲ್ಲದೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೇ
ರೂಪಾಕ್ಕ,
ಇದರಲ್ಲಿ ನನಗ್ಯಾವ ತಪ್ಪೂ ಕಾಣಿಸ್ತಿಲ್ಲ. ಸಿನೆಮಾದ ನಟಿಯರನ್ನು ಅಂದು ಏನೂ ಪ್ರಯೋಜನವಿಲ್ಲ. ಯಾಕೆ ಅಂದರೆ ನಮ್ಮಲ್ಲಿ *ಯಶಸ್ಸು*, *ಅವಕಾಶ*ಗಳ ವ್ಯಾಖ್ಯಾನ ಯಾವ ರೀತಿಯಿದೆ ಎನ್ನುವುದನ್ನು ಮೊದಲು ನಾವು ಗಮನಿಸಬೇಕು. ಹೆಚ್ಚಿನ ಸಿನೆಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕುವುದನ್ನೇ ನಾವು *ಯಶಸ್ಸು* ಅಂದುಕೊಂಡರೆ, ಅದನ್ನೇ ಒಬ್ಬ ನಟಿಯ ಸಾಧನೆಯ ಅಳತೆಗೋಲು ಎಂದು ಪರಿಗಣಿಸಿದರೆ ಆವಶ್ಯಕವಾಗಿ ಅದರಲ್ಲಿ ತಪ್ಪೇನಿಲ್ಲ. ಇದು ಕೇವಲ ಸಿನೆಮಾ ಹೀರೋಯಿನ್‌ಗಳ ಪಾಡಲ್ಲ. ಪತ್ರಿಕೆಯ ಪ್ರಸಾರ ಸಂಖ್ಯೆಯನ್ನೇ ಯಶಸ್ಸು ಎಂಸು ಭಾವಿಸಿದ ಸಂಪಾದಕ ಮುಖಪುಟದಲ್ಲಿ ಅನವಶ್ಯಕವಾಗಿ ಅಶ್ಲೀಲ ಚಿತ್ರವನ್ನು ಛಾಪಿಸುತ್ತಾನೆ. ಟಿಆರ್.ಪಿ ಹಿಂದೆ ಬಿದ್ದ ನ್ಯೂಸ್ ಚಾನೆಲ್ಲುಗಳು ಗಾಸಿಪ್ಪುಗಳನ್ನೇ ಅಗ್ರ ರಾಷ್ಟ್ರೀಯ ವಾರ್ತೆಗಳಾಗಿ ಪ್ರಸಾರ ಮಾಡುತ್ತವೆ. ನಮ್ಮ ಅಳತೆಗೋಲಿನ ದೋಷ ಇದು.
ನಮ್ಮ ಅಳತೆ ಗೋಲು ಯಾವ ರೀತಿಯದ್ದೋ ನಮಗೆ ಕಾಣುವ ಸಂಗತಿಯ ಪ್ರಮಾಣ ಅಷ್ಟಾಗಿರುತ್ತದೆ. ನೀವು ಎಪ್ಪತ್ತರ, ಅರವತ್ತರ ದಶಕದಲ್ಲಿ ಛಾಯಾಸಿಂಗ್‌ರನ್ನು ಕಂಡಿದ್ದರೂ ಅವರು ನಟನೆಗಿಂತ ಮೈಮಾಟದ ಮೇಲೆ ನಂಬಿಕೆ ಇಟ್ಟವರ ಹಾಗೆ ಕಾಣುತ್ತಾರೆ. ಕೆಲವು ನಟಿಯರು ನಮ್ಮ ಈಗಿನ ಅಳತೆಗೋಲಿಗೆ ಸ್ವಲ್ಪ ಹೆಚ್ಚು ಅನ್ನಿಸುವಷ್ಟು ಬೋಲ್ಡ್ ಆಗಿದ್ದಾರೆ. ಅಷ್ಟೇ!
ನಾನು ಚಿಕ್ಕವನಾಗಿದ್ದಾಗ ಮನೆ ಮಂದಿಯೆಲ್ಲಾ ಕುಳಿತು ನೋಡುವ ಸಿನೆಮಾಗಳಲ್ಲಿ ಆವಶ್ಯಕತೆ ಇರಲಿ ಬಿಡಲಿ ಒಂದಾದರೂ ಅತ್ಯಾಚಾರ, ಇಲ್ಲವೇ ಅತ್ಯಾಚಾರಕ್ಕೆ ಪ್ರಯತ್ನಿಸುವ ಸೀನುಗಳು ಇರುತ್ತಿದ್ದವು. ಹಾಗೆ ನೋಡಿದರೆ ಜನ ಅಂಥ ಸೀನುಗಳನ್ನು ‘ಸಭ್ಯ’ ಸಿನೆಮಾಗಳಲ್ಲಿ ನೋಡಲು ಇಷ್ಟ ಪಡುವುದಿಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com