ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ಅಭಿಜಿತ್/ನ್ ಲಗ್ನ ಅಂದರೇನು?

June 26, 2008 - 12:11pm — mahesha

ಸಾಮಾನಿಯ ಮೇಷ, ರುಶಬ, ಮಿತುನ, ಹೀಗೆ ರಾಶಿಗಳ ಹೆಸರ ಮೇಲೆ ಲಗ್ನಗಳು ಇರುತ್ತವೆ ಅಲ್ಲವೇ..

ಆದರೆ ಒಂದು ಲಗ್ನ ಇದೆ..ಅದು ಅಭಿಜಿತ್/ನ್ ಲಗ್ನ ( ಅಭಿಜಿಲ್ಲಗ್ನ ) . ಇದು ಏನೋ ತುಂಬಾ ವಿಶೇಶವಂತೆ.. ಇದರ ಹೆಚ್ಚುಗಾರಿಕೆ ಏನು?

ನಮ್ಮ ಜೋತಿಶಿಯ ಬಲ್ಲರು ಅರುಹಿ.

‹ ಬೃಹದಾರಣ್ಯಕ ಉಪನಿಷತ್ತು - ಕಲ್ಪಶಾಸ್ತ್ರ- ಗೃಹ್ಯಸೂತ್ರ ಅರ್ಧಸತ್ಯದ 'ಆವರಣ' ›
  • ತತ್ವಜ್ಞಾನ
~.~
  • Login or register to post comments
  • 374 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 26, 2008 - 12:23pm — hamsanandi

ಉ: ಅಭಿಜಿತ್/ನ್ ಲಗ್ನ ಅಂದರೇನು?

hamsanandi's picture

ನನಗೆ ಲಗ್ನಗಳನ್ನು ಹೇಗೆ ಲೆಕ್ಕಹಾಕುತ್ತಾರೆಂದು ಗೊತ್ತಿಲ್ಲ.

ಆದರೆ ಅಭಿಜಿತ್ ಅನ್ನುವುದು ಒಂದು ನಕ್ಷತ್ರ - ಒಂದು ಕಾಲದಲ್ಲಿ ೨೮ ನಕ್ಷತ್ರಗಳನ್ನು ಹೇಳುತಿದ್ದರು. ಆ ಸರಣಿಯಲ್ಲಿ, ಶ್ರವಣ ಮತ್ತೆ ಧನಿಷ್ಟಾ ನಡುವೆ ಈ ನಕ್ಷತ್ರ ಬರುತ್ತೆ. ಆದರೆ, ಸುಮಾರು ೨ ಸಾವಿರ ವರ್ಷಗಳಿಂದ ೨೭ ನಕ್ಷತ್ರಗಳ ಪಟ್ಟಿಯನ್ನೇ ಬಳಸುತ್ತಿರುವುದರಿಂದ ಅಭಿಜಿತ್ ಹೊರಗೆ ಹೋಗಿದೆ.

ಇನ್ನೊಂದು ವಿಶೇಷವೆಂದರೆ (ನಿಮ್ಮ ಪ್ರಶ್ನೆಗೆ ಸಂಬಂಧ ಪಡದ) - ಅಭಿಜಿತ್ ನಕ್ಷತ್ರವು ಆಕಾಶದ ಉತ್ತರಾರ್ಧಗೋಳದಲ್ಲಿ ಕಾಣುವ ಅತಿ ಪ್ರಕಾಶಮಾನವಾದ ನಕ್ಷತ್ರ.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 12:28pm — mahesha

ಉ: ಅಭಿಜಿತ್/ನ್ ಲಗ್ನ ಅಂದರೇನು?

mahesha's picture

ಇಂಗ್ಲೀಶಲ್ಲಿ ಇದಕ್ಕೆ ಏನಂತಾರೆ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 1:45pm — ಮನಹ್ಪಠಲ

ಉ: ಅಭಿಜಿತ್/ನ್ ಲಗ್ನ ಅಂದರೇನು?

ಮನಹ್ಪಠಲ's picture

ನೀವು ಸಕತ್ ಇನ್ ಕ್ಯುಸಿಟಿವ್(ಕನ್ನಡದ ಪದ ಗೊತ್ತಿಲ್ಲ) ಕಣ್ರಿ. ಹನ್ಗೇ ಇರಿ. ಚೆ0ದಾಗಿರಿ, ಮಹೇಷರೇ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 2:05pm — mahesha

ಉ: ಅಭಿಜಿತ್/ನ್ ಲಗ್ನ ಅಂದರೇನು?

mahesha's picture

inquisitive : Eager to acquire knowledge; Too curious; overly interested;

ನಂನಿ

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 8:23pm — hamsanandi

ಉ: ಅಭಿಜಿತ್/ನ್ ಲಗ್ನ ಅಂದರೇನು?

hamsanandi's picture

ಅಭಿಜಿತ್ ತಾರೆಗೆ ಇಂಗ್ಲಿಷ್ ನಲ್ಲಿ Vega ಎಂದು ಹೆಸರು. ಇದು Lyra ಅನ್ನುವ ರಾಶಿಯಲ್ಲಿದೆ.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 11:27am — mahesha

ಉ: ಅಭಿಜಿತ್/ನ್ ಲಗ್ನ ಅಂದರೇನು?

mahesha's picture

ನಂನಿ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 1:58pm — benaka

ಉ: ಅಭಿಜಿತ್/ನ್ ಲಗ್ನ ಅಂದರೇನು?

benaka's picture

ಅಭಿಜಿತ್ ಲಗ್ನಕ್ಕೂ ಅಭಿಜಿತ್ ತಾರೆಗೂ ಸಂಬಂಧವಿಲ್ಲ!

ಲಗ್ನವೆಂದರೆ ಆಯಾ ಸ್ಥಳದಲ್ಲಿ ಆ ಕಾಲದಲ್ಲಿ ಪೂರ್ವದಿಕ್ಕಿನಲ್ಲಿ (ಉದಯಿಸುತ್ತಿರುವ) ಕಾಣುವ ರಾಶಿ ಅಥವಾ ಅಸೆಂಡೆಂಟ್.
ಇದನ್ನು, ರೈಟ್ ಅಸೆನ್‍ಶನ್ ಆಫ್ ಸೈಡೀರಿಯಲ್ ಝೋಡಿಯಾಕ್ ಅಥವಾ ನಾಕ್ಷತ್ರಿಕ ಕಾಲಮಾನರೀತ್ಯಾ ರಾಶಿಯ ಉದಯದ ಮೇಲೆ ಲೆಕ್ಕ ಹಾಕುತ್ತಾರೆ.
ಉದಾ: ಬೆಂಗಳೂರಿನ (ಉ ಅಕ್ಷಾಂಶ ೧೨-೫೮, ಪೂ ರೇಖಾಂಶ ೭೭-೩೬) ಜೂನ್ ೨೬ ೨೦೦೮ ರ ಬೆಳಿಗ್ಗೆ ೧೦:೩೦ ಕ್ಕೆ ಉದಯಿಸುವ ರಾಶಿ ಸಿಂಹ; ಆದ್ದರಿಂದ ಆ ಕಾಲಕ್ಕೆ ಆ ತಾಣಕ್ಕೆ ಅದು ಸಿಂಹಲಗ್ನ. ಕಾಲ-ದೇಶಗಳು ಬದಲಾದರೆ, ಸಹಜವಾಗಿಯೇ ಲಗ್ನವೂ ಬದಲಾಗುತ್ತದೆ.
ಉದಾ: ಬೆಂಗಳೂರಿನ ಅದೇ ದಿನದ ಸಂಜೆ ೬:೩೦ ಕ್ಕೆ ಲಗ್ನ ಧನುಸ್ ಆಗುತ್ತದೆ;
ಜೂನ್ ೨೬ ೨೦೦೮ ರ ಸಂಜೆ ೬:೩೦ಕ್ಕೆ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಲಗ್ನ ವೃಶ್ಚಿಕವಾಗುತ್ತದೆ.

ಈಗ ನಿಮ್ಮ ಪ್ರಶ್ನೆಗೆ ಉತ್ತರ:
ಬೆಳಿಗ್ಗೆ ಸೂರ್ಯೋದಯಕ್ಕೆ ಪೂರ್ವದಲ್ಲಿ ಸೂರ್ಯನೂ ಕಾಣುವುದರಿಂದ, ಆಗ ಲಗ್ನದಲ್ಲೇ ಸೂರ್ಯನು ಇರುತ್ತಾನೆ.
ಇದನ್ನೇ ಲಗ್ನಸೂರ್ಯ ಅಥವಾ ಒಂದನೇ ಮನೆಯಲ್ಲಿ ಸೂರ್ಯ ಇದ್ದಾನೆ ಎನ್ನುವುದು.
ಕಾಲ ಸರಿದಂತೆ. ಸೂರ್ಯ ಏರುತ್ತಾ ಹೋಗಿ ಪಡುವಣಕ್ಕೆ(ಹಿಂದಕ್ಕೆ) ಚಲಿಸುತ್ತಾನೆ; ಪೂರ್ವದಲ್ಲಿ ಕಾಣುವ ಲಗ್ನದ ರಾಶಿ ಬದಲಾಗುತ್ತಾ (ಮುಂದಕ್ಕೆ) ಹೋಗುತ್ತದೆ.
ಅಂದರೆ, ಲಗ್ನ(ಒಂದನೇ ಮನೆ) ಸೂರ್ಯನಿಂದ ಬದಲಾಗುತ್ತಾ, ಎರಡನೇ, ಮೂರನೆ ಮನೆಗಳಾಗುತ್ತಾ ಹೋಗಿ ಮಾರನೆಯ ದಿನದ ಸೂರ್ಯೋದಯಕ್ಕೆ ಮುನ್ನ
೧೨ ಮನೆಗಳನ್ನೂ ದಾಟಿ ಬರುತ್ತದೆ!

ಸೂರ್ಯನಿಂದ ಲಗ್ನವು ನಾಲ್ಕನೇ ಮನೆಯಾದಾಗ, ಅದಕ್ಕೆ "ಅಭಿಜಿತ್" ಲಗ್ನವೆನ್ನುತ್ತಾರೆ! ಅಥವಾ ಸೂರ್ಯ ಸರಿಯಾಗಿ ನೆತ್ತಿಯ ಮೇಲೆ ಬರುವಾಗ ಕಾಣುವ ಲಗ್ನವೇ ಅಭಿಜಿಲ್ಲಗ್ನ!
ಇನ್ನೊಂದು ರೀತಿ ಹೇಳಿದರೆ, ನಭೋಬಿಂದು (ಮೀಡಿಯಂ ಸೀಲೀ) ವಿನಲ್ಲಿ ರವಿಯಿರುವಾಗ ಪೂರ್ವದಲ್ಲಿ ಕಾಣುವ ಲಗ್ನವೇ(ಅಸೆಂಡೆಂಟ್) ಅಭಿಜಿತ್.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 2:07pm — savithru

ಉ: ಅಭಿಜಿತ್/ನ್ ಲಗ್ನ ಅಂದರೇನು?

savithru's picture

ಬೆನಕರೆ
ಲಗ್ನ ಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳಕ್ಕೆ ಹಿಂದೆ ಯತ್ನ ಮಾಡಿದ್ದೆ. ಆಗ ಅರ್ಥ ಆಗಿರಲಿಲ್ಲ.
ತುಂಬ ಸರಳವಾಗಿ ಮನ ಮುಟ್ಟುವಂತೆ ಅರ್ಥೈಸಿದೀರಿ. ಧನ್ಯವಾದಗಳು.

ಸಾಧ್ಯವಾದರೆ ಲಗ್ನದ ಬಗ್ಗೆ ಇನ್ನು ಹೆಚ್ಚು ಸೇರಿಸಿ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 2:11pm — mahesha

ಉ: ಅಭಿಜಿತ್/ನ್ ಲಗ್ನ ಅಂದರೇನು?

mahesha's picture

ನನ್ನಿ...

ಅಭಿಜಿಲ್ಲಗ್ನ ಅಂದರೆ ನಡುಹಗಲ ಮುಹೂರ್ತ ಹನ್ನೆರಡುಗಂಟೆಯಿಂದ ಎಂದಾಯ್ತು..

ಇದರ ವಿಶೇಶತನ ಏನು?

ನಾನೆಂದು ಈ ಲಗ್ನದಲ್ಲಿ ಮದುವೆ ಮುಂಜಿ ಮಾಡಿದನ್ನು ಒಂದೆರಡು ವರುಶಗಳ ಹಿಂದೆ ಕೇಳಿರಲಿಲ್ಲ.. ಈಗೀಗ ಈ ಮುಹೂರ್ತ ಹೆಚ್ಚಾಗ್ತ ಇದೆ.

---

ನಮ್ಮ ಮನೆಯಲ್ಲಿ ಈ ಲಗ್ನದ ಬಗ್ಗೆ ಸಿಕ್ಕಾಪಟ್ಟೆ ಸಮ್‌ಶಯ ಬಂದು, ಇದು ಲಗ್ನವೇ ಅಲ್ಲ ಎಂದು ಒಬ್ಬರು ದೊಡ್ಡವಾದ ಮಾಡಿ.. ಇದನ್ನು ಕಡೆಗಣಿಸಿದರು.. Smiling ಏನೇ ಆದರು ಮೇಶ, ರುಶಬ, ಮಿತುನ... ಈ ಹನ್ನೆರಡು ಲಗ್ನಗಳೇ ಲಗ್ನಗಳೆಂದು ದೊಡ್ಡವಾದ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 8:26pm — hamsanandi

ಉ: ಅಭಿಜಿತ್/ನ್ ಲಗ್ನ ಅಂದರೇನು?

hamsanandi's picture

ಬೆನಕರೆ,

ನಿಮ್ಮ ವಿವರಗಳಿಗೆ ಧನ್ಯವಾದಗಳು. ಹಾಗಿದ್ದರೆ ಅಭಿಜಿಲ್ಲಗ್ನವಿದ್ದಾಗ, ಬೇರೆ ಒಂದು ಲಗ್ನವೂ ಇರುತ್ತೆ ಅಲ್ಲವೇ?

ಮತ್ತೆ, ಇದಕ್ಕೆ ಯಾಕೆ ಅಭಿಜಿತ್ (ತಾರೆಯ?) ಹೆಸರಿಟ್ಟಿದ್ದಾರೆ ಅನ್ನುವುದು ಗೊತ್ತಿದ್ದರೆ ತಿಳಿಸಿ.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:45am — kannadakanda

ಉ: ಅಭಿಜಿತ್/ನ್ ಲಗ್ನ ಅಂದರೇನು?

kannadakanda's picture

ಒಳ್ಳೆಯ ಕೆಲಸ ಮಾಡುವಾಗ "ಶುಭಸ್ಯ ಶೀಘ್ರಂ" ಎಂಬಂತೆ ಕಾಲದೇಶವೆಂದು ಮೀನಮೇಷವೆಣಿಸದೇ ಕೆಲಸ ಮಾಡು. ನಿನಗೆ ಜಯ ಖಂಡಿತ ಎನ್ನುವುದಕ್ಕಾಗಿ "ಅಭಿಜಿತ್" (ಅಭಿ+ಜಿ(ಜಯ)+ತ್(ಪ್ರತ್ಯಯ)) ಲಗ್ನವೆನ್ನುತ್ತಾರೆ. ಮಟಮಟ ಮಧ್ಯಾಹ್ನವಾದರೂ ಮಾಡುವ ಶುಭ ಕೆಲಸ ನೀನು ಮಾಡು ಎಂದಷ್ಟೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:41am — kannadakanda

ಉ: ಅಭಿಜಿತ್/ನ್ ಲಗ್ನ ಅಂದರೇನು?

kannadakanda's picture

ಬೆನಕರ ವಾದ ಸರಿಯಿದೆ. ನೀವು ಯಾವಾಗಲೂ ಕೇಳಿ ಅಭಿಜಿನ್ಮುಹೂರ್ತ ನಡುಹಗಲಿ(ನಡುವಗಲು)ನಲ್ಲೇ ಬರುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 8:30pm — roopablrao

ಉ: ಅಭಿಜಿತ್/ನ್ ಲಗ್ನ ಅಂದರೇನು?

roopablrao's picture

ಅಭಿಜಿತ್ ಒಂದು ಶುಭ ಯೋಗ (ಲಗ್ನ)
ಸರ್ವ ಯೋಗ ಲಗ್ನ ಅಂತಾರೆ
ಈ ಲಗ್ನದಲ್ಲಿ ಯಾವುದೇ ಕೆಲಸ ಮಾಡಿದರೂ ಜಯ ನಿಶ್ಚಿತ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 3:50pm — benaka

ಉ: ಅಭಿಜಿತ್/ನ್ ಲಗ್ನ ಅಂದರೇನು?

benaka's picture

ಪ್ರಿಯ ಹಂಸಾನಂದಿ, ಮಹೇಶ,

ದಿನವೊಂದಕ್ಕೆ ಮುಹೂರ್ತಗಳು ೩೦. ದಿನಕ್ಕೆ ಅರುವತ್ತು ಗಳಿಗೆಗಳಾದ್ದರಿಂದ, ಮುಹೂರ್ತವೆಂದರೆ ೨ ಗಳಿಗೆ (= ೪೮ ನಿಮಿಷ).
ಮೂವತ್ತಕ್ಕೂ ಬೇರೆ ಬೇರೆ ಹೆಸರಿದೆ - ರುದ್ರ, ಅಹಿ... ವಿಶ್ವೇದೇವ, ನಕ್ತಂಚರ...ಬ್ರಾಹ್ಮೀ..ಇತ್ಯಾದಿ.
ಸೂರ್ಯೋದಯದಿಂದ ಲೆಕ್ಕಹಾಕಿದರೆ, ಮಾರನೆಯ ಸೂರ್ಯೋದಕ್ಕೆ ಸುಮಾರು ೨ ಗಂಟೆ ಮೊದಲು ಬರುವ ಮುಹೂರ್ತವೇ ಬ್ರಾಹ್ಮೀ ಮುಹೂರ್ತ(೨೫ನೆಯದು).

ಇದಲ್ಲದೆ, ಸೂರ್ಯೋದಯಕ್ಕೆ ಬರುವ ಮುಹೂರ್ತಕ್ಕೆ "ಉದಯ"ವೆಂದೂ, ಮಧ್ಯಾಹ್ನಕ್ಕೆ "ಅಭಿಜಿತ್" ಎಂದೂ, ಸೂರ್ಯಾಸ್ತಕ್ಕೆ "ಗೋಧೂಳಿ" ಎಂದೂ ಹೆಸರಿದೆ.
ಆದ್ದರಿಂದ ಅಭಿಜಿತ್ ಮುಹೂರ್ತದ ಲಗ್ನ ಅಭಿಜಿಲ್ಲಗ್ನವಾಗಿದೆ. ಬಹುಶಃ ಸೂರ್ಯನಿಂದ ನಾಲ್ಕನೆಯದು ಎಂಬುದು ಅತ್ಯಂತ ಸರಿಯಾದ ಲೆಕ್ಕವಲ್ಲ; ಸರಿ ಸುಮಾರು ಅಂದಾಜು ಅಷ್ಟೇ. ಸರಿಯಾದ ಲೆಕ್ಕ, ಸೂರ್ಯೋದಯಾಸ್ತಗಳ ಕಾಲವನ್ನನುಸರಿಸುತ್ತದೆ. ಆದರೆ, ಸರ್ವಜಯ ಅಥವಾ ಲಕ್ಷದೋಷಪರಿಹಾರಯೋಗ ಎಂಬುದು ಸುಮಾರು ಅಭಿಜಿತ್ ಮುಹೂರ್ತದಲ್ಲಿ ಬರುವುದರಿಂದ, ಈ ಹೆಸರು ಬಂದಿರಬಹುದು. (ಲಗ್ನದಿಂದ ಸೂರ್ಯನು ಹನ್ನೊಂದನೆ ಮನೆಯಲ್ಲಿದ್ದರೆ-ಅಥವಾ ಅವನಿಂದ ಲಗ್ನವು ಮೂರನೆ ಮನೆಯಾದರೆ - ರವಿರೇಕಾದಶೇ ಹಂತಿ ಲಕ್ಷದೋಷಾನ್-ಎಂದು ಸೂತ್ರ.)

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 4:30pm — mahesha

ಉ: ಅಭಿಜಿತ್/ನ್ ಲಗ್ನ ಅಂದರೇನು?

mahesha's picture

ನಂನಿ ಬೆನಕರೇ...

ಬ್ರಾಹ್ಮೀ, ಅಭಿಜಿತ್ ಮತ್ತು ಗೋಧೂಳಿ.

ಈ ಗೋಧೂಳಿ ಮುಹೂರ್ತ/ಲಗ್ನದ ಬಗ್ಗೆ ಕೇಳಲಿದ್ದೆ.. ಅಪರೂಪಕ್ಕೆ ನಮ್ಮೆಡೆ ಗೋಧೂಳಿ ಲಗ್ನವನ್ನು ಇಡುವುದುಂಟು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸರಳವಾದ ಸಂಪ್ರದಾಯದ ಲಗ್ನ ಪತ್ರಿಕೆಯ ಮಾದರಿ/model
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ಹಾಸ್ಯ - ೧
  • ಐತ್ತಲಕಡಿ !
  • ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
  • mahesha
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 10:42pm
  • bvenkatraya
    ಉ: ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ
    December 2, 2008 - 10:41pm
ಇನ್ನಷ್ಟು


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator