ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ಮಾಧ್ವರಿಗೆ ಶಿವ ಯಾಕೆ ದೂರ?

June 27, 2008 - 2:26pm — roopablrao

ನಾನು ಸ್ಮಾರ್ಥ ಮನೆತನದವಳು ಮದುವೆಯಾಗಿದ್ದು ಮಾಧ್ವರನ್ನು

ಇಲ್ಲಿ ಕೆಲವೊಂದು ಆಚರಣೆ ನಂಗೆ ನಗು ತರುತ್ತೆ

ನಮ್ಮ ತಾಯಿಯ ಮನೆಯಲ್ಲಿ ಶಿವನ ಪ್ರತಿಮೆ, ಫೋಟೊ, ಎಲ್ಲಾ ಇಡುತ್ತಿದ್ದರು
ಆದರೆ ಇಲ್ಲಿ ಅತ್ತೆ ಮನೆಯಲ್ಲಿ ಶಿವನ ಫೋಟೊ ಆಗಲಿ ಲಿಂಗ ವಾಗಲಿ ಇಡಬಾರದು ಅಂತ ಕಟ್ಟಪ್ಪಣೆ ಮಾಡಿದ್ದರು.
ಯಾಕೆ ಅಂದರೆ ನಾವು ಮಾಧ್ವರು ಅದನ್ನೆಲ್ಲಾ ಇಡಬಾರದು ಎಂದು ಹೇಳಿದರು

ಹಾಗೆ

ಕೊಳಲೂದುತ್ತಿರುವ ಕೃಷ್ಣನ ಪ್ರತಿಮೆಯೊಂದು ಉಡುಗೊರೆಯಾಗಿ ಬಂದಿತ್ತು ಅದನ್ನೂ ಇಡಬಾರದು ಎಂದರು.
ನಾವೆಲ್ಲಾ ಸೈಡ್ ಉರಿಯುತ್ತಿರುವ ದೀಪ ಇಡುತ್ತಿದ್ದೆವು

ಇಲ್ಲಿ ಹೂ ಬತ್ತಿಯನ್ನೇ ಉಪ್ಯೋಗಿಸಬೇಕು ಹಾಗು ದೀಪದ ನಡುವಲ್ಲಿ ಇಡಬೇಕು ಎನ್ನುವ ಸಿದ್ದಾಂತ ಬೇರೆ
ಕಾರಣ ಯಾರಿಗೂ ಗೊತ್ತಿಲ್ಲ

ಯಾರಾದರೂ ಹೇಳುತ್ತೀರಾ?

‹ ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)
  • ತತ್ವಜ್ಞಾನ
~.~
  • Login or register to post comments
  • 945 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 27, 2008 - 2:45pm — mahesha

ಉ: ಮಾಧ್ವರಿಗೆ ಶಿವ ಯಾಕೆ ದೂರ?

mahesha's picture

ಮಾಧ್ವರು ಮೂರುಪಟ್ಟಿ ಇರುವ ಗಣಪನನ್ನು ಪೂಜೆ ಮಾಡಲ್ಲ.ಬದಲಿ ಗಣಪನಿಗೂ ಕಪ್ಪುನಾಮ(ಅಂಗಾರಕ) ಹಾಕ್ತಾರೆ...

ಸ್ಮಾರ್ತರು(ಸ್ಮಾರ್ಥ ಅಲ್ಲ ) ಸಂಕಲ್ಪವನ್ನು ’ಪರಮೇಶ್ಚರ’( ಎಲ್ಲದಕ್ಕೂ ಒಡೆಯನಾದವನು) ಎಂದು ಮಾಡಿದರೇ, ಮಾಧ್ವರು ಮುಖ್ಯಪ್ರಾಣ ಅಂತಲೋ ಏನೋ ಮಾಡ್ತಾರೆ.

ಸ್ಮಾರ್ತರಲ್ಲಿ ಮದುವೆಯಾಗದ ಹುಡುಗರು ಕಚ್ಚೆ ಹಾಕಲ್ಲ.. ಮಾಧ್ವರಲ್ಲಿ ಹಾಕ್ತಾರೆ.. ಸ್ಮಾರ್ತರು ಮದುವೆಯಾದ ಮೇಲೇನೇ ಕಚ್ಚೆ ಹಾಕೋದು. ಮಾಧ್ವ ಹುಡುಗರು ಬರೀ ಕಚ್ಚೆ ಹಾಕಿ ಮೇಲ್ ಹೊದುಗೆ ಇಲ್ಲದೇ ಪೂಜೆ, ಸಂಧ್ಯಾವಂದನೆ ಮಾಡ್ತಾರೆ.. ಸ್ಮಾರ್ತರಲ್ಲಿ ಒಂಟಿ ಬಟ್ಟೆಯಲ್ಲಿ ಮಂಗಳಕಾರ್ಯ ನಿಶೇದ.. ಕಡ್ಡಾಯವಾಗಿ ವಲ್ಲಿ ಇಲ್ಲವೇ ಸೊಂಟಕ್ಕೆ ಬಟ್ಟೆ ಕಟ್ಟಬೇಕು.

ಸ್ಮಾರ್ತ ಹೆಂಗಸರು ಹೊರಕಚ್ಚೆ ಹಾಕೋಹಾಕಿಲ್ಲ.. ಅದು ಸ್ಮಾರ್ತರಲ್ಲಿ ಅಸಭ್ಯ. ಮದುವೆಯಾದ ಸ್ಮಾರ್ತ ಹೆಂಗಸರು ಕೆಲವು ಸನ್ನಿವೇಶಗಳಲ್ಲಿ ಮಾತ್ರ ಒಳಕಚ್ಚೆ ಅಂತ ಉಡ್ತಾರೆ.. ಮಾಧ್ವರಲ್ಲಿ ಹೊರಕಚ್ಚೆ ಹೆಂಗಸರು ಹಾಕಲೇ ಬೇಕಂತೆ. ಅದನ್ನು ಮದುವೆಯಲ್ಲೋ ಕೂಡ.

ಸ್ಮಾರ್ತರ ಪೂಜೆಯಲ್ಲಿ ಹಾಡು ಇದ್ದಾರೂ ಕಡಮೆ. ಸ್ಮಾರ್ತ ಹೆಂಗಸರು ಕೋಲಾಟ ಮುಂತಾದವನ್ನು ಕುಣಿಯಲ್ಲ.

ಮಾಧ್ವರಲ್ಲಿ ಮಾಧ್ವಾಚಾರ್ಯರು ಬರೆದ, ಇಲ್ಲವೇ ಅವರ ಮತ ಆಚಾರ್ಯರು ಬರೆದ ಸ್ತೋತ್ರಗಳನ್ನು ( ವಾಯುಸ್ತುತಿ ಮುಂತಾದವು ) ಕಡ್ಡಾಯವಾಗಿ ಪೂಜೆ, ಸಮಾರಾದನೆ ವೇಳೆ ಹೇಳ್ತಾರೆ.. ಸ್ಮಾರ್ತರಲ್ಲಿ ಶಂಕರಾಚಾರ್ಯರ ಸ್ತೋತ್ರಗಳಲ್ಲಿ ಒಂದನ್ನೂ ಹೇಳದೇ ದೊಡ್ಡ ದೊಡ್ಡ ಪೂಜೆ ಮುಗಿಸೋದುಂಟು.

ಇನ್ನು ಮಾಧ್ವರ ದ್ವಾದಶಿ, ಏಕಾದಶಿ ನಿಯಮಗಳು ತುಂಬಾ ಬೇರೆ......
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 2:51pm — mahesha

ಉ: ಮಾಧ್ವರಿಗೆ ಶಿವ ಯಾಕೆ ದೂರ?

mahesha's picture

ಮುಕ್ಯವಾದದನ್ನೇ ಮರೆತೆ...

ಮಾಧ್ವರಲ್ಲಿ ತಾರತಮ್ಯವಾದವಿದೆ.. ಅವರಲ್ಲಿ ಯಾವುದೇ ಎರಡು ಸರಕು/ಸಂಗತಿಗಳು ಸಮವಲ್ಲ... ತಾರತಮ್ಯವಿರುತ್ತದೆ...

ಅವರಲ್ಲಿ ದೇವರ hierarchy ಇದೆ. ಅಂದರೆ ಒಬ್ಬ ದೇವರಿಗಿಂತ ಇನ್ನೊಬ್ಬ ಮೇಲು, ಕೀಳು. ಆ ತಾರತಮ್ಯದಂತೆ ಶಿವ ವಿಷ್ಣುಗಿಂತ ಕೀಳು, ಮತ್ತು ಶಿವ ಭಕ್ತರು ವಿಷ್ಣುಭಕ್ತರಿಗಿಂತ ಕೀಳು...
ಸ್ಮಾರ್ತರಲ್ಲಿ ತಾರತಮ್ಯವಿಲ್ಲ.. ಅವರಿಗೆ ಎಲ್ಲಾ ದೇವರು ಒಂದೇ.. "ಸರ್ವಂ ಖಲ್ವಿದಂ ಬ್ರಹ್ಮ"!

ಅವರ ಭೂತನಾಥ ಎಂಬ ದೇವರು ಶಿವನಂತೆ, ಅವನು ಒಂದು ಲಿಂಗದ ಮೇಲೆ ನಿಂತು ಕಯ್ಯಲ್ಲಿ ಪೊರಕೆ ಹಿಡಿದು, ಮೂರ ನಾಮಹಾಕಿಕೊಂಡು, ಉಬ್ಬಹಲ್ಲು ಬಿಟ್ಟಿಕೊಂಡು ಇರ್ತಾನೆ. ಈ ಚಿತ್ರವನ್ನು ಮಾಧ್ವರು ಮನೆಯ ಮುಂಬಾಗಿಲಿಗೆ ಹಾಕಿರ್ತಾರೆ..

ಸ್ಮಾರ್ತ ಈ ಚಿತ್ರವನ್ನು ಬಳಸಬಾರದಂತೆ.. ಅದು ಶಿವನ ಅಂದಗೆಡಿಸಿ ಚಿತ್ರವಂತೆ.!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 2:54pm — mahesha

ಉ: ಮಾಧ್ವರಿಗೆ ಶಿವ ಯಾಕೆ ದೂರ?

mahesha's picture

ಮಾಧ್ವರು ಲಿಲಿತಾ ಸಹಸ್ರನಾಮ ಹೇಳಲ್ಲ.. ಅದು ಅವರಿಗೆ ನಿಶಿದ್ದವಂತೆ..
ಶಿವರಾತ್ರಿದಿನ ಹೋಳಿಗೆ ಅಡುಗೆ ಮಾಡ್ತಾರೆ, ಉಪಾಸ ಮಾಡಲ್ಲ.

ಇದು ವ್ಯತ್ಯಾಸಗಳು.. ಇನ್ನು ದೊಡ್ಡ ಪಟ್ಟಿ ಮಾಡಬೋದು..
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 3:13pm — ಮನಹ್ಪಠಲ

ಉ: ಮಾಧ್ವರಿಗೆ ಶಿವ ಯಾಕೆ ದೂರ?

ಮನಹ್ಪಠಲ's picture

ಯಪ್ಪೋ!!

ಬೇರೊ೦ದು ಸಮುದಾಯದಲ್ಲಿ ಸ್ಮಾರ್ತರು- ಮಾದ್ವರು ಕಿತ್ತಾಡೋದನ್ನೋಡೀ ಅಲ್ಬಿಟ್ಟು ಇಲ್ಬ೦ದ್ರು, ಇಲ್ಲಿ ಶುರು ಆಯ್ತಲ್ಲಪ್ಪೋ.

ನಿಮ್ಮವ
ಕ್ರಿಸ್ನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 3:31pm — mahesha

ಉ: ಮಾಧ್ವರಿಗೆ ಶಿವ ಯಾಕೆ ದೂರ?

mahesha's picture

Sad ನಂಗೆ ಸಿಟ್ಟು ಬರ್ತಾ ಇದೆ..

ಇಲ್ಲಿ ಕಿತ್ತಾಟ ಇಲ್ಲ.. ಎರಡು ಸಂಪ್ರದಾಯಗಳ ನಡುವಣ ವ್ಯತ್ಯಾಸದ ಅರುಹು ಅಶ್ಟೆ!

ನನ್ನ ಕಮೆಂಟಿಂದ ಕಿತ್ತಾಟ ಸುರುವಾಗದಿರಲಿ. ಆದರೆ ಏನೂ ಮಾಡಕ್ಕೆ ಆಗಲ್ಲ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 3:44pm — ಮನಹ್ಪಠಲ

ಉ: ಮಾಧ್ವರಿಗೆ ಶಿವ ಯಾಕೆ ದೂರ?

ಮನಹ್ಪಠಲ's picture

ನನ್ನ್ ಮನಸ್ನಲ್ಲಿದ್ದಿದ್ದಿಶ್ಟೆ. ಇಬ್ಬ್ರು ಹೊ೦ದ್ಕೊ೦ಡ್ ಹೋದ್ರೆ ಚೆನ್ನಾಗಿರುತ್ತಲ್ವಾ? ಇಬ್ರು ಅವರವರ assertiveness ತೋರಿಸಿದರೆ ಕಿತ್ತಾಟ guarantee.
ನನಗೆ ಕಿತ್ತಾಟ ಇಶ್ಟ ಇಲ್ಲ ಮಹೇಶರೇ. ಮೂರ್ನೆಯವರು(ಯಾರು ಬೇಕಾದ್ರು ಆಗ್ಬೋದು) ನೋಡಿ ನಗ್ಬಾರ್ದು ಅಶ್ಟೆ.

ನಿಮ್ಮವ
ಕ್ರಿಸ್ನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 3:17pm — ರವಿ

ಉ: ಮಾಧ್ವರಿಗೆ ಶಿವ ಯಾಕೆ ದೂರ?

ರವಿ's picture

ಸ್ಮಾರ್ತರು(ಸ್ಮಾರ್ಥ ಅಲ್ಲ ) ಸಂಕಲ್ಪವನ್ನು ’ಪರಮೇಶ್ಚರ’( ಎಲ್ಲದಕ್ಕೂ ಒಡೆಯನಾದವನು) ಎಂದು ಮಾಡಿದರೇ, ಮಾಧ್ವರು ಮುಖ್ಯಪ್ರಾಣ ಅಂತಲೋ ಏನೋ ಮಾಡ್ತಾರೆ.

ಅಲ್ರೀ... ವೆಂಕಟೇಶನ ಒಕ್ಕಲು ಇರೋ ಸ್ಮಾರ್ತರು ಏನ್ರೀ ಮಾಡ್ತಾರೆ?

ಸ್ವಲ್ಪ ವಿಚಾರಿಸಿ ನೋಡ್ರಪ್ಪೌ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 11:51am — mahesha

ಉ: ಮಾಧ್ವರಿಗೆ ಶಿವ ಯಾಕೆ ದೂರ?

mahesha's picture

ವೆಂಕಟ ಅನ್ನೋದು ಸಂಸ್ಕೃತ ಒರೆಯಲ್ಲ.. Smiling

ಅದಿರಲಿ.. ಮನೆದೇವರು ರಂಗನಾಥ ಇರುವ ಸ್ಮಾರ್ತರೂ ಪರಮೇಶ್ವರ ಎಂದೇ ಹೇಳೋದು.! ಮನೆದೇವರು ಯಾರಿದ್ದರೂ ಶಿವವಿಶ್ಣುಗಳಲ್ಲಿ ಭೇದ ಎಣಿಸಬಾರದು ಸ್ಮಾರ್ತರು..

ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ
ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋರ್‍ಹೃದಯಂ ಶಿವಃ||

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 6:56pm — vikashegde

ಉ: ಮಾಧ್ವರಿಗೆ ಶಿವ ಯಾಕೆ ದೂರ?

vikashegde's picture

ಕರಿನಾಯಿ ಚಿತ್ರ ಹಾಕ್ಕೊಂಡಿರೋರು ಕೇಳಿದ್ದೊಂದನ್ನ ಬಿಟ್ಟು ಉಳಿದಿದ್ದೆಲ್ಲಾ ಹೇಳಿ ಕಿತ್ತಾಟ ಶುರು ಮಾಡೋಕೆ ನೋಡುತ್ತಿರುವಂತಿದೆ. ಇರಲಿ.. ಯಾವಾಗಲೂ ಇದ್ದದ್ದೇ ಅದು.

ರೂಪಕ್ಕ, ಅದು ಹಾಗೆ ಒಬ್ಬೊಬ್ಬರದ್ದು ಒಂದೊಂದು ತರಹ ರೂಢಿ, ಸಂಪ್ರದಾಯ, ವಿಧಿ ವಿಧಾನಗಳು, ಆಚರಣೆಗಳು ಬೆಳೆದು ಬಂದಿರುತ್ವೆ.
ಕೆಲವೊಂದಕ್ಕೆ ಕಾರಣ ಇರತ್ತೆ, ಆದ್ರೆ ಗೊತ್ತಿರಲ್ಲ, ಇನ್ನು ಕೆಲವಕ್ಕೆ ಕಾರಣ ಇರಲ್ಲ, ಆದ್ರೆ ರೂಢಿಯಿಂದ ಹಾಗಾಗಿರತ್ತೆ. ದೀಪದ ಬತ್ತಿ ಮಧ್ಯ ಇಡದೋ ಸೈಡಲ್ಲಿಡದೋ ಅಂತ ತಲೆಕೆಡಿಸಿಕೊಳ್ಳುವುದಕ್ಕಿಂತ ದೀಪ ಯಾಕೆ ಹಚ್ಚಿಡುತ್ತಾರೆ ಅನ್ನುವುದರ ಕಾರಣ ತಿಳಿದುಕೊಂಡ್ರೆ ಒಳ್ಳೇದು. ಅಮ್ಮನ ಮನೆಲ್ಲಿ ಸೈಡಲ್ಲಿಡ್ಲಿ, ಅತ್ತೆ ಮನೆಲ್ಲಿ ಮಧ್ಯದಲ್ಲೇ ಇಡ್ಲಿ. ಅವರವರ ರೂಢಿ.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:10pm — Rajeshwari

ಉ: ಮಾಧ್ವರಿಗೆ ಶಿವ ಯಾಕೆ ದೂರ?

Rajeshwari's picture

ಮಾಧ್ವರು ರಾಯರ ಮಠದ ವಟಾರದಲ್ಲಿ ಸ್ಮಾರ್ತರಿಗೆ ಬಾಡಿಗೆ ಕೊಡಲು ಹಿಂದು ಮುಂದು ನೋಡುತ್ತಾರೆ, ಮಾಧ್ವರು ಗೆಳೆತನದಲ್ಲೂ ಅವ್ರ ಗುಂಪನ್ನೇ ಹುಡುಕಿಕೊಂಡು ಒಂದು ಗ್ರೂಪ್ ಮಾಡ್ಕೋತಾರೆ. ಅವ್ರ ನಡೆ,ನುಡಿಗಳಲ್ಲಂತು ನಾವು ಮಾಧ್ವ ಎಂದು ಪ್ರತಿಬಿಂಬಿಸುವಂತಿರುತ್ತಾರೆ. ಪದೇ ಪದೇ ಕ್ರಿಷ್ಣನ ಕೀರ್ತನೆ, ವಿಷ್ಣು ಜಪ. ಅವರ ಭಾವ ಭಂಗಿಗಳಿಂದಲೇ ಅವರನ್ನು ಗುರ್ತು ಹಿಡಿಯಬಹುದು. ಅದಕ್ಕೇ ಅಲ್ವೇ "ಮಾಧ್ವ ಯದ್ವಾ ತದ್ವಾ" ಅನ್ನೋದು.
ಇನ್ನು ಸ್ಮಾರ್ಥ ಹೆಣ್ಣು ಮಗಳನ್ನು ಮನೆಗೆ ಸೊಸೆಯನ್ನಾಗಿ ಮಾಡ್ಕೊಂಡ್ ಬಂದ್ರೆ ಮುಗ್ದೇ ಹೋಯ್ತು ಅವಳ ಗತಿ, ಮೊದ್ಲು ಅವ್ರ ಮಠಕ್ಕೆ ಕರೆದುಕೊಂಡು ಹೋಗಿ ಮುದ್ರೆ ಹಾಕಿಸುವುದೇ ಅವ್ರ ಆದ್ಯ ಕರ್ತವ್ಯ. ಈ ಮುದ್ರಾಧಾರಣೆಯಿಂದ ಮಾತ್ರವೆ ಅವಳಿಗೆ ಅಡುಗೆ ಮಾಡೋಕ್ಕೆ ಪರ್ಮಿಶ್ಶನ್. ಸೊಸೆ ನಮ್ಮಂತೆ ದುಂಡಕಾರದ ಕುಂಕುಮ ಇಡುವಂತಿಲ್ಲ, ಅವ್ಳು ತಿಲಕವನ್ನೇ ಇಟ್ಟ್ಕೋಬೇಕು. ಮಾತೆದ್ದಿದ್ದರೆ ಸಾಕು ರಾಯರು, ವ್ಯಾಸರಾಯರು,ವಾಧಿರಾಜರು,ಪೇಜಾವರ...ಅಂತ ಜಪಗೈಯುವದು , ಮಡಿ ಮಡಿ ಅಂತ ಹಾರೋದು ಅವ್ರ ಹವ್ಯಾಸ. ಸ್ಮಾರ್ಥರಿಗೆ ಅದರ ಅರಿವೇ ಇಲ್ಲವೇನೋ ಎಂಬಂತೆ ವರ್ತಿಸೋದು.
ಶಿವರಾತ್ರಿ ಮಾತ್ರ ಅವ್ರು ಈಶ್ವರನ ಸನ್ನಿಧಿಗೆ ಹೋಗುತ್ತಾರೆ, ಮುಂದಿನ ಜನ್ಮದಲ್ಲಿ ಕತ್ತೆ ಜನ್ಮ ಬರಬಾರದು ಅಂತ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:29pm — Sunil Jayaprakash

ಉ: ಮಾಧ್ವರಿಗೆ ಶಿವ ಯಾಕೆ ದೂರ?

Sunil Jayaprakash's picture

ಪದೇ ಪದೇ ಕ್ರಿಷ್ಣನ ಕೀರ್ತನೆ, ವಿಷ್ಣು ಜಪ.

ಸ್ಮಾರ್ತರು ಹಾಡಲ್ವೇ ? ಒಂದು ಗಮನಿಸಿದ್ದೀರಾ. ಮಾಧ್ವರು ಹೆಚ್ಚಾಗಿ ಕನ್ನಡ ಕೀರ್ತನೆಗಳನ್ನೇ ಹಾಡ್ತಾರೆ. ಮೈಸೂರು ಸೀಮೆಯ ಸ್ಮಾರ್ತ ಹಾಡುಗಾರರಂತೂ ಕನ್ನಡ ಕೈಬಿಟ್ರು, ಬಾಯಿಬಿಟ್ರೆ ಬರೀ ತೆಲಗೇ ಬರತ್ತೆ. ಕಡೇಪಕ್ಷ, ಮಾಧ್ವರಾದರೂ ಕನ್ನಡ ಹಿಡ್ಕೊಂಡಿದ್ದಾರಲ್ಲ, ಖುಷಿಪಡಿ. ಅದಕ್ಕೇ ನಾನು ಹೇಳಿದ್ದು, ಕೆಲವು ವಿಷಯಗಳಲ್ಲಿ ಮಾಧ್ವರ ಮೇಲೆ ಸುಮ್ಸುಮ್ನೆ ಗೂಬೆ ಕೂರಿಸಲಾಗಿದೆ ಅಂತ.

ಹೀಗೆ, ಕನ್ನಡನಾಡಿನಲ್ಲಿ ಸ್ಮಾರ್ತ ಮತ್ತು ಮಾಧ್ವರ ನಡುವೆ ತಂದಿಟ್ಟು, ಯಾರು ಯಾರು ಏನೇನು ಸಾಧಿಸಿಕೊಂಡಿದ್ದಾರೋ ನಾ ಕಾಣೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:58pm — Rajeshwari

ಉ: ಮಾಧ್ವರಿಗೆ ಶಿವ ಯಾಕೆ ದೂರ?

Rajeshwari's picture

ಸ್ಮಾರ್ಥರ ಕೆಲವು ಪಂಗಡಗಳಲ್ಲಿ ತೆಲುಗು ಮಾತ್ರು ಭಾಷೆಯಾದ್ದರಿಂದ ಮಾತನಾಡುವುದು ಸಹಜ, (ಮಾಧ್ವರಿಗೆ) ಅವ್ರಿಗೆ ಕನ್ನಡವೇ ಮಾತ್ರು ಭಾಷೆ , ಅದಕ್ಕೇ ಅದನ್ನು ಮಾತನಾಡುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:39pm — Sunil Jayaprakash

ಉ: ಮಾಧ್ವರಿಗೆ ಶಿವ ಯಾಕೆ ದೂರ?

Sunil Jayaprakash's picture

ಅದಕ್ಕೇ ಹೇಳಿದ್ದು, ರಾಜೇಶ್ವರಿ ಅವರೇ, ಈ ಕನ್ನಡ ಮಾತೃಭಾಷೆಯ ಹಿನ್ನೆಲೆಯಲ್ಲಿ ಪದೇ ಪದೇ ಕೃಷ್ಣನ ಕೀರ್ತನೆ ಹಾಡ್ತಾರೆ ಅನ್ನೋದು ತಪ್ಪಲ್ವಾ. ಯಾವ ಕಾರಣಕ್ಕೆ ಬಯ್ಯಬೇಕೋ, ಆ ಕಾರಣಕ್ಕೆ ಬಯ್ಯಿರಿ. ಅದು ಬಿಟ್ಟು... ಈ ರೀತೀನಾ. ಇದು ಹೇಗಪ್ಪಾ, ಅಂದ್ರೆ. ನೀವು ಒರಿಯಾ ಹಾಡು ಹಾಡಲ್ವಾ, ನೀವು ಒರಿಯಾ ದ್ವೇಷಿ ಅಂದಹಾಗಾಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:46pm — Rajeshwari

ಉ: ಮಾಧ್ವರಿಗೆ ಶಿವ ಯಾಕೆ ದೂರ?

Rajeshwari's picture

ಜನರ ಮನಸ್ಸನ್ನು ಅರಿತುಕೊಂಡು ವರ್ತಿಸುವುದು ಮಾನವರಿಗೆ ಅನಿವಾರ್ಯವಾಗುತ್ತೆ. ಅದು ಅವರು ಬಹಳಷ್ಟು ಬಾರಿ ಮಾಡುವುದಿಲ್ಲ, ಇದು ನನಗಾದ ಅನುಭವ.
ನೀವು ಅದನ್ನೊಂದನ್ನೆ ತೆಗೆದುಕೊಂಡು ಮಾತನಾಡಿದರೆ ನಾನು ಏನು ಮಾಡಲು ಸಾಧ್ಯವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 10:24pm — Rajeshwari

ಉ: ಮಾಧ್ವರಿಗೆ ಶಿವ ಯಾಕೆ ದೂರ?

Rajeshwari's picture

"ಕನ್ನಡ ಮಾತೃಭಾಷೆಯ ಹಿನ್ನೆಲೆಯಲ್ಲಿ ಪದೇ ಪದೇ ಕೃಷ್ಣನ ಕೀರ್ತನೆ ಹಾಡ್ತಾರೆ ಅನ್ನೋದು ತಪ್ಪಲ್ವಾ."

ನೋಡಿ ಎಲ್ಲಾದಕ್ಕು ಇತಿ ಮಿತಿ ಅಂತ ಇರುತ್ತೆ, ಅದನ್ನು ಜನರು ಅರಿತುಕೊಂಡು ನೆಡೆಯಬೇಕೆಂಬುದು ನನ್ನ ಅಭಿಪ್ರಾಯ, ನಮ್ಮ ಮನೆಗಳಲ್ಲಿಯೂ ಹಾಡು, ಸಂಪ್ರದಾಯ ,ದಾಸರಪದ ಹೇಳುವುದು ಎಲ್ಲ ಇರುತ್ತೆ. ಅದಕ್ಕೆ ಪದೆ ಪದೆ ಹೇಳುವುದು ತಪ್ಪು ಅಂತ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 11:29pm — ಮನಹ್ಪಠಲ

ಉ: ಮಾಧ್ವರಿಗೆ ಶಿವ ಯಾಕೆ ದೂರ?

ಮನಹ್ಪಠಲ's picture

ಶ್ರೀಹರಿಗೀತಾಮೃತಸಾರ

ರಚಯಿತರು: ಶ್ರೀ ಯು. ಯಸ್. ಆಚಾರ್ಯ
ಮಾಜಿ ಮೇನೇಜರ್, ಕಾರ್ಪೊರೇಶನ್ ಬ್ಯಾ೦ಕ್, ಆಡಳಿತ ಕಛೇರಿ, ಮ೦ಗಳೂರು

೧೯೭೮

ಶ್ರೀ ಕೃಷ್ಣ ಜಯ ಶ್ರೀ ಕೃಷ್ಣ ಜಯ ಶ್ರೀ ಕೃಷ್ಣ ಶ್ರೀ ಕೃಷ್ಣ ಜಯ ಶ್ರೀ ಕೃಷ್ಣ
ಶ್ರೀರಾಮ ಜಯ ಶ್ರೀರಾಮ ಜಯ ಶ್ರೀರಾಮ ಜಯ ಶ್ರೀರಾಮ ಜಯ ಶ್ರೀರಾಮ

ಧರ್ಮಕ್ಷೇತ್ರದೊಳು ಕರ್ಮವ ಮಾಡದ ಧರ್ಮನ ಅನುಜಗೆ ಶ್ರೀ ಕೃಷ್ಣ
ಧರ್ಮವ ಭೋದಿಸಿ ಕರ್ಮವ ಮಾಡುವ ಮರ್ಮವನರುಹಿದ ಹರಿಕೃಷ್ಣ

ಶ್ರೀ ಹರಿಗೀತಮೃತಸಾರ

ಪಾರ್ಥನು ಸ್ವಜನ ಹಿ ತಾರ್ಥದಿ ಯುಧ್ಧದ ಕ್ಷೇತ್ರದಿ ಚಿ೦ತಿಸುತಚ್ಯುತನ
ಪ್ರಾರ್ಥಿಸಿ ಯುದ್ಧದಿ ಸಾರ್ಥಕ ವೇನಪ ಕೀರ್ತಿಯು ತನಗೆನೆ ಹರಿಕೃಷ್ಣ

ಪಾರ್ಥನೆ ಬಿಡು ಬಿಡು ವ್ಯರ್ಥ ಪ್ರಲಾಪಪ ಕೀತಿಯು ನಿನಗೆ ನಲಸುರಾರಿ
ಪಾರ್ಥನು ನಮಿಸಿಯ ಥಾರ್ಥವನರಿಹಿಕೃ ತಾರ್ಥನ ಮಾಡೆ’ನೆ ಹರಿಕೃಷ್ಣ

ದೇಹವು ಅಸ್ಥಿರ ದೇಹಿ ನಿತ್ಯನು ಮೋಹಕಾಮಗಳ ದಾಹದಲಿ
ದೇಹಿಯು ಕರ್ಮದ ದೇಹವ ಪಡೆವನು ಸಾಹಸಿ ಕೇಳೆ೦ದ ಹರಿಕೃಷ್ಣ

ವಿಷಯಾಪೆಕ್ಷೆಯು ವಿಷದ ಸಮಾನವು ವಶವಾಗದೆ ಸ್ಥಿರಮತಿಯಾಗು
ವಿಷಯೇ೦ದ್ರಿಯಗಳು ವಶದಗಿರುಳುತಿರೆ ಯಶವಹುದೆ೦ದನು ಹರಿಕೃಷ್ಣ

ಧರ್ಮನ ಅನುಜನೆ ಕರ್ಮವ ಮರ್ಮವ ಬ್ರಹ್ಮನೆ ಬಲ್ಲನು ಎಲ್ಲವನು
ಕರ್ಮಾಕರ್ಮವ ಬ್ರಹ್ಮರ್ಪಣವನೆ ನೆಮ್ಮದಿ ಎ೦ದನು ಹರಿಕೃಷ್ಣ

ಮಾನವ ಜನುಮದಿ ಜ್ಞಾನಜ್ಞಾನದ ಜ್ಞಾನವ ಪಡೆದು ಸುಮಾರ್ಗದಲಿ
ನೀನೆ ಗತಿ ಎನೆ ನಾನೆ ಸಲಹುವೆ ನೆನರಿ ಎ೦ದನು ಹರಿಕೃಷ್ಣ

ಧರ್ಮ ಶಾಸ್ತ್ರಗಳ ಮರ್ಮವನರಿತ ಸು ಕರ್ಮಯೋಗಿಗಳಿಗಭಯವನು
ಧರ್ಮವೆ ಕೊಡುವುದು ಧರ್ಮಸೂತ್ರಗಳ ಮರ್ಮವಿದೆ೦ದನು ಹರಿಕೃಷ್ಣ

ಭೋಗವ ಮನದಿಹ ರಾಗವ ಘನವೈ ರಾಗ್ಯಾಭ್ಯಾಸದಿ ನೀಗಿಸುವ
ತ್ಯಾಗಿಯು ಧ್ಯಾನದ ಯೋಗದಿ ಮೋಕ್ಷಕೆ ಪೋಗುವನೆ೦ದನು ಹರಿಕೃಷ್ಣ

ಎನ್ನಯ ಹೊರತೊ೦ ದನ್ಯವೆನ್ನುವುದು ಎನ್ನಯ ಸೂತ್ರದೊಳಿರುತಿರಲು
ಎನ್ನನೆ ಗತಿಯೆ೦ ದೆನ್ನುತ ಮನದೊಳ ಗನ್ನನೆ ಸ್ಮರಿಸೆ೦ದ ಹರಿಕೃಷ್ಣ

ಕು೦ತಿಯ ಪುತ್ರನೆ ಅ೦ತ್ಯದಿ ಚಿ೦ತಿಸು ವ೦ತಹ ಪ್ರಾಪ್ತಿಯು ನಿಶ್ಚ್ಯವು
ಸ೦ತತ ನೀ ಭಗ ವ೦ತನ ಚಿ೦ತಿಸೆ ಸ೦ತಸವೆ೦ದನು ಹರಿಕೃಷ್ಣ

ಇಲ್ಲಿಹನಲ್ಲಿಹ ಸೊಲ್ಲದುಸಲ್ಲದು ಎಲ್ಲೆಲ್ಲೂ ಇಹ ಎನ್ನೊಳಗೆ
ಎಲ್ಲವು ಇರುತಿರೆ ಸಲ್ಲಿಸೆ ಎಲ್ಲವ ಸಲ್ಲುವೆ ಎ೦ದನು ಹರಿಕೃಷ್ಣ

ಮಿತ್ರನೆ ಲೋಕದ ಕರ್ತನು ನಾ ಸರ್ವತ್ರದಿ ವ್ಯಾಪ್ತನು ನಿಜವೆನುತ
ಚಿತ್ರವಿಚಿತ್ರ ಪವಿತ್ರದ ರೂಪವ ವಿಸ್ತರಿಸಿದನಾ ಹರಿಕೃಷ್ಣ

ಪ್ರಾಥನೆ ಲೋಕ ಹಿ ತಾರ್ಥಕೆ ಭಕ್ತರು ಪ್ರಾರ್ತಿಸಲವತರಿಸುವೆನೆನುತ
ಪಾರ್ಥಗೆ ತನ್ನಯ ಪೂರ್ತಿಸ್ವರೂಪದ ಮೂರ್ತಿಯ ತೋರಿದ ಹರಿಕೃಷ್ಣ

ಮುಕ್ತಿಗೆ ಸುಲಬವುಭಕ್ತಿಯ ಮಾರ್ಗವು ಭಕ್ತರು ಎನಗತಿಪ್ರಿಯರೆನುತ
ಮುಕ್ತಿಯ ಹೊ೦ದುವ ಭಕ್ತಿಯ ಯುಕ್ತಿಯ ಯುಕ್ತದಿಪೇಳಿದ ಹರಿಕೃಷ್ಣ

ಕ್ಷೇತ್ರಜ್ಞನು ನಾ ಕ್ಷೇತ್ರದಿ ವ್ಯಾಪ್ತನು ಕ್ಷೇತ್ರದ ಸೂತ್ರವು ಎನಲಿಹುದು
ಕ್ಷೇತ್ರ ಕ್ಷೇತ್ರರ ಪಾತ್ರವ ಜ್ಞಾನದ ನೇತ್ರವ ತಿಳಿ ಎ೦ದ ಹರಿಕೃಷ್ಣ

ಮೂರುಗುಣಗಳಿಗೆ ಮಾರುಹೋಗುವವ ಜಾರಿಬೀಳುವನು ಜಗದೊಳಗೆ
ಮೂರುಗುಣ೦ಗಳ ಮೀರಿದರೆನ್ನನು ಸೇರುವನೆ೦ದನು ಹರಿಕೃಷ್ಣ

ವಿಶ್ವದಿ ಇಹ ಸ ರ್ವಸ್ವವು ನಶ್ವರ ಈಶ್ವರನೇ ಗತಿ ಎನ್ನುತಲಿ
ಶಾಶ್ವತನಹ ಪುರು ಷೋತ್ತಮನನು ನೀನಾಶ್ರಯಿಸೆ೦ದನು ಹರಿಕೃಷ್ಣ

ಕೆಟ್ಟಗುಣವು ಯಮ ಪಟ್ಟಣಗಟ್ಟುತ ಹುಟ್ಟು ಸಾವಿನಡೆಗಟ್ಟುವುದು
ಕೆಟ್ಟಗುಣ೦ಗಳ ಮೆಟ್ಟುತ ಶಾಸ್ತ್ರದ ಕಟ್ಟಳೆ ಪಿಡಿ ಎ೦ದ ಹರಿಕೃಷ್ಣ

ಶ್ರದ್ಧೆಯು ತ್ರಿವಿಧವು ಬುದ್ಧಿಯ ವೃದ್ಧಿಯು ಶ್ರದ್ಧೆಯನನುಸರಿಸುತಲಿರಲು
ಶುದ್ಧ್ದಿ ಬುದ್ಧಿಯ ತಿದ್ದಲು ಮೋಕ್ಷವು ಸಿದ್ಧವು ಎ೦ದನು ಹರಿಕೃಷ್ಣ

ಭೊಗದಿ ರೋಗವು ತ್ಯಾಗದಿ ಮೋಕ್ಷಕೆ ಭಾಗಿಯಾಗೆ ಶರಣಾಗೆನಲು
ಬಾಗುತ ಮೋಹವ ನೀಗುತ ಯುದ್ಧಕೆ ಸಾಗಿದನರ್ಜುನ ಹರಿಕೃಷ್ಣ

ಯೋಗೀಶ್ವರ ಹರಿ ಹಾಗು ಧನುರ್ಧರ ನಾಗಿಹ ಪಾರ್ಥನ ಜಾಗದಲಿ
ಯೋಗಿಗಳರಸನು ಬೆಗದಿ ಆಗುವುದೈ ಜಯ ಮ೦ಗಳವು

ಮ೦ಗಳ ಮತ್ಸ್ಯಗೆ ಕೂರ್ಮ ವರಾಹಗೆ ನರಹರಿ ವಾಮನ ಭಾರ್ಗವಗೆ
ಮ೦ಗಳ ರಾಮಗೆ ಮ೦ಗಳ ಕೃಷ್ಣಗೆ ಬುದ್ಧ ಕಲ್ಕಿ ಶ್ರೀನಿವಾಸನಿಗೆ

ಇತಿ ಶ್ರೀಹರಿಗೀತಾಮೃತಸಾರ ಸ೦ಪೂರ್ಣಮ್

ಶ್ರೀ ಹರಿಕೃಷ್ಣಾರ್ಪಣಮಸ್ತು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:40pm — Rajeshwari

ಉ: ಮಾಧ್ವರಿಗೆ ಶಿವ ಯಾಕೆ ದೂರ?

Rajeshwari's picture

ನನಗೇನೂ ಅವರ ಬಗ್ಗೆ ದ್ವೇಷವಾಗಲಿ ಅಥವ ಅಸೂಯಯಾಗಲಿ ಇಲ್ಲ. ನಮ್ಮನ್ನು (ಸ್ಮಾರ್ಥರನ್ನು) ಅವರು ತಿರಸ್ಕಾರ ಮನೋಭಾವನೆಯಿಂದ ಪ್ರತಿಕ್ರಿಯಿಸಿ ನಮ್ಮನ್ನು ಕೆರಳುತ್ತಾರೆ, ಅದಕ್ಕೆ ನನಗಾದ ಅನುಭವವನ್ನು ಹಂಚಿಕೊಂಡಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:56pm — ಮನಹ್ಪಠಲ

ಉ: ಮಾಧ್ವರಿಗೆ ಶಿವ ಯಾಕೆ ದೂರ?

ಮನಹ್ಪಠಲ's picture

ಮಾಧ್ವರನ್ನ ಬಟ್ಟೆ ಒಗೆದ ಹಾಗೆ ಒಗೆದಾಯ್ತ? ಇನ್ನೂ ಯಾವ ಸೋಪು ಕೊಡ್ಲಿ? ಸೋಪ್ ಪೌಡರ್ ಯಾವುದು ಬೇಕು? ಏರಿಯಲ್ಲಾ ಇಲ್ಲ ರಿನ್ನಾ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 8:31am — Rajeshwari

ಉ: ಮಾಧ್ವರಿಗೆ ಶಿವ ಯಾಕೆ ದೂರ?

Rajeshwari's picture

"ಮಾಧ್ವರನ್ನ ಬಟ್ಟೆ ಒಗೆದ ಹಾಗೆ ಒಗೆದಾಯ್ತ? ಇನ್ನೂ ಯಾವ ಸೋಪು ಕೊಡ್ಲಿ? ಸೋಪ್ ಪೌಡರ್ ಯಾವುದು ಬೇಕು? ಏರಿಯಲ್ಲಾ ಇಲ್ಲ ರಿನ್ನಾ??"

ಈ ಲೇಖನದಿಂದ ನನಗೆ ಯಾವುದನ್ನು(ನಿಮ್ಮ ಪ್ರಕಾರ ಬಟ್ಟೆ) ಮತ್ತು ಎಲ್ಲಿ ಒಗೆಯಬೇಕು ಆಂತ ಗೊತ್ತಾಯ್ತು, ಮೇಲಿನ ಕೆಲವು ಪ್ರತಿಕ್ರಿಯಗಳಿಂದ " ಸೋಪ್ ಪೌಡರ್" ಮತ್ತು ಸ್ವಲ್ಪ ಮಟ್ಟಿಗೆ

ಸೋಪ್ ಕೂಡ ಸಿಕ್ಕಿತು. ಆಗಾಗ್ಗ ಇನ್ನು ಬೇಕಾದ ಸೋಪ್ ಮತ್ತು ನೀರನ್ನು ಕೂಡ ಒದಗಿಸಿದ್ದರಿಂದ ನನಗೆ ಬಟ್ಟೆ ಒಗೆಯುವುದು ಈಸಿ ಆಯ್ತು.

ಇನ್ನು ಕೆಲವಾರು ಕೆಲಸಗಳನ್ನು ನಿಮಗೆ ಬಿಟ್ಟೀದ್ದೇನೆ, ಆಸಕ್ತಿ ಇದ್ದರೆ ಬಟ್ಟೆ ಜಾಲಿಸಿ, ಹಿಂಡಿ, ಒಣಗಿಸಿ, ಮಡಸಿಡುವ ಕೆಲಸ ಮಾಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 7:47pm — ಮನಹ್ಪಠಲ

ಉ: ಮಾಧ್ವರಿಗೆ ಶಿವ ಯಾಕೆ ದೂರ?

ಮನಹ್ಪಠಲ's picture

ಅಕ್ಕೋರೆ!!

ನಾನಿಲ್ಯಾರ್ನೂ ಬಟ್ಟೆ ಒಗೆದನ್ಗೆ ಒಗೆದುಹಾಕಿಲ್ಲ. ನೀವು ತಾನೆ ಆ ಕೆಲ್ಸಾನ ಮಾಡಿದ್ದು. ಉಳೀದಿರೋ ಕೆಲ್ಸ ಮಾಡೊದು ನಿಮ್ಗೇನ್ ಕಶ್ಟ ಇಲ್ಲ ಅ೦ತ ಕಾಣ್ಸುತ್ತೆ. ಬಾಕಿ ಕೆಲ್ಸಾನು ಮಾಡಿಮುಗಿಸಿಬಿಡಿ. ಮೊದಲ್ನಿ೦ದ ಹೇಳ್ತಾಬ೦ದೆ ಈ ಪೋಸ್ಟ್ನಲ್ಲಿ ಕಿತ್ತಾಡಬೇಡಿ ಅ೦ತ. ನೀವುಗಳೂ ಕೇಳ್ಬೇಕಲ್ಲಾ. ಒಬ್ಬರಾದ್ಮೇಲ್ ಇನ್ನೊಬ್ರು ಸುರು ಹಚ್ಕ೦ಡ್ರಲ್ಲ.

ಬೇರೆ ಯಾರಾದ್ರು ನಿಮ್ಮನ್ನ ಅಸಹ್ಯ ಅಥವ ಕೀಳಾಗ್ ನಿಮ್ಮನ ನೋಡಿದ್ರೆ, ನೀವೂ ತಿರುಗೇಟು ಹಾಕಿ. ನೀವ್ಯಾಕ್ ಸುಮ್ನೆ ನಿನ್ತಿರ್ತೀರ? ಅಥವ ನೆಗ್ಲೆಕ್ಟ್ ಮಾಡಿ ಅವರ್ನ, ಯಾರದ್ರೆ ಏನ೦ತೆ? ಇಲ್ಲೆ ಬ೦ದಿರೊದು, inferiority or superiority complexಗಳು.

ನನ್ನಕ್ಕ ಕೂಡ ನಿಮ್ಮಕಡೆಯವರನ್ನೆ ಪ್ರೀತಿಸಿ ಮದುವೆಯಾದ್ಲು. ಒ೦ದೆರಡು ವರುಶ ಕಶ್ಟ ಪಟ್ಟಳು. ಮತ್ತೆ ಹೊ೦ದ್ಕೊ೦ಡು ಹೋದಳು. ಈಗ ಆರಾಮಾಗಿದ್ದಾಳೆ ಅದೂ ಮನೇಲ್ ತಮಿಳು ಮಾತಾಡೊರ ಜೊತೆ. ನನಗನಿಸುತ್ತೆ, ಈಗಿನ ಕಾಲದ ಹೆಣ್ಮಕ್ಕಳ್ಳೆಲ್ಲಾ ಸ್ವಲ್ಪ ಅಸ್ಸರ್ಟಿವ್ನೆಸ್ಸ್ ಜಾಸ್ತಿ. ಹೊದ್ಕೊ೦ಡ್ ಹೋಗೊದು ಕಶ್ಟವೇ ಸರಿ, ಯಾಕೆ೦ದ್ರೆ, ನಮ್ಮ ಆಪ್ಪ ಅಮ್ಮ೦ದಿರ ಕಾಲ ಅಲ್ಲವಲ್ಲಾ ಇದು.

ಮೇಲಾಗಿ ನನಗಿರೋದು ಎರಡೇ ಪ೦ಗಡಗಳು ಮೊದಲ್ನೇದು ಶಾಖಾಹಾರಿಗಳದು, ಎರಡ್ನೇದು ನಾನ್ ಹೇಳಕ್ ಇಶ್ತಪಡಲ್ಲ. ನಾನ್ ಮೊದಲ್ನೆ ಪ೦ಗಡಕ್ ಸೇರ್ದೋನು.

ಕ್ರಿಸ್ನ
www.flashactions.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 9:47am — kannadakanda

ಉ: ಮಾಧ್ವರಿಗೆ ಶಿವ ಯಾಕೆ ದೂರ?

kannadakanda's picture

ಇದೊಂದು ಹುರುಳಿಲ್ಲದ ಮಾಧ್ವರ ಸಂಪ್ರದಾಯ. ಪರಮಾತ್ಮ ನಿರ್ಗುಣ, ನಿರಾಕಾರ ಎಂದು ಸಾಱಿದರೂ ಈ ಕಂದಾಚಾರವನ್ನು ಮಾಧ್ವರು ಬಿಡರು. ಇದೊಂದು ಅಷ್ಟಾಗಿ ಪರಿಗಣಿಸಬೇಕಾದ ವಿಚಾರವೇ ಅಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 1:03pm — roopablrao

ಉ: ಮಾಧ್ವರಿಗೆ ಶಿವ ಯಾಕೆ ದೂರ?

roopablrao's picture

ಅಬ್ಬಾ ನೀವು ಹೇಳಿದಷ್ಟು ನಿಯಮಗಳು ಸಧ್ಯ ನಮ್ಮ ಮನೆಯಲ್ಲಿ ಇಲ್ಲ
ಮುದ್ರೆ ಅಂತ ನನ್ನ ವಾರಗಿತ್ತಿ ಹೇಳಿದರೂ ನಾನು ಕೇಳಲಿಲ್ಲ
ಇನ್ನು ನಾನು ಗುಂಡಗಿನ ಕುಂಕುಮ(ಸ್ಟಿಕರ್ ಡಿಸೈನ್ದ್) ಇಡೋದು

ಒಂದು ಮಾತ್ರ ನಿಜ ನಾನು ಈ ಮನೆಗೆ ಬಂದ ಹೊಸದರಲ್ಲಿ ನನಗೆ ಮಡಿ ಗಿಡಿ ಗೊತ್ತಿಲ್ಲ ಅಂದಾಗ ಸ್ಮಾರ್ತರಲ್ಲವಾ ಅಂತ ಹೀಯಾಳಿಸಿದ್ದರು.
ನಾನು ರಣಚಂಡಿಯಾದ ಮೇಲೆ ಸುಮ್ಮನಾದರು. ಮತ್ತೊಮ್ಮೆ ಸೊಲ್ಲೆತ್ತಿಲ್ಲ

]http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:17pm — Sunil Jayaprakash

ಉ: ಮಾಧ್ವರಿಗೆ ಶಿವ ಯಾಕೆ ದೂರ?

Sunil Jayaprakash's picture

ರೂಪಾ, ಅವರೆ ಮಾಧ್ವರ ಬಗ್ಗೆ ಒಂದು ಗಮನಿಸಬೇಕು. ಅವರು ಶಿವನ ಪೂಜೆ ಮಾಡಲ್ಲ ಸರಿ. ಆದರೆ ಅವರು ಶಿವನನ್ನು ದ್ವೇಷಿಸಿಲ್ಲ, (ಹಿಸ್ಟಾರಿಕಲಿ). ಅವರು ಶಿವನ ಬಗ್ಗೆ ಇಗ್ನೊರೆಂಟ್ ಆಗಿದ್ರು, ಆಗಿದ್ದಾರೆ ಅಷ್ಟೇ. ಆದರೆ ಶಿವನ ಅಸ್ಥಿತ್ವವನ್ನು ಕಟ್ಟಾ ದ್ವೇಷಿಸಿದ್ದು (ಜನರನ್ನು ಬಡಿದಾಡಿಸುವ ಹಂತಕ್ಕೆ ತಲುಪಿಸಿದ್ದು), ಶ್ರೀವೈಷ್ಣವರೇ (ತೆಳುವಾಗಿ ಹೇಳಬಹುದಾದರೆ ಹಿಂದಿನ ತಮಿಳುನಾಡಿನ ಅಯ್ಯಂಗಾರರು), ಹೊರತು ವೈಷ್ಣವರಲ್ಲ(ಅಂದರೆ ಮಾಧ್ವರಲ್ಲ) !!!!

"ಶೈವ ಮತ್ತು ವೈಷ್ಣವರ ನಡುವೆ ಕಿತ್ತಾಟವಾಗಿತ್ತು" ಎಂಬ ಮಾತು ಬಂದಾಗ, ಅದರ ಹಿಂದೆ ಇದ್ದದ್ದು ಸ್ಮಾರ್ತ ಮತ್ತು ಶ್ರೀವೈಷ್ಣವರು ಅಂತ ತಿಳಿಯಬೇಕೇ ವಿನಃ ಮಾಧ್ವರನ್ನು(=ವೈಷ್ಣವರನ್ನು) ಬೊಟ್ಟುಮಾಡಕ್ಕೆ ಆಗಲ್ಲ.

ನನಗೇನೋ, ಕೆಲವು ವಿಷಯಗಳಲ್ಲಿ (ಕೆಲವು ವಿಷಯಗಳಲ್ಲಿ Eye-wink ) ಮಾಧ್ವರ ಮೇಲೆ ಸುಮ್ಸುಮ್ನೆ ಗೂಬೆ ಕೂರಿಸಲಾಗತ್ತೆ ಅನ್ಸತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:58pm — ಶ್ರೀನಿಧಿ

ಉ: ಮಾಧ್ವರಿಗೆ ಶಿವ ಯಾಕೆ ದೂರ?

ಶ್ರೀನಿಧಿ's picture

ಇಲ್ಲ ಕಣಯ್ಯಾ!! ಮಾದ್ವ-ಶೈವರ ಜಗಳ ನನಗೆ ಅಷ್ಟು ತಿಳಿದಿಲ್ಲ. ಆದರೆ ಮಾದ್ವರು ಶೈವರ ಮುಖವನ್ನೂ ನೋಡಬಾರದು ಅಂತ ಹೇಳೋದು ಕೇಳಿದ್ದೀನಿ. ಆದರೆ ಮಾಧ್ವರಿಗೆ ಮುಖ್ಯಪ್ರಾಣ ಮೊದಲನೇ ಭಕ್ತ. ಅವನ ಇನ್ನೊಂದು ಅವತಾರ ಶಿವ ಅಂತ ಅವರೇ ಅನ್ನುತ್ತಾರೆ. ಹೀಗಾಗಿ ದ್ವೇಷ ಸರಿಯಲ್ಲ, ತಪ್ಪು ತಿಳುವಳಿಕೆ ಅಂದುಕೊಂಡಿದ್ದೀನಿ. ಅಷ್ಟಕ್ಕೂ ತಿಳಿದವರು ಶಿವ-ವಿಷ್ಣು ಭೇದ ಮಾಡಲ್ಲ.

ಇನ್ನು ಶ್ರೀ ವೈಷ್ಣವರ ಬಗೆಗೆ ಬರೆದಿದ್ದೀಯ. ಇಲ್ಲೊಂದು ತಮಾಶೆ ಕಥೆ ಇದೆ. ರಾಮಾನುಜರ ಕಾಲದಲ್ಲಿ ಇದ್ದದ್ದು ಚೋಳರ ರಾಜ ಮೊದಲನೇ ಕುಲೋತ್ತುಂಗ. ಹುಟ್ಟಿನಿಂದ ಶೈವ. ವೈಷ್ಣವರ ಮೇಲೆ ಸಿಟ್ಟು. ರಾಮಾನುಜರನ್ನ ತನ್ನ ಆಸ್ಥಾನಕ್ಕೆ ಕರೆಸುತ್ತಾನೆ. ರಾಮಾನುಜರ ಶಿಸ್ಯರಿಗೆ ಅವನ ಮೇಲೆ ನಂಬಿಕೆ ಇಲ್ಲ. ರಾಮಾನುಜರ ಬದಲು ಅವರ ಪ್ರೀತಿಯ ಶಿಷ್ಯ ಕೂರೇಶ, ರಾಮಾನುಜರ ಗುರುಗಳಲ್ಲಿ ಒಬ್ಬರಾದ ಮಹಾಪೂರ್ಣರು ಹೋಗುತ್ತಾರೆ. ಅಲ್ಲಿ ಆಸ್ಥಾನದಲ್ಲಿ "ರಾಮಾನುಜರನ್ನ" ರಾಜ "ಶಿವನಿಗಿಂತ ಹಿರಿದಿಲ್ಲ" ಅಂತ ಹೇಳಲೇಬೇಕು ಅಂತ ಆದೇಶ ಕೊಡುತ್ತಾನೆ. ಆಗ ಮಹಾಪೂರ್ಣರು ಶಿವನಿಗಿಂತ ದ್ರೋಣ ದೊಡ್ಡವನು ಅನ್ನುತ್ತಾರೆ Smiling

ಇಲ್ಲಿ ಶಿವ, ವಿಷ್ಣು, ದ್ರೋಣ ಆಗಿನ ಕಾಲದ ಅಳತೆಗಳು. ಸೂಚ್ಯವಾಗಿ ಪರಮಾತ್ಮನನ್ನು ತನ್ನದೇ ಅಳತೆಗೋಲುಗಳಲ್ಲಿ ಅಳೆಯುವ ರಾಜನನ್ನ ಅಣಕಿಸುತ್ತಾರೆ. ಕೊನೆಯ ಅರ್ಥ ಶಿವ ವಿಷ್ಣು ನಮ್ಮ ಅಳತೆಗಳು. ಪರಮಾತ್ಮ ಒಬ್ಬನೇ ಅಂತ. ಇನ್ನೆಲ್ಲೂ ದ್ವೇಷ ಕಂಡಿಲ್ಲ ನನಗೆ ಶ್ರೀವೈಷ್ಣವರಲ್ಲಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:57pm — Sunil Jayaprakash

ಉ: ಮಾಧ್ವರಿಗೆ ಶಿವ ಯಾಕೆ ದೂರ?

Sunil Jayaprakash's picture

ಶ್ರೀನಿಧಿ, ಗಮನಿಸು. ಮಾಧ್ವರು ತಮ್ಮ ತಮ್ಮ ಮಕ್ಕಳಿಗೆ ಹೇಳಿಕೊಂಡಿದ್ದಾರೆ, ಶಿವನ ಪೂಜೆ ಮಾಡಬೇಡಿ ಅಂತ, ಆದರೆ ಬೇರೆಯವರಿಗೆ ಹೇಳಿಲ್ಲವಲ್ಲ. ಶಿವನನ್ನು ಪೂಜೆ ಮಾಡುವ, ಅತ್ವಾ ಮಾಡದೇ ಇರುವುದು ಅವರು ಸಿದ್ಧಾಂತಕ್ಕೆ ಸಂಬಂಧಿಸಿದ್ದು. ಕೆಲವು ಅಯ್ಯಂಗಾರರ ಪಂಗಡಗಳು (ವೈಖಾನಸರಿರಬೇಕು), ಗಣೇಶನ ಅಸ್ಥಿತ್ವ ಒಪ್ಪಿಲ್ಲ. ಹಾಗಂತ, ಅಯ್ಯಂಗಾರರು ಗಣೇಶನ ದ್ವೇಷಿಗಳು ಅಂತ ಹೇಳಕ್ಕೆ ಆಗತ್ತಾ.

ಹಾಗೆಯೇ ನೋಡು, ಸ್ಮಾರ್ತನಾದ "ಅಪ್ಪಯ್ಯ ದೀಕ್ಷಿತನ" ಮತ್ತು ವಿಶಿಷ್ಟಾದ್ವೈತ ಪ್ರವರ್ತಕರಾದ ತಾತಾಚಾರ್ಯರಿದ್ದ ಕಾಲದಲ್ಲಿ ತಮಿಳುನಾಡಿನಲ್ಲಿ ಏನೇನಾಯಿತು ಅಂತ ಹುಡುಕು, ಗೊತ್ತಾಗತ್ತೆ. "ಶೈವ-ಶ್ರೀವೈಷ್ಣವರ" ಜಗಳಗಳ ಉತ್ತುಂಗ ತಲುಪಿದ್ದು ತಮಿಳುನಾಡಿನಲ್ಲಿ. ಶಿವಪುರಾಣವನ್ನು ತಾಮಸ ಪುರಾಣವೆಂಬಂತೆ ಮುಂದೆ ತಂದು, ಜನರಲ್ಲಿ ಜಗಳ ತಂದಿಟ್ಟ ಸನ್ನಿವೇಶಗಳೂ ಕೂಡ ನಡೆದಿವೆ!!!.

ಕರ್ನಾಟದಲ್ಲಿ ಜಗಳ ಆಗಿಲ್ಲ, ಅಂತಲ್ಲ, ಆಗಿದ್ದರೂ ಅದರಲ್ಲಿ ಮಾಧ್ವರು ಇನ್ವಾಲ್ವ್ ಆಗಿದ್ದು ಕಡ್ಮೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 12:07pm — roopablrao

ಉ: ಮಾಧ್ವರಿಗೆ ಶಿವ ಯಾಕೆ ದೂರ?

roopablrao's picture

ಅದು ಸರಿ ಯಾಕೆ ಶಿವ ಪೂಜೆ ಮಾಡುವುದಿಲ್ಲ ಅಂತ ತಿಳೀಲಿಲ್ಲ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:47pm — Sunil Jayaprakash

ಉ: ಮಾಧ್ವರಿಗೆ ಶಿವ ಯಾಕೆ ದೂರ?

Sunil Jayaprakash's picture

ಬ್ರಾಹ್ಮಣರು ಏಕೆ ಏಸು-ಕ್ರಿಸ್ತನನ್ನ ಪೂಜೆ ಮಾಡಲ್ಲ ? ಹಾಗಾಗಿ ಅವರು ಕ್ರಿಸ್ತನ ದ್ವೇಷಿಗಳು!!!! ಅಲ್ಲ ತಾನೇ, ಹಾಗೆಯೇ ಮಾಧ್ವರು "ಶಿವಲಿಂಗವನ್ನು" ಪೂಜೆ ಮಾಡಲ್ಲ, ಏಕೆಂದರೆ ಅವರ ವೈಚಾರಿಕತೆ ಬೇರೆ ಇದೆ, ಅಷ್ಟೇ. ಸಿಂಪಲ್. ಆ ಸೈದ್ಧಾಂತಿಕ ಹಿನ್ನೆಲೆಯನ್ನು ತಿಳಿದುಕೋಬೇಕು. ಅಕಸ್ಮಾತ್ ಮಾಧ್ವರೇನಾದರು, ಶಿವನ ಪೂಜೆ ಮಾಡಬೇಡಿ ಅಂತ ಹೇಳಿದ್ದಿದ್ದರೆ, ಆಗ ಅವರು ಶಿವನ ದ್ವೇಷಿಗಳಾಗ್ತಾ ಇದ್ರು. ಆದರೆ ಅವರು ಎಲ್ಲಿಯೂ ಆ ರೀತಿ ಪ್ರತಿಪಾದಿಸಿಲ್ಲವಲ್ಲ. ಅವರಿಗೆ ಕೃಷ್ಣ ಬೇಕು, ಪೂಜೆ ಮಾಡ್ಕೊಂಡಿದ್ದಾರೆ. ಶಿವ ಬೇಡ, ಮಾಡಲ್ಲ, ಅಷ್ಟೇ.

ಆದ್ದರಿಂದ, "ಮಾಧ್ವರು ಏಕೆ ಶಿವನನ್ನು ಪೂಜೆ ಮಾಡಲ್ಲ" ಎಂಬುದನ್ನು ಸೈದ್ಧಾಂತಿಕ ಹಿನ್ನೆಲೆಯಲ್ಲಿ ನೋಡಬೇಕೇ ಹೊರತು, ಭಾವನಾತ್ಮಕವಾಗಿ, ಅವರೇನೋ ಒರಟರು, ಬೇರೆಯವರು ಎನ್ನುವ ನಿಟ್ಟಿನಲ್ಲಿ ನೋಡಬಾರದು.

ಆದರೂ, ಮಾಧ್ವರು ಭೂತರಾಜನನ್ನು ಭಾವಿರುದ್ರ ಅಂತ ತಿಳೀತಾರೆ ಅಲ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:03pm — msprasad

ಉ: ಮಾಧ್ವರಿಗೆ ಶಿವ ಯಾಕೆ ದೂರ?

msprasad's picture

ಆಲ್ಲಾ ಸ್ವಾಮಿ, ಸಂಸಾರದ ಗುಟ್ಟು ವ್ಯಾಧಿ ರಟ್ಟು ಅಂತಾರೆ ಹಿರಿಯರು.
ಮೊದಲೇ ಬ್ರಾಹ್ಮಣರು ಅಂದ್ರೆ GENERIC ಆಗಿ ದ್ವೇಷಿಸುತ್ತಾರೆ ಇತರರು.
ಆ ರೀತಿ ಇರೋವಾಗ ಈ ರೀತಿ ಓಪನ್ ಆಗಿ ವೆಬ್ ಸೈಟ್ ನಲ್ಲಿ ಕಿತಾಡಿದ್ರೆ, ಏನ್ ಬಂತು ?
ಮೊದ್ಲೇ ಬ್ರಾಹ್ಮಣರಲ್ಲಿ ಒಗ್ಗಟ್ಟಿಲ್ಲ ಅನ್ನೋ ಮಾತು ಪ್ರಚಲಿತವಿದೆ (ಅದೂ ನಿಜವೇ ಒಂದು ಮಟ್ಟಕ್ಕೆ). ಏನಿದ್ರೂ ಈರ್ವ ಸಂಪ್ರದಾಯಗಳಲ್ಲಿ ಇರೋ ಕಾಮನ್ ಹಾಗು ಚೆನ್ನಾಗಿರೋ ಆಚರಣೆಗಳನ್ನ ಫಾಲೋ ಮಾಡಿ. ಸುಮ್ನೆ ಕಿತ್ತಾಡೋದ್ರಲ್ಲಿ ಏನೂ ಉಪಯೋಗ ಇಲ್ಲಾ ಸ್ವಾಮಿ.. ಅಕ್ಕಾ ರೂಪಕ್ಕ.. ವಿಕಾಸ ಹೇಳಿದ ಹಾಗೆ, ಆರಾಮಾಗಿ ಅವರವರ ಮನೇಲಿ ಆಯಾ ಆಚರಣೆಗೆ ಆಡಾಪ್ಟ್ (ADOPT) ಆಗಿ. ಅಷ್ಟೆ.

ಅಂದಹಾಗೆ, ನಾನೂ ಒಬ್ಬ ಸ್ಮಾರ್ಥ... ಹೆಹೆಹೆಹ್ಹೆಹೆಹೆ

ಇಂತಿ,

ಶಂಕರ ಪ್ರಸಾದ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 12:20pm — roopablrao

ಉ: ಮಾಧ್ವರಿಗೆ ಶಿವ ಯಾಕೆ ದೂರ?

roopablrao's picture

ಅಡಾಪ್ಟ್ ಆಗೋಣ ಅದರಲ್ಲಿ ತೊಂದರೆ ಏನಿಲ್ಲ

ಹೆಣ್ಣು ನೀರಿದ್ದ ಹಾಗೆ ಯಾವ ಪಾತ್ರೆಗೆ ಸೇರಿದರೂ ಆ ಪಾತ್ರೆಯ ಆಕಾರಕ್ಕೆ ಹೊಂದಿಕೊಳ್ತಾಳೆ Smiling

ನಾನು ಕೇಳಿದ್ದು ಇವುಗಳಿಗೆ ಏನಾದರೂ ವಿಶೇಷ ಅರ್ಥ ಇದೆಯಾ ಅಂತಾ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:30pm — Sunil Jayaprakash

ಉ: ಮಾಧ್ವರಿಗೆ ಶಿವ ಯಾಕೆ ದೂರ?

Sunil Jayaprakash's picture

ನಮ್ಮ ತಾಯಿಯ ಮನೆಯಲ್ಲಿ ಶಿವನ ಪ್ರತಿಮೆ, ಫೋಟೊ, ಎಲ್ಲಾ ಇಡುತ್ತಿದ್ದರು

ನಿಮ್ಮ ಮನೆಯಲ್ಲಿ, ಪೇಜಾವರ ಸ್ವಾಮೀಜಿಯ ಪಾಪೆ ಇತ್ತೇ ? ಇರಲಿಲ್ವಾ, ನಿಮ್ಮ ತವರು ಮನೆಯವರು, ಪೇಜಾವರ ಸ್ವಾಮೀಜಿಯ ದ್ವೇಷಿಗಳು !!!!

ನೋಡಿ, ಮಾಧ್ವರು ಸ್ವಲ್ಪ ಆದರ್ಶವಾದಿಗಳು. ಎಲ್ಲವೂ ಸರಿಯಾಗಿರಬೇಕು, ಸಿಕ್ಕಾಪಟ್ಟೆ ಅಚ್ಚುಕಟ್ಟಾಗಿರಬೇಕು ಅಂತ ಹಾರಾಡ್ತಾರೆ. ಯಾವುದೇ ವಿಷಯದಲ್ಲಿಯೂ ಅವರು ಅಷ್ಟುಬೇಗ ರಾಜಿಮಾಡಿಕೊಳ್ಳಲು ತಯಾರಿಲ್ಲ. ಆದರೆ ಅವರು ಎಡವಿರೋದು ಎಲ್ಲೆಂದರೆ, ತಮ್ಮ ಹಿಂದಿನವರು ನಡೆಸಿಕೊಂಡು ಬಂದ ಎಲ್ಲ ಆಚಾರವಿಚಾರಗಳೂ ಸರಿ ಅಂತ ತಿಳ್ಕೊಳ್ತಾರೆ. ಅದಕ್ಕೆ ಜಟಾಪಟಿ ಆಗೋದು. ಮಾಧ್ವರ ವಿಟಾರಗಳಲ್ಲಿ ಕಾಂಪ್ಲೆಕ್ಸ್ ಆಗಿ ಕಾಣೋದು, ಶಿವನನ್ನು ಕುರಿತ ಅವರ ಸಿದ್ಧಾಂತದಲ್ಲಿ. ಆದರೆ, ಈ ಕೆಳಗಿನ ಪ್ರಶ್ನೆಗೆ ಉತ್ರ ಕೊಡೋದು ತುಂಬಾ ಸ್ಟ್ರೇಟ್ ಫಾರ್ವರ್ಡು.

ಇಲ್ಲಿ ಹೂ ಬತ್ತಿಯನ್ನೇ ಉಪ್ಯೋಗಿಸಬೇಕು ಹಾಗು ದೀಪದ ನಡುವಲ್ಲಿ ಇಡಬೇಕು ಎನ್ನುವ ಸಿದ್ದಾಂತ ಬೇರೆ ಕಾರಣ ಯಾರಿಗೂ ಗೊತ್ತಿಲ್ಲ.

ಯಾಕೆ ಗೊತ್ತಾ. ಮಂಗ್ಳಾರ್ತಿ ಬತ್ತಿ ಮಾಡೋದು ತುಂಬಾ ಸುಲಭ. ಹೂ ಬತ್ತಿ ಮಾಡೋದು ಕಷ್ಟ. ಮೊದಲೇ ಹೇಳಿದ ಹಾಗೆ ಕಷ್ಟವಿರಲಿ, ಸರಳವಿರಲಿ, ಮಾಧ್ವರು ರಾಜಿಯಾಗಲ್ಲ. "ನನಗೆ ಕೆಲಸಕ್ಕೆ ಹೊತ್ತಾಯಿತು, ಇವತ್ತೊಂದಿನ ಮಂಗ್ಳಾರ್ತಿ ಬತ್ತಿ ಬಳಸ್ತೀನಿ ನಾಳೆ ಹೂಬತ್ತಿ ಹತ್ತಿಸ್ತೀನಿ" ಅನ್ನೋ ಮನಸ್ಥಿತಿ ಮಗಳಲ್ಲಿದೆ ಅಂತಿಟ್ಟುಕೊಳ್ಳಿ, ಆಗ ಅವಳ ತಂದೆತಾಯಿ ಹೀಗೆ ಯೋಚಿಸ್ತಾರೆ, "ಇವತ್ತು ಹೂಬತ್ತಿ ಜೊತೆ ರಾಜಿಮಾಡ್ಕೊಂಡ್ಳು, ನಾಳೆ ಅವಳ ಜೀವನದ ಧ್ಯೇಯದೊಡನೆ, ಅತ್ವಾ ಗಂಡ ಮಕ್ಕಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲ್ಲ ಅಂತ ಏನು ಗ್ಯಾರೆಂಟಿ ?"

ಆದ್ದರಿಂದ ಈ ರೀತಿಯ ಅನುಮಾನಗಳು ಬಂದಾಗ, ಈ ಪ್ರಶ್ನೆ "ಅಡ್ಜಸ್ಟಮೆಂಟ" ಪ್ರವೃತ್ತಿಗೆ ನಂಟಾಗಿದೆಯೇ ಅಂತ ಯೋಚಿಸಿ. ಆಗ ಉತ್ತರ ಸಿಗತ್ತೆ, ತುಂಬಾ ಸಿಂಪಲ್. ಹೂಬತ್ತಿ ಮಧ್ಯವೇ ಏಕಿರಬೇಕು ಎಂಬುದು ಈಗ ಅರ್ಥವಾಗಿರಬೇಕಲ್ವೇ. ಅದೂ adjustmentಇಗೆ ನಂಟಾದದ್ದು. ಮಾಧ್ವರು "ಸುಮ್ಸುಮ್ನೆ ಅಡ್ಜಸ್ಟಮೆಂಟಿಗೋಸ್ಕರ ಅಡ್ಜಸ್ಟಮೆಂಟ್" ಒಪ್ಪಲ್ಲ.

ಇನ್ನೊಂದು ವಿಚಾರವನ್ನಂತೂ ನಾನು ಸ್ಪಷ್ಟವಾಗಿ ಹೇಳಬಲ್ಲೆ (ನೀವು ತಪ್ಪು ಎನ್ನಬಹುದು, ಅಡ್ಡಿಯಿಲ್ಲ). ಬೇರೆಲ್ಲ ಬ್ರಾಹ್ಮಣರಿಗಿಂತ, ಕನ್ನಡನಾಡನ್ನು, ಕನ್ನಡತನವನ್ನು ತಮ್ಮ ನಿತ್ಯಜೀವನದಲ್ಲಿ ಒಂದು ಕೈಹೆಚ್ಚೆನ್ನುವಷ್ಟು ಅಳವಡಿಸಿಕೊಂಡಿರುವುದು ಮಾಧ್ವರು (ಕನ್ನಡತನ ಅಂದ ಮಾತ್ರಕ್ಕೆ, ಸಂಸ್ಕೃತ ಪದ, ಕನ್ನಡ ಪದ, ಅತ್ವಾ, ಪುಣೆಯ ದೇಶಸ್ಥರು ಮರಾಠಿ ಬಳಸ್ತಾರೆ, ತಮಿಳುನಾಡಿನ ಮಾಧ್ವರು ತಮಿಳು ಬಳಸ್ತಾರೆ ಅಂತೆಲ್ಲ ಚರ್ಚೆ ಶುರುಮಾಡಬೇಡಿ. ವಿಷ್ಯ ಅದಲ್ಲ). ಅವರು ತುಳುಮಾಧ್ವರಿರಬಹುದು, ಮಹಾರಾಷ್ಟ್ರದವರಿರಬಹುದು, ತಮಿಳುನಾಡು, ಆಂದ್ರ, ಅತ್ವಾ, ಕನ್ನಡದ್ದೇ ಮಾಧ್ವರಿರಬಹುದು, ಅವರು ಹೆಚ್ಚಾಗಿ ಹಾಡೋದು, ಕನ್ನಡ ಹಾಡನ್ನ. ಮಾಧ್ವರು ಇಂಗ್ಲೀಷಿನ ಮೇಲೆ ಪ್ರಭುತ್ವ ಸಾಧಿಸಿದರೂ, ಮೈಸೂರಿನ ಸ್ಮಾರ್ತರು ಅತ್ವಾ ಅಯ್ಯಂಗಾರರು ಮಾತಿಗೆ ಮುಂಚೆ ಇಂಗ್ಲೀಷಿನಲ್ಲಿ ಮಾತನಾಡುವ ಸೋಗಲಾಡಿತನವನ್ನು ಬೆಳೆಸಿಕೊಂಡಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 12:11pm — roopablrao

ಉ: ಮಾಧ್ವರಿಗೆ ಶಿವ ಯಾಕೆ ದೂರ?

roopablrao's picture

ಸುನಿಲ್
ನಾನು ಇವುಗಳನ್ನು ತಪ್ಪು ಅಂತ ಹೇಳ್ತಿಲ್ಲ
ಈ ಥರಹ ನಂಬಿಕೆ ಆಚರಣೇ ಯಾಕೆ ಅಂತ ಕೇಳ್ತಿರೋದು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 11:22pm — muralihr

ಉ: ಮಾಧ್ವರಿಗೆ ಶಿವ ಯಾಕೆ ದೂರ?

muralihr's picture

ನೀವು ಹರಿಹರನನ್ನು ಪೂಜಿಸಿ - ಆಗ ಇಬ್ಬರನ್ನೂ ಪೂಜಿಸಿದ೦ತಾಗುತ್ತದೆ.
ನ೦ಗೆ ಶೈವ ವೈಷ್ಣವ ಜಗಳ ಬಾಲೀಶವೆನ್ನಿಸಿದರೂ .. ಆ ಜಗಳವನ್ನು ಮೊಟಕು ಗೊಳಿಸಲು ಹೊಸ ಹೊಸ
ದೇವರುಗಳನ್ನು ನಮ್ಮ ಹಿರಿಯರು ಕ೦ಡು ಹಿಡಿದರು. ಅದರಲ್ಲಿ ಹರಿಹರ , ಅಯ್ಯಪ್ಪಾ , ಚಾಮು೦ಡಿ ಇತ್ಯಾದಿ ದೇವತೆಗಳು ಸಾಕ್ಷಿ..
ನೀವು ಈ ತರಹ ಚರ್ಚೆ ಮನೆಯಲ್ಲಿ ಮಾಡಿದರೆ ಚೆನ್ನಾಗಿರ್ತಿತ್ತು. ನಿಮ್ಮ ಯಜಮಾನರು ಈ ಬ್ಲಾಗ್ ಓದಿ
ಬೇಜಾರಾಗಬಹುದು.
ನಾನು ಎಷ್ಟೋ ದಿನ "ಭಜ ಗೋವಿ೦ದ೦, ಭಜ ಗೋವಿ೦ದ೦" ಹಾಡು ಬರೆದಾ ಶ೦ಕರಾಚಾರ್ಯ ಮಧ್ವಾಚಾರ್ಯರ ಗುರುಗಳು ಅ೦ದ್ಕೊ೦ಡಿದ್ದೆ. ಆಮೇಲೆ ನನ್ನ ರೂಮ್ ಮೇಟ್ , "ವಿಭೂರಿ ಇಡುವವರ ಜಾತಿ ಬೇರೆ ಮತ್ತು ಸೀಲ್ ಹಾಕಿಸ್ಕೊಳೋವರ ಜಾತಿ ಬೇರೆ ಅ೦ದಾಗ" ..ನಿಜವಾಗಲೂ ನಗೂ ಬ೦ತು. ಸದ್ಯಕ್ಕೆ ನಾವ್ಯಾರು ವಿಭೂತಿಯಾಗಲಿ , ನಾಮ ವಗಲಿ ಮುದ್ರೆಯಾಗಲಿ ಬಳಸುದಿರುವುದರಿ೦ದಾ
ಈ ಜಾತಿಗಳು ಸತ್ತು ಹೋಗಿವೆ ಎ೦ಬುದು ನನ್ನ ನ೦ಬಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 9:50am — msprasad

ಉ: ಮಾಧ್ವರಿಗೆ ಶಿವ ಯಾಕೆ ದೂರ?

msprasad's picture

ಮಾಧ್ವರು ಸ್ಮಾರ್ಥರನ್ನು ಬಹಳ ಕೀಳಾಗಿ ನೋಡ್ತಾರೆ. ಇದನ್ನ ನಾನೇ ಪರ್ಸನಲ್ ಆಗಿ ಅನುಭವಿಸಿದ್ದೀನಿ. ಬ್ರಾಹ್ಮಣರು ಅನ್ನೋ ಮುಖ್ಯವಾದ ಅಂಶ ಇಟ್ಟುಕೊಂಡು ಪರಿಚಯ ಮಾಡಿಕೊಳ್ಲೋಣವೆಂದು ಹೋದ್ರೆ, ನೀನು ಸ್ಮಾರ್ಥ ನಮ್ಮ ಜೊತೆ ಮತಾಡಲೂ ನಿನಗೆ ಯೋಗ್ಯತೆಯಿಲ್ಲಾ ಎನ್ನುವ ರೀತಿಯಲ್ಲಿ ಮಾತಾಡಿದ್ರು.
ಮೈ ಉರಿಯುತ್ತೆ ತಾನೇ ? ಆದ್ರೂ ಮಾಧ್ವರ ಅಷ್ಟಮಠಗಳ ನಡುವೆ ಇರೋ ಕಿತ್ತಾಟ ನಮ್ಮ ಸ್ಮಾರ್ಥರಲ್ಲಿ ಇಲ್ಲಾ ಸ್ವಾಮಿ. ಎಲ್ರೂ ನೆಮ್ಮದಿಯಾಗಿ ಶಂಕರಮಠಕ್ಕೆ ಹೋಗಬಹುದು. ನಮ್ದು ಆ ಮಠ, ಈ ಮಠ ಅನ್ನೋ ಕಿತ್ತಾಟ, ರಂಪಾಟ, ಮಠದಲ್ಲಿ ಪರ್ಯಾಯ.. ಸುತರಾಂ ಇಲ್ಲ. ಕೊನೇ ಪಕ್ಷ, ಮಾಧ್ವರು ನಮ್ಮ ಶಂಕರಮಠಕ್ಕೆ ಬಂದ್ರೂ ಕೂಡಾ, ನಾರ್ಮಲ್ ಆಗೇ ಟ್ರೀಟ್ ಮಾಡ್ತಾರೆ ನಮ್ಮವರು, ಆದ್ರೆ ರಾಯರ ಮಠಕ್ಕೆ ಅಥವ ಮಂತ್ರಾಲಯಕ್ಕೆ ಹೋದಾಗ ಸ್ಮಾರ್ಥನೊಬ್ಬ ಏನಾದ್ರೂ ಕಂಡ್ರೆ, ಪ್ರಪಂಚದ ಅತ್ಯಂತ ಹೀನ ಪ್ರಾಣಿ ಅನ್ನೋ ಥರ ಕಾಣ್ತಾರೆ.
ಬಿಡಿ, ಈ ಥರ ಪಟ್ಟಿ ಮಾಡ್ತಾ ಇದ್ರೆ, ಬೆಳೀತಾನೇ ಹೋಗತ್ತೆ.

ಇಂತಿ,

ಶಂಕರ ಪ್ರಸಾದ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 12:05pm — roopablrao

ಉ: ಮಾಧ್ವರಿಗೆ ಶಿವ ಯಾಕೆ ದೂರ?

roopablrao's picture

ಅಬ್ಬ ದೊಡ್ಡ ಕದನವೇ ನಡೆದಿದೆ

ಅಲ್ಲ ನಾನು ಈ ಆಚರಣೆಗೆ ಅರ್ಥಗಳೇನಾದರೂ ಇವೆಯೇ ಎಂದು ಕೇಳಿದೆನೇ ಹೊರತು
ಇದು ಸರೀನಾ ಅಂತ ಕೇಳಲಿಲ್ಲ , ನಾನು ಮಾಡುವುದಿಲ್ಲ ಎಂದು ಹೇಳಲಿಲ್ಲ
ಯಾವುದೇ ಆಚರಣೆಯಾಗಲಿ ಅದಕ್ಕೊಂದು ಅರ್ಥವಿದೆ ಹಿನ್ನೆಲೆ ಇದೆ ಅಂದರೆ ಆ ಆಚರಣೆಯನ್ನು ರೂಢಿಸಿಕೊಂಡು ಹೋಗುವುದಕ್ಕೆ ಮನಸ್ಸು ಬರುತ್ತದೆ

ನಾನು ಎರೆಡೂ ಪಂಗಡಕ್ಕೆ ಸೇರಿದವಳಾದ್ದರಿಂದ ಯಾವುದೇ ಪಂಗಡವನ್ನು ಹೀಯಾಳಿಸುವ ರೀತಿಯಲ್ಲಂತೂ ಬರೆದಿಲ್ಲ

ಯಾವುದೇ ಧರ್ಮಕ್ಕಾಗಲಿ , ಜಾತಿಗಾಗಲಿ,ಪಂಗಡಕ್ಕಾಗಲಿ ಅವರವರ ಸಂಪ್ರದಾಯಗಳು ಇರುತ್ತವೆ ಆದರೆ ಹಿರಿಯರು ಒಂದೊಂದು ಆಚರಣೆಗೂ ಒಂದೊಂದು ಅರ್ಥ ಇಟ್ಟೆ ಅವುಗಳನ್ನು ರೂಢಿಗೆ ತಂದಿರುತ್ತಾರೆ .
ಅವುಗಳನ್ನು ಅರ್ಥ ಮಾಡಿಕೊಂಡರೆ ನಮ್ಮ ಮಕ್ಕಳಿಗೆ ಅದರ ಪರಿಚಯ ಮಾಡಿಸಬಹುದು ಎನ್ನುವುದು ನನ್ನ ಉದ್ದೇಶ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 12:14pm — ಮನಹ್ಪಠಲ

ಉ: ಮಾಧ್ವರಿಗೆ ಶಿವ ಯಾಕೆ ದೂರ?

ಮನಹ್ಪಠಲ's picture

ರೂಪಕ್ಕ, ಜಗಳ ಕದನ ಎಲ್ಲ ಮುಗಿದ್ಮ್ಯಾಲೆ ನೀವು ಕೋಟೆ ಬಾಗಿಲು ಹಾಕ್ತಾ ಇದೀರ. ಸಕತ್ ಬೇಸರ ಮೂಡ್ಸತ್ತೆ. Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 12:22pm — roopablrao

ಉ: ಮಾಧ್ವರಿಗೆ ಶಿವ ಯಾಕೆ ದೂರ?

roopablrao's picture

ಕದನ ಮುಂದುವರಿಸೋಣವೇ ? Smiling
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 12:47pm — ಮನಹ್ಪಠಲ

ಉ: ಮಾಧ್ವರಿಗೆ ಶಿವ ಯಾಕೆ ದೂರ?

ಮನಹ್ಪಠಲ's picture

ಸರಿ, ನಾನ್ ರೆಡಿ!! ಸ್ವಲ್ಪ ಟೈಮ್ ಕೊಡಿ, ಕೆಲ್ಸ ಮುಗಿಸಿಬರ್ತೇನೆ. ನನ್ನ ಕ್ಲೈ೦ಟ್ ಪ್ರಾಣ ತೆಗೆತಿದ್ದಾರೆ. ಅವರನ್ನ ಸುಧಾರ್ಸಿ ಬರ್ತೇನೆ.
ಮತ್ತೇ ಎರಡನೆ ಸುತ್ತಿನ(ಎರಡು ಸಂಪ್ರದಾಯಗಳ ನಡುವಣ ವ್ಯತ್ಯಾಸದ ಅರುಹುಗಳನ್ನು ಹುಡುಕ್ಡುಕಿ ಹೊರಗಡೆ ಹಾಕಿ+ಬೇರೆ ಯಾರಾದ್ರು ಉಪ್ಪು ಹುಳಿ ಖಾರ ಹಾಕುದ್ರು ಸೈ) ಕದನ ಸುರು ಹಚ್ಕಳಣ!!!! ಯಾರ್ಬೇಕಾದ್ರು ಕೋಪ ಮಾಡ್ಕಳ್ಳಿ.......ಏನ೦ತೀರ?

---------------------------------
ಕ್ರಿಸ್ನ
---------------------------------

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 4:49pm — kulmanju

ಉ: ಮಾಧ್ವರಿಗೆ ಶಿವ ಯಾಕೆ ದೂರ?